ಜೀನ್ಸ್ ಧರಿಸಿದ್ದಕ್ಕಾಗಿ ಕೊಲ್ಲಲ್ಪಟ್ಟ ಭಾರತೀಯ ಹುಡುಗಿ - ಬಿ ಬಿ ಸಿ ಯಲ್ಲಿ ವಿವರವಾದ ವರದಿ
ಬಾಲಕಿಯರು ಮತ್ತು ಯುವತಿಯರನ್ನು ಕುಟುಂಬ ಸದಸ್ಯರು ಕ್ರೂರವಾಗಿ ಹಲ್ಲೆ ಮಾಡಿದ್ದಾರೆ ಎಂಬ ವರದಿಗಳು ಭಾರತದಲ್ಲಿ ಹುಡುಗಿಯರು ಮತ್ತು ಮಹಿಳೆಯರು ತಮ್ಮ ಮನೆಯೊಳಗೆ ಎಷ್ಟು ಅಸುರಕ್ಷಿತರಾಗಿದ್ದಾರೆ ಎಂಬುದರ ಬಗ್ಗೆಗಮನ ಸೆಳಯುತ್ತದೆ.
ಹಳ್ಳಿಯೊಂದರಲ್ಲಿ ಜೀನ್ಸ್ ಧರಿಸಲು ಒತ್ತಾಯಿಸಿದ್ದರಿಂದ ಹದಿಹರೆಯದ ಬಾಲಕಿ ತನ್ನ ಕುಟುಂಬ ಸದಸ್ಯರಿಂದ ಥಳಿಸಲ್ಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ದೆವರಿಯ ಜಿಲ್ಲೆಯಲ್ಲಿ ಸವ್ರಹಿ ಖಾರ್ಗ್ ಗ್ರಾಮದ 17 ವರ್ಷದ ನೇಹಾ ಪಾಸ್ವಾನ್ ಸೋಮವಾರ ಜೀನ್ಸ್ ಮತ್ತು ಟಾಪ್ ಧರಿಸಲು ಒತ್ತಾಯಿಸಿದ ನಂತರ ಅವಳನ್ನು ಕುಟುಂಬ ಸದಸ್ಯರು ತೀವ್ರವಾಗಿ ಥಳಿಸಿದ್ದಾರೆ.
ತಾಯಿ ನೀಡಿದ ದೂರಿನ ಪ್ರಕಾರ, ಬಾಲಕಿಗೆ ಹೊಡೆದಾಗ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಆಕೆಯ ಸಾವಿಗೆ ಕಾರಣವಾಗಿದೆ, ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ತೀವ್ರವಾದ ಗಾಯ ಮತ್ತು ಮುರಿತ ಕೂಡ ಖಚಿತವಾಗಿದೆ ಎಂದು ಪೋಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿಯ ಕಿರಿಯ ಸಹೋದರ ವಿವೇಕ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅವರ ಚಿಕ್ಕಪ್ಪ ಮತ್ತು ಅಜ್ಜ ಬಟ್ಟೆ ಒಗೆಯುವ ಬಗ್ಗೆ ಕೋಪಗೊಂಡಿದ್ದಾರೆ ಮತ್ತು ಅವಳನ್ನು ಥಳಿಸಿದ್ದಾರೆ, ಎ೦ದನು.
ಇದು ರಾಜ್ಯದ ಅತ್ಯಂತ ಹಿ೦ದುಳಿದ ಪ್ರದೇಶಗಳಲ್ಲಿ ಒಂದು. ತಮ್ಮ ಮನೆಯಲ್ಲಿ ಬಟ್ಟೆ ಬಗ್ಗೆ ವಾಗ್ವಾದ ನಡೆದ ನಂತರ ಹದಿಹರೆಯದವಳನ್ನು ಅಜ್ಜ ಮತ್ತು ಚಿಕ್ಕಪ್ಪರು ಕೋಲುಗಳಿಂದ ತೀವ್ರವಾಗಿ ಥಳಿಸಿದ್ದಾರೆ ಎಂದು ಅವರ ತಾಯಿ ಶಕುಂತಲಾ ದೇವಿ ಪಾಸ್ವಾನ್ ಬಿಬಿಸಿ ಹಿಂದಿಗೆ ತಿಳಿಸಿದ್ದಾರೆ.
"ಅವಳು ದಿನವಿಡೀ ಧಾರ್ಮಿಕ ಉಪವಾಸವನ್ನು ಇಟ್ಟುಕೊಂಡಿದ್ದಳು. ಸಂಜೆ ಅವಳು ಒಂದು ಜೋಡಿ ಜೀನ್ಸ್ ಮತ್ತು ಮೇಲ್ಭಾಗವನ್ನು ಧರಿಸಿ ತನ್ನ ಆಚರಣೆಗಳನ್ನು ಮಾಡಿದಳು. ಅವಳ ಉಡುಪಿಗೆ ಆಕ್ಷೇಪಿಸಿದಾಗ, ನೇಹಾ ಜೀನ್ಸ್ ಧರಿಸಲೇಬೇಕೆಂದು ವಾದವು ಉಲ್ಬಣಗೊಂಡಿತು, ಹಿಂಸಾಚಾರಕ್ಕೆ ಕಾರಣವಾಯಿತು. ನನ್ನನ್ನು ಆಸ್ಪತ್ರೆಗೆ ಹೋಗಲು ಬಿಡಲಿಲ್ಲ. “ ಮರುದಿನ ಗಂಡಕ್ ನದಿಯ ಮೇಲಿನ ಸೇತುವೆಯಿಂದ ಹುಡುಗಿಯ ಶವವನ್ನು ನೇತುಹಾಕಲಾಗಿದೆ ಎಂದು ಅವರು ಕೇಳಿ ತನಿಖೆಗೆ ಹೋದಾಗ, ಅದು ನೇಹಾ ಅವಳದಾಗಿತ್ತು. ನೇಹಾ ಅವರ ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ, ಸೋದರಸಂಬಂಧಿ ಮತ್ತು ಆಟೋ ಡ್ರೈವರ್ ಸೇರಿದಂತೆ 10 ಜನರ ವಿರುದ್ಧ ಪೊಲೀಸರು ಕೊಲೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಿದ ಪ್ರಕರಣ ದಾಖಲಿಸಿದ್ದಾರೆ.
ನೇಹಾಳ ತಂದೆ ಅಮರನಾಥ ಪಾಸ್ವಾನ್ ಪಂಜಾಬ್‌ನ ಲುಧಿಯಾನ ಪಟ್ಟಣದ ನಿರ್ಮಾಣ ಸ್ಥಳಗಳಲ್ಲಿ ದಿನ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. “ ಈ ದುರಂತವನ್ನು ಎದುರಿಸಲು ಮನೆಗೆ ಮರಳಿದ್ದೇನೆ, ನೇಹಾ ಸೇರಿದಂತೆ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು ಶ್ರಮಿಸಿದ್ದೇನೆ,” ಎಂದು ಹೇಳಿದರು.
ತಮ್ಮ ಮಗಳು ಪೊಲೀಸ್ ಅಧಿಕಾರಿಯಾಗಬೇಕೆಂದು ಬಯಸಿದ್ದಾಳೆ, ಆದರೆ "ಅವಳ ಕನಸುಗಳು ಈಗ ಎಂದಿಗೂ ನನಸಾಗುವುದಿಲ್ಲ" ಎಂದು ಶಕುಂತಲಾ ದೇವಿ ಹೇಳಿದರು.
ಸ್ಥಳೀಯ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಬಿಡುವಂತೆ ತನ್ನ ಸ೦ಬ೦ಧಿಕರು ನೇಹಾ ಮೇಲೆ ಒತ್ತಡ ಹೇರುತ್ತಿದ್ದರು ಮತ್ತು ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಹೊರತುಪಡಿಸಿ ಬೇರೆ ಉಡುಪುಗಳನ್ನು ಧರಿಸಿದ್ದಕ್ಕೆ ಅವಳನ್ನು ದೂಷಿಸುತ್ತಿದ್ದರು ಎಂದು ಅವರು ಆರೋಪಿಸಿದರು.
ಪಿತೃಪ್ರಭುತ್ವದಲ್ಲಿ ಮುಳುಗಿರುವ ಸಮಾಜದಲ್ಲಿ ಮನೆಗಳ ಒಳಗೆ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯವು ಆಳವಾಗಿ ಹುದುಗಿದೆ ಮತ್ತು ಇದನ್ನು ಹೆಚ್ಚಾಗಿ ಕುಟುಂಬ ಹಿರಿಯರು ಅನುಮೋದಿಸುತ್ತಾರೆ ಎಂದು ಮಹಿಳಾ ಹಕ್ಕುಗಳ ಪ್ರಚಾರಕರು ಹೇಳುತ್ತಾರೆ.
ಭಾರತದಲ್ಲಿ ಹುಡುಗಿಯರು ಮತ್ತು ಮಹಿಳೆಯರು ಗಂಭೀರ ಬೆದರಿಕೆಗಳನ್ನು ಎದುರಿಸುತ್ತಾರೆ - ಗಂಡುಮಕ್ಕಳ ಆದ್ಯತೆಯಿಂದಾಗಿ ಜನಿಸುವ ಮೊದಲೇ ಭ್ರೂಣ ಹತ್ಯೆಯ ಅಪಾಯದಿಂದ - ಮತ್ತು ತಾರತಮ್ಯ ಮತ್ತು ನಿರ್ಲಕ್ಷ್ಯಕ್ಕೆ. ಕೌಟುಂಬಿಕ ಹಿಂಸಾಚಾರ ವಿಪರೀತವಾಗಿದೆ ಮತ್ತು ಸಾಕಷ್ಟು ವರದಕ್ಷಿಣೆ ತರದಿದ್ದಕ್ಕಾಗಿ ಪ್ರತಿದಿನ ಸರಾಸರಿ 20 ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ.
ಕಳೆದ ತಿಂಗಳು, ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯಿಂದ ಹೊರಬ೦ದದ ವಿಡಿಯೋದಲ್ಲಿ 20 ವರ್ಷದ ಬುಡಕಟ್ಟು ಮಹಿಳೆ ತನ್ನ ತಂದೆ ಮತ್ತು ಮೂವರು ಪುರುಷ ಸೋದರಸಂಬಂಧಿಗಳಿಂದ ಥಳಿಸಲ್ಪಟ್ಟಿದ್ದನ್ನು ತೋರಿಸಿದೆ.
ಆಕೆಯ "ನಿಂದನೀಯ" ವೈವಾಹಿಕ ಮನೆಯಿಂದ ಓಡಿಹೋದ ಕಾರಣಕ್ಕಾಗಿ "ಅವಳು ಶಿಕ್ಷೆ ಅನುಭವಿಸುತ್ತಿದ್ದಾಳೆ" ಎಂದು ಹೇಳಿದರು.
ನೆರೆಯ ಜಿಲ್ಲೆ ಧಾರ್ ನಲ್ಲಿ ಸೋದರಸಂಬಂಧಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಕ್ಕಾಗಿ ಇಬ್ಬರು ಬಾಲಕಿಯರನ್ನುಅವರ ಕುಟುಂಬ ಸದಸ್ಯರು ನಿರ್ದಯವಾಗಿ ಥಳಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ವೀಡಿಯೊಗಳಲ್ಲಿ ಹುಡುಗಿಯೊಬ್ಬಳನ್ನು ಅವಳ ಕೂದಲಿನಿಂದ ಎಳೆದು ನೆಲಕ್ಕೆ ಎಸೆದು, ಒದೆಯುವುದು ಮತ್ತು ಹೊಡೆಯುವುದು ಕಾಣುತ್ತಿದೆ.
ಗುಜರಾತ್ ರಾಜ್ಯದ ಎರಡು ಹದಿಹರೆಯದವರನ್ನು ಮೊಬೈಲ್ ಫೊನ್ ಗಳಲ್ಲಿ ಮಾತನಾಡುವ ‘ಅಪರಾಧ’ಕ್ಕಾಗಿ’ ಸಂಬಂಧಿಗಳನ್ನೊಳಗೊಂಡಂತೆ ಕನಿಷ್ಠ 15 ಪುರುಷರು ಹೊಡೆದರು, ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಹಕ್ಕುಗಳ ಕಾರ್ಯಕರ್ತ ರೋಲಿ ಶಿವರೆ "21 ನೇ ಶತಮಾನದಲ್ಲಿ ನಾವು ಜೀನ್ಸ್ ಧರಿಸಿ ಅಥವಾ ಮೊಬೈಲ್ ಫೋನ್‌ನಲ್ಲಿ ಮಾತನಾಡಿದ್ದಕ್ಕಾಗಿ ಹುಡುಗಿಯರನ್ನು ಕೊಂದು ಹಲ್ಲೆ ಮಾಡುತ್ತಿದ್ದೇವೆ" ಎಂದು ಕಳವಳ ತೋರುತ್ತಾರೆ.
ಪಿತೃಪ್ರಭುತ್ವವು "ಭಾರತದ ಅತಿದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ" ಮತ್ತು ರಾಜಕಾರಣಿಗಳು, ನಾಯಕರು ಮತ್ತು ಪ್ರಭಾವಶಾಲಿಗಳು ಅನೇಕವೇಳೆ ಮಹಿಳಾ ತುಚ್ಛೀಕರಣದ ಹೇಳಿಕೆಗಳನ್ನು ನೀಡಿ ಕೆಟ್ಟ ಉದಾಹರಣೆಗಳನ್ನು, ತಪ್ಪು ಕಲ್ಪನೆಗಳನ್ನು ಹರಡುತ್ತಿದ್ದಾರೆ. ಮತ್ತು ಲಿಂಗ ಸಮಾನತೆಯ ಸಂದೇಶವು ಸಮುದಾಯ ಮತ್ತು ಕುಟುಂಬಕ್ಕೆ ತಲುಪುತ್ತಿಲ್ಲ, ಎಂದು ಅವರು ಹೇಳುತ್ತಾರೆ.
"ಹೆಣ್ಣುಮಕ್ಕಳು ನಮ್ಮ ಆದ್ಯತೆ ಎಂದು ಸರ್ಕಾರ ಹೇಳುತ್ತದೆ ಮತ್ತು ಅವರ ಕಲ್ಯಾಣಕ್ಕಾಗಿ ಭವ್ಯವಾದ ಯೋಜನೆಗಳನ್ನು ಘೋಷಿಸುತ್ತದೆ, ಆದರೆ ವಾಸ್ತವದಲ್ಲಿ ಏನೂ ಆಗುವುದಿಲ್ಲ" .
"ಭಾರತದಲ್ಲಿ ಆಶ್ರಯ ಮನೆಗಳು ಮತ್ತು ಬಿಕ್ಕಟ್ಟು ಕೇಂದ್ರಗಳು ಸಂಖ್ಯೆಯಲ್ಲಿ ಕಡಿಮೆ ; ಕಳಪೆ ನಿರ್ವಹಣೆ ಕಾರಣದಿಂದ ಯಾರೂ ಅಲ್ಲಿ ವಾಸಿಸಲು ಬಯಸುವುದಿಲ್ಲ. ನಮ್ಮ ಸರ್ಕಾರವು ಹೆಚ್ಚಿನ ಹಣವನ್ನು ವಿನಿಯೋಗಿಸಬೇಕು ಮತ್ತು ಅವರ ಸ್ಥಿತಿಯನ್ನು ಸುಧಾರಿಸಬೇಕಾಗಿದೆ" ಎಂದು ಶ್ರೀಮತಿ ಶಿವರೆ ಹೇಳುತ್ತಾರೆ.
"ಆದರೆ ದೀರ್ಘಾವಧಿಯ ಪರಿಹಾರವೆಂದರೆ ತಮ್ಮ ಹಕ್ಕುಗಳ ಬಗ್ಗೆ ಹುಡುಗಿಯರಲ್ಲಿ ಹೆಚ್ಚು ಅರಿವು ಮೂಡಿಸುವುದು."
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ