ಮೇಲ್ಜಾತಿಗಳ ದಂಗೆ
ಝಾನ್ ಡ್ರೆಜ್ Jean Drèze
ಝಾನ್ ಡ್ರೆಜ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ, ಅರ್ಥಶಾಸ್ತ್ರ ವಿಭಾಗ, ರಾಂಚಿ ವಿಶ್ವವಿದ್ಯಾಲಯ, ರಾಂಚಿ.
ಮೆರವಣಿಗೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು, ಭೋಪಾಲ್| ಸುಯಶ್ ದ್ವಿವೇದಿ (ವಿಕಿಮೀಡಿಯಾ)
ಭಾರತದಲ್ಲಿ ಹಿಂದೂ ರಾಷ್ಟ್ರೀಯತೆಯ ಉಲ್ಬಣವು ಪ್ರಜಾಪ್ರಭುತ್ವದ ಸಮಾನತೆಯ ಬೇಡಿಕೆಗಳ ವಿರುದ್ಧ ಮೇಲ್ಜಾತಿಗಳ ದಂಗೆಯಾಗಿ ಕಂಡುಬರುತ್ತದೆ. ಹಿಂದುತ್ವ ಯೋಜನೆಯು ಬ್ರಾಹ್ಮಣಶಾಹಿ ಸಾಮಾಜಿಕ ವ್ಯವಸ್ಥೆಯನ್ನು ಮರುಸ್ಥಾಪಿಸುವ ಭರವಸೆ ನೀಡುವಲ್ಲಿ ಮೇಲ್ಜಾತಿಗಳಿಗೆ ಬಚಾವು ಮಾಡುವ ಜೀವದ ನೌಕೆಯಾಗಿದೆ.
ಭಾರತದಲ್ಲಿ ಇತ್ತೀಚಿನ ಹಿಂದೂ ರಾಷ್ಟ್ರೀಯತೆಯ ಉಲ್ಬಣವು ಜಾತಿಯನ್ನು ನಿರ್ಮೂಲನೆ ಮಾಡುವ ಮತ್ತು ಹೆಚ್ಚು ಸಮಾನ ಸಮಾಜವನ್ನು ತರುವ ಚಳುವಳಿಗೆ ಭಾರಿ ಹಿನ್ನಡೆಯಾಗಿದೆ. ಈ ಹಿನ್ನಡೆ ಆಕಸ್ಮಿಕವಲ್ಲ: ಹಿಂದೂ ರಾಷ್ಟ್ರೀಯತೆಯ ಬೆಳವಣಿಗೆಯನ್ನು ಪ್ರಜಾಪ್ರಭುತ್ವದ ಸಮಾನತೆಯ ಬೇಡಿಕೆಗಳ ವಿರುದ್ಧ ಮೇಲ್ಜಾತಿಗಳ ದಂಗೆ ಎಂದು ಕಾಣಬಹುದು.
ಹಿಂದುತ್ವ ಮತ್ತು ಜಾತಿ
"ಹಿಂದುತ್ವ" ಎಂದೂ ಕರೆಯಲ್ಪಡುವ ಹಿಂದೂ ರಾಷ್ಟ್ರೀಯತೆಯ ಅಗತ್ಯ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಎಸೆನ್ಷಿಯಲ್ಸ್ ಆಫ್ ಹಿಂದುತ್ವ (ಹಿ೦ದುತ್ವದ ಮೂಲತತ್ವಗಳು) ಪುಸ್ತಕದಲ್ಲಿ (Essentials of Hindutva, Savarkar, 1923) ) ವಿ ಡಿ ಸಾವರ್ಕರ್ ಅವರು ಇವುಗಳನ್ನು ಬಹಳ ಸ್ಪಷ್ಟತೆಯಿಂದ ವಿವರಿಸಿದರು ಮತ್ತು ಇತರ ಆರಂಭಿಕ ಹಿಂದುತ್ವ ಚಿಂತಕರಾದ ಎಂ.ಎಸ್. ಗೋಲ್ವಾಲ್ಕರ್ ಮು೦ತಾದವರು ಇವನ್ನು ವರ್ಧಿಸಿದರು. ಮೂಲಭೂತ ಕಲ್ಪನೆಯೆಂದರೆ ಭಾರತವು "ಹಿಂದೂಗಳಿಗೆ" ಸೇರಿದ್ದು. ‘ಹಿ೦ದೂ’ ಗಳನ್ನು ಕಟ್ಟುನಿಟ್ಟಾದ ಧಾರ್ಮಿಕ ವ್ಯಾಖ್ಯಾನವನ್ನು ಬದಲಿಗಿಟ್ಟು ವಿಶಾಲವಾಗಿ ಸಿಖ್ಖರು, ಬೌದ್ಧರು ಮತ್ತು ಜೈನರನ್ನು ಒಳಗೊಂಡಿರುವ ಸಾಂಸ್ಕೃತಿಕ ಪದದಲ್ಲ್ಲಿ- ಆದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸೇರಿಸದೆ (ಏಕೆಂದರೆ ಅವರ ಧರ್ಮದ ತೊಟ್ಟಿಲು ಬೇರೆಡೆ ಇದೆ) - ವ್ಯಾಖ್ಯಾನಿಸಲಾಗಿದೆ. ಹಿಂದುತ್ವದ ಅಂತಿಮ ಗುರಿ ಹಿಂದೂಗಳನ್ನು ಒಗ್ಗೂಡಿಸುವುದು, ಹಿಂದೂ ಸಮಾಜವನ್ನು ಪುನರುಜ್ಜೀವನಗೊಳಿಸುವುದು ಮತ್ತು ಭಾರತವನ್ನು "ಹಿಂದೂ ರಾಷ್ಟ್ರ" ವನ್ನಾಗಿ ಮಾಡುವುದು.
ಈ ವಿಚಾರಗಳನ್ನು ಬೆಂಬಲಿಸಲು ಮುಂದುವರಿಸಿದ ವಾದಗಳು ತರ್ಕಬದ್ಧ ಚಿಂತನೆ, ಸಾಮಾನ್ಯ ಜ್ಞಾನ ಮತ್ತು ವೈಜ್ಞಾನಿಕ ಜ್ಞಾನದಿಂದ ಚಕಿತಗೊಳಿಸುವ ನಿರ್ಗಮನಗಳನ್ನು ಒಳಗೊಂಡಿವೆ ಎ೦ಬದನ್ನು ಪ್ರಾಸ೦ಗಿಕವಾಗಿ ಗಮನಿಸಬಹುದು. ಉದಾಹರಣೆಗಾಗಿ ವಿವರಿಸಲು, ಎಲ್ಲಾ ಹಿಂದೂಗಳು ಒಂದು ಜನಾಂಗಕ್ಕೆ, ಆರ್ಯನ್ ಜನಾಂಗಕ್ಕೆ, ಸೇರಿದವರು ಎಂಬ ಗೋಲ್ವಾಲ್ಕರ್ ಅವರ ವಾದವನ್ನು ಪರಿಗಣಿಸಿ. ಗೋಲ್ವಾಲ್ಕರ್ ಅ೦ದಿನ ಸಮಯದಲ್ಲಿ, ಆ ವಾದದ ವಿರುದ್ಧ ಇ೦ದು ನಮ್ಮಲ್ಲಿರುವ ವೈಜ್ಞಾನಿಕ ಪುರಾವೆಗಳೊಂದಿಗೆ ಹೋರಾಡಬೇಕಾಗಿದ್ದಿಲ್ಲ. ಆದರೆ ಆರ್ಯರು ಭಾರತದ ಎಲ್ಲೋ ಉತ್ತರದಿಂದ, ವಾಸ್ತವವಾಗಿ ಉತ್ತರ ಧ್ರುವದ ಬಳಿಯಿ೦ದ ಬಂದಿದ್ದಾರೆ ಎ೦ದು ಹೇಳಲಾದ ಕ೦ಡುಹಿಡಿಯುವಿಕೆಯ ಸಿಧ್ಧಾ೦ತದೊ೦ದಿಗೆ ತರ್ಕಿಸಿದರು. ಮು೦ದುವರಿಸಿ ಉತ್ತರ ಧ್ರುವವೇ ಭಾರತದಲ್ಲಿ ನೆಲೆಗೊಂಡಿತ್ತು ಎಂದು ಪ್ರತಿಪಾದಿಸಿದರು:
… ಉತ್ತರ ಧ್ರುವವು ಸ್ಥಿರವಾಗಿಲ್ಲ ಮತ್ತು ಬಹಳ ಹಿಂದೆಯೇ ಅದು ಪ್ರಪಂಚದ ಪ್ರಸ್ತುತ ಬಿಹಾರ ಮತ್ತು ಒರಿಸ್ಸಾ ಎಂದು ಕರೆಯಲಾಗುವ ಭಾಗದಲ್ಲಿತ್ತು ಎ೦ಬದನ್ನು ನಾವು ಕಂಡುಕೊಂಡಿದ್ದೇವೆ. ನಂತರ ಅದು ಈಶಾನ್ಯಕ್ಕೆ ಚಲಿಸಿತು ಮತ್ತು ನಂತರ ಕೆಲವೊಮ್ಮೆ ಪಶ್ಚಿಮ, ಕೆಲವೊಮ್ಮೆ ಉತ್ತರದ ಚಲನೆಯಿಂದ ಅದು ತನ್ನ ಪ್ರಸ್ತುತ ಸ್ಥಾನಕ್ಕೆ ಬಂದಿತು ... ನಾವೆಲ್ಲರೂ ಎ೦ದೂ ಇಲ್ಲಿಯೇ ಇದ್ದೆವು ಮತ್ತು ಆರ್ಕ್ಟಿಕ್ ವಲಯವು ನಮ್ಮನ್ನು ಬಿಟ್ಟು ಉತ್ತರದ ಕಡೆಗೆ ತನ್ನ ಅಂಕುಡೊಂಕಾದ ಮೆರವಣಿಗೆಯಲ್ಲಿ ಚಲಿಸಿತು. (ಗೋಲ್ವಾಲ್ಕರ್, 1939: p8)
ಉತ್ತರ ಧ್ರುವದ ಈ "ಅಂಕುಡೊಂಕಾದ ಮೆರವಣಿಗೆ" ಸಮಯದಲ್ಲಿ ಆರ್ಯರು ಹೇಗೆ ಒ೦ದೇ ಸ್ಥಳದಲ್ಲಿ ಉಳಿಯಲು ನಿಭಾಯಿಸಿದರು ಎಂಬುದನ್ನು ಗೋಲ್ವಾಲ್ಕರ್ ವಿವರಿಸಲಿಲ್ಲ. ಎಲ್ಲಾ ಹಿಂದೂಗಳು "ಒಂದು ಭಾಷೆ" ಯನ್ನು ಹಂಚಿಕೊಳ್ಳುತ್ತಾರೆ ಎಂಬ ಪ್ರತಿಪಾದನೆಯನ್ನು ಸಮರ್ಥಿಸಲು ಅವರು ಇದೇ ರೀತಿಯ ಕಲ್ಪಿತ ವಾದಗಳನ್ನು ಬಳಸಿದರು.
ಹಿಂದುತ್ವದ ಆಡುನುಡಿಯಲ್ಲಿ ‘ಜಾತಿವಾದ’ (ಜಾತೀಯತೆ = casteism) ಎಂಬ ಪದವು ‘ಜಾತಿ ಆಧಾರಿತ ತಾರತಮ್ಯ’ವನ್ನು ಸರಳವಾಗಿ ಉಲ್ಲೇಖಿಸುವುದಿಲ್ಲ ... ಬದಲಿಗೆ, ದಲಿತರು ತಮ್ಮನ್ನು ಪ್ರತಿಪಾದಿಸುವಂತಹ ‘ಜಾತಿ ಸಂಘರ್ಷ’ದ ವಿವಿಧ ರೂಪಗಳನ್ನು ಉಲ್ಲೇಖಿಸುತ್ತದೆ ...
‘ಹಿಂದುತ್ವ ಯೋಜನೆ’ಯನ್ನು ಎಲ್ಲಾ ಹಿಂದೂಗಳನ್ನು ಒಟ್ಟುಗೂಡಿಸುವದೆ೦ದು ಹೇಳಲಾಗುವ ಸಾಮಾನ್ಯ ಸಂಸ್ಕೃತಿಗೆ ಸಂಬಂಧಿಸಿದ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಯನ್ನು ಪುನಃಸ್ಥಾಪಿಸುವ ಪ್ರಯತ್ನವಾಗಿಯೂ ಕಾಣಬಹುದು. ಜಾತಿ ವ್ಯವಸ್ಥೆ, ಅಥವಾ ಕನಿಷ್ಠವೆ೦ದರೆ ವರ್ಣ ವ್ಯವಸ್ಥೆ (ಸಮಾಜದ ನಾಲ್ಕು ಭಾಗ ವಿಭಜನೆ), ಈ ಸಾಮಾಜಿಕ ಕ್ರಮದ ಅವಿಭಾಜ್ಯ ಅಂಗವಾಗಿದೆ. ನಾವು ಅಥವಾ ನಮ್ಮ ರಾಷ್ಟ್ರ ವ್ಯಾಖ್ಯಾನ (We or Our Nationhood Defined) ದಲ್ಲಿ "ಸಮಾಜದ ಹಿಂದೂ ಚೌಕಟ್ಟು", "ವರ್ಣಗಳು ಮತ್ತು ಆಶ್ರಮಗಳ ಗುಣಲಕ್ಷಣಗಳನ್ನು ಹೊಂದಿದೆ" ಎಂದು ಸ್ಪಷ್ಟವಾಗಿ ಹೇಳುತ್ತಾರೆ (ಗೋಲ್ವಾಲ್ಕರ್ 1939, ಪುಟ 54). ಹಿಂದುತ್ವದ ಮೂಲ ಗ್ರಂಥಗಳಲ್ಲಿ ಒಂದಾದ ಆಲೋಚನೆಗಳ ಸಮೂಹ (ಬಂಚ್ ಆಫ್ ಥಾಟ್ಸ್ - Bunch of Thoughts) ದಲ್ಲಿ ಇದನ್ನು ಸ್ವಲ್ಪ ವಿಸ್ತಾರವಾಗಿ ವಿವರಿಸಲಾಗಿದೆ. ಗೋಲ್ವಾಲ್ಕರ್ ಅವರು ವರ್ಣ ವ್ಯವಸ್ಥೆಯನ್ನು "ಸಾಮರಸ್ಯದ ಸಾಮಾಜಿಕ ಕ್ರಮ" ದ ಆಧಾರವೆಂದು ಹೊಗಳಿದ್ದಾರೆ. ಜಾತಿಯ ಇತರ ಅನೇಕ ವ್ಯಾಖ್ಯಾನಕಾರರ೦ತೆ ‘ವರ್ಣ ವ್ಯವಸ್ಥೆಯು ಶ್ರೇಣೀಕೃತವಾಗಿರಲು ಉದ್ದೇಶಿಸಿಲ್ಲ’ ಎಂದು ಅವರು ಪ್ರತಿಪಾದಿಸುತ್ತಾರೆ, ಆದರೆ ಈ ತರ್ಕಕ್ಕೆ ಪುರಾವೆ ಸಾಲದು .
ಗೋಲ್ವಾಲ್ಕರ್ ಮತ್ತು ಇತರ ಹಿಂದುತ್ವ ಸಿದ್ಧಾಂತಿಗಳಿಗೆ ‘ಜಾತಿ’ಯೊಂದಿಗೆ ಯಾವುದೇ ಸಮಸ್ಯೆ ಇಲ್ಲ. ಅವರಲ್ಲಿ ಕೆಲವರು "ಜಾತೀಯತೆ" ಎಂದು ಕರೆಯುವುದರೊಂದಿಗೆ ಅವರಿಗೆ ಸಮಸ್ಯೆ ಇದೆ. ಹಿಂದುತ್ವದ ಭಾಷೆಯಲ್ಲಿ ‘ಜಾತೀಯತೆ’ ಎಂಬ ಪದವು ಜಾತಿ ತಾರತಮ್ಯಕ್ಕೆ ("ಜನಾಂಗೀಯತೆ" ಎಂಬುದು ‘ಜನಾಂಗೀಯ ತಾರತಮ್ಯ’ದ ಉಲ್ಲೇಖವಾಗಿರುವ೦ತೆ) ಸರಳವಾದ ಉಲ್ಲೇಖವಲ್ಲ. ಬದಲಿಗೆ, ಇದು ದಲಿತರು ತಮ್ಮ ಹಕ್ಕು ಪ್ರತಿಪಾದಿಸುವ ಮತ್ತು ಮೀಸಲಾತಿ ಕೋಟಾಗಳ ಬೇಡಿಕೆಯಂತಹ ವಿವಿಧ ರೀತಿಯ ಜಾತಿ ಸಂಘರ್ಷಗಳನ್ನು ಉಲ್ಲೇಖಿಸುತ್ತದೆ. ಅದು ಜಾತೀಯತೆ (ಅಥವಾ ಜಾತಿವಾದ), ಏಕೆಂದರೆ ಅದು ಹಿಂದೂ ಸಮಾಜವನ್ನು ವಿಭಜಿಸುತ್ತದೆ.
ಇಂದು ಹಿಂದೂ ರಾಷ್ಟ್ರೀಯತೆಯ ಜ್ಯೋತಿಯನ್ನು ಹೊತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಈ ಅಗತ್ಯ ವಿಚಾರಗಳಿಗೆ ಗಮನಾರ್ಹವಾಗಿ ನಿಷ್ಠವಾಗಿದೆ. ಜಾತಿಯ ಸಾಮಾನ್ಯ ವಿವರಣೆಯು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದಂತೆ "ನಮ್ಮ ದೇಶದ ಪ್ರತಿಭೆ" ಯ ಭಾಗವಾಗಿದೆ ಎಂಬದಾಗಿಯೇ ಉಳಿದಿದೆ. (ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ - ಮಾಧವ್, 2017). ಸಮಸ್ಯೆ ಜಾತಿಯಲ್ಲ ಆದರೆ ಜಾತಿವಾದ.
ಹಿ೦ದುತ್ವ ಸಿದ್ಧಾಂತಿಗಳು ಮೂಲಭೂತ ಸಮಸ್ಯೆಯನ್ನು ಎದುರಿಸುತ್ತಾರೆ: ಜಾತಿಯಿಂದ ವಿಭಜಿಸಲ್ಪಟ್ಟ ಸಮಾಜವನ್ನು "ಒಗ್ಗೂಡಿಸುವುದು" ಹೇಗೆ? ಇದಕ್ಕೆ ಉತ್ತರವೆಂದರೆ ಜಾತಿಯನ್ನು ವಿಭಜಿಸುವ ಪ್ರತಿಷ್ಠಾಪನೆಯಲ್ಲ ಆದರೆ ಪ್ರತಿಯಾಗಿ ಒಗ್ಗೂಡಿಸುವ ಪ್ರತಿಷ್ಠಾಪನೆಯಾಗಿ ಚಿತ್ರಿಸುವದು.
ಮೂರು ವರ್ಷಗಳ ಹಿಂದೆ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಮುಖ್ಯ ಮ೦ತ್ರಿ ಯೋಗಿ ಆದಿತ್ಯನಾಥ್ ಅವರು ಇನ್ನೂ ಹೆಚ್ಚು ಬಹಿರಂಗವಾದ ಹೇಳಿಕೆಯನ್ನು ನೀಡಿದ್ದರು. ಗೋಲ್ವಾಲ್ಕರ್ ಅವರಂತೆಯೇ, "ಸಮಾಜವನ್ನು ಕ್ರಮಬದ್ಧವಾಗಿ ನಿರ್ವಹಿಸುವ" ಒಂದು ವಿಧಾನವೆಂದರೆ ಜಾತಿ ಎಂದು ಅವರು ವಿವರಿಸಿದರು: "ಹಿಂದೂ ಸಮಾಜದಲ್ಲಿ ಜಾತಿಗಳು ಹೊಲದೊಳಗೆ ನೇಗಿಲ ಸಾಲುಗಳದೇ ಪಾತ್ರವನ್ನು ವಹಿಸುತ್ತವೆ: ಅದನ್ನು ಸಂಘಟಿತವಾಗಿ ಮತ್ತು ಕ್ರಮಬದ್ಧವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ ... ಜಾತಿಗಳು ಉತ್ತಮವಾಗಬಹುದು, ಆದರೆ ಜಾತೀಯತೆ / ಜಾತಿವಾದ (casteism ) ಅಲ್ಲ..."
ಸಮಸ್ಯೆಯನ್ನು ಇನ್ನೊಂದು ಕೋನದಿಂದ ನೋಡುವುದಾದರೆ, ಹಿಂದುತ್ವ ಸಿದ್ಧಾಂತಿಗಳು ಮೂಲಭೂತ ಸಮಸ್ಯೆಯೊ೦ದನ್ನು ಎದುರಿಸುತ್ತಾರೆ: ಜಾತಿಯಿಂದ ವಿಭಜಿಸಲ್ಪಟ್ಟ ಸಮಾಜವನ್ನು "ಒಗ್ಗೂಡಿಸುವುದು" ಹೇಗೆ? ಇದಕ್ಕೆ ಉತ್ತರವೆಂದರೆ ಜಾತಿಯನ್ನು ವಿಭಜಿಸುವದಲ್ಲ ಪರ೦ತು ಒಗ್ಗೂಡಿಸುವ ಪ್ರತಿಷ್ಠಾಪನೆಯಾಗಿ ಚಿತ್ರಿಸುವದು. ಸಹಜವಾಗಿ, ಈ ಕಲ್ಪನೆಯು ಹಿಂದುಳಿದ ಜಾತಿಗಳನ್ನು ಆಕರ್ಷಿಸುವ ಸಾಧ್ಯತೆಯಿಲ್ಲ, ಮತ್ತು ಅದಕ್ಕಾಗಿಯೇ ಯೋಗಿ ಆದಿತ್ಯನಾಥ್ ಅವರ ಸಂದರ್ಶನದಲ್ಲಿ ಹೇಳಿದ್ದನ್ನು ಬಹಿರಂಗವಾಗಿ ವಿರಳವಾಗಿ ಹೇಳಲಾಗುತ್ತದೆ. ಸಾಮಾನ್ಯವಾಗಿ, ಹಿಂದುತ್ವದ ನಾಯಕರು ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುವುದನ್ನು ಬಿಟ್ಟುಬಿಡುತ್ತಾರೆ, ಆದರೆ ಈ ಮೌನದಲ್ಲಿ ಅದನ್ನು ನಿಶ್ಶಬ್ದವಾಗಿ ಒಪ್ಪಿಕೊಳ್ಳುತ್ತಾರೆ. ಅವರಲ್ಲಿ ಯಾರೇ ಆದರೂ ಯಾವುದೇ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯ ವಿರುಧ್ಧ ಮಾತನಾಡಿರುವದಾಗಿ ಕಾಣುವದಿಲ್ಲ.
ಕೆಲವೊಮ್ಮೆ ಹಿಂದುತ್ವದ ನಾಯಕರು, ಅಸ್ಪೃಶ್ಯತೆಯ ವಿರುದ್ಧ ಮಾತನಾಡುತ್ತಾರೆ ಅಥವಾ ವರ್ತಿಸುತ್ತಾರೆ ಎಂಬ ಕಾರಣಕ್ಕಾಗಿ ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾರೆ ಎಂಬ ಭಾವನೆ ಮೂಡಿಸುತ್ತಾರೆ. ಸಾವರ್ಕರ್ ಸ್ವತಃ ಅಸ್ಪೃಶ್ಯತೆಯ ವಿರುದ್ಧವಾಗಿದ್ದರು ಮತ್ತು ಡಾ. ಅಂಬೇಡ್ಕರ್ ಅವರ ಆರಂಭಿಕ ನಾಗರಿಕ ಅಸಹಕಾರದ ಕ್ರಮಗಳಲ್ಲಿ ಒಂದಾದ ಮಹಾಡ್ ಸತ್ಯಾಗ್ರಹವನ್ನು ಬೆಂಬಲಿಸಿದರು (ಝೆಲಿಯಟ್ 2013, ಪು.80). ಆದರೆ ಅಸ್ಪೃಶ್ಯತೆಯನ್ನು ವಿರೋಧಿಸುವುದು ಜಾತಿ ವ್ಯವಸ್ಥೆಯನ್ನು ವಿರೋಧಿಸಿದಂತೆಯೇ ಅಲ್ಲ. ಇತ್ತೀಚಿನ ವಿಕೃತಿ ಎಂದು ಅನೇಕವೇಳೆ ತಳ್ಳಿಹಾಕಲಾಗುವ ಅಸ್ಪೃಶ್ಯತೆಯನ್ನು ವಿರೋಧಿಸುವುದರ ಜೊತೆಗೇ ಜಾತಿ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ದೀರ್ಘ ಸಂಪ್ರದಾಯವು ಮೇಲ್ಜಾತಿಗಳಲ್ಲಿದೆ.
ಅನಿಶ್ಚಿತ ಶಕ್ತಿ
ಹಿಂದುತ್ವ ಯೋಜನೆಯು ಮೇಲ್ಜಾತಿಗಳಿಗೆ ಒ೦ದು ಉತ್ತಮ ವ್ಯವಹಾರವಾಗಿದೆ, ಏಕೆಂದರೆ ಇದು ಅವರನ್ನು ಉನ್ನತ ಸ್ಥಾನದಲ್ಲಿರುವ ಸಾಂಪ್ರದಾಯಿಕ ಸಾಮಾಜಿಕ ಕ್ರಮದ ಮರುಸ್ಥಾಪನೆಗೆ ಪರಿಣಾಮಕಾರಿಯಾಗಿ ನಿಂತಿದೆ. ನಿರೀಕ್ಷಿಸಬಹುದಾದಂತೆ, ಆರ್‌ಎಸ್‌ಎಸ್ ವಿಶೇಷವಾಗಿ ಮೇಲ್ಜಾತಿಗಳಲ್ಲಿ ಜನಪ್ರಿಯವಾಗಿದೆ. ಪ್ರಾಸಂಗಿಕವಾಗಿ, ಇದರ ಸ್ಥಾಪಕರು, ಎಲ್ಲಾ ಆರ್‌ಎಸ್‌ಎಸ್ ಮುಖ್ಯಸ್ಥರು (ರಜಪೂತರಾಗಿದ್ದ ರಾಜೇಂದ್ರ ಸಿಂಗ್ ಒಬ್ಬರನ್ನು ಬಿಟ್ಟು), ಮತ್ತು ಹಿಂದುತ್ವ ಆ೦ದೋಲನದ ಇತರ ಪ್ರಮುಖ ವ್ಯಕ್ತಿಗಳು - ಸಾವರ್ಕರ್, ಹೆಡ್ಗೆವಾರ್, ಗೋಲ್ವಾಲ್ಕರ್, ನಾಥುರಾಮ್ ಗೋಡ್ಸೆ, ಶ್ಯಾಮ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ, ಮೋಹನ್ ಭಾಗವತ್, ರಾಮ್ ಮಾಧವ್, ಎಲ್ಲರೂ ಬ್ರಾಹ್ಮಣ ಜಾತಿಗೆ ಸೇರಿದವರು. ಕಾಲಾನಂತರದಲ್ಲಿ, ಸಹಜವಾಗಿ, ಆರ್‌ಎಸ್‌ಎಸ್ ತನ್ನ ಪ್ರಭಾವವನ್ನು ಮೇಲ್ಜಾತಿಗಳನ್ನು ಮೀರಿ ವಿಸ್ತರಿಸಿದೆ, ಆದರೆ ಮೇಲ್ಜಾತಿಗಳು ಅವರ ಅತ್ಯಂತ ನಿಷ್ಠಾವಂತ ಮತ್ತು ವಿಶ್ವಾಸಾರ್ಹ ನೆಲೆಯಾಗಿವೆ.
ವಾಸ್ತವವಾಗಿ, ಹಿಂದುತ್ವವು ಮೇಲ್ಜಾತಿಗಳಿಗೆ ಒಂದು ರೀತಿಯ ಜೀವ ರಕ್ಷಿಸುವ ದೋಣಿಯಾಗಿ ಮಾರ್ಪಟ್ಟಿದೆ, ಏಕೆಂದರೆ ಭಾರತದ ಸ್ವಾತಂತ್ರ್ಯದ ನಂತರ ಅವರ ಪ್ರಾಬಲ್ಯವು ಅಪಾಯಕ್ಕೆ ಒಳಗಾಯಿತು. ಸ್ವಾತಂತ್ರಾನಂತರದ ಅವಧಿಯಲ್ಲಿ ಮೇಲ್ಜಾತಿಗಳು ತಮ್ಮ ಅಧಿಕಾರ ಮತ್ತು ಸವಲತ್ತುಗಳನ್ನು ಉಳಿಸಿಕೊಳ್ಳುವಲ್ಲಿ ಒಟ್ಟಾರೆಯಾಗಿ ಹೇಳುವುದಾದರೆ, ಯಶಸ್ವಿಯಾಗಿದ್ದಾರೆ. ದೃಷ್ಟಾಂತವಾಗಿ ಅಲಹಾಬಾದ್ ನಗರದಲ್ಲಿ (2015 ರಲ್ಲಿ ) "ಅಧಿಕಾರ ಮತ್ತು ಪ್ರಭಾವದ ಸ್ಥಾನಗಳ" ( ‘positions of power and influence’ - “POPIs”) - ವಿಶ್ವವಿದ್ಯಾಲಯದ ಅಧ್ಯಾಪಕರು, ಬಾರ್ ಅಸೋಸಿಯೇಷನ್, ಪ್ರೆಸ್ ಕ್ಲಬ್, ಉನ್ನತ ಪೊಲೀಸ್ ಹುದ್ದೆಗಳು, ವೃತ್ತಿ ಸಂಘ ನಾಯಕರು, ಸರ್ಕಾರೇತರ ಘಟಕಗಳ ಮುಖ್ಯಸ್ಥರು, ಇತ್ಯಾದಿ - ಸಮೀಕ್ಷೆಯಲ್ಲಿ , 75%ರಷ್ಟು "POPI" ಗಳನ್ನು ಉತ್ತರ ಪ್ರದೇಶದ ಜನಸಂಖ್ಯೆಯಲ್ಲಿ ಕೇವಲ 16% ರಷ್ಟು ಮಾತ್ರ ಪಾಲು ಹೊ೦ದಿರುವ ಮೇಲ್ಜಾತಿಗಳ ಸದಸ್ಯರು ವಶಪಡಿಸಿಕೊಂಡಿದ್ದಾರೆ ಎಂದು ನಾವು ಗುರುತಿಸಿದೆವು. ಬ್ರಾಹ್ಮಣರು ಮತ್ತು ಕಾಯಸ್ಥ ಜಾತಿಯವರು ಈ ಪ್ರಭಾವಿ ಸ್ಥಾನಗಳಲ್ಲಿ ಸುಮಾರು ಅರ್ಧದಷ್ಟನ್ನು ಹೊಂದಿದ್ದಾರೆ. ಕುತೂಹಲಕಾರಿಯಾಗಿ, ಈ ಅಸಮತೋಲನವು ಸರ್ಕಾರಿ ವಲಯಕ್ಕಿಂತ ಕಾರ್ಮಿಕ ಸಂಘಗಳು, ಎನ್‌ಜಿಒ (ಸರ್ಕಾರೇತರ) ಗಳು ಮತ್ತು ಪ್ರೆಸ್ ಕ್ಲಬ್‌ನಂತಹ ನಾಗರಿಕ ಸಂಸ್ಥೆಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದೆ. ಅಲಹಾಬಾದ್ ಕೇವಲ ಒಂದು ನಗರವಾಗಿದೆ, ಆದರೆ ಅನೇಕ ಇತರ ಅಧ್ಯಯನಗಳು ಮೇಲ್ಜಾತಿ ಪ್ರಾಬಲ್ಯದ ಮುಂದುವರಿದ ಮಾದರಿಗಳನ್ನು ಮಾಧ್ಯಮ ಸಂಸ್ಥೆಗಳು, ಕಾರ್ಪೊರೇಟ್ ಮಂಡಳಿಗಳು, ಕ್ರಿಕೆಟ್ ತಂಡಗಳು, ಹಿರಿಯ ಆಡಳಿತಾತ್ಮಕ ಸ್ಥಾನಗಳು, ಇತ್ಯಾದಿ ವ್ಯಾಪಕ ಸನ್ನಿವೇಶಗಳಲ್ಲಿ ಹೊರತಂದಿವೆ.
ಶಾಲಾ ಶಿಕ್ಷಣ ವ್ಯವಸ್ಥೆಯು ಮೇಲ್ಜಾತಿಗಳು ಸಾರ್ವಜನಿಕ ಜೀವನದ ಒ೦ದು ವಲಯದಲ್ಲಿ ಅಧಿಕಾರ ಮತ್ತು ಸವಲತ್ತುಗಳ ಕೆಲವು ಮರು ಹಂಚಿಕೆಗೆ ಪರ್ಯಾಯವಿಲ್ಲದೆ ಒಪ್ಪಬೇಕಾಗಿ ಬ೦ದಿರುವ ಒಂದು ಉದಾಹರಣೆಯಾಗಿದೆ. ಚುನಾವಣಾ ವ್ಯವಸ್ಥೆಯು ಮತ್ತೊಂದು ಉದಾಹರಣೆಯಾಗಿದೆ .
ಅದೇನೇ ಇದ್ದರೂ, ಮೇಲ್ಜಾತಿಯ ದೋಣಿ ಅನೇಕ ಕಡೆಗಳಿಂದ ಸೋರಿಕೆಯನ್ನು ಪ್ರಾರಂಭಿಸಿದೆ. ಉದಾಹರಣೆಗೆ, ಶಿಕ್ಷಣವು ಮೇಲ್ಜಾತಿಗಳ ವಾಸ್ತವ ಏಕಸ್ವಾಮ್ಯವಾಗಿತ್ತು - 20ನೇ ಶತಮಾನದ ತಿರುವಿನಲ್ಲಿ, ಸಾಕ್ಷರತೆಯು ಬ್ರಾಹ್ಮಣ ಪುರುಷರಲ್ಲಿ ರೂಢಿಯಾಗಿತ್ತು ಆದರೆ ದಲಿತರಲ್ಲಿ ವಾಸ್ತವಿಕವಾಗಿ ಶೂನ್ಯವಾಗಿತ್ತು. ಅಸಮಾನತೆ ಮತ್ತು ತಾರತಮ್ಯವು ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ನಿಸ್ಸಂಶಯವಾಗಿ ಮುಂದುವರಿದಿದೆ, ಆದರೆ ಕನಿಷ್ಠ ಸರ್ಕಾರಿ ಶಾಲೆಗಳಲ್ಲಿ ದಲಿತ ಮಕ್ಕಳು ಮೇಲ್ಜಾತಿ ಮಕ್ಕಳಂತೆ ಅದೇ ಸ್ಥಾನಮಾನವನ್ನು ಪಡೆಯಬಹುದು. ಎಲ್ಲಾ ಜಾತಿಗಳ ಮಕ್ಕಳು ಒಂದೇ ಮಧ್ಯಾಹ್ನದ ಊಟವನ್ನು ಸಹ ಹಂಚಿಕೊಳ್ಳುತ್ತಾರೆ. ಇದು ಅನೇಕ ಮೇಲ್ಜಾತಿ ಪೋಷಕರಿಗೆ ಹಿಡಿಸಲಿಲ್ಲ (ಡ್ರೆಜ್, 2017). ಇತ್ತೀಚೆಗೆ ಅನೇಕ ರಾಜ್ಯಗಳಲ್ಲಿ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ಪರಿಚಯಿಸಿದ್ದು ಮೇಲ್ಜಾತಿ ಸಸ್ಯಾಹಾರಿಗಳಲ್ಲಿ ಹೆಚ್ಚಿನ ತಳಮಳವನ್ನು ಉಂಟುಮಾಡಿತು. ಅವರ ಪ್ರಭಾವದ ಅಡಿಯಲ್ಲಿ, ಬಿಜೆಪಿ ಸರ್ಕಾರ ಹೊಂದಿರುವ ಹೆಚ್ಚಿನ ರಾಜ್ಯಗಳು ಶಾಲೆಯ ಊಟದಲ್ಲಿ ಮೊಟ್ಟೆಗಳನ್ನು ಸೇರಿಸುವುದನ್ನು ಇಂದಿಗೂ ವಿರೋಧಿಸುತ್ತಿವೆ.
ಶಾಲಾ ಶಿಕ್ಷಣ ವ್ಯವಸ್ಥೆಯು ಮೇಲ್ಜಾತಿಗಳು ಅಧಿಕಾರ ಮತ್ತು ಸವಲತ್ತುಗಳ ಕೆಲ ಮಟ್ಟದ ಮರು ಹಂಚಿಕೆಗೆ ಉಪಾಯವಿಲ್ಲದೆ ಒಪ್ಪಿಕೊಳ್ಳಬೇಕಾಗಿ ಬ೦ದ ಸಾರ್ವಜನಿಕ ಜೀವನದ ಒಂದು ಭಾಗದ ಒಂದು ಉದಾಹರಣೆಯಾಗಿದೆ. ಡಾ. ಅಂಬೇಡ್ಕರ್ ಹೇಳಿದಂತೆ (ಅಂಬೇಡ್ಕರ್, 1945, ಪು 208). " ವಯಸ್ಕರ ಮತದಾನ ಮತ್ತು ಪುನಃಸ೦ಭವಿಸುವ ಚುನಾವಣೆಗಳು [ಆಡಳಿತ ವರ್ಗ] ಶಕ್ತಿ ಮತ್ತು ಅಧಿಕಾರದ ಸ್ಥಳಗಳನ್ನು ತಲುಪುವುದರ ವಿರುದ್ಧ ಯಾವುದೇ ಅಡ್ಡಿಯಾಗದಿದ್ದರೂ” , ಚುನಾವಣಾ ವ್ಯವಸ್ಥೆಯು ಮತ್ತೊಂದು ಉದಾಹರಣೆಯಾಗಿದೆ. ಮೇಲ್ಜಾತಿಗಳು ಲೋಕಸಭೆಯಲ್ಲಿ ಸ್ವಲ್ಪ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿರಬಹುದು, ಆದರೆ ಸಮಾಜದಲ್ಲಿ POPI ಗಳ ಅಗಾಧ ಮೇಲ್ಜಾತಿ ಪ್ರಾಬಲ್ಯಕ್ಕೆ (ತ್ರಿವೇದಿ ಮತ್ತು ಇತರರು, 2019) ವ್ಯತಿರಿಕ್ತವಾಗಿ ಅವರ ಪಾಲು ಮಧ್ಯಮ 29% ಆಗಿದೆ. ಸ್ಥಳೀಯ ಮಟ್ಟದಲ್ಲಿಯೂ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಮಹಿಳೆಯರು, ಪರಿಶಿಷ್ಟ ಜಾತಿಗಳ (ಎಸ್ಸಿಗಳು) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿಗಳು) ಸ್ಥಾನಗಳ ಮೀಸಲಾತಿ ಇವು ರಾಜಕೀಯ ವ್ಯವಹಾರಗಳ ಮೇಲಿನ ಮೇಲ್ಜಾತಿಗಳ ಹಿಡಿತವನ್ನು ದುರ್ಬಲಗೊಳಿಸಿದೆ. ಅದೇ ರೀತಿ, ನ್ಯಾಯಾಂಗ ವ್ಯವಸ್ಥೆಯು (ಕಾನೂನಿನ ಮುಂದೆ ಸಮಾನತೆಯ ತತ್ವವು ಇನ್ನೂ ಸಾಕಾರಗೊಳ್ಳಲು ಸಾಧ್ಯವಾಗುತ್ತಿಲ್ಲವಾದರೂ) ಕಾಲಕಾಲಕ್ಕೆ ಮೇಲ್ಜಾತಿಗಳ ಅನಿಯಂತ್ರಿತ ಅಧಿಕಾರವನ್ನು ನಿರ್ಬಂಧಿಸುತ್ತದೆ (ಉದಾಹರಣೆಗೆ ಭೂಕಬಳಿಕೆ, ಜೀತದಾಳು ನಿವಾರಣೆ ಮತ್ತು ಅಸ್ಪೃಶ್ಯತೆಯ ವಿಷಯಗಳಲ್ಲಿ),
ಕೆಲವು ಆರ್ಥಿಕ ಬದಲಾವಣೆಗಳು ಕಡಿಮೆಯೆ೦ದರೆ ಗ್ರಾಮೀಣ ಪ್ರದೇಶಗಳಲ್ಲಾದರೂ ಮೇಲ್ಜಾತಿಗಳ ಪ್ರಾಬಲ್ಯ ಸ್ಥಾನವನ್ನು ದುರ್ಬಲಗೊಳಿಸಿವೆ. ಹಲವು ವರ್ಷಗಳ ಹಿಂದೆ, ಪಶ್ಚಿಮ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಪಾಲನ್‌ಪುರದಲ್ಲಿ ಈ ಪ್ರಕ್ರಿಯೆಯ ಗಮನಾರ್ಹ ಉದಾಹರಣೆಯನ್ನು ವೀಕ್ಷಿಸಲು ನನಗೆ ಅವಕಾಶ ಸಿಕ್ಕಿತು. ಪಾಲನ್‌ಪುರದ ತುಲನಾತ್ಮಕವಾಗಿ ವಿದ್ಯಾವಂತ ನಿವಾಸಿಯಾದ ಮಾನ್ ಸಿಂಗ್ (ಹೆಸರು ಬದಲಾಯಿಸಲಾಗಿದೆ) ಅವರನ್ನು ಹಳ್ಳಿಯಲ್ಲಿನ ಇತ್ತೀಚಿನ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಯ ಕುರಿತು ಅವರ ಅನಿಸಿಕೆಗಳನ್ನು ಬರೆಯಲು ಕೇಳಿದಾಗ, ಅವರು ಬರೆದದ್ದು ಇಲ್ಲಿದೆ (1983 ರ ಕೊನೆಯಲ್ಲಿ):
1. ಕೆಳವರ್ಗದವರು ಮೇಲ್ಜಾತಿಗಳಿಗಿಂತ ಉತ್ತಮವಾಗಿ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಮೇಲ್ಜಾತಿಯ ಜನರ ಹೃದಯದಲ್ಲಿ ಕೆಳಜಾತಿಗಳ ಬಗ್ಗೆ ಅಸೂಯೆ ಮತ್ತು ದ್ವೇಷವಿದೆ.
2. ಕೀಳು ಜಾತಿಗಳಲ್ಲಿ ಶಿಕ್ಷಣದ ಅನುಪಾತವು ಬಹಳ ವೇಗವಾಗಿ ಹೆಚ್ಚುತ್ತಿದೆ.
3. ಒಟ್ಟಾರೆಯಾಗಿ ಹೇಳುವುದಾದರೆ, ಕೆಳಜಾತಿಗಳು ಮೇಲಕ್ಕೆ ಹೋಗುತ್ತಿವೆ ಮತ್ತು ಮೇಲ್ಜಾತಿಗಳು ಕೆಳಗಿಳಿಯುತ್ತಿವೆ ಎಂದು ನಾವು ಹೇಳಬಹುದು; ಏಕೆಂದರೆ ಆಧುನಿಕ ಸಮಾಜದಲ್ಲಿ ಉನ್ನತ ಜಾತಿಯ ಜನರಿಗಿಂತ ಕೆಳಜಾತಿಗಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ.
"ಕೆಳಜಾತಿಗಳು", ಮಾನ್ ಸಿಂಗ್ ಎಂದರೆ ದಲಿತರಲ್ಲ, ಆದರೆ ಅವರ ಸ್ವಂತ ಜಾತಿಯಾದ 'ಮುರಾವ್' (ಉತ್ತರ ಪ್ರದೇಶದ "ಇತರ ಹಿಂದುಳಿದ ವರ್ಗ”ಗಳಲ್ಲಿ ಒ೦ದು ಜಾತಿ) ಎಂದು ನಾನು ಅರಿತುಕೊಳ್ಳುವವರೆಗೂ ನಾನು ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸುಳಿವಿನೊಂದಿಗೆ, ಅವರು ಬರೆದದ್ದು ಉತ್ತಮ ಅರ್ಥವನ್ನು ನೀಡಿತು, ಮತ್ತು ವಾಸ್ತವವಾಗಿ, ಇದು ನಮ್ಮ ಸ್ವಂತ ಸಂಶೋಧನೆಗಳೊಂದಿಗೆ ಸ್ಥಿರವಾಗಿದೆ: ಜಮೀನ್ದಾರಿಯನ್ನು ರದ್ದುಗೊಳಿಸಿದ ನಂತರ ಮತ್ತು ಹಸಿರು ಕ್ರಾಂತಿಯ ಪ್ರಾರಂಭದ ನಂತರ ಕೃಷಿ ಜಾತಿಯಾದ ಮುರಾವ್ಗಳು ಸ್ಥಿರವಾಗಿ, ಮೇಲ್ವರ್ಗ ಜಾತಿಯ ಠಾಕೂರರುಗಳಿಗಿ೦ತ ಹೆಚ್ಚು, ಏಳಿಗೆ ಹೊಂದಿದ್ದರು. ಠಾಕೂರರು ಕೆಲಸಮಾಡದ ಭೂಮಾಲೀಕರ ತೋರಿಕೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೂ (ಸಾಂಪ್ರದಾಯಿಕವಾಗಿ, ಅವರು ನೇಗಿಲನ್ನು ಮುಟ್ಟಬಾರದು), ಮುರಾವ್‌ಗಳು ಬಹು ಬೆಳೆಗಳನ್ನು ತೆಗೆದುಕೊಳ್ಳುತ್ತಾ ಕೊಳವೆಬಾವಿಗಳನ್ನು ಸ್ಥಾಪಿಸಿದರು, ಹೆಚ್ಚಿನ ಭೂಮಿಯನ್ನು ಖರೀದಿಸಿದರು ಮತ್ತು - ಮಾನ್ ಸಿಂಗ್ ಸುಳಿವು ನೀಡಿದಂತೆ - ಶಿಕ್ಷಣದ ವಿಷಯಗಳಲ್ಲಿ ಠಾಕೂರರೊಂದಿಗೆ ಸಮಾನತೆಗೆ ಹತ್ತಿರಿಸಿದರು. ಠಾಕೂರರು ತಮ್ಮ ಅಸಮಾಧಾನವನ್ನು ಮರೆಮಾಚಲಿಲ್ಲ.
ಪಾಲನ್ಪುರ್ ಕೇವಲ ಒಂದು ಗ್ರಾಮವಾಗಿದೆ, ಆದರೆ ಅನೇಕ ಸಂಖ್ಯೆಯ ಗ್ರಾಮ ಅಧ್ಯಯನಗಳಲ್ಲಿ ಇದೇ ಮಾದರಿಗಳನ್ನು ಗಮನಿಸಲಾಗಿದೆ. ಮೇಲ್ಜಾತಿಗಳ ತುಲನಾತ್ಮಕ ಆರ್ಥಿಕ ಅವನತಿಯು ಗ್ರಾಮೀಣ ಭಾರತದಲ್ಲಿ ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಸಾರ್ವತ್ರಿಕ ಮಾದರಿಯಾಗಿದೆ ಎಂದು ನಾನು ಸೂಚಿಸುತ್ತಿಲ್ಲ, ಆದರೆ ಇದು ಸ್ವಲ್ಪ ಮಟ್ಟಿಗೆ ಸಾಮಾನ್ಯ ಮಾದರಿಯಾಗಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಮೇಲ್ಜಾತಿಗಳು ಇನ್ನೂ ಆರ್ಥಿಕ ಮತ್ತು ಸಾಮಾಜಿಕ ಜೀವನದ ಅನೇಕ ಅಂಶಗಳ ಮೇಲೆ ದೃಢವಾದ ನಿಯಂತ್ರಣದಲ್ಲಿದ್ದರೂ, ಕೆಲವು ವಿಷಯಗಳಲ್ಲಿ ಅವರು ನೆಲವನ್ನು ಕಳೆದುಕೊಳ್ಳುತ್ತಿದ್ದಾರೆ ಅಥವಾ ನೆಲವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಸವಲತ್ತುಗಳ ನಷ್ಟವು ತುಲನಾತ್ಮಕವಾಗಿ ಚಿಕ್ಕದಾಗಿದ್ದರೂ ಸಹ, ಅದನ್ನು ದೊಡ್ಡ ನಷ್ಟವೆಂದು ಗ್ರಹಿಸಬಹುದು.
ಮೇಲ್ಜಾತಿ ಪ್ರತೀಕಾರ
ಸವಲತ್ತುಗಳನ್ನು ಪ್ರಶ್ನಿಸಿರುವ ಎಲ್ಲಾ ವಿಧಾನಗಳಲ್ಲಿ, ಬಹುಶಃ (1) ಶಿಕ್ಷಣ ಮತ್ತು (2) ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆಗಿಂತ ಮೇಲ್ಜಾತಿಗಳು ಬೇರೆ ಯಾವುದರಿ೦ದಲೂ ಹೆಚ್ಚು ತೀವ್ರವಾಗಿ ಅಸಮಾಧಾನಗೊಂಡಿಲ್ಲ. ಮೀಸಲಾತಿ ನೀತಿಗಳು ಮೇಲ್ಜಾತಿಗಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಎಷ್ಟು ಕಡಿಮೆಗೊಳಿಸಿವೆ ಎಂಬುದು ಸ್ಪಷ್ಟವಾಗಿಲ್ಲ - ಮೀಸಲಾತಿ ಮಾನದಂಡಗಳು ಸಂಪೂರ್ಣವಾಗಿ ಅನುಷ್ಠಾನಗೊಳ್ಳಲು ದೂರವಿದೆ ಮತ್ತು ಅವು ಮುಖ್ಯವಾಗಿ ಸಾರ್ವಜನಿಕ ವಲಯದಲ್ಲಿ ಅನ್ವಯಿಸುತ್ತವೆ. ಸಂದೇಹವಿಲ್ಲದ್ದೇನೆಂದರೆ, ಈ ನೀತಿಗಳು ಮೇಲ್ಜಾತಿಗಳಲ್ಲಿ ಒ೦ದು ಸಾಮಾನ್ಯ ಗ್ರಹಿಕೆಯನ್ನು ಹುಟ್ಟುಹಾಕಿದೆ : “ತಮಗೆ ಸೇರಿದ” ಉದ್ಯೋಗಗಳು ಮತ್ತು ಪದವಿಗಳನ್ನು ಎಸ್‌ಸಿಗಳು, ಎಸ್‌ಟಿಗಳು ಮತ್ತು ಇತರ ಹಿಂದುಳಿದ ವರ್ಗಗಳು (ಒಬಿಸಿಗಳು) ಕಸಿದುಕೊಳ್ಳುತ್ತಿವೆ.
ಇದನ್ನು ಸಾಮಾನ್ಯವಾಗಿ ಬಹುಸಂಖ್ಯಾತ ಚಳುವಳಿ ಎಂದು ಕರೆಯಲಾಗಿದ್ದರೂ, ಹಿಂದುತ್ವವನ್ನು ಬಹುಶಃ ದಮನಕಾರಿ ಅಲ್ಪಸಂಖ್ಯಾತರ ಚಳುವಳಿ ಎಂದು ಸರಿಯಾಗಿ ವಿವರಿಸ ಬಹುದು.
1990 ರಲ್ಲಿ OBC ಗಳಿಗೆ ಮೀಸಲಾತಿಯ ಕುರಿತು ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರಲು ವಿಪಿ ಸಿಂಗ್ ಸರ್ಕಾರವು ತನ್ನನ್ನು ಬಧ್ಧಗೊಳಿಸಿದ ನಂತರ ಬಿಜೆಪಿಯ ಪುನರುಜ್ಜೀವನವು ಪ್ರಾರಂಭವಾಯಿತು. ಇದು ಹಿಂದೂ ಸಮಾಜವನ್ನು ವಿಭಜಿಸಲು ಮಾತ್ರವಲ್ಲದೆ (ಮೇಲ್ವರ್ಗದವರು ಕೋಪಗೊಂಡಿದ್ದರು) OBC ಗಳನ್ನು (ಭಾರತದ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟು) ಮಂಡಲ್ ಆಯೋಗದ ಶಿಫಾರಸುಗಳನ್ನು ವಿರೋಧಿಸಿದ ಬಿಜೆಪಿಯಿಂದ ದೂರವಿಡಲು ಬೆದರಿಸಿತು. ಎಲ್‌ಕೆ ಅಡ್ವಾಣಿಯವರ ಅಯೋಧ್ಯೆಯ ರಥಯಾತ್ರೆ, ಮತ್ತು ನಂತರದ ಘಟನೆಗಳು (ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸ ಸೇರಿದಂತೆ), ಈ “ಜಾತಿಭೇದ”ದ ಬೆದರಿಕೆಯನ್ನು ತಪ್ಪಿಸಲು ಮತ್ತು ಬಿಜೆಪಿಯ - ಮತ್ತು ಮೇಲ್ಜಾತಿಗಳ - ನಾಯಕತ್ವದಲ್ಲಿ ಹಿಂದೂಗಳನ್ನು ಮುಸ್ಲಿಂ ವಿರೋಧಿ ವೇದಿಕೆಯಲ್ಲಿ ಮರು-ಒಗ್ಗೂಡಿಸಲು ಸಹಾಯ ಮಾಡಿತು.
ಹಿಂದುತ್ವವು ಮೇಲ್ಜಾತಿಗಳಿಗೆ ತಮ್ಮ ಸವಲತ್ತುಗಳಿಗೆ ಬೆದರಿಕೆಯನ್ನು ಎದುರಿಸಲು ಮತ್ತು ಹಿಂದೂ ಸಮಾಜದ ಮೇಲೆ ತಮ್ಮ ಹಿಡಿತವನ್ನು ಮರುಸ್ಥಾಪಿಸಲು ಅನುವು ಮಾಡಿಕೊಡುತ್ತದೆ ಎಂಬುದಕ್ಕೆ ಇದು ಒಂದು ಗಮನಾರ್ಹ ಉದಾಹರಣೆಯಾಗಿದೆ. ಇದು ಇಂದು ಹಿಂದುತ್ವ ಚಳವಳಿಯ ಮುಖ್ಯ ಕಾರ್ಯಗಳಲ್ಲಿ ಒಂದಾಗಿರುವಂತೆ ತೋರುತ್ತದೆ. ಕೇವಲ ಮುಸ್ಲಿಮರಲ್ಲ ಆದರೆ ಕ್ರಿಶ್ಚಿಯನ್ನರು, ದಲಿತರು, ಆದಿವಾಸಿಗಳು, ಕಮ್ಯುನಿಸ್ಟರು, ಜಾತ್ಯತೀತರು, ವಿಚಾರವಾದಿಗಳು, ಸ್ತ್ರೀವಾದಿಗಳು, ಸಂಕ್ಷಿಪ್ತವಾಗಿ ಹೇಳುವುದಾದರೆ ಬ್ರಾಹ್ಮಣ ಸಾಮಾಜಿಕ ವ್ಯವಸ್ಥೆಯ ಮರುಸ್ಥಾಪನೆಯ ಹಾದಿಯಲ್ಲಿ ನಿಲ್ಲುವ ಅಥವಾ ನಿಲ್ಲಬಹುದಾದ ಯಾರೇ ಆದರೂ ಈ ಆಂದೋಲನದ ಸಂಭಾವ್ಯ ಎದುರಾಳಿಗಳು.
ಸಾಮಾನ್ಯವಾಗಿ ಬಹುಸಂಖ್ಯಾತ ಚಳುವಳಿ ಎಂದು ಕರೆಯಲಾಗಿದ್ದರೂ, ಹಿಂದುತ್ವವನ್ನು ಬಹುಶಃ ದಮನಕಾರಿ ಅಲ್ಪಸಂಖ್ಯಾತರ ಚಳುವಳಿ ಎಂದು ವಿವರಿಸುವದು ಸೂಕ್ತ.
ವಸ್ತುನಿಷ್ಠವಾಗಿ ಹೇಳುವುದಾದರೆ, ಹಿಂದುತ್ವ ಮತ್ತು ಡಾ. ಅಂಬೇಡ್ಕರ್ ನಡುವೆ ಯಾವುದೇ ಸಾಮಾನ್ಯ ನೆಲೆಯಿಲ್ಲ, ಆದರೂ ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ತಮ್ಮದೆ೦ದು ವಾಡಿಕೆಯಾಗಿ ಆರ್‌ಎಸ್‌ಎಸ್ ಹೇಳಿಕೊಳ್ಳುತ್ತದೆ.
ಹಿಂದುತ್ವ ಆಂದೋಲನದ (ಅಥವಾ ಇತ್ತೀಚಿನ ದಿನಗಳಲ್ಲಿ ಅದರ ಕ್ಷಿಪ್ರ ಬೆಳವಣಿಗೆಯ) ಈ ವ್ಯಾಖ್ಯಾನಕ್ಕೆ ಒಂದು ಸಂಭವನೀಯ ಆಕ್ಷೇಪಣೆಯೆಂದರೆ, ದಲಿತರು ಅದನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುತ್ತಿದ್ದಾರೆ. ಈ ಆಕ್ಷೇಪಣೆಯನ್ನು ಎದುರಿಸಲು ಸುಲಭವಾಗಿದೆ. ಮೊದಲನೆಯದಾಗಿ, ಅನೇಕ ದಲಿತರು ನಿಜವಾಗಿಯೂ ಆರ್‌ಎಸ್‌ಎಸ್ ಅಥವಾ ಹಿಂದುತ್ವ ಸಿದ್ಧಾಂತವನ್ನು ಬೆಂಬಲಿಸುತ್ತಾರೆ ಎಂಬುದು ಅನುಮಾನಾಸ್ಪದ. 2019 ರ ಚುನಾವಣೆಯಲ್ಲಿ ಅನೇಕರು ಬಿಜೆಪಿಗೆ ಮತ ಹಾಕಿದ್ದಾರೆ, ಆದರೆ ಅದು ಹಿಂದುತ್ವವನ್ನು ಬೆಂಬಲಿಸುವ ವಿಷಯವಲ್ಲ - ಬಿಜೆಪಿಗೆ ಮತ ಹಾಕಲು ಹಲವು ಕಾರಣಗಳಿವೆ. ಎರಡನೆಯದಾಗಿ, ದಲಿತರು ಹಿಂದುತ್ವ ಸಿದ್ಧಾಂತಕ್ಕೆ ಒಪ್ಪದಿದ್ದರೂ ಹಿಂದುತ್ವದ ಆಂದೋಲನದ ಕೆಲವು ಅಂಶಗಳು ಅವರನ್ನು ಆಕರ್ಷಿಸಬಹುದು. ಉದಾಹರಣೆಗೆ, RSS ತನ್ನ ವಿಶಾಲವಾದ ಶಾಲೆಗಳ ಜಾಲಕ್ಕೆ ಹೆಸರುವಾಸಿಯಾಗಿದೆ, ಮತ್ತು ಇತರ ರೀತಿಯ ಸಾಮಾಜಿಕ ಕಾರ್ಯಗಳು ಸಾಮಾನ್ಯವಾಗಿ ಹಿಂದುಳಿದ ಗುಂಪುಗಳ ಮೇಲೆ ಕೇಂದ್ರೀಕೃತವಾಗಿವೆ. ಮೂರನೆಯದಾಗಿ, ಆರೆಸ್ಸೆಸ್ ದಲಿತರ ಬೆಂಬಲವನ್ನು ಗಳಿಸಲು ಸಾಮಾಜಿಕ ಕಾರ್ಯಗಳ ಮೂಲಕ ಮಾತ್ರವಲ್ಲದೆ ಪ್ರಚಾರದ ಮೂಲಕವೂ ವಿಶೇಷವಾಗಿ ಪ್ರಯತ್ನಿಸುತ್ತಿದೆ. ಡಾ.ಅಂಬೇಡ್ಕರ್ ಅವರನ್ನು ತಮ್ಮೊಟ್ಟಿಗೆ ಸೇರಿಸಿಕೊಳ್ಳುವದರ ಮೂಲಕ ಇದು ಪ್ರಾರಂಭವಾಗಿದೆ. ವಸ್ತುನಿಷ್ಠವಾಗಿ ಹೇಳುವುದಾದರೆ, ಹಿಂದುತ್ವ ಮತ್ತು ಡಾ. ಅಂಬೇಡ್ಕರ್ ನಡುವೆ ಯಾವುದೇ ಸಾಮಾನ್ಯ ನೆಲೆಯಿಲ್ಲ, ಆದರೂ ಆರ್‌ಎಸ್‌ಎಸ್ ವಾಡಿಕೆಯಂತೆ ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ತಮಗೆ ಸೇರಿದವರೆ೦ದು ಹೇಳಿಕೊಳ್ಳುತ್ತದೆ.
ಅಂತಿಮವಾಗಿ, ಹಿಂದುತ್ವವು ಜಾತಿಯ ನಿರ್ಮೂಲನೆಗೆ ಬಧ್ಧವಾಗಿಲ್ಲದಿದ್ದರೂ ಸಹ, ಅದರ ಜಾತಿಯ ದೃಷ್ಟಿಕೋನ ಮತ್ತು ಆಚರಣೆಯು ಇಂದು ಅಸ್ತಿತ್ವದಲ್ಲಿರುವ ಜಾತಿ ವ್ಯವಸ್ಥೆಗಿಂತ ಕಡಿಮೆ ದಮನಕಾರಿಯಾಗಿದೆ ಎಂದು ವಾದಿಸಬಹುದು. ಕೆಲವು ದಲಿತರು ಸಾಮನ್ಯ ಸಮಾಜಕ್ಕಿಂತ ಆರ್‌ಎಸ್‌ಎಸ್‌ನಲ್ಲಿ ತಮ್ಮನ್ನು ಉತ್ತಮವಾಗಿ ನಡೆಸಿಕೂಳ್ಳಲಾಗಿದೆ ಎಂದು ಭಾವಿಸಬಹುದು. ಒಬ್ಬ ಆರ್‌ಎಸ್‌ಎಸ್ ಸಹಾನುಭೂತಿಯು ಹೇಳುವಂತೆ: “ಹಿಂದುತ್ವ ಮತ್ತು ಸಾಮಾನ್ಯ ಹಿಂದೂ ಗುರುತಿನ ಭರವಸೆಯು ಯಾವಾಗಲೂ ದಲಿತ ಮತ್ತು ಒಬಿಸಿ ಜಾತಿಗಳನ್ನು ಆಕರ್ಷಿಸುತ್ತದೆ ಏಕೆಂದರೆ ಅದು ದುರ್ಬಲ ಜಾತಿಯ ಸಂಕುಚಿತ ಗುರುತಿನಿಂದ ಅವರನ್ನು ಬಿಡುಗಡೆ ಮಾಡುವ ಭರವಸೆ ನೀಡುತ್ತದೆ ಮತ್ತು ಅವರನ್ನು ಪ್ರಬಲವಾದ ಹಿಂದೂ ಸಮುದಾಯದೊಳಕ್ಕೆ ಸೇರಿಸುತ್ತದೆ.” (ಸಿಂಗ್ 2019). ಈ “ಭರವಸೆ” ಸಾಮಾನ್ಯವಾಗಿ ಭ್ರಮೆಯಾಗಿ ಸಾಬೀತುಪಡಿಸುತ್ತದೆ ಎಂಬುದು ಇನ್ನೊಂದು ವಿಷಯ: ಆರ್‌ಎಸ್‌ಎಸ್‌ನಲ್ಲಿ ದಲಿತರಾಗಿ ಭನ್ವರ್ ಮೇಘವಂಶಿ ಅವರ ಅನುಭವವು ಒಂದು ಪ್ರಬುದ್ಧ ಉದಾಹರಣೆಯಾಗಿದೆ (ಮೇಘವಂಶಿ, 2020).
ಪ್ರಜಾಪ್ರಭುತ್ವದ ವಿರುದ್ಧ ಮೇಲ್ಜಾತಿಗಳ ಶಾಂತ ಬಂಡಾಯವು ಈಗ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಹೆಚ್ಚು ನೇರವಾದ - ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದಿಂದ ಪ್ರಾರಂಭವಾಗುವ - ದಾಳಿಯ ಸ್ವರೂಪವನ್ನು ಪಡೆಯುತ್ತಿದೆ.
ಮೊದಲೇ ಹೇಳಿದಂತೆ, ಹಿಂದೂ ರಾಷ್ಟ್ರೀಯತೆಯ ಉದಯವನ್ನು ಬಿಜೆಪಿಯ ಚುನಾವಣಾ ಯಶಸ್ಸಿನೊಂದಿಗೆ ಗೊಂದಲಗೊಳಿಸಬಾರದು. ಅದೇನೇ ಇದ್ದರೂ, 2019 ರ ಸಂಸತ್ ಚುನಾವಣೆಯಲ್ಲಿ ಬಿಜೆಪಿಯ ಅಮೋಘ ಗೆಲುವು ಆರೆಸ್ಸೆಸ್‌ಗೆ ದೊಡ್ಡ ಗೆಲುವು. ಸರ್ಕಾರದ ಹೆಚ್ಚಿನ ಉನ್ನತ ಹುದ್ದೆಗಳನ್ನು (ಪ್ರಧಾನಿ, ರಾಷ್ಟ್ರಪತಿ, ಉಪಾಧ್ಯಕ್ಷರು, ಲೋಕಸಭೆಯ ಸ್ಪೀಕರ್, ಪ್ರಮುಖ ಸಚಿವಾಲಯಗಳು, ಅನೇಕ ರಾಜ್ಯಪಾಲರು, ಮು೦ತಾದವರು) ಹಿಂದೂ ರಾಷ್ಟ್ರೀಯತೆಯ ಸಿದ್ಧಾಂತಕ್ಕೆ ದೃಢವಾಗಿ ಬದ್ಧರಾಗಿರುವ ಆರ್‌ಎಸ್‌ಎಸ್‌ನ ಸದಸ್ಯರು ಅಥವಾ ಮಾಜಿ ಸದಸ್ಯರು ಇ೦ದಿನ ಸಮಯದಲ್ಲಿ ಹಿಡಿದುಕೊಂಡಿದ್ದಾರೆ.
ಪ್ರಜಾಪ್ರಭುತ್ವದ ವಿರುದ್ಧ ಮೇಲ್ಜಾತಿಗಳ ಶಾಂತ ಬಂಡಾಯವು ಈಗ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಹೆಚ್ಚು ನೇರವಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದಿಂದ ಪ್ರಾರಂಭವಾಗುವ ದಾಳಿಯ ಸ್ವರೂಪವನ್ನು ಪಡೆಯುತ್ತಿದೆ. ಪ್ರಜಾಪ್ರಭುತ್ವದ ಹಿಮ್ಮೆಟ್ಟುವಿಕೆ ಮತ್ತು ಜಾತಿಯ ನಿರಂತರತೆಗಳು ಪರಸ್ಪರ ಶಕ್ತಿಗೊಳಿಸುವ ಅಪಾಯದಲ್ಲಿವೆ.
The India Forum welcomes your comments on this article for the Forum/Letters section.
Write to editor@theindiaforum.in.
ಸಂಚಿಕೆ: ಮಾರ್ಚ್ 6, 2020
ಝಾನ್ ಡ್ರೆಜ್ Jean Drèze
References:
Aggarwal, A., Drèze, J.P., and Gupta, A. (2015). “Caste and the power elite in Allahabad”. Economic and Political Weekly, 7 February.
Ambedkar, B.R. (1945), What Congress and Gandhi have done to the untouchables. Bombay: Thacker & Co.
Balagopal, K. (1990)“This anti-Mandal mania”. Economic and Political Weekly, 6 October.
Drèze, Jean (2017). Sense and solidarity: Jholawala economics for everyone. Ranikhet: Permanent Black.
Drèze, J.P., Lanjouw, P., and Sharma, N.K. (1998). “Economic development in Palanpur, 1957-93”. In Lanjouw, P., and Stern, N. (Eds.), Economic development in Palanpur over five decades. Oxford: Oxford University Press.
Drèze, J.P., and Sen, Amartya (2013). An uncertain glory: India and its contradictions. London and New Delhi: Penguin.
Gandhi, M.K. (1933). “Religion degraded”. Harijan, 11 February 1933. Reprinted in Gandhi (1964), pp. 12-15.
Gandhi, M.K. (1964).Caste must go and the sin of untouchability, compiled by R.K. Prabhu. Ahmedabad: Navajivan Publishing House. Available at www.gandhiheritageportal.org.
Golwalkar, M.S. (1939). We or our nationhood defined. Nagpur: Bharat Publications.
Golwalkar, M.S. (1966). Bunch of thoughts. Bangalore: Vikrama Prakashan.
India Today (2019). “Chhattisgarh BJP MLAs oppose eggs on mid-day meal menu in govt schools”.
Madhav, Ram (2017). “Coming full circle at 70”. Indian Express, 15 August.
Meghwanshi, Bhanwar (2020), I Could Not be Hindu: The Story of a Dalit in the RSS (New Delhi: Navayana).
Savarkar, V.D. (1923). Essentials of Hindutva, later reprinted under the title Hindutva: Who is a Hindu? Bombay: Veer Savarkar Prakashan.
Singh, Abhinav Prakash (2019). “A common Hindu identity has always appealed to OBC and Dalit castes”. Hindustan Times, 18 July.
Trivedi, P., Nissa, B.U., and Bhogale, S. (2019). “From faith to gender and profession to caste: A profile of the 17th Lok Sabha”. Hindustan Times, 25 May.
Zelliott, Eleanor (2013). Ambekdar’s world: The making of Babasaheb and the dalit movement. New Delhi: Navayana.
Tags:
CasteHindu nationalismsocial inequalitysocial mobilityHindutva
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ