‘ಇದು ಭಾರತದ ಅತ್ಯಂತ ಒತ್ತಡದ ನಗರ’: ಕೋಚಿಂಗ್ ರಾಜಧಾನಿ ಕೋಟಾದ ಕರಾಳ ಮುಖ

ಆತ್ಮಹತ್ಯೆಗಳು ಪ್ರವೇಶ ಪರೀಕ್ಷೆಗಳಿಗೆ ನೂಕುನುಗ್ಗಲು ಮತ್ತು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಹೊರೆ ಹೇರುವ ಕಠೋರ ಸಂಸ್ಕೃತಿಯ ಮೇಲೆ ಗಮನ ಸೆಳೆಯುತ್ತವೆ

ಹನ್ನಾ ಎಲ್ಲಿಸ್-ಪೀಟರ್ಸನ್ ಮತ್ತುಶೇಖ್ ಅಜೀಜುರ್ ರೆಹಮಾನ್ ಕೋಟಾದಲ್ಲಿ

ಸೋಮ 9 ಅಕ್ಟೋಬರ್ 2023 


ಲ೦ಡನ್ನಿನ ‘ದಿ ಗಾರ್ಡಿಯನ್’ ದಿನಪತ್ರಿಕೆ.




 ಪ್ರತಿ ವರ್ಷ ಕೋಟಾಕ್ಕೆ ಬ೦ದು ಸೇರುವ 300,000 ವಿದ್ಯಾರ್ಥಿಗಳ ಮಟ್ಟಿಗೆ, ಭಾರತದ ರಾಜಸ್ಥಾನದ ಈ ಬಿಸಿ, ಧೂಳಿನ ನಗರವು ಅಧ್ಯಯನಸಾಧನೆಯ ಪ್ರದರ್ಶನದ  ‘ಪ್ರೆಷರ್  ಕುಕ್ಕರ್ ’ ಆಗಿದೆ. ಅಲ್ಲಿ ದಿನಕ್ಕೆ 18 ಗಂಟೆಗಳ ಅಧ್ಯಯನವು ಸಾಮಾನ್ಯವಾಗಿದೆ . ಇಲ್ಲಿ   ಪರೀಕ್ಷೆಯ ಅಂಕಗಳು ಮಾತ್ರ ಗಣನಾರ್ಹ . ಕೆಲವರು ಭಾರತದ ಮುಂದಿನ ಪೀಳಿಗೆಯ ವೈದ್ಯರು ಮತ್ತು ಇಂಜಿನಿಯರ್‌ಗಳಾಗುತ್ತಾರೆ; ಆದರೆ ಇತರರಿಗೆ, ದುರದೃಷ್ಟದಿಂದ ಈ  ಅನುಭವ ಅವರನ್ನು ಮುರಿಯುತ್ತದೆ.

ಕೋಟಾ ಇತ್ತೀಚಿನ ದಶಕಗಳಲ್ಲಿ ಭಾರತದ "ಕೋಚಿಂಗ್ ಕ್ಯಾಪಿಟಲ್" ಎಂದು ಹೆಸರುವಾಸಿಯಾಗಿದೆ, ಅಲ್ಲಿ ಸುಮಾರು ಒಂದು ಡಜನ್ ತಜ್ಞ ಸಂಸ್ಥೆಗಳು ವೈದ್ಯಕೀಯ  ಶಾಸ್ತ್ರ  ಅಥವಾ ಇಂಜಿನಿಯರಿಂಗ್ ಕಾಲೇಜಿಗೆ  ಪ್ರವೇಶಕ್ಕೆ ಅತ್ಯ೦ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ತೀವ್ರವಾದ ಅಧ್ಯಯನ ನೀಡುತ್ತಿವೆ. 1.4 ಶತಕೋಟಿ ಜನರಿರುವ ಭಾರತದ ಜನಸಂಖ್ಯೆಯ 65%  ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.    ದೇಶದ ಇತಿಹಾಸದಲ್ಲಿ ಯಾವುದೇ ಸಮಯಕ್ಕಿಂತ ಹೆಚ್ಚಿನ ಸ೦ಖ್ಯೆಯಲ್ಲಿ ಯುವಜನರು ಶಿಕ್ಷಣವನ್ನು ಪಡೆಯುತ್ತಿದ್ದಾರೆ.  ವಿದ್ಯಾಭ್ಯಾಸದ ಬೇಡಿಕೆ ಮತ್ತು ಉತ್ತಮ ಕಾಲೇಜುಗಳನ್ನು ಸೇರಲು  ಸ್ಪರ್ಧೆಯು ಇದಕ್ಕಿ೦ತ ಎ೦ದೂ  ಹೆಚ್ಚಾಗಿದ್ದಿಲ್ಲ. 

ಈ ವರ್ಷ, 2೦ ಲಕ್ಷಕ್ಕಿ೦ತಲೂ  ಹೆಚ್ಚು ಜನರು ವೈದ್ಯಕೀಯ ಕಾಲೇಜುಗಳ  ಕೇವಲ 140,000 ಸ್ಥಾನಗಳಿಗೆ ‘ನೀಟ್’ ಪ್ರವೇಶ ಪರೀಕ್ಷೆಯ ಮೂಲಕ ಸ್ಪರ್ಧಿಸಿದರೆ,  1 ೦ ಲಕ್ಷಕ್ಕಿ೦ತಲೂ ಹೆಚ್ಚು ವಿದ್ಯಾರ್ಥಿಗಳು  IIT ಎಂದು ಕರೆಯಲ್ಪಡುವ ಉನ್ನತ ತಂತ್ರಜ್ಞಾನ ಸಂಸ್ಥೆಗಳಲ್ಲಿ 10,000 ಅಪೇಕ್ಷಿತ ಸ್ಥಳಗಳಲ್ಲಿ ಒಂದನ್ನು ಪಡೆಯುವ ಭರವಸೆಯಲ್ಲಿ ಎಂಜಿನಿಯರಿಂಗ್ ಪರೀಕ್ಷೆಗೆ ಕುಳಿತರು.

Kota is a major coaching hub of the country for competitive examination preparations.


ಕೋಟಾ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಪ್ರಮುಖ ಕೋಚಿಂಗ್ ಕೇಂದ್ರವಾಗಿದೆ


ನಗರದಲ್ಲಿ ಕಲಿಯುತ್ತಿರುವ  ಹೆಚ್ಚಾಗಿ 17 ರಿಂದ 20 ವರ್ಷದೊಳಗಿನ, ನೂರಾರು ಸಾವಿರ ವಿದ್ಯಾರ್ಥಿಗಳಿಗೆ   ಪಠ್ಯಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವದು  ಎಂದರೆ ಕಣ್ಣಲ್ಲಿ ನೀರು ತುಂಬಿಸುವ ಪರಿಶ್ರಮ.  ಅವರು ವಾರದಲ್ಲಿ ಏಳು ದಿನಗಳು ಕೆಲಸ ಮಾಡುತ್ತಾರೆ.  ಸುಮಾರು 300 ವಿದ್ಯಾರ್ಥಿಗಳಿರುವ ತರಗತಿಗಳು  ಆರು ಗಂಟೆಗಳು ನಡೆಯುತವೆ. ಇದಕ್ಕೆ ತಯಾರಿಕೆಯಾಗಿ  ಹಾಜರಾಗುವ ಮೊದಲು  ಬೆಳಿಗ್ಗೆ 4 ಗಂಟೆಗೆ ಅಧ್ಯಯನ ಮಾಡಲು ಪ್ರಾರಂಭಿಸುವುದಾಗಿ  ಹಲವರು ಹೇಳಿದರು. ಅವರು ಪ್ರತಿ ಎರಡು ವಾರಗಳಿಗೊಮ್ಮೆ ಪರೀಕ್ಷೆಯನ್ನು ಹೊಂದಿರುತ್ತಾರೆ ಮತ್ತು ಅವರವರ ಅಂಕಗಳ ಪ್ರಕಾರ ಎಲ್ಲರ ಸ್ಥಾನವನ್ನೂ ಬಹಿರ೦ಗ ಪಡಿಸಲಾಗುತ್ತದೆ.   ."ನನಗೆ ಸ್ನೇಹಿತರಿಗಾಗಿ ಅಥವಾ ಇತರರೊ೦ದಿಗೆ ಬೆರೆಯಲು ಸಮಯವಿಲ್ಲ. ನನ್ನ ಪುಸ್ತಕಗಳು ನನ್ನ ಸ್ನೇಹಿತರು” ಎಂದು ವೈದ್ಯಕೀಯ ಕಾಲೇಜು ಪರೀಕ್ಷೆಗೆ ಓದುತ್ತಿರುವ  ೨೨ ವರ್ಷದ ರಾಣಿ ಕುಮಾರಿ ಹೇಳಿದರು.


ಕೋಟಾದ ಅತಿದೊಡ್ಡ ಕೋಚಿಂಗ್ ಶಾಲೆಯಾದ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ನಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ 19 ವರ್ಷದ ಶ್ರೀ ಕುಮಾರ್ ವರ್ಮಾ, "ಇದು ಇಡೀ ಭಾರತದಲ್ಲಿ ಹೆಚ್ಚು ಒತ್ತಡದ ನಗರವಾಗಿದೆ" ಎಂದು ಹೇಳಿದರು. “ನೀವು ಎಲ್ಲಿ ನೋಡಿದರೂ, ಈ ದೇಶದ ಯುವಕರ ಹತಾಶೆಯನ್ನು ನೀವು ನೋಡಬಹುದು. ಎಷ್ಟೋ ಮಂದಿ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂಬ ಕನಸನ್ನು ಹೊಂದಿರುತ್ತಾರೆ ಮತ್ತು ಅಲ್ಲಿಗೆ ಬರಲು ಅವರು ತುಂಬಾ ಕಷ್ಟಪಡುತ್ತಾರೆ. ಕೋಟಾದಲ್ಲಿಅಭ್ಯಸಿಸುವದು   ನಿಮಗೆ ಯಶಸ್ಸನ್ನು ತರುತ್ತದೆ ಅಥವಾ ನಿಮ್ಮನ್ನು ಸಂಪೂರ್ಣವಾಗಿ ಒಡೆಯುತ್ತದೆ; ಇಲ್ಲಿ ಒ೦ದೇ ಸ೦ಪೂರ್ಣ ಯಶಸ್ಸು, ಇಲ್ಲವೇ ಸ೦ಪೂರ್ಣ ನಷ್ಟ. 

ನಗರದ ರಾಧಾ ಕೃಷ್ಣ ದೇವಸ್ಥಾನದಲ್ಲಿ ಸಾವಿರಾರು ಪ್ರಾರ್ಥನೆಗಳನ್ನು ಗೋಡೆಗಳ ಮೇಲೆ ಉನ್ಮಾದದಿಂದ ಬರೆದಿರುವ ರೀತಿಯಲ್ಲಿ ಈ ಯಶಸ್ಸಿನ ಆಸೆ ಬೇರೆ ಎಲ್ಲಿಯೂ ಗೋಚರಿಸುವುದಿಲ್ಲ. “ಆತ್ಮೀಯ ದೇವರೇ ನನಗೆ ಯಶಸ್ಸನ್ನು ನೀಡು”, “ಕೃಷ್ಣಾ ಜೀ, ದಯವಿಟ್ಟು ನನ್ನೊಂದಿಗೆ ಇರಿ, ದಯವಿಟ್ಟು ನನ್ನ ಹೆತ್ತವರನ್ನು ಸಂತೋಷವಾಗಿರಿಸಿಕೊಳ್ಳಿ ... ದಯವಿಟ್ಟು ನೀಟ್ 2024 ಅನ್ನು ಭೇದಿಸಲು ನನಗೆ ಸಹಾಯ ಮಾಡಿ” ಮತ್ತು “ದೇವಾ,  ನನಗೆ ತುಂಬಾ ಕಷ್ಟಪಟ್ಟು ಕೆಲಸ ಮಾಡುವುದು ಹೇಗೆ ಎಂದು ಕಲಿಸಿಕೊಡು” ಎಂಬ ಸಂದೇಶಗಳನ್ನು ವಿದ್ಯಾರ್ಥಿಗಳು ಬರೆದಿದ್ದಾರೆ. ದೇವಾಲಯದ ಅರ್ಚಕ ಪಂಡಿತ್ ರಾಧೆ ಶ್ಯಾಮ್ ಅವರು ಪ್ರತಿ ಎರಡು ವಾರಗಳಿಗೊಮ್ಮೆ ಗೋಡೆಗಳಿಗೆ ಸುಣ್ಣ ಬಳಿಯಬೇಕಾಗುತ್ತದೆ  ಎಂದು ಹೇಳಿದರು.

ಕೋಟಾ ನಗರದ ಪ್ರಸಿಧ್ಧಿ  ಸರ್ವವ್ಯಾಪಿಯಾಗಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ "ಶಿಕ್ಷಣ ಕಾಶಿ’ ಎಂದು ಘೋಷಿಸಿದ್ದಾರೆ.  ಇಲ್ಲಿನ  ಕೋಚಿಂಗ್ ಉದ್ಯಮವು ಈಗ ಅಂದಾಜು 120 ಸಾವಿರ ಕೋಟಿ ರೂಪಾಯಿಗಳ  ಮೌಲ್ಯದ್ದಾಗಿದೆ. ದೇಶದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ "ಟಾಪರ್ಸ್" ಅನ್ನು ಸೆಲೆಬ್ರಿಟಿಗಳಂತೆ - ಪ್ರಸಿಧ್ಧ ವ್ಯಕ್ತಿಗಳ೦ತೆ  -  ಪರಿಗಣಿಸಲಾಗುತ್ತದೆ, ಅವರ ಛಾಯಾಚಿತ್ರಗಳನ್ನು ವಿಶಾಲವಾದ ಜಾಹೀರಾತು ಫಲಕಗಳ ಮೇಲೆ ಅಂಟಿಸಲಾಗುತ್ತದೆ ಮತ್ತು ಅವರಿಗೆ ಅವರ ಕಾಲೇಜುಗಳು 100,000 ರೂಪಾಯಿಗಳ ನಗದು ಬಹುಮಾನಗಳನ್ನು ನೀಡುತ್ತವೆ.  ಇದು ಉನ್ನತ ಶ್ರೇಣಿಯಲ್ಲಿ ಪ್ರಾಬಲ್ಯ ಸಾಧಿಸಲು ತೀವ್ರ ಪೈಪೋಟಿ ನಡೆಸುತ್ತದೆ.

An advert for an exam coaching lab in Kota seen on a rickshaw cab in Delhi.

ಕೋಟಾದಲ್ಲಿ ಪರೀಕ್ಷಾ ಕೋಚಿಂಗ್ ಲ್ಯಾಬ್‌ನ ಜಾಹೀರಾತು ದೆಹಲಿಯ ರಿಕ್ಷಾ ಕ್ಯಾಬ್‌ನಲ್ಲಿ ಕಂಡುಬಂದಿದೆ. ಫೋಟೋ: ಮಿಂಟ್/ಹಿಂದೂಸ್ತಾನ್ ಟೈಮ್ಸ್/ಗೆಟ್ಟಿ ಇಮೇಜಸ್


ಇನ್ನೂ ಒಂದು ಅ೦ಧಕಾರದ ಆಯಾಮ  ಕೂಡ ಹೊರಹೊಮ್ಮಿದೆ, ಇದು ಕೋಟಾದಲ್ಲಿ ತೀವ್ರವಾದ ಪರೀಕ್ಷೆಯ ತರಬೇತಿಯ ಕಠೋರ ಸಂಸ್ಕೃತಿ ಮತ್ತು ವಿದ್ಯಾರ್ಥಿಗಳ ಮೇಲೆ ಹೇರಲಾಗುವ  ಶೈಕ್ಷಣಿಕ, ಕೌಟುಂಬಿಕ ಮತ್ತು ಸಾಮಾಜಿಕ  ಹೊರೆಗಳ ಮೇಲೆ ಬೆಳಕನ್ನು  ಚೆಲ್ಲಿದೆ.

ಈ ವರ್ಷ ಇಲ್ಲಿಯವರೆಗೆ, ನಗರದ ಕೋಚಿಂಗ್ ಶಾಲೆಗಳಲ್ಲಿ ಓದುತ್ತಿರುವ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದು ದಾಖಲೆಯಲ್ಲಿ ಅತಿ ಹೆಚ್ಚು. ಈ ಸಮಸ್ಯೆಯು ತುಂಬಾ ಕೆಟ್ಟದಾಗಿದೆ ಎಂದು ಪರಿಗಣಿಸಲಾಗಿದೆ, ಕೆಲವು ಸರ್ಕಾರಿ ಮಂತ್ರಿಗಳು ಕೋಚಿಂಗ್ ಶಾಲೆಗಳನ್ನು ನಿಷೇಧಿಸುವಂತೆ ಕರೆ ನೀಡಿದ್ದಾರೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಾಯಿತು ಮತ್ತು ಈ ತಿಂಗಳು ರಾಜಸ್ಥಾನ ರಾಜ್ಯ ಸರ್ಕಾರವು ಹೆಚ್ಚಿನ ಆತ್ಮಹತ್ಯೆ ಪ್ರಮಾಣವನ್ನು ತಡೆಯುವ ಪ್ರಯತ್ನದಲ್ಲಿ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿತು. ವಿದ್ಯಾರ್ಥಿಗಳು ನೇಣು ಬಿಗಿದುಕೊಳ್ಳಲು ಪದೇ ಪದೇ ಬಳಸುತ್ತಿದ್ದ ಸೀಲಿಂಗ್ ಫ್ಯಾನ್‌ಗಳನ್ನು ಕೊಠಡಿಗಳಿಂದ ತೆಗೆದುಹಾಕಲಾಗಿದೆ. ಯಾವುದೇ ಸಂಸ್ಥೆಗಳು ಅಥವಾ ಅವರ ಶಿಕ್ಷಕರು ಈ ವಿಷಯದಲ್ಲಿ ನಮ್ಮ  ಲೇಖಕರೊ೦ದಿಗೆ  ಮಾತನಾಡುವುದಿಲ್ಲ.

 ಟೀಕೆಗಳನ್ನು ಕೋಚಿಂಗ್ ಶಾಲೆಗಳ ವಿರುಧ್ಧ  ಗುರಿಪಡಿಸಲಾಗಿದೆಯಾದರೂ ನಗರದ ವಿದ್ಯಾರ್ಥಿಗಳು ಮತ್ತು ಮನೋವೈದ್ಯರು ಮನೆಯಲ್ಲಿ ಕುಟುಂಬಗಳಿಂದ ಹೆಚ್ಚಿನ ಒತ್ತಡ ಬರುತ್ತದೆ ಎಂದು ಹೇಳುತ್ತಾರೆ. ಕುಟುಂಬದಲ್ಲಿ ವೈದ್ಯರು ಅಥವಾ ಇಂಜಿನಿಯರ್ ಅನ್ನು ಹೊಂದಿರುವುದು ಭಾರತದಲ್ಲಿ ಬಹಳ ಹಿಂದಿನಿಂದಲೂ ಹೆಚ್ಚಿನ ಗೌರವವನ್ನು ಪಡೆದಿದೆ ಮತ್ತು ಅನೇಕ ಪೋಷಕರು ಇದನ್ನು ಸಾಧಿಸಲು  ಕೋಟಾವನ್ನು ಮಾರ್ಗವಾಗಿ ನೋಡುತ್ತಾರೆ.

"ನಾನು ನೋಡುವ ಹೆಚ್ಚಿನ ಮಾನಸಿಕ ಆರೋಗ್ಯ ಸಮಸ್ಯೆಗಳು ತಮ್ಮ ಮಕ್ಕಳಿಗೆ ಹೇಳುವ ವಿಷಕಾರಿ ಒತ್ತಡಕ್ಕೆ ಸಂಬಂಧಿಸಿವೆ ಎಂದು ನಾನು ಹೇಳುತ್ತೇನೆ, 'ನೀವು ಯಾವುದೇ ಕಷ್ಟ ಬ೦ದರೂ  ಗೆಲ್ಲಲೇ  ಬೇಕು'. ಯಶಸ್ಸನ್ನು ಸಾಮಾನ್ಯವಾಗಿ ಈ ಮಕ್ಕಳಿಗೆ ಜೀವನ ಅಥವಾ ಸಾವಿನ ಆಯ್ಕೆ ಇದ್ದ೦ತೆ ಪ್ರಸ್ತುತಪಡಿಸಲಾಗುತ್ತದೆ." ಎಂದು ಕೋಟಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮನೋವೈದ್ಯೆ ಡಾ.ನೀನಾ ವಿಜಯವರ್ಗಿಯ ಹೇಳಿದರು.

"ಅನೇಕ ಪೋಷಕರಿಗೆ ಇತರ ಯಾವುದೇ ಫಲಿತಾ೦ಶಕ್ಕೆ ಒಪ್ಪಿಗೆಯಿಲ್ಲ, ವೈಫಲ್ಯಕ್ಕೆ ಅವಕಾಶವಿಲ್ಲ, ಮತ್ತು ಈ ಕಾರಣದಿ೦ದಾಗಿ  ವಿದ್ಯಾರ್ಥಿಗಳು ತಮ್ಮ ಜೀವನ, ತಮ್ಮ ಭಾವನೆಗಳು, ತಮ್ಮ ಉದ್ವೇಗಗಳು, ಎಲ್ಲವನ್ನೂ ತಮ್ಮ ಅಂಕಗಳೊಂದಿಗೆ ಜೋಡಿಸುತ್ತಾರೆ."

ಸೆಪ್ಟೆಂಬರ್‌ನಲ್ಲಿ ವೈದ್ಯಕೀಯ ಕಾಲೇಜು ಪರೀಕ್ಷೆಗೆ ಓದುತ್ತಿದ್ದ ಜಾರ್ಖಂಡ್‌ನ 17 ವರ್ಷದ ಬಾಲಕಿ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಳು. ಪೋಲೀಸರ ಪ್ರಕಾರ, ಆಕೆಯ ಡೈರಿಯು ಈ ಪರಿಸ್ಥಿತಿಯಿ೦ದ ಬಿಡುಗಡೆಗೆ  ಮನವಿಗಳಿಂದ ತುಂಬಿತ್ತು. "ಹುಡುಗಿ ತನ್ನ ನೋಟ್‌ಬುಕ್‌ನಲ್ಲಿ ಆಗಾಗ್ಗೆ ಹೀಗೆ ಬರೆಯುವುದನ್ನು ನಾವು ಕಂಡೆವು”’  ,ಎಂದು ಪ್ರಕರಣದ ಅಧಿಕಾರಿಯೊಬ್ಬರು ಹೇಳಿದರು:

 'ನಾನು ಕೋಟಾವನ್ನು ತೊರೆದು ಮನೆಗೆ ಹಿಂತಿರುಗಿದ ನಂತರ, ನನ್ನ ತೊಂದರೆಗಳೇನೋ  ಕೊನೆಗೊಳ್ಳುತ್ತವೆ. ಆದರೆ ನಾನು ಹೋದರೆ ನನ್ನ ತಾಯಿ ದುಃಖ ಮತ್ತು ನಿರಾಶೆಯನ್ನು ಅನುಭವಿಸುತ್ತಾರೆ ಎಂದು ನನಗೆ ತಿಳಿದಿದೆ.’


ಈ ಬಾಲಿಕೆಯ  ತಂದೆ, ಅವಳು ಮನೆಗೆ ಬರಲು ಪದೇ ಪದೇ ಕೇಳುತ್ತಿದ್ದಳು ಎಂದು ಒಪ್ಪಿಕೊಂಡರು. "ಆದರೆ ಯಾವುದೇ ಪರಿಸ್ಥಿತಿಯಲ್ಲಿ ನನ್ನ ಹೆಂಡತಿ ಕೋಟಾ ಕೋಚಿಂಗ್ ಶಾಲೆಯಿಂದ ಹೊರಗುಳಿದು ಮನೆಗೆ ಮರಳಲು ಬಯಸಲಿಲ್ಲ" ಎಂದು ಅವರು ಹೇಳಿದರು. "ಕೋಟಾದಲ್ಲಿ ಆಕೆಯ ಶಿಕ್ಷಣಕ್ಕಾಗಿ ನಾವು ಸುಮಾರು 1೦ ಲಕ್ಷ  ರೂಪಾಯಿಗಳನ್ನು ಖರ್ಚು ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ನನ್ನ ಮಗಳಿಗೆ ಫೋನ್ ಮೂಲಕ ಹೇಳಿದರು."

ಅಲೆನ್‌ನಂತಹ ದೊಡ್ಡ ಕೋಚಿಂಗ್ ಶಾಲೆಯು ಅವರು ಕ್ಯಾಂಪಸ್‌ನಲ್ಲಿ 50 ಕ್ಕೂ ಹೆಚ್ಚು ಮನೋವೈದ್ಯರು ಮತ್ತು ಸಲಹೆಗಾರರನ್ನು  ಮತ್ತು 24-ಗಂಟೆಗಳ ವಿದ್ಯಾರ್ಥಿ ಸಹಾಯವಾಣಿಯನ್ನು ಒದಗಿಸಲಾಗಿದೆ ಎ೦ದು ಒತ್ತಿಹೇಳಿದರೆ, ಭಾರತದಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಳಂಕ ಮತ್ತು ತಪ್ಪು ಮಾಹಿತಿಯಿ೦ದಾಗಿ  ಖಿನ್ನತೆಯ ಚಿಹ್ನೆಗಳನ್ನು ಪೋಷಕರು ಆಗಾಗ್ಗೆ ಒಪ್ಪಿಕೊಳ್ಳುವದಿಲ್ಲ  ಎಂದು ವಿಜಯವರ್ಗಿಯಾ ಹೇಳಿದರು. 

ಡಾ. ವಿಜಯವರ್ಗಿಯ ಅವರ ಖಾಸಗಿ ಚಿಕಿತ್ಸಾಲಯಕ್ಕೆ ಭೇಟಿಕೊಟ್ಟ  ಕೆಲವು ವಿದ್ಯಾರ್ಥಿಗಳು ಸಾಮಾನ್ಯವಾಗಿ ತಲೆಗೆ ರುಮಾಲು  ಮತ್ತು ಕಪ್ಪು ಕನ್ನಡಕಗಳನ್ನು  ಧರಿಸಿ ತಮ್ಮ ಗುರುತನ್ನು ಮರೆಮಾಚಿಸಲು ಪ್ರಯತ್ನ ಮಾಡುತ್ತಿದ್ದರು.  ಮನೋವೈದ್ಯರನ್ನು ಭೇಟಿ ಮಾಡಿದ್ದಾರೆಂದು ತಿಳಿದಿದ್ದರೆ, ತಮ್ಮ  ವಿವಾಹದ ಭವಿಷ್ಯವನ್ನು ಹಾಳುಮಾಡುತ್ತದೆ ಎಂದು ಮಹಿಳೆಯರು ವಿಶೇಷವಾಗಿ ಭಯಪಡುತ್ತಾರೆ.

ಕೋಟಾ ಕೋಚಿಂಗ್ ಶಾಲೆಗಳು - ವರ್ಷಕ್ಕೆ 150,000 ರೂಪಾಯಿಗಳ ಶುಲ್ಕಗಳು ಮತ್ತು ವಸತಿ ಮತ್ತು ಆಹಾರಕ್ಕಾಗಿ ತಿಂಗಳಿಗೆ ಸುಮಾರು 30,000 ರೂಪಾಯಿಗಳ ಹೆಚ್ಚುವರಿ ಮಾಸಿಕ ವೆಚ್ಚಗಳು - ಮೇಲ್ಮಧ್ಯಮ ವರ್ಗದವರ ಕೈಗೆಟುವುದಾಗಿದ್ದ್ರೂ,  ಕೆಳ ಮಧ್ಯಮ ವರ್ಗದ ಮತ್ತು ಇನ್ನೂ ಆರ್ಥಿಕತೆಯಲ್ಲಿ ಕೆಳಗಿರುವವರು ಹೆಚ್ಚಿನ ಪ್ರಮಾಣದಲ್ಲಿ  ವೈಯಕ್ತಿಕ ತ್ಯಾಗಗಳನ್ನು ಮಾಡಿ  ಅವರ ಮಕ್ಕಳನ್ನು  ಕಳುಹಿಸುತ್ತಿದ್ದಾರೆ.


ದೊಡ್ಡ ಕೋಚಿಂಗ್ ಶಾಲೆಗಳು ತಮ್ಮ ಕಾರ್ಯಾಚರಣೆಯನ್ನು ಭಾರತದಾದ್ಯಂತ ನಗರಗಳಿಗೆ ವಿಸ್ತರಿಸಿವೆ ಮತ್ತು 11 ನೇ ವಯಸ್ಸಿನಲ್ಲಿಯೇ ಪರೀಕ್ಷೆಗಳಿಗೆ ಅವರನ್ನು ಸಿದ್ಧಪಡಿಸಲು ಸಹಾಯ ಮಾಡಲು ಪೋಷಕರು ತಮ್ಮ ಮಕ್ಕಳನ್ನು ತಮ್ಮ ಸಂಸ್ಥೆಗಳಿಗೆ ವರ್ಗಾಯಿಸಲು ಪ್ರೋತ್ಸಾಹಿಸಲು ಶಾಲೆಗಳಿಗೆ ಹೋಗುವ ಪ್ರತಿನಿಧಿಗಳನ್ನು ಹೊಂದಿವೆ.

Images from Kota, which is a major coaching hub of the country for competitive examination preparations.

ಕೋಟಾವನ್ನು ನರೇಂದ್ರ ಮೋದಿ ಅವರು ಭಾರತದ 'ಶಿಕ್ಷಣ ಕಾಶಿ’ ಎಂದು ಘೋಷಿಸಿದ್ದಾರೆ.


ಮಹಾರಾಷ್ಟ್ರದ ಹಿಂಗೋಲಿಯ ಬಡ ಗ್ರಾಮೀಣ ಗ್ರಾಮದ ರೈತ ಕೇದಾರ್ ಕೋರ್ಡೆ ಕಳೆದ ವರ್ಷ ತನ್ನ 14 ಮತ್ತು 17 ವರ್ಷದ ಇಬ್ಬರು ಗಂಡು ಮಕ್ಕಳನ್ನು ಅಲೆನ್‌ಗೆ ಕಳುಹಿಸುವ ಸಲುವಾಗಿ ತನ್ನ ಏಕೈಕ ಭೂಮಿಯನ್ನು ಮಾರಿ ತನ್ನ ಕುಟುಂಬವನ್ನು ಕೋಟಾಕ್ಕೆ ಸ್ಥಳಾಂತರಿಸಿದನು.

"ನನ್ನ ಮಕ್ಕಳು ನನ್ನ ವಿಶ್ವ, ನಾನು ಅವರಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣವನ್ನು ನೀಡಲು ಬಯಸುತ್ತೇನೆ, ಮತ್ತು ಇದರರ್ಥ ಕೋಟಾದಲ್ಲಿ ತರಬೇತಿ" ಎಂದು ಕೋರ್ಡೆ ಹೇಳಿದರು. "ನನ್ನ ಭೂಮಿಯನ್ನು ಮಾರಾಟ ಮಾಡಲು ನಾನು ತುಂಬಾ ದುಃಖಿತನಾಗಿದ್ದೇನೆ ಏಕೆಂದರೆ ಅದು ನನ್ನ ಕುಟುಂಬದ ಜೀವನೋಪಾಯದ ಏಕೈಕ ಮೂಲವಾಗಿದೆ.  ಆದರೆ ಇದು ನಾನು ಮಾಡಬೇಕಾದ ಆಯ್ಕೆಯಾಗಿ ಬ೦ದಿತು. ನನ್ನಂತಹ ಸಣ್ಣ ರೈತರಂತೆ ಈಗ ನನ್ನ ಮಕ್ಕಳು  ದುಃಖದ ಜೀವನ ಅನುಭವಿಸುವುದಿಲ್ಲ’.

ಅವರು ಹಾಸ್ಟೆಲ್ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಕೆಲಸವನ್ನು ಕಂಡುಕೊಂಡರು ಮತ್ತು ಅವರ ಹಿರಿಯ ಮಗ ವೈದ್ಯಕೀಯ ಕಾಲೇಜು ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ಅವರ ನಾಲ್ಕು ಸದಸ್ಯರ  ಕುಟುಂಬವು ಒಂದೇ ಕೋಣೆಯಲ್ಲಿ ವಾಸಿಸುತ್ತದೆ. ಆದರೂ ಕೋರ್ಡೆಯವರ ಸಂಬಳವು ವೆಚ್ಚವನ್ನು ಸರಿದೂಗಿಸಲು ಸಾಕಾಗುವುದಿಲ್ಲ, ಹಾಗಾಗಿ  ಅವರ ತಂದೆ ರಾಮದಾಸ್ ಹದಿಹರೆಯದವರ ಶಿಕ್ಷಣಕ್ಕೆ ಧನಸಹಾಯ ಮಾಡಲು ನಿಧಾನವಾಗಿ ತಮ್ಮ ಜಮೀನನ್ನು ಮಾರಾಟ ಮಾಡುತ್ತಿದ್ದಾರೆ.

"ನಾನು ಏಳನೇ ತರಗತಿಯಲ್ಲಿ ಶಾಲೆಯಿಂದ ಹೊರಗುಳಿದಿದ್ದೇನೆ,  ಆದ್ದರಿಂದ ನನ್ನ ಮೊಮ್ಮಗನ ವಿದ್ಯಾಭ್ಯಾಸಕ್ಕೆ ಹಣ ನೀಡಲು ನನ್ನ ಕೃಷಿ ಭೂಮಿಯನ್ನು ಯಾವುದೇ ಹಿಂಜರಿಕೆಯಿಲ್ಲದೆ ಮಾರಾಟ ಮಾಡಿದ್ದೇನೆ" ಎಂದು 69 ವರ್ಷದ ರಾಮದಾಸ್ ಕೊರ್ಡೆ ಹೇಳಿದರು. “ ಅವರು ವೈದ್ಯರು ಅಥವಾ ಇಂಜಿನಿಯರ್‌ಗಳಾಗಿ ನಮ್ಮ ಗ್ರಾಮಕ್ಕೆ ಹಿಂತಿರುಗುವುದು ಯಾವುದೇ  ಒಂದು ಪವಾಡ ಅಥವಾ ಕ್ರಾಂತಿಗೂ ಕಡಿಮೆಯಾಗದು."


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು