ಹಿಕಲ್ ಉಪನ್ಯಾಸ:೨೧ ನೇ ಶತಮಾನದಲ್ಲಿ ವಿಶ್ವ ಅಭಿವೃದ್ಧಿಗಾಗಿ ಹೋರಾಟ: ಬಂಡವಾಳಶಾಹಿ, ಸಾಮ್ರಾಜ್ಯಶಾಹಿ ಮತ್ತು ಪರಿಸರ-ಸಮಾಜವಾದ



ಸಿರಿವಂತ ರಾಷ್ಟ್ರಗಳು ಮತ್ತು ಇತರರು- ವಿರೋಧಾಭಾಸಗಳು : ಈ ಚರ್ಚೆಯ ವಿಷಯ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ, ‘ಜಾಗತಿಕ ದಕ್ಷಿಣ’ದಲ್ಲಿ(ಅಂದರೆ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ;  ಶ್ರೀಮಂತ ಮತ್ತು ಹೆಚ್ಚು ಕೈಗಾರಿಕೀಕರಣಗೊಂಡ ದೇಶಗಳು ಉತ್ತರ ಗೋಳಾರ್ಧದಲ್ಲಿವೆ, ಇವನ್ನು ‘ಜಾಗತಿಕ ಉತ್ತರ’  ಎ೦ದು ಕರೆಯುವ ರೂಢಿ ಇದೆ. ) ಪರಿಹಾರವಿಲ್ಲದೆ ಕಂಡುಬರುತ್ತಿರುವ ಸಾಮೂಹಿಕ ಅಭಾವ ಮತ್ತು ಅಭಿವೃದ್ಧಿಯ ಹಿಂದುಳಿದಿರುವಿಕೆಯ ನಡೆಯುತ್ತಿರುವ ಬಿಕ್ಕಟ್ಟುಗಳು, ಹಾಗೂ ವಿಶ್ವ ಮಟ್ಟದಲ್ಲಿ ಘಟಿಸುತ್ತಿರುವ ಅಸಮಾನತೆ ಮತ್ತು ಪರಿಸರ ಕುಸಿತ.

 ಇದನ್ನು ಐತಿಹಾಸಿಕವಾಗಿ ರೂಪಿಸುವಾಗ, ಈ ಬಿಕ್ಕಟ್ಟುಗಳನ್ನು ಬಂಡವಾಳಶಾಹಿಯಿಂದ ಸೃಷ್ಟಿಸಲ್ಪಟ್ಟ ಮತ್ತು ಶಾಶ್ವತಗೊಳಿಸಲ್ಪಟ್ಟದ್ದಾಗಿ  ಮತ್ತು ಬಂಡವಾಳ ಸಂಗ್ರಹಣೆಗೆ ಆಧಾರವಾಗಿರುವ ಸಾಮ್ರಾಜ್ಯಶಾಹಿ ಚಲನಶೀಲತೆಯಿಂದ ನಿರೂಪಿಸಲ್ಪಟ್ಟಿವೆ ಎಂದು ನಾವು ಅರ್ಥಮಾಡಿಕೊಳ್ಳಬೇಕು. 

ನಮ್ಮ ಪ್ರಸ್ತುತ ಕ್ಷಣವನ್ನು ವಿವರಿಸಲು, ನಮ್ಮ ಸುತ್ತಲಿನ ಪ್ರಪಂಚವನ್ನು ನೋಡಿದಾಗ, ನಾವು ಅಸಾಧಾರಣ ವಿರೋಧಾಭಾಸವನ್ನು ನೋಡುತ್ತೇವೆ. ಒಂದೆಡೆ, ವಿಶ್ವ ಆರ್ಥಿಕತೆ   ದಿಗ್ಭ್ರಮೆಗೊಳಿಸುವ ಉತ್ಪಾದನೆಯ ಮಟ್ಟವನ್ನು ತಲುಪಿದೆ. ಅದೇ ಸಮಯ  ಆರ್ಥಿಕ ಬೆಳವಣಿಗೆಯಿಂದಾಗಿ ನೈಸರ್ಗಿಕ ಸಂಪನ್ಮೂಲಗಳ  ಮತ್ತು ಇಂಧನದ  ಅನಿಯಂತ್ರಿತ ಬಳಕೆಯಿಂದಾಗಿ  ಅಪಾಯಕಾರಿ ಹವಾಮಾನ ಬದಲಾವಣೆ ಮತ್ತು ಪರಿಸರ ವಿಘಟನೆಗೆ ಕಾರಣವಾಗುತ್ತಿದೆ.  

ಹವಾಮಾನ ಉದ್ದೇಶಗಳ ವಿಷಯಕ್ಕೆ ಸೇರಿದಂತೆ  ನಮ್ಮ ಜೀವನದುದ್ದಕ್ಕೂ ನಮ್ಮ ಆಡಳಿತ ವರ್ಗಗಳು ಭರವಸೆಯ ಮೇಲೆ ಭರವಸೆಯನ್ನು ಮುರಿಯುವುದನ್ನು ನಾವು ನೋಡುತ್ತಿದ್ದೇವೆ. ಇಂಗಾಲ (ಕಾರ್ಬನ್) ಮುಕ್ತೀಕರಣದತ್ತ ಈಗಿನ ಪ್ರಯತ್ನಗಳು  ತುಂಬಾ ನಿಧಾನವಾಗಿವೆ. ಮತ್ತು ನಮ್ಮ ರಾಜಕೀಯ ಗಣ್ಯರು ಈಗ ಮೂರು ಡಿಗ್ರಿಗಳಷ್ಟು ಬೆಚ್ಚಗಾಗುವ ಗ್ರಹದ ಅವ್ಯವಸ್ಥೆಗೆ ಸಿದ್ಧರಾಗಲು ನಮ್ಮನ್ನು ಒತ್ತಾಯಿಸುತ್ತಿದ್ದಾರೆ. ಇದು ವಿಶೇಷವಾಗಿ ‘ಜಾಗತಿಕ ದಕ್ಷಿಣ’ದ ಪ್ರದೇಶಗಳಲ್ಲಿ ಮಾನವ ಮತ್ತು ಮಾನವೇತರ ಜೀವನಕ್ಕೆ ವಿನಾಶಕಾರಿ ಎಂದು ನಮಗೆ ತಿಳಿದಿದೆ. 

ಆದರೆ ಅದೇ ಸಮಯದಲ್ಲಿ, ವಿಶ್ವ ಆರ್ಥಿಕತೆಯ ಅಸಾಧಾರಣ ಉತ್ಪಾದಕ ಸಾಮರ್ಥ್ಯಗಳ ಹೊರತಾಗಿಯೂ, ಶತಕೋಟಿ ಜನರು ಮೂಲಭೂತ ಸರಕುಗಳು ಮತ್ತು ಸೇವೆಗಳ ಸೌಲಭ್ಯದಿಂದ  ವಂಚಿತರಾಗಿದ್ದಾರೆ. ಮಾನವ ಜನಸಂಖ್ಯೆಯ ೪೦% ಕ್ಕಿಂತ ಹೆಚ್ಚು ಜನರು ಆರೋಗ್ಯಕರ ಆಹಾರವನ್ನು ಪಡೆಯಲು  ಅಸಮರ್ಥರಾಗಿದ್ದಾರೆ.  ೭೦% ರಷ್ಟು ಜನರಿಗೆ ಅಗತ್ಯವಾದ  ಆರೋಗ್ಯ ಸೇವೆಗಳು ಲಭ್ಯವಿಲ್ಲ.  ಆರ್ಥಿಕ ಸ್ವತ್ತುಗಳ  ಸಾಮ್ರಾಜ್ಯಶಾಹಿ  ವರ್ಗದಿಂದಾಗುವ ಹೀರಿಕೊಳ್ಳುವಿಕೆ ಮತ್ತು ಸ್ವಾಮ್ಯದಿಂದಾಗಿ ಬಡತನವನ್ನು ಶಾಶ್ವತಗೊಳಿಸುವದನ್ನು   ಮತ್ತು  ಸಾಮಾಜಿಕ  ಆರ್ಥಿಕ ಮತ್ತು ರಾಜಕೀಯ ಶಕ್ತಿಯ ಹೊರವಲಯದಲ್ಲಿರುವ ಜನರಲ್ಲಿ   ಸ್ಪಷ್ಟವಾಗಿ ಅತ್ಯಂತ ತೀವ್ರವಾಗಿರುವ ಅಭಾವವನ್ನು  ನಾವು ಕಾಣುತ್ತೇವೆ.   ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿಯೂ ಇದು ಸ್ಪಷ್ಟವಾಗಿದೆ. ಅಮೆರಿಕದಲ್ಲಿ ಸುಮಾರು ಅರ್ಧದಷ್ಟು ಜನಸಂಖ್ಯೆಯು ಆರೋಗ್ಯ ಸೇವೆಗಳ ವೆಚ್ಚವನ್ನು ಭರಿಸಲು   ಸಾಧ್ಯವಿಲ್ಲದೆ  ಬಳಲುತ್ತಿದ್ದಾರೆ . ಬ್ರಿಟನ್ನಿನಲ್ಲಿ , ೪೩ ಲಕ್ಷ  ಮಕ್ಕಳು ಬಡತನದಲ್ಲಿ ವಾಸಿಸುತ್ತಿದ್ದಾರೆ. ಯುರೋಪಿಯನ್ ಒಕ್ಕೂಟದಲ್ಲಿ, ೯.೫ ಕೋಟಿ   ಜನರು, ಅಂದರೆ ಐದರಲ್ಲಿ ಒಬ್ಬರಿಗೆ ಯೋಗ್ಯವಾದ ವಸತಿ ಮತ್ತು ಪೌಷ್ಟಿಕ ಆಹಾರದಂತಹ ವಿಷಯಗಳಿಗೆ ಖಚಿತವಾದ ಲಭ್ಯತೆ ಇಲ್ಲ. 

ಇದರ ಬಗ್ಗೆ ಯೋಚಿಸಿ. ಈ ಸಮಸ್ಯೆಗಳನ್ನು  ಕಷ್ಟಕರ ಮತ್ತು ಪರಿಹರಿಸಲಾಗದವು ಎಂದು ಪ್ರಸ್ತುತಪಡಿಸಲಾಗುತ್ತದೆ , ಆದರೆ ವಾಸ್ತವವಾಗಿ, ಅವು ಹಾಗಲ್ಲ. ಅವುಗಳನ್ನು ತ್ವರಿತವಾಗಿ ಮತ್ತು ಸುಲಭವಾಗಿ ಪರಿಹರಿಸಬಹುದು. ಅದನ್ನು ಸಾಧಿಸಲು  ನಮಗೆ ಸಾಕಷ್ಟು ಉತ್ಪಾದಕ ಸಾಮರ್ಥ್ಯವಿದೆ. ಆದರೆ ನಮ್ಮ ಪ್ರಸ್ತುತ ಆರ್ಥಿಕ ವ್ಯವಸ್ಥೆಯು ಮೂಲಭೂತವಾಗಿ ಇದನ್ನು ನೆರವೇರಿಸಲು  ಅಸಮರ್ಥವಾಗಿದೆ. ಇವು ಬಂಡವಾಳಶಾಹಿಯ ಮೂಲಭೂತ ವಿರೋಧಾಭಾಸಗಳಾಗಿವೆ.  ನಮ್ಮ ಆಡಳಿತ ವರ್ಗಗಳು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ಇರುವಂತೆಯೇ  ಉಳಿಸಿಕೊಳ್ಳುತ್ತಿದ್ದರೆ  ಇವುಗಳನ್ನು ಸರಿಪಡಿಸಲು ಸಾಧ್ಯವಿಲ್ಲ .  ಅವರ ಸ್ಪಷ್ಟ ವೈಫಲ್ಯವು ಈಗ ಅಸಾಧಾರಣ ಸಾಮಾಜಿಕ ಕ್ರಾಂತಿ ಮತ್ತು ಬಲಪಂಥೀಯ ಪುನರುಜ್ಜೀವನಕ್ಕೆ ಕಾರಣವಾಗುತ್ತಿದೆ. ವಿಷಯಗಳನ್ನು ಇನ್ನಷ್ಟು ಹದಗೆಡಿಸಲು, ಅಮೆರಿಕ ಮತ್ತು ಅದರ ಮಿತ್ರಪಕ್ಷಗಳು ಚೀನಾದ ವಿರುದ್ಧ ಆಕ್ರಮಣವನ್ನು ಹೆಚ್ಚಿಸುತ್ತಿವೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದರೂ ಮತ್ತು ಸ್ಥಾಪಿತ ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದ್ದರೂ, ಪ್ಯಾಲೆಸ್ಟೈನ್‌ನಲ್ಲಿ ಜನಾಂಗೀಯ ಹತ್ಯೆಯ ಅಪರಾಧಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತಿವೆ . 

ಆಂಟೋನಿಯೊ ಗ್ರಾಮ್ಸಿಯ ಮಾತುಗಳನ್ನು ಬಳಸಿದಲ್ಲಿ "The old world is dying, and the new world struggles to be born: now is the time of monsters."  "ಹಳೆಯ ಲೋಕ ಸಾಯುತ್ತಿದೆ, ಮತ್ತು ಹೊಸ ಲೋಕ ಹುಟ್ಟಲು ಹೆಣಗಾಡುತ್ತಿದೆ: ಇದು ಈಗ ರಾಕ್ಷಸರ ಕಾಲ." ಹಾಗಾದರೆ ಇದೆಲ್ಲ ಏಕೆ ನಡೆಯುತ್ತಿದೆ ಮತ್ತು ಮಾಡಬೇಕಾಡಿದದ್ದೇನು ?


ಪರಿಸರ ಬಿಕ್ಕಟ್ಟು, ಸಾಮೂಹಿಕ ಅಭಾವ, ಅಭಿವೃದ್ಧಿಯ ಕೊರತೆ ಮತ್ತು ಭೌಗೋಳಿಕ ರಾಜಕೀಯ ಹಿಂಸಾಚಾರದ ಚಲನಶೀಲತೆಯ ಬಿಕ್ಕಟ್ಟು ಇವೆಲ್ಲವೂ ಬಂಡವಾಳಶಾಹಿ ವಿಶ್ವ ಆರ್ಥಿಕತೆಯ ರಚನೆಯಿಂದ ಹೊರಡುವ  ಪರಿಣಾಮಗಳಾಗಿವೆ ಮತ್ತು ವಿಶ್ವ ವ್ಯವಸ್ಥೆಯ ವಿಶ್ಲೇಷಣೆಯ ಮೂಲಕ ಮಾತ್ರವೇ  ಸರಿಯಾಗಿ  ಅರ್ಥಮಾಡಿಕೊಳ್ಳಲ್ಪಡುತ್ತವೆ ಎಂದು ನಾನು ವಾದಿಸಲಿದ್ದೇನೆ.  ಆದರೆ ಪ್ರಾರಂಭವಾಗಿ ವಿಶ್ಲೇಷಣಾತ್ಮಕವಾಗಿ ನಾವೆಲ್ಲರೂ ಒಂದೇ ದೃಷ್ಟಿ ಸಾಧಿಸಲು  ಪ್ರಯತ್ನಿಸುತ್ತಾ  ಬಂಡವಾಳಶಾಹಿಯ ಸ್ವರೂಪದ ಬಗ್ಗೆ ಕೆಲವು ಪ್ರಮುಖ ಅವಲೋಕನಗಳೊಂದಿಗೆ ಪ್ರಾರಂಭಿಸುತ್ತೇನೆ.

ಬಂಡವಾಳಶಾಹಿಯ ನಿಜ ರೂಪ: ‘ ಬಂಡವಾಳಶಾಹಿ’ ಎಂಬ ಪದವನ್ನು ಕೇಳಿದಾಗ, ಸಾಮಾನ್ಯವಾಗಿ ವ್ಯವಹಾರಗಳು, ಮಾರುಕಟ್ಟೆಗಳಂತಹ ವಿಷಯಗಳ ಬಗ್ಗೆ ಜನರು ಯೋಚಿಸುತ್ತಾರೆ;  ಮತ್ತು ಖಾಸಗಿ ವ್ಯಕ್ತಿಗಳ ಮಧ್ಯೆ ನಡೆಯುವ  ವ್ಯಾಪಾರ , ಸ್ವಯಂಪ್ರೇರಣೆಯಿಂದ ಮಾಡುವ ಉತ್ಪಾದನೆ,  ಮತ್ತು ನ್ಯಾಯಯುತ ಮತ್ತು ತಟಸ್ಥ ರೀತಿಯಲ್ಲಿ ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವ ಚಿತ್ರಗಳು ಮನಸ್ಸಿನಲ್ಲಿ ರೂಪಗೊಳ್ಳುತ್ತವೆ.  ಇದು ಆರ್ಥಿಕ ಪಠ್ಯಪುಸ್ತಕಗಳು ಮತ್ತು ಜನಪ್ರಿಯ ಮಾಧ್ಯಮಗಳಲ್ಲಿ ಚಾಲ್ತಿಯಲ್ಲಿರುವ ನಿರೂಪಣೆಯಾಗಿದೆ. ಆದರೆ  ಇದು ಒಂದು ಮುಗ್ಧತೆಯ ನಿರೂಪಣೆ -  ಬಂಡವಾಳಶಾಹಿಯನ್ನು ಒಂದು ರೀತಿಯ ಸಾಮಾನ್ಯ ಸ್ವಾಭಾವಿಕ  ರೀತಿಯ ಆರ್ಥಿಕತೆಯಾಗಿ ಪ್ರತಿನಿಧಿಸಲಾಗುತ್ತದೆ. ಇದನ್ನು ಯಾರು ವಿರೋಧಿಸಬಹುದು? ಆದರೆ  ಈ ವಿವರಣೆ ವಾಸ್ತವತೆಗೆ ಸರಿಯಾಗಿಲ್ಲ ಎನ್ನುವದು ಸ್ವಯಂ-ಸ್ಪಷ್ಟ. 

 ವ್ಯವಹಾರಗಳು, ಮಾರುಕಟ್ಟೆಗಳು ಮತ್ತು ವ್ಯಾಪಾರವು ಬಂಡವಾಳಶಾಹಿಗಿಂತ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದವು  ಮತ್ತು ಹಲವು ವಿಭಿನ್ನ ರೂಪಗಳನ್ನು ಕಾಲ ಕಾಲಕ್ಕೆ ಪಡೆದುಕೊಂಡಿವೆ . ಬಂಡವಾಳಶಾಹಿ ಕೇವಲ ೫೦೦ ವರ್ಷಗಳಷ್ಟು ಹಳೆಯದು ಮತ್ತು ಇಲ್ಲಿ ನಮ್ಮ ಉದ್ದೇಶಗಳಿಗೆ ಪ್ರಸ್ತುತವಾದ ಹಲವಾರು ಪ್ರಮುಖ ಲಕ್ಷಣಗಳಿಂದ ಗುರುತಿಸಲ್ಪಟ್ಟಿದೆ. 

ಮೊದಲನೆಯದಾಗಿ, ಇದು ಮೂಲಭೂತವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಈ ವರ್ಣನೆ   ಸ್ವಲ್ಪ ವಿಚಿತ್ರವಾಗಿ ಕಾಣಿಸಬಹುದು ಏಕೆಂದರೆ ನಮ್ಮಲ್ಲಿ ಅನೇಕರು ಪ್ರಜಾಪ್ರಭುತ್ವದ  ರಾಜಕೀಯ ವ್ಯವಸ್ಥೆಗಳಲ್ಲಿ ವಾಸಿಸುತ್ತಿದ್ದೇವೆ.   ಈ ವ್ಯವಸ್ಥೆಗಳು ಅಸಮರ್ಪಕ ಮತ್ತು ಭ್ರಷ್ಟ ಎಂದು ಒಪ್ಪಿಕೊಂಡರೂ ಸಹ ಕಾಲಕಾಲಕ್ಕೆ ಜನತೆಯು ತಮ್ಮ ಸಾರ್ವಜನಿಕ ಅಧಿಕಾರಿಗಳನ್ನು ಚುನಾಯಿಸ ಬಹುದಾದ ಅವಕಾಶ, ಸೌಲಭ್ಯಗಳಿವೆ  ಆದರೆ ಆರ್ಥಿಕ ವ್ಯವಸ್ಥೆ,  ಉತ್ಪಾದನಾ ವ್ಯವಸ್ಥೆಗಳ  ವಿಷಯಗಳನ್ನು  ನೋಡಿದರೆ  , ಪ್ರಜಾಪ್ರಭುತ್ವದ ಸೋಗಾದರೂ  ಅಸ್ತಿತ್ವದಲ್ಲಿಲ್ಲ. ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಯಾರಿಗೆ ಇದೆ ? ಉತ್ಪಾದನೆಯನ್ನು ಬಂಡವಾಳವು ಅಗಾಧವಾಗಿ ನಿಯಂತ್ರಿಸುತ್ತದೆ. ಪ್ರಮುಖ ಹಣಕಾಸು ಸಂಸ್ಥೆಗಳು, ವಾಣಿಜ್ಯ ಬ್ಯಾಂಕುಗಳು, ದೊಡ್ಡ ನಿಗಮಗಳು ಮತ್ತು ಹೂಡಿಕೆ ಮಾಡಬಹುದಾದ ಆಸ್ತಿಗಳಲ್ಲಿ ಹೆಚ್ಚಿನದನ್ನು ಹೊಂದಿರುವ ೧% ಜನರು: ಇವರು ಮಾತ್ರ  ಏನನ್ನು ಉತ್ಪಾದಿಸಬೇಕು, ನಮ್ಮ ಸಾಮೂಹಿಕ ಶ್ರಮ ಮತ್ತು ನಮ್ಮ ಗ್ರಹದ ಸಂಪನ್ಮೂಲಗಳನ್ನು ಹೇಗೆ ಬಳಸಬೇಕು ಮತ್ತು ಇದೆಲ್ಲದರ  ಲಾಭ ಯಾರ ಕಿಸೆಗೆ ಸೇರುತ್ತದೆ  ಎಂಬುದನ್ನು ನಿರ್ಧರಿಸುತ್ತಾರೆ.

ಇದು ಬಂಡವಾಳಶಾಹಿಯ ಎರಡನೇ ನಿರ್ಣಾಯಕ ಲಕ್ಷಣಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಬಂಡವಾಳಕ್ಕೆ ಸಂಬಂಧಿಸಿದಂತೆ, ಉತ್ಪಾದನೆಯ ಉದ್ದೇಶ, ವಸ್ತುಗಳನ್ನು ಉತ್ಪಾದಿಸಲು ನಮ್ಮ ಎಲ್ಲಾ ಶ್ರಮ ಮತ್ತು ಸಂಪನ್ಮೂಲಗಳನ್ನು ಸಜ್ಜುಗೊಳಿಸುವ ಉದ್ದೇಶವು ವಾಸ್ತವವಾಗಿ ಮಾನವ ಅಗತ್ಯಗಳನ್ನು ಪೂರೈಸುವುದು ಅಥವಾ ಸಾಮಾಜಿಕ ಪ್ರಗತಿಯನ್ನು ಸಾಧಿಸುವುದು ಅಲ್ಲ, ಯಾವುದೇ ಪರಿಸರ ಗುರಿಗಳನ್ನು ಸಾಧಿಸುವುದಂತೂ ಅತಿ ದೂರ.   ಲಾಭವನ್ನು ಹೆಚ್ಚಿಸುವುದು ಮತ್ತು ಸಂಗ್ರಹಿಸುವುದು ಇದರ ಉದ್ದೇಶ. ಅದು ಪ್ರಮುಖ ಉದ್ದೇಶವಾಗಿದೆ. ವಾಸ್ತವವಾಗಿ, ನಿರ್ಣಾಯಕವಾಗಿ,  ಹೂಡಿಕೆ ಮಾಡುವುದು ಲಾಭದಾಯಕವೆಂದು ಖಚಿತವಾಗಿದ್ದರೆ ಮಾತ್ರ   ಬಂಡವಾಳವನ್ನು ಉತ್ಪಾದನೆಯಲ್ಲಿ ತೊಡಗಿಸಲು ಇವರು ಮುಂದೆ ಬರುವರು.   ಮತ್ತು ಯಾವುದೇ  ಉತ್ಪಾದನೆಯು ಎಷ್ಟು ಅಗತ್ಯವಿದ್ದರೂ ಅದನ್ನು ಮಾಡಲು ಲಾಭದಾಯಕವಲ್ಲದಿದ್ದರೆ ವಸ್ತುಗಳನ್ನು ಉತ್ಪಾದಿಸುವುದಿಲ್ಲ. ಆದ್ದರಿಂದ ಇದನ್ನು ಉತ್ಪಾದನೆಯನ್ನು ನಿರ್ಧರಿಸುವ ಮೌಲ್ಯದ ಬಂಡವಾಳಶಾಹಿ ನಿಯಮ  ಎಂ ದು ಕರೆಯಲಾಗುತ್ತದೆ. ಇದರಿಂದಾಗಿ  ಶಾಶ್ವತ ಸಂಗ್ರಹಣೆಯ ಪ್ರಕ್ರಿಯೆಯನ್ನು ಉಳಿಸಿಕೊಳ್ಳಲು, ಬಂಡವಾಳಕ್ಕೆ ನಿರಂತರವಾಗಿ ಹೆಚ್ಚುತ್ತಿರುವ ಪ್ರಮಾಣದ ಸಾಧ್ಯವಾದಷ್ಟು ಕಡಿಮೆ ಬೆಲೆಯಲ್ಲಿಕಚ್ಚಾ  ವಸ್ತುಗಳ ಮೂಲ ಸಾಮಗ್ರಿಗಳ ಒಳಹರಿವು ಮತ್ತು ಕಡಿಮೆ ಬೆಲೆಯಲ್ಲಿ, ಅಗ್ಗದ ಶ್ರಮ ಮತ್ತು ಅಗ್ಗದಳ್ಳಿ  ಪ್ರಕೃತಿಯ  ಸಂಪನ್ಮೂಲಗಳನ್ನು ದೊರಕಿಸಿಕೊಳ್ಳುವದು ಅಗತ್ಯವಿದೆ. 

ಆದರೆ  ಈ ದೃಷ್ಟಿ ಬಹಳ ತೀವ್ರವಾದ ವಿರೋಧಾಭಾಸಗಳನ್ನು ಒಳಗೊಳ್ಳುತ್ತದೆ.  ಬಂಡವಾಳಶಾಹಿ ರಾಜ್ಯಗಳ ಮಟ್ಟಿಗೆ, ದೇಶೀಯ ಕಾರ್ಮಿಕ ವರ್ಗಗಳ ಶೋಷಣೆಯನ್ನು ತೀವ್ರಗೊಳಿಸಿದರೆ,  ಅಂತಿಮವಾಗಿ ಒಂದು ಕ್ರಾಂತಿಯನ್ನು ಎದುರಿಸಬೇಕಾಗುತ್ತದೆ. ಮತ್ತು  ದೇಶೀಯ ಸಂಪನ್ಮೂಲಗಳ ಶೋಷಣೆಯನ್ನು ತೀವ್ರಗೊಳಿಸಿದರೆ,  ಉತ್ಪಾದನೆಯು ಸಂಪೂರ್ಣವಾಗಿ ಅವಲಂಬಿಸಿರುವ ಪರಿಸರ ತಳಹದಿಯನ್ನು  ಅಂತಿಮವಾಗಿ ದುರ್ಬಲಗೊಳಿಸಲಾಗುತ್ತದೆ .   ಬಂಡವಾಳಶಾಹಿ ದೇಶದ ಗಡಿಗಳಿಗೆ ಸೀಮಿತವಾಗಿ  ನಡೆಯುವ ಆರ್ಥಿಕತೆಯು ಬಹಳ ಕಾಲ ಮುಂದುವರಿಯಲು ಸಾಧ್ಯವಿಲ್ಲ. ಬಂಡವಾಳಶಾಹಿಗೆ  ಎಲ್ಲಿ ಶ್ರಮ ಮತ್ತು ಪ್ರಕೃತಿಯನ್ನು ನಿರ್ಭಯದಿ೦ದ  ಶೋಷಿಸಿಕೊಳ್ಳ್ಳುವದು ಸಾಧ್ಯವೋ  ಅಂತಹ  ಹೊರಗಿನ, ಬಾಹ್ಯ ವಿಸ್ತರಿಸಿದ ಗಡಿಯ ಅಗತ್ಯವಿದೆ.  ಸಾಮ್ರಾಜ್ಯಶಾಹಿಯ ಸಾಧನದ ಮೂಲಕ   ಅದು ಕಾರ್ಮಿಕರ ಶ್ರಮ ಮತ್ತು ಪ್ರಕೃತಿಯ ನೈಸರ್ಗಿಕ ಒಳಹರಿವುಗಳನ್ನು  ನಿರ್ಭಯದಿಂದ ಬಳಸಿಕೊಳ್ಳಬಹುದು, ಅಷ್ಟೇ ಅಲ್ಲ  ಅದು ಸಾಮಾಜಿಕ ಮತ್ತು ಪರಿಸರ ವೆಚ್ಚಗಳನ್ನು ನಿರಾತಂಕವಾಗಿ ಬಾಹ್ಯೀಕರಿಸಬಹುದು,   ಅಗತ್ಯವಿರುವಷ್ಟು ಬಲದಿಂದ ವಿರೋಧ ದಂಗೆಗಳನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ನಾಶಪಡಿಸಬಹುದು.

  ಹೀಗಾಗಿ, ನಮಗೆ ಬಂಡವಾಳಶಾಹಿಯ ಮೂರನೇ ಪ್ರಮುಖ ಲಕ್ಷಣ ಗೋಚರಿಸುತ್ತದೆ. . ಶ್ರೀಮಂತಿಕೆಯ ಸಂಗ್ರಹಣೆಯನ್ನು ಸ್ಥಿರಗೊಳಿಸಲು ಬಂಡವಾಳಶಾಹಿಗೆ ಸಾಮ್ರಾಜ್ಯಶಾಹಿ ವ್ಯವಸ್ಥೆ ಅಗತ್ಯವಿದೆ. ಭಾರತೀಯ  ಅರ್ಥಶಾಸ್ತ್ರಜ್ಞೆ ಉತ್ಸ  ಪಾಟ್ನಾಯಿಕ್ ಹೇಳಿದಂತೆ ಸಾಮ್ರಾಜ್ಯಶಾಹಿಯು ಮುಖ್ಯ ನಾಟಕದ ಒಂದು ಉಪ-ಪ್ರಹಸನವಲ್ಲ , ಅತಿಯಾದ ದುರಾಸೆಯ ಆಡಳಿತ ವರ್ಗ ಮಾಡಿದ ತಪ್ಪಲ್ಲ. ನಿಜಕ್ಕೂ ಇದು ಬಂಡವಾಳಶಾಹಿಯ ರಚನೆಗೆ  ಅಗತ್ಯವಾದ ವಿಶಿಷ್ಠ ಲಕ್ಷಣವಾಗಿದೆ. ಬಂಡವಾಳಶಾಹಿಯು ತನ್ನ ವಿರೋಧಾಭಾಸಗಳನ್ನು ಪರಿಹರಿಸುವುದಿಲ್ಲ. ಅದು ಅವುಗಳನ್ನು ತೊಡಕಿಲ್ಲದೆ ಸುಲಭವಾಗಿ ಸರಳವಾಗಿ ಬಾಹ್ಯಗೊಳಿಸುತ್ತದೆ. ಆದ್ದರಿಂದ ೧೬ ನೇ ಶತಮಾನದಲ್ಲಿ ಪಶ್ಚಿಮ ಯುರೋಪಿನಲ್ಲಿ ಬಂಡವಾಳಶಾಹಿಯ ಉದಯದ ಕ್ಷಣದಲ್ಲಿಯೇ, ಯುರೋಪಿಯನ್ ಸಾಮ್ರಾಜ್ಯಶಾಹಿಯು ಚಾಲನೆ ಪ್ರಾರಂಭಿಸಿದೆ.  ಈ ಎರಡು ಕ್ಷಣಗಳ ನಡುವೆ ಯಾವುದೇ ಕಾಲಾವಧಿಗೆ ಸಂಬಂಧಿಸಿದ  ಅಥವಾ ವಿಶ್ಲೇಷಣಾತ್ಮಕ ವ್ಯತ್ಯಾಸವಿಲ್ಲ. ಅವು ಒಂದೇ ಯೋಜನೆಗಳಾಗಿವೆ. ನಮಗೆ ತಿಳಿದಿರುವಂತೆ, ಪಶ್ಚಿಮ ಯುರೋಪಿನಲ್ಲಿ ಬಂಡವಾಳಶಾಹಿಯ  ಉದಯವು ವಸಾಹತುಗಳಿಂದ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ಗುಲಾಮಗಿರಿ ಮತ್ತು  ವಲಸೆಗಾರ ಕಾರ್ಮಿಕರನ್ನು ಬೃಹತ್ ಪ್ರಮಾಣದಲ್ಲಿ ಬಳಸುವುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ನಿರ್ಣಾಯಕ ಹೆಜ್ಜೆಯಾಗಿ ಆಂಡಿಸ್‌ನಿಂದ ಬೆಳ್ಳಿಯನ್ನು ಲೂಟಿ ಮಾಡಲಾಯಿತು, ವಾಸ್ತವಿಕವಾಗಿ ಯಾವುದೇ ವೆಚ್ಚವಿಲ್ಲ ದೆ ಉಚಿತವಾಗಿ ಪಡೆಯಲಾಯಿತು.

 (ಟಿಪ್ಪಣಿ : ಆಂಡಿಸ್ ಬೆಳ್ಳಿಯ ಇತಿಹಾಸ: ದಕ್ಷಿಣ ಅಮೆರಿಕಾದ ಪರ್ವತ ವ್ಯವಸ್ಥೆಆಂಡಿಸ್‌ನಲ್ಲಿನ ಬೆಳ್ಳಿಯ ಇತಿಹಾಸವು ಪ್ರದೇಶದ ಸ್ಥಳೀಯ ನಾಗರಿಕತೆಗಳು ಮತ್ತು ಸ್ಪ್ಯಾನಿಷ್ ವಿಜಯದೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಪೊಟೊಸಿ ಮತ್ತು ಇತರ ವಸಾಹತುಶಾಹಿ ಸ್ಪ್ಯಾನಿಷ್ ಅಮೇರಿಕನ್ ಗಣಿಗಳಿಂದ ಬಂದ ಬೆಳ್ಳಿಯು ಜಾಗತಿಕ ಆರ್ಥಿಕತೆಯ ಉದಯವನ್ನು ಸಾಧ್ಯವಾಗಿಸಿತು, ಇದು ಯುರೋಪ್ ರೇಷ್ಮೆ, ಮಸಾಲೆಗಳು ಮತ್ತು ಇತರ ಏಷ್ಯನ್ ಸರಕುಗಳಿಗೆ ಅಮೇರಿಕನ್ ಬೆಳ್ಳಿಯ ವ್ಯಾಪಾರವನ್ನು ಗಮನಾರ್ಹವಾಗಿ ಆಧರಿಸಿದೆ. ಆದಾಗ್ಯೂ, ಆ ವಾಣಿಜ್ಯ ಜಾಲದ ಮಾನವ ವೆಚ್ಚವು ಹುವಾನ್‌ಕಾವೆಲಿಕಾ ಪಾದರಸ ಗಣಿಗಳಿಗಿಂತ ಹೆಚ್ಚಿರಲಿಲ್ಲ, ಅಲ್ಲಿ ವಸಾಹತುಶಾಹಿ ಸರ್ಕಾರವು ಸ್ಥಳೀಯ ಕಾರ್ಮಿಕರನ್ನು ವಿಷಕಾರಿ ಮತ್ತು ಅಪಾಯಕಾರಿ ಪರಿಸ್ಥಿತಿಗಳಲ್ಲಿ ಶ್ರಮಿಸುವಂತೆ ಒತ್ತಾಯಿಸಿತು, ಕೆಲವು ಅಧಿಕಾರಿಗಳು ಈ ಸ್ಥಳವನ್ನು "ಸಾವಿನ ಗಣಿ" ಮತ್ತು "ಸಾರ್ವಜನಿಕ ಕಸಾಯಿಖಾನೆ" ಎಂದು ಉಲ್ಲೇಖಿಸಿದರು. ಅಲ್ಲಿನ ಶ್ರಮವು  ಪುರುಷ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರನ್ನು ಕೊಂದಿರಬಹುದು.ಈ ಸಂಪತ್ತು ಸ್ಪ್ಯಾನಿಷ್ ಸಾಮ್ರಾಜ್ಯದ ವಿಸ್ತರಣೆಗೆ ಮಾತ್ರವಲ್ಲದೆ ಯುರೋಪಿಯನ್ ಆರ್ಥಿಕತೆಗಳ ಮೇಲೂ ಪ್ರಭಾವ ಬೀರಿತು ಮತ್ತು ಆಂಡಿಯನ್ ಭೂದೃಶ್ಯ ಮತ್ತು ಅದರ ಜನರ ಮೇಲೆ ಶಾಶ್ವತವಾದ ಪ್ರಭಾವ ಬೀರಿತು. ಬಲವಂತದ ಕಾರ್ಮಿಕರ ಬಳಕೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗಳ ನಾಶ ಸೇರಿದಂತೆ ಅವುಗಳ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳಿಗಾಗಿ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಟೀಕಿಸಲಾಗಿದೆ. ಈ ಸವಾಲುಗಳ ಹೊರತಾಗಿಯೂ, ಆಂಡಿಸ್‌ನಲ್ಲಿನ ಬೆಳ್ಳಿ ಗಣಿಗಾರಿಕೆಯ ಪರಂಪರೆಯು ಪ್ರದೇಶದ ಗುರುತು ಮತ್ತು ಆರ್ಥಿಕ ಭೂದೃಶ್ಯವನ್ನು ರೂಪಿಸುತ್ತಲೇ ಇದೆ.)

ಇದರಿಂದಾಗಿ ಯುರೋಪಿಯನ್ ರಾಜ್ಯಗಳು ಪೂರ್ವ ದೇಶದ ರಾಷ್ಟ್ರಗಳಿಂದ  ಅಪಾರ ಪ್ರಮಾಣದ ಭೂ-ಆಧಾರಿತ ಸರಕುಗಳನ್ನು ಮತ್ತೆ ಕಾರ್ಯತಃ  ಉಚಿತವಾಗಿ ಖರೀದಿಸಲು ಅವಕಾಶ  ಮಾಡಿಕೊಟ್ಟಿತು. ಇದರ ಫಲವಾಗಿ ತಮ್ಮದೇ  ದೇಶದ     ಕಾರ್ಮಿಕರನ್ನು ಕೃಷಿಯ ದುಡಿಮೆ -ಶ್ರಮದಿಂದ  ದೂರವಿಟ್ಟು ಕೈಗಾರಿಕಾ ಉತ್ಪಾದನೆಗೆ ವರ್ಗಾಯಿಸಲು ಮತ್ತು ಆ ವಲಯದಲ್ಲಿ ಏಕಸ್ವಾಮ್ಯ ಶಕ್ತಿಯನ್ನು ಅಭಿವೃದ್ಧಿಪಡಿಸಲು ಸೌಲಭ್ಯ  ಮಾಡಿಕೊಟ್ಟಿತು, ಇದು ಪ್ರಪಂಚದ ಬೇರೆ ಯಾವುದೇ ಪ್ರದೇಶವೂ  ಎಂದೂ  ಅನುಭವಿಸದಿದ್ದ ಸವಲತ್ತು.  

ಇಂಗ್ಲೆಂಡ್‌ನ ಕೈಗಾರಿಕಾ ಕ್ರಾಂತಿಯ ಪ್ರಮುಖ ಕಚ್ಚಾ ವಸ್ತುಗಳನ್ನು   ಇಂಗ್ಲೆಂಡ್‌ನಲ್ಲಿ ಅಥವಾ ಯುರೋಪಿನಲ್ಲಿ ಎಲ್ಲಿಯೂ  ಆ  ಉದ್ದೇಶಕ್ಕಾಗಿ  ಬೆಳೆಯಲಿಲ್ಲ. ಈ ಮಧ್ಯೆ ಸಕ್ಕರೆ ಯುರೋಪಿನ ಕಾರ್ಮಿಕ ವರ್ಗಗಳಿಗೆ ಆಹಾರಕ್ಕಾಗಿ ಅಗ್ಗದ ಕ್ಯಾಲೋರಿಗಳ ಮೂಲವನ್ನು ಒದಗಿಸಿತು, ಹೀಗಾಗಿ ಅವರ ಜೀವನಾಧಾರ ವೆಚ್ಚವನ್ನು ಅಗ್ಗಗೊಳಿಸಿತು ಮತ್ತು ಬಂಡವಾಳಶಾಹಿಗಳು ಅವರಿಗೆ ಕಡಿಮೆ ವೇತನವನ್ನು ನೀಡಲು ಅನುವು ಮಾಡಿಕೊಟ್ಟಿತು.  ಸಕ್ಕರೆಯ ಬೆಲೆ   ಅಗ್ಗವಾಗಿತ್ತು, ನೈಸರ್ಗಿಕವಾಗಿ ಅಲ್ಲ, ಆದರೆ ಸಹಜವಾಗಿ ಏಕೆಂದರೆ ಅದನ್ನು ಸ್ಥಳೀಯ ಮೂಲ  ಅಮೆರಿಕ ಜನಾಂಗದವರಿಂದ  ಅಕ್ರಮವಾಗಿ ವಶಪಡಿಸಿಕೊಂಡ  ಭೂಮಿಯಲ್ಲಿ  ಗುಲಾಮರನ್ನಾಗಿ ಕಳ್ಳ ಸಾಗಣೆ ಮಾಡಿದ ಆಫ್ರಿಕನ್ನರ ಶ್ರಮದಿಂದ ಬೆಳೆದು ಉತ್ಪಾದಿಸಲಾಯಿತು. ಹತ್ತಿಯನ್ನು ಅದೇ ರೀತಿಯಲ್ಲಿ ಪಡೆಯಲಾಯಿತು.  ಇದಾದನಂತರ ರಬ್ಬರ್‌, ಚಿನ್ನ, ಮರ, ಧಾನ್ಯ ಮತ್ತು ಏಷ್ಯಾ, ಆಫ್ರಿಕಾ ಮತ್ತು ಅಮೆರಿಕಗಳಿಂದ ಸ್ವಾಧೀನಪಡಿಸಿಕೊಂಡ ಲೆಕ್ಕವಿಲ್ಲದಷ್ಟು ಇತರ ಸಂಪನ್ಮೂಲಗಳನ್ನು ಪಡೆದುಕೊಳ್ಳಲಾಯಿತು.

 ಒಟ್ಟಾರೆಯಾಗಿ ಸಾಮ್ರಾಜ್ಯಶಾಹಿ ರಾಜ್ಯಗಳ ಆರ್ಥಿಕ ಏರಿಕೆಗೆ ಅನುವು ಮಾಡಿಕೊಟ್ಟ ಅಸಾಧಾರಣ ಸಂಪತ್ತಿನ ಹರಿವು,  ಅವರ ಮಿಲಿಟರಿ ಸೈನಿಕ ಅಭಿವೃದ್ಧಿಯನ್ನು ಸಕ್ರಿಯಗೊಳಿಸಿತು ಮತ್ತು ಯುರೋಪಿಯನ್ನರು  ನೆಲೆಸಿದ ವಸಾಹತುಗಳ ತ್ವರಿತ ಕೈಗಾರಿಕೀಕರಣಕ್ಕೆ ಹಣಕಾಸು ಒದಗಿಸಲು ಬಳಸಲ್ಪಟ್ಟಿತು. 


(ಟಿಪ್ಪಣಿ: ‘ನೆಲೆಸಿದ ವಸಾಹತುಶಾಹಿ’ (Settler Colonialism) ವಸಾಹತುಶಾಹಿಯ ಒಂದು ರೂಪವಾಗಿದ್ದು, ಅಲ್ಲಿ ವಸಾಹತುಗಾರರು ಸ್ಥಳೀಯ ಜನಸಂಖ್ಯೆಯು ಜೀವಿಸುತ್ತಿದ್ದ  ಭೂಮಿಯಲ್ಲಿ ಶಾಶ್ವತ ಮನೆಗಳನ್ನು ಸ್ಥಾಪಿಸುತ್ತಾರೆ, ಇದು ಸಾಮಾನ್ಯವಾಗಿ ಈ ಸಮುದಾಯಗಳ ಸ್ಥಳಾಂತರ ಮತ್ತು ಅಳಿಸುವಿಕೆಗೆ ಕಾರಣವಾಗುತ್ತದೆ. ನೆಲೆಸಿದ ವಸಾಹತುಶಾಹಿ ರಾಜ್ಯಗಳಲ್ಲಿ ಕೆನಡಾ, ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ ಮತ್ತು ನೆಲೆಸಿದ  ವಸಾಹತುಶಾಹಿ ಸಿದ್ಧಾಂತವು ಇಸ್ರೇಲ್, ಕೀನ್ಯಾ ಮತ್ತು ಅರ್ಜೆಂಟೀನಾದಂತಹ ಸ್ಥಳಗಳಲ್ಲಿನ ಸಂಘರ್ಷಗಳನ್ನು ಅರ್ಥಮಾಡಿಕೊಳ್ಳಲು ಮತ್ತು ನೆಲೆಸಿದ ವಸಾಹತುಗಳ ವ್ಯಾಪಕ ಅಡಿಪಾಯದಲ್ಲಿ ತೊಡಗಿರುವ ಸಾಮ್ರಾಜ್ಯಗಳ ವಸಾಹತುಶಾಹಿ ಪರಂಪರೆಯನ್ನು ಪತ್ತೆಹಚ್ಚಲು ಮುಖ್ಯವಾಗಿದೆ.)

ಈಗ, ಸಹಜವಾಗಿ, ನಿರ್ಣಾಯಕವಾಗಿ, ಜಾಗತಿಕ ದಕ್ಷಿಣ ಅಥವಾ ಬೇರೆಡೆ ಯಾವುದೇ ದೇಶವು ಅಗ್ಗದ ಕಾರ್ಮಿಕ ಮತ್ತು ಕಚ್ಚಾ ವಸ್ತುಗಳ ಪೂರೈಕೆದಾರರಾಗಲು ಅದೃಷ್ಟದಿಂದ ವಿಧಿಸಲ್ಪಟ್ಟಿಲ್ಲ .  ಅಲ್ಲದೆ  ಇದೇನೂ ಯಾವುದೇ ತರದ ನಿಸರ್ಗ-ದತ್ತ  ‘’ತುಲನಾತ್ಮಕ ಅನುಕೂಲ’ (‘Comparative Advantage’)ವಾಗಿರಲಿಲ್ಲ. ಈ ವ್ಯವಸ್ಥೆಯನ್ನು 1840 ರಲ್ಲಿ ಬಲವಂತವಾಗಿ ಜಾರಿಗೆ ತರಬೇಕಾಯಿತು,. 

ಪೂರ್ವ ಭಾರತ ಮತ್ತು ಚೀನಾ ಸಂಘ (East India and China Association)ದ ಅಧ್ಯಕ್ಷರು ಇಂಗ್ಲಿಷ್ ಸಂಸತ್ತಿಗೆ ಹೆಮ್ಮೆಯಿಂದ ಹೇಳಿದ  ಮಾತುಗಳನ್ನು ಉಲ್ಲೇಖಿಸುತ್ತೇನೆ, "ಈ ಕಂಪನಿಯು ಭಾರತವನ್ನು ಉತ್ಪಾದನಾ ದೇಶದಿಂದ ಕಚ್ಚಾ ಉತ್ಪನ್ನಗಳನ್ನು ರಫ್ತು ಮಾಡುವ ದೇಶವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ.”  ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ದಕ್ಷಿಣದಾದ್ಯಂತ, ಸ್ಥಳೀಯ ಕೈಗಾರಿಕೆಗಳನ್ನು ನಾಶಪಡಿಸಬೇಕಾಗಿತ್ತು. ಜೀವನಾಧಾರ ಆರ್ಥಿಕತೆಗಳನ್ನು ಕಿತ್ತುಹಾಕಬೇಕಾಗಿತ್ತು. ‘ಜಾಗತಿಕ ದಕ್ಷಿಣ’ದ ಗಣನೀಯ ಉತ್ಪಾದಕ ಸಾಮರ್ಥ್ಯಗಳು, ಅವರ ಭೂಮಿ, ಅವರ ಸಂಪನ್ಮೂಲಗಳು, ಅವರ ಕಾರ್ಖಾನೆಗಳು, ಅವರ ಶ್ರಮವನ್ನು ಸ್ಥಳೀಯ ಮಾನವ ಅಗತ್ಯಗಳು ಮತ್ತು ಅಭಿವೃದ್ಧಿಗಳನ್ನು ಪೂರೈಸದೆ ವಸಾಹತುಶಾಹಿಯ ಕೇಂದ್ರ ಬಿಂದುವಿನಲ್ಲಿ ಯಜಮಾನ ಗುಂಪುಗಳ ಸೇವನೆ ಮತ್ತು ಧನ ಸಂಗ್ರಹಣದ  ಉದ್ದೇಶಗಳನ್ನು ಪೂರೈಸಲು ಮರುಸಂಘಟಿಸಬೇಕಾಗಿತ್ತು. . ವಾಸ್ತವವಾಗಿ, ಇದು ವಸಾಹತುಶಾಹಿ ಯೋಜನೆಗಳ ಕೇಂದ್ರ ಉದ್ದೇಶವಾಗಿತ್ತು. ಅದನ್ನು ಹೇಗೆ ಮಾಡಲಾಯಿತು? ಒಂದು ಕಾರ್ಯವಿಧಾನವೆಂದರೆ ಜನರನ್ನು ಸಾಂಪ್ರದಾಯಿಕವಾಗಿ ಸ್ಥಾಪಿಸಲಾದ ಜೀವನದಿಂದ ಉಚ್ಚಾಟಿಸುವದು  ಮತ್ತು ವಸಾಹತುಶಾಹಿ ಕೈಗಾರಿಕೆಗಳಲ್ಲಿ ಕೂಲಿ ಕೆಲಸದ ಮೇಲೆ ಅವಲಂಬಿತರನ್ನಾಗಿ ಮಾಡುವುದು. ಇನ್ನೊಂದು ವಿಧವೆಂದರೆ ಜನರು ಹೊಂದಿರದ ವಸಾಹತುಶಾಹಿ ಕರೆನ್ಸಿ (ಹಣ)ಯಲ್ಲಿ ತೆರಿಗೆಗಳನ್ನು ವಿಧಿಸುವುದು. ಅದರಿಂದಾಗಿ  ಜನರು ವಸಾಹತುಶಾಹಿಗಾಗಿ ವಸ್ತುಗಳನ್ನು ಉತ್ಪಾದಿಸುವ ಮೂಲಕ ಅಥವಾ  ವೇತನವನ್ನು ಗಳಿಸಲು ವಸಹಿತಶಾಹಿ ಒಡೆಯರಿಗೆ  ಕೆಲಸ ಮಾಡುವ ಮೂಲಕ ಮಾತ್ರ ತೆರಿಗೆ ಕಟ್ಟಲು ಹಣ ಪಡೆಯಬಹುದು. 

ಇದು ನಾನು ನಂತರ ಹಿಂತಿರುಗಲಿರುವ ನಿರ್ಣಾಯಕ ಅಂಶವಾಗಿದೆ. ಕರೆನ್ಸಿ (ಹಣದ) ಪದ್ಧತಿ ಮತ್ತು ವಿತರಣೆಯನ್ನು ಯಾರು ನಿಯಂತ್ರಿಸುತ್ತಾರೋ ಅವರು ಏನನ್ನು  ಉತ್ಪಾದಿಸಲಾಗುತ್ತದೆ ಎಂಬುದನ್ನೂ  ನಿಯಂತ್ರಿಸುತ್ತಾರೆ. ಮತ್ತು ಸಹಜವಾಗಿ, ವಸಾಹತುಗಾರರು ಬೆಲೆಗಳು ಮತ್ತು ವೇತನಗಳನ್ನು ಸಾಧ್ಯವಾದಷ್ಟು ಕಡಿಮೆ ಇರಿಸಿಕೊಂಡರು. ಆದ್ದರಿಂದ ಈ ಕಾರ್ಯವಿಧಾನಗಳೊಂದಿಗೆ, ವಸಾಹತುಶಾಹಿಯಡಿಯಲ್ಲಿದ್ದ  ಜನಸಂಖ್ಯೆಯು ತಮ್ಮ ಒಟ್ಟು ಉತ್ಪಾದನೆಯನ್ನು ಹೆಚ್ಚಿಸುವಂತೆ ಮಾಡಲಾಯಿತು, ಆದರೆ ಅವರ ಉತ್ಪಾದನೆಯನ್ನು ಸಾಮ್ರಾಜ್ಯಶಾಹಿ ಸ್ವಾಧೀನಕ್ಕೆ  ಲಭ್ಯವಾಗುವಂತೆ ಮಾಡಲು ಉತ್ಪಾದಕ ಜನತೆಯ ಸ್ವಂತ  ಬಳಕೆಯನ್ನು ಸಂಕುಚಿತಗೊಳಿಸಲಾಯಿತು. ಆದ್ದರಿಂದ ಈ ವ್ಯವಸ್ಥೆಯ ಪರಿಣಾಮಗಳು ವಿನಾಶಕಾರಿಯಾಗಿದ್ದವು. ಈ ಹಂತದಲ್ಲಿ ನಾನು ಬೇರೆ ರೀತಿಯಲ್ಲಿ ವಿವರಿಸಲು  ಪ್ರಯತ್ನಿಸುವ ಪ್ರಚಾರವನ್ನು ನೇರವಾಗಿ ಎದುರಿಸಲು ಬಯಸುತ್ತೇನೆ. 

ವಸಾಹತುಶಾಹಿಯಿಂದ ಮೂಡಿಬಂದ ತೀವ್ರ ಬಡತನ : ಕಳೆದ ಹಲವಾರು ವರ್ಷಗಳಿಂದ, ತಳಮಟ್ಟದ  ಆಹಾರ, ಆಶ್ರಯ, ಬಟ್ಟೆ ಮತ್ತು ಇಂಧನವನ್ನು ಪಡೆಯಲು  ಅಸಮರ್ಥತೆಯಿಂದ ವ್ಯಾಖ್ಯಾನಿಸಲಾದ ಸಂಪೂರ್ಣ ಅಭಾವದ ಸ್ಥಿತಿಯಾದ ತೀವ್ರ ಬಡತನವು ಬಂಡವಾಳಶಾಹಿ ಹುಟ್ಟಿಕೊಂಡು ಸಾಮಾಜಿಕ ಪ್ರಗತಿಯನ್ನು ತರುವ ಮೊದಲು ಮಾನವ ಇತಿಹಾಸದಾದ್ಯಂತ ಮಾನವೀಯತೆಯ ಸ್ವಾಭಾವಿಕ  ಸ್ಥಿತಿಯಾಗಿತ್ತು ಎಂದು ಪ್ರತಿಪಾದಿಸುವ ಹೊಸ ನಿರೂಪಣೆ ಹೊರಹೊಮ್ಮಿದೆ. ಈಗ, ಈ ನಿರೂಪಣೆಯು ದಿವಂಗತ ವಿಶ್ವಬ್ಯಾಂಕ್ ಅರ್ಥಶಾಸ್ತ್ರಜ್ಞ ಮಾರ್ಟಿನ್ ರೆವೆಲಿಯನ್ ರಚಿಸಿದ ಮತ್ತು ಸ್ಟೀವನ್ ಪಿಂಕರ್ ಪುಸ್ತಕ ಜನಪ್ರಿಯಗೊಳಿಸಿದ ರೇಖಾನಕ್ಷೆಯನ್ನು ಹೆಚ್ಚಾಗಿ ಅವಲಂಬಿಸಿದೆ. ಇವರು ಪ್ರಕಟಿಸಿದ ನಕ್ಷೆ  ೧೮೨೦ಯಲ್ಲಿ ೯೦% ರ ಆರಂಭಿಕ ಹಂತದಿಂದ ತೀವ್ರ ಬಡತನ ಇಳಿತಗೊಳ್ಳುತ್ತಿರುವದಾಗಿ   ತೋರಿಸುತ್ತದೆ. 

ಆದರೆ ಬಡತನದ ದರವನ್ನು ಅಳೆಯಲು ಸರಕು ಮತ್ತು ಸೇವೆಗಳ ಮೇಲಿನ ಕುಟುಂಬಗಳ ವೆಚ್ಚದ  ನೇರ ಡೇಟಾ ಅಗತ್ಯವಿದೆ, ಇದು ಸಾಮಾನ್ಯವಾಗಿ ೧೯೮೦ಯ  ಮೊದಲು ಅಸ್ತಿತ್ವದಲ್ಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು,  ರೆವೆಲಿಯನ್ ಐತಿಹಾಸಿಕ ಜಿಡಿಪಿ (GDP - Gross Domestic Product - ಒಟ್ಟು ದೇಶೀಯ ಉತ್ಪನ್ನ ) ಬೆಳವಣಿಗೆಯ ದರಗಳನ್ನು ಕುಟುಂಬಗಳ  ಬಳಕೆ (ಸೇವನೆ)ಯ ವ್ಯತ್ಯಾಸಕ್ಕೆ  ಬದಲಿಯಾಗಿ ಅವಲಂಬಿಸಿ ಉಪಯೋಗಿಸಿಕೊಂಡಿದ್ದಾರೆ .  ಸಮಸ್ಯೆಯೆಂದರೆ, ಸಾಮಾನ್ಯ ಜನರು ನಿಜವಾಗಿ ಏನು ಸೇವಿಸಲು ಸಾಧ್ಯವಾಯಿತು ಎಂಬುದರ ಕುರಿತು GDP ದತ್ತಾಂಶವು ನಮಗೆ ಏನನ್ನೂ ಹೇಳುವುದಿಲ್ಲ.   ಜನರನ್ನು ಭೂಮಿಯಿಂದ ಒದ್ದು, ಹಾಕಿ ಅವರ ಜೀವನಾಧಾರ ಬೆಳೆಗಳನ್ನು ನಾಶಮಾಡಿದರೆ ಮತ್ತು ಆ  ಸ್ಥಳದಲ್ಲಿ ಬಾಳೆ ತೋಟಗಳನ್ನು ಸ್ಥಾಪಿಸಿದರೆ, GDP ಹೆಚ್ಚಾಗಬಹುದು, ಸರಿಯಲ್ಲವೇ ? ಇದು ಒಟ್ಟು ಮಾರುಕಟ್ಟೆ ಉತ್ಪಾದನೆಯ ಅಳತೆಯಾಗಿದೆ, ಆದರೆ ಜನರ ಆಹಾರ ಮತ್ತು ಜೀವನೋಪಾಯಕ್ಕೆ ಕೈಸಿಗುವದು  ತೀವ್ರವಾಗಿ ನಿರ್ಬಂಧಿತವಾಗಿರಬಹುದು.  

೧೬ ನೇ ಶತಮಾನದಿಂದಲೂ ಜೀವನಾಧಾರದ ವೆಚ್ಚಕ್ಕೆ ಸಂಬಂಧಿಸಿದಂತೆ ಮಾನವ ಎತ್ತರ, ಮರಣ ಪ್ರಮಾಣ ಮತ್ತು ನೈಜ ವೇತನದ ಐತಿಹಾಸಿಕ ದತ್ತಾಂಶವನ್ನು ಆಧಾರಿತ   ಅನ್ವೇಷನೆಗಳು  ಹಲವಾರು ಆಸಕ್ತಿದಾಯಕ ವಿಷಯಗಳನ್ನು  ತೋರಿಸುತ್ತಿವೆ: . ಮೊದಲನೆಯದಾಗಿ,  ತರಬೇತು ಇಲ್ಲದ ಕಾರ್ಮಿಕರು ಸಹ  ಸಾಮಾನ್ಯ ಪರಿಸ್ಥಿತಿಗಳಲ್ಲಿ ಜೀವನಾಧಾರದ ಅವಶ್ಯಕತೆಗಳನ್ನು  ಪೂರೈಸಲು ಬಹುಮಟ್ಟಿಗೆ ಸಮರ್ಥರಾಗಿದ್ದರು ಎಂದು ಐತಿಹಾಸಿಕ ವೇತನ ದತ್ತಾಂಶವು ಸೂಚಿಸುತ್ತದೆ. ಕೈಗಾರಿಕಾ- ಪೂರ್ವ ಸಂದರ್ಭಗಳಲ್ಲಿಯೂ ಸಹ, ತೀವ್ರ ಬಡತನವು ಸಾಮಾನ್ಯ ಸ್ಥಿತಿಯಾಗಿರಲಿಲ್ಲ.  ವಸಾಹತುಶಾಹಿಯ ಅಡಿಯಲ್ಲಿ ರೂಪಗೊಂಡು  ಮತ್ತು ಶಾಶ್ವತತೆಯನ್ನು ಪಡೆದ  ಕ್ಷಾಮಗಳು, ಯುದ್ಧಗಳು ಮತ್ತು ಉಚ್ಚಾಟನೆಯಂತಹ ತೀವ್ರ ಕ್ಷೋಭೆಯ  ಅವಧಿಗಳಲ್ಲಿ ಮಾತ್ರ ಇದು ಸಾಮಾನ್ಯವಾಗಿ ಉದ್ಭವಿಸಿತು. 

ಎರಡನೆಯದಾಗಿ, ನಾವು ಕಂಡುಕೊಂಡಂತೆ  ಪಶ್ಚಿಮ ಯುರೋಪಿನಲ್ಲಿ ಬಂಡವಾಳಶಾಹಿ ಮತ್ತು ನಂತರ ವಸಾಹತುಶಾಹಿ ಅನುಷ್ಠಾನ ಯೋಜನೆಗಳ ಮೂಲಕ ವಿಶ್ವದ ಉಳಿದ ಪ್ರದೇಶಗಳನ್ನು ಕ್ರಮೇಣ ಬಂಡವಾಳಶಾಹಿ ವಿಶ್ವ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳುವುದರ ಪರಿಣಾಮವಾಗಿ  ವೇತನದಲ್ಲಿ ಗಮನಾರ್ಹವಾಗಿ ಜೀವನಾಧಾರಕ್ಕಿಂತ ಕಡಿಮೆ ಮಟ್ಟಕ್ಕೆ,  ಕುಸಿತ, ಇದರ ಫಲವಾಗಿ ಮನುಷ್ಯರ ಎತ್ತರ ಕಡಿಮೆಯಾಗುವದು ಇವು  ತೀವ್ರ ಪೌಷ್ಟಿಕಾಂಶದ ಬಿಕ್ಕಟ್ಟನ್ನು ಸೂಚಿಸುತ್ತದೆ  ಮತ್ತು ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವಾಯಿತು. 


 ಬೇರೆ ರೀತಿಯಲ್ಲಿ ಹೇಳುವುದಾದರೆ, ಬಂಡವಾಳಶಾಹಿ ವಿಶ್ವ ಆರ್ಥಿಕತೆಯ ಬಲವರ್ಧನೆಯ ಸಮಯದಲ್ಲಿ, ಸಾಮಾಜಿಕ ಫಲಿತಾಂಶಗಳ ಪ್ರಗತಿಯು ಸ್ಥಗಿತಗೊಂಡಿತು ಮತ್ತು ಹಿಮ್ಮುಖವಾಯಿತು. ನಾವು ಅಭ್ಯಸಿಸಿದ  ಎಲ್ಲಾ ವಿಶ್ವ ಪ್ರದೇಶಗಳಲ್ಲಿ ಇದು ಸ್ಪಷ್ಟವಾಗಿದೆ. ಆದರೆ ನಾನು ಭಾರತವನ್ನು ಉದಾಹರಣೆಯಾಗಿ ತೆಗೆದುಕೊಳ್ಳುತ್ತೇನೆ. , ಭಾರತದಲ್ಲಿ, ಇತಿಹಾಸಕಾರ ರಾಬರ್ಟ್ ಅಲೆನ್ ಒದಗಿಸಿದ ಗೃಹ ಬಳಕೆಯ ಕುರಿತು ನಮಗೆ ನೇರ ಡೇಟಾ ಇದೆ. ಅಲೆನ್‌ರ ದತ್ತಾಂಶವು ವಸಾಹತುಶಾಹಿ ಪೂರ್ವದಲ್ಲಿ ತೀವ್ರ ಬಡತನವು ಕೇವಲ ೧೦% ರಷ್ಟಿತ್ತು ಮತ್ತು ನಂತರ ಬ್ರಿಟಿಷ್ ಆಳ್ವಿಕೆಯಲ್ಲಿ ೫೦% ಕ್ಕಿಂತ ಹೆಚ್ಚಾಯಿತು ಎಂದು ತೋರಿಸುತ್ತದೆ. ೧೯ ನೇ ಶತಮಾನದಲ್ಲಿ ಬ್ರಿಟಿಷ್ ಆಳ್ವಿಕೆಯ ಉತ್ತುಂಗದಲ್ಲಿ ಭಾರತೀಯ ನೈಜ ವೇತನವು ಬ್ರಿಟಿಷರ ಅಡಿಯಲ್ಲಿ ಕುಸಿಯಿತು ಮತ್ತು ವಸಾಹತುಗಾರರು ಭಾರತೀಯ ಕೃಷಿ ಉತ್ಪಾದನೆ ಮತ್ತು ಆಹಾರ ಧಾನ್ಯಗಳನ್ನು ಸ್ವಾಧೀನಪಡಿಸಿಕೊಂಡರು.  ಇದು ನಮಗೆ ತಿಳಿದಿರುವಂತೆ ಹಲವಾರು ಸಾಮೂಹಿಕ ಕ್ಷಾಮಗಳನ್ನು ಉಂಟುಮಾಡುವ ಹಂತಕ್ಕೆ ತಲುಪಿತು.  ೧೯ ನೇ ಶತಮಾನದ ಕೊನೆಯಲ್ಲಿ ಬ್ರಿಟಿಷ್ ವಸಾಹತುಶಾಹಿ ಯೋಜನೆಗಳ ಉತ್ತುಂಗದಲ್ಲಿ, ಭಾರತವು ವಿಸ್ಮಯ ಗೊಳಿಸುವ ಪ್ರಮಾಣದಲ್ಲಿ ಸಾಮೂಹಿಕ ಮರಣ ಬಿಕ್ಕಟ್ಟನ್ನು ಅನುಭವಿಸಿತು. ೧೮೮೦ಯ  ದಶಕದಲ್ಲಿ ವಸಾಹತುಶಾಹಿ ಆಡಳಿತವು ನಡೆಸಿದ ಜನಸಂಖ್ಯಾ ಜನಗಣತಿಯು ಸಾವಿನ ಪ್ರಮಾಣವು ಆ ದಶಕದಲ್ಲಿ ಪ್ರತಿ ೧೦,೦೦೦ ಜನರಿಗೆ ೩೭ ರಿಂದ ೧೯೨೦ ರ ದಶಕದಲ್ಲಿ ಪ್ರತಿ ೧೦,೦೦೦ ಜನರಿಗೆ ೪೪ ಕ್ಕೆ  ಏರಿದೆ ಎಂದು ಬಹಿರಂಗಪಡಿಸುತ್ತದೆ. ನಾವು ೧೮೮೦ಯ  ದಶಕದ ಅಂಕಿಅಂಶವನ್ನು ಮೂಲ ಮರಣ ದರವಾಗಿ ತೆಗೆದುಕೊಂಡರೆ, ಇದರರ್ಥ ೧೮೯೧ ರಿಂದ ೧೯೨೦ ರ ನಡುವಿನ ಬ್ರಿಟಿಷ್ ವಸಾಹತುಶಾಹಿಯ ಯುಗದಲ್ಲಿ ೫ ಕೋಟಿ   ಹೆಚ್ಚುವರಿ ಸಾವುಗಳು ಸಂಭವಿಸಿವೆ. ಇದು ಮಾನವ ಇತಿಹಾಸದಲ್ಲಿ  ಸರ್ಕಾರದ ನೀತಿಗಳಿಂದ  ಪ್ರೇರಿತ ಅತಿದೊಡ್ಡ ಮರಣ ಬಿಕ್ಕಟ್ಟುಗಳಲ್ಲಿ ಒಂದಾಗಿದೆ, ಬ್ರಿಟಿಷ್ ಆಡಳಿತ ವರ್ಗಗಳು ಎಂದಿಗೂ ಒಪ್ಪಿಕೊಳ್ಳದ  ಮಾನವೀಯತೆಯ ವಿರುದ್ಧ ಹೇಳಲಾಗದ ಅಪರಾಧ. 

ಜನಾಂಗೀಯತೆಯ ತತ್ವ ಮತ್ತು ಬಂಡವಾಳಶಾಹಿಯ ಅಕ್ಷಮ್ಯ ಅಪರಾಧಗಳು: ಬಂಡವಾಳಶಾಹಿ ವಿಶ್ವ ಆರ್ಥಿಕತೆಯ ಸ್ಥಾಪನೆಯು ಒಂದು ಅಸಾಧಾರಣ ಹಿಂಸಾತ್ಮಕ ಪ್ರಕ್ರಿಯೆಯಾಗಿತ್ತು. ಹಲವಾರು ಖಂಡಗಳಲ್ಲಿ ನಡೆದ ಸಾಮೂಹಿಕ ಸ್ಥಳಾಂತರಗಳು, ಉಚ್ಚಾಟನೆಗಳು,  ಸಾಮೂಹಿಕ ಗುಲಾಮಗಿರಿಗಳು ಮತ್ತು ನರಮೇಧಗಳನ್ನುಸಮರ್ಥಿಸುವದು  ಸಾಧ್ಯವಿತ್ತೇ  ?  ಈ ಅಪರಾಧಗಳನ್ನು ಮರೆಮಾಡಲು ಅವುಗಳಿಗೆ ಸಮಜಾಯಿಸಿ ನೀಡಲು ಏನು  ವಿವರಣೆ ನೀಡಬಹುದು? ಉತ್ತರ :  ಜನಾಂಗೀಯತೆ. ಈ ಅವಧಿಯಲ್ಲಿಯೇ ಯುರೋಪಿಯನ್ ಗಣ್ಯರು ವಿಶ್ವದ ಬಹುಪಾಲು ಜನಸಂಖ್ಯೆಯನ್ನು ಅಮಾನವೀಯಗೊಳಿಸುವ ಸಲುವಾಗಿ, ಅವರನ್ನು ಹಕ್ಕುಗಳ ಕ್ಷೇತ್ರದಿಂದ ಮರೆಮಾಡಲು ಮತ್ತು ಆ ಮೂಲಕ ಮಾನವ ನಾಗರಿಕತೆಯ ಪರಿಧಿಯಲ್ಲಿ ಅಸ್ತಿತ್ವದಲ್ಲಿರುವವರ ವಿರುಧ್ದ  ಅಭೂತಪೂರ್ವ ಮಟ್ಟದ ಶೋಷಣೆ ಮತ್ತು ರಕ್ತಪಾತವನ್ನು ಸಮರ್ಥಿಸಲು ಬಿಳಿಯರ ಸರ್ವೋಚ್ಚತೆ  ಮತ್ತು ಜನಾಂಗೀಯ ಶ್ರೇಣಿ ವ್ಯವಸ್ಥೆಯ  ಸಿದ್ಧಾಂತಗಳನ್ನು ಬಿತ್ತಿ ಬೆಳಸಿ ಅಭಿವೃದ್ಧಿಪಡಿಸಿದರು. ಸಾಮ್ರಾಜ್ಯಶಾಹಿಯ ವಿಷಯದಲ್ಲಿ ಈಗಾಗಲೇ ನಾವು ಕಂಡಂತೆ  ಜನಾಂಗೀಯತೆಯು ಕೂಡ ಬಂಡವಾಳಶಾಹಿಗೆ ಒಂದು ಉಪ-ಪ್ರಹಸನವಲ್ಲ ಆದರೆ ಅದರ ರಚನಾತ್ಮಕವಾಗಿ ಅಗತ್ಯವಾದ ಲಕ್ಷಣವಾಗಿದೆ. ಇದು ಇಲ್ಲಿ ಮತ್ತು ಅಲ್ಲಿ ಕೆಲವು ಉದಾರ ಸುಧಾರಣೆಗಳೊಂದಿಗೆ ಪರಿಹರಿಸಬಹುದಾದ ಸ್ವತಂತ್ರ ಸಮಸ್ಯೆಯಲ್ಲ.   ಜನಾಂಗೀಯತೆಯು  ಎಲ್ಲಾ ಸಮಯದಲ್ಲೂ ವಿಶ್ವ ವ್ಯವಸ್ಥೆಯ ಕೇಂದ್ರಬಿಂದುವಾಗಿದೆ ಮತ್ತು ಇಂದಿಗೂ ಹಾಗೆಯೇ ಉಳಿದಿದೆ. 

ಸಂಘಟಿತ ಚಳುವಳಿಗಳು ಸಾಧಿಸಿದ ಪ್ರಗತಿ : ಇತ್ತೀಚೆಗೆ ಪ್ರಮುಖ ಸಾಮಾಜಿಕ ಸೂಚಕಗಳ ಪ್ರಗತಿಯು  ಹಲವೆಡೆ ಕೊನೆಗೂ   ಸಂಭವಿಸಿದೆ ಎಂಬುದನ್ನು ಕಾಣಬಹುದು.    ಆದರೆ ವಾಯುವ್ಯ ಯುರೋಪಿನ ಪ್ರಮುಖ ಪ್ರದೇಶಗಳಲ್ಲಿಈ ಪ್ರಗತಿ  ಬಹಳ ತಡವಾಗಿ  ಸಂಭವಿಸಿತು. ಈ ಭಾಗದಲ್ಲಿ ಬಂಡವಾಳಶಾಹಿಯ ಹೊರಹೊಮ್ಮುವಿಕೆಯ ಸುಮಾರು ನಾಲ್ಕು ಶತಮಾನಗಳ ನಂತರ ೧೮೮೦ ರ ದಶಕದಲ್ಲಿ ಕಲ್ಯಾಣ ಮಾನದಂಡಗಳು ಸುಧಾರಿಸಲು ಪ್ರಾರಂಭಿಸಿದವು. 

ಇದು ಸಂಘಟಿತಗೊಂಡ  ಕಾರ್ಮಿಕರ ಏರಿಕೆ ಮತ್ತು ಪ್ರಜಾಪ್ರಭುತ್ವ ಮತ್ತು ಸಮಾಜವಾದಕ್ಕಾಗಿ ಚಳುವಳಿಗಳಿಗೆ ಸೇರಿಕೊಂಡ ಪ್ರಗತಿ.  ಈ ಚಲನೆಗಳು  ಉತ್ಪಾದನೆಯನ್ನು ಮರಳಿ ಪಡೆಯಲು ಅಲ್ಲದೇ  ಮಾನವ ಅಗತ್ಯಗಳನ್ನು ಪೂರೈಸುವ ಸುತ್ತ ಅದನ್ನು ಹೆಚ್ಚು ಸಂಘಟಿಸಲು ಪ್ರಯತ್ನಿಸಿದವು. . ಬಂಡವಾಳಶಾಹಿ ವರ್ಗದ ಅಸಾಧಾರಣ ಪ್ರತಿರೋಧದ ನಡುವೆಯೂ ಆಹಾರ, ಸುರಕ್ಷಿತ ವಸತಿ, ನೈರ್ಮಲ್ಯ ವ್ಯವಸ್ಥೆಗಳು, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣಕ್ಕೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವಂತೆಯೂ ಅವರು ಒತ್ತಾಯಿಸಿದರು.

ರಷ್ಯಾದ ಕ್ರಾಂತಿ ಮತ್ತು ಹೊರವಲಯದಲ್ಲಿ ನಡೆದ ಇತರ ಸಮಾಜವಾದಿ ಕ್ರಾಂತಿಗಳ ನಂತರ ಪ್ರಗತಿಯು ಮತ್ತಷ್ಟು ವೇಗಗೊಂಡಿತು. ಪಶ್ಚಿಮ ಯುರೋಪಿನ ಬಂಡವಾಳಶಾಹಿಗಳನ್ನು ತಮ್ಮದೇ ಆದ ಪ್ರದೇಶಗಳಲ್ಲಿ ಕಾರ್ಮಿಕ ವರ್ಗಗಳಿಗೆ ಮಹತ್ವದ  ರಿಯಾಯಿತಿಗಳನ್ನು ನೀಡುವಂತೆ ಒತ್ತಾಯಕ್ಕೊಳಗಾದವು  ಏಕೆಂದರೆ  ಜರ್ಮನಿ ಮತ್ತು ಇತರ ಹಲವಾರು ಯುರೋಪಿಯನ್ ದೇಶಗಳಲ್ಲಿ ಸಂಭವಿಸುವ ಅಂಚಿಗೆ ಬಂದ ಕ್ರಾಂತಿಯ ನಿಜವಾದ ಸಾಧ್ಯತೆಯನ್ನು ಈ ರಾಷ್ಟ್ರಗಳು ಎದುರಿಸುತ್ತಿದ್ದರು. 

ಈ ಘಟನೆಗಳ ಅರ್ಥವೆಂದರೆ   ಸಾಮಾಜಿಕ ಪ್ರಗತಿಯನ್ನು ಬಂಡವಾಳವು ನಮಗೆ  ಸದ್ಭಾವನೆ ಸದುದ್ದೇಶದಿಂದ  ಸ್ವಯಂಪ್ರೇರಣೆಯಿಂದ ಹಸ್ತಾಂತರಿಸಿದ್ದಲ್ಲ.    ಇದನ್ನು ಆಮೂಲಾಗ್ರ ಸಾಮಾಜಿಕ ಚಳುವಳಿಗಳು ಗೆದ್ದಿವೆ.  ಆರ್ಥಿಕ ಸಾಮಾಜಿಕ ಹೊರವಲಯದಲ್ಲಿರುವ ದೇಶಗಳಲ್ಲಿ , ೨೦ ನೇ ಶತಮಾನದ ಆರಂಭದಲ್ಲಿ ಮಾತ್ರ, ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ಆಮೂಲಾಗ್ರ ವಸಾಹತುಶಾಹಿ ವಿರೋಧಿ ಚಳುವಳಿಗಳ ಉದಯದೊಂದಿಗೆ ನಿಖರವಾಗಿ ಹೊಂದಿಕೆಯಾಗುವವರೆಗೆ ಸಾಮಾಜಿಕ ಕಲ್ಯಾಣದ ಪ್ರಗತಿ ಸಂಭವಿಸುವುದಿಲ್ಲ. ಮತ್ತು ಇಲ್ಲಿಯೇ ನಾವು ನನ್ನ ವಾದದ ತಿರುಳನ್ನು ತಲುಪಲು ಪ್ರಾರಂಭಿಸುತ್ತೇವೆ. ಐರ್ಲೆಂಡ್, ಭಾರತ, ವಿಯೆಟ್ನಾಂ, ಕ್ಯೂಬಾ, ಚೀನಾ, ಅಲ್ಜೀರಿಯಾ, ಅಂಗೋಲಾ, ಇತ್ಯಾದಿಗಳನ್ನು ಒಳಗೊಂಡಂತೆ ಸಂಘಟಿತ ವಸಾಹತುಶಾಹಿ ವಿರೋಧಿ ಪ್ರತಿರೋಧ ಮತ್ತು ಸಶಸ್ತ್ರ ವಿಮೋಚನಾ ಹೋರಾಟಗಳು ಯುರೋಪಿಯನ್ ವಸಾಹತುಶಾಹಿಗಳಿಗೆ ಬಹಳ ಗಂಭೀರವಾದ ವಿರೋಧವನ್ನು ವ್ಯಕ್ತಪಡಿಸಿದವು ಮತ್ತು ೨೦ ನೇ ಶತಮಾನದ ಮಧ್ಯಭಾಗದಲ್ಲಿ ಅವರು ಯಶಸ್ವಿಯಾದರು. ಇದು ಸಣ್ಣ ಸಾಧನೆಯಲ್ಲ. ಭೂಮಿಯ ಮೇಲಿನ ಬಡ ಮತ್ತು ಅತ್ಯಂತ ಶೋಷಿತ ಜನರು ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ಸಾಮ್ರಾಜ್ಯಶಾಹಿ ಶಕ್ತಿಗಳನ್ನು ಜಯಿಸುವಲ್ಲಿ ಯಶಸ್ವಿಯಾದರು. ಮತ್ತು ರಾಜಕೀಯ ವಿಮೋಚನೆಯನ್ನು ಸಾಧಿಸಿದ ನಂತರ, ಅವರು ತಕ್ಷಣವೇ ಆರ್ಥಿಕ ಸಾರ್ವಭೌಮತ್ವದ ತಂತ್ರಗಳನ್ನು ಅನುಸರಿಸಲು ಪ್ರಾರಂಭಿಸಿದರು. ಈ ಚಳುವಳಿಗಳಲ್ಲಿ ಹೆಚ್ಚಿನವು ಸಮಾಜವಾದಿ ಮತ್ತು ಕಮ್ಯುನಿಸ್ಟ್ ವಿಚಾರಗಳಿಂದ ಪ್ರೇರಿತವಾಗಿವೆ, ಇದು ಉತ್ಪಾದಕ ಸಾಮರ್ಥ್ಯಗಳ ಮೇಲೆ ರಾಷ್ಟ್ರೀಯ ನಿಯಂತ್ರಣವನ್ನು ಮರಳಿ ಪಡೆಯಲು ಮತ್ತು ಮಾನವ ಅಗತ್ಯತೆಗಳು ಮತ್ತು ಅಭಿವೃದ್ಧಿ ಉದ್ದೇಶಗಳ ಸುತ್ತ ಅವುಗಳನ್ನು ಸಂಘಟಿಸಲು ನೀಲನಕ್ಷೆಯನ್ನು ಒದಗಿಸಿತು. . ವಸಾಹತುಶಾಹಿಗಳಿಂದ ಪ್ರದೇಶಗಳನ್ನು ಮರಳಿ ಪಡೆಯಲು ಭೂ ಸುಧಾರಣೆಯನ್ನು ಬಳಸಿದರು. ವಿಶ್ವ ಆರ್ಥಿಕತೆಯಲ್ಲಿ ಉತ್ತಮ ಬೆಲೆಗಳನ್ನು ಪಡೆಯಲು ಅವರು ತೈಲ ಮತ್ತು ಖನಿಜಗಳಂತಹ ಪ್ರಮುಖ ಸಂಪನ್ಮೂಲಗಳನ್ನು ರಾಷ್ಟ್ರೀಕರಣಗೊಳಿಸಿದರು. ತಮ್ಮದೇ ಆದ ರಾಷ್ಟ್ರೀಯ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಅವರು ಕೈಗಾರಿಕಾ ನೀತಿಯನ್ನು ಬಳಸಿದರು. ಅವರು ಲಾಭವನ್ನು ರಾಷ್ಟ್ರದ ಒಳಗೇ ಉಳಿಸಿಕೊಳ್ಳಲು  ಬಂಡವಾಳ ನಿಯಂತ್ರಣಗಳನ್ನು ಬಳಸಿದರು ಮತ್ತು ಸಾರ್ವಜನಿಕ ಸೇವೆಗಳನ್ನು ನಿರ್ಮಿಸಲು ಮತ್ತು ಅಗತ್ಯ ಕೈಗಾರಿಕಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಅವರು ಯೋಜನೆಯ ಸಾಧನವನ್ನು  ಬಳಸಿದರು.  

ರಷ್ಯಾದ ಕ್ರಾಂತಿಯ ಪ್ರೇರಣೆ : ಈ ಚಳುವಳಿಗಳಲ್ಲಿ ಹಲವು ರಷ್ಯಾದ ಕ್ರಾಂತಿಯಿಂದ ನೇರವಾಗಿ ಪ್ರೇರಿತವಾಗಿವೆ ಎನ್ನುವುದು  ಆಗಾಗ್ಗೆ ಅಂಗೀಕರಿಸಲಾಗದ  ಒಂದು ಪ್ರಮುಖ ಅಂಶ. . ಆದ್ದರಿಂದ ೧೯೧೭ ಕ್ಕಿಂತ ಮೊದಲು, ರಷ್ಯಾ ಕಡಿಮೆ ವೇತನದ ಕೃಷಿ ಪ್ರದೇಶವಾಗಿದ್ದು, ಪಶ್ಚಿಮ ಯುರೋಪಿಗೆ ಅಗ್ಗದ ಕಚ್ಚಾ ವಸ್ತುಗಳನ್ನು ರಫ್ತು ಮಾಡುತ್ತಿತ್ತು. ವಾಸ್ತವವಾಗಿ, ರಷ್ಯಾದ ಅಂದಿನ ಹಣಕಾಸು ಸಚಿವ ಸ್ವತಃ ಹೇಳಿದರು  :  "ಪಶ್ಚಿಮ ಯುರೋಪಿನೊಂದಿಗಿನ ರಷ್ಯಾದ ಆರ್ಥಿಕ ಸಂಬಂಧಗಳು ವಸಾಹತುಶಾಹಿ ದೇಶಗಳ ಸಂಬಂಧಗಳಿಗೆ ಸಂಪೂರ್ಣವಾಗಿ ಹೋಲಿಸಬಹುದಾದವು"  ರಷ್ಯಾದ ಕ್ರಾಂತಿಯು ವಸಾಹತುಶಾಹಿ ವಿರೋಧಿ ಕ್ರಾಂತಿಯಾಗಿದ್ದು, ಅದು ಸಾಮ್ರಾಜ್ಯಶಾಹಿ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಮತ್ತು ಉತ್ಪಾದನೆಯ ಮೇಲೆ ಸಾರ್ವಭೌಮ ನಿಯಂತ್ರಣವನ್ನು ಪಡೆಯಲು ಪ್ರಯತ್ನಿಸಿತು ಎಂಬುದನ್ನು ನಾವು ತಿಳಿದುಕೊಳ್ಳಬೇಕು . ಈಗ, ಸೋವಿಯತ್ ರಷ್ಯಾದ ಬಗ್ಗೆ  ಸ್ಪಷ್ಟವಾಗಿ ಹೇಳಬೇಕಾದ ಹಲವು ಟೀಕೆಗಳಿವೆ, ಆದರೆ ಅವರ ಅಭಿವೃದ್ಧಿ ಕಾರ್ಯತಂತ್ರವು  ಫಲಿತಾಂಶಗಳನ್ನು ನೀಡಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕೇವಲ ಎರಡು ದಶಕಗಳಲ್ಲಿ, ಅವರು ಕೃಷಿ ಆಧಾರಿತ ಒಳನಾಡು ಹಿನ್ನೆಲೆಯ ಕೃಷಿ ಪ್ರದೇಶದಿಂದ ಪ್ರಮುಖ ಕೈಗಾರಿಕಾ ಶಕ್ತಿಯಾಗಿ ಮಾರ್ಪಟ್ಟರು. ಅವರು ಎರಡನೇ ಮಹಾಯುದ್ಧದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು ಮತ್ತು ಸ್ವಲ್ಪ ಸಮಯದ ನಂತರ ಅವರು ಅಂತರಿಕ್ಷಯಾನ ಎಂಜಿನಿಯರಿಂಗ್‌ನಲ್ಲಿ ಹಲವಾರು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದರು,  ಮೊದಲ ಮಾನವನನ್ನು  ಬಾಹ್ಯಾಕಾಶಕ್ಕೆ ಕಳುಹಿಸಿದರು. . ಈ ಅಭಿವೃದ್ಧಿ ಪಥವನ್ನು ಬೇರೆ ಯಾರೂ ಅನುಕರಿಸಲಾಗಲಿಲ್ಲ .  ಮೌಲ್ಯದ ಬಂಡವಾಳಶಾಹಿ ನಿಯಮವನ್ನು  ಅರ್ಥಮಾಡಿಕೊಂಡ ಕಾರಣ  ಇದನ್ನು  ಸಾಧಿಸಲಾಯಿತು . 


ಬಂಡವಾಳಶಾಹಿ ವಿರುದ್ಧ ಕ್ರಮಗಳು : ಬಂಡವಾಳವು ಅಭಿವೃದ್ಧಿಯಲ್ಲಿ ಲಾಭದಾಯಕವಾಗಿದ್ದಾಗ ಮಾತ್ರ ಹೂಡಿಕೆ ಮಾಡುತ್ತದೆ. ಪರಿಧಿಯಲ್ಲಿ ಇದು ನಿಜವಾದ ಸಮಸ್ಯೆಯನ್ನು ಪ್ರಸ್ತುತಪಡಿಸುತ್ತದೆ ಏಕೆಂದರೆ ತಂತ್ರಜ್ಞಾನ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದಕ್ಕಿಂತ ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಅಗ್ಗದ ಕಾರ್ಮಿಕರನ್ನು ಬಳಸಿಕೊಳ್ಳುವುದು ಬಂಡವಾಳಕ್ಕೆ ಸಾಮಾನ್ಯವಾಗಿ ಹೆಚ್ಚು ಲಾಭದಾಯಕವಾಗಿದೆ. ಆದ್ದರಿಂದ ಹೂಡಿಕೆಗಳನ್ನು ನಡೆಸಲು ಬಂಡವಾಳವನ್ನು ಅವಲಂಬಿಸಿರುವ ದೇಶಗಳು ಅಭಿವೃದ್ಧಿಯಾಗದ ಪರಿಸ್ಥಿತಿಗಳಲ್ಲಿ ಕೊಳೆಯುತ್ತವೆ. ನಿಜವಾದ ಅಭಿವೃದ್ಧಿಯನ್ನು ಬಯಸಿದರೆ, ಅಭಿವೃದ್ಧಿ ಉದ್ದೇಶಗಳನ್ನು ಸಾಧಿಸಲು ಉತ್ಪಾದನೆಯನ್ನು ನೇರವಾಗಿ ಸಜ್ಜುಗೊಳಿಸಲು  ಕೆಲವು ಕಾರ್ಯವಿಧಾನದ ಅಗತ್ಯವಿದೆ. ಆದ್ದರಿಂದ ಸಾರ್ವಜನಿಕ ಹಣಕಾಸು, ಕೈಗಾರಿಕಾ ನೀತಿ ಮತ್ತು ಆರ್ಥಿಕ ಯೋಜನೆ ಇವುಗಳ ಪ್ರಯೋಗ. 

ಸೋವಿಯತ್ ರಷ್ಯಾದ ಕಥೆಯು ಅಭಿವೃದ್ಧಿಯಾಗದಿರುವುದು ಪರಿಹರಿಸಲು ಅಸಾಧ್ಯವಾದ ಸಮಸ್ಯೆಯಲ್ಲ ಎಂದು ಸಾಬೀತುಪಡಿಸುತ್ತದೆ. ವಾಸ್ತವವಾಗಿ, ಇದನ್ನು ಬಹಳ ಬೇಗನೆ ನಿವಾರಿಸಬಹುದು ಎನ್ನುವದು  ಸತ್ಯ. ಆರ್ಥಿಕ ವಿಮೋಚನೆ ಸಾಧಿಸಲು ಪ್ರಯತ್ನಿಸಿದ ಜಾಗತಿಕ ದಕ್ಷಿಣದ ಪ್ರತಿಯೊಂದು ಸರ್ಕಾರವೂ ಇದನ್ನು ಗುರುತಿಸಿತು. ೨೦ ನೇ ಶತಮಾನದ ಮಧ್ಯಭಾಗದಲ್ಲಿ ದಕ್ಷಿಣದ ಹಲವಾರು ದೇಶಗಳು ಸಮಾಜವಾದಿ ತಂತ್ರಗಳನ್ನು ಅಳವಡಿಸಿಕೊಂಡವು. ಇತರರು ಹೆಚ್ಚು ಮಿಶ್ರ ವಿಧಾನವನ್ನು ತೆಗೆದುಕೊಂಡರು.  ಖಾಸಗಿ ಬಂಡವಾಳಕ್ಕೆ ದಿಕ್ಕನ್ನು ತೋರಿಸಲು   ಕೈಗಾರಿಕಾ ನೀತಿಯನ್ನು ರಚಿಸಿದರು.   ಅವರೆಲ್ಲರಿಗೂ, ಭೂಸುಧಾರಣೆ, ರಾಷ್ಟ್ರೀಕರಣ, ಸಾರ್ವಜನಿಕ ಹಣಕಾಸು ಮತ್ತು ಸಾರ್ವಜನಿಕ ಯೋಜನೆಗಳು  ಕೇಂದ್ರವಾಗಿದ್ದವು. ಮತ್ತು ಈ ವಿಧಾನವು ಆದಾಯವನ್ನು ಹೆಚ್ಚಿಸುವಲ್ಲಿ ಮತ್ತು ಕಲ್ಯಾಣವನ್ನು ಸುಧಾರಿಸುವಲ್ಲಿ ಯಶಸ್ವಿಯಾಯಿತು. ಇದು ೫೦, ೬೦ ಮತ್ತು ೭೦ ರ ದಶಕಗಳಲ್ಲಿ ಸಾಮಾಜಿಕ ಸೂಚಕಗಳಲ್ಲಿ ತ್ವರಿತ ಸುಧಾರಣೆಗಳು ಮತ್ತು ಸರಾಸರಿ ೩೨ % ರಷ್ಟು ತಲಾವಾರು ಬೆಳವಣಿಗೆಯ ದರಗಳ ನಿಜವಾದ ಅಭಿವೃದ್ಧಿ ಪವಾಡವನ್ನು ಪ್ರಾರಂಭಿಸಿತು. ಈ ಅಭಿವೃದ್ಧಿ ದರ  ಪಶ್ಚಿಮವು ತನ್ನದೇ ಆದ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಸಾಧಿಸಿದ್ದಕ್ಕಿಂತ ಹೆಚ್ಚಾಗಿದೆ. ಕೆಲವು ಕಾರಣಕ್ಕಾಗಿ, ಈ ಸಾಧನೆ ಮತ್ತು ಅದನ್ನು ಸಕ್ರಿಯಗೊಳಿಸಿದ ತಂತ್ರಗಳನ್ನು ಸಮಕಾಲೀನ ಅಭಿವೃದ್ಧಿ ಚರ್ಚೆಯಲ್ಲಿ ಹೆಚ್ಚಾಗಿ ಮರೆತುಬಿಡಲಾಗಿದೆ.  


ಆದರೆ   ಜಾಗತಿಕ ದಕ್ಷಿಣದಲ್ಲಿ ಆರ್ಥಿಕ ಸಾರ್ವಭೌಮತ್ವದ ಕಡೆಗೆ ಮುಂದರಿಸುವ ಈ ಚಳುವಳಿ ಪ್ರಮುಖ ರಾಜ್ಯಗಳಿಗೆ ಅಸಾಧಾರಣ ಬೆದರಿಕೆಯನ್ನು ಒಡ್ಡಿತು ಏಕೆಂದರೆ ಅದು ಶತಮಾನಗಳಿಂದ ಅವರು ಅವಲಂಬಿಸಿದ್ದ ಅಗ್ಗದ ಕಾರ್ಮಿಕ ಮತ್ತು ಸಂಪನ್ಮೂಲಗಳಿಗೆ ಅವರ ಮುಕ್ತ ದ್ವಾರವನ್ನು ಸೀಮಿತಗೊಳಿಸುತ್ತಿತ್ತು. ದಕ್ಷಿಣದಲ್ಲಿ ಸಾರ್ವಭೌಮ ಅಭಿವೃದ್ಧಿ ಎಂದರೆ ದಕ್ಷಿಣ ದೇಶಗಳು ತಮಗಾಗಿ ಹೆಚ್ಚು ಉತ್ಪಾದಿಸುತ್ತಿವೆ ಮತ್ತು ಸೇವಿಸುತ್ತಿವೆ, ಅಂದರೆ ಆ ಸಂಪನ್ಮೂಲಗಳು ಇನ್ನು ಮುಂದೆ ಅಗ್ಗವಾಗಿ ಬಂಡವಾಳಶಾಹಿ -ಸಾ ಮ್ರಾಜ್ಯಶಾಹಿ  ಜಾಗತಿಕ ಅರ್ಥ ವ್ಯವಸ್ಥೆಯ  ಕೇ೦ದ್ರ  ಬಿಂದುಗಳಾದ  ರಾಷ್ಟ್ರಗಳಿಗೆ ಸಿಗಲಾರವು. ಜಾಗತಿಕವಾಗಿ  ಉತ್ಪಾದನೆ ಮತ್ತು ಪೂರೈಕೆಗಳಲ್ಲಿ  ಹೆಚ್ಚಳ ಕಂಡುಬಂದರೂ ಅದರ ಪರಿಣಾಮ ಲಾಭಗಳನ್ನು ಅಸ್ಥಿರಗೊಳಿಸುವುದು, ಸಾಮ್ರಾಜ್ಯಶಾಹಿ ವ್ಯವಸ್ಥೆಗಳನ್ನು ಅಸ್ಥಿರಗೊಳಿಸುವುದು ಮತ್ತು ಕೇಂದ್ರ ಆರ್ಥಿಕತೆಗಳಲ್ಲಿ  ಬಂಡವಾಳ ಸಂಗ್ರಹಣೆಯನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿಸುವುದು, ಏಕೆಂದರೆ ವಿಶೇಷವಾಗಿ ಸಂಘಟಿತ ಕಾರ್ಮಿಕರ ಶಕ್ತಿಯಿಂದಾಗಿ  ಪಾಶ್ಚಿಮಾತ್ಯ ವೇತನಗಳು ಸಹ ಅದೇ ಸಮಯದಲ್ಲಿ ಏರುತ್ತಿದ್ದವು. ಆದ್ದರಿಂದ ಬಂಡವಾಳಶಾಹಿ ೧೯೭೦ ರ ದಶಕದಲ್ಲಿ ಉತ್ತುಂಗಕ್ಕೇರಿದ ಬಿಕ್ಕಟ್ಟನ್ನು ಎದುರಿಸಿತು ಏಕೆಂದರೆ ಅದು ವಸಾಹತುಶಾಹಿ ನಿರ್ಮೂಲನೆ ಮತ್ತು ಕಾರ್ಮಿಕರ ನ್ಯಾಯದ ಪರಿಸ್ಥಿತಿಗಳಲ್ಲಿ ಕಾರ್ಯಮಾಡುವದು ಕಷ್ಟಕರವಾಗಿ ಕಂಡಿತು.  

 ಬಂಡವಾಳಶಾಹಿ ಸರ್ಕಾರಗಳ ತಿರುಗೇಟು:  ಆದ್ದರಿಂದ ಆರ್ಥಿಕ ಪ್ರಮುಖ  ಸರ್ಕಾರಗಳು ಪಥದಲ್ಲಿ  ಕವಲೊಡೆಯುವಿಕೆಯನ್ನು ಎದುರಿಸಿದವು. ಒಂದೇ ಅವರು ಜಾಗತಿಕ ದಕ್ಷಿಣದಲ್ಲಿ ಆರ್ಥಿಕ ಸಾರ್ವಭೌಮತ್ವವನ್ನೂ  ಮತ್ತು ತಮ್ಮ ನಾಡಿನಲ್ಲಿ ಯೋಗ್ಯವಾದ ವೇತನ ನೀಡುವ ನೀತಿಯನ್ನೂ   ಕಾರ್ಯಗತಗೊಳಿಸಬಹುದು, ಬಂಡವಾಳ ರಾಶಿ ಹಾಕುವದನ್ನು  ತ್ಯಜಿಸಬಹುದು ಮತ್ತು  ಬಂಡವಾಳಶಾಹಿ-ಅಂತ್ಯದ    ಆರ್ಥಿಕತೆಗೆ ಬದಲಾಯಿಸಬಹುದು;  ಅಥವಾ ಪರ್ಯಾಯವಾಗಿ ಅವರು ಕಾರ್ಮಿಕ ಚಳುವಳಿಯನ್ನು ನಾಶಮಾಡುವ ಮೂಲಕ ಮತ್ತು ಸಾಮ್ರಾಜ್ಯಶಾಹಿ ವ್ಯವಸ್ಥೆಯ ಮೂಲ ರಚನೆಯನ್ನು ಹೇಗಾದರೂ ಪುನಃಸ್ಥಾಪಿಸುವ ಮೂಲಕ ಬಂಡವಾಳ ಸಂಗ್ರಹಣೆಯ ಕಾರ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬಹುದು. ಈ ರಾಷ್ಟ್ರಗಳು  ಎರಡನೆಯದನ್ನು ತೀವ್ರವಾಗಿ ಆರಿಸಿಕೊಂಡರು. 

ಸಾಮ್ರಾಜ್ಯಶಾಹಿ ರಾಜ್ಯಗಳು ವಸಾಹತುಶಾಹಿ ವಿರೋಧಿ ಚಳುವಳಿಗೆ ಎರಡು ರೀತಿಯಲ್ಲಿ ಪ್ರತಿಕ್ರಿಯಿಸಿದವು. ಮೊದಲನೆಯದಾಗಿ, ಅವರು ವಸಾಹತುಶಾಹಿ-ವಿರೋಧಿ ನಾಯಕರನ್ನು ಪದಚ್ಯುತಗೊಳಿಸಲು ಮಿಲಿಟರಿ ಹಸ್ತಕ್ಷೇಪ ಮಾಡಿದರು. ಇಲ್ಲಿರುವ ಪಟ್ಟಿ ಉದ್ದವಾಗಿದೆ ಮತ್ತು ಜಾಗತಿಕ ದಕ್ಷಿಣದಲ್ಲಿ ಮನೆಮಾತಾಗಿರುವ ಮತ್ತು ನಾವೆಲ್ಲರೂ ತಿಳಿದುಕೊಳ್ಳಬೇಕಾದ ಹಲವಾರು ವ್ಯಕ್ತಿಗಳನ್ನು ಒಳಗೊಂಡಿದೆ.   ಇರಾನ್‌ನಲ್ಲಿ ೧೯೫೩ ರಲ್ಲಿ ಪಾಶ್ಚಿಮಾತ್ಯ ಬೆಂಬಲಿತ ದಂಗೆಯಿಂದ. ಮುಹಮ್ಮದ್ ಮುಸಾಡೆಕ್ ಅವರನ್ನು  ಪದಚ್ಯುತಗೊಳಿಸಲಾಯಿತು .    ಗ್ವಾಟೆಮಾಲಾದಲ್ಲಿ ಯಾಕೊಬೊ ಅರ್ಬೆನ್ಜ್ ೧೯೫೪ ರಲ್ಲಿ ಪಾಶ್ಚಿಮಾತ್ಯ ಬೆಂಬಲಿತ ದಂಗೆಯಿಂದ ಪದಚ್ಯುತರಾದರು.  ಕಾಂಗೋದಲ್ಲಿ ಪ್ಯಾಟ್ರಿಸ್ ಲುಮುಂಬಾ ೧೯೬೧ ರಲ್ಲಿ ಪಾಶ್ಚಿಮಾತ್ಯ ಬೆಂಬಲಿತ ದಂಗೆಯಿಂದ ಪದಚ್ಯುತಗೊಳಿಸಲಾದರು . ಬ್ರೆಜಿಲ್‌ನಲ್ಲಿ ಜೊಅವ್ ಗುಲಾರ್  ೧೯೬೪ ರಲ್ಲಿ ಪಾಶ್ಚಿಮಾತ್ಯ ಬೆಂಬಲಿತ ದಂಗೆಯಿಂದ ಪದಚ್ಯುತಗೊಂಡರು. ಘಾನಾದಲ್ಲಿ ಕ್ವಾಮೆ ಎಂಕ್ರಮಾ ೧೯೬೬ ರಲ್ಲಿ ಪಾಶ್ಚಿಮಾತ್ಯ ಬೆಂಬಲಿತ ದಂಗೆಯಿಂದ ಪದಚ್ಯುತಗೊಂಡರು. ಇಂಡೋನೇಷ್ಯಾದ ಸುಕಾರ್ನೋ  ೧೯೬೭ ರಲ್ಲಿ ಪಾಶ್ಚಿಮಾತ್ಯ ಬೆಂಬಲಿತ ದಂಗೆಯಿಂದ ಪದಚ್ಯುತಗೊಂಡರು.  ಚಿಲಿಯಲ್ಲಿ ಸಾಲ್ವಡಾರ್ ಆಯೆಂಡೆ ೧೯೭೩ ರಲ್ಲಿ ಪಾಶ್ಚಿಮಾತ್ಯ ಬೆಂಬಲಿತ ದಂಗೆಯಿಂದ ಪದಚ್ಯುತಗೊಂಡ ಕಥೆ ಸಾಮಾನ್ಯವಾಗಿ ಎಲ್ಲರಿಗೂ  ಗೊತ್ತಿದೆ. ಮತ್ತು ಇನ್ನೂ ಅನೇಕರನ್ನು ಸ್ಥಾನಗಳಿಂದ ಕೆಳಗಿಳಿಸಿ ಅವರ ಸ್ಥಳದಲ್ಲಿ ಪಾಶ್ಚಿಮಾತ್ಯ ಆರ್ಥಿಕ ಹಿತಾಸಕ್ತಿಗಳಿಗೆ ಅನುಕೂಲಕರರಾಗಿದ್ದು  ಮತ್ತು ಪ್ರಗತಿಶೀಲ ಯುಗದ ಸಮಾಜವಾದಿ ಮತ್ತು ಅಭಿವೃದ್ಧಿಶೀಲ ಸುಧಾರಣೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಬಲಪಂಥೀಯ ಸರ್ವಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಇತ್ತೀಚಿನ ಅಧ್ಯಯನದ ಪ್ರಕಾರ, ಅಧಿಕೃತ ದಾಖಲೆಗಳ ಆಧಾರದ ಮೇಲೆ  ಅಮೇರಿಕ ಸಂಯುಕ್ತ ಸಂಸ್ಥಾನವು  (ಪ್ರಜಾಪ್ರಭುತ್ವದ ಬೆಳಕು !) ಈ ಅವಧಿಯಲ್ಲಿ ಜಾಗತಿಕ ದಕ್ಷಿಣ ದೇಶಗಳಲ್ಲಿ ಕನಿಷ್ಠ ೭೦ ಆಡಳಿತ ಬದಲಾವಣೆ ಕಾರ್ಯಾಚರಣೆಗಳನ್ನು ನಡೆಸಿತು,. ಈ ಹಿಂಸಾಚಾರವನ್ನು ಹೆಚ್ಚಾಗಿ ಶೀತಲ ಸಮರದ ಭಾಗವಾಗಿ ಸಮಾಜವಾದವನ್ನು ನಾಶಮಾಡುವ ಅಭಿಯಾನವಾಗಿ   ಸಮರ್ಥನೆ ಮಾಡಲಾಗುತ್ತದೆ. ಆದರೆ ಅದನ್ನು  ಸೈದ್ಧಾಂತಿಕ ಯುದ್ಧ ಮಾತ್ರವೆಂದು  ಬಿಂಬಿಸುವುದರಿಂದ ಈ ಇತಿಹಾಸದ ನಿಜವಾದ ಭೌತಿಕ ಗುರಿಯನ್ನು  ಬಚ್ಚಿಡಲಾಗುತ್ತದೆ. . ಸಮಾಜವಾದವು ದಕ್ಷಿಣಕ್ಕೆ ತಮ್ಮದೇ ಆದ ಉತ್ಪಾದಕ ಸಾಮರ್ಥ್ಯಗಳ ಮೇಲೆ ಹಿಡಿತ ಸಾಧಿಸಲು ಅನುವು ಮಾಡಿಕೊಡುತ್ತದೆ, ಇದು ಬಂಡವಾಳಶಾಹಿ ಅವಲಂಬಿಸಿರುವ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಹಾಳು ಮಾಡುತ್ತದೆ ಎಂದು ತಿಳಿದಿದ್ದರಿಂದ ಪಾಶ್ಚಿಮಾತ್ಯ ಶಕ್ತಿಗಳು ಸಮಾಜವಾದಿ ಚಳುವಳಿಗಳ ಹಿಂದೆ ಹೋದವು, ಮತ್ತು ಹೀಗಾಗಿ ವಿಯೆಟ್ನಾಂ ಮತ್ತು ಉತ್ತರ ಕೊರಿಯಾದಂತಹ ದೇಶಗಳ ಹತಾಶ ದಹನಕ್ಕೆ ಕಾರಣವಾಗುತ್ತದೆ. ಆದರೆ ಪಾಶ್ಚಿಮಾತ್ಯ ಶಕ್ತಿಗಳು ಸಮಾಜವಾದಿ ಚಳುವಳಿಗಳ ಮೇಲೆ ಮಾತ್ರ ದಾಳಿ ಮಾಡಲಿಲ್ಲ. ಅವರು ಆರ್ಥಿಕ ಸಾರ್ವಭೌಮತ್ವವನ್ನು ಅನುಸರಿಸುವ ಯಾರನ್ನಾದರೂ ಬೆನ್ನಟ್ಟಿದರು ಮತ್ತು ಅವರು ಅದನ್ನು ಸಮಾನ ಕ್ರೂರತೆಯಿಂದ ಮಾಡಿದರು.  ಬ್ರೆಜಿಲ್, ಗ್ವಾಟೆಮಾಲಾ, ಡಿಆರ್‌ಸಿ (Democratic Republic of Congo) ಮತ್ತು ಅಭಿವೃದ್ಧಿಶೀಲ ಸರ್ಕಾರಗಳನ್ನು ಹೊಂದಿದ್ದ ಇತರ ಅನೇಕ ಸ್ಪಷ್ಟವಾಗಿ  ಅಲಿಪ್ತ ದೇಶಗಳನ್ನು ಗುರಿಯಾಗಿಸಿಕೊಂಡಿದ್ದರ ಕಾರಣವನ್ನು  ಇದು ವಿವರಿಸುತ್ತದೆ. ಶೀತಲ ಸಮರವು ಸಮಾಜವಾದವನ್ನು ಸೋಲಿಸುವ ಬಗ್ಗೆ ಅಲ್ಲ. ಇದು ಬಾಹ್ಯ ಪರಿಧಿಯಲ್ಲಿ ಆರ್ಥಿಕ ಸಾರ್ವಭೌಮತ್ವವನ್ನು ನಾಶಮಾಡುವ ಅಭಿಯಾನವಾಗಿತ್ತು., ದಂಡ ಯಾತ್ರೆಯಾಗಿತ್ತು. 

ಇಸ್ರಾಯೇಲಿನ ಪಾತ್ರ : ಇಸ್ರೇಲ್ ಬಗ್ಗೆ ಸಂಕ್ಷಿಪ್ತವಾಗಿ ಹೇಳುವದು ಇಲ್ಲಿ ಪ್ರಸ್ತುತ. ಯಹೂದ್ಯ  ಝಯೋನಿಸ್ಟ್ ಯೋಜನೆಗೆ ಪಾಶ್ಚಿಮಾತ್ಯ ಬೆಂಬಲವು ವಾಸ್ತವವಾಗಿ ಈ ಇತಿಹಾಸದ ಭಾಗವಾಗಿದೆ. ಯೂರೋಪಿನ  ಆಡಳಿತ ವರ್ಗಗಳಲ್ಲಿನ ಪ್ರಮುಖ ವ್ಯಕ್ತಿಗಳು ಮಧ್ಯಪ್ರಾಚ್ಯದಲ್ಲಿ ನೆಲೆಸಿದ  ವಸಾಹತುವನ್ನು ಬೆಂಬಲಿಸಲು ಸಿದ್ಧರಿದ್ದರು ಏಕೆಂದರೆ ಅವರು ಇದನ್ನು ಆ  ಪ್ರದೇಶದಲ್ಲಿ ತಮ್ಮ ಹೊರಠಾಣೆ ಸ್ಥಾಪಿಸುವ ಮಾರ್ಗವೆಂದು ಕಂಡಿದ್ದರು. ಅಲ್ಲಿ ಅವರು ತೈಲ ಮತ್ತು ಇತರ ಸಂಪನ್ಮೂಲಗಳ ಮೇಲೆ ಗಣನೀಯ ಹಕ್ಕುಗಳನ್ನು ಹೊಂದಿದ್ದರು ಮತ್ತು ಅದನ್ನು ಉಳಿಸಿಕೊಳ್ಳಲು ಬಯಸಿದ್ದರು. ಆದ್ದರಿಂದ ೧೯೬೦ ರ ದಶಕದಲ್ಲಿ ಅಮೇರಿಕ ದೇಶವು  ಝಯೋನಿಸ್ಟ್ ಯೋಜನೆಗಳನ್ನು ಬೆಂಬಲಿಸಲು ಪ್ರಾರಂಭಿಸಿತು ಮತ್ತು ಇಸ್ರೇಲ್ ಶಸ್ತ್ರಾಸ್ತ್ರ ಉದ್ಯಮದಲ್ಲಿ ಭಾರೀ ಹೂಡಿಕೆ ಮಾಡಿತು, ಇಸ್ರೇಲ್ ಅನ್ನು ಉತ್ತರ ಆಫ್ರಿಕಾ, ಮಧ್ಯಪ್ರಾಚ್ಯದಲ್ಲಿ ಸಮಾಜವಾದಿ ಮತ್ತು ರಾಷ್ಟ್ರೀಯ ವಿಮೋಚನಾ ಹೋರಾಟಗಳ ವಿರುದ್ಧ ಪ್ರತಿ-ಕ್ರಾಂತಿಕಾರಿ ಹಸ್ತಕ್ಷೇಪಗಳಿಗೆ ವೇದಿಕೆಯಾಗಿ ಬಳಸುವ ಸ್ಪಷ್ಟ ಉದ್ದೇಶದಿಂದ, ಅವರು ಮೂರು ಖಂಡಗಳನ್ನು ಜೋಡಿಸುವ  ಕೀಲು  ಎಂದು ಪರಿಗಣಿಸಿದ ಸ್ಥಳದಲ್ಲಿ. ಆ ಪ್ರದೇಶದಲ್ಲಿ ಸಾರ್ವಭೌಮ ಬೆಳವಣಿಗೆಗಳ ದೂರದೃಷ್ಟಿಯನ್ನು  ಒಪ್ಪಿಕೊಳ್ಳುವದು  ಅಮೇರಿಕ ದೇಶಕ್ಕೆ  ಸಾಧ್ಯವಾಗಲಿಲ್ಲ. ವಿಮೋಚನಾ ಚಳುವಳಿಗಳನ್ನು ಹತ್ತಿಕ್ಕಬೇಕಾಯಿತು ಮತ್ತು ಅವರು ಮತ್ತು ಅವರು ಇದನ್ನು ಮಾಡಲು ಇಸ್ರೇಲ್ ಅನ್ನು ಬಳಸಿದರು ಮತ್ತು ಇದನ್ನು ಚೆನ್ನಾಗಿ ದಾಖಲಿಸಲಾಗಿದೆ. ಕುತೂಹಲಕಾರಿಯಾಗಿ ಅವರು ದಕ್ಷಿಣ ಆಫ್ರಿಕಾವನ್ನು ನಿಖರವಾಗಿ ಅದೇ ರೀತಿಯಲ್ಲಿ ಬಳಸಿದರು.  ಪಾಶ್ಚಿಮಾತ್ಯ ಶಕ್ತಿಗಳು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ಆಡಳಿತವನ್ನು ಬೆಂಬಲಿಸಲು ಪ್ರಮುಖ ಕಾರಣವೆಂದರೆ ಅದು ಹೆಚ್ಚು ಮಿಲಿಟರಿಗೊಳಿಸಿದ ಪಾಶ್ಚಿಮಾತ್ಯ ವಸಾಹತುಶಾಹಿ ಹೊರಠಾಣೆಯಾಗಿ ಕಾರ್ಯನಿರ್ವಹಿಸಿತು. ದಕ್ಷಿಣ ಆಫ್ರಿಕಾದೊಳಗೆ ಮಾತ್ರವಲ್ಲದೆ ಅಂಗೋಲಾ, ಮೊಝ೦ಬಿಕ್, ಜಿಂಬಾಬ್ವೆ, ನಮೀಬಿಯಾ, ಡಿಆರ್‌ಸಿ ಇತ್ಯಾದಿಗಳಲ್ಲಿಯೂ ಸಹ ಈ ಪ್ರದೇಶದಲ್ಲಿ ಪ್ರತಿ-ಬಂಡಾಯ ಕಾರ್ಯಾಚರಣೆಗಳನ್ನು ನಡೆಸಲು ಇದು ಸಜ್ಜಾಗಿತ್ತು. 

ಇಸ್ರೇಲ್‌ಗೆ ಅಮೆರಿಕದ ಬೆಂಬಲದ ಬಗ್ಗೆ ಜನರು ಹೆಚ್ಚಾಗಿ ದಿಗ್ಭ್ರಮೆಗೊಳ್ಳುವುದರಿಂದ, ಪ್ರಸ್ತುತ ಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಈ ಅಂಶವು ನಿರ್ಣಾಯಕವಾಗಿದೆ. ಉದಾಹರಣೆಗೆ, ಬೈಡೆನ್ ಆಡಳಿತದಂತೆ, ಅಮೆರಿಕದ ನಾಗರಿಕರು ಸೇರಿದಂತೆ ವ್ಯಾಪಕವಾದ ಜನಪ್ರಿಯ ಅಸಮಾಧಾನಗಳ ನಡುವೆಯೂ ಅಮೇರಿಕಾದ ಅಧ್ಯಕ್ಷ ಬೈಡೆನ್ ಆಡಳಿತವು  ಅಂತರರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಕೆಳಮಟ್ಟಕ್ಕೆ ತರುವ ಹಂತಕ್ಕೆ ಸ್ಪಷ್ಟವಾದ ಯುದ್ಧ ಅಪರಾಧಗಳನ್ನು ಬೆಂಬಲಿಸಲು ಸಿದ್ಧರಿದ್ದರು. ಯುಎಸ್ ಚುನಾವಣೆಗಳಲ್ಲಿ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ನ ಶಕ್ತಿ ಆಸಕ್ತಿದಾಯಕವಾಗಿದೆ ಆದರೆ  ಪೂರ್ಣ ಕಥೆಯಲ್ಲ.   ವಾಸ್ತವವೆಂದರೆ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಯಾವುದೇ ವೆಚ್ಚದಲ್ಲಿ ಮಧ್ಯಪ್ರಾಚ್ಯದಲ್ಲಿ ತಮ್ಮ ಮಿಲಿಟರಿ ಪ್ರತಿನಿಧಿಯನ್ನು ಬಲಪಡಿಸುವುದು ಅಮೇರಿಕ ದೇಶದ ಆಡಳಿತ ವರ್ಗದ ಹಿತಾಸಕ್ತಿಗಳಲ್ಲಿ ೧೦೦% ಆಗಿದೆ. ರೇಗನ್ ಮತ್ತು ಥ್ಯಾಚರ್ ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ  ಆಡಳಿತದ  ಬೆಂಬಲಕ್ಕೆ  ಒಟ್ಟಾಗಿ ಜೊತೆಯಾಗಿ ನಿಂತರು. ಅದು ಕಥೆಯ ಒಂದು ಭಾಗ ಮಾತ್ರ.  ಉತ್ತರ ರಾಜ್ಯಗಳು ವಿಮೋಚನಾ ಚಳುವಳಿಗಳ ವಿರುದ್ಧ ಮಿಲಿಟರಿ ಹಸ್ತಕ್ಷೇಪ ಮಾಡುತ್ತಿವೆ ಎಂಬುದೇ  ನಿರ್ಣಾಯಕ ಅಂಶ.  

  ಈ ಹಿನ್ನಡೆಗಳ ಹೊರತಾಗಿಯೂ, ಜಾಗತಿಕ ದಕ್ಷಿಣ  ಇನ್ನೂ ಏರುತ್ತಿತ್ತು. ವಿಶ್ವಸಂಸ್ಥೆಯಲ್ಲಿ ಬಹುಮತವನ್ನು ಹೊಂದಿರುವ ಅಲಿಪ್ತ ಚಳುವಳಿ  ತಮ್ಮೊಳಗೇ ಸಹಕರಿಸಲು ೭೭ ರಾಷ್ಟ್ರಗಳ  ಗುಂಪನ್ನು (G77) ರಚಿಸಿತು.  

(ಟಿಪ್ಪಣಿ: ವಿಶ್ವಸಂಸ್ಥೆಯಲ್ಲಿ (UN) ಗುಂಪು 77 (G77) ಅಭಿವೃದ್ಧಿಶೀಲ ರಾಷ್ಟ್ರಗಳ ಒಕ್ಕೂಟವಾಗಿದ್ದು, ಅದರ ಸದಸ್ಯರ ಸಾಮೂಹಿಕ ಆರ್ಥಿಕ ಹಿತಾಸಕ್ತಿಗಳನ್ನು ಉತ್ತೇಜಿಸಲು ಮತ್ತು ವಿಶ್ವಸಂಸ್ಥೆಯಲ್ಲಿ ವರ್ಧಿತ ಜಂಟಿ ಮಾತುಕತೆ ಸಾಮರ್ಥ್ಯವನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ. ಈ ಗುಂಪು ಸಾಮಾನ್ಯ ದಕ್ಷಿಣ-ದಕ್ಷಿಣ ಸಿದ್ಧಾಂತವನ್ನು ಹೊಂದಿರುವ ವೈವಿಧ್ಯಮಯ ರಾಜ್ಯಗಳನ್ನು ಒಳಗೊಂಡಿದೆ.)   

ಮತ್ತು 1974 ರಲ್ಲಿ ಈ ದೇಶಗಳು    ಹೊಸ ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯನ್ನು     (New International Economic Order - N I E O) ಅಂಗೀಕರಿಸಿದರು. ಇದರ ಮೂಲಕ  ರಾಷ್ಟ್ರೀಯ ಆರ್ಥಿಕ ಸಾರ್ವಭೌಮತ್ವದ ತತ್ವಗಳನ್ನು ಸ್ಥಾಪಿಸುವುದು ದಕ್ಷಿಣ ರಾಜ್ಯಗಳಿಗೆ ಭಾರಿ ಗೆಲುವು ಆಗಿತ್ತು.  


ಶ್ರೀಮಂತ ಸರ್ಕಾರಗಳ ಹೊಸ ಕ್ರಮಗಳು : ಈ ಸಮಯದಲ್ಲಿ ಪಾಶ್ಚಿಮಾತ್ಯ ಸರ್ಕಾರಗಳು ಈ ದಂಗೆಕೋರ ದಕ್ಷಿಣವನ್ನು ನಿಯಂತ್ರಿಸುವ ಮಾರ್ಗಕ್ಕಾಗಿ ಪರದಾಡುತ್ತಿದ್ದವು.  NIEO ಇನ್ನೂ ಹೊಸದಾಗಿದ್ದಾಗ   ಜಾಗತಿಕ ದಕ್ಷಿಣ ರಾಷ್ಟ್ರಗಳು ಹೊಡೆತ ಪಡೆದವು .   ೧೯೮೦ ರಲ್ಲಿ,  ಅಮೇರಿಕ ದೇಶದ ಕೇಂದ್ರ ಬ್ಯಾಂಕ್  ಫೆಡರಲ್ ರಿಸರ್ವ್‌ನ ಅಧ್ಯಕ್ಷರಾದ ಪಾಲ್ ವೋಲ್ಕರ್, ಬಡ್ಡಿದರಗಳನ್ನು ನಾಟಕೀಯವಾಗಿ  ೨೦% ಕ್ಕಿಂತ ಹೆಚ್ಚಿಸಿದರ ಮೂಲಕ   ಅಮೇರಿಕಾದ ಆರ್ಥಿಕತೆಯಲ್ಲಿ ಹಿಂಜರಿತವನ್ನು ಉಂಟುಮಾಡಿತು,  ಇದು ಆ ದೇಶದಲ್ಲಿ   ಸಂಘಟಿತ ಕಾರ್ಮಿಕರ ಬೆನ್ನನ್ನು ಮುರಿಯಲು ಉದ್ದೇಶಪೂರ್ವಕವಾಗಿತ್ತು. ಅಮೇರಿಕಾದ ಹೊರಗೆ  ಜಾಗತಿಕ ದಕ್ಷಿಣದಾದ್ಯಂತ ಈ ಕ್ರಮದಿಂದಾಗಿ ಸಾಲದ ಬಿಕ್ಕಟ್ಟುಗಳು  ಉಂಟಾದವು.   ಅಮೇರಿಕ ದೇಶವು  ವಿಶ್ವ ಬ್ಯಾಂಕ್ (World Bank) ಮತ್ತು  ಅಂತರರಾಷ್ಟ್ರೀಯ ಹಣಕಾಸು ನಿಧಿ  (International  Monetary  Fund - I M F)  ಈ ಸಂಸ್ಥೆಗಳನ್ನು ಬಳಸಿಕೊಂಡು ಪ್ರದೇಶದಾದ್ಯಂತ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳನ್ನು (Structural Adjustment Programme) ಹೇರಲು  ಈ ಬಿಕ್ಕಟ್ಟನ್ನು ಉಪಯೋಗಿಸಿಕೊ೦ಡಿತು.   ರಚನಾತ್ಮಕ ಹೊಂದಾಣಿಕೆಯು  ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸಲು, ಅವುಗಳ ಸಂಪನ್ಮೂಲಗಳನ್ನು ಖಾಸಗೀಕರಣಗೊಳಿಸಲು, ಸಾರ್ವಜನಿಕ ಸೇವೆಗಳನ್ನು ಕಡಿತಗೊಳಿಸಲು, ಕೈಗಾರಿಕಾ ನೀತಿಯನ್ನು ರದ್ದುಗೊಳಿಸಲು ಮತ್ತು ಕಾರ್ಮಿಕ ಮತ್ತು ಪರಿಸರದ ಮೇಲಿನ ರಕ್ಷಣೆಗಳನ್ನು ಕಡಿತಗೊಳಿಸಲು  ಸರ್ಕಾರಗಳನ್ನು ಒತ್ತಾಯಿಸಿತು. ಇದರಿಂದಾಗಿ  ವಸಾಹತುಶಾಹಿ ವಿರೋಧಿ ಯುಗದ ನೀತಿಗಳ ದಿಢೀರ್ ಪತನವಾಯಿತು.  ಇದು ನವ ಉದಾರವಾದಿ ಸುಧಾರಣೆ (Neo-Liberal Reform)ಯ ತೀಕ್ಷ್ಣವಾದ ತುದಿಯಾಗಿದ್ದು, ಅದನ್ನು ಅಮೇರಿಕ  ಅಥವಾ ಬ್ರಿಟನ್‌ನಲ್ಲಿ ಜಾರಿ ತರುವದಕ್ಕಿಂತ  ಜಾಗತಿಕ ಆರ್ಥಿಕ ಸಂಸ್ಥೆಗಳು ಮತ್ತು ರಚನಾತ್ಮಕ ಹೊಂದಾಣಿಕೆಯ ಕ್ರಮಗಳು :ಹೆಚ್ಚು ಕ್ರೂರವಾಗಿ ಜಾಗತಿಕ ದಕ್ಷಿಣದ ಮೇಲೆ ಹೇರಲಾಯಿತು. . 

ಇದು ಒಂದು ಪ್ರಮುಖ ಅಂಶ.    ನವ ಉದಾರವಾದ ಎಂಬ ಪದವನ್ನು ಬಳಸುವ ರೀತಿ  ಅನೇಕ ಬಾರಿ ಸ್ಪಷ್ಟವಾಗಿಲ್ಲ. 

ಇಲ್ಲಿನ ಭೌಗೋಳಿಕ ರಾಜಕೀಯ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನವ ಉದಾರವಾದಿ ತಿರುವು ನಿರ್ದಿಷ್ಟವಾಗಿ ದಕ್ಷಿಣದಲ್ಲಿ ಆರ್ಥಿಕ ಸಾರ್ವಭೌಮತ್ವದ ಮೇಲೆ ದಾಳಿ ಮಾಡುವ ಮತ್ತು ಕಾರ್ಮಿಕ ದುಡಿಮೆ ಮತ್ತು ಸಂಪನ್ಮೂಲಗಳನ್ನು ಮತ್ತೆ ಅಗ್ಗಗೊಳಿಸುವುದು ಮತ್ತು ಕಸಿದುಕೊಳ್ಳುವ ಉದ್ದೇಶದಿಂದ ವಸಾಹತುಶಾಹಿ ವಿರೋಧಿ ಚಳುವಳಿಗಳ ಯಶಸ್ಸಿಗೆ ಪ್ರತಿಕ್ರಿಯೆಯಾಗಿ ಸಂಭವಿಸಿದೆ. ನವ ಉದಾರವಾದವು ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಪುನಃಸ್ಥಾಪಿಸಲು ಕಾರ್ಯವಿಧಾನವಾಗಿತ್ತು. ಆದ್ದರಿಂದ ಅದು ಒಂದು ದಂಗೆಯಂತಿತ್ತು. ೧೯೮೦ ಮತ್ತು ‘೯೦ ರ ದಶಕಗಳಲ್ಲಿ ಸ್ಥೂಲ ಆರ್ಥಿಕ ನೀತಿಯ ಮೇಲಿನ ಅಧಿಕಾರವನ್ನು ದಕ್ಷಿಣದ ಸಂಸತ್ತುಗಳಿಂದ ವಾಷಿಂಗ್ಟನ್, ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲಿರುವ ಬ್ಯಾಂಕರ್‌ಗಳು ಮತ್ತು ತಂತ್ರಜ್ಞರಿಗೆ ವರ್ಗಾಯಿಸಲಾಯಿತು. ದಕ್ಷಿಣದಲ್ಲಿ ಆರ್ಥಿಕ ಸ್ವಾತಂತ್ರ್ಯದ  ಯುಗ ಹೆಚ್ಚು ಕಾಲ ಹೆಚ್ಚು ಕಾಲ ಉಳಿಯದೇ ಬೇಗನೆ ಮುಗಿದಿತ್ತು.

(ಟಿಪ್ಪಣಿ); ನವ ಉದಾರವಾದದ ಪ್ರವೇಶ ಮತ್ತು ಪ್ರಾಬಲ್ಯ:  ನವ ಉದಾರವಾದವು ಒಂದು ರಾಜಕೀಯ ಮತ್ತು ಆರ್ಥಿಕ ಸಿದ್ಧಾಂತವಾಗಿದ್ದು, ಇದು ಮುಕ್ತ ಮಾರುಕಟ್ಟೆ ಬಂಡವಾಳಶಾಹಿ, ಖಾಸಗೀಕರಣ, ಅನಿಯಂತ್ರಣ ಮತ್ತು ಆರ್ಥಿಕತೆಯಲ್ಲಿ ಸರ್ಕಾರದ ಕಡಿಮೆ ಪಾತ್ರವನ್ನು ಒತ್ತಿಹೇಳುತ್ತದೆ.

ವ್ಯಾಖ್ಯಾನ ಮತ್ತು ಪ್ರಮುಖ ತತ್ವಗಳು: ನವ ಉದಾರವಾದವು ಸರ್ಕಾರದಿಂದ ಖಾಸಗಿ ವಲಯಕ್ಕೆ ಆರ್ಥಿಕ ನಿಯಂತ್ರಣವನ್ನು ವರ್ಗಾಯಿಸಲು ಪ್ರತಿಪಾದಿಸುತ್ತದೆ, ಮುಕ್ತ ಮಾರುಕಟ್ಟೆ ಸ್ಪರ್ಧೆಯನ್ನು ಬೆಂಬಲಿಸುವ ನೀತಿಗಳನ್ನು ಉತ್ತೇಜಿಸುತ್ತದೆ. ಇದು ಹಲವಾರು ಪ್ರಮುಖ ತತ್ವಗಳಿಂದ ನಿರೂಪಿಸಲ್ಪಟ್ಟಿದೆ, ಅವುಗಳೆಂದರೆ: ಖಾಸಗೀಕರಣ: ದಕ್ಷತೆಯನ್ನು ಹೆಚ್ಚಿಸಲು ಮತ್ತು ಸರ್ಕಾರಿ ವೆಚ್ಚವನ್ನು ಕಡಿಮೆ ಮಾಡಲು ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಖಾಸಗಿ ಹೂಡಿಕೆದಾರರಿಗೆ ಮಾರಾಟ ಮಾಡುವುದು.

ಅನಿಯಂತ್ರಣ: ಸ್ಪರ್ಧೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ವ್ಯವಹಾರಗಳ ಮೇಲಿನ ಸರ್ಕಾರಿ ನಿಯಮಗಳನ್ನು ಕಡಿಮೆ ಮಾಡುವುದು.

ಜಾಗತೀಕರಣ: ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮುಕ್ತ ವ್ಯಾಪಾರ ಮತ್ತು ಗಡಿಗಳಲ್ಲಿ ಬಂಡವಾಳದ ಚಲನೆಯನ್ನು ಉತ್ತೇಜಿಸುವುದು.

ವಿತ್ತೀಯ ಮಿತವ್ಯಯ: ಸರ್ಕಾರಿ ಕೊರತೆಗಳು ಮತ್ತು ಸಾಲವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ನೀತಿಗಳನ್ನು ಜಾರಿಗೆ ತರುವುದು, ಆಗಾಗ್ಗೆ ಸಾರ್ವಜನಿಕ ಖರ್ಚು ಮತ್ತು ಸಾಮಾಜಿಕ ಸೇವೆಗಳಿಗೆ ಕಡಿತ ಮಾಡುವ ಮೂಲಕ.

ಐತಿಹಾಸಿಕ ಸಂದರ್ಭ

೨೦ ನೇ ಶತಮಾನದ ಅಂತ್ಯದಲ್ಲಿ, ವಿಶೇಷವಾಗಿ  ಬ್ರಿಟನ್ನಿನಲ್ಲಿ  ಮಾರ್ಗರೇಟ್ ಥ್ಯಾಚರ್ ಮತ್ತು ಯುಎಸ್‌ನಲ್ಲಿ ರೊನಾಲ್ಡ್ ರೇಗನ್‌ನಂತಹ ನಾಯಕರ ಆಡಳಿತದ ಸಮಯದಲ್ಲಿ ನವ ಉದಾರವಾದವು ಪ್ರಾಮುಖ್ಯತೆಯನ್ನು ಪಡೆಯಿತು. ಈ ನಾಯಕರು ಮಾರುಕಟ್ಟೆ-ಆಧಾರಿತ ಸುಧಾರಣೆಗಳ ಮೂಲಕ ತಮ್ಮ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿರುವ ನವ ಉದಾರವಾದ ನೀತಿಗಳನ್ನು ಜಾರಿಗೆ ತಂದರು. ಈ ಪದವನ್ನು ಮೊದಲು ೧೯೩೮ ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ರಚಿಸಲಾಯಿತು, ಆದರೆ ೧೯೮೦ಯ  ದಶಕದಲ್ಲಿ ಆ ಕಾಲದ ಆರ್ಥಿಕ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ಮಾರುಕಟ್ಟೆ ಆಧಾರಿತ ನೀತಿಗಳತ್ತ ಬದಲಾವಣೆಯನ್ನು ವಿವರಿಸಲು ಇದನ್ನು ವ್ಯಾಪಕವಾಗಿ ಬಳಸಲಾಯಿತು.

ನವ ಉದಾರವಾದದ ವಿಮರ್ಶಕರು ಇದು ಹೆಚ್ಚಿದ ಆರ್ಥಿಕ ಅಸಮಾನತೆಗೆ, ಅಗತ್ಯ ಸಾರ್ವಜನಿಕ ಸೇವೆಗಳಿಗೆ ಪ್ರವೇಶವನ್ನು ಕಡಿಮೆ ಮಾಡಲು ಮತ್ತು ಸಾಮಾಜಿಕ ಕಲ್ಯಾಣಕ್ಕಿಂತ ಕಾರ್ಪೊರೇಟ್ ಹಿತಾಸಕ್ತಿಗಳ ಆದ್ಯತೆಗೆ ಕಾರಣವಾಗಬಹುದು ಎಂದು ವಾದಿಸುತ್ತಾರೆ. ಮಾರುಕಟ್ಟೆ ಪರಿಹಾರಗಳ ಮೇಲಿನ ಒತ್ತು ಸಾಮಾಜಿಕ ಒಗ್ಗಟ್ಟು ಮತ್ತು ಸಾರ್ವಜನಿಕ ಸರಕುಗಳಿಗೆ ಹಾನಿಕಾರಕವೆಂದು ಕೆಲವರು ನೋಡುತ್ತಾರೆ. ನವ ಉದಾರವಾದ ನೀತಿಗಳು ಆರ್ಥಿಕ ಜಾಗತೀಕರಣದ ಏರಿಕೆಗೆ ಸಂಬಂಧಿಸಿವೆ, ಇದು ವಿಶ್ವಾದ್ಯಂತ ಆರ್ಥಿಕತೆಗಳು ಮತ್ತು ಸಮಾಜಗಳನ್ನು ಪರಿವರ್ತಿಸಿದೆ, ಆಗಾಗ್ಗೆ ಮಿಶ್ರ ಫಲಿತಾಂಶಗಳೊಂದಿಗೆ.

ತೀರ್ಮಾನ

ಸಂಕ್ಷಿಪ್ತವಾಗಿ, ನವ ಉದಾರವಾದವು ಆರ್ಥಿಕ ಮತ್ತು ರಾಜಕೀಯ ಚಿಂತನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಪ್ರತಿನಿಧಿಸುತ್ತದೆ, ಆಡಳಿತ ಮತ್ತು ಆರ್ಥಿಕ ನಿರ್ವಹಣೆಗೆ ಮಾರುಕಟ್ಟೆ-ಚಾಲಿತ ವಿಧಾನವನ್ನು ಪ್ರತಿಪಾದಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಆರ್ಥಿಕ ಬೆಳವಣಿಗೆಯನ್ನು ಬೆಳೆಸಿದ ಕೀರ್ತಿಗೆ ಇದು ಪಾತ್ರವಾಗಿದ್ದರೂ, ಅದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಿಗೆ ಇದು ಗಣನೀಯ ಟೀಕೆಗಳನ್ನು ಎದುರಿಸಿದೆ. ನವ ಉದಾರವಾದವನ್ನು ಅರ್ಥಮಾಡಿಕೊಳ್ಳಲು ಅದರ ಐತಿಹಾಸಿಕ ಬೇರುಗಳು, ಪ್ರಮುಖ ನೀತಿಗಳು ಮತ್ತು ಸಮಾಜ ಮತ್ತು ಆರ್ಥಿಕತೆಯ ಮೇಲೆ ಅದರ ಪ್ರಭಾವದ ಸುತ್ತ ನಡೆಯುತ್ತಿರುವ ಚರ್ಚೆಗಳನ್ನು ಪರಿಶೀಲಿಸುವ ಅಗತ್ಯವಿದೆ.)

ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮಗಳು ((Structural Adjustment Programme)  : ಆರ್ಥಿಕ ಬಿಕ್ಕಟ್ಟುಗಳನ್ನು ಅನುಭವಿಸುವ ದೇಶಗಳಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್ (WB) ಒದಗಿಸುವ ಸಾಲಗಳನ್ನು (ರಚನಾತ್ಮಕ ಹೊಂದಾಣಿಕೆ ಸಾಲಗಳು; SAL ಗಳು) ಒಳಗೊಂಡಿರುತ್ತವೆ.[1] ದೇಶದ ಆರ್ಥಿಕ ರಚನೆಯನ್ನು ಸರಿಹೊಂದಿಸುವುದು, ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನು ಸುಧಾರಿಸುವುದು ಮತ್ತು ಅದರ ಪಾವತಿ ಸಮತೋಲನವನ್ನು ಪುನಃಸ್ಥಾಪಿಸುವುದು ಅವುಗಳ ಘೋಷಿತ ಉದ್ದೇಶವಾಗಿದೆ.


(ಟಿಪ್ಪಣಿ): IMF ಮತ್ತು ವಿಶ್ವ ಬ್ಯಾಂಕ್ (ಎರಡು ಬ್ರೆಟನ್ ವುಡ್ಸ್ ಸಂಸ್ಥೆಗಳು) ಹೊಸ ಸಾಲಗಳನ್ನು ಪಡೆಯಲು (ಅಥವಾ ಅಸ್ತಿತ್ವದಲ್ಲಿರುವ ಸಾಲಗಳ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲು) ಸಾಲ ಪಡೆಯುವ ದೇಶಗಳು ಕೆಲವು ನೀತಿಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತವೆ. ಈ ನೀತಿಗಳು ಸಾಮಾನ್ಯವಾಗಿ ಹೆಚ್ಚಿದ ಖಾಸಗೀಕರಣ, ವ್ಯಾಪಾರ ಮತ್ತು ವಿದೇಶಿ ಹೂಡಿಕೆಯನ್ನು ಉದಾರೀಕರಣಗೊಳಿಸುವುದು ಮತ್ತು ಸರ್ಕಾರಿ ಬಜೆಟ್ ಕೊರತೆಯನ್ನು ಸಮತೋಲನಗೊಳಿಸುವುದರ ಸುತ್ತ ಕೇಂದ್ರೀಕೃತವಾಗಿವೆ. ಸಾಲಗಳಿಗೆ ಲಗತ್ತಿಸಲಾದ ಷರತ್ತುಬದ್ಧ ಷರತ್ತುಗಳು ಸಾಮಾಜಿಕ ವಲಯದ ಮೇಲೆ ಅವುಗಳ ಪರಿಣಾಮಗಳ ಕಾರಣದಿಂದಾಗಿ ಟೀಕಿಸಲ್ಪಟ್ಟಿವೆ.

 ಸಾಲ ಪಡೆಯುವ ದೇಶದ ಹಣಕಾಸಿನ ಅಸಮತೋಲನವನ್ನು ಅಲ್ಪ ಮತ್ತು ಮಧ್ಯಮ ಅವಧಿಯಲ್ಲಿ ಕಡಿಮೆ ಮಾಡುವ ಅಥವಾ ಆರ್ಥಿಕತೆಯನ್ನು ದೀರ್ಘಾವಧಿಯ ಬೆಳವಣಿಗೆಗೆ ಹೊಂದಿಸುವ ಗುರಿಯೊಂದಿಗೆ SAP ಗಳನ್ನು ರಚಿಸಲಾಗಿದೆ.[ಮು ಕ್ತ ಮಾರುಕಟ್ಟೆ ಕಾರ್ಯಕ್ರಮಗಳು ಮತ್ತು ನೀತಿಯ ಅನುಷ್ಠಾನವನ್ನು ಕೋರುವ ಮೂಲಕ, SAP ಗಳು ಸರ್ಕಾರದ ಬಜೆಟ್ ಅನ್ನು ಸಮತೋಲನಗೊಳಿಸಲು, ಹಣದುಬ್ಬರವನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗುತ್ತದೆ. ವ್ಯಾಪಾರದ ಉದಾರೀಕರಣ, ಖಾಸಗೀಕರಣ ಮತ್ತು ವಿದೇಶಿ ಬಂಡವಾಳಕ್ಕೆ ಇರುವ ಅಡೆತಡೆಗಳನ್ನು ಕಡಿಮೆ ಮಾಡುವುದರಿಂದ ಹೂಡಿಕೆ, ಉತ್ಪಾದನೆ ಮತ್ತು ವ್ಯಾಪಾರ ಹೆಚ್ಚಾಗುತ್ತದೆ, ಸ್ವೀಕರಿಸುವ ದೇಶದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಈ ಕಾರ್ಯಕ್ರಮಗಳನ್ನು ಜಾರಿಗೆ ತರಲು ವಿಫಲವಾದ ದೇಶಗಳು ತೀವ್ರ ಹಣಕಾಸಿನ ಶಿಸ್ತಿಗೆ ಒಳಪಟ್ಟಿರಬಹುದು. ಬಡ ದೇಶಗಳಿಗೆ ಹಣಕಾಸಿನ ಬೆದರಿಕೆಗಳು ಬ್ಲ್ಯಾಕ್‌ಮೇಲ್‌ಗೆ ಸಮನಾಗಿರುತ್ತದೆ ಮತ್ತು ಬಡ ರಾಷ್ಟ್ರಗಳು ಅನುಸರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ವಿಮರ್ಶಕರು ವಾದಿಸುತ್ತಾರೆ.

ರಚನಾತ್ಮಕ ಹೊಂದಾಣಿಕೆ ಸಾಲಗಳನ್ನು ಮುಖ್ಯವಾಗಿ ಪೂರ್ವ ಮತ್ತು ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ನೆಲೆಗೊಂಡಿರುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿತರಿಸಲಾಗುತ್ತದೆ, ಇದರಲ್ಲಿ ಕೊಲಂಬಿಯಾ, ಮೆಕ್ಸಿಕೊ, ಟರ್ಕಿ, ಫಿಲಿಪೈನ್ಸ್, ಪಾಕಿಸ್ತಾನ, ನೈಜೀರಿಯಾ, ಸುಡಾನ್, ಜಿಂಬಾಬ್ವೆ ಮತ್ತು ಇತರ ದೇಶಗಳು ಸೇರಿವೆ.

ಭಾರತವು ೧೯೯೦  ರಿಂದ ರಚನಾತ್ಮಕ ಹೊಂದಾಣಿಕೆ ಕಾರ್ಯಕ್ರಮ ಸಾಲಗಳನ್ನು ಅತಿ ಹೆಚ್ಚು ಸ್ವೀಕರಿಸುತ್ತಿದೆ. ಅಂತಹ ಸಾಲಗಳನ್ನು ಆರೋಗ್ಯ, ಅಭಿವೃದ್ಧಿ ಅಥವಾ ಶಿಕ್ಷಣ ಕಾರ್ಯಕ್ರಮಗಳಿಗೆ ಖರ್ಚು ಮಾಡಲಾಗುವುದಿಲ್ಲ. ಇವುಗಳಲ್ಲಿ ದೊಡ್ಡದು ಬ್ಯಾಂಕಿಂಗ್ ವಲಯ  ಮತ್ತು ಸ್ವಚ್ಛ ಭಾರತ ಮಿಷನ್ನಿ ನಲ್ಲಿ ಹೂಡಿಕೆ.  

 ರಚನಾತ್ಮಕ ಹೊಂದಾಣಿಕೆಯ ಪ್ರಮುಖ ನಿಬಂಧನೆಗಳಲ್ಲಿ ಒಂದು, ಸಾರ್ವಜನಿಕ ವಿತ್ತ ಪದ್ಧತಿ ಯಡಿಯಲ್ಲಿ  ಧನವನ್ನು ಬಳಸಲು ರಾಜ್ಯಗಳು ರಾಷ್ಟ್ರೀಯ ಹಣ ಕಾಸನ್ನು (currency) ಹೆಚ್ಚಿಸುವ  ಸಾಮರ್ಥ್ಯವನ್ನು ಮೊಟಕುಗೊಳಿಸಿತು ಎಂಬುದನ್ನು  ಗಮನಿಸಬೇಕು. ಆದ್ದರಿಂದ ತತ್ಪರಿಣಾಮವಾಗಿ  ಉತ್ಪಾದನೆಗೆ ಹಣಕಾಸು ಒದಗಿಸಲು ಬಯಸಿದರೆ,  ಖಾಸಗಿ ಬಂಡವಾಳವನ್ನು ಅವಲಂಬಿಸಬೇಕಾಗುತ್ತದೆ.  ಅಂದರೆ ರಫ್ತ್ತು ಗಳನ್ನು ಹೆಚ್ಚಿಸುವ ಮೂಲಕ  ವಿದೇಶಿ ಕರೆನ್ಸಿಯನ್ನು ಪಡೆಯಬೇಕು ಅಥವಾ  ವಿದೇಶಿ ಹೂಡಿಕೆಗಳನ್ನು ಆಕರ್ಷಿಸಬೇಕು.  ಕರೆನ್ಸಿಯನ್ನು ಯಾರು ನಿಯಂತ್ರಿಸುತ್ತಾರೋ ಅವರು ಉತ್ಪಾದನೆಯನ್ನು ನಿರ್ಧರಿಸುತ್ತಾರೆ ಎಂಬುದನ್ನು ನೆನಪಿಡಿ. ಆದ್ದರಿಂದ ವಿದೇಶಿ ಕರೆನ್ಸಿ ಅಥವಾ ವಿದೇಶಿ ಹೂಡಿಕೆಗಳ ಮೇಲಿನ ಅವಲಂಬನೆ ಎಂದರೆ ವಿದೇಶಿ ಬಂಡವಾಳದ ಹಿತಾಸಕ್ತಿಗಳ ಸುತ್ತ ದಕ್ಷಿಣದಲ್ಲಿ ಉತ್ಪಾದನೆಯನ್ನು ಸಂಘಟಿಸಲಾಗುತ್ತದೆ. ಆದ್ದರಿಂದ ಸಾಮ್ರಾಜ್ಯಶಾಹಿ ವ್ಯವಸ್ಥೆಗಳನ್ನು ಪುನಃಸ್ಥಾಪಿಸುವ ಮೂಲಕ, ರಚನಾತ್ಮಕ ಹೊಂದಾಣಿಕೆಯು ಮೂಲದಲ್ಲಿ ಬಂಡವಾಳಶಾಹಿಯನ್ನು ರಕ್ಷಿಸಿತು. ಇದು ಕಾರ್ಪೊರೇಟ್ ಲಾಭದ ದರವನ್ನು ಪುನಃಸ್ಥಾಪಿಸಿತು, ಅದರಿಂದಾಗಿ  ೧೯೭೦ ರ ದಶಕದಲ್ಲಿ ಕ್ಷೀಣಿಸುತ್ತಿದ್ದ ಉತ್ತರದ ಬೆಳವಣಿಗೆಯನ್ನು ರಕ್ಷಿಸಿತು ಮತ್ತು ಯುರೋಪಿಯನ್ ಸರ್ಕಾರಗಳು ತಮ್ಮ ಕಾರ್ಮಿಕ ವರ್ಗಗಳೊಂದಿಗೆ ಸಮಂಜಸವಾದ ಚೌಕಾಶಿಯನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಮೂಲ ಸೂತ್ರವನ್ನು ಸಂರಕ್ಷಿಸಿತು. 

ಆದಾಗ್ಯೂ, ಜಾಗತಿಕ ದಕ್ಷಿಣಕ್ಕೆ, ಪರಿಣಾಮಗಳು ತುಂಬಾ ತೀವ್ರವಾಗಿದ್ದವು.  ಲ್ಯಾಟಿನ್ ಅಮೆರಿಕ ಮತ್ತು ಸಬ್ ಸಹಾರನ್ ಆಫ್ರಿಕಾದಲ್ಲಿ ೨೦೦೫ ಕ್ಕೆ ಸೂಚ್ಯಂಕ ಮಾಡಲಾದ ರಾಷ್ಟ್ರೀಯ ತಲಾ ಆದಾಯವನ್ನು ಪರಿಶೀಲಿಸಿದರೆ  ೫೦, ೬೦ ಮತ್ತು ೭೦ ರ ದಶಕಗಳಲ್ಲಿ ಆದಾಯ ಮತ್ತು ಬಳಕೆಯಲ್ಲಿ ನಾಟಕೀಯ ಹೆಚ್ಚಳವನ್ನು ನಾವು ನೋಡುತ್ತೇವೆ, ನಂತರ ನವ ಉದಾರವಾದಿ ಅವಧಿಯಲ್ಲಿ ೩೦  ವರ್ಷಗಳ  ದಿಗ್ಭ್ರಮೆಗೊಳಿಸುವ ಕುಸಿತ ಕಂಡುಬಂದಿದೆ.ಈ ಅವಧಿಯಲ್ಲಿ ಈ ಆರ್ಥಿಕತೆಗಳು ಉತ್ಪಾದನೆಯನ್ನು ಹೆಚ್ಚಿಸುತ್ತಲೇ ಇದ್ದವು ಆದರೆ ಬೆಲೆಗಳು ಅಗ್ಗವಾದ ಕಾರಣ ಅವುಗಳ ಆದಾಯವು ಕುಂಠಿತವಾಯಿತು ಎಂಬುದನ್ನು ಈಗ ಗಮನಿಸಿ. ಆದ್ದರಿಂದ ಕೇಂದ್ರ ಆರ್ಥಿಕತೆಗಳಿಗೆ  ಸಂಪನ್ಮೂಲಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು ದಕ್ಷಿಣದವರನ್ನು ಕಡಿಮೆ ಸೇವಿಸುವಂತೆ ಮಾಡಲಾಯಿತು.

ಕೆಲವು ಉದಾರವಾದಿ ಪ್ರಗತಿಪರರು, ಉದಾಹರಣೆಗೆ, ಪಾಲ್ ಕ್ರುಗ್ಮನ್, ನವ ಉದಾರವಾದವನ್ನು ಸಮಸ್ಯೆಯೆಂದು ಭಾವಿಸಲು ಇಷ್ಟಪಡುತ್ತಾರೆ ಮತ್ತು ಅದರ ಹಿಂದಿನ ಬಂಡವಾಳಶಾಹಿಯ ಹೆಚ್ಚು ಮಾನವೀಯ ಆವೃತ್ತಿಗೆ ಮರಳಬೇಕೆಂದು ಅವರು ಕರೆ ನೀಡುತ್ತಾರೆ. ಆದರೆ ನವ ಉದಾರವಾದವು ಒಂದು ರೀತಿಯ ತಪ್ಪಾಗಿರಲಿಲ್ಲ. ದಂಗೆಕೋರ ದಕ್ಷಿಣದ ಮುಖಾಂತರ ಬಂಡವಾಳ ಸಂಗ್ರಹಣೆಯ ಬಿಕ್ಕಟ್ಟನ್ನು ಪರಿಹರಿಸಲು ಇದು ಅಗತ್ಯವಾಗಿತ್ತು ಎಂಬ ಕಾರಣದಿಂದಾಗಿ ಇದನ್ನು ಹೇರಲಾಯಿತು. ಬಂಡವಾಳಶಾಹಿಯ ಮುಂದುವರಿಕೆಗೆ ಇದು ಅಗತ್ಯವಾಗಿತ್ತು. ಈಗ ಸಹಜವಾಗಿಯೇ ಅಪವಾದಗಳಿವೆ ಆದರೆ ಅವು ನಿಯಮವನ್ನು ಸಾಬೀತುಪಡಿಸುತ್ತವೆ. ಜನರು ದಕ್ಷಿಣ ಕೊರಿಯಾ ಮತ್ತು ತೈವಾನ್‌ಗಳನ್ನು ಪರಿಧಿಯಲ್ಲಿ ಯಶಸ್ವಿ ಬಂಡವಾಳಶಾಹಿ ಬೆಳವಣಿಗೆಗಳ ಉದಾಹರಣೆಗಳಾಗಿ ತೋರಿಸಲು ಇಷ್ಟಪಡುತ್ತಾರೆ.  ಆದರೆ ವಾಸ್ತವವೆಂದರೆ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ರಾಜ್ಯ ನೇತೃತ್ವದ ಕೈಗಾರಿಕಾ ನೀತಿಯನ್ನು ಬಳಸುವಲ್ಲಿ ಈ ರಾಜ್ಯಗಳನ್ನು ಸಕ್ರಿಯವಾಗಿ ಬೆಂಬಲಿಸಿದವು. ಇದು ಜಾಗತಿಕ ದಕ್ಷಿಣದ ಉಳಿದ ಭಾಗಗಳಿಗೆ ಅವರು ನಿಖರವಾಗಿ ನಿರಾಕರಿಸಿದ ವಿಧಾನ.  ಏಕೆ? ಏಕೆಂದರೆ ಅವರು ಈ ರಾಜ್ಯಗಳನ್ನು ಕ್ರಾಂತಿಕಾರಿ ಚೀನಾದ ಸುತ್ತಲೂ ಮುರಿಯಲಾಗದ ಸರಪಳಿಯಂತೆ ನಿರ್ಮಿಸಲು ಬಯಸಿದ್ದರು. ದಕ್ಷಿಣ ಕೊರಿಯಾದಲ್ಲಿ ಮಾತ್ರ ೬೨  ಮಿಲಿಟರಿ ನೆಲೆಗಳನ್ನು ಹೊಂದಿರುವ ಯುಎಸ್, ವಿಶ್ವದ ಅತಿದೊಡ್ಡ ಸಾಗರೋತ್ತರ ಮಿಲಿಟರಿ ನೆಲೆಯಾದ ದಕ್ಷಿಣ ಕೊರಿಯಾ ಕ್ಯಾಂಪ್ ಹಂಫ್ರೆ ಸೇರಿದಂತೆ ಚೀನಾವನ್ನು ಸುತ್ತುವರೆದಿರುವ 200 ಕ್ಕೂ ಹೆಚ್ಚು ಮಿಲಿಟರಿ ನೆಲೆಗಳಲ್ಲಿ ಒಂದಾಗಿದೆ.

 


‘ಅಸಮಾ ನ ವಿನಿಮಯ’ :  ರಚನಾತ್ಮಕ ಹೊಂದಾಣಿಕೆಯು ದಕ್ಷಿಣ ದೇಶಗಳು ತಮ್ಮದೇ  ಸಾರ್ವಭೌಮ ಕೈಗಾರಿಕೀಕರಣವನ್ನು ಸಾಧಿಸುವ ಪ್ರಯತ್ನಗಳನ್ನು ನಾಶಪಡಿಸಿ   ಅಗ್ಗದ ಕಚ್ಚಾ ವಸ್ತುಗಳ ಪೂರೈಕೆದಾರರಾಗಿ ಅವರನ್ನು ಮರುಸ್ಥಾಪಿಸಿತು;  ಆದರೆ ಒಂದು ಚಿಕ್ಕ ವ್ಯತ್ಯಾಸದೊಂದಿಗೆ:      ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಪ್ರಬಲ ಸ್ಥಾನವನ್ನು ಹಿಂದಿನಿಂದಲೂ ಉತ್ತರದ ಸಂಸ್ಥೆಗಳು ಹೊಂದಿವೆ;  ಈ ಬಾರಿ  ತುಸು ಬದಲಾವಣೆಗೊಂಡ ಆರ್ಥಿಕ ಹೊಸ ವ್ಯವಸ್ಥೆಯಲ್ಲಿ ತಯಾರಿಸಿದ ಉಡುಪು,  ಬಿಡಿ ಭಾಗಗಳು ಮತ್ತು ಗ್ರಾಹಕ ತಂತ್ರಜ್ಞಾನಗಳಂತಹ ಲಘು ಕೈಗಾರಿಕಾ ಸರಕುಗಳ ತಯಾರಕರಾಗಿ ದಕ್ಷಿಣದ   ರಾಷ್ಟ್ರಗಳು ಗೌಣ ಸ್ಥಾನಗಳನ್ನು  ಪಡೆದವು.    ಉತ್ತರದ ಸಂಸ್ಥೆಗಳು ತಮ್ಮ ಪಾಲಿಗೆ ಬೌದ್ಧಿಕ ಆಸ್ತಿ ಮತ್ತು ಹೈಟೆಕ್ ಉನ್ನತ ತಂತ್ರಜ್ಞಾನ ಉತ್ಪಾದನಾ ಪ್ರಕ್ರಿಯೆಗಳನ್ನು ಏಕಸ್ವಾಮ್ಯಗೊಳಿಸುವತ್ತ  ಆ ವಸ್ತುಗಳ ಮೇಲೆ ದಕ್ಷಿಣದ ಅವಲಂಬನೆಯನ್ನು ಮುಂದುವರಿಸುವುದರ ಕಡೆಗೆ    ತಿರುಗಿದವು.  ಆದರೆ   ರಚನಾತ್ಮಕ ಹೊಂದಾಣಿಕೆಯು ಜಾಗತಿಕ ದಕ್ಷಿಣದಲ್ಲಿ ವೇತನ ಮತ್ತು ಬೆಲೆಗಳನ್ನು ಕುಗ್ಗಿಸಿತು ಮತ್ತು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಸೇರಿದಂತೆ  ಇದು ಬಹಳ ತೀವ್ರ ಪರಿಣಾಮಗಳನ್ನು ಬೀರುತ್ತದೆ. ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ ಎಲ್ಲಾ ಆಮದುಗಳನ್ನು ರಫ್ತುಗಳೊಂದಿಗೆ ಪಾವತಿಸಬೇಕು. ಆದ್ದರಿಂದ ಬೆಲೆ ಅಸಮಾನತೆಗಳು ಎಂದರೆ ದಕ್ಷಿಣವು ಉತ್ತರದಿಂದ ಆಮದು ಮಾಡಿಕೊಳ್ಳುವ   ವಸ್ತುಗಳ ಪ್ರತಿಯೊಂದು ಘಟಕಕ್ಕೆ,  ಪಾವತಿಸಲು  ಇನ್ನೂ ಹೆಚ್ಚು  ಘಟಕಗಳನ್ನು ರಫ್ತು ಮಾಡಬೇಕಾಗುತ್ತದೆ. ಮತ್ತು ಇದು ದಕ್ಷಿಣದಿಂದ ಉತ್ತರಕ್ಕೆ ಹರಿಯುವ ಮೌಲ್ಯದ ಗುಪ್ತ ವರ್ಗಾವಣೆಗೆ ಕಾರಣವಾಗುತ್ತದೆ. ವ್ಯಾಪಾರದ ವಿತ್ತೀಯ ಸಮತೋಲನ ಇರುವಂತೆ ಕಾಣುವುದರಿಂದ ಇದನ್ನು ಮರೆಮಾಡಲಾಗಿದೆಯಾದರೂ  ವಾಸ್ತವದಲ್ಲಿ ದಕ್ಷಿಣವು ಜಾಗತಿಕ ಉತ್ತರಕ್ಕೆ ನೈಜ ಮೌಲ್ಯದ ನಿವ್ವಳ ವರ್ಗಾವಣೆಯನ್ನು ಕಳುಹಿಸುತ್ತಿದೆ. ಇದು ಶ್ರೀಮಂತ ರಾಷ್ಟ್ರಗಳನ್ನು ಇನ್ನೂ  ಶ್ರೀಮಂತಗೊಳಿಸುತ್ತದೆ ಆದರೆ ದಕ್ಷಿಣದ ರಾಷ್ಟ್ರಗಳ ಅಭಿವೃದ್ಧಿಗೆ ಅಗತ್ಯವಾದ ಸಂಪನ್ಮೂಲಗಳ  ಬರಿದು ಮಾಡುತ್ತದೆ. ಸಮೀರ್ ಆ ಮಿನ್ ಮತ್ತು ರಾಯ್ ಮುವಾರಿನಿಯಂತಹ ಜಾಗತಿಕ ದಕ್ಷಿಣ ಅರ್ಥಶಾಸ್ತ್ರಜ್ಞರು ಇದನ್ನು ‘ಅಸಮಾನ ವಿನಿಮಯ’ ಎಂದು ಬಣ್ಣಿಸಿದ್ದಾರೆ. ವಸಾಹತುಶಾಹಿ ಆಕ್ರಮಣದ ಅನುಪಸ್ಥಿತಿಯಲ್ಲಿಯೂ ಸಹ ಈ ಕ್ರಿಯಾತ್ಮಕತೆಯು ಪರಿಧಿಯಿಂದ ಸಾಮ್ರಾಜ್ಯಶಾಹಿ ಸ್ವಾಧೀನದ ಮುಂದುವರಿಕೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಅವರು ವಾದಿಸಿದರು. 


ಅಸಮಾನ ವಿನಿಮಯದ ಹಾನಿ : ಆದ್ದರಿಂದ ಇಂದು ನಾವು ಇದನ್ನು ೧೯೯೦ ರ ದಶಕದಿಂದ ದಕ್ಷಿಣದಿಂದ ಉತ್ತರಕ್ಕೆ ನಿವ್ವಳ ವರ್ಗಾವಣೆಯ ಪ್ರಮಾಣವನ್ನು ಅರ್ಥಶಾಸ್ತ್ರಜ್ಞರು ಮಾಪನ ಮಾಡಿದ  ದತ್ತಾಂಶಗಳ ಪ್ರಕಾರ    ಆಮದು ಮಾಡಿಕೊಳ್ಳುವ ಪ್ರತಿಯೊಂದು ಘಟಕಕ್ಕೂ ದಕ್ಷಿಣ ರಾಷ್ಟ್ರಗಳು  ಕನಿಷ್ಠ ೧೦ ಪಟ್ಟು ಹೆಚ್ಚು ರಫ್ತು ಮಾಡಬೇಕು. ಇದಕ್ಕೆ ಮುಖ್ಯ ಕಾರಣ ವೇತನದಲ್ಲಿ ಭಾರಿ ವ್ಯತ್ಯಾಸ. ದಕ್ಷಿಣದ ವೇತನವನ್ನು ಉತ್ತರದ ವೇತನಕ್ಕೆ ಹೋಲಿಸಿದರೆ ಬೃಹತ್ ಪ್ರಮಾಣದಲ್ಲಿ ಸಂಕುಚಿತಗೊಳಿಸಿದ್ದಾಗಿ ಕಾಣಬಹುದು.  ದಕ್ಷಿಣದ ಕಾರ್ಮಿಕರು ಅದೇ ವಲಯದಲ್ಲಿ ಅದೇ ಕೌಶಲ್ಯದ ಕೆಲಸಕ್ಕಾಗಿ ಉತ್ತರದ ಕಾರ್ಮಿಕರಿಗಿಂತ ಸುಮಾರು ೯೦% ಕಡಿಮೆ ಗಳಿಸುತ್ತಾರೆ. ವಾಸ್ತವವಾಗಿ, ಅಸಮಾನತೆಗಳು ಎಷ್ಟು ತೀವ್ರವಾಗಿವೆಯೆಂದರೆ, ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳಂತಹ ಜಾಗತಿಕ ದಕ್ಷಿಣದಲ್ಲಿ ಹೆಚ್ಚು ಕೌಶಲ್ಯಪೂರ್ಣ ಕಾರ್ಮಿಕರಿಗೆ ಜಾಗತಿಕ ಉತ್ತರದಲ್ಲಿ ಕಡಿಮೆ ಕೌಶಲ್ಯದ ಕಾರ್ಮಿಕರಿಗಿಂತ ೬೮% ಕಡಿಮೆ ವೇತನ ನೀಡಲಾಗುತ್ತದೆ. ಇವು ವ್ಯವಸ್ಥಿತ ಅಸಮಾನತೆಗಳು, ಬಂಡವಾಳಶಾಹಿ ವಿಶ್ವ ಆರ್ಥಿಕತೆಯ ರಾಜಕೀಯ ಕೃತಿಗಳು ಮತ್ತು ಅಸಮಾನ ವಿನಿಮಯದ ಪ್ರಮುಖ ಚಾಲಕ. ಮತ್ತು ಭೌತಿಕ ವಸ್ತುಗಳ ವಿಷಯಕ್ಕೆ ಬಂದಾಗ ನಾವು ಅದೇ ರೀತಿಯ ವ್ಯವಸ್ಥಿತ ವ್ಯಾಪಾರ ಅಸಮಾನತೆಯನ್ನು    ಭೂ ಸಂಪನ್ಮೂಲಗಳ ಉತ್ಪಾದಕತೆಯ    ಮತ್ತು  ಉತ್ಪಾದನೆಯಲ್ಲಿ ಬಳಸುವ ವಿದ್ಯುತ್ ಮತ್ತು ಇತರ ಶಕ್ತಿಗಳ ಮೌಲ್ಯೀಕರಣದಲ್ಲಿ ಕಾಣುತ್ತೇವೆ. ಆದ್ದರಿಂದ ಈ ಅಸಮಾನ ವಿನಿಮಯವು ದಕ್ಷಿಣದಿಂದ ಉತ್ತರಕ್ಕೆ ಮೌಲ್ಯದ ನಿಜವಾದ ಬೃಹತ್ ನಿವ್ವಳ ವರ್ಗಾವಣೆಗೆ ಕಾರಣವಾಗುತ್ತದೆ. ಈ ವರ್ಗಾವಣೆಯ ಮೌಲ್ಯ ದಕ್ಷಿಣದ ಎಲ್ಲರಿಗೂ   ಯೋಗ್ಯ ಜೀವನ ಮಟ್ಟವನ್ನು ಒದಗಿಸಲು ಸಾರ್ವತ್ರಿಕ ಆರೋಗ್ಯ, ಶಿಕ್ಷಣ, ಆಧುನಿಕ ವಸತಿ, ನೈರ್ಮಲ್ಯ, ವಿದ್ಯುತ್, ಹಾಗೆಯೇ ಆಧುನಿಕ ಜೀವನದ ಎಲ್ಲಾ ಅವಶ್ಯಕೆತೆಗಳನ್ನೂ ಒದಗಿಸಲು ಸಾಕಾಗುವಷ್ಟು ಇದೆ ಎಂದು ಲೆಕ್ಕ ಮಾಡಲಾಗಿದೆ. ಆದರೆ ಬದಲಾಗಿ ಅದನ್ನು ಕೇಂದ್ರದಲ್ಲಿ ಬಳಕೆ ಮತ್ತು ಸಂಗ್ರಹಣೆಗಾಗಿ ನುಂಗಲಾಗುತ್ತದೆ. ದಕ್ಷಿಣದ ಭೂ ಸಂಪನ್ಮೂಲಗಳನ್ನು ಕೋಕಾ ಕೋಲಾಗೆ ಸಕ್ಕರೆ ಉತ್ಪಾದನೆಗೆ ಮತ್ತು ಮೆಕ್‌ಡೊನಾಲ್ಡ್ಸ್‌ಗೆ ಗೋಮಾಂಸ ಉತ್ಪಾದನೆಗೆ ಬಳಸಲಾಗುತ್ತದೆ. ದಕ್ಷಿಣದಲ್ಲಿ ಕಾರ್ಮಿಕರನ್ನು ತಮ್ಮದೇ ಆದ  ಜನಸಂಖ್ಯೆಯ ಮೂಲಭೂತ ಅಗತ್ಯಗಳನ್ನು ಪೂರೈಸುವ ಬದಲು ಉತ್ತರದ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬಳಸಲಾಗುತ್ತಿದೆ.   ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಹೆಚ್ಚಿನ ಮಟ್ಟದ ಬಳಕೆ ಮತ್ತು ಆರ್ಥಿಕ ಬೆಳವಣಿಗೆಯನ್ನು ವಸಾಹತುಶಾಹಿ ಕಾಲದಂತೆಯೇ ಇಂದು ದಕ್ಷಿಣದಿಂದ ನಿವ್ವಳ ಪೂರೈಕೆಯ ನ್ನು ಸಂಪೂರ್ಣವಾಗಿ ಅವಲಂಬಿಸಿದೆ.



ಇದರರ್ಥ ಸಾಮ್ರಾಜ್ಯಶಾಹಿಯ ಅನುಪಸ್ಥಿತಿಯಲ್ಲಿ,  ಪ್ರಮುಖ ಆರ್ಥಿಕತೆಗಳುತಮ್ಮ ಬಳಕೆಯನ್ನು ೫೦% ರಷ್ಟು ಕಡಿಮೆ ಮಾಡಬೇಕಾಗುತ್ತದೆ. ಪರ್ಯಾಯವಾಗಿ, ಅವರು ತಮ್ಮ ಅಸ್ತಿತ್ವದಲ್ಲಿರುವ ಬಳಕೆಯನ್ನು ಕಾಪಾಡಿಕೊಳ್ಳಲು ಬಯಸಿದರೆ, ಅವರು ತಮ್ಮ ಶ್ರಮ ಮತ್ತು ವಸ್ತು ತೆಗೆಯುವಿಕೆಯನ್ನು ದ್ವಿಗುಣಗೊಳಿಸಬೇಕಾಗುತ್ತದೆ, ಇದು ಸ್ಪಷ್ಟವಾಗಿ ಸಾಧ್ಯವಾಗುವುದಿಲ್ಲ ಏಕೆಂದರೆ ಪ್ರಯತ್ನಿಸಿದರೆ ಈ ಯತ್ನವು  ಬೃಹತ್ ಸಾಮಾಜಿಕ ಪ್ರತಿರೋಧ ಮತ್ತು ಪರಿಸರ ಹಾನಿಯನ್ನು ಪ್ರಚೋದಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ,  ಮುಂದುವರಿದ ಆರ್ಥಿಕತೆಗಳಲ್ಲಿ  ಹೆಚ್ಚಿನ ಮಟ್ಟದ ಬಳಕೆಯು ಅಥವಾ ಸೇವನೆಯು ದಕ್ಷಿಣದಿಂದ ಸ್ವಾಧೀನಪಡಿಸಿಕೊಳ್ಳುವಿಕೆಯಿಂದ ಮಾತ್ರ ಸಾಧ್ಯ.  ಇದರರ್ಥ ಉತ್ತರವು ಹೆಚ್ಚುವರಿ ಬಳಕೆಯಿಂದ ಪ್ರಯೋಜನ ಪಡೆಯುತ್ತದೆಯಾದರೂ, ಸಾಮಾಜಿಕ ಮತ್ತು ಪರಿಸರ ವೆಚ್ಚಗಳು ಜಾಗತಿಕ ದಕ್ಷಿಣಕ್ಕೆ ಪರಿಣಾಮಕಾರಿಯಾಗಿ ಬಾಹ್ಯೀಕರಿಸಲ್ಪಡುತ್ತವೆ. ಅಲ್ಲಿಯೇ ಹಾನಿ ಸಂಭವಿಸುತ್ತದೆ. ಪ್ರಾಥಮಿಕವಾಗಿ ಇಂಗ್ಲೆಂಡ್‌ನಲ್ಲಿ ಅಥವಾ ನಾರ್ವೆಯ ಹಸಿರು ಬೆಟ್ಟಗಳಲ್ಲಿ ಅಲ್ಲ, ಆದರೆ ಕಾಂಗೋದಲ್ಲಿ, ಇಂಡೋನೇಷ್ಯಾದಲ್ಲಿ, ಬ್ರೆಜಿಲ್‌ನಲ್ಲಿ. ಇದು ಪರಿಸರ ಅನ್ಯಾಯವನ್ನು ಸೃಷ್ಟಿಸುವ  ಕಾರ್ಯವಿಧಾನವಾಗಿದೆ. ಎರಡನೆಯದಾಗಿ  ಅಸಮಾನ ವಿನಿಮಯದ ದತ್ತಾಂಶವು ಜಾಗತಿಕ ಅಸಮಾನತೆಯ ನಿರಂತರತೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. 

ಬಂಡವಾಳಶಾಹಿ ಆಧಾರಿತ ಅಭಿವೃದ್ಧಿ ನಡೆಯಲಾರದು : ಅರ್ಥಶಾಸ್ತ್ರಜ್ಞರನೇಕರ  ಆಶಾವಾದಿ ಅಭಿವೃದ್ಧಿ ನಿರೂಪಣೆಯು   “ಸಾಕಷ್ಟು ಸಮಯವನ್ನು ನೀಡಿದರೆ ಜಾಗತಿಕ ದಕ್ಷಿಣವು ಕ್ರಮೇಣ ಬಂಡವಾಳಶಾಹಿ ಅಭಿವೃದ್ಧಿಯ ಮೂಲಕ ಜಾಗತಿಕ ಉತ್ತರವನ್ನು ತಲುಪುತ್ತದೆ”  ಎಂದು ನಮಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಆದರೆ ಇದು ಸಂಭವಿಸಿಲ್ಲ. ಮುನ್ನಡೆಯಲ್ಲಿರುವ ಆರ್ಥಿಕತೆಗಳು ಮತ್ತು ಪರಿಧಿಯ ರಾಷ್ಟ್ರಗಳ ಆದಾಯದ ಅಂತರವು ಹಿಂದೆಂದಿಗಿಂತಲೂ ದೊಡ್ಡದಾಗಿದೆ ಮತ್ತು ಇದಕ್ಕೆ ಕಾರಣವೆಂದರೆ ಸಾಮ್ರಾಜ್ಯಶಾಹಿ ವಿನಿಯೋಗ ಮತ್ತು ನಿವ್ವಳ ದಕ್ಷಿಣ-ಉತ್ತರದ ಹರಿವುಗಳನ್ನು ಆಧರಿಸಿದ ವ್ಯವಸ್ಥೆ.   ದಕ್ಷಿಣದ ರಾಜ್ಯಗಳು ಬೆಳೆದು ಉತ್ತರದ ಮಟ್ಟಿಗೆ ತಲುಪುವುವು  ಎಂಬದು ಮಿಥ್ಯೆ. ಈ ಮಟ್ಟದ ಬೆಳವಣಿಗೆಗಳು ಸಂಭವಿಸುವುದಿಲ್ಲ. ಅಂತಿಮವಾಗಿ, ಜಾಗತಿಕ ದಕ್ಷಿಣದಲ್ಲಿ ಸಾಮೂಹಿಕ ಬಡತನ ಮತ್ತು ಅಭಿವೃದ್ಧಿಯಾಗದಿರುವಿಕೆಯ ನಿರಂತರತೆಯನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ. ಜಾಗತಿಕ ದಕ್ಷಿಣವು ಬಡತನಕ್ಕೆ ಒಳಗಾಗಿರುವುದು ಯಾವುದೋ ಕಾರಣಕ್ಕೆ ಅದು  ಸ್ವಾಭಾವಿಕವಾಗಿ ಬಡವಾಗಿರುವುದರಿಂದ ಅಲ್ಲ.  ಆದರೆ ಅದರ ಆದಾಯವನ್ನು ಸಂಕುಚಿತಗೊಳಿಸಲಾಗಿದೆ ಮತ್ತು ಅದರ ಉತ್ಪಾದಕ ಸಾಮರ್ಥ್ಯಗಳು ಮುಂದುವರೆದ  ಆರ್ಥಿಕತೆಗಳ  ಅಭಿವೃದ್ಧಿಗಳನ್ನು ಬೆಂಬಲಿಸಲು ಬರಿದಾಗಿರುವುದರಿಂದ. 

 ಸಮಾಜವಾದ ಮತ್ತು ಬಡತನ ನಿವಾರಣೆ : ೧೯೮೦ರ ದಶಕದಲ್ಲಿ ಸಮಾಜವಾದಿ ದೇಶಗಳು ತೀವ್ರ ಬಡತನವನ್ನು ಸರಾಸರಿ ೫% ಕ್ಕಿಂತ ಕಡಿಮೆ ಇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ನಾವು ನೋಡುತ್ತೇವೆ. ವಾಸ್ತವವಾಗಿ ಅನೇಕ ದೇಶಗಳಲ್ಲಿ ಇದು ಶೂನ್ಯಕ್ಕೆ ಹತ್ತಿರದಲ್ಲಿತ್ತು. ಇದಕ್ಕೆ ವಿರುದ್ಧವಾಗಿ ಬಂಡವಾಳಶಾಹಿ ರಾಜ್ಯಗಳ ತೀವ್ರ ಬಡತನದ ದರಗಳು  ಸರಾಸರಿ ೧೦  ಪಟ್ಟು ಹೆಚ್ಚಾಗಿದ್ದವು.  ಎರಡನೆಯ ಅಂಶವೆಂದರೆ, ನಾವು ನೋಡಬಹುದಾದಂತೆ ೧೯೯೦ ರಲ್ಲಿ ಸಮಾಜವಾದದ ನಾಶವು ಆ ಪ್ರದೇಶಗಳಲ್ಲಿ ತೀವ್ರ ಬಡತನದ  ಬೃಹತ್ ಏರಿಕೆಗೆ ಕಾರಣವಾಯಿತು. ಇದು ಐತಿಹಾಸಿಕ ದಾಖಲೆಯಲ್ಲಿ  ಯಾರನ್ನಾದರೂ ತೀರಾ  ಬಡವ, ವಂಚಿತ ಮತ್ತು ಶೋಚನೀಯರಾಗಿಸುವ   ಅತ್ಯಂತ ವೇಗದ ಮತ್ತು ಗಮನಾರ್ಹ ಪ್ರಕ್ರಿಯೆಗಳಲ್ಲಿ ಒಂದಾಗಿದೆ. ೧೯೮೦ರ ದಶಕದಲ್ಲಿ ಬಡತನದ ಬಗ್ಗೆ ಸಮಾಜವಾದಿ ದೇಶಗಳ  ಬಲವಾದ ಕಾರ್ಯಕ್ಷಮತೆಯನ್ನು ಇತರ ಪ್ರಮುಖ ಸಾಮಾಜಿಕ ಸೂಚಕಗಳು ದೃಢಪಡಿಸುತ್ತವೆ. ಸಮಾಜವಾದಿ ಮತ್ತು ಬಂಡವಾಳಶಾಹಿ ದೇಶಗಳನ್ನು ತಲಾವಾರು ಜಿ ಡಿ ಪಿ ಯಾವುದೇ ನಿರ್ದಿಷ್ಟ ಮಟ್ಟದ ಅಭಿವೃದ್ಧಿಯಲ್ಲಿ ಶಿಶು ಮರಣ, ಜೀವಿತಾವಧಿ, ಆರೋಗ್ಯ ವ್ಯವಸ್ಥೆಗಳು, ಶಿಕ್ಷಣ ಇತ್ಯಾದಿಗಳನ್ನು ಒಳಗೊಂಡಂತೆ ೧೫ ಸೂಚಕಗಳನ್ನು ಹೋಲಿಸಿ ದಾಗ  ಸಮಾಜವಾದಿ ರಾಜ್ಯಗಳು ವಾಸ್ತವಿಕವಾಗಿ ಎಲ್ಲಾ ನೇರ ಹೋಲಿಕೆಗಳಲ್ಲಿ ಬಂಡವಾಳಶಾಹಿ ರಾಜ್ಯಗಳಿಗಿಂತ ಉತ್ತಮವಾಗಿವೆ ಎಂದು ನಾವು ಕಾಣುತ್ತೇವೆ.  ಸಮಾಜವಾದಿ ರಾಜ್ಯಗಳು ಲಭ್ಯವಿರುವ ಲಿಂಗ ಅಸಮಾನತೆಯ ಮೂರು ಪ್ರಮುಖ ಸೂಚಕಗಳಲ್ಲಿ - ಕಾರ್ಮಿಕ ಸಂಖ್ಯೆಯಲ್ಲಿ  ಭಾಗ,  ಕಾರ್ಮಿಕ ಆದಾಯದ ಪಾಲು ಮತ್ತು  ಶಾಸಕಾಂಗ ಸ್ಥಾನಗಳಲ್ಲಿ ಮಹಿಳೆಯರ ಪಾಲು - ಇವುಗಳಲ್ಲಿ ಸಮಾಜವಾದಿ ರಾಜ್ಯಗಳು ಗಮನಾರ್ಹವಾಗಿ  ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಶಾಸಕಾಂಗ ಸ್ಥಾನಗಳಲ್ಲಿ ಮಹಿಳೆಯರ ಪಾಲು ಸಮಾಜವಾದಿ ದೇಶಗಳಲ್ಲಿ ಸರಾಸರಿ ಐದು ಪಟ್ಟು ಹೆಚ್ಚಾಗಿದೆ. 


ಆದ್ದರಿಂದ ಅರ್ಥಶಾಸ್ತ್ರಜ್ಞ ಅಮರ್ತ್ಯ  ಸೇನ್ ೧೯೮೧ ರಲ್ಲಿ ಪ್ರಪಂಚದಾದ್ಯಂತ ಆರೋಗ್ಯ ಮತ್ತು ಸಾಕ್ಷರತಾ  ಸಾಧನೆಗಳ ವಿಷಯ ದಲ್ಲಿ  ಗಮನಿಸಿದಂತೆ, “ಬಡತನ ನಿರ್ಮೂಲನೆಗೆ ಕಮ್ಯುನಿಸಂ ಒಳ್ಳೆಯದು” ಎಂಬ ತೀರ್ಮಾನವನ್ನು ತಪ್ಪಿಸುವುದು ಕಷ್ಟ. ಚೀನಾ ಮತ್ತು ಭಾರತದ ನಡುವಿನ  ಮರಣ ವ್ಯತ್ಯಾಸಗಳಿಂದ  ಸೇನ್ ವಿಶೇಷವಾಗಿ ಆಕರ್ಷಿತರಾದರು. ೧೯೭೦ರ ದಶಕದಲ್ಲಿ ಚೀನಾದಲ್ಲಿನ ಮರಣ ಪ್ರಮಾಣಕ್ಕೆ ಹೋಲಿಸಿದರೆ ಭಾರತವು ೩೧ ಮಿಲಿಯನ್‌ಗಿಂತಲೂ ಹೆಚ್ಚು ಅಧಿಕ ಸಾವುಗಳನ್ನು ಅನುಭವಿಸಿದೆ ಎಂದು ಅವರು  ಗಮನಿಸಿದರು.  ಆಹಾರ ಮತ್ತು ಆರೋಗ್ಯ ಸೇವೆಗೆ ಸಾರ್ವತ್ರಿಕ ಪ್ರವೇಶವನ್ನು ಖಚಿತಪಡಿಸುವ  ಸರಳ ನೀತಿಗಳಿಂದ  ಈ ಸಾವುಗಳನ್ನು  ತಡ ಗೆಟ್ಟುವದು ಸಾಧ್ಯವಿತ್ತು.   

ಈ ಅಂಶವನ್ನು  ಇಂದು ಅಂತರರಾಷ್ಟ್ರೀಯ ಅಭಿವೃದ್ಧಿ ವಿದ್ವಾಂಸರು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಗಮನಾರ್ಹವಾಗಿದೆ. ಬಡತನವನ್ನು ಪರಿಹರಿಸಲು ಕಷ್ಟಕರವಾದ ಮತ್ತು ಬಹಳ ಸಮಯ ತೆಗೆದುಕೊಳ್ಳುವ ಒಂದು ಜಟಿಲ ಸಮಸ್ಯೆಯಾಗಿ ನಮಗೆ ಪ್ರಸ್ತುತಪಡಿಸಲಾಗಿದೆ. ಆದರೆ ಅನೇಕ ಸಮಾಜವಾದಿ ದೇಶಗಳು ನಾಲ್ಕು ದಶಕಗಳ ಹಿಂದೆ ತೀವ್ರ ಬಡತನವನ್ನು ತೊಡೆದುಹಾಕಲು ಸಾಧ್ಯವಾಯಿತು.  ಆರ್ಥಿಕ ಅಭಿವೃದ್ಧಿಯ ಅತ್ಯಂತ ಕಡಿಮೆ ಮಟ್ಟದಲ್ಲಿಯೂ ಸಹ, ಆಹಾರ, ವಸತಿ ಮತ್ತು ಆರೋಗ್ಯ ರಕ್ಷಣೆ ಮತ್ತು ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಉತ್ಪಾದನೆಯನ್ನು ಸಂಘಟಿಸುವ ಮೂಲಕ ಅವರು ಅದನ್ನು ಸರಳವಾಗಿ ಮಾಡಿದರು.  ಇದು ಅಂತಹ ಕ್ಲಿಷ್ಟ ಸಮಸ್ಯೆಯಲ್ಲ. . ಆಹಾರದ  ಸಾರ್ವಜನಿಕ ಸರಬರಾಜು ಮತ್ತು ಬೆಲೆ ನಿಯಂತ್ರಣಗಳು ಬಡತನವನ್ನು ತೆಗೆದುಹಾಕುವ ವಿಷಯದಲ್ಲಿ ಅತ್ಯಂತ ಪರಿಣಾಮಕಾರಿ ಸಾಧನಗಳಾಗಿವೆ. 

ನಮ್ಮ ಉದ್ದೇಶವೇನು ? : ತೀವ್ರ ಬಡತನವನ್ನು ಕೊನೆಗೊಳಿಸುವುದು ಮಾತ್ರವೇ  ಪ್ರಗತಿಗೆ ಮಾನದಂಡವಾಗಿರಬಾರದು.  ಐತಿಹಾಸಿಕವಾಗಿ ತೀವ್ರ ಬಡತನವು ಸಾಧಾರಣ  ಪರಿಸ್ಥಿತಿಗಳಲ್ಲಿ ಅಸಾಮಾನ್ಯವಾಗಿತ್ತು ಮತ್ತು ತೀವ್ರ ಸಾಮಾಜಿಕ ಅವ್ಯವಸ್ಥೆಯ ಸಮಯದಲ್ಲಿ ಮಾತ್ರ ಉದ್ಭವಿಸಿದೆ ಎಂಬುದನ್ನು ನೆನಪಿಡಿ.  ಸಂಶೋಧನೆಯ ನಿರ್ಣಾಯಕ ಸೂಚನೆಯೆಂದರೆ ತೀವ್ರ ಬಡತನ ಎಂದಿಗೂ ಅಸ್ತಿತ್ವದಲ್ಲಿರಬಾರದು. ಮತ್ತು ವಸಾಹತುಶಾಹಿ-ಪೂರ್ವ ಭಾರತದ ಬಡತನದ ದರವನ್ನೂ ಮೀರಿ ಇಂದು ಜಗತ್ತಿನಲ್ಲಿ  ಸುಮಾರು ೨೦% ಜನರು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದಾರೆ ಎಂಬುದು ನಮ್ಮ ಆರ್ಥಿಕ ವ್ಯವಸ್ಥೆಯ ಆಳವಾದ ದೋಷಾರೋಪಣೆಯಾಗಿದೆ. ಇದು ಬಂಡವಾಳಶಾಹಿ ತೀವ್ರ ಸಾಮಾಜಿಕ ಅವ್ಯವಸ್ಧೆನ್ನು ಮುಲಭೂತಗೊಳಿಸಿದೆ ಎಂಬುದರ ಸಂಕೇತವಾಗಿದೆ. 


ತೀವ್ರ ಬಡತನಕ್ಕೆ ಅನುಗುಣವಾಗಿ ಪ್ರಗತಿಯನ್ನು ಅಳೆಯುವ ಬದಲು,  ಹೆಚ್ಚಿನ ಜೀವನ ಮಟ್ಟವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ನಾವು ಹೊಂದಿರಬೇಕು. ಆದ್ದರಿಂದ ಮತ್ತೊಮ್ಮೆ ಯೋಗ್ಯ ಜೀವನ ಮಟ್ಟಗಳು ಉಹ್ ಸ್ಟೌವ್‌ಗಳು, ರೆಫ್ರಿಜರೇಟರ್‌ಗಳು,  ಸಾರ್ವಜನಿಕ ಸಾರಿಗೆ, ಕಂಪ್ಯೂಟರ್‌ಗಳು, ಮೊಬೈಲ್ ಫೋನ್‌ಗಳು ಇತ್ಯಾದಿ  ವಸ್ತುಗಳು ಅತ್ಯಗತ್ಯ ಮತ್ತು ಎಲ್ಲರಿಗೂ ಲಭ್ಯವಿರಬೇಕು.  ಚಾಲ್ತಿಯಲ್ಲಿರುವ ಅಭಾವವು ದಿಗ್ಭ್ರಮೆಗೊಳಿಸುವಂತಿದೆ. ಲೋಕದಾದ್ಯಂತ ಅಂಕೆ-ಸಂಖ್ಯೆಗಳ ಪ್ರಕಾರ ಮೂರು ಶತಕೋಟಿ ಜನರಿಗೆ ಶುದ್ಧ ಅಡುಗೆ ಒಲೆ ಲಭ್ಯವಿಲ್ಲ. ನಾಲ್ಕು ಶತಕೋಟಿ ಜನರಿಗೆ ಸುರಕ್ಷಿತವಾಗಿ ನಿರ್ವಹಿಸಲಾದ ನೈರ್ಮಲ್ಯ ಸೌಲಭ್ಯಗಳಿಲ್ಲ. ೫ ಶತಕೋಟಿ ಜನರಿಗೆ ಅಗತ್ಯ ಆರೋಗ್ಯ ಸೇವೆಗಳು ಲಭ್ಯವಿಲ್ಲ. ಕಡಿಮೆ ಮತ್ತು ಮಧ್ಯಮ ದೇಶಗಳಲ್ಲಿ,  ಸುಮಾರು ೯೪% ಜನರು ಯೋಗ್ಯ ಜೀವನದ ಕನಿಷ್ಠ ಒಂದು ಪ್ರಮುಖ ಸೂಚಕದಿಂದ ವಂಚಿತರಾಗಿದ್ದಾರೆ. ಈಗ ಇದು ಉತ್ಪಾದಕ ಸಾಮರ್ಥ್ಯದ ಕೊರತೆಯಿಂದಾಗಿ ಅಲ್ಲ. ಇಲ್ಲ, ನಮಗೆ ಬೃಹತ್ ಉತ್ಪಾದನಾ ಸಾಮರ್ಥ್ಯವಿದೆ ಮತ್ತು ಅದರ ಒಂದು ಸಣ್ಣ ಪಾಲನ್ನು ಬಳಸಿಕೊಂಡು ಈ ಸರಕುಗಳನ್ನು ಭೂಮಿಯ ಮೇಲಿನ ಎಲ್ಲರಿಗೂ  ತ್ವರಿತವಾಗಿ ಒದಗಿಸಬಹುದು. ಜಾಗತಿಕ ಆರ್ಥಿಕತೆಯು ಪ್ರಸ್ತುತ ಬಳಸುವ ಶಕ್ತಿ ಮತ್ತು ಸಾಮಗ್ರಿಗಳಲ್ಲಿ ಕೇವಲ ೩೦% ರಷ್ಟು ಮಾತ್ರ ಬಳಸಿಕೊಂಡು ಇದನ್ನು ಸಾಧಿಸಬಹುದು  ಎಂದು ನಮ್ಮ ಗುಂಪಿನ ಸಂಶೋಧಕರು ಪ್ರದರ್ಶಿಸಿದ್ದಾರೆ. 

ಆದರೆ  ಸಮಸ್ಯೆ ಬಂಡವಾಳಶಾಹಿ ಮೌಲ್ಯದ ನಿಯಮ. ಬಂಡವಾಳಶಾಹಿಯ ಅಡಿಯಲ್ಲಿ, ನಮ್ಮ ಉತ್ಪಾದಕ ಸಾಮರ್ಥ್ಯವು ಪ್ರಾಥಮಿಕವಾಗಿ ಮಾನವ ಅಗತ್ಯಗಳು ಮತ್ತು ಯೋಗಕ್ಷೇಮಕ್ಕೆ ಅಗತ್ಯವಾದದ್ದಕ್ಕಿಂತ ಹೆಚ್ಚಾಗಿ ಬಂಡವಾಳಕ್ಕೆ ಲಾಭದಾಯಕವಾದದ್ದರ ಸುತ್ತ ಸಜ್ಜುಗೊಳ್ಳುತ್ತದೆ. ಆದ್ದರಿಂದ, ಪಳೆಯುಳಿಕೆ ಇಂಧನಗಳು ಮತ್ತು ಖಾಸಗಿ ವಾಹನಗಳು   ಮತ್ತು  ಫ್ಯಾಷನ್ ಮತ್ತು ವಿವಿಧ ರೀತಿಯ ಐಷಾರಾಮಿ  ಮತ್ತು ಕ್ರೂಸ್ ಹಡಗುಗಳು ಮತ್ತು ಶಸ್ತ್ರಾಸ್ತ್ರಗಳಂತಹ ವಸ್ತುಗಳನ್ನು ಉತ್ಪಾದಿಸುವಲ್ಲಿ ನಾವು ಬೃಹತ್ ಹೂಡಿಕೆಯನ್ನು ಪಡೆಯುತ್ತೇವೆ, ಆದರೆ ನವೀಕರಿಸಬಹುದಾದ ಶಕ್ತಿ, ಸಾರ್ವಜನಿಕ ಸಾರಿಗೆ ಮತ್ತು ಪುನರುತ್ಪಾದಕ ಕೃಷಿಯಂತಹ ಅಗತ್ಯ ವಸ್ತುಗಳ ದೀರ್ಘಕಾಲದ ಕೊರತೆಯನ್ನು ನಾವು ಸಹಿಸುತ್ತೇವೆ   ಏಕೆಂದರೆ ಈ ವಸ್ತುಗಳು ಬಂಡವಾಳಕ್ಕೆ ಕಡಿಮೆ ಲಾಭದಾಯಕವಾಗಿವೆ ಅಥವಾ ಲಾಭದಾಯಕವಲ್ಲ. 

ನಾನು ಆರಂಭದಲ್ಲಿ ಗುರುತಿಸಿದ ವಿರೋಧಾಭಾಸಕ್ಕೆ ಇದು ಕಾರಣವಾಗಿದೆ. ವಿಶ್ವ ಆರ್ಥಿಕತೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬೃಹತ್ ಮತ್ತು ಅತಿಯಾದ ಬಳಕೆಯು ಪರಿಸರ ಕುಸಿತಕ್ಕೆ ಕಾರಣವಾಗುವ ಹಂತಕ್ಕೆ ತಲುಪಿದ್ದೇವೆ.   ಇಷ್ಟಾದರೂ  ಜನಸಾಮಾನ್ಯರಲ್ಲಿ ಬೃಹತ್ ಅಭಾವವನ್ನು ಅನುಭವಿಸುತ್ತೇವೆ. ಏಕೆಂದರೆ ಬಂಡವಾಳಶಾಹಿಯು ಕಾರ್ಮಿಕ ಮತ್ತು ಉತ್ಪಾದನೆಯ ಅಸಾಧಾರಣ ಒಪ್ಪಲಾಗದ ಹಂಚಿಕೆಯನ್ನು ನಡೆಸುತ್ತದೆ. ಅಸ್ತಿತ್ವದಲ್ಲಿರುವ ವ್ಯವಸ್ಥೆಯಡಿಯಲ್ಲಿ  ತೀವ್ರ ಬಡತನವನ್ನು ಕೊನೆಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಕಂಡುಬಂದರೆ, ಅದು ಎಲ್ಲರಿಗೂ ಯೋಗ್ಯವಾದ ಜೀವನ ಮಟ್ಟವನ್ನು ತಲುಪಿಸುವ ಯಾವುದೇ ಲಕ್ಷಣಗಳನ್ನು ಖಂಡಿತವಾಗಿಯೂ ತೋರಿಸುವುದಿಲ್ಲ.  ಬಂಡವಾಳಶಾಹಿಯು ಹವಾಮಾನ ಬಿಕ್ಕಟ್ಟನ್ನು ಪರಿಹರಿಸುವ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ವಾಸ್ತವವಾಗಿ, ಬಂಡವಾಳಶಾಹಿಯೊಳಗೆ ಹವಾಮಾನ ಬಿಕ್ಕಟ್ಟನ್ನು ಪರಿಹರಿಸಲಾಗುವುದಿಲ್ಲ ಎಂದು ನಾನು ಹೇಳುವಷ್ಟು ದೂರ ಹೋಗುತ್ತೇನೆ. ಮತ್ತು ಇದು ಎರಡು ಪ್ರಮುಖ ಕಾರಣಗಳಿಗಾಗಿ : ಮೊದಲನೆಯದಾಗಿ, ನವೀಕರಿಸಬಹುದಾದ ಶಕ್ತಿ ಮೂಲಗಳು  ಪಳೆಯುಳಿಕೆ ಇಂಧನಗಳಿಗಿಂತ ಅಗ್ಗವಾಗಿವೆ ಎಂಬುದನ್ನು ಗಮನಿಸಿ. ದೀರ್ಘಕಾಲದವರೆಗೆ, ಅರ್ಥಶಾಸ್ತ್ರಜ್ಞರು ಇದು ತ್ವರಿತ ಪರಿವರ್ತನೆಯನ್ನು ನೀಡುತ್ತದೆ ಎಂದು ಭರವಸೆ ನೀಡಿದರು, ಆದರೆ ಅದು ಆಗುತ್ತಿಲ್ಲ. ಮತ್ತು ಕಾರಣವೆಂದರೆ ಬಂಡವಾಳವು ಮಾರಾಟ ಬೆಲೆಯ ಆಧಾರದ ಮೇಲೆ ಹೂಡಿಕೆಗಳನ್ನು ಮಾಡುವುದಿಲ್ಲ. ಇದು ಲಾಭದ ಆಧಾರದ ಮೇಲೆ ಹೂಡಿಕೆಗಳನ್ನು ಮಾಡುತ್ತದೆ. ಪಳೆಯುಳಿಕೆ ಇಂಧನಗಳು ನವೀಕರಿಸಬಹುದಾದ ಇಂಧನಗಳಿಗಿಂತ ಸುಮಾರು ಮೂರು ಪಟ್ಟು ಹೆಚ್ಚು ಲಾಭದಾಯಕವಾಗಿವೆ. ಆದ್ದರಿಂದ ಕಳೆದ ಹಲವಾರು ವರ್ಷಗಳಿಂದ ನಾವು ನೋಡುತ್ತಿದ್ದೇವೆ, ಪ್ರಪಂಚವು ನಮ್ಮ ಸುತ್ತಲೂ ಉರಿಯುತ್ತಿರುವಾಗಲೂ ಬಂಡವಾಳವು ಪಳೆಯುಳಿಕೆ ಇಂಧನಗಳಲ್ಲಿ ಹಣಕಾಸುವನ್ನು ತೊಡಗಿಸುವುದನ್ನು ಮುಂದುವರಿಸುತ್ತಿದೆ. ನಮ್ಮ ಪ್ರಮುಖ ಹೂಡಿಕೆ ಸಂಸ್ಥೆಗಳು ಹಸಿರು ತಂತ್ರಜ್ಞಾನವು ಸಾಕಷ್ಟು ಲಾಭದಾಯಕವಲ್ಲ ಎಂದು ಒಪ್ಪಿಕೊಂಡು ಹಸಿರು ಪರಿವರ್ತನೆಗೆ ತಮ್ಮ ಬದ್ಧತೆಗಳನ್ನು ತ್ಯಜಿಸಿವೆ. ಇದು ನಮಗೆ ಸ್ಪಷ್ಟೀಕರಣದ ಕ್ಷಣ ಎಂದು ನಾನು ಭಾವಿಸುತ್ತೇನೆ.  ಹಸಿರು ಪರಿವರ್ತನೆಯನ್ನು ನೀಡಲು ನಾವು ಬಂಡವಾಳವನ್ನು ಅವಲಂಬಿಸಲು ಸಾಧ್ಯವಿಲ್ಲ. 

ಮತ್ತು ಎರಡನೆಯ ಸಮಸ್ಯೆ ಇದು. ಹೆಚ್ಚಿನ ಆದಾಯದ ದೇಶಗಳು ಅಂತಾರಾಷ್ಟ್ರೀಯ ಒಪ್ಪಂದಗಳ ಮೇರೆಗೆ  ಸಾಕಷ್ಟು ವೇಗವಾಗಿ ಡಿಕಾರ್ಬೊನೈಸ್ ಮಾಡಲು, ತಮ್ಮ  ಒಟ್ಟು ಇಂಧನ ಬಳಕೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಇವುಗಳಲ್ಲಿ ಕೆಲವನ್ನು ದಕ್ಷತೆಯ ಸುಧಾರಣೆಗಳ ಮೂಲಕ ಸಾಧಿಸಬಹುದಾದರೂ   ಅನಗತ್ಯ ಉತ್ಪಾದನೆಯ ರೂಪಗಳನ್ನು ಸಕ್ರಿಯವಾಗಿ ಕಡಿಮೆ ಮಾಡುವ ಅಗತ್ಯವಿದೆ, ಸರಿ? ಹವ್ಯಾಸಿಗಳ ಐಷಾರಾಮಿ  ಖಾಸಗಿ ವಾಹನಗಳು, ದಿನದಿಂದ ದಿನಕ್ಕೆ ಬದಲಾಗುವೆ  ಫ್ಯಾಷನ್ ಗಳು, ಬೃಹತ್ ಐಷಾರಾಮಿ ಮಹಲುಗಳು, ಮಹಲುಗಳು, ಇತ್ಯಾದಿ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವೃದ್ಧಿ ಅಥವಾ ಅಪವೃದ್ಧಿ - Degrowth. ಆದರೆ ಸಹಜವಾಗಿ, ಬಂಡವಾಳವು ಯಾವುದೇ ಉದ್ಯಮದಲ್ಲಿ ಉತ್ಪಾದನೆಯನ್ನು ಸ್ವಯಂಪ್ರೇರಣೆಯಿಂದ ಕಡಿಮೆ  ಮಾಡುವುದಿಲ್ಲ, ವಿಶೇಷವಾಗಿ ಆ ಉದ್ಯಮವು ಲಾಭದಾಯಕವಾಗಿದ್ದರೆ. ಆದ್ದರಿಂದ ನಾವು ಅಗತ್ಯ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರಲಿ ಅಥವಾ ಅನಗತ್ಯ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರಲಿ, ಪರಿಸರ ಸಾಮಾಜಿಕ ರೂಪಾಂತರವನ್ನು ಸಾಧಿಸುವ ಏಕೈಕ ಮಾರ್ಗವೆಂದರೆ ಬಂಡವಾಳಶಾಹಿ ಮೌಲ್ಯದ ನಿಯಮವನ್ನು ಸೋಲಿಸುವುದು.

 ಹಾಗಾದರೆ ಇದರ ಅರ್ಥವೇನು? ಇದರ ಅರ್ಥ ಆರ್ಥಿಕ ಪ್ರಜಾಪ್ರಭುತ್ವ. ಅಭಿವೃದ್ಧಿಯ ಕೊರತೆ  ಮತ್ತು ಮಾನವ ಅಭಾವದ ಬಿಕ್ಕಟ್ಟು ಮತ್ತು  ಪರಿಸರ ಬಿಕ್ಕಟ್ಟು, ಇವೆಲ್ಲ  ಅಂತಿಮವಾಗಿ ಉತ್ಪಾದನಾ ವ್ಯವಸ್ಥೆಯ ಸಮಸ್ಯೆಯಾಗಿವೆ . ಅದನ್ನು ಪರಿಹರಿಸಲು ಉತ್ಪಾದನಾ ಸಾಧನಗಳು, ನಮ್ಮ ಶ್ರಮ ಮತ್ತು ನಮ್ಮ ಗ್ರಹದ ಸಂಪನ್ಮೂಲಗಳ ಮೇಲೆ ಪ್ರಜಾಸತ್ತಾತ್ಮಕ ನಿಯಂತ್ರಣವನ್ನು ಸಾಧಿಸುವುದು ಮತ್ತು ಯೋಗಕ್ಷೇಮ ಮತ್ತು ಪರಿಸರ ವಿಜ್ಞಾನದ ಎರಡು ಉದ್ದೇಶದ ಸುತ್ತಲೂ ಅವುಗಳನ್ನು ಸಂಘಟಿಸುವುದು ಅಗತ್ಯವಾಗಿರುತ್ತದೆ. ಉತ್ಪಾದನೆಯಲ್ಲಿ ಹೂಡಿಸುವ ಹಣಕಾಸನ್ನು ಪ್ರಜಾಸತ್ತಾತ್ಮಕವಾಗಿ ಅಂಗೀಕರಿಸಿದ ಉದ್ದೇಶಗಳಿಗೆ ಅಧೀನಗೊಳಿಸಬೇಕು.  ಇದು ಕೈಗಾರಿಕಾ ನೀತಿಯ ಮೂಲ ತತ್ವವಾಗಿದೆ. ಹಸಿರು ಪರಿವರ್ತನೆಯನ್ನು ವೇಗಗೊಳಿಸಲು ಇದು ಅತ್ಯಗತ್ಯ ಮತ್ತು ನಾವು ಅದನ್ನು ಅಳವಡಿಸಿಕೊಳ್ಳಬೇಕು. ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ನಿರ್ಮಿಸುವುದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಸ್ಥಾಪಿಸುವುದು, ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸುವುದು, ಅಗತ್ಯ ಮತ್ತು ತುರ್ತು ಆದರೆ ಬಂಡವಾಳವು ಲಾಭದಾಯಕವಲ್ಲದ ಕಾರಣ ಮಾಡದ ಕೆಲಸಗಳನ್ನು ನೇರವಾಗಿ ನಿಧಿಸಬಲ್ಲ ಮತ್ತು ಅಗತ್ಯ ಕೆಲಸಗಳನ್ನು ನಿರ್ವಹಿಸಬಲ್ಲ ಸಾರ್ವಜನಿಕ ಹಣಕಾಸು ಕಾರ್ಯವಿಧಾನಗಳು ನಮಗೆ ಬೇಕಾಗುತ್ತವೆ. ಆದ್ದರಿಂದ ಇದನ್ನು ಮಾಡುವುದು ಐಚ್ಛಿಕವಲ್ಲ. ಇದು ಅಸ್ತಿತ್ವವಾದದ ಕಡ್ಡಾಯವಾಗಿದೆ. ನಾವು ಬಂಡವಾಳದ ಜಡತ್ವವನ್ನು ಜಯಿಸಬೇಕು. 

ಮುಂದಿನ ಮಾರ್ಗ: ಜಾಗತಿಕ ದಕ್ಷಿಣದ ಬಗ್ಗೆ ಏನು ವಿಚಾರಿಸಬಹುದು ?   ಮೂಲಭೂತ ಅಂಶಗಳೆಂದರೆ ದಕ್ಷಿಣ ಸರ್ಕಾರಗಳು ಸಾಮ್ರಾಜ್ಯಶಾಹಿ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಮಾರ್ಗಗಳನ್ನು ಕಂಡುಹಿಡಿಯಬೇಕು. ಅವರು ವಸಾಹತುಶಾಹಿಯಿಂದ ವಿಮೋಚನೆ ಪಡೆಯುವ  ಎರಡನೇ ಹಂತವನ್ನು ಸಾಧಿಸಬೇಕಾಗಿದೆ. ಅವರು ಸಾಮ್ರಾಜ್ಯಶಾಹಿ ಬಂಡವಾಳದಿಂದ ದೂರವಾಗಬೇಕು, ತಮ್ಮ ರಾಷ್ಟ್ರೀಯ ಉತ್ಪಾದಕ ಸಾಮರ್ಥ್ಯಗಳ ಮೇಲೆ ನಿಯಂತ್ರಣವನ್ನು ಮರಳಿ ಪಡೆಯಬೇಕು ಮತ್ತು ಮಾನವ ಅಗತ್ಯಗಳನ್ನು ಪೂರೈಸುವ ಮತ್ತು ರಾಷ್ಟ್ರೀಯ ಅಭಿವೃದ್ಧಿಗಳನ್ನು ಸಾಧಿಸುವ ಸುತ್ತ ಅವುಗಳನ್ನು ಮರುಸಂಘಟಿಸಬೇಕು. ನೆನಪಿಡಿ, ಜಾಗತಿಕ ದಕ್ಷಿಣವು ಕಳಪೆಯಾಗಿಲ್ಲ. ಇದು ಶ್ರೀಮಂತವಾಗಿದೆ. ಇದು ಫಲವತ್ತಾದ ಭೂಮಿ, ಹೇರಳವಾದ ಕಾರ್ಮಿಕ ಸಂಪತ್ತು  ಮತ್ತು ಅಸಾಧಾರಣ ಮತ್ತು ವಿಶಾಲವಾದ ಸಂಪನ್ಮೂಲಗಳಿಂದ ಕೂಡಿದೆ. ಸಮಸ್ಯೆಯೆಂದರೆ ಅವರಿಗೆ ಈ ಸಾಮರ್ಥ್ಯಗಳ ಮೇಲೆ ಸಾರ್ವಭೌಮ ನಿಯಂತ್ರಣವಿಲ್ಲ. 

ಹಾಗಾದರೆ, ಅವರು ಇದನ್ನು ಹೇಗೆ ಸಾಧಿಸಬಹುದು? ಮೊದಲ ಹೆಜ್ಜೆ ಸಾರ್ವಜನಿಕ ಹಣಕಾಸನ್ನು  ನಿಯೋಜಿಸುವುದು. ತನ್ನದೇ ಆದ ರಾಷ್ಟ್ರೀಯ ಕರೆನ್ಸಿಯನ್ನು ಬಿಡುಗಡೆ ಮಾಡುವ ಯಾವುದೇ ಸರ್ಕಾರವು ಆ ಕರೆನ್ಸಿಯಲ್ಲಿ ಶ್ರಮ ಮತ್ತು ಸಾಮಗ್ರಿಗಳನ್ನು ಖರೀದಿಸಬಹುದಾದವರೆಗೆ ಅಗತ್ಯವಿರುವ ಯಾವುದೇ ಉತ್ಪಾದನೆಗೆ ಹಣಕಾಸು ಒದಗಿಸಲು ಅದನ್ನು ಬಳಸಬಹುದು. ಇದನ್ನು ಅಗತ್ಯ ಸಾರ್ವಜನಿಕ ಕೆಲಸಗಳು, ಮನೆಗಳನ್ನು ನಿರ್ಮಿಸುವುದು, ಶಾಲೆಗಳು, ಚಿಕಿತ್ಸಾಲಯಗಳು, ನೈರ್ಮಲ್ಯ ವ್ಯವಸ್ಥೆಗಳು, ಸಾರ್ವಜನಿಕ ಸೇವೆಗಳು, ಪುನರುತ್ಪಾದಕ ಕೃಷಿ ಇತ್ಯಾದಿಗಳಿಗೆ ಹಣಕಾಸು ಒದಗಿಸಲು ಬಳಸಬಹುದು. ಬಂಡವಾಳವು ತಮ್ಮ ಶ್ರಮವನ್ನು ಬಳಸುವುದು ಲಾಭದಾಯಕವಲ್ಲದ ಕಾರಣ ಸಾಮೂಹಿಕ ನಿರುದ್ಯೋಗ ಮತ್ತು ಹೊರಗಿಡುವಿಕೆಯ ಪರಿಸ್ಥಿತಿಗಳಲ್ಲಿ ಪ್ರಸ್ತುತ ಬಳಲುತ್ತಿರುವ ಲಕ್ಷಾಂತರ ಜನರಿಗೆ ತರಬೇತಿ ನೀಡಲು ಮತ್ತು ನೇಮಿಸಿಕೊಳ್ಳಲು ಅದೇ ತಂತ್ರವನ್ನು ಬಳಸಬಹುದು. ಬಂಡವಾಳಶಾಹಿಯ ಅಡಿಯಲ್ಲಿ ಸಂಪೂರ್ಣವಾಗಿ ಬಳಕೆಯಾಗದ ಬೃಹತ್ ಉತ್ಪಾದನಾ ಸಾಮರ್ಥ್ಯ ಇದು. ಈ ಕಾರ್ಮಿಕ ಬಲದ ಶಕ್ತಿಯ ಬಗ್ಗೆ ಯೋಚಿಸಿ. ಬಂಡವಾಳವು ಹೇಗಾದರೂ ಒಂದು ದಿನ ಈ ಜನರನ್ನು ನೇಮಿಸಿಕೊಳ್ಳುತ್ತದೆ ಎಂದು ಆಶಿಸುವ ಬದಲು, ರಾಷ್ಟ್ರೀಯ ಅಭಿವೃದ್ಧಿ ಉದ್ದೇಶಗಳನ್ನು ಸಾಧಿಸಲು ರಾಜ್ಯಗಳು ಅವರನ್ನು ನೇರವಾಗಿ ನೇಮಿಸಿಕೊಳ್ಳಬಹುದು. ಮತ್ತು ಸಹಜವಾಗಿ, ಸಾರ್ವಭೌಮ ಕೈಗಾರಿಕಾ ನೆಲೆಯನ್ನು ನಿರ್ಮಿಸುವತ್ತ ಉತ್ಪಾದನೆಯನ್ನು ಮಾರ್ಗದರ್ಶನ ಮಾಡಲು ೨೦ ನೇ ಶತಮಾನದಲ್ಲಿ ಯಶಸ್ವಿಯಾಗಿವೆ ಎಂದು ನಮಗೆ ತಿಳಿದಿರುವ ಅದೇ ತಂತ್ರಗಳನ್ನು ಬಳಸಿಕೊಂಡು ಕೈಗಾರಿಕಾ ನೀತಿ ಮತ್ತು ಯೋಜನೆಯನ್ನು ಜಾರಿಗೆ ತರುವುದು ಅವಶ್ಯಕ. 

ಸಹಜವಾಗಿ, ಸಾರ್ವಜನಿಕ ಹಣಕಾಸುವನ್ನು ಮಿತಿಗೊಳಿಸುವ ಮತ್ತು ಕೈಗಾರಿಕಾ ನೀತಿಯನ್ನು ನಿಷೇಧಿಸುವ ರಚನಾತ್ಮಕ ಹೊಂದಾಣಿಕೆ ಮತ್ತು ಪಾಶ್ಚಿಮಾತ್ಯ ಹಣಕಾಸು ಸಂಸ್ಥೆಗಳ ಪರಿಸ್ಥಿತಿಗಳಲ್ಲಿ ಇದೆಲ್ಲವೂ ಪರಿಣಾಮಕಾರಿಯಾಗಿ ಹೊರಗಿಡಲ್ಪಟ್ಟಿದೆ ಎಂದು ನಾವು ಗುರುತಿಸಬೇಕು. ಈ ವಿಧಾನದಿಂದ, ನಿರುದ್ಯೋಗ ಮತ್ತು ಬಡತನವನ್ನು ಶಾಶ್ವತವಾಗಿ ಕೊನೆಗೊಳಿಸಬಹುದು ಮತ್ತು ಸಾಮಾಜಿಕ ಮತ್ತು  ಪರಿಸರ ಗುರಿಗಳನ್ನು ಮತ್ತು ತ್ವರಿತವಾಗಿ ಸಾಧಿಸಬಹುದು. ಮತ್ತು ದಕ್ಷಿಣದಲ್ಲಿ ಈ ಮಾರ್ಗಗಳಲ್ಲಿ ವಸಾಹತುಶಾಹಿ ವಿರೋಧಿ ರೂಪಾಂತರವನ್ನು ಸೇರಿಸಬೇಕು. ಅದು ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ರದ್ದುಗೊಳಿಸುತ್ತದೆ, 

ನಮಗೆಲ್ಲರಿಗೂ ಚೆನ್ನಾಗಿ ತಿಳಿದಿರುವಂತೆ, ಪ್ರಮುಖ ರಾಜ್ಯಗಳು ವಿಮೋಚನಾ ಚಳುವಳಿಗಳ ವಿರುದ್ಧ ನರಮೇಧದ ಹಿಂಸಾಚಾರವನ್ನು ಬಳಸಲು ಸಿದ್ಧವಾಗಿವೆ. ದಕ್ಷಿಣ ದಕ್ಷಿಣ ಒಗ್ಗಟ್ಟು ಮತ್ತು ಪ್ರಾದೇಶಿಕ ಸಹಕಾರ ಇಲ್ಲಿ ಸಂಪೂರ್ಣವಾಗಿ ಅವಶ್ಯಕ.  ರಕ್ಷಣಾ ಮೈತ್ರಿಗಳನ್ನು ಸ್ಥಾಪಿಸಬೇಕಾಗಿದೆ. 

 ನಮ್ಮ ಪ್ರಸ್ತುತ ಕ್ಷಣದಲ್ಲಿ ನಾವು  ಎದುರಿಸುತ್ತಿರುವ ಬಿಕ್ಕಟ್ಟುಗಳು ಅಸ್ತಿತ್ವಕ್ಕೇ  ಕುತ್ತಾಗಿವೆ.   ನಮ್ಮ ಧುರೀಣರು  ಪ್ರಸ್ತುತ ಪ್ರಸ್ತಾಪಿಸಿರುವ ಪರಿಹಾರಗಳು ಸಾಧಿಸಬೇಕಾದ ಗುರಿಗೆ  ಸ್ಪಷ್ಟವಾಗಿ ಅಸಮರ್ಪಕವಾಗಿವೆ. ನಿಜವಾದ ಪರಿಸರ-ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಮರ್ಥವಾಗಿರುವ ರಾಜಕೀಯ ಚಳುವಳಿಗಳನ್ನು ನಾವು ತುರ್ತಾಗಿ ನಿರ್ಮಿಸಬೇಕಾಗಿದೆ. ಆದರೆ ಒಂದು ವಿಷಯ ಖಚಿತ. ನಮ್ಮ ಕ್ರಾಂತಿಕಾರಿ ಬದಲಾವಣೆಯ ಸಿದ್ಧಾಂತವು ದಕ್ಷಿಣ ರೈತರು ಮತ್ತು ಕಾರ್ಮಿಕರನ್ನು ಮತ್ತು ದಕ್ಷಿಣ ವಿಮೋಚನಾ ಹೋರಾಟಗಳನ್ನು ವಿಶ್ವ ಐತಿಹಾಸಿಕ ರೂಪಾಂತರದ ಪ್ರಾಥಮಿಕ ಕಾರ್ಯಕರ್ತರುಗಳಾಗಿ  ಕೇಂದ್ರೀಕರಿಸದಿದ್ದರೆ, ನಾವು ಮೂಲಭೂತವಾಗಿ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವದರಲ್ಲಿ ಅಯಶಸ್ವಿಯಾಗಿದ್ದೇವೆ   ಎನ್ನುವದು ಸ್ವಯಂವಿದಿತ. 

--

Jason Hickel

ಜೇಸನ್ ಹಿಕಲ್ ಒಬ್ಬ ರಾಜಕೀಯ ಅರ್ಥಶಾಸ್ತ್ರಜ್ಞ, ಲೇಖಕ  ಬಾರ್ಸಿಲೋನಾ ಸ್ವಾಯತ್ತ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ಮತ್ತು ಸಾರ್ವಜನಿಕ ಕಾನೂನು ವಿಭಾಗದಲ್ಲಿ  ಪ್ರಾಧ್ಯಾಪಕರಾಗಿದ್ದಾರೆ. ಅವರ ಸಂಶೋಧನೆಯು ರಾಜಕೀಯ ಆರ್ಥಿಕತೆ, ಅಸಮಾನತೆ ಮತ್ತು ಪರಿಸರ ಅರ್ಥಶಾಸ್ತ್ರದ ಮೇಲೆ ಕೇಂದ್ರೀಕರಿಸುತ್ತದೆ.

his two most recent books: The Divide: A Brief Guide to Global Inequality and its Solutions (Penguin, 2017), and Less is More: How Degrowth Will Save the World (Penguin, 2020), listed by the Financial Times and New Scientist as a book of the year.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು