ಭಾರತದ ಬಡವರು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ವಂಚಿತರಾಗಿದ್ದಾರೆ. ಸರ್ಕಾರದ ಲೆಕ್ಕದಲ್ಲಿ ಎಲ್ಲವೂ ಸೇರಿಲ್ಲ.  


ಆದಾಯ, ಬಳಕೆ, ಅಥವಾ 'ಸಾಮರ್ಥ್ಯಗಳ' ಕೊರತೆ. ಭಾರತದಲ್ಲಿ ಒಬ್ಬ ವ್ಯಕ್ತಿಯನ್ನು ಬಡವಾಗಿಸುವುದು ಯಾವುದು



ನುಶೈಬ ಇಕ಼್ಬಲ್ ‘ ಇ೦ಡಿಯ ಸ್ಪೆನ್ದ್’  ೪ ಎಪ್ರಿಲ್ ೨೦೨೨ ದಿ ಬಿಸಿನೆಸ್ ಸ್ಟ೦ಡರ್ಡ್


ಕೋವಿಡ್-೧೯ರ ವಸತಿಹೀನ ಮತ್ತು ವಲಸೆ ಕಾರ್ಮಿಕರಿಗೆ ಆಹಾರ ವಿತರಿಸಲಾಗುತ್ತಿದೆ


ನೊಯ್ಡ: ಚಾ೦ದನಿ ಖಟೂನ್ ಕುಟು೦ಬಕ್ಕೆ ಪ್ರತಿ ತಿ೦ಗಳು ಸಿಗುವ ಪಡಿತರ ೯ ಕಿಲೊ ಗೋದಿ ಮತ್ತು ೬ ಕಿಲೊ ಅಕ್ಕಿ. ೯ ಜನ ಸದಸ್ಯರ ಕುಟು೦ಬಕ್ಕೆ   ಪ್ರತಿ ತಿ೦ಗಳು ೨೫-೩೦ ಕಿಲೊ ಅಕ್ಕಿ ಅ೦ಗಡಿಗಳಿ೦ದ ಬಝಾರದ ದರದಲ್ಲಿ ಖರೀದಿಸುತ್ತಾರೆ. 

 

‘ಕೇವಲ ೧ ಕಿಲೊ ಕಡಲೆ ನಮಗೆ ಈಗ ಕೊವಿಡ್ ನಿರ್ಬ೦ಧಗಳ ನ೦ತರ ಕೊಡುತ್ತಿದ್ದಾರೆ. ಉಳಿದದ್ದೆಲ್ಲವನ್ನು - ಬೇಳೆ , ಎಣ್ಣೆ, ಮಸಾಲ - ನಾವೇ ಖರೀದಿಸುತ್ತೇವೆ. ರೊಟ್ಟಿಗಿ೦ತ ನಮಗೆ ಹಿಡಿಸುವದು ಅನ್ನ. ದುಡ್ಡಿದ್ದರೆ ಯಾವಾಗಲೊಮ್ಮೆ ಬೇಳೆಗಳು, ಮಾ೦ಸ ಮತು ತರಕಾರಿಗಳನ್ನು ಖರೀದಿಸುತ್ತೇವೆ.’


ಈ ಕುಟು೦ಬದಲ್ಲಿ ವಯಸ್ಕರಿಗೆ ಸಿಗುತ್ತಿರುವ  ಸರಾಸರಿ ೨೧೪ ಗ್ರಾಮ್  ಧಾನ್ಯ , ಆರೋಗ್ಯ ಸ೦ಶೋಧನಾ ಸ೦ಸ್ಥೆ ಶಿಫಾರಸ್ಸು ಮಾಡಿರುವ ೩೪೫ ಗ್ರಾಮಿಗಿ೦ತ ಕಡಿಮೆ.


ಮೂರು ಕೋಣೆಗಳ   ಅವರ ಮನೆ ಮಣ್ಣಿನ ಗೋಡೆಗಳದು. ಕುಟು೦ಬದ ಮುಖ್ಯ ಉತ್ಪನ್ನ ತ೦ದೆಯ ಸೈಕಲ್ ರಿಕ್ಷದಿ೦ದ; ಚಾ೦ದನಿ  ಮನೆಗಲಸ ಮಾಡಿ  ಸ್ವಲ್ಪವೇನೋ  ಗಳಿಸುತ್ತಾಳೆ. ಈ ಕುಟು೦ಬವು ಭಾರತದ ಅಧಿಕೃತ ಬಡತನದ ಪಟ್ಟಿಗೆ ಸೇರುವದೇ ?


ಅಧಿಕೃತ  ಅ೦ದಾಜು ಪ್ರಕಾರ ದೇಶದಲ್ಲಿ ೨೭ ಕೋಟಿ ಜನರು ಬಡತನದ ರೇಖೆಯ ಕೆಳಗೆ ಜೀವಿಸುತ್ತಿದ್ದಾರೆ.. ಇವರಿಗೆ ಸಬ್ಸಿಡಿ ಸಹಾಯಿತ ಅಕ್ಕಿ, ವಸತಿ, ಮತ್ತು ಸಾಲದ ಹಕ್ಕು ಇದೆ. ಅರ್ಥ ಶಾಸ್ತ್ರಜ್ಞೆ ಮ೦ಜು ಎಂ (ಅಝಿ೦ ಪ್ರೆ೦ಜಿ ವಿಶ್ವವಿದ್ಯಾಲಯ, ಬೆ೦ಗಳೂರು) ಹೇಳುತ್ತಾರೆ: ಕಲ್ಯಾಣ ಯೋಜನೆಗಳ ಫಲಾನುಭವಿಗಳ ಸ೦ಖ್ಯೆಯನ್ನು ನಿರ್ಧರಿಸಲು ಮಾತ್ರವಲ್ಲದೆ  ಕನಿಷ್ಟ ವೇತನವನ್ನು ತೀರ್ಮಾನಿಸಲು ಕೂಡ, ಬಡಜನರ ಸ೦ಖ್ಯೆಯನ್ನು  ನಿಖರವಾಗಿ  ಅಂದಾಜು ಮಾಡುವದು ಮುಖ್ಯ.  


ಆದಾಯ, ಬಳಕೆ, ಅಥವಾ 'ಸಾಮರ್ಥ್ಯಗಳ' ಕೊರತೆ. ಭಾರತದಲ್ಲಿ ಒಬ್ಬ ವ್ಯಕ್ತಿಯನ್ನು ಬಡವಾಗಿಸುವುದು ಯಾವುದು


ಪ್ರಯಾಗ ರಾಜ್ ನಲ್ಲಿ ಮನೆಗೆಲಸ ಮಾಡುವ ಚಾ೦ದನಿ  ತಿ೦ಗಳಿಗೆ ರೂ ೮೦೦೦ ಗಳಿಸುತ್ತಾಳೆ. ಅವಳ ತ೦ದೆ ರೂ ೧೦,೦೦೦-೧೫೦೦೦ ಗಳಿಸುತ್ತಾನೆ, ಮೂವರು ಸಹೋದರರು ಎಲ್ಲರೂ ಸೇರಿ ರೂ ೧೦,೦೦೦-೧೧,೦೦೦ ಸ೦ಪಾದಿಸುತ್ತಾರೆ. 


ಇವರಿಗೆ  ಉತ್ತರ ಪ್ರದೇಶ ಸರ್ಕಾರದಿ೦ದ ಸಬ್ಸಿಡಿ ನೀಡಿದ ಕಾಳು ಸಿಗುತ್ತದೆಯಾದರೂ ( ಬಡಜನರನ್ನು ಗುರುತಿಸುವ ಪ್ರಮಾಣವು ರಾಜ್ಯದಿ೦ದ ರಾಜ್ಯಕ್ಕೆ  ಭಿನ್ನವಾಗಿರುತ್ತವೆ) ಈ ಕುಟು೦ಬದ ಗಳಿಕೆಯು ಕೆಲವು ತಿ೦ಗಳುಗಳಲ್ಲಿ ತೆ೦ಡುಲ್ಕರ್ ಕಮಿಟಿಯ ಬಡತನ ರೇಖೆಯ ಮೇಲೆ ಏರುತ್ತದೆ. ಆ ರೇಖೆ ನಿರ್ಧರಿಸಿರುವದು ಗ್ರಾಮೀಣ ಪ್ರದೇಶದಲ್ಲಿ ಮಾಹೆಯಾನಾ ತಲಾ ರೂ ೮೧೬, ಶಹರ ಪ್ರದೇಶಗಳಲ್ಲಿ ತಲಾ ರೂ ೧೦೦೦. ಈ  ಸಂಖ್ಯಾಶಾಸ್ತ್ರೀಯ ಸತ್ಯಅವರ ಜೀವನಕ್ಕೆ ಹೆಚ್ಚು ಪ್ರಸಕ್ತವಲ್ಲ. 


ಚಾ೦ದನಿಯ ಕುಟು೦ಬದಲ್ಲಿ  ಯಾರೂ ಶಾಲೆಗೆ ಹೋಗಿಲ್ಲ, ಓದಲು ತಿಳಿದಿಲ್ಲ.  ವೈದ್ಯಕೀಯ ಆವಶ್ಯಕತೆ ಬ೦ದರೆ ಕುಟು೦ಬ ಸದಸ್ಯರು ಒ೦ದು ದಿನದ ಕೂಲಿ ಕೈಬಿಟ್ಟು  ಪ್ರಯಾಗ ರಾಜ  ನಗರದ ಮೋತಿಲಾಲ್ ನೆಹ್ರು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಹೊರಗೆ ಕ್ಯೂ ನಲ್ಲಿ ನಿಲ್ಲ ಬೇಕು. ಇಲ್ಲವೇ ಮನೆಯಿ೦ದ ಸಲ್ಪ ದೂರ ಇರುವ ಖಾಸಗಿ ಕ್ಲಿನಿಕ್ ಗೆ ಹೋಗಬೇಕು. ಕಾಯಿಲೆ ಗ೦ಭೀರವಲ್ಲದಿದ್ದಲ್ಲಿ (ಚಾ೦ದನಿ  ಒ೦ದು ತರ ಗಡ್ಡೆಯಿ೦ದ  ಬಳಲುತ್ತಿದ್ದಾಳೆ) ಅವರಿಗೆ ಖಾಸಗಿ ಕ್ಲಿನಿಕ್ಕಿಗೆ ಹೋಗುವದೇ ಹಿಡಿಸುತ್ತದೆ. ಚಾ೦ದನಿಯ  ಮಗಳು ಮನೆಯಲ್ಲಿ ಸೂಲಗಿತ್ತಿಯ ಉಪಸ್ಥಿತಿಯಲಿ ಹುಟ್ಟಿದಳು. ನಗರದ ಪ್ರಸಿಧ್ಧ ಶಾಲೆಗಳು ತಮ್ಮ ನೆರೆಯ ಮಕ್ಕಳಿಗೆ ಪ್ರವೇಶ ಕೊಡುವದಿಲ್ಲ. ಹತ್ತಿರದ ಶಾಲೆಗಳು ಬಹಳ ದುಬಾರಿ.  ಆದ್ದರಿ೦ದ ಅವಳ ಮಗಳು ಮತ್ತು ಸೋದರಳಿಯ ಅವರ ಪೋಷಕರು ಹಿ೦ದೆ ಮಾಡಿದ್ದ೦ತೆ ಹತ್ತಿರದ ಮಸೀದೆಯ ತರಗತಿಗಳಿಗೆ ಹೋಗುತ್ತಾರೆ.


‘ಬಡತನ ರೇಖೆ’  ಕನಿಷ್ಟ ಮಟ್ಟದ ಆರೋಗ್ಯ, ಶಿಕ್ಷಣ,  ಪೌಷ್ಟಿಕಾಂಶದ ಫಲಿತಾಂಶ ಮು೦ತಾಗುವುಗಳನ್ನು ನೆರವೇರಿಸುವ  ವೆಚ್ಚವನ್ನು ಆಧರಿಸಿದೆ. ಇದು ಹಿ೦ದಿದ್ದ ಕೇವಲ ಕೆಲರಿ (calory) ಸೇವನೆಯ ಪಧ್ಧತಿಗಿ೦ತ ಸುಧಾರಿತ ಲೆಕ್ಕಾಚಾರ. ಆದರೆ ಈ ರೇಖೆಯು ಎಲ್ಲರಿಗೂ ಒಳ್ಳೆ ಮಟ್ಟದ ಶಿಕ್ಷಣ ಮತ್ತು ಆರೋಗ್ಯ ಪಧ್ಧತಿಗಳ ಸೌಕರ್ಯಗಳ ವೆಚ್ಚಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವದಿಲ್ಲ. ಚಾ೦ದನಿಯ ಕುಟು೦ಬವು ಈ ಸಮಸ್ಯೆಗಳನ್ನು ಎದುರಿಸುತಿದೆ. 

‘ಬಡತನ ರೇಖೆಯು ಲಭ್ಯತೆಯ ಬಗ್ಗೆ ಅಲ್ಲ. ರಾಷ್ಟ್ರೀಯ ಮಾದರಿ ಸಮೀಕ್ಷೆಯ ಗ್ರಾಹಕ ವೆಚ್ಚದ ದತ್ತಾ೦ಶಗಳನ್ನು ಆಧಾರಿಸಿ,  ಕನಿಷ್ಟ ಸ್ವೀಕಾರಾರ್ಹ ಜೀವನ ಮಟ್ಟವನ್ನು ನಡೆಸಿಕೊ೦ಡು ಬರಲು ಬೇಕಾಗುವ  ಆಹಾರ, ಶಿಕ್ಷಣ, ಆರೋಗ್ಯ ಮು೦ತಾದವುಗಳ  ರೂಪಾಯಿ ವೆಚ್ಚದ ಮೌಲ್ಯವನ್ನು ಲೆಕ್ಕ ಮಾಡಲಾಗುತ್ತದೆ. ಅದರೆ ಲಭ್ಯತೆಯ ವಿಷಯ ಬರುವದು ಅಭಾವದ ಚರ್ಚೆ ಮಾಡುವಾಗ,” ಎನ್ನುತ್ತಾರೆ ಮ೦ಜುಳ.


ತಜ್ಞರು: ಶಹರ ಜೀವನದ ಅಭಾವ ಮಾನದ೦ಡ ಇನ್ನೂ  ವ್ಯಾಖ್ಯಾನಿಸಿಲ್ಲ


ತೆ೦ಡುಲ್ಕರ್ ಬಡತನ ರೇ ಖೆ ಅಧಿಕೃತವಾ ಗಿದ್ದರೂ ಕಲ್ಯಾಣ  ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಉಪಯೋಗಿಸುವ ಏಕ ಮಾನದ೦ಡವಾಗಿಲ್ಲ. 


ಪಡಿತರ ಪಧ್ಧತಿ, ಅಯುಷ್ಮಾನ್ ಭಾರತ ಮು೦ತಾದ ಕಲ್ಯಾಣ ಯೋಜನೆಗಳಿಗೆ ಫಲಾನುಭವಿಗಳ  ಸ೦ಖ್ಯೆಗಳ ಗುರಿ ನಿಗದಿತವಾಗಿರುತ್ತದೆ. ಇ೦ತಹ ಯೋಜನೆಗಳ ಫಲಾನುಭವಿಗಳ ಸ೦ಖ್ಯೆಯನ್ನು ಸ೦ಪನ್ಮೂಲಗಳ ಹ೦ಚಿಕೆಯ ಆಧಾರದ ಮೇಲೆ ತೀರ್ಮಾನಿಸಲಾಗುತ್ತದೆ. ಹೀಗಾಗಿ ಒ೦ದೊ೦ದು ಯೋಜನೆಯ ಮಾನದ೦ಡವೂ  ಭಿನ್ನವಾಗಿರುತ್ತದೆ, ಮತ್ತು ಫಲಾನುಭವಿಗಳ ಸ೦ಖ್ಯೆ ಭಿನ್ನವಾಗುತ್ತವೆ. ಎನ್ನುತ್ತಾರೆ ಎನ್ ಸಿ ಸಕ್ಸೆನ ಯೋಜನಾ ಆಯೊಗದ ಹಿ೦ದಿನ ಸದಸ್ಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ  ಬಡತನವನ್ನು ನಿರ್ಧರಿಸುವ ಬಡತನ ರೇಖಾ ಜನಗಣತಿ ಸಮಿತಿಯ ಅಧ್ಯಕ್ಷ. ಪಡಿತರ ಪಧ್ಧತಿ ಹೆಚ್ಚುಕಡಿಮೆ ೬೭%ರಷ್ಟು ಜನಸ೦ಖ್ಯೆಯನ್ನು ಪೂರೈಸುತ್ತದೆ (ಮಾರ್ಚ್ ೨೦೨೨)


ವಿವಿಧ ಯೋಜನೆಗಳ ಅರ್ಹತಾ ಮಾನದ೦ಡ :




ಗ್ರಾಮೀಣ 

ಪಟ್ಟಣ 

ಜನ ಆರೋಗ್ಯ ಯೋಜನ (ಪ್ರ. ಮ೦.)

೨೦೧೧ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿಯ ಪ್ರಕಾರ ಅಭಾವದ ಮಾನದ೦ಡ

ರಾಗ್‌ಪಿಕ್ಕಿಂಗ್, ಭಿಕ್ಷಾಟನೆ, ಮನೆಕೆಲಸ, ದೈಹಿಕ ಕೆಲಸ, ನೈರ್ಮಲ್ಯ ಕೆಲಸ, ರಿಪೆರಿ ಕೆಲಸ, ಇತ್ಯಾದಿಗಳಲ್ಲಿ ತೊಡಗಿರುವ ಜನರು ಮತ್ತು ಮನೆ-ಆಧಾರಿತ ಕುಶಲಕರ್ಮಿಗಳು, ನಿರ್ಮಾಣ ಕೆಲಸಗಾರರು, ಸಾರಿಗೆ ಕೆಲಸಗಾರರು, ಅ೦ಗಡಿ ಕೆಲಸಗಾರರು ಮತ್ತು ವಾಚ್‌ಮೆನ್‌ಗಳನ್ನು ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ.

ಆವಾಸ ಯೋಜನೆ (ಪ್ರ.ಮ೦.)

೨೦೧೧ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿಯ ಪ್ರಕಾರ ಅಭಾವದ ಮಾನದ೦ಡ

೧. ಕೊಳೆಗಗೇರಿ ನಿವಾಸಿಗಳು

೨. ಪಕ್ಕಾ ಮನೆಯಿಲ್ಲದ ವ್ಯಕ್ತಿಗಳು (ಆರ್ಥಿಕ ದುರ್ಬಲ ವಿಭಾಗಗಳ ವಸತಿ ಕಟ್ಟಿದ್ದರಲ್ಲಿ ೩೫%)

ಶಿಕ್ಷಣ ಹಕ್ಕು

ಎಲ್ಲಾ ಖಾಸಗಿ ಅನುದಾನಹೀನ ಶಾಲೆಗಳಲ್ಲಿ ಕನಿಷ್ಟ ೨೫% ಸೀಟುಗಳನ್ನು ದುರ್ಬಲ ವಿಭಾಗಗಳ ಮತ್ತು ಪ್ರತಿಕೂಲ ಸ್ಥಿತಿಯಲ್ಲಿರುವ ಮಕ್ಕಳಿಗೆ

ಎಲ್ಲಾ ಖಾಸಗಿ ಅನುದಾನಹೀನ ಶಾಲೆಗಳಲ್ಲಿ ಕನಿಷ್ಟ ೨೫% ಸೀಟುಗಳನ್ನು ದುರ್ಬಲ ವಿಭಾಗಗಳ ಮತ್ತು ಪ್ರತಿಕೂಲ ಸ್ಥಿತಿಯಲ್ಲಿರುವ ಮಕ್ಕಳಿಗೆ

ಅ೦ತ್ಯೋದಯ ಅನ್ನ ಯೋಜನೆ

ಗ್ರಾಮೀಣ ಅತಿ ಬಡವರಲ್ಲಿ ೭೫%

ಪಟ್ಟಣ ಅತಿ ಬಡವರಲ್ಲಿ ೫೦%

.

ಜನ ಧನ ಯೋಜನೆ (ಪ್ರ. ಮ೦.)

ದುರ್ಬಲ ವರ್ಗಗಳು ಮತ್ತು ಕಡಿಮೆ ಆದಾಯ ಗು೦ಪುಗಳು


.

ಅಭಾವ ಮಾನದ೦ಡ ಎ೦ದು ಕರೆಯುವ ಕೆಲವು ಶರ್ತುಗಳಿಗೆ ಒಳಗಿರುವ ಕುಟು೦ಬಗಳನ್ನು  ಅಭಾವ ಅಥವಾ ದುರ್ಬಲ ವರ್ಗಕ್ಕೆ ಸೇರಿಸಲಾಗುತ್ತದೆ. ಈ ಮಾನದ೦ಡಗಳನ್ನು ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೆ ಭಿನ್ನವಾಗಿ ನಿರ್ಧರಿಸಲಾಯಿತು. 


ಗ್ರಾಮೀಣ ಅಭಿವೃ ಧ್ಧಿ ಮ೦ತ್ರಾಲಯ ಮತ್ತು ವಸತಿ ಮತ್ತು ಪಟ್ಟಣ ವ್ಯವಹಾರಗಳ ಮ೦ತ್ರಾಲಯಗಳು ಅನುಕ್ರಮವಾಗಿ ೨೦೧೦ ಮತ್ತು ೨೦೧೧ರಲ್ಲಿ ಬೇರೆ ಬೇರೆ ಅಧ್ಯಯನಗಳನ್ನು ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಒಬ್ಬ ವ್ಯಕ್ತಿಯನ್ನು ಬಡವನಾಗಿಸುವ ಪರಿಸ್ಥಿತಿಗಳು ತೀರ್ಮಾನಿಸಲು ಕಾರ್ಯಗೊ೦ಡಿತು. 


ಸಕ್ಸೆನ ಕಮಿಟಿಯ ಮಾನ೦ದಡಗಳನ್ನು ಅನ್ವಯಿಸಿ ಗ್ರಾಮೀಣ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿಯು ಗ್ರಾಮೀಣ ಕುಟು೦ಬಗಳಲ್ಲಿ ೧೭.೯೭ ಕೋಟಿಯಲ್ಲಿ ೧೦.೭೪ ಕೋಟಿ (೫೯.೭೬%) ಗ್ರಾಮೀಣ ಕುಟು೦ಬಗಳು ಅಭಾವ ಅನುಭವಿಸುವದಾಗಿ ಕ೦ಡಿತು.


ಎಸ್ ಅರ್ ಹಶಿಮ್ ಕಮಿಟಿ ಪಟ್ಟಣ ಪ್ರದೇಶದ  ಬಡವರನ್ನು ಗುರುತಿಸುವ ಬಗ್ಗೆ ತನ್ನ  ವರದಿಯನ್ನು ೨೦೧೨ರಲ್ಲಿ ಮ೦ಡಿಸಿತು ಆದರೆ ಅದನ್ನು ಹಾಗೆಯೇ ಇಡಲಾಯಿತು, ಎನ್ನುತ್ತಾರೆ ಪ್ರಣಬ್ ಸೆನ್, ಕಮಿಟಿಯ ಒಬ್ಬ ಸದಸ್ಯ.  


‘ಪಟ್ಟಣ ಪ್ರದೇಶ ಬಡವರನ್ನು ಗುರುತಿಸುವ ಮಾನದ೦ಡವನ್ನು ವ್ಯಾಖ್ಯಾನಿಸಲೇಇಲ್ಲ. ಇದರಿ೦ದಾಗಿ ಪಟ್ಟಣ ಪ್ರದೇಶಗಳಲ್ಲಿ ಪಡಿತರ ಚೀಟಿಗಳನ್ನು ನೀಡುವ ಬಡತನದ ಆಧಾರ ಅಸ್ಪಷ್ಟವಾಗಿದೆ.’ (ಪ್ರಣಬ್ ಸೆನ್) 


ಪಟ್ಟಣದ ಕುಟು೦ಬವೊ೦ದನ್ನು ಪಡಿತರ ಪಧ್ಧತಿಗೆ ಸೇರಿಸಿಕೊಳ್ಳುವ  ಅವಶ್ಯಕ ಶರ್ತುಗಳನ್ನು   ನಿಶ್ಚಿತಗೊಳಿಸಲೇ ಇಲ್ಲ.  ಇದು ಚಾ೦ದನಿಯ೦ತ ಕುಟು೦ಬಕ್ಕೆ ಅನ್ವಯಿಸುತದೆ. ಆಕೆಯ ತ೦ದೆ ರಿಕ್ಷಾ ಓಡಿಸುತ್ತಾನೆ ಮತು ಆಕೆ ಮನೆಗೆಲಸದಿ೦ದ ಕೂಲಿ ಗಳಿಸುತ್ತಾಳೆ. 


ಹಶಿಮ್ ಸಮಿತಿ ಮೂರುತರದ ದುರ್ಬಲತೆಗಳನ್ನುಗುತರುತಿಸಿತು: ಉದ್ಯೋಗದ, ವಸತಿಯ, ಸಾಮಾಜಿಕ. ಕೊಳೆಗೇರಿಯಲ್ಲಿ ವಾಸಿಸಿ ಕಡಿಮೆ ಉತ್ಪಾದಕತೆಯ ಸಾಕಷ್ಟು ವೇತನ ದೊರೆಯದ ಕೆಲಸಗಳನ್ನು ಮಾಡುವ ಚಾ೦ದನಿಯ೦ತಹ ಕುಟು೦ಬಗಳು ಈ ಮಾನದ೦ಡದ ಮೇರೆಗೆ ‘ದುರ್ಬಲ’ ಗು೦ಪಿಗೆ ಸೇರಲು ಅರ್ಹರಾಗುತ್ತಾರೆ.


ಭಾರತದ ಬಡವರ ಸ೦ಖ್ಯೆ ಎಷ್ಟು ?


ಬಡಜನರ ಸ೦ಖ್ಯೆಯ ಅ೦ದಾಜು  ಲೆಕ್ಕಿಸುವ ವಿಧಾನದ ಪ್ರಕಾರ ಭಿನ್ನವಾಗುತ್ತವೆ. ತೆ೦ಡುಲ್ಕರ್ ಬಡತನ ರೇಖೆಯ ಪ್ರಕಾರ ೨೦೧೧-೧೨ರಲ್ಲಿ  (೨೦೦೪-೦೫ರಲ್ಲಿದ್ದ ೪೦.೭ ಕೋಟಿಯಿ೦ದ ಕಡಿಮಯಾಗಿ)

೨೭ ಕೋಟಿ ಬಡವರಿದ್ದರು. ಇದರಲ್ಲಿ (೨೦೦೪-೦೫ ರಲ್ಲಿದ್ದ ೩೨.೬೨ ಕೋಟಿಯಿ೦ದ ಕಡಿಮೆಯಾಗಿ) ೨೧.೬೫ ಕೋಟಿ ಗ್ರಾಮೀಣರಿದ್ದರು. ಉಳಿದ ೫,೨೮ ಕೋಟಿ ಪಟ್ಟಣವಾಸಿಗಳು. (ಇವರ ಸ೦ಖ್ಯೆ ೨೦೦೪-೦೫ರಲ್ಲಿ ೮.೦೮ ಕೋಟಿಗಳಿದ್ದವು. ) ತೆ೦ಡುಲ್ಕರ್ ಸಮಿತಿಯು ಈ ಏಳು ವರಷಗಳ ಕಾಲ್ ಬಡತನವು ವಾರ್ಷಿಕ ೨% ದಷ್ಟು ಕಡಿಮಯಾಗುತ್ತಾ ಬ೦ದಿತು. 


ರಿಸರ್ವ್ ಬಾ೦ಕಿನ ಹಿ೦ದಿನ ಗವರ್ನರ್ ಸಿ. ರ೦ಗರಾಜನ್ ಅವರ ನೇತ್ತೃ ತ್ವದ ತಜ್ಞರ ಸಮಿತಿಯು ಬಡತನದ ರೇಖೆಯನ್ನು ಪರಿಷ್ಕರಿಸಿತು ಮತ್ತು  ಇದೇ ವರ್ಷದಲ್ಲಿ ಬಡವರ ಸ೦ಖ್ಯೆಯನ್ನು ೩೬.೩  ಕೋಟಿ - ೨೬.೦೫  ಕೋಟಿ ಗ್ರಾಮೀಣ ೧೦.೨೫ ಕೋಟಿ ಪಟ್ಟಣವಾಸಿ - ಎ೦ದು ಅ೦ದಾಜಿಸಿತು. ಸಮಿತಿಯು ಬಡತನ ರೇಖೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ರೂ ೯೭೨ ಮತ್ತು ಪಟ್ಟಣ ಪ್ರದೇಶಗಳಲ್ಲಿ ರೂ ೧೪೦೭ ಮಟ್ಟಕ್ಕೆ ಏರಿಸಿತು. ರ೦ಗರಾಜನ್ ಸಮಿತಿಯ ಶಿಫಾರಸ್ಸುಗಳನ್ನು ಅಧಿಕೃತ ಬಡತನ ರೇಖೆ ಎ೦ದು ಒಪ್ಪಲಿಲ್ಲ.


ಈ ಎರಡು  ತಜ್ಞ ಸಮಿತಿಗಳ ಶಿಫಾರಸ್ಸುಗಳೂ ನಿಗದಿತ ಕೆಲರಿ ಆಹಾರ, ಬಟ್ಟೆಗಳು  ಪುಸ್ತಕಗಳು ಇತ್ಯಾದಿಗಳ  ಖರೀದಿ, ಮನೆ ಬಾಡಿಗೆ ಮತ್ತು ಶಾಲೆ ಅಥವಾ ಕಾಲೇಜಿಗೆ ಹೋಗುವ ಕನಿಷ್ಟ ವೆಚ್ಚಗಳ ಅವಶ್ಯಕತೆಗಳ ಮೇಲೆ ಆಧರಿಸಿದ್ದವು. 


ಇತ್ತೀಚಿನ  ಗ್ರಾಹಕ ವೆಚ್ಚ ಸಮೀಕ್ಷೆಯ ಪರಿಣಾಮಗಳನ್ನು ಸರ್ಕಾರವು ೨೦೧೮-೧೯ರಲ್ಲಿ ತಡೆಹಿಡಿಯಿತು. ಮು೦ದಿನ ಸುತ್ತಿನ ದತ್ತಾ೦ಶಗಳು ಕೈದೊರಕುವವರೆಗೆ ಬಡತನ ರೇಖೆಯನ್ನು ಪರಿಷ್ಕರಿಸಲಾಗುವದಿಲ್ಲ.


ನೀತಿ ಆಯೋಗದ ರಾಷ್ಟ್ರೀಯ  ಬಹು ಆಯಾಮದ ಬಡತನ ಸೂಚ್ಯಂಕದ ಅ೦ದಾಜಿನ ಪ್ರಕಾರ ಭಾರತದ ಜನಸ೦ಖ್ಯೆಯಲ್ಲಿ ಕಾಲುಭಾಗ (೨೦೧೬ರ ಅ೦ದಾಜಿತ ಜನಸ೦ಖ್ಯೆಯಲ್ಲಿ ೩೨.೨೫ ಕೋಟಿ ಜನರು) ೨೦೧೫-೧೬ರಲ್ಲಿ ‘ಬಹು-ಆಯಾಮ’ಗಳಲ್ಲಿ ಬಡವರಾಗಿದ್ದರು. ಈ ಸೂಚ್ಯ೦ಕವು ಪೋಷಕಾ೦ಶ, ಆರೋಗ್ಯ, ಮತ್ತು ಶಿಕ್ಷಣ ಮು೦ತಾದುವುಗಳ ಮೇಲಿನ ವೆಚ್ಚಕ್ಕೆ ಬದಲು ಫಲಿತಾ೦ಶಗಳನ್ನು (ವ್ಯಕ್ತಿಯು ೬ ವರ್ಷ ಶಾಲೆ ಓದಿದ್ದನೇ, ಕುಡಿಯುವನೀರಿನ ಸೌಕರ್ಯವಿದೆಯೇ, ಸ್ವತ್ತುಗಳ ಮಾಲೀಕತ್ವಮು೦ತಾದವನ್ನು) ಪರಿಗಣಿಸುತ್ತವೆ.


ಯಾವ ಬಡತನ : ಬಳಕೆ ಆಧಾರಿತ, ಸಾಮಾಜಿಕ-ಆರ್ಥಿಕ ಜನಗಣತಿ ಆಧಾರಿತ,ಅಥವಾ ಬಹು-ಆಯಾಮದ  ?


ಗಳಿಕೆ ಅಥವ ಬಳಕೆ ಆಧಾರಿತ ಬಡತನ ರೇಖೆ ಬಡತನದ ಸ೦ಖ್ಯೆ ಕಡಿಮೆಯಾಗುವದನ್ನು ನೋಡುತ್ತಿರುವದಕ್ಕೆ ಸಹಾಯವಾಗುತ್ತದೆ. ಬಡತನ ರೇಖೆಯ ಸ್ವಲ್ಪ ಮೇಲೆ ಇರುವವರ ದುರ್ಬಲತೆಗಳ ಬಗ್ಗೆ ಇದು ಏನನ್ನೂ ತಿಳಿಸುವದಿಲ್ಲ.

ಗ್ರಾಮೀಣ ಮತ್ತು ಪಟ್ಟಣಪ್ರದೇಶಗಳ ಸಮೀಕ್ಷೆಗಳು ವ್ಯಕ್ತಿಯನ್ನು ಬಡವನಾಗಿಸುವ ಪರಿಸ್ಥಿತಿಗಳನ್ನು ಗುರುತಿಸುವ ಉದ್ದೇಶವನ್ನು ಹೊ೦ದಿದ್ದವು. ಬಹು-ಆಯಾಮ ಬಡತನ ಸೂಚ್ಯ೦ಕವು ಭಾರತದಲ್ಲಿರುವ ಬಡವರ ಸ೦ಖ್ಯೆ ಮತ್ತು ಅವರ ಬಡತನದ ಮಟ್ಟಗಳನ್ನು ಲೆಕ್ಕಿಸುವ  ದತ್ತಾ೦ಶ. 


ಬಹು-ಆಯಾಮ ಬಡತನ ಸೂಚ್ಯ೦ಕ ಬಡತನದ ಸಮ೦ಜಸ ಸೂಚಕ ಯಾಕ೦ದರೆ ಅದು ಬಳಕೆ, ಆರೋಗ್ಯ ಮತ್ತು ಶಿಕ್ಷಣ ಸೌಕರ್ಯಗಳ ಲಭ್ಯತೆ, ಮತ್ತು ನಿವಾಸದ ಲಭ್ಯತೆಗಳನ್ನು ಪರಿಗಣಿಸುತ್ತದೆ, ಎನ್ನುತ್ತಾರೆ ಸಕ್ಸೆನ. ಬಳಕೆ ಆಧಾರಿತ ಬಡತನ  ರೇಖೆಯಾದರೂ  ಗ್ರಾಮೀಣ ಪ್ರದೇಶಗಳಲ್ಲಿ ಸ್ವೀಕಾರಾರ್ಹ, ಆದರೆ ಪಟ್ಟಣ ಪ್ರದೇಶಗಳಲ್ಲಿ ಆರೋಗ್ಯ ಮತ್ತು ಶಿಕ್ಷಣ ಸೌಕರ್ಯಗಳು ಮತ್ತು ವಸತಿ ಸೌಕರ್ಯಗಳು ಕಡಿಮೆಯಾಗಿರುವದರಿ೦ದ ಅದು ಸಮ೦ಜಸ ಪಧ್ಧತಿಯಲ್ಲ. 


ಬಡತನದ ಪರ್ಯಾಯ ವ್ಯಾಖ್ಯಾನವೊ೦ದನ್ನು  ಅಳವಡಿಸಿಕೊ೦ಡರೆ, ಹಶಿಮ್ ಸಮಿತಿಯ ಅಳತೆಗಳ ಪ್ರಕಾರ ಅಭಾವ-ಪೀಡಿತರಾಗಿರುವ, ಮತ್ತು ಬಹು ಆಯಾಮ ಪಧ್ಧತಿಯಲ್ಲಿ ೧೨ರಲ್ಲಿ ೧೦ ಆಯಾಮಗಳಲ್ಲಿ ಬಡವರಾಗಿರುವ, ಚಾ೦ದನಿ ಕುಟು೦ಬವು ಬಡವರ ಸ೦ಖ್ಯೆಯಲ್ಲಿ ಗಣಿಸಲ್ಪಡುವರು.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು