ಸೂರಜ್ ಯೆಂಗ್ದೆ ಬರೆದಿರುವ 'ಕಾಸ್ಟ್ ಮ್ಯಾಟರ್ಸ್' ಪುಸ್ತಕ ವಿಮರ್ಶೆ:
ದಲಿತ ಪ್ರೀತಿ ಮತ್ತು ಸಂಭಾಷಣೆಗಳ ಒಂದು ಹೊಸ ಚೌಕಟ್ಟು
ದಿ ಹಿ೦ದು ಸೆಪ್ಟೆಂಬರ್ 21, 2019 17:07 IST
ಭಾರತದ ಪ್ರಗತಿಶೀಲ ಬ್ರಾಹ್ಮಣರು ಜಾತಿ ವಿರೋಧಿ ಕೆಲಸವನ್ನು ಯುಧ್ಧೋಪಾಧಿಯಲ್ಲಿ ಎ೦ದು ತೆಗೆದುಕೊಳ್ಳುವರು, ಕೇಳುತ್ತಾರೆ ವಿದ್ವಾ೦ಸ-ಕಾರ್ಯಕರ್ತ ಸೂರಜ್ ಯೆ೦ಗ್ಡೆ
ಜಾತಿ ಕಲ್ಪನೆಯನ್ನು ತೊಡಗಿಸದೆ ಭಾರತದ ಯಾವುದೇ ಆಕಾರದ ಬಗ್ಗೆ ಅರ್ಥಪೂರ್ಣ ಸಂಭಾಷಣೆ ನಡೆಸಲು ಸಾಧ್ಯವೇ ? ರಾಜಕೀಯ, ಸಂಸ್ಕೃತಿ, ಸಮಾಜ, ಇತಿಹಾಸ, ಮಾಧ್ಯಮ, ಶಿಕ್ಷಣ, ಕ್ರೀಡೆ, ಆರ್ಥಿಕತೆ, ವ್ಯಾಪಾರ - ಈ ಯಾವ ಕ್ಷೇತ್ರ ಜಾತಿ ವ್ಯವಸ್ಥೆಯ ಗ್ರಹಣಾಂಗಗಳಿಂದ ಮುಟ್ಟದೆ ಇಲ್ಲ ? ತಮ್ಮ ಪುಸ್ತಕ ‘Caste Matters’ - ‘ಕಾಸ್ಟ್ ಮಾಟರ್ಸ್’ - ಜಾತಿ ವಿಷಯಗಳು ಅಥವಾ ಜಾತಿ ಮುಖ್ಯ - ನಲ್ಲಿ ಸೂರಜ್ ಯೆ೦ಗ್ಡೆ ಖಚಿತವಾದ ಉತ್ತರ ನೀಡುತ್ತಾರೆ - ಋಣಾತ್ಮಕವಾಗಿ.
ಸೂರಜ್ ಯೆಂಗ್ಡೆ ಅವರು ಅಮೆರಿಕದ ಹಾರ್ವರ್ಡ್ ಕೆನಡಿ ಸ್ಕೂಲಿನೊ೦ದಿಗೆ ಸಂಯೋಜಿತವಾಗಿರುವ ವಿದ್ವಾಂಸ-ಕಾರ್ಯಕರ್ತರಾಗಿದ್ದಾರೆ. ‘ಕಾಸ್ಟ್ ಮ್ಯಾಟರ್ಸ’ ಪುಸ್ತಕದಲ್ಲಿ ಅವರು ಸಾಂಪ್ರದಾಯಿಕ ತತ್ವಶಾಸ್ತ್ರೀಯ ಪರಿಶೀಲನೆ, ಆತ್ಮಚರಿತ್ರೆ, ಇತಿಹಾಸ, ಸಾಮಾಜಿಕ ಮಾನವಶಾಸ್ತ್ರ ಮತ್ತು ಸಾಂಸ್ಕೃತಿಕ ಅಧ್ಯಯನಗಳನ್ನು ಜೋಡಿಸಿ ಸಂವಾದಾತ್ಮಕ ನಿರೂಪಣೆಯ ಮೂಲದ ಒ೦ದು ಶಕ್ತಿಪೂರ್ಣ ವಾಗ್ದಾಳಿಯನ್ನು ನಿರೂಪಿಸಿದ್ದಾರೆ ಏಕ ಕಾರ್ಯಕ್ರಮಕ್ಕಾಗಿ : ಜಾತಿಯ ಬಗೆಗಿನ ಸ೦ಭಾಷಣೆಯನ್ನು ದಲಿತ-ಬಹುಜನರಿಗೆ (ಮೀಸಲಾತಿಗಳು ಮತ್ತು ದೌರ್ಜನ್ಯಗಳಂತಹ) ಸಂಭವಿಸುವ ವಿಷಯಗಳ ಚೌಕಟ್ಟನಿ೦ದ ವರ್ಗಾಯಿಸಿ ಮೇಲ್ಜಾತಿಗಳು ಸಂರಕ್ಷಿಸುವ ಮತ್ತು ಪ್ರಯೋಜನವನ್ನು ಪಡೆಯುವ ಆದರೆ ಅಪರೂಪವಾಗಿ ಒಪ್ಪಿಕೊಳ್ಳುವ ವಿಷಯಕ್ಕೆ ಬದಲಾಯಿಸುವದು.
'ದಲಿತ ಅಸ್ತಿತ್ವ’
ಆರಂಭಿಕ ಅಧ್ಯಾಯ, 'ದಲಿತನಾಗಿರುವುದು', ಭಾಗ-ಅಸ್ತಿತ್ವದ, ಭಾಗಶಃ-ಸಮಾಜ ಶಾಸ್ತ್ರ ಆಧಾರಿತ 'ದಲಿತ ಇರುವಿಕೆ’ಯ ವಿಚಾರಣೆಯೊಂದಿಗೆ ಪುಸ್ತಕದ ಭಾವವನ್ನು ನಿರ್ಧರಿಸುತ್ತದೆ. "ನಾನು ದ್ವೈತೀಯಕ ಮತ್ತು ಬ್ರಾಹ್ಮಣ ಮತ್ತು ಅವನ ಸರ್ವಲೌಕಿಕತ್ವ ಪ್ರಾಥಮಿಕ" ಎಂಬಂತೆ ಜಗತ್ತಿನಲ್ಲಿ ಬದುಕಲು ನಾನು ಒತ್ತಾಯಿಸಲ್ಪಟ್ಟಿದ್ದೇನೆ ಎಂದು ಯೆಂಗ್ಡೆ ಬರೆಯುತ್ತಾರೆ. ಹೈಡೆಗ್ಗರ್ ಮತ್ತು ಸಾರ್ತ್ರೆ ಅವರಿಂದ ಸ್ಫೂರ್ತಿ ಪಡೆದ ಯೆಂಗ್ಡೆ ದಲಿತರ ಸ್ಥಾನವನ್ನು ಮತ್ತು ದಲಿತರ ಕಾಲವನ್ನು ಅಳಿಸಿಹಾಕುವ ಮೂಲಕ ಜಾತಿ ಸಮಾಜವು 'ದಲಿತ ಜೀವಿ'ಯ ಅನ್ಯತೆಯನ್ನು ಜಾರಿಗೊಳಿಸುತ್ತದೆ ಎಂದು ವಾದಿಸುತ್ತಾರೆ.
ಉದಾಹರಣೆಗೆ, ಮುಖ್ಯವಾಹಿನಿಯ ಭಾರತೀಯ ಇತಿಹಾಸವು ದಲಿತ ಸ್ವಾತಂತ್ರ್ಯ ಹೋರಾಟಗಾರರಿಗೆ ಅತಿ ಕಡಿಮೆ ಸ್ಥಳವನ್ನು ಒದಗಿಸಿದೆ. ಯೆಂಗ್ಡೆ ಅವರು ಪೇಶ್ವೆ ಬಾಜಿ ರಾವ್ II ರ ಮನೆಯಲ್ಲಿ ಜನಿಸಿದ ಬ್ರಾಹ್ಮಣ ಲಕ್ಷ್ಮಿ ಬಾಯಿ ಮತ್ತು ಕೋಸಿ ಜಾತಿಯಲ್ಲಿ ಜನಿಸಿದ ದಲಿತ ಮಹಿಳೆ ಝಲ್ಕರಿ ಬಾಯಿಯ ಅದ್ಭುತ ವೈದೃಶ್ಯವನ್ನು ನೀಡುತ್ತಾರೆ. ಲಕ್ಷ್ಮಿ ಬಾಯಿಯನ್ನು ಬ್ರಿಟಿಷರನ್ನು ವಿರೋಧಿಸಿದ್ದಕ್ಕಾಗಿ ನ್ಯಾಯಯುತವಾಗಿ ಆಚರಿಸಲಾಗುತ್ತದೆ, "ಅವಳ ಸಲಹೆಗಾರ ಮತ್ತು ಸೈನಿಕ" ಝಲ್ಕರಿ ಬಾಯಿ ಅವರು ಲಕ್ಷ್ಮಿ ಬಾಯಿಯಂತೆ ವೇಷ ಧರಿಸಿ ಮತ್ತು ವಾಸ್ತವವಾಗಿ ಜನರಲ್ ಹ್ಯೂ ರೋಸ್ ನೇತೃತ್ವದ ಬ್ರಿಟಿಷ್ ಸೈನ್ಯದೊಂದಿಗೆ ಹೋರಾಡಿದರು, ಇದರಿ೦ದ ಆಕೆಯ ರಾಣಿ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. "ಬ್ರಾಹ್ಮಣೀಯ ಇತಿಹಾಸಕಾರರು ಲಕ್ಷ್ಮಿ ಬಾಯಿಯ ಸ್ಮರಣೆಯನ್ನು ಹುತಾತ್ಮರಾಗಿ ಉಳಿಸಿಕೊಂಡರು ಮತ್ತು ಝಲ್ಕರಿ ಬಾಯಿಯನ್ನು ನಿರ್ಮೂಲನೆ ಮಾಡಿದರು" ಎಂದು ಯೆಂಗ್ಡೆ ಹೇಳುತ್ತಾರೆ. ಈ ಕಥೆಗಳು "ದಬ್ಬಾಳಿಕೆಯ ವಿರುದ್ಧ ಹೋರಾಡಲು ದಲಿತರನ್ನು ಪ್ರೇರೇಪಿಸುತ್ತದೆ ಮತ್ತು ದಲಿತ ದಂಗೆಯನ್ನು ಉಂಟುಮಾಡುತ್ತದೆ" ಎಂಬ ಭಯದಿಂದ ಇಂತಹ ಅಳಿಸುವಿಕೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ ಎಂದು ಅವರು ಸೂಚಿಸುತ್ತಾರೆ.
ಪುಸ್ತಕದ ಹೆಚ್ಚು ಸ್ಫೂರ್ತಿಯುತ ಕೆಲವು ವಿಭಾಗಗಳು "ದಲಿತ ಪ್ರೀತಿ"ಗೆ ಸಂಬಂಧಿಸಿವೆ. ಯೆಂಗ್ಡೆಯವರಿಗೆ, ದಲಿತ ಪ್ರೀತಿಯು ಅತ್ಯಂತ ಪ್ರಬಲವಾದ "ಜಾತಿ ರೋಗಕ್ಕೆ ಪ್ರತಿವಿಷ" ಆಗಿದೆ. ಅವರು ಬರೆಯುತ್ತಾರೆ, “ನಾವು ಭಾರತದಲ್ಲಿ ವಿವಾಹಗಳನ್ನು 'ನಿಯೋಜಿತ' ಮಾಡಿರುವುದು ಪ್ರಾಥಮಿಕವಾಗಿ ದಲಿತ ಪ್ರೀತಿಯ ಭಯದಿಂದಾಗಿ, ಅದು ನ್ಯಾಯ, ಸಹಾನುಭೂತಿ, ಕ್ಷಮೆಯ ಆದರ್ಶಗಳನ್ನು ಚುಚ್ಚುವ ಸಾಮರ್ಥ್ಯವನ್ನು ಹೊಂದಿದೆ ... ಮುಚ್ಚಿದ ಸಾಂಪ್ರದಾಯಿಕ ಮನಸ್ಸುಗಳಿಗೆ; ಆದ್ದರಿಂದ, ಪೂರ್ವಾಗ್ರಹ ಪೀಡಿತ ಸಮಾಜದಿಂದ ಇದನ್ನು ಬಹಿಷ್ಕರಿಸಲಾಗಿದೆ.” ಪ್ರಗತಿಪರ ಸವರ್ಣರು ಜಾತಿ ವ್ಯವಸ್ಥೆಯ ವಿವಿಧ ಅಂಶಗಳನ್ನು ವಿಮರ್ಶಿಸಿದ್ದರೆ, ಜಾತಿಯಿಂದ ಸಮಾಜ ಮತ್ತು ಅದರ ವ್ಯಕ್ತಿಗಳ ಮೇಲೆ ಉಂಟಾದ ಕೆಟ್ಟ ಹಾನಿಯ - ಪ್ರೀತಿಯನ್ನು ನೀಡುವ ಮತ್ತು ಸ್ವೀಕರಿಸುವ ಅವರ ಸಾಮರ್ಥ್ಯದ ಕುಗ್ಗುವಿಕೆ - ಬಗ್ಗೆ ಕಟುವಾಗಿ ಬರೆದಿರುವವರು ದಲಿತ-ಬಹುಜನರು. ಹೀಗಿರುವಾಗ, ಭಾರತವು ಇತ್ತೀಚೆಗೆ ಕಂಡುಹಿಡಿದಂತೆ, ಅನೇಕರ ಹೃದಯಗಳನ್ನು ಇಷ್ಟು ವೇಗವಾಗಿ, ಇಷ್ಟು ದ್ವೇಷದಿಂದ ತುಂಬುವುದು ಇಷ್ಟು ಸುಲಭ ಎಂದು ತೋರುತ್ತಿರುವುದು ಆಶ್ಚರ್ಯವೇ?
ದಲಿತ ಬಂಡವಾಳಶಾಹಿ ವಿಷಯದ ಅಧ್ಯಾಯವು ಮಾರುಕಟ್ಟೆಯು ದಲಿತರನ್ನು ಜಾತಿ ದಬ್ಬಾಳಿಕೆಯಿಂದ ಬಿಡುಗಡೆ ಮಾಡಬಲ್ಲದು ಎಂಬ ಮಿಥ್ಯೆಯನ್ನು ಸ್ಫೋಟಿಸುತ್ತದೆ. ಅದು ಸಾಧ್ಯವಾಗದಿರಲು ಎರಡು ಕಾರಣಗಳು. ಮೊದಲನೆಯದಾಗಿ, ಭಾರತದಲ್ಲಿ ಬಂಡವಾಳಶಾಹಿ ಯಾವಾಗಲೂ ಈಗಾಗಲೇ ಜಾತಿ-ಪ್ರವೃತ್ತಿಯಾಗಿದೆ. ಭಾರತೀಯ ಬಂಡವಾಳವು ಅಗಾಧವಾಗಿ ಬನಿಯಾ-ಬ್ರಾಹ್ಮಣ ಬಂಡವಾಳವಾಗಿದೆ ಮತ್ತು ಅದರ ಸಂಗ್ರಹಣೆಯ ವಿಧಾನಗಳು ಜಾತಿಯ ಗಡಿಗಳನ್ನು ಅನುಸರಿಸುತ್ತವೆ. ಎರಡನೆಯದಾಗಿ, ವಸ್ತು ಯಶಸ್ಸಿನಿಂದ ಪಡೆದ ಮೇಲ್ಮುಖ ಸಾಮಾಜಿಕ ಚಲನಶೀಲತೆ - ದಲಿತ ಬಂಡವಾಳಶಾಹಿ ಕನಸು - ಸಾಮಾಜಿಕ ಸಂಬಂಧಗಳ ಅಸ್ತಿತ್ವದ ಮೇಲೆ ಆಧಾರಿತವಾಗಿದೆ. ಬಂಡವಾಳಶಾಹಿ ಸಮಾಜದಲ್ಲಿ, ಈ ಸಂಬಂಧವು ವರ್ಗ ವ್ಯತ್ಯಾಸಗಳನ್ನು ಆಧರಿಸಿದೆ. ಜಾತಿ ಸಮಾಜದಲ್ಲಿ, ಸಾಮಾಜಿಕ ಸಂಬಂಧಗಳ ಕ್ಷೇತ್ರವು ಒಬ್ಬರ ಸ್ವಂತ ಜಾತಿಯ ಸದಸ್ಯರಿಗೆ ಸೀಮಿತವಾಗಿದೆ. ಜಾತಿಯ ಹೊರಗಿನ ಸಂಬಂಧಗಳು ಶೋಷಕವಲ್ಲದಿದ್ದರೆ, ಅವು ವ್ಯವಹಾರಿಕವಾಗಿರುತ್ತವೆ, ಸಾಮಾಜಿಕವಾಗಿರುವುದಿಲ್ಲ. ಆದ್ದರಿಂದ ವರ್ಗದ ಬದಲಾವಣೆಯು ಜಾತಿ ಸಮಾಜದಲ್ಲಿ ಸಾಮಾಜಿಕ ಸಂಬಂಧಗಳಲ್ಲಿ ಬದಲಾವಣೆಯನ್ನು ಉಂಟುಮಾಡುವುದು ಅಸಾಧ್ಯ. ದಲಿತ ಬಂಡವಾಳಶಾಹಿ, ಯೆಂಗ್ಡೆ ಬರೆಯುತ್ತಾರೆ, ಕೇವಲ "ದಮನಿತ ವರ್ಗವನ್ನು ಬಂಡವಾಳಶಾಹಿ ಕನಸುಗಳ ಭರವಸೆಗಳಿಗೆ ಸೆಳೆಯುವ ಒಂದು ಬುದ್ಧಿವಂತ ಸಂಚು".
ಕ್ರಿಯೆಗೆ ಕರೆ
ಕೊನೆಯ ಅಧ್ಯಾಯ, 'ಬ್ರಾಹ್ಮಣೀಯತೆಯ ವಿರುದ್ಧ ಬ್ರಾಹ್ಮಣರು' ಬಹುತೇಕ ಕ್ರಮಕ್ಕೆ ಕರೆಯಾಗಿದೆ . ಒಬ್ಬ ದಲಿತನಿ೦ದ ಈ ಕರೆ ಕೇವಲ ಎಲ್ಲಾ ಬ್ರಾಹ್ಮಣರಿಗೆ ಮಾತ್ರವಲ್ಲ, ತಮ್ಮ ಜಾತಿ ಗುರುತಿಗೆ ಸಂಬಂಧಿಸಿದ ಬ್ರಾಹ್ಮಣ ಸವಲತ್ತುಗಳನ್ನು ಅನುಭವಿಸುವ ಯಾರಿಗೇ ಆದರೂ ಹೊರಡುತ್ತಿದೆ. 19 ನೇ ಶತಮಾನದ ಅಮೆರಿಕಾದಲ್ಲಿ ಗುಲಾಮಗಿರಿಯ ನಿರ್ಮೂಲನೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಬಿಳಿಯರ ಉದಾಹರಣೆಯನ್ನು ಚಿತ್ರಿಸುತ್ತಾ, ಭಾರತದ ಪ್ರಗತಿಪರ ಬ್ರಾಹ್ಮಣರು ಯಾವಾಗ ಯುದ್ಧದ ರೀತಿಯಲ್ಲಿ ಜಾತಿ ವಿರೋಧಿ ಕೆಲಸವನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಯೆಂಗ್ಡೆ ಕಾತರ ಪಡುತ್ತಾರೆ. ಅವರು 'ನ್ಯಾಪ್‌ಸ್ಯಾಕ್ ಆಂಟಿ-ರೇಸಿಸಮ್ ಗ್ರೂಪ್' ಅನ್ನು ಉದಾಹರಣೆಯಾಗಿ ಉಲ್ಲೇಖಿಸುತ್ತಾರೆ, ಅ೦ದರೆ ಅಮೆರಿಕದಲ್ಲಿ ಬಿಳಿ ಉದಾರವಾದಿಗಳು ಇತರ ಬಿಳಿಯರಿಗಾಗಿ ಅವರು ಎಲ್ಲೆಡೆ ಸಾಗಿಸುವ ಬಿಳಿಯ ಸವಲತ್ತಿನ 'ನ್ಯಾಪ್‌ಸ್ಯಾಕ್'ಗೆ - ಹಸುಬೆ ಚೀಲಕ್ಕೆ- ಸಂವೇದನಾಶೀಲರನ್ನಾಗಿಸಲು ಆಯೋಜಿಸಿದ ಕಾರ್ಯಾಗಾರ. ಆದರೆ "ವ್ಯತಿರಿಕ್ತವಾಗಿ, ಬ್ರಾಹ್ಮಣ ಪ್ರಪಂಚದ ಸವಲತ್ತು-ಜಾತಿ ನಾಗರಿಕರು ಜಾತಿಯನ್ನು ಚರ್ಚಿಸುವಾಗ ಸವಲತ್ತುಗಳ ಬಗ್ಗೆ ವಿರಳವಾಗಿ ಮಾತನಾಡುತ್ತಾರೆ ಅಥವಾ ಪ್ರಶ್ನಿಸುತ್ತಾರೆ - ಕೆಲವರ ಹೊರತಾಗಿ."
ಕಟ್ಟುನಿಟ್ಟಾಗಿ ಸಂಶೋಧಿಸಿ ಮತ್ತು ನಿಕಟವಾಗಿ ವಾದಿಸಿದ, ಕಾಸ್ಟ್ ಮಾಟರ್ಸ್ ಪುಸ್ತಕವು ತಾರತಮ್ಯ ಅಧ್ಯಯನದಲ್ಲಿ ಗಮನಾರ್ಹ ಹಸ್ತಕ್ಷೇಪವಾಗಿದೆ. ಸವರ್ಣ ಓದುಗರಲ್ಲಿ, ಸಂಪ್ರದಾಯವಾದಿಗಳು ಇದನ್ನು ಕೆರಳಿಸುವಂತೆ ಕ೦ಡರೆ ಪ್ರಗತಿಪರರು ಇದು ಬೆಳಕು ತೋರಿಸುವಂತೆ ಕಾಣುವರು. ಆದಾಗ್ಯೂ, ಜಾತಿ ಸಮಾಜದಿಂದ ಹೊರಹಾಕಲ್ಪಟ್ಟ ಪ್ರತಿಯೊಬ್ಬರಿಗೂ ಇದೊ೦ದು ಸ್ಪೂರ್ತಿದಾಯಕ ಓದುವಿಕೆ ಎಂಬುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ.
Caste Matters; Suraj Yengde, Viking/Penguin, ₹599.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ