ಜಾಗತಿಕ ಹಸಿವಿನ ಸೂಚ್ಯಂಕ : ೧೧೬ ದೇಶಗಳಲ್ಲಿ ೧೦೧ನೇ ಸ್ಥಾನದಲ್ಲಿದೆ ಭಾರತ
ದಿ ಹಿ೦ದು, ಹೊಸದಿಲ್ಲಿ: ಅಕ್ಟೋಬರ್ ೧೪, ೨೦೨೧
“ಹಸಿವಿನ ಅಳತೆಯಲ್ಲಿ ಕೇವಲ ೧೫ ದೇಶಗಳು ಭಾರತಕ್ಕಿ೦ತ ಕೆಟ್ಟದಾಗಿವೆ.”
ಗುರುವಾರ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ (Global Hunger Index) ಒಟ್ಟು ೧೧೬ ದೇಶಗಳಲ್ಲಿ ಭಾರತವನ್ನು ೧೦೧ ನೇ ಸ್ಥಾನದಲ್ಲಿಟ್ಟಿದೆ. ‘ಹಸಿವು ಗಂಭೀರ’ ಎಂದು ಗುರುತಿಸಲಾಗಿರುವ ೩೧ ದೇಶಗಳಲ್ಲಿ ಭಾರತವೂ ಸೇರಿದೆ. ಕಳೆದ ವರ್ಷ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ ದಲ್ಲಿ ೧೦೭ ದೇಶಗಳ ಪೈಕಿ ಭಾರತ ೯೪ನೇ ಸ್ಥಾನದಲ್ಲಿದೆ.
ಕೇವಲ ೧೫ ದೇಶಗಳು ಭಾರತಕ್ಕಿಂತ ಕೆಟ್ಟದಾಗಿದೆ. ಇವುಗಳಲ್ಲಿ ಪಪುವಾ ನ್ಯೂಗಿನಿ (೧೦೨), ಅಫ್ಘಾನಿಸ್ತಾನ (೧೦೩), ನೈಜೀರಿಯಾ (೧೦೩), ಕಾಂಗೋ(೧೦೫), ಮೊಜಾಂಬಿಕ್ (೧೦೬), ಸಿಯೆರಾ ಲಿಯೋನ್ (೧೦೬), ಟಿಮೋರ್-ಲೆಸ್ಟೆ (೧೦೮), ಹೈಟಿ (೧೦೯), ಲೈಬೀರಿಯಾ (೧೧೦), ಮಡಗಾಸ್ಕರ್ (೧೧೧), ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (೧೧೨), ಚಾಡ್ (೧೧೩), ಮಧ್ಯ ಆಫ್ರಿಕನ್ ಗಣರಾಜ್ಯ (೧೧೪), ಯೆಮೆನ್ (೧೧೫) ಮತ್ತು ಸೊಮಾಲಿಯಾ (೧೧೬).
ಭಾರತವು ಬಹುತೇಕ ನೆರೆಯ ರಾಷ್ಟ್ರಗಳ ಹಿಂದೆ ಇದೆ. ಪಾಕಿಸ್ತಾನವು 92 ನೇ ಸ್ಥಾನದಲ್ಲಿದೆ, ನೇಪಾಳ 76 ನೇ ಸ್ಥಾನದಲ್ಲಿದೆ ಮತ್ತು ಬಾಂಗ್ಲಾದೇಶ ಕೂಡ 76 ನೇ ಸ್ಥಾನದಲ್ಲಿದೆ.
ಜಾಗತಿಕ ಹಸಿವಿನ ಸೂಚ್ಯಂಕ ಆಧಾರಿತ ಪ್ರಸ್ತುತ ಪ್ರಕ್ಷೇಪಣಗಳು ಇಡೀ ವಿಶ್ವವು ಮತ್ತು ನಿರ್ದಿಷ್ಟವಾಗಿ 47 ದೇಶಗಳು 2030 ರ ವೇಳೆಗೆ ‘ಕಡಿಮೆ ಹಸಿವ’ನ್ನು ಸಾಧಿಸಲು ವಿಫಲವಾಗುತ್ತವೆ .
ಸೂಚ್ಯಂಕವು ರಾಷ್ಟ್ರೀಯ, ಪ್ರಾದೇಶಿಕ, ಮತ್ತು ಜಾಗತಿಕ ಮಟ್ಟದಲ್ಲಿ ೨೦೩೦ ರ೦ದು ‘ಶೂನ್ಯ ಹಸಿವು’ ಎನ್ನುವ ಗುರಿಯ ಕಡೆಗೆ ಪ್ರಗತಿಯನ್ನು ಕ್ರಮವಾಗಿ ಅಭ್ಯಸಿಸುತ್ತದೆ. ನಾಲ್ಕು ಪ್ರಮುಖ ಸೂಚಕಗಳ ಮೌಲ್ಯಗಳ ಆಧಾರದ ಮೇಲೆ- ಅಪೌಷ್ಟಿಕತೆ, ಮಕ್ಕಳ ಕ್ಷೀಣತೆ, ಮಕ್ಕಳ ಕುಂಠಿತ ಮತ್ತು ಮಕ್ಕಳ ಮರಣ- ಹಸಿವನ್ನು ೧೦೦ ಅಂಕಗಳ ಪ್ರಮಾಣದಲ್ಲಿ ನಿರ್ಧರಿಸುತ್ತದೆ. ಇದರಲ್ಲಿ ೦ ಅತ್ಯುತ್ತಮ ಸ್ಕೋರ್ (ಹಸಿವು ಇಲ್ಲ) ಮತ್ತು ೧೦೦ ಅತ್ಯ೦ತ ಕೆಟ್ಟದು. ಪ್ರತಿ ದೇಶದ ಎಣಿಕೆಯನ್ನು ತೀವ್ರತೆಯ ಪ್ರಕಾರ ವರ್ಗೀಕರಿಸಲಾಗಿದೆ - ‘ಕಡಿಮೆ’ ಯಿ೦ದ ‘ಅತ್ಯಂತ ಆತಂಕಕಾರಿ’.
ಈ ಪ್ರಸ್ತುತ ಶ್ರೇಯಾಂಕದ ಪ್ರಕಾರ ಸೊಮಾಲಿಯಾ ಅತ್ಯಧಿಕ ಹಸಿವನ್ನು ಹೊಂದಿದೆ - ಸ್ಕೋರ್ ೫೦.೮ ಅನ್ನು ‘ಅತ್ಯಂತ ಆತಂಕಕಾರಿ’ ಎಂದು ಪರಿಗಣಿಸಲಾಗಿದೆ. ಹಸಿವಿನ ‘ಆತಂಕಕಾರಿ’ಮಟ್ಟವನ್ನು ಹೊಂದಿರುವ ದೇಶಗಳು ಐದು - ಮಧ್ಯ ಆಫ್ರಿಕಾ ಗಣರಾಜ್ಯ, ಚಾಡ್, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಮಡಗಾಸ್ಕರ್, ಮತ್ತು ಯೆಮೆನ್ - ಮತ್ತು ೩೧ ದೇಶಗಳು ‘ತೀವ್ರ ಮಟ್ಟದ ಹಸಿವ’ನ್ನು ಹೊಂದಿವೆ.
" ಅಂಕಗಳು ೨೦೦೦ ರಿಂದ ಜಾಗತಿಕ ಹಸಿವು ಕಡಿಮೆಯಾಗುತ್ತಿದೆ ಎಂದು ತೋರಿಸಿದರೂ, ಪ್ರಗತಿಯ ದರ ಕುಂಠಿತವಾಗುತ್ತಿದೆ. ಪ್ರಪಂಚದ ಸ್ಕೋರ್ ೨೦೦೬ ಮತ್ತು ೨೦೧೨ ರ ನಡುವೆ ೪.೭ ಪಾಯಿಂಟ್‌ಗಳಿಂದ ೨೫.೧ ರಿಂದ ೨೦.೪ ಕ್ಕೆ ಕುಸಿದಿದೆ. ಇದು ೨೦೧೨ ರಿಂದ ಕೇವಲ ೨.೫ ಪಾಯಿಂಟ್‌ಗಳಷ್ಟು ಕುಸಿದಿದೆ. ದಶಕಗಳ ಕುಸಿತದ ನಂತರ, ಜಾಗತಿಕ ಹಸಿವಿನ ಲೆಕ್ಕಹಾಕಲು ಬಳಸುವ ನಾಲ್ಕು ಸೂಚಕಗಳಲ್ಲಿ ಒಂದಾಗಿರುವ ಜಾಗತಿಕ ‘ಅಪೌಷ್ಟಿಕತೆ’ಯ ಅಂಕಗಳು ಹೆಚ್ಚುತ್ತಿದೆ. ಈ ಬದಲಾವಣೆಯು ಹಸಿವಿನ ಇತರ ಅಳತೆಗಳಲ್ಲಿ ಹಿಮ್ಮುಖವಾಗುವುದಕ್ಕೆ ಕಾರಣವಾಗಬಹುದು,” ಎಂದು ವರದಿ ಹೇಳುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ