ಆಕ್ಸ್‌ಫ್ಯಾಮ್ ವರದಿ: 2021 ರಲ್ಲಿ, ಭಾರತದಲ್ಲಿ 84% ಕುಟುಂಬಗಳ ಆದಾಯ ಕುಸಿಯಿತು, ಆದರೆ ಶತಕೋಟ್ಯಾಧೀಶರ ಸಂಖ್ಯೆಯು ಹೆಚ್ಚಾಯಿತು
🔴 ಆಕ್ಸ್‌ಫ್ಯಾಮ್ ವರದಿಯು ಕೋವಿಡ್ ಭಾರತವನ್ನು ಪಾಳುಗೆಡವುದನ್ನು ಮುಂದುವರೆಸಿದೆ ಆದರೆ ದೇಶದ ಆರೋಗ್ಯ ಬಜೆಟ್ 2020 ರ RE (ಪರಿಷ್ಕೃತ ಅಂದಾಜುಗಳು) ನಿಂದ 10% ಕುಸಿತವನ್ನು ಕಂಡಿದೆ ಎಂದು ಕಂಡುಹಿಡಿದಿದೆ.
ಈಶಾ ರಾಯ್ | ನವದೆಹಲಿ | ಜನವರಿ 17, 2022 ದಿ ಇ೦ಡಿಯನ್ ಎಕ್ಸ್ಪ್ರೆಸ್
ಜಾಗತಿಕ ವರದಿಯ ಭಾರತ ಪುರವಣಿಯು 2021 ರಲ್ಲಿ, ಭಾರತದ ಅಗ್ರ 100 ಶ್ರೀಮಂತರ ಸಾಮೂಹಿಕ ಸಂಪತ್ತು ರೂ 57.3 ಲಕ್ಷ ಕೋಟಿ (USD 775 ಶತಕೋಟಿ)ಗೆ ತಲುಪಿದೆ, ಈ ಗರಿಷ್ಟ ಮೊತ್ತ ಒ೦ದು ಹೊಸ ದಾಖಲೆ, ಎಂದು ಹೇಳುತ್ತದೆ. ಅದೇ ವರ್ಷದಲ್ಲಿ, ರಾಷ್ಟ್ರೀಯ ಸಂಪತ್ತಿನಲ್ಲಿ ಕೆಳಭಾಗದ 50 ಪ್ರತಿಶತ ಜನಸಂಖ್ಯೆಯ ಪಾಲು ಕೇವಲ 6 ಪ್ರತಿಶತದಷ್ಟಿತ್ತು.
2021 ರಲ್ಲಿ ಭಾರತ ದೇಶದ 84 ಪ್ರತಿಶತ ಕುಟುಂಬಗಳ ಆದಾಯವು ಕುಸಿಯಿತು, ಆದರೆ ಅದೇ ಸಮಯದಲ್ಲಿ ಭಾರತೀಯ ಬಿಲಿಯನೇರ್ (ಶತಕೋಟ್ಯಾಧೀಶರುಗಳ)ಗಳ ಸಂಖ್ಯೆ 102 ರಿಂದ 142 ಕ್ಕೆ ಏರಿತು, ಹೀಗೆ ಕೋವಿಡ್ ಸಾಂಕ್ರಾಮಿಕವು ದೇಶದ ಆದಾಯದ ವಿಭಜನೆಯನ್ನು ಇನ್ನೂ ಹೆಚ್ಚು ಹದಗೆಡಿಸಿದೆ ಎಂದು ಆಕ್ಸ್‌ಫ್ಯಾಮ್ ವರದಿಯು ಹೇಳಿದೆ. ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಭಾನುವಾರ ಬಿಡುಗಡೆಯಾದ ಆಕ್ಸ್‌ಫ್ಯಾಮ್ ವರದಿಯ ಶೀರ್ಷಿಕೆ, “Inequality Kills’’ - “ಅಸಮಾನತೆ ಕೊಲ್ಲುತ್ತದೆ”. ಕೋವಿಡ್ ಭಾರತವನ್ನು ಧ್ವಂಸಗೊಳಿಸುವುದನ್ನು ಮುಂದುವರೆಸಿದ್ದ ಪರಿಸ್ಥಿತಿಯಲ್ಲಿ ದೇಶದ ಆರೋಗ್ಯ ಬಜೆಟ್ 2020 ರ ಪರಿಷ್ಕೃತ ಅಂದಾಜುಗಳಿಗಿಂತ 10% ಕುಸಿತವನ್ನು ಕಂಡಿದೆ ಎಂದು ಕಂಡುಹಿಡಿದಿದೆ. ಶಿಕ್ಷಣ ಆಯವ್ಯಯ ಹಂಚಿಕೆಯನ್ನು 6% ಕಡಿತಗೊಳಿಸಲಾಗಿದೆ ಎಂದು ಆಕ್ಸ್‌ಫ್ಯಾಮ್ ವರದಿ ಹೇಳುತ್ತದೆ. ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹಂಚಿಕೆಯು ಒಟ್ಟು ಕೇ೦ದ್ರ ಬಜೆಟ್‌ನ 1.5% ರಿಂದ 0.6% ಕ್ಕೆ ಇಳಿದಿದೆ.
2021 ರಲ್ಲಿ, ಭಾರತದ 100 ಶ್ರೀಮಂತರ ಸಾಮೂಹಿಕ ಸಂಪತ್ತು ಹೊಸ ದಾಖಲೆಯ ಗರಿಷ್ಠ 57.3 ಲಕ್ಷ ಕೋಟಿ ರೂ (USD 775 ಶತಕೋಟಿ) ತಲುಪಿದೆ ಎಂದು ಜಾಗತಿಕ ವರದಿಯ ಭಾರತದ ಪುರವಣಿಯು ಹೇಳುತ್ತದೆ. ಅದೇ ವರ್ಷದಲ್ಲಿ, ರಾಷ್ಟ್ರೀಯ ಸಂಪತ್ತಿನಲ್ಲಿ ಜನಸಂಖ್ಯೆಯ ಕೆಳಭಾಗದ 50 ಪ್ರತಿಶತದಷ್ಟು ಪಾಲು ಕೇವಲ 6 ಪ್ರತಿಶತದಷ್ಟಿತ್ತು.
ಸಾಂಕ್ರಾಮಿಕ ಸಮಯದಲ್ಲಿ (ಮಾರ್ಚ್ 2020 ರಿಂದ ನವೆಂಬರ್ 30, 2021 ರವರೆಗೆ), ಭಾರತೀಯ ಶತಕೋಟ್ಯಾಧೀಶರ ಸಂಪತ್ತು ರೂ 23.14 ಲಕ್ಷ ಕೋಟಿಯಿಂದ (USD 313 ಬಿಲಿಯನ್) ರೂ 53.16 ಲಕ್ಷ ಕೋಟಿಗೆ (USD 719 ಶತಕೋಟಿ) ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ. ಏತನ್ಮಧ್ಯೆ, 4.6 ಕೋಟಿಗೂ ಹೆಚ್ಚು ಭಾರತೀಯರು - ವಿಶ್ವಸಂಸ್ಥೆಯ ಪ್ರಕಾರ ಜಾಗತಿಕ ಹೊಸ ಬಡವರಲ್ಲಿ ಸುಮಾರು ಅರ್ಧದಷ್ಟು - 2020 ರಲ್ಲಿ ತೀವ್ರ ಬಡತನಕ್ಕೆ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ,
ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳ ಹಿಂದೆ ಭಾರತವು ವಿಶ್ವದ ಮೂರನೇ ಅತಿ ಹೆಚ್ಚು ಬಿಲಿಯನೇರ್‌ಗಳನ್ನು - ಶತಕೋಟ್ಯಾಧೀಶರುಗಳನ್ನು - ಹೊಂದಿದೆ ಎಂದು ವರದಿ ಹೇಳುತ್ತದೆ. ಫ್ರಾನ್ಸ್, ಸ್ವೀಡನ್ ಮತ್ತು ಸ್ವಿಟ್ಜರ್‌ಲ್ಯಾಂಡ್ಗಳನ್ನು ಒಟ್ಟುಗೂಡಿಸುವುದಕ್ಕಿಂತ ಹೆಚ್ಚು ಬಿಲಿಯನೇರ್‌ಗಳನ್ನು ಭಾರತ ಹೊಂದಿದೆ. ಬಿಲಿಯನೇರ್‌ಗಳ ಸಂಖ್ಯೆಯಲ್ಲಿ 2021ರಲ್ಲಿ ಭಾರತದಲ್ಲಿ ಶೇಕಡಾ 39 ರಷ್ಟು ಹೆಚ್ಚಳವಾಗಿದೆ.
"ಭಾರತದ ನಿರುದ್ಯೋಗ ದರವು ನಗರ ಪ್ರದೇಶಗಳಲ್ಲಿ ಶೇಕಡಾ 15 ರಷ್ಟಿದ್ದಾಗ ಮತ್ತು ಆರೋಗ್ಯ ವ್ಯವಸ್ಥೆಯು ಕುಸಿತದ ಅಂಚಿನಲ್ಲಿದ್ದ ಸಮಯದಲ್ಲಿ ಮಹಾ ಶ್ರೀಮ೦ತರ ಈ ಉಲ್ಬಣವು ಸ೦ಭವಿಸಿದೆ."
ಆಕ್ಸ್‌ಫ್ಯಾಮ್ ವರದಿಯ ಪ್ರಕಾರ ಅತಿ ಶ್ರೀಮಂತ 100 ಕುಟುಂಬಗಳ ಸಂಪತ್ತಿನ ಒಟ್ಟು ಹೆಚ್ಚಳದ ಸುಮಾರು ಐದನೇ ಭಾಗವು ಏಕೈಕ ವ್ಯಕ್ತಿ ಮತ್ತು ವ್ಯಾಪಾರದ ಮನೆಯ - ಅದಾನಿಗಳ - ಸ೦ಪತ್ತಿನ ಉಲ್ಬಣದಿಂದ ಕಾರಣವಾಗಿದೆ.
“ಗೌತಮ್ ಅದಾನಿ, ಸ೦ಪತ್ತಿನಲ್ಲಿ ಜಾಗತಿಕವಾಗಿ 24 ನೇ ಸ್ಥಾನದಲ್ಲಿದ್ದಾರೆ ಮತ್ತು ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಮೌಲ್ಯವು ಒಂದು ವರ್ಷದ ಅವಧಿಯಲ್ಲಿ ಎಂಟು ಪಟ್ಟು ಹೆಚ್ಚಾಗುತ್ತದೆ - 2020 ರಲ್ಲಿ USD 8.9 ಶತಕೋಟಿಯಿಂದ 2021 ರಲ್ಲಿ USD 50.5 ಶತಕೋಟಿಗೆ. ಫೋರ್ಬ್ಸ್‌ನ ನೈಜ ಸಮಯದ ಮಾಹಿತಿಯ (real time data by Forbes) ಪ್ರಕಾರ, 24 ನವೆಂಬರ್ 2021 ರಂತೆ, ಅದಾನಿ ಅವರ ನಿವ್ವಳ ಮೌಲ್ಯವು USD 82.2 ಬಿಲಿಯನ್ ಆಗಿದೆ. ಎಂಟು ತಿಂಗಳ ಅವಧಿಯಲ್ಲಿ ಈ ಪ್ರಚಂಡ ಬೆಳವಣಿಗೆ, ಭಾರತದ ಮಾರಣಾಂತಿಕ ಎರಡನೇ ತರಂಗದ ಸಮಯದಲ್ಲಿ, ಆಸ್ಟ್ರೇಲಿಯಾದಲ್ಲಿ ಅದಾನಿ ಹೊಸದಾಗಿ ಖರೀದಿಸಿದ ಕಾರ್ಮೈಕಲ್ ಗಣಿಗಳ ಆದಾಯ ಮತ್ತು ಮುಂಬೈ ವಿಮಾನ ನಿಲ್ದಾಣದಲ್ಲಿ 74 ಪ್ರತಿಶತ ಸ್ವಾಧೀನಪಡಿಸಿಕೊಂಡಿರುವ ಪಾಲನ್ನು ಒಳಗೊಂಡಿದೆ. ಅದೇ ಸಮಯದಲ್ಲಿ, ಮುಖೇಶ್ ಅಂಬಾನಿಯವರ ನಿವ್ವಳ ಮೌಲ್ಯವು 2020 ರಲ್ಲಿ USD 36.8 ಶತಕೋಟಿಯಿಂದ 2021 ರಲ್ಲಿ USD 85.5 ಶತಕೋಟಿಗೆ ದ್ವಿಗುಣಗೊಂಡಿದೆ,'' ಎಂದು ವರದಿ ಹೇಳುತ್ತದೆ.
ಆಕ್ಸ್‌ಫ್ಯಾಮ್ ಇಂಡಿಯಾ ದ ಪ್ರಧಾನ ಕಾರ್ಯನಿರ್ವಾಹಕ ಅಮಿತಾಭ್ ಬೆಹರ್ ಅವರು ಜಾಗತಿಕವಾಗಿ "ಪ್ರತಿದಿನ ಕನಿಷ್ಠ 21,000 ಜನರ ಅಥವಾ ಪ್ರತಿ ನಾಲ್ಕು ಸೆಕೆಂಡುಗಳಿಗೆ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗುವ ಅಸಮಾನತೆಯ ಸಂಪೂರ್ಣ ವಾಸ್ತವವನ್ನು ಸೂಚಿಸುತ್ತದೆ," ಎಂದು ಹೇಳಿದರು.
“ಸಾಂಕ್ರಾಮಿಕವು ಲಿಂಗ ಸಮಾನತೆಯ ಸಾಧ್ಯತೆಯನ್ನು 99 ವರ್ಷಗಳಿಂದ ಈಗ 135 ವರ್ಷಗಳಿಗೆ ಹಿಮ್ಮೆಟ್ಟಿಸಿದೆ. 2020 ರಲ್ಲಿ ಮಹಿಳೆಯರು ಒಟ್ಟಾರೆಯಾಗಿ ರೂ 59.11 ಲಕ್ಷ ಕೋಟಿ (USD 800 ಶತಕೋಟಿ) ಗಳಿಕೆಯನ್ನು ಕಳೆದುಕೊಂಡಿದ್ದಾರೆ, 2019 ಕ್ಕಿಂತ ಈಗ 1.3 ಕೋಟಿ ಕಡಿಮೆ ಮಹಿಳೆಯರು ಕೆಲಸದಲ್ಲಿದ್ದಾರೆ. ವಿಪರೀತ ಸಂಪತ್ತನ್ನು ಗುರಿಯಾಗಿಸಿಕೊಂಡು ತೆರಿಗೆಯ ಮೂಲಕ ಈ ಅಶ್ಲೀಲ ಅಸಮಾನತೆಯ ತಪ್ಪುಗಳನ್ನು ಸರಿಪಡಿಸಲು ಪ್ರಾರಂಭಿಸುವುದು ಮತ್ತು ಜೀವಗಳನ್ನು ಉಳಿಸಲು ಆ ಹಣವನ್ನು ನಿಜವಾದ ಆರ್ಥಿಕತೆಗೆ ಮರಳಿ ಪಡೆಯುವುದು ಎಂದಿಗಿ೦ತ ಮುಖ್ಯವಾಗಿದೆ" ಎಂದು ಬೆಹರ್ ಹೇಳಿದರು.
ಆಕ್ಸ್‌ಫ್ಯಾಮ್ ಇಂಡಿಯಾ ವರದಿಯು ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಆದಾಯದಲ್ಲಿ ಪರೋಕ್ಷ ತೆರಿಗೆಗಳ ಪಾಲಿನ ಹೆಚ್ಚಳವನ್ನು ಸೂಚಿಸುತ್ತದೆ, ಆದರೆ ಕಾರ್ಪೊರೇಟ್ ತೆರಿಗೆಯ ಪ್ರಮಾಣವು ಕುಸಿಯುತ್ತಿದೆ. ಇಂಧನದ ಮೇಲೆ ವಿಧಿಸಲಾದ ಹೆಚ್ಚುವರಿ ತೆರಿಗೆಯು ಕಳೆದ ವರ್ಷಕ್ಕೆ ಹೋಲಿಸಿದರೆ 2020-21 ರ ಮೊದಲ ಆರು ತಿಂಗಳಲ್ಲಿ ಶೇಕಡಾ 33 ರಷ್ಟು ಏರಿಕೆಯಾಗಿದೆ, ಇದು ಪೂರ್ವ ಕೋವಿಡ್ ಮಟ್ಟಕ್ಕಿಂತ 79 ಶೇಕಡಾ ಹೆಚ್ಚಾಗಿದೆ. ಅದೇ ಸಮಯದಲ್ಲಿ, "ಅತಿ ಶ್ರೀಮಂತರ" ಮೇಲಿನ ಸಂಪತ್ತು ತೆರಿಗೆಯನ್ನು 2016 ರಲ್ಲಿ ರದ್ದುಗೊಳಿಸಲಾಯಿತು ಎಂದು ಅದು ಹೇಳುತ್ತದೆ.
ಕಳೆದ ವರ್ಷ ಹೂಡಿಕೆಯನ್ನು ಆಕರ್ಷಿಸಲು ಕಾರ್ಪೊರೇಟ್ ತೆರಿಗೆಗಳನ್ನು ಶೇಕಡಾ 30 ರಿಂದ 22 ಕ್ಕೆ ಇಳಿಸಿದ್ದರಿಂದ 1.5 ಲಕ್ಷ ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ, ಇದು ಭಾರತದ ವಿತ್ತೀಯ ಕೊರತೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವರದಿ ಹೇಳುತ್ತದೆ. “ಈ ಪ್ರವೃತ್ತಿಗಳು ಬಡವರು, ಅಂಚಿನಲ್ಲಿರುವವರು ಮತ್ತು ಮಧ್ಯಮ ವರ್ಗದವರು ತೀವ್ರತರವಾದ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದ್ದರೂ ಹೆಚ್ಚಿನ ತೆರಿಗೆಗಳನ್ನು ಪಾವತಿಸಿದರು ಆದರೆ ಶ್ರೀಮಂತರು ತಮ್ಮ ನ್ಯಾಯಯುತ ಪಾಲನ್ನು ಪಾವತಿಸದೆ ಹೆಚ್ಚು ಹಣವನ್ನು ಗಳಿಸಿದರು ಎಂದು ತೋರಿಸುತ್ತವೆ.”
ರಾಷ್ಟ್ರೀಯ ಮಾದರಿ ಸಮೀಕ್ಷೆಯ (National Sample Survey - NSS) (2017-18) ದತ್ತಾಂಶವು ತೋರಿಸುತ್ತದೆ ಖಾಸಗಿ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ಸ್ವ೦ತ ವೆಚ್ಚವು (‘Out of Pocket Expenditure’- OOPE) ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೋಲಿಸಿದರೆ ಸುಮಾರು ಆರು ಪಟ್ಟು ಹೆಚ್ಚು ಮತ್ತು ಹೊರರೋಗಿಗಳ ಆರೈಕೆಗಾಗಿ ಎರಡು ಅಥವಾ ಮೂರು ಪಟ್ಟು ಹೆಚ್ಚು. ಭಾರತದಲ್ಲಿ ಸರಾಸರಿ OOPE ಶೇಕಡಾ 62.67 ರಷ್ಟಿದ್ದರೆ, ಜಾಗತಿಕ ಸರಾಸರಿಯು ಶೇಕಡಾ 18.12 ರಷ್ಟಿದೆ.
ದೇಶದ ಸ೦ಯುಕ್ತ ರಚನೆಯ ಹೊರತಾಗಿಯೂ, ಆದಾಯದ ವ್ಯವಸ್ಥೆಯು ಸಂಪನ್ಮೂಲಗಳ ನಿಯಂತ್ರಣವನ್ನು ಕೇಂದ್ರದ ಕೈಯಲ್ಲಿ ಇರಿಸಿದೆ ಮತ್ತು ಸಾಂಕ್ರಾಮಿಕ ರೋಗದ ನಿರ್ವಹಣೆಯನ್ನು ತಮ್ಮಆರ್ಥಿಕ ಅಥವಾ ಮಾನವ ಸಂಪನ್ಮೂಲಗಳ ಸ್ಥಿತಿಯಲ್ಲಿ ಅದನ್ನು ನಿರ್ವಹಿಸಲು ಸಜ್ಜುಗೊಂಡಿಲ್ಲದ ರಾಜ್ಯಗಳಿಗೆ ಬಿಡಲಾಗಿದೆ ಎಂದು ವರದಿ ಹೇಳುತ್ತದೆ. .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ