ಹೆನ್ರಿ ಕಿಸ್ಸಿಂಜರ್, ಲಕ್ಷಗಟ್ಟಲೆ ಸಾವುಗಳಿಗೆ ಜವಾಬ್ದಾರರಾಗಿರುವ US ರಾಜತಾಂತ್ರಿಕ, 100 ನೇ ವಯಸ್ಸಿನಲ್ಲಿ ನಿಧನರಾದರು

" ಹೆನ್ರಿ ಕಿಸ್ಸಿಂಜರ್ ಅವರಂತೆ ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಹೆಚ್ಚು ಸಾವು, ವಿನಾಶ ಮತ್ತು ಮಾನವ ಸಂಕಟಗಳಿಗೆ ಜವಾಬುದಾರರು ಬೇರೆ ಯಾರೂ ಇಲ್ಲ."

ನಿಕ್ ಟರ್ಸ್ ಲೇಖನ

ನವೆಂಬರ್ 29 2023, 9:49 p.m.

 ಅಮೆರಿಕಾದ ಇಬ್ಬರು ರಾಷ್ಟ್ರಧ್ಯಕ್ಷರ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಕಾರ್ಯದರ್ಶಿ ಮತ್ತು ದೀರ್ಘಾವಧಿಯ  ಅಮೆರಿಕಾದ ವಿದೇಶಾಂಗ ನೀತಿ ಸ್ಥಾಪನೆಯಲ್ಲಿ   ಅಧಿಕೃತವಾಗಿ ಹಾಗೆಯೇ ಪರದೆಯ ಹಿಂದೆ  ಕಾರ್ಯ ಮಾಡಿದ ಹೆನ್ರಿ ಕಿಸಿಂಜರ್, ೨೦೨೩ ನವೆಂಬರ್ ೨೯ ರಂದು ನಿಧನರಾದರು. ಅವರು ೧೦೦  ವರ್ಷ ವಯಸ್ಸಿನವರಾಗಿದ್ದರು.

ಕಿಸ್ಸಿಂಜರ್ ವಿಯೆಟ್ನಾಂ ಯುದ್ಧವನ್ನು ವಿಸ್ತರಿಸಲು ಮತ್ತು ಆ ಸಂಘರ್ಷವನ್ನು ತಟಸ್ಥ ಕಾಂಬೋಡಿಯಾಕ್ಕೆ ವಿಸ್ತರಿಸಲು ಸಹಾಯ ಮಾಡಿದರು; ಕಾಂಬೋಡಿಯಾ, ಪೂರ್ವ ಟಿಮೋರ್ ಮತ್ತು ಬಾಂಗ್ಲಾದೇಶದಲ್ಲಿ ನರಮೇಧಗಳನ್ನು ಸುಗಮಗೊಳಿಸಿದರು; ದಕ್ಷಿಣ ಆಫ್ರಿಕಾದಲ್ಲಿ  ಅಂತರ್ಯುದ್ಧಗಳನ್ನು ವೇಗಗೊಳಿಸಿದರು ಮತ್ತು ದಕ್ಷಿಣ  ಅಮೆರಿಕದಾದ್ಯಂತ ದಂಗೆಗಳು ಮತ್ತು ಕೊಲೆಗಾರ ತಂಡಗಳನ್ನು ಬೆಂಬಲಿಸಿದರು. ಅವರ ಜೀವನಚರಿತ್ರೆಕಾರ ಗ್ರೆಗ್ ಗ್ರ್ಯಾಂಡಿನ್ ಪ್ರಕಾರ, ಕಿಸ್ಸಿ೦ಜರ್ ಅವರ ಕೈಗಳ ಮೇಲೆ  ಕನಿಷ್ಠ 3೦ ಲಕ್ಷ  ಜನರ ರಕ್ತವಿತ್ತು.

"ಹೆನ್ರಿ ಕಿಸ್ಸಿಂಜರ್‌ನಂತೆ ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಹೆಚ್ಚು ಸಾವು, ವಿನಾಶ ಮತ್ತು ಮಾನವ ಸಂಕಟಗಳಿಗೆ ಜವಾಬುದಾರರಾದ  ಜನರು ಪ್ರಾಯಶಃ  ಬೇರೆ ಯಾರೂ ಇದ್ದ್ದಿಲ್ಲ " ಎಂದು ಯುದ್ಧ ಅಪರಾಧಗಳ ಅನುಭವಿ ಪ್ರಾಸಿಕ್ಯೂಟರ್ ರೀಡ್ ಬ್ರಾಡಿ ಹೇಳಿದರು.

ಕಿಸ್ಸಿಂಜರ್ - ಬಹುಶಃ  ಅಮೇರಿಕನ್ ಇತಿಹಾಸದಲ್ಲಿ ಅತ್ಯಂತ ಶಕ್ತಿಶಾಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ 1969 ರಿಂದ 1975 ರವರೆಗೆ ಆಗ್ನೇಯ ಏಷ್ಯಾದಲ್ಲಿ ಯುಎಸ್ ಯುದ್ಧ ನೀತಿಯ ಮುಖ್ಯ ವಾಸ್ತುಶಿಲ್ಪಿ. ಈಚೆಗಿನ ವಿವರಗಳ ಪ್ರಕಾರ ಇವರು ಕಾಂಬೋಡಿಯಾದಲ್ಲಿ ಹಿಂದೆ ತಿಳಿದಿರುವುದಕ್ಕಿಂತ ಹೆಚ್ಚು ನಾಗರಿಕರ ಸಾವುಗಳಿಗೆ ಕಾರಣರಾಗಿದ್ದರು. ಹಿಂದೆ ಪ್ರಕಟಿಸದ, ವರದಿಯಾಗದ  ಸಾಕ್ಷ್ಯದ ಮೇರೆಗೆ  ಯುದ್ಧದ ಸಮಯದಲ್ಲಿ ನೂರಾರು ನಾಗರಿಕ ಸಾವುನೋವುಗಳನ್ನು ರಹಸ್ಯವಾಗಿಡಲಾಯಿತು  ಕಿಸ್ಸಿಂಜರ್ ಕಾಂಬೋಡಿಯಾದಲ್ಲಿ ನಡೆದ ದಾಳಿಯ ಪ್ರಮುಖ ಜವಾಬ್ದಾರಿಯನ್ನು ಹೊತ್ತಿದ್ದರು. ಇದು ಸುಮಾರು 150,000 ನಾಗರಿಕರನ್ನು ಕೊಂದಿತು. 

ಜರ್ಮನಿಯಲ್ಲಿ ಜನಿಸಿ 1938 ರಲ್ಲಿ ನಾಜಿ ದಬ್ಬಾಳಿಕೆಯಿಂದ ಪಲಾಯನ ಮಾಡುವ ಯಹೂದಿಗಳ ಅಲೆಯ ನಡುವೆ ವಲಸೆ ಬಂದ ಕಿಸ್ಸಿಂಜರ್ 1943 ರಲ್ಲಿ ಯುಎಸ್ ಪ್ರಜೆಯಾದರು ಹಾರ್ವರ್ಡ್‌ನಲ್ಲಿ ಬೋಧನೆ ಮಾಡುವಾಗ, ಅವರು 1969 ರಿಂದ 1975 ರವರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮತ್ತು 1973 ರಿಂದ 1977 ರವರೆಗೆ ಅಧ್ಯಕ್ಷರಾದ ರಿಚರ್ಡ್ ನಿಕ್ಸನ್ ಮತ್ತು ಜೆರಾಲ್ಡ್ ಫೋರ್ಡ್ ಅವರ ಅಡಿಯಲ್ಲಿ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಮೊದಲು ಜಾನ್ ಎಫ್. ಕೆನಡಿ ಮತ್ತು ಲಿಂಡನ್ ಬಿ. ಜಾನ್ಸನ್ ಅವರ ಆಡಳಿತಗಳಿಗೆ ಸಲಹೆಗಾರರಾಗಿದ್ದರು. ತತ್ವರಹಿತ ರಾಜಕೀಯದ ಪ್ರತಿಪಾದಕ, ಕಿಸ್ಸಿಂಜರ್ ವಿದೇಶಾಂಗ ನೀತಿಯ ಮೇಲೆ ಹೆಚ್ಚು ಪ್ರಭಾವ ಬೀರಿದರು ಮತ್ತು ನಂತರದ ದಶಕಗಳಲ್ಲಿ, ಹಲವಾರು ಅಮೆರಿಕದ ಅಧ್ಯಕ್ಷರಿಗೆ ಸಲಹೆ ನೀಡಿದರು .  ಅನೇಕ  ಕಾರ್ಪೊರೇಟ್ ಮತ್ತು ಸರ್ಕಾರಿ ಸಲಹಾ ಮಂಡಳಿಗಳಲ್ಲಿ ಕುಳಿತದ್ದಲ್ಲದೆ ಇತಿಹಾಸ ಮತ್ತು ರಾಜತಾಂತ್ರಿಕತೆಯ ಬಗ್ಗೆ ಜನಪ್ರಿಯವಾದ  ಹಲವಾರು ಪುಸ್ತಕಗಳನ್ನು  ರಚಿಸಿದರು. "ಹೆನ್ರಿ ಕಿಸ್ಸಿಂಜರ್ ಅವರ ಪರಂಪರೆಯ ಒಂದು ದೊಡ್ಡ ಭಾಗವು ಅಮೇರಿಕನ್ ವಿದೇಶಾಂಗ ನೀತಿ ರಚನೆಯ ಭ್ರಷ್ಟಾಚಾರವಾಗಿದೆ - ವಿದೇಶಾಂಗ ನೀತಿ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳನ್ನು ಜೋಡಿಸಿ ರೂಪಿಸುವುದು."

ಆಗ್ನೇಯ ಏಷ್ಯಾದಲ್ಲಿ ಯುಎಸ್ ಯುದ್ಧಗಳನ್ನು ವಿಸ್ತರಿಸುವುದರಲ್ಲಿರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ, ಕಿಸ್ಸಿಂಜರ್ ಪಾತ್ರ ಪ್ರಮುಖವಾಗಿತ್ತು.  ಈ ಯುಧ್ಧಗಳಲ್ಲಿ  ಹತ್ತಾರು ಸಾವಿರ ಅಮೆರಿಕನ್ ಸೈನಿಕರು,   ಅದಕ್ಕೂ ಹೆಚ್ಚಾಗಿ ನೂರಾರು ಸಾವಿರ ಕಾಂಬೋಡಿಯ, ಲಾವೋಸ್  ಮತ್ತು ವಿಯೆಟ್ನಾ೦ ಜನರು  ಸಾವನ್ನಪಿದರು . 

1973 ರಲ್ಲಿ, ನಾರ್ವೇಜಿಯನ್ ನೊಬೆಲ್ ಸಮಿತಿಯು ಕಿಸ್ಸಿಂಜರ್ ಮತ್ತು ಅವರ ಉತ್ತರ ವಿಯೆಟ್ನಾಂ ಸಹವರ್ತಿ ಲೆ ಡಕ್ ಥೋ ಅವರಿಗೆ  "1973 ರಲ್ಲಿ ವಿಯೆಟ್ನಾಂನಲ್ಲಿ ಕದನ ವಿರಾಮದ ಬಗ್ಗೆ ಜಂಟಿಯಾಗಿ ಮಾತುಕತೆ ನಡೆಸಿದ್ದಕ್ಕಾಗಿ" ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿತು. "ಇನ್ನೊಂದು ಹೋಲಿಸಬಹುದಾದ ಗೌರವವಿಲ್ಲ,”  ಎ೦ದು ಕೊಚ್ಚಿಕೊ೦ಡರು ಕಿಸ್ಸಿಂಜರ್. ವಾಸ್ತವವಾಗಿ  ಈ ಯುಧ್ಧವನ್ನು  ಅವರೇ ಪ್ರೋತ್ಸಾಹಿಸಿ ಮತ್ತು ವಿಸ್ತರಿಸಿದ್ದರು.  ಪ್ರಶಸ್ತಿ ಗಳಿಸಿದ ಈ ಒಪ್ಪಂದವು ಆ ಸಂಘರ್ಷವನ್ನು ನಿಲ್ಲಿಸಲು ವಿಫಲವಾಗಿದೆ ಮಾತ್ರವಲ್ಲದೆ ಎಲ್ಲಾ ಪಕ್ಷಗಳಿಂದ ತಕ್ಷಣವೇ ಉಲ್ಲಂಘಿಸಲ್ಪಟ್ಟಿದೆ. ನೊಬೆಲ್ ಇತಿಹಾಸದಲ್ಲಿಇದೊ೦ದು ಅತ್ಯಂತ ವಿವಾದಾತ್ಮಕ ಪ್ರಶಸ್ತಿ.  ಒಪ್ಪಂದದ ಕಾರಣದಿಂದಾಗಿ ಯುದ್ಧವು ಕೊನೆಗೊಳ್ಳುವ ಸಾಧ್ಯತೆಯಿಲ್ಲ ಎಂಬ ತಿಳುವಳಿಕೆಯ ಹೊರತಾಗಿಯೂ ಇದನ್ನು ನೀಡಲಾಯಿತು.

ಥೋ ಪ್ರಶಸ್ತಿಯನ್ನು ನಿರಾಕರಿಸಿದರು. ಯುಎಸ್ ಒಪ್ಪಂದವನ್ನು ಉಲ್ಲಂಘಿಸಿದೆ ಮತ್ತು ಅದರ ದಕ್ಷಿಣ ವಿಯೆಟ್ನಾಂ ಮಿತ್ರರಾಷ್ಟ್ರಗಳಿಗೆ ಅದೇ ರೀತಿ ಮಾಡಲು ಸಹಾಯ ಮಾಡಿದೆ ಮತ್ತು ಪ್ರೋತ್ಸಾಹಿಸಿದೆ ಎಂದು ಅವರು ಹೇಳಿದರು, 



1975 ರಲ್ಲಿ ಸೈಗಾನ್‌ನಲ್ಲಿ ಯುಎಸ್ ಬೆಂಬಲಿತ ಸರ್ಕಾರ ಉರುಳಿಸಿದ ಅದೇ ವರ್ಷ, ನಿಕ್ಸನ್ ಮತ್ತು ಕಿಸ್ಸಿಂಜರ್ ಅವರ ಯುದ್ಧವನ್ನು ಸಣ್ಣ, ತಟಸ್ಥ ರಾಷ್ಟ್ರವಾದ ಕಾಂಬೋಡಿಯಾಕ್ಕೆ ವಿಸ್ತರಿಸಿದ ಕಾರಣ, ಅಲ್ಲಿನ ಅಮೇರಿಕನ್ ಬೆಂಬಲಿತ ಮಿಲಿಟರಿ ಆಡಳಿತವು ನರಹಂತಕ ಖಮೇರ್ ರೂಜ್‌ನ ವಶವಾಯಿತು, ಅವರ ಅತಿಯಾದ ಚಿತ್ರಹಿಂಸೆ ಮತ್ತು ಕೊಲೆಯ ಅಭಿಯಾನವು ನಂತರ ೨೦ ಲಕ್ಷ ಜನರನ್ನು (ಆ ರಾಷ್ಟ್ರದ ಜನಸಂಖ್ಯೆಯ ಸರಿಸುಮಾರು 20 ಪ್ರತಿಶವನ್ನು) ಕೊಂದಿತು. ಕಿಸ್ಸಿಂಜರ್ ತಕ್ಷಣವೇ ಕೊಲೆಗಡುಕರೊ೦ದಿಗೆ ಮೈತ್ರಿಗೆ ಪ್ರಯತ್ನಿಸಿದರು. "ನಾವು ಅವರೊಂದಿಗೆ ಸ್ನೇಹಿತರಾಗುತ್ತೇವೆ ಎಂದು ನೀವು ಕಾಂಬೋಡಿಯನ್ನರಿಗೆ ಹೇಳಬೇಕು. ಅವರು ಕೊಲೆಗಡುಕರು, ಆದರೆ ನಾವು ಅದನ್ನು ನಮ್ಮ ದಾರಿಯನ್ನು ಬಾಧಿಸಲು  ಬಿಡುವುದಿಲ್ಲ. ಅವರೊಂದಿಗೆ ಸಂಬಂಧವನ್ನು ಸುಧಾರಿಸಲು ನಾವು ಸಿದ್ಧರಿದ್ದೇವೆ,” ಎಂದು ಅವರು ಥೈಲ್ಯಾಂಡ್ ವಿದೇಶಾಂಗ ಸಚಿವರಿಗೆ ತಿಳಿಸಿದರು.

ರಾಜ್ಯ ಕಾರ್ಯದರ್ಶಿಯಾಗಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ, ಕಿಸ್ಸಿಂಜರ್ ಹಿಂದಿನ ಸೋವಿಯತ್ ಒಕ್ಕೂಟದೊಂದಿಗಿನ ಮತ್ತು ಚೀನಾ ದೇಶದೊ೦ದಿಗೆ ಸ೦ಬ೦ಧ ಬೆಳೆಸಿದರು. ಕಿಸ್ಸಿಂಜರ್   ಪಾಕಿಸ್ತಾನ ಮತ್ತು ಇಂಡೋನೇಷ್ಯಾದಲ್ಲಿ ನರಹಂತಕ ಮಿಲಿಟರಿಗಳನ್ನು ಬೆಂಬಲಿಸಿದರು.. CIA ಅಂದಾಜಿನ ಪ್ರಕಾರ ಪಾಕಿಸ್ತಾನಿನಲ್ಲಿ ನೂರಾರು ಸಾವಿರ ನಾಗರಿಕರನ್ನು ಕೊಲ್ಲಲಾಯಿತು; ನಂತರದಲ್ಲಿ, ಫೋರ್ಡ್ ಮತ್ತು ಕಿಸ್ಸಿಂಜರ್ ಇಂಡೋನೇಷ್ಯಾದ ಅಧ್ಯಕ್ಷ ಸುಹಾರ್ತೊ ಇವರಿಗೆ  ಪೂರ್ವ ಟಿಮೋರ್ ಆಕ್ರಮಣಕ್ಕೆ ಚಾಲನೆ ನೀಡಿದರು. ಇದರ ಫಲ 200,000 ಸಾವುಗಳು - ಸುಮಾರು ಈಸ್ಟ್ ತಿಮೋರಿನ ಇಡೀ ಜನಸಂಖ್ಯೆಯ ಕಾಲು ಭಾಗ.


ಲ್ಯಾಟಿನ್ ಅಮೆರಿಕಾದಲ್ಲಿ, ನಿಕ್ಸನ್ ಮತ್ತು ಕಿಸ್ಸಿಂಜರ್ ಚಿಲಿಯ ಸಮಾಜವಾದಿ ಅಧ್ಯಕ್ಷ ಸಾಲ್ವಡಾರ್ ಅಯೆ೦ಡೆ ಅವರ ಪ್ರಜಾಪ್ರಭುತ್ವದ ಚುನಾವಣೆಯನ್ನು ರದ್ದುಗೊಳಿಸಲು ಸಂಚು ರೂಪಿಸಿದರು. "ಅಯೆ೦ಡೆಯನ್ನು ಉರುಳಿಸುವಲ್ಲಿ ನೀವು ಪಶ್ಚಿಮ ದೇಶಗಳಿಗೆ  ಉತ್ತಮ ಸೇವೆಯನ್ನು ಮಾಡಿದ್ದೀರ,”  ಇದು ನಂತರ ಸಾವಿರಾರು ಚಿಲಿಯನ್ನು ಕೊಲ್ಲುವ ಮಿಲಿಟರಿ ಆಡಳಿತದ ನಾಯಕ ಜನರಲ್ ಆಗಸ್ಟೊ ಪಿನೋಚೆ, ಅವರಿಗೆ ಕಿಸ್ಸಿಂಜರ್ ಹೇಳಿದ್ದು. 


ಆರ್ಜೆಂಟೀನಾದಲ್ಲಿ, ಕಿಸ್ಸಿಂಜರ್ ಮತ್ತೊಂದು ಅವಕಾಶವನ್ನು  ನೀಡಿದರು – ಈ ಬಾರಿ ಅಧ್ಯಕ್ಷ ಇಸಾಬೆಲ್ ಪೆರೊನ್ ಅವರನ್ನು ಪದಚ್ಯುತಗೊಳಿಸಿದ ಮಿಲಿಟರಿ ಆಡಳಿತದಿಂದ ಚಿತ್ರಹಿಂಸೆ, ಬಲವಂತದ ಕಣ್ಮರೆಗಳು ಮತ್ತು ಕೊಲೆಗಳ ಭಯೋತ್ಪಾದಕ ಅಭಿಯಾನಕ್ಕೆ. ಜೂನ್ 1976 ರ ಸಭೆಯ ಸಮಯದಲ್ಲಿ, ಕಿಸ್ಸಿಂಜರ್  ಆಳುವ ಸೈನಿಕ ಗು೦ಪಿನ  ವಿದೇಶಾಂಗ ಮಂತ್ರಿ ಸೀಸರ್ ಆಗಸ್ಟೊ ಗುಝೆಟ್ಟಿಗೆ ಹೇಳಿದರು: "ಮಾಡಬೇಕಾದ ಕೆಲಸಗಳಿದ್ದರೆ, ನೀವು ಅವುಗಳನ್ನು ತ್ವರಿತವಾಗಿ ಮಾಡಬೇಕು." ನಂತರದ 'ಕೊಳಚೆ ಯುಧ್ಧ'  ಎಂದು ಕರೆಯಲ್ಪಡುವ ಹಿ೦ಸಾ ಕೃತ್ಯಗಳಲ್ಲಿ ಅಂದಾಜು 30,000 ಅರ್ಜೆಂಟೀನಾದ ನಾಗರಿಕರ ಪ್ರಾಣವನ್ನು ಬಲಿತೆಗೆದುಕೊಳ್ಳಲಾಯಿತು.

ಕಿಸ್ಸಿಂಜರ್ ಅವರ ರಾಜತಾಂತ್ರಿಕತೆಯು ಅಂಗೋಲಾದಲ್ಲಿ ಯುದ್ಧವನ್ನು ಮತ್ತುದಕ್ಷಿಣ ಆಫ್ರಿಕಾದಲ್ಲಿ ದೀರ್ಘಕಾಲದ ವರ್ಣಭೇದ ನೀತಿಯನ್ನು ಹುಟ್ಟುಹಾಕಿತು . ಮಧ್ಯಪ್ರಾಚ್ಯದಲ್ಲಿ, ಅವರು ಕುರ್ದಿಗಳನ್ನು ಮಾರಾಟ ಮಾಡಿದರು ಮತ್ತು, "ಆ ಪ್ರದೇಶವನ್ನು ಗೊಂದಲದಲ್ಲಿ ಬಿಟ್ಟರು, ಮಾನವೀಯತೆಯನ್ನು ಬಾಧಿಸುತ್ತಿರುವ ಬಿಕ್ಕಟ್ಟುಗಳಿಗೆ ವೇದಿಕೆಯನ್ನು ಸ್ಥಾಪಿಸಿದರು."

ಕಚ್ಚಾ ಮಹತ್ವಾಕಾಂಕ್ಷೆ, ಮಾಧ್ಯಮದ ಕುಶಲತೆ ಮತ್ತು ಸತ್ಯವನ್ನು ಮರೆಮಾಚುವ ಮತ್ತು ಹಗರಣವನ್ನು ತಪ್ಪಿಸುವ ವಿಲಕ್ಷಣ ಸಾಮರ್ಥ್ಯದ ಸಂಯೋಜನೆಯ ಮೂಲಕ, ಕಿಸ್ಸಿಂಜರ್ ಕಾಲೇಜು ಪ್ರಾಧ್ಯಾಪಕ ಮತ್ತು ಸರ್ಕಾರಿ ಅಧಿಕಾರಿ ಮಾತ್ರವಾಗಿ ಉಳಿಯದೆ  20 ನೇ ಶತಮಾನದ ಅತ್ಯಂತ ಪ್ರಸಿದ್ಧ ಅಮೇರಿಕನ್ ರಾಜತಾಂತ್ರಿಕ ಮತ್ತು ನಿಜವಾಗಿ ವಿಶ್ವ ಪ್ರಸಿಧ್ಧ ವ್ಯಕ್ತಿಯಾಗಿ ತನ್ನನ್ನು ಪರಿವರ್ತಿಸಿಕೊಂಡರು ಎಂದು ಪ್ರಶಂಸಿಸಲಾಗಿದೆ. "ಈ ಗಮನಾರ್ಹ ವ್ಯಕ್ತಿಯ ಸಾಮರ್ಥ್ಯವನ್ನು ಮೀರಿದ್ದು ಯಾವುದೂ ಇಲ್ಲ ಎಂದು ನಮಗೆ ಅರ್ಧ ಮನವರಿಕೆಯಾಗಿದೆ" ಎಂದು ಎಬಿಸಿ ನ್ಯೂಸ್‌ನ ಟೆಡ್ ಕೊಪ್ಪೆಲ್ 1974 ರ ಸಾಕ್ಷ್ಯಚಿತ್ರದಲ್ಲಿ ಕಿಸ್ಸಿಂಜರ್ ಅನ್ನು "ಅಮೆರಿಕದಲ್ಲಿ ಅತ್ಯಂತ ಮೆಚ್ಚುಗೆ ಪಡೆದ ವ್ಯಕ್ತಿ" ಎಂದು ವಿವರಿಸಿದರು. ಆದರೆ ಲೇಖಕ ಕ್ಯಾರೊಲಿನ್ ಐಸೆನ್‌ಬರ್ಗ್ ಪ್ರಕಾರ, ಕಿಸ್ಸಿಂಜರ್‌ನ ವ್ಯಕ್ತಿತ್ವಕ್ಕೆ ಮತ್ತೊಂದು ಮುಖವಿದೆ. "ಅವರು ಗೊಂದಲದ ವ್ಯಕ್ತಿತ್ವವನ್ನು ಹೊಂದಿದ್ದರು ಮತ್ತು ನಂಬಲಾಗದಷ್ಟು ಅಪಕ್ವ ಹದಿಹರೆಯದವರಾಗಿದ್ದರು. ತಾನು  ಅಹಂಕಾರಿ ಎಂದು ಒಪ್ಪಿಕೊಂಡರು, ಆದರೆ ಆ ಅಹ೦ಕಾರಕ್ಕೆ  ಮಿತಿಯೇ ಇರಲಿಲ್ಲ . ಅವರು ಅನೇಕ ವಿಷಯಗಳಲ್ಲಿ, 14 ನೇ ವಯಸ್ಸಿನ ಬಾಲಕನ ಮನೋಗತಿಗೆ  ಕೊನೆಯವರೆಗೂ ಅಂಟಿಕೊಂಡಿದ್ದರು. ಅವರ ಅವಕಾಶವಾದಕ್ಕೆ  ಮಿತಿಯಿರಲಿಲ್ಲ.  ವೈಯಕ್ತಿಕವಾಗಿ ಸದಾ ಪ್ರಸಿಧ್ಧ ವ್ಯಕ್ತಿಯಾಗಿರುವದೇ ಕೊನೆಯವರೆಗೂ ಅವರ  ಅತಿ ದೈತ್ಯ ಮಹತ್ವಾಕಾಂಕ್ಷೆಯಾಗಿತ್ತು."


ಕಿಸ್ಸಿಂಜರ್‌ಗೆ 1977 ರಲ್ಲಿ ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಮ್ ನೀಡಲಾಯಿತು - ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ .

ತಮ್ಮ"ದಿ ಟ್ರಯಲ್ ಆಫ್ ಹೆನ್ರಿ ಕಿಸ್ಸಿಂಜರ್,"  ಶೀರ್ಷಿಕೆಯ ದೀರ್ಘ ಲೇಖನದಲ್ಲಿ ಪ್ರಸಿಧ್ಧ ಬರಹಗಾರ ಕ್ರಿಸ್ಟೋಫರ್ ಹಿಚನ್ಸ್ ಅರ್ಜೆಂಟೀನಾದಿಂದ ತೊಡಗಿ ಬಾಂಗ್ಲಾದೇಶ, ಚಿಲಿ ಮತ್ತು ಪೂರ್ವ ಟಿಮೋರ್‌ನಿಂದ ಕಾಂಬೋಡಿಯಾ, ಲಾವೋಸ್, ಉರುಗ್ವೆ ಮತ್ತು ವಿಯೆಟ್ನಾಂ ದೇಶಗಳಲ್ಲಿ ಕೊಲೆ, ಅಪಹರಣ ಮತ್ತು ಚಿತ್ರಹಿಂಸೆ ಸೇರಿದಂತೆ ಯುದ್ಧಾಪರಾಧಗಳಿಗಾಗಿ, ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ, ಮತ್ತು ಸಾಮಾನ್ಯ ಅಥವಾ ಸಾಂಪ್ರದಾಯಿಕ ಅಥವಾ ಅಂತರಾಷ್ಟ್ರೀಯ ಕಾನೂನಿನ ವಿರುದ್ಧದ ಅಪರಾಧಗಳಿಗಾಗಿ, ಹೆನ್ರಿ ಕಿಸ್ಸಿಂಜರ್ ವಿರುದ್ಧ ಕಾನೂನು ಕ್ರಮ ಮತ್ತು ವಿಚಾರಣೆಗೆ ಕರೆ ನೀಡಿದರು.

ಆದರೆ,

"ಪ್ರಪಂಚದ ಹೆಚ್ಚಿನವರು ಕಿಸ್ಸಿಂಜರ್ ಅವರನ್ನು ಯುದ್ಧ ಅಪರಾಧಿ ಎಂದು ಪರಿಗಣಿಸಿದ್ದಾರೆ, ಆದರೆ ಅಮೆರಿಕಾದ ರಾಜ್ಯ ಕಾರ್ಯದರ್ಶಿಯ ಮೇಲೆ ಕೈಕೋಳ ಹಾಕಲು ಯಾರು ಧೈರ್ಯ ಮಾಡುತ್ತಾರೆ?" ಪಿನೋಚೆ, ಚಾಡ ದೇಶದ  ಸರ್ವಾಧಿಕಾರಿ ಹಿಸ್ಸೆನ್ ಹಬ್ರೆ ಮತ್ತು ಇತರರ ವಿರುದ್ಧ ಐತಿಹಾಸಿಕ ಕಾನೂನು ಪ್ರಕರಣಗಳನ್ನು ತಂದ ಕಾನೂನು ತಜ್ಞ ಬ್ರಾಡಿ ಕೇಳಿದರು. "ಕಿಸ್ಸಿಂಜರ್ ಅವರ ಯಾವುದೇ ಆಪಾದಿತ ಅಪರಾಧಗಳ ಬಗ್ಗೆ ಯಾವುದೇ ನ್ಯಾಯಾಲಯದಿಂದ ಒಮ್ಮೆಯೂ ಪ್ರಶ್ನಿಸಲಾಗಿಲ್ಲ, ಯಾವುದೇ ವಿಚಾರಣೆಗೆ ಒಳಪಡಿಸಲಾಗಲೂ ಇಲ್ಲ"



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು