ಭಾರತದ ಚುನಾವಣೆಯ ಬಗ್ಗೆ ಲ೦ಡನ್ನಿನ ಪ್ರಖ್ಯಾತ  ದಿನಪತ್ರಿಕೆ ‘ದಿ ಗಾರ್ಡಿಯನ್’ ದೃಷ್ಟಿಕೋನ: 


ಭಿನ್ನಾಭಿಪ್ರಾಯವನ್ನು ಕಾನೂನುಬಾಹಿರಗೊಳಿಸುವ ಮೂಲಕ ಅನೈತಿಕ ಗೆಲುವು ಸಾಧಿಸುವುದು ಪ್ರಜಾಪ್ರಭುತ್ವವನ್ನು ಹಾನಿಗೊಳಿಸುತ್ತದೆ

ಸಂಪಾದಕೀಯ


ನರೇಂದ್ರ ಮೋದಿಯವರಿಗೆ ಮತ್ತೊಂದು ಜನಾದೇಶ ನೀಡುವ ಬಗ್ಗೆ ಭಾರತೀಯ ಮತದಾರರು ತೀವ್ರವಾಗಿ ಯೋಚಿಸಬೇಕು

ಬುಧವಾರ 17 ಏಪ್ರಿಲ್ 2024


ದೇಶವನ್ನು ಮುನ್ನಡೆಸುವ ಪೈಪೋಟಿಯನ್ನು  ಈಗಾಗಲೇ ಗೆದ್ದಿರುವ ಬಡಾಯಿಯ ನಡುವೆ ವಿಶ್ವದ ಅತಿದೊಡ್ಡ ಚುನಾವಣೆಗಳು ಭಾರತದಲ್ಲಿ ಈ ವಾರ  ಪ್ರಾರಂಭವಾಗಿವೆ.  ನರೇಂದ್ರ ಮೋದಿಯವರು ದೊಡ್ಡ ಸಂಸದೀಯ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ, ಅವರ ಸಾಧನೆಯು ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ  ಸಾಧನೆಯನ್ನು ಸರಿಗಟ್ಟುತ್ತದೆ.  ಚುನಾವಣಾ ಫಲಿತಾಂಶ ಏನೇ ಇರಲಿ,  ಭಾರತೀಯ ಪ್ರಜಾಪ್ರಭುತ್ವ ಸೋಲುವದ೦ತೂ ಖಚಿತ.  ಯಾಕೆ ? ಶ್ರೀ ನೆಹರೂ ಅನಾಮಧೇಯವಾಗಿ ತಮ್ಮದೇ ನಾಯಕತ್ವವನ್ನು ತಾವೇ ಟೀಕಿಸಿದ್ದರೆ, ಅವರಿಗೆ ಭಿನ್ನವಾಗಿ ಶ್ರೀ ಮೋದಿಯವರು ತಮ್ಮ ವಿರೋಧಿಗಳನ್ನು ಅಸಡ್ಡೆಯಿ೦ದ ಕಾಣುತ್ತಾರೆ.


ದೈನಂದಿನ ಆಡಳಿತದಲ್ಲಿ ವಿಚಾರಗಳ ಸ್ಪರ್ಧೆಗೆ ಅವಕಾಶ ನೀಡುವದಲ್ಲದೆ   ನಾಗರಿಕರನ್ನು ಸಮಾನವಾಗಿ ಪರಿಗಣಿಸಿದಾಗ ಪ್ರಜಾಪ್ರಭುತ್ವವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮೋದಿಯವರ ಭಾರತದಲ್ಲಿ ಇವುಗಳ ಕೊರತೆಯಿದೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿ ಕಂಡುಕೊಂಡಿತು . ಕಾನೂನು ಹೇರಿಕೆ  ಮತ್ತು ತೆರಿಗೆ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ಭಾರತೀಯ ರಾಜಕಾರಣಿಗಳು  ಎಲ್ಲರೂ ವಿರೋಧ ಪಕ್ಷದವರು ಮತ್ತು ಯಾರೂ ಆಡಳಿತ ಪಕ್ಷಕ್ಕೆ ಸೇರಿದವರಲ್ಲ – ಇದೆಲ್ಲವೂ ಕಾಕತಾಳೀಯವಾಗಿರಲು ಸಾಧ್ಯವಿಲ್ಲ. ಭಾರತ ಸರ್ಕಾರದ ಅಪರಾಧಿಗಳ ವಿರುಧ್ಧ  ಮೊಕದ್ದಮೆಗಳನ್ನು ಹೂಡುವ ಇಲಾಖೆಗಳ ಆಳವಾದ ಸಲಕರಣೆಗಳನ್ನು ವಿರೋಧ  ಪಕ್ಷಗಳ ವಿರುದ್ಧ  ಆಯುಧಗೊಳಿಸುವುದು ಅನಗತ್ಯವೆಂದು ತೋರುತ್ತದೆ, ಏಕೆಂದರೆ ತಮ್ಮ ಪ್ರತಿಸ್ಪರ್ಧಿಗಳನ್ನು ಬೃಹತ್ ಪ್ರಮಾಣದಲ್ಲಿ ಮೀರಿ ಶ್ರೀ ಮೋದಿ ಅವರು ಹಣ ಖರ್ಚು ಮಾಡಬಹುದು. ೨೦೧೮ ರಿಂದ, ಶ್ರೀ ಮೋದಿಯವರ ಭಾರತೀಯ ಜನತಾ ಪಕ್ಷ ಶ್ರೀಮಂತ ದಾನಿಗಳಿಂದಸುಮಾರು  ೧೩,೨೦೦ ಕೋಟಿ ರೂಪಾಯಿಗಳನ್ನು ಪಡೆದಿದೆ, ಇದು  ಇತರ ರಾಜಕೀಯ ಪಕ್ಷಗಳೆಲ್ಲವೂ  ಸೇರಿ ಪಡೆದ  ಮೊತ್ತಕ್ಕಿ೦ತ  ಹೆಚ್ಚು.

ಶ್ರೀ ಮೋದಿಯವರಿಗೆ ಅನಿವಾರ್ಯವಾಗಿ ನಿರಾಕರಣೆಯನ್ನು ಆಹ್ವಾನಿಸುವ ಚುನಾವಣೆಗಳ ಅಗತ್ಯವಿದೆಯೇ ? ೧೦ ವರ್ಷಗಳ ಅಧಿಕಾರದ ನಂತರ, ಮತದಾರರು ಮೋದಿಯವರನ್ನು  ಅಚ್ಚರಿಗೊಳಿಸುವ ಮನಸ್ಥಿತಿಯಲ್ಲಿರಬಹುದು. ಭಾರತೀಯರು ಹೆಚ್ಚು ಚಿಂತಿತರಾಗಿದ್ದಾರೆ ಎಂದು ಸಮೀಕ್ಷೆಗಳು ಸೂಚಿಸುವ ವಿಷಯಗಳೆ೦ದರೆ ನಿರುದ್ಯೋಗ, ಹಣದುಬ್ಬರ ಮತ್ತು ಆದಾಯದ ಅಭದ್ರತೆ. ಈ ವಿಷಯಗಳ ಬಗ್ಗೆ ಶ್ರೀ ಮೋದಿ ಆಡಳಿತ ಕಳಪೆ ದಾಖಲೆ ಹೊಂದಿದೆ, ಇವುಗಳ ಬಗ್ಗೆ  ವಿರೋಧ ಪಕ್ಷ್ಗಗಳ ಹಲ್ಲೆ ಅವಿರತವಾಗಿ ನಡೆಯುತ್ತಲೇ ಇರುತ್ತದೆ. ಬಹುತೇಕ ಮತದಾರರು ಶ್ರೀ ಮೋದಿಯವರ ಆಡಳಿತದಲ್ಲಿಭ್ರಷ್ಟಾಚಾರ ಹದಗೆಟ್ಟಿದೆ ಎ೦ದೇ ಹೇಳುತ್ತಾರೆ. ಇದು ಆಶ್ಚರ್ಯಕರವಲ್ಲ. ಇತ್ತೀಚಿನ ಆರ್ಥಿಕ ಬೆಳವಣಿಗೆ  ಅಸಮಾನವಾಗಿ ಶ್ರೀಮಂತರ  ಲಾಭಕ್ಕೇ ಚಲಿಸಿದೆ.  ವಸಾಹತುಶಾಹಿ  ಆಳ್ವಿಕೆಯ ಕಾಲಕ್ಕಿ೦ತ  ಭಾರತ ಇಂದು ಹೆಚ್ಚು ಅಸಮಾನವಾಗಿದೆ.

ಚುನಾವಣೆಗಳನ್ನು ನಡೆಸುವುದು ಚೀನಾಕ್ಕೆ ವಿರುದ್ಧವಾಗಿ  "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ" ಎನ್ನುವ ಭಾರತದ ಖ್ಯಾತಿಯನ್ನು ಹೆಚ್ಚು ಹೊಳಪಿಸುತ್ತದೆ. ಹೆಚ್ಚು ಮುಖ್ಯವಾಗಿ, ಶ್ರೀ ಮೋದಿ ಅವರಿಗೆ ತಮ್ಮ ಆಡಳಿತವನ್ನು ಕಾನೂನುಬದ್ಧಗೊಳಿಸಲು ಜನಾದೇಶದ ಅಗತ್ಯವಿದೆ. ಕಾನೂನಿನ ನಿಯಮವನ್ನು ಎತ್ತಿಹಿಡಿಯುವ ಚುನಾಯಿತ ಸಂಸ್ಥೆಗಳ ಮೇಲೆ ಮೇಲುಗೈ ಸಾಧಿಸಲು ಜನಪ್ರಿಯ ನಾಯಕರು ಅಧಿಕಾರವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾರೆ. ಶ್ರೀ ಮೋದಿಯನ್ನು  ಪ್ರತಿರೋಧಿಸುವದು  ಅಪಾಯಕಾರಿ ವ್ಯಾಪಾರ. ಅವರು ತಮ್ಮ ಚುನಾವಣಾ ವಿಜಯಗಳನ್ನು  ಸಾಂವಿಧಾನಿಕ ಹಕ್ಕುಗಳನ್ನು ಬಲವಂತವಾಗಿ ನಾಶಪಡಿಸುವ ತಮ್ಮ ಕ್ರಿಯೆಗಳಿಗೆ ವಿರೋಧವನ್ನು ಪ್ರಕಟಿಸುವವರನ್ನು ‘ಆಂತರಿಕ ಶತ್ರುಗಳು’ ಎ೦ದು ಚಿತ್ರಿಸಲು ಬಳಸಿಕೊ೦ಡಿದ್ದಾರೆ. 

ಆಧುನಿಕ ಭಾರತ ತನ್ನ ಗುರುತನ್ನು ಧರ್ಮ ಅಥವಾ ಜನಾಂಗೀಯತೆಯ ಆಧಾರದಲ್ಲಿಎಂದಿಗೂ ವ್ಯಾಖ್ಯಾನಿಸಿಲ್ಲ . ಹೆಚ್ಚಿನ ಭಾರತೀಯರು  ಹಿಂದೂ ಧರ್ಮದವರು ,  ಆದರೆ ಭಾರತ ದೇಶವು 20  ಕೋಟಿ ಮುಸ್ಲಿಮರಿಗೆ ನೆಲೆಯಾಗಿದೆ. ಹಿಂದೂ ರಾಷ್ಟ್ರೀಯವಾದಿಗಳು - ಉದಾಹರಣೆಗೆ ಶ್ರೀ ಮೋದಿ - ತಮ್ಮ ಅನುಯಾಯಿಗಳಿಗೆ ಪ್ರಾಮುಖ್ಯತೆಯನ್ನು ಬಯಸುತ್ತಾರೆ. ತಳಮಟ್ಟದಲ್ಲಿ ನಿರ್ಭಯದಿಂದ ಹಿಂಸಾತ್ಮಕವಾಗಿ ಕಾರ್ಯಮಾಡುವ   ಆಳುವ ಪಕ್ಷಕ್ಕೆ ಸಂಬಂಧಿಸಿದ  ಸ್ವಕಲ್ಪಿತ ಜಾಗೃತಾ ಪಡೆಗಳ ಅಸ್ತಿತ್ವಕ್ಕೆ ಇದೇ  ಕಾರಣ.   ಶ್ರೀ ಮೋದಿಯವರು ಅಧಿಕಾರ ಕಳೆದುಕೊಂಡರೆ, ರಾಷ್ಟ್ರವು ಕಾನೂನು ಬದ್ಧ ಸ್ಥಿತಿ ಗೆ ಮರಳುವುದನ್ನು   ಈ ಸಂಸ್ಥೆಗಳು ತುಂಬಾ ಕಷ್ಟಕರಗೊಳಿಸುತ್ತವೆ. .

ಲಂಡನ್‌ನ ಕಿಂಗ್ಸ್ ಕಾಲೇಜ್‌ನ ಕ್ರಿಸ್ಟೋಫ್ ಜಾಫ್ರೆಲಾ ತಮ್ಮ  ‘GUJARAT UNDER MODI ‘ ಪುಸ್ತಕದಲ್ಲಿ ಬರೆಯುತ್ತಾರೆ, "ಅಧಿಕೃತ ರಾಜ್ಯಕ್ಕಿಂತ ಆಳವಾದ ರಾಜ್ಯ"ವನ್ನು  ರೂಪಿಸುವ ಸ್ವಕಲ್ಪಿತ ಜಾಗೃತಾ ಪಡೆಗಳ ಅಟ್ಟಹಾಸವನ್ನು  ಕೇವಲ ವಿಶಾಲವಾದ ಒಂದು ಸಾಮೂಹಿಕ ಚಳುವಳಿ ಮಾತ್ರವೇ ಎದುರಿಸಬಹುದು. ಅದು ಅಂದುಕೊಂಡಷ್ಟು ಅಸಂಭವವಲ್ಲ. ದಕ್ಷಿಣ ಭಾರತದಲ್ಲಿ ಶ್ರೀ ಮೋದಿ ಜನಪ್ರಿಯರಲ್ಲ, ಅಲ್ಲಿ ಹಿಂದೂ ಧರ್ಮದ ಶ್ರೇಣೀಕರಣಕ್ಕೆ ಸವಾಲು ಹಾಕುವ ಪ್ರಾದೇಶಿಕ ಸಾಂಸ್ಕೃತಿಕ ಗುರುತಿನ ಸುತ್ತ ರಾಜಕೀಯ ಕ್ರೋಢೀಕರಣವಿದೆ. ಇದರಿ೦ದಾಗಿ , ವಿಶೇಷವಾಗಿ ತಮಿಳುನಾಡು ರಾಜ್ಯದಲ್ಲಿ ಹೆಚ್ಚು ಪರಿಣಾಮಕಾರಿ ಸಂಸ್ಥೆಗಳು ಮತ್ತು ಆರೋಗ್ಯ, ಶಿಕ್ಷಣ ಮತ್ತು ಬಡತನ ಕಡಿತದ ಮೇಲೆ ಉತ್ತಮ ಫಲಿತಾಂಶಗಳು, ಹಾಗೆಯೇ ಹೆಚ್ಚು ಆರ್ಥಿಕ ಚೈತನ್ಯವನ್ನು ಕಾಣಬಹುದು.

ಶ್ರೀ ಮೋದಿಯವರ ಪಕ್ಷವು ಅಧಿಕ ಜನಸಂಖ್ಯೆಯ ಉತ್ತರ ಭಾರತದ ತನ್ನ ಭದ್ರಕೋಟೆಗಳಲ್ಲಿ ಪ್ರಗತಿಯ ಕೊರತೆಯನ್ನು ಮರೆಮಾಚಲು ಹಿಂದೂ ಧರ್ಮವನ್ನು ಉಗ್ರಗಾಮಿಯಾಗಿ ಪ್ರತಿಪಾದಿಸುತ್ತದೆ. ಉತ್ತರ ಭಾರತದಲ್ಲಿ ಅದರ ವಿರೋಧಿಗಳಲ್ಲಿ ಒಬ್ಬರು,ಅರವಿಂದ್ ಕೇಜ್ರಿವಾಲ್, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ದಕ್ಷಿಣದ ಮಾದರಿಯನ್ನು ಅನುಕರಿಸಲು ಪ್ರಯತ್ನಿಸಿದರು. ಕಳೆದ ತಿಂಗಳು ಅವರನ್ನು ಬಂಧಿಸಲಾಯಿತು. ಭಾರತೀಯ ಮತದಾರರು ಇದನ್ನು ಮೋದಿಯವರ ಆತ್ಮವಿಶ್ವಾಸಕ್ಕಿಂತ ಹೆಚ್ಚಾಗಿ ಅವರ ಅಭದ್ರತೆಯ ಸಂಕೇತವೆಂದು ನೋಡಬಹುದು. ಒಳಗೊಳಗೆ ಅಸುರಕ್ಷಿತ ಮನೋಭಾವನೆಯನ್ನು ಹಿಡಿದುಕೊಳ್ಳಲು  ಮೋದಿಯವರಿಗೆ  ಬಹಳಷ್ಟು ಕಾರಣಗಳು ಇವೆ.  


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು