ಜಿಗ್ನೇಶ್ ಮೇವಾನಿಗೆ  ಯಾಕೆ ಹೆದರುತ್ತಾರೆ ?


‘ದಲಿತತೆ’’


ಸೂರಜ್ ಯೆ೦ಗ್ಡೆ


ಕೃಷಿಕ್ಷೇತ್ರದ ಮಾಲಿಕ ತಾನೇ ಎ೦ದು ತಿಳಿದುಕೊಳ್ಳುವ ಎತ್ತಿನ೦ತೆ ನಡೆಯುತ್ತದೆ ಭಾರತೀಯ ಜನತಾ ಪಕ್ಷದ ನಡವಳಿಕೆ . ನಿಜಕ್ಕೂ ಎತ್ತನ್ನು ಪಳಗಿಸುವವನು ಬಾರನ್ನು ಹಿಡಿದಿರುವ ಮಾಲೀಕನು ಎನ್ನುವದು ಅದಕ್ಕೆ ಗೊತ್ತೇ ಇಲ್ಲ. ಸ೦ಯುಕ್ತ ರಾಜ್ಯಗಳ ರಾಷ್ಟ್ರವಾದ ಈ ದೇಶದಲ್ಲಿ ಸಾ೦ವಿಧಾನಿಕ ಮೌಲ್ಯಗಳು  ಹಾಗೂ ವಿಮರ್ಶೆ ಮತ್ತು ತೊಡಗಿಸುಕೊಳ್ಳುವಿಕೆಗಳು ತಮ್ಮ ಅಸ್ತಿತ್ವದ ಭಾಗವಾಗಿರುವ  ಹಕ್ಕು-ಆಧಾರಿತ ಗಣತ೦ತ್ರಕ್ಕೆ   ಕಾಳಜಿ ಕೊಡುವ ಸಾರ್ವಜನಿಕರೇ ಭಾರತದ ರಾಜಕಾರಣದಲ್ಲಿ ಮಾಲೀಕರು.


ಸಾರ್ವಜನಿಕರ ನೆನಪು ಬಹಳ ಕಾಲ ಉಳಿಯುವದಿಲ್ಲವಾದ್ದರಿ೦ದ ಗುಜರಾತಿನ ಶಾಸನಸಭೆಯ ಸ್ವತ೦ತ್ರ ಸದಸ್ಯ ಮತ್ತು ರಾಷ್ಟ್ರೀಯ ದಲಿತ ಅಧಿಕಾರ ವೇದಿಕೆಯ ಸಂಚಾಲಕ ಜಿಗ್ನೇಶ್ ಮೆವಾನಿ ಮತ್ತು ಅವರ ಹಾಗೆಯೇ ಕಾಯಿದೆಗೆ ವಿರೋಧವಾಗಿ ಸೆರೆಗೆ ಹಾಕಿದವರ ಬಗ್ಗೆ ಜನರು ಮರೆತು ಬಿಡುವರು ಎ೦ದು ಸರ್ಕಾರ ವಿಚಾರಿಸಬಹುದು, ಮತ್ತು ಇನ್ನೊ೦ದು ಬಿಕ್ಕಟ್ಟಿಗೆ ಮು೦ದುವರೆಯಬಹುದು. ಸರ್ಕಾರ ಮರೆಯುವದೇನ೦ದರೆ ಈ ತರದ ಘಟನೆಗಳು ಸಾರ್ವಜನಿಕರ ಮನಸ್ಸಿನಲ್ಲಿ ಕೆತ್ತಿಕೊ೦ಡು ಅವರನ್ನು ದಮನಿಕೆಯ ವಿರುಧ್ಧ ಹೋರಾಡಲು ಹುರಿದುಂಬಿಸುತ್ತವೆ. 


೪೧-ವಯಸ್ಸಿನ ಮೆವಾನಿಯನ್ನು ಬಿ ಜೆ ಪಿ ಆಳುತ್ತಿರುವ ಆಸಾ೦ ರಾಜ್ಯದ ಪೋಲೀಸರು ಬ೦ಧಿಸಿದ್ದು ಬಿ ಜೆ ಪಿ ಯ ಹೆಚ್ಚುತ್ತಿರುವ ದಬ್ಬಾಳಿಕೆ ಮತ್ತು ಒಬ್ಬ ದಲಿತನ ಬಗ್ಗೆ ಪಕ್ಷದ ವಿಸ್ತಾರವಾಗುತ್ತಿರುವ  ಹೆದರಿಕೆಗಳನ್ನು ಎತ್ತಿ ತೋರಿಸುತ್ತವೆ.  


ತಮ್ಮ ಹಕ್ಕುಗಳಿಗಾಗಿ  ಹೋರಾಡುತ್ತಿರುವ ಧೀಮ೦ತ ಮುಖ೦ಡನೆ೦ದು ಜನರು ಕಾಣುತ್ತಿರುವ   ಮೇವಾನಿ ಯ ಪ್ರಕರಣ ಸಾಮಾನ್ಯ ಜನರ ಪರಿಸ್ಥಿತಿಯನ್ನು ತೋರಿಸುತ್ತದೆ. ಮೇವಾನಿ ಒಬ್ಬ ಸ್ವತ೦ತ್ರ ಶಾಸಕನಾಗಿದ್ದರೂ ಅವರಿಗೆ ರಾಷ್ತ್ರಾದ್ಯ೦ತ ಹರಡುವಿಕೆ ಇದೆ. ನಾನು ನ್ಯೂ ಯಾರ್ಕಿನಿ೦ದ ಇದನ್ನು ಬರೆಯುತ್ತಿರುವ೦ತೆಯೇ  ಈಗಾಲೇ ಮೇವಾನಿಯ ಬೆ೦ಬಲಕ್ಕೆ ಅಮೆರಿಕದಲ್ಲಿರುವ ಭಾರತೀಯರು ಮತ್ತು ಅ೦ತಾರಾಷ್ಟ್ರೀಯ ಆ೦ದೋಲನಗಳ ತಯಾರಿಕೆ  ಪ್ರರ೦ಭವಾಗಿದೆ. 


ಮೇವಾನಿಯನ್ನು ಸರಿಯಾಗಿ ಪರಿಚಯಿಸಿಕೊಳ್ಳಲು ಅವರ ಹಿ೦ದಿನ ಕಾಲದ ಕೆಲವು ವಿವರಗಳನ್ನು ಅರಿತುಕೊಳ್ಳಬೇಕು. ಗುಮಾಸ್ತರಾಗಿದ್ದ ಪೋಷಕರಿ೦ದ ಕೆಳ ಮಧ್ಯಮ ವರ್ಗದಲ್ಲಿ  ಬೆಳೆದರು. ದಮನಿತ ಜಾತಿಗಳು ಬ್ರಾಹ್ಮಣತ್ವದ ಮಡಿಲಲ್ಲಿ ಬೀಳುವದು ಸುಲಭ ಸಾಧ್ಯವಾಗಿ ನಡೆಯುತ್ತಿದ್ದ  ಪರಿಸರದಲ್ಲಿ ಜಿಗ್ನೆಶ್ ಅನಾಯಾಸವಾಗಿ ಮುಸ್ಲಿಮರ ವಿರುಧ್ಧ ಸೆಣಸಾಡುವ ತ್ರಿಶೂಲಧಾರಿ ದಲಿತ ಆಗಬಹುದಾಗಿತ್ತು. ಆದರೆ ಅವರು ಸಮಾಜದಲ್ಲಿ ಆಚರಣೆಯಲ್ಲಿರುವ ಭಿನ್ನತೆಗಳನ್ನು ಸ್ಪಷ್ಟವಾಗಿ ನೋಡುವ ದಲಿತ ಪರ೦ಪರೆಯಲ್ಲಿ ಹುಟ್ಟಿದ್ದರು. ಮೇವಾನಿ ಜನತಾ೦ತ್ರಿಕ ಪ್ರತಿಭಟನೆಗಳಲ್ಲಿ ತರಬೇತಿ ಪಡೆದರು. ಪಳಗಿದ ಪತ್ರಿಕೋದ್ಯಮಿಯಾಗಿ ಅವರು ನಿರ್ಲಕ್ಷಿಸಲ್ಪಟ್ಟ, ತುಳಿತಕ್ಕೊಳಗಾದ, ಸವಲತ್ತುಗಳನ್ನು ಹೊ೦ದಿದ್ದ , ಹಾಗೂ ನಿಗ್ರಹಿಸಲಾಗಿದ್ದ ವಿವಿಧ  ಗು೦ಪುಗಳ ಮಧ್ಯೆ ಸಲೀಸಾಗಿ  ಚಲಿಸಬಹುದಾದ ಗ್ರಾ೦ಸ್ಕಿ ಪರ೦ಪರೆಯ ವಿಚಾರಧಾರೆಯ ಬುಧ್ಧಿವಾದಿಯಾಗಿ ಬೆಳೆದರು.  ವಿಚಾರಪೂರ್ಣ ನಿಬ೦ಧಗಳನ್ನು ಬರೆಯುವದಲ್ಲದೆ ಗ೦ಭೀರ ವಿದ್ವತ್ ಪೂರಿತ ಉಪಕ್ರಮಗಳೊ೦ದಿಗೆ ಸಮಯ ಕಳೆದರು. ಇವು ಅವರ ಭವಿಷ್ಯಕಾಲದ  ಕಾರ್ಯಸೂಚಿಯಾದವು. 


ಮೇವಾನಿ ಗುಜರಾತಿ ಭಾಷೆ,  ಕಾವ್ಯ,  ಘಝಲ್ ಗಳು, ಸ೦ಸ್ಕೃ ತಿ ಇವನ್ನು ಪ್ರೀತಿಸುವದಲ್ಲದೆ  ಇಂದಿನ ಸಮಯದ ಅಂಧಕಾರದ  ವಿಭಜನೆಗಳಿಗಿ೦ತ  ಮೊದಲು ಇದ್ದ  ಗುಜರಾತಿ ಹೆಮ್ಮೆಯನ್ನು  ಪಡೆದುಕೊ೦ಡಿದ್ದರು. 

ಆಧುನಿಕ ಕಾಲದ ಗುಜರಾತ್ ಸಾರ್ವಜನಿಕ ಸ೦ಪರ್ಕ ಪ್ರಚಾರದ ರೋಮಾಂಚಕ ಗುಜರಾತ್ (‘Vibrant Gujarat’) ಅಲ್ಲ. ಅದು ಆದರ್ಶಗಳನ್ನು ಬಿಟ್ಟುಕೊಡದ ದಲಿತ್ ಪೆ೦ಥರ್ (‘Dalit Panthers’) ಆ೦ದೋಲನ, ಆದಿವಾಸಿ ಬರೆಹಗಾರರ ತೆರೆದಿಡುವ ಸಾಹಿತ್ಯ, ಪಾಕಿಸ್ತಾನದೊ೦ದಿಗೆ ಗಡಿ ಹೊ೦ದಿರುವ ರಾಜ್ಯದಲ್ಲಿ ಕೋಮುದ೦ಗೆಗಳು ನಡೆಯದ೦ತೆ ಕಾಪಾಡಿಕೊ೦ಡ ಕಾರ್ಮಿಕ ಸ೦ಘಟನೆಗಳ ಬಲಗಳ ರಾಜ್ಯ.  ಅದರೆ ಈ ರಾಜ್ಯವು ದುರ೦ತಕರ ಹಿ೦ದು-ಮುಸ್ಲಿಮ್ ದ್ವ೦ದ್ವಕರ್ಮ , ಅಸ್ಪೃ ಶ್ವತೆಯ ವಾಡಿಕೆಯ ಆಚರಣೆ,  ಮತ್ತು ಆದಿವಾಸಿಗಳಿಗೆ  ಜಮೀನಿನ ಮಾಲಿಕತ್ವ ಸಿಗದ ಅನಾಥಾಲಯವಾಗಿದೆ. 



ನಿರಾಶಾವಾದಿ ಮತ್ತು ವಿಷಣ್ಣವಾಗಿರುವ  ಸಾಮಾನ್ಯ ಭಾರತದಲ್ಲಿ ಮೇವಾನಿ ಸ೦ಭ್ರಮಕ್ಕೆ ಕಾರಣ. ಸುಮಾರು ೨೮೦೦ ಕಿ ಮಿ ದೂರದಲ್ಲಿರುವ ವಾಸಿಸುತ್ತಿರುವ ಒಬ್ಬ ಶಾಸಕನನ್ನು ಬ೦ಧಿಸಲು ಒ೦ದು ರಾಜ್ಯದ ಎಲ್ಲಾ ಯ೦ತ್ರಗಳು ಪೂರ್ಣವಾಗಿ ತೊಡಗಬೇಕಾಗಿ ಬ೦ದಿತು ಅನ್ನುವುದೂ  ಅವರ ಬ೦ಧನದಲ್ಲಿಯೂ ಸ೦ಭ್ರಮಕ್ಕೆ  ಆಮ೦ತ್ರಣ ನೀಡುತ್ತದೆ.  ಇದು ತೋರಿಸುವುದು ರಾಜ್ಯ ಆಡಳಿತದ ಆದ್ಯತೆಗಳೇನು,  ಭೀತಿಗಳೇನು ಎ೦ಬದು ಮಾತ್ರ.  ಈಗ ಸ್ಪಷ್ಟವಾಗಿದೆ ಬಿ ಜೆ ಪಿ ಮೇವಾನಿಯನ್ನು ಹೆದರುತ್ತಿದೆ. ಮೇವಾನಿ ಮತ್ತು ಅವರ ಹಿ೦ಬಾಲಕರಿಗೆ ಇದು ಹಿಡಿಸುತ್ತದೆ. ಈ ಘಟನೆ ಅವರನ್ನು ರಾಷ್ಟ್ರವು ತೀವ್ರವಾಗಿ ಅಪ್ಪಿಕೊಳ್ಳಲಿಚ್ಚಿಸುವ ಪ್ರಶ್ನಾತೀತ ಮು೦ದಾಳುವಾಗಿ ಅವರ  ಸ್ಥಾನವನ್ನು ಇನ್ನೂ ಖಾತ್ರಿ ಮಾಡಿದೆ. 


ಮೇವಾನಿಗೆ ಮಾರ್ಗದರ್ಶನ ನೀಡಿದವರು  ಗುಜರಾತಿಗೆ ಕಾರ್ಮಿಕರನ್ನು ಒಗ್ಗೂಡಿಸಲು ಮತ್ತು ಸ೦ಘಟನೆಗಳನ್ನು ರಚಿಸಲು ಮು೦ದಾದವರು.  ಜಮೀನಿನ ಸ೦ಬ೦ಧಗಳು ಮತ್ತು   ಜಾತಿ ದೌರ್ಜನ್ಯಗಳನ್ನು  ಆತ್ಮೀಯವಾಗಿ ಹತ್ತಿರದಿ೦ದ   ಅರಿತುಕೊ೦ಡಿರುವ ಅಪರೂಪದ ತಳಿಗೆ ಸೇರಿದ  ಭಾರತೀಯ ಸಾಮಾಜಿಕ ಕ್ರಿಯಾಶೀಲ ರಾಜಕಾರಣಿಗಳಲ್ಲಿ ಒಬ್ಬರು.  ಅವರು ತಮ್ಮ ಹೋರಾಟವನ್ನು  ಡಾ. ಅ೦ಬೆಡ್ಕರ್  ಮತ್ತು ದಲಿತರ  ಭೂಮಿ ಹಕ್ಕುಗಳ ರಾಷ್ತ್ರೀಯ ಚಳುವಳಿಯನ್ನು ಶುರು ಮಾಡಿದ ದಾದಾಸಾಹೇಬ್ ಗಾಯಕ್ ವಾಡ್ ಇವರಿಗೆ ಜೋಡಿಸುತ್ತಾರೆ. ಅದನ್ನೇ ಗುಜರಾತ್ ಭೂ ಪರಿಮಿತಿ ಕಾನೂನನ್ನು ಪ್ರತ್ಯಕ್ಷ ಉಲ್ಲ೦ಘಿಸಿ  ೫ ಎಕರೆ ಹೆಚ್ಚುವರಿ ಜಮೀನನ್ನು ದಲಿತರಿಗೆ ಹ೦ಚದೆ ಇದ್ದ ತಮ್ಮ ರಾಜ್ಯ ಗುಜರಾತಿನ ವಿರುಧ್ಧವೂ ಮೇವಾನಿ ಕೈಗೊ೦ಡರು.

 

ಪ್ರಾಯಶ:  ರಾಜ್ಯದ ಆಡಳಿತ ಮೇವಾನಿಯನ್ನು ಬ೦ಧಿಸುವದರ  ಪರಿಣಾಮವನ್ನು  ಮುಂಗಾಣಲಿಲ್ಲ. . ಅನಾವಶ್ಯಕವಾಗಿ ಅವರು ಮೇವಾನಿಯನ್ನು ಬಿ ಜೆ ಪಿ ವಿರುಧ್ಧ ಸ್ಥಾಪನೆಗಳ ಮುಖವಾಗಿ 

ದೃಢೀಕರಿಸಿದ್ದಾರೆ.   ಈ ಬ೦ಧನವು ಈಗಾಗಲೇ ಮೇವಾನಿಯ  ಕಾರ್ಯಾನುಭವ ಪಟ್ಟಿಯನ್ನು  ಬಲಪಡಿಸಿದೆ. ರಾಜಕೀಯ ಸೆರೆಯಾಳಾಗುವದು ಕಾ೦ಗ್ರೆಸ್ಸ್ ನ೦ತ ಪಕ್ಷದಲ್ಲಿ  ಉನ್ನತ ಮಟ್ಟಕ್ಕೆ ಏರಿಸುವ ಮೆಟ್ಟಿಲು. ಮೇವಾನಿ ಇನ್ನೂ ಮೇಲೇರಿ ಪಕ್ಷದಲ್ಲಿ ಭಾರತವನ್ನು ಕೋಮು - ಬಹುಮತ - ಅಲ್ಪಮತ -ಜಾತಿಗಳ ಆಧಾರದ ಮೇಲೆ ವಿಭಜಿಸುವರ ವಿರುಧ್ಧ ತಮ್ಮ  ಕಟು ಟೀಕೆಯನ್ನು ಶುರು ಮಾಡುವರು. ಚುನಾವಣೆ ಹತ್ತಿರವಾಗಿದ್ದು ಮೇವಾನಿ ವಿರೋಧ ಪಕ್ಷವು ಹುಡುಕುತ್ತಿರುವ ಮತ್ತು ಪಾರ್ಟಿಯು ಜನರ ಮು೦ದೆ ಪ್ರಸ್ತುತಪಡಿಸುವ  ಮುಖವಾಗ ಬಹುದು. 


ಮೇವಾನಿಗೆ ಬೀದಿ ಕಲಹ ಮತ್ತು ಸರ್ಕಾರದೊ೦ದಿಗೆ  ಹೋರಾಟ ಹೊಸದೇನಲ್ಲ. ಅವರು ರಾಹುಲ್ ಗಾ೦ಧಿಯನ್ನು ದಲಿತರ ಬಗ್ಗೆ ನಿಜ ಕಾಳಜಿ ಇರುವ ಮು೦ದಾಳುವಾಗಿ ಗುರುತಿಸುತ್ತಾ  ಅವರಲ್ಲಿ ಭರವಸೆ ಇಟ್ಟುಕೊ೦ಡಿದ್ದಾರೆ. ಎರಡು ಆಕ್ರಮಣಗಳನ್ನು   ಮೇವಾನಿ ಎದುರಿಸಬೇಕಾಗಿದೆ - ಬಿ ಜೆ ಪಿ ಮತ್ತು ಕಾ೦ಗ್ರೆಸ್. ಇವೆರಡನ್ನು ಅವರು ಗೆದ್ದರೆ, ಮು೦ದಿನ ಅನೇಕ ದಶಕಗಳು ಭಾರತವನ್ನು ಮು೦ದುವರಿಸುವ ಒಬ್ಬ ಮು೦ದಾಳುವನ್ನು ನಾವು ಮೇವಾನಿಯಲ್ಲಿ ಕಾಣಬಹುದು. 


ಸೂರಜ್ ಯೆ೦ಗ್ಡೆ ‘ಕಾಸ್ಟ್ ಮಾಟರ್ಸ್’ (‘CASTE MATTERS’)  ಪುಸ್ತಕದ ಲೇಖಕರು. 


ಇ೦ಡಿಯನ್ ಎಕ್ಸ್ಪ್ರೆಸ್. ದಿನಾ೦ಕ ೧ ಮೇ ೨೦೨೨


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು