ಅನಿಶ್ಚಿತ ನ್ಯಾಯ:

ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದ  ಹಿಂಸಾಚಾರದ

 ಕುರಿತು   ನಾಗರಿಕ ಸಮಿತಿಯ ವರದಿ

 

ನ್ಯಾಯಮೂರ್ತಿ(ನಿವೃತ್ತ) ಮದನ ಬಿ. ಲೋಕೂರ್‌,  ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಧೀಶರು (ಅಧ್ಯಕ್ಷರು)

ನ್ಯಾಯಮೂರ್ತಿ(ನಿವೃತ್ತ.ಪಿ.ಶಾಹ್, ನಿವೃತ್ತ ಮುಖ್ಯ ನ್ಯಾಯಾಧೀಶರು, ಮದ್ರಾಸ್ಮತ್ತು ನವದೆಹಲಿ ಉಚ್ಚನ್ಯಾಯಾಲಯಗಳು,   ಹಾಗೂ   ಮಾಜಿ ಅಧ್ಯಕ್ಷರು, ಕಾನೂನು ಆಯೋಗ

ನ್ಯಾಯಮೂರ್ತಿ(ನಿವೃತ್ತ)   ಆರ್.ಎಸ್.ಸೋಧಿ, ಮಾಜಿ ನ್ಯಾಯಾಧೀಶರುಉಚ್ಚನ್ಯಾಯಾಲಯ, ನವದೆಹಲಿ

ನ್ಯಾಯಮೂರ್ತಿ(ನಿವೃತ್ತ)   ಅಂಜನ ಪ್ರಕಾಶ್‌, ಮಾಜಿ ನ್ಯಾಯಾಧೀಶರು, ಉಚ್ಚನ್ಯಾಯಾಲಯ, ಪಾಟ್ನಾ


ಶ್ರೀ. ಜಿ.ಕೆ.ಪಿಳ್ಳೆ, ..ಎಸ್‌ (ನಿವೃತ್ತ), ಮಾಜಿ ಗೃಹ ಕಾರ್ಯದರ್ಶಿ, ಭಾರತ ಸರ್ಕಾರ

 

 

 

ಕಾರ್ಯಕಾರಿ ಸಾರಾಂಶ

೨೦೨೦ನೇ ಸಾಲಿನ ಫೆಭ್ರವರಿ ೨೩ ಮತ್ತು ೨೬ರ ನಡುವೆ ದೆಹಲಿಯ ಈಶಾನ್ಯಭಾಗದಲ್ಲಿ ನಡೆದ ಕೋಮುಗಲಭೆಯು ಇಡೀ ಜಿಲ್ಲೆಯನ್ನು ನಡುಗುವಂತೆ ಮಾಡಿತು. ನಡೆದ ಗಲಭೆಯು  ೫೩ ಜನರ ಮರಣಕ್ಕೆ ಕಾರಣವಾಯಿತು  ಮತ್ತು ನೂರಕ್ಕೂ ಹೆಚ್ಚು ಜನರು ಗಾಯಗೊಂಡರು. ಮನೆ, ಶಾಲೆ, ವಾಣಿಜ್ಯ ಸಂಸ್ಥೆ ಮತ್ತು ಪೂಜಾ ಸ್ಥಳಗಳ ಮೇಲೆ ದಾಳಿ ನಡೆದವು. ನಾಗರಿಕ ಸಮಿತಿಯು ಪ್ರಸ್ತುತಪಡಿಸುತ್ತಿರುವ ವರದಿಯು ಗಲಭೆಯಿಂದ ಉಂಟಾದ ಸಮಸ್ಸ್ಯಾತ್ಮಕ ಮುದ್ದೆಗಳಿಗೆ ಸಂಬಂಧಿಸಿದೆ.

ವರದಿ ನೀಡಲು ರಚಿಸಿರುವ ಸಮಿತಿಯು ಕೆಳಕಂಡ ಸದಸ್ಯರುಗಳನ್ನು ಒಳಗೊಂಡಿರುತ್ತದೆ:

ನ್ಯಾಯಮೂರ್ತಿ(ನಿವೃತ್ತ) ಮದನ ಬಿ. ಲೋಕೂರ್‌,  ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಧೀಶರು (ಅಧ್ಯಕ್ಷರು)

ನ್ಯಾಯಮೂರ್ತಿ(ನಿವೃತ್ತ.ಪಿ.ಶಾಹ್, ನಿವೃತ್ತ ಮುಖ್ಯ ನ್ಯಾಯಾಧೀಶರು, ಮದ್ರಾಸ್ಮತ್ತು ನವದೆಹಲಿ ಉಚ್ಚನ್ಯಾಯಾಲಯಗಳು,   ಹಾಗೂ   ಮಾಜಿ ಅಧ್ಯಕ್ಷರು, ಕಾನೂನು ಆಯೋಗ

ನ್ಯಾಯಮೂರ್ತಿ(ನಿವೃತ್ತ)   ಆರ್.ಎಸ್.ಸೋಧಿ, ಮಾಜಿ ನ್ಯಾಯಾಧೀಶರುಉಚ್ಚನ್ಯಾಯಾಲಯ, ನವದೆಹಲಿ

ನ್ಯಾಯಮೂರ್ತಿ(ನಿವೃತ್ತ)   ಅಂಜನ ಪ್ರಕಾಶ್‌, ಮಾಜಿ ನ್ಯಾಯಾಧೀಶರು, ಉಚ್ಚನ್ಯಾಯಾಲಯ, ಪಾಟ್ನಾ


ಶ್ರೀ. ಜಿ.ಕೆ.ಪಿಳ್ಳೆ, ..ಎಸ್‌ (ನಿವೃತ್ತ), ಮಾಜಿ ಗೃಹ ಕಾರ್ಯದರ್ಶಿ, ಭಾರತ ಸರ್ಕಾರ


  ಮೂರು ಭಾಗಗಳಲ್ಲಿ ರಚಿಸಿರುವ ವರದಿಯು ಗಲಭೆಯ ವಿಭಿನ್ನ ಮುಖಗಳನ್ನು  - ಗಲಭೆಯ ಉಗಮ, ಅದರ ಸ್ವರೂಪ, ನಂತರದ ಪರಿಣಾಮಗಳನ್ನು  -  ಪರಿಶೀಲಿಸಿದೆ.  ಮೊದಲನೇ ಭಾಗದಲ್ಲಿ  ಪೌರತ್ವ ಕಾನೂನಿನ ತಿದ್ದುಪಡಿಗಳ ಅಂಗೀಕಾರದಿಂದ ಪ್ರಚೋದಿಸಲ್ಪಟ್ಟ ಸಂದರ್ಭ, ತದನಂತರ ಅದು   ಗಲಭೆಯ ಸ್ವರೂಪಕ್ಕೆ ಬೆಳೆದುದರ ವಿಶ್ಲೇಷಣೆ, ಆ ಗಲಭೆಯ ಪಥ, ಮತ್ತು ಗಲಭೆ ನಡೆದ೦ತೆ  ಸರ್ಕಾರದ ಆಡಳಿತದ  ಪ್ರತಿಕ್ರಿಯೆಗಳನ್ನು ವರ್ಣಿಸಿದೆ. ಎರಡನೇ ಭಾಗದಲ್ಲಿ ಗಲಭೆಯ ನಡೆಯುವ ಮೊದಲು ಮತ್ತು ತದನಂತರ ಧ್ರುವೀಕೃತ ನಿರೂಪಣೆಗಳನ್ನು ಪ್ರಸಾರ ಮಾಡುವಲ್ಲಿ ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮದ ವಿಭಾಗಗಳು ವಹಿಸಿದ ಪಾತ್ರದ ವಿಶ್ಲೇಷಣೆ ಮಾಡಲಾಗಿದೆ.  ಮತ್ತು ಮೂರನೇ ಭಾಗದಲ್ಲಿ ಹಿ೦ಸಾಚಾರದ ಬಗ್ಗೆ ದೆಹಲಿ ಪೋಲಿಸರ ವಿಚಾರಣೆಯ, ಮತ್ತು  ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಅಧಿನಿಯಮ  ೧೯೬೭(UAPA - ಯು ಎ ಪಿ ಎ)ರ ಬಳಕೆಯ ವಿಶಾಲ  ಪರಿಣಾಮಗಳ ಬಗ್ಗೆ ಕಾನೂನುಬಧ್ಧ ವಿಶ್ಲೇಷಣೆ ಮಾಡಿರುತ್ತದೆ.

 

ಸಂಘರ್ಷವನ್ನು ಹೆಚ್ಚಿಸಲು ದ್ವೇಷದ ಭಾಷಣ 

ಸಮುದಾಯಗಳ ನಡುವೆ ಧ್ರುವೀಕರಣ, ಅದರಲ್ಲೂ  ಗಲಭೆ ನಡೆಯುವ ಹಿಂದಿನ ತಿಂಗಳು ವಿಶೇಷವಾಗಿ ಮುಸ್ಲಿಂ ವಿರೋಧಿ ದ್ವೇಷವನ್ನು ಉದ್ದೇಶಪೂರ್ವಕವಾಗಿ ಹರಡಿದ್ದು ಗಲಭೆಗೆ ಪ್ರಚೋದನೆಯಾಯಿತು.  ೨೦೧೯ ಡಿಸೆಂಬರ್ನಲ್ಲಿ ಅಂಗೀಕರಿಸಿದ ಪೌರತ್ವ (ತಿದ್ದುಪಡಿ) ಅಧಿನಿಯಮ ೨೦೧೯ (ಸಿ ಎ ಎಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಪ್ರಕ್ರಿಯೆಗಳ  ಸಂಯೋಜಿತ ಪರಿಣಾಮದ ಮೂಲಕ ಮುಸ್ಲಿಂ ಸಮುದಾಯವನ್ನು ಸಂಭಾವ್ಯವಾಗಿ ಹೊರಗಿಡುವುದರಿಂದ  ಪೌರತ್ವದ ನಷ್ಟದ ಭೀತಿಯ ವಿರುಧ್ಧ ಮುಸ್ಲಿಂ ಸಮುದಾಯವು ಹೆಣಗಾಡುತ್ತಿತ್ತು. ಡಿಸೆಂಬರ್‌ ೨೦೧೯ ಮಾಹೆಯ ಮಧ್ಯದ ವೇಳೆಗೆ  ಪ್ರಸ್ತಾಪಿತ ಕಾನೂನಿನ ವಿರುದ್ದವಾಗಿ  ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಸಿಡಿದು ಬ೦ದವು.  ದೆಹಲಿಯು ಸಿ ಎ ಎ ವಿರೋಧಿ ಚಳವಳಿಯ ಕೇಂದ್ರಬಿಂದುವಾಗಿ ಹೊರಹೊಮ್ಮಿತು ಮತ್ತು ಈಶಾನ್ಯ ದೆಹಲಿಯು ಹಲವಾರು ಧರಣಿ ಪ್ರತಿಭಟನೆಗಳ ತಾಣವಾಯಿತು.

  ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ದೆಹಲಿ ವಿಧಾನ ಸಭೆಯ ಚುನಾವಣೆಯ ಪ್ರಚಾರ ಬಿರುಸುಗೊ೦ಡಿತು. ಭಾರತೀಯ ಜನತಾ ಪಕ್ಷ (ಬಿ ಜೆ ಪಿ) ತನ್ನ ಚುನಾವಣಾ ಪ್ರಚಾರವನ್ನು ವಿಭಜನೆಯ ನಿರೂಪಣೆಯೊಳಗೆ ಸಿ ಎ ಎ ವಿಷಯದ ಮೇಲೆ ಕೇಂದ್ರೀಕರಿಸಿ ಸಿ ಎ ಎ-ವಿರೋಧಿ ಪ್ರತಿಭಟನೆಗಳನ್ನು ದೇಶವಿರೋಧಿಗಳು ಮತ್ತು ಹಿಂಸಾತ್ಮಕರು ಎಂದು ರೂಪಿಸಿತು. ಪ್ರತಿಭಟನಾಕಾರರನ್ನು ಅಭ್ಯರ್ಥಿಗಳು "ದೇಶದ್ರೋಹಿಗಳು" ಎಂದು ಹೆಸರಿಸಿದರು. ಮತ್ತು ಪಕ್ಷದ ನಾಯಕರು, ಉದಾಹರಣೆಗೆ ಕಪಿಲ್ ಮಿಶ್ರಾ ಮತ್ತು ಅನುರಾಗ್ ಠಾಕೂರ್, "ದೇಶದ್ರೋಹಿಗಳು" ಎಂದು ಕರೆಯಲ್ಪಡುವವರ ವಿರುದ್ಧ ಹಿಂಸಾಚಾರಕ್ಕೆ ಕರೆಗಳನ್ನು, "ಗೋಲಿ ಮಾರೋ" (ದೇಶದ್ರೋಹಿಗಳನ್ನು ಗು೦ಡುಹೊಡೆಯಿರಿ) ಘೋಷಣೆಯ ರೂಪದಲ್ಲಿ, ಯಾವುದೇ ಖಂಡನೆ ಇಲ್ಲದೆ, ಚುನಾವಣಾ ಸಭೆಗಳು ಮತ್ತು ಸಾರ್ವಜನಿಕ ಪ್ರದರ್ಶನಗಳಲ್ಲಿ ಪುನರಾವರ್ತಿಸಿದರು. ವ್ಯಾಪಕವಾಗಿ ವೀಕ್ಷಿಸಿದ ದೂರದರ್ಶನ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮದಿಂದ ಪ್ರತಿಭಟನೆಗಳ ನಿಂದನೆ ಮತ್ತು ಮುಸ್ಲಿಂ ವಿರೋಧಿ ದ್ವೇಷವನ್ನು ವರ್ಧಿಸಲಾಯಿಸಿಯಿತು.

ಸಮಿತಿಯು ಸಿ ಎ ಎ ಮತ್ತು ಪ್ರತಿಭಟನೆಗಳ ವಿಷಯದಲ್ಲಿ  ದೂರದರ್ಶನ ಮಾಧ್ಯಮಗಳು ಯಾವ ತರದ ಸ೦ದೇಶಗಳನ್ನು ನೀಡುತ್ತಿದ್ದವು ಎನ್ನುವದರ   ಪ್ರಾಯೋಗಿಕ ವಿಶ್ಲೇಷಣೆಯನ್ನು ನಡೆಸಿತು. ಇದು ಡಿಸೆಂಬರ್ ೨೦೧೯-ಫೆಬ್ರವರಿ ೨೦೨೦ ಕಾಲದ ‘ಪ್ರೈಮ್ ಟೈಮ್’ (ಮುಖ್ಯ ಸುದ್ದಿ ವರದಿಯ ಸಮಯ)ನಲ್ಲಿ  ಪ್ರಸಾರವಾದ ಆರು ಹೆಚ್ಚು ವೀಕ್ಷಿಸಿದ ದೂರದರ್ಶನ ಸುದ್ದಿ ವಾಹಿನಿಗಳ ಸಂಚಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ. ಇವೆ೦ದರೆ ರಿಪಬ್ಲಿಕ್ ಮತ್ತು ಟೈಮ್ಸ್ ನೌ (ಇಂಗ್ಲಿಷ್) ಮತ್ತು ಆಜ್ ತಕ್, ಜೀ ನ್ಯೂಸ್, ಇಂಡಿಯಾ ಟಿವಿ ಮತ್ತು ರಿಪಬ್ಲಿಕ್ ಭಾರತ್ (ಹಿಂದಿ) ದೂರದರ್ಶನ ಸುದ್ದಿ ಚಾನೆಲ್ಗಳು.  ಡಿಸೆಂಬರ್  ೨೦೧೯ - ಫೆಬ್ರವರಿ  ೨೦೨೦ ರಲ್ಲಿ  ಸಿ ಎ ಎ  ಮತ್ತು ಅದರ ವಿರುದ್ದ ಪ್ರತಿಭಟನೆಗಳ ಸುತ್ತ ನಡೆದ ಘಟನೆಗಳನ್ನು ಪ್ರಸಾರ ಮಾಡಿದ್ದು, ಸಮಿತಿಯು ಇವುಗಳಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ಸಂಚಿಕೆ‌ಗಳ ಮೇಲೆ ಕೇಂದ್ರೀಕರಿಸಿ ಪ್ರಾಯೋಗಿಕ ವಿಶ್ಲೇಷಣೆಯನ್ನು ಮತ್ತು   ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿನ ಸಂಬಂಧಿತ ವರದಿಗಳನ್ನು ಸಹ ಪರಿಶೀಲಿಸಿದೆ. ಚಾನೆಲ್ಗಳ ಸಿ ಎ ಎ  ಸ೦ಬ೦ಧಿಸಿದ  ಘಟನೆಗಳ ವರದಿಗಳು   ಮುಸ್ಲಿಂರ ವಿರುಧ್ಧ  ಪೂರ್ವಾಗ್ರಹ ಮತ್ತು ಅನುಮಾನಗಳೊ೦ದಿಗೆ  ‘ಹಿ೦ದೂಗಳು,  ಮುಸ್ಲಿಮರು ಪರಸ್ಪರ  ವಿರುಧ್ಧ’ ಎನ್ನುವ ರೀತಿಯಲ್ಲಿ   ಸಮಸ್ಯೆಗಳನ್ನು ರೂಪಿಸಿದವು ಎಂದು ವಿಶ್ಲೇಷಣೆ ಬಹಿರಂಗಪಡಿಸಿತು.   ಚಾನೆಲ್ಗಳು ಸಿ ಎ ಎ ವಿರೋಧಿ ಪ್ರತಿಭಟನೆಗಳನ್ನು ದೂಷಿಸುವದು, ಆಧಾರರಹಿತ ಪಿತೂರಿ ಸಿದ್ಧಾಂತಗಳನ್ನು ಉತ್ತೇಜಿಸುವದು,  ಮತ್ತು  ಪ್ರತಿಭಟನೆಗಳನ್ನು  ಬಲವಂತವಾಗಿ ಸ್ಥಗಿತಗೊಳಿಸುವಂತೆ ಕರೆ ನೀಡುವದರ  ಮೇಲೆ  ಕೇಂದ್ರೀಕರಿಸಿದ್ದರು..

ಹಿಂದೂ ರಾಷ್ಟ್ರೀಯವಾದಿಗಳಾದ  ಯತಿ ನರಸಿಂಹಾನಂದ್ ಮತ್ತು   ರಾಗಿಣಿ ತಿವಾರಿ, ಹಾಗೂ ಬಿಜೆಪಿ ರಾಜಕೀಯ ನಾಯಕರಾದ  ಕಪಿಲ್ ಮಿಶ್ರಾರ೦ತವರುಗಳು ಡಿಸೆಂಬರ್ ೨೦೧೯ ರಿಂದ ಸಾಮಾಜಿಕ ಮಾಧ್ಯಮಗಳ ಮೂಲಕ  ಅವರ ಸಾವಿರಾರು ಅನುಯಾಯಿಗಳ ನಡುವೆ ದ್ವೇಷದ ಸಂದೇಶವನ್ನು ಹರಡಿರುತ್ತಾರೆ.

ಪ್ರಬಲ ರಾಜಕಾರಣಿಗಳ ಮತ್ತು ಹಿಂದೂ ರಾಷ್ಟ್ರೀಯವಾದಿ ವ್ಯಕ್ತಿಗಳ , ಮತ್ತು ದೂರದರ್ಶನದ ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡ ದೂರಗಾಮಿ ಧ್ವನಿಗಳ ಸಂಗಮವು ದ್ವೇಷದ ನಿರೂಪಣೆಗೆ ಚಾಲನೆ ಕೊಟ್ಟಿತು.   ಸಮಿತಿಯು ತೀರ್ಮಾನಿಸಿದ ಪ್ರಕಾರ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನೆ ಮತ್ತು ಹಿಂಸಾಚಾರದ ಕರೆಗಳನ್ನು ಸಮಾಜದ ಒ೦ದು ಗಮನಾರ್ಹ ವಿಭಾಗವು ಮುಚ್ಚುಮರೆಯಿಲ್ಲದೆ ಸ್ವೀಕರಿಸುವ ವಾತಾವರಣವನ್ನು ಸೃಷ್ಟಿಸಲು ದ್ವೇಷದ ಹರಡುವಿಕೆಯು ಗಮನಾರ್ಹ ಕೊಡುಗೆ ನೀಡಿತು.

 

ಗಲಭೆಯ ಮುಖ:

ರಾಷ್ಟ್ರವ್ಯಾಪಿ ಪ್ರತಿಭಟನೆಯ ಕರೆಗೆ ಪ್ರತಿಕ್ರಿಯೆಯಾಗಿ ಈಶಾನ್ಯ ದೆಹಲಿಯ ಸೀಲಂಪುರ್-ಜಾಫ್ರಾಬಾದ್ ಪ್ರದೇಶದಲ್ಲಿ ಸಿ ಎ ಎ ವಿರೋಧಿ ಮಹಿಳಾ ಪ್ರತಿಭಟನಾಕಾರರು ಫೆಬ್ರವರಿ ೨೨, ೨೦೨೦ ರಾತ್ರಿ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಹೊರಗೆ ರಸ್ತೆ ತಡೆ ನಡೆಸಿದರು. ಫೆಬ್ರವರಿ ೨೩ ಮು೦ಜಾನೆಯಿಂದ, ಬಿಜೆಪಿ ನಾಯಕರು, ಪ್ರಮುಖವಾಗಿ ಕಪಿಲ್ ಮಿಶ್ರಾ ಮತ್ತು ರಾಗಿಣಿ ತಿವಾರಿಯಂತಹ ಹಿಂದೂ ರಾಷ್ಟ್ರೀಯತಾವಾದಿಗಳು ಗುಂಪಿನ ವಿರುದ್ಧ ನೇರವಾಗಿ ಕ್ರಮ ಜರುಗಿಸುವಂತೆ  ಕರೆ ನೀಡಿದರು. ದಿನ ಸಂಜೆಗಂಟೆಗೆ, ಕಪಿಲ್ ಮಿಶ್ರಾ ಹೊಸ ಸಿ ಎ ಎ ವಿರೋಧಿ ಪ್ರತಿಭಟನಾ ಸ್ಥಳಕ್ಕೆ ಸಮೀಪವಿರುವ ಮೌಜ್ಪುರ ಚೌಕ್ನಲ್ಲಿ ಭಾಷಣ ಮಾಡುತ್ತಾ ದೆಹಲಿ ಪೊಲೀಸರಿಗೆ ಜಾಫ್ರಾಬಾದ್ ಮತ್ತು ಚಾಂದ್ ಬಾಗ್ನಲ್ಲಿನ ರಸ್ತೆಗಳನ್ನುದಿನಗಳಲ್ಲಿ ತೆರವುಗೊಳಿಸಲು ಕ್ರಮವಹಿಸುವ೦ತೆ ತಾಕೀತು ನೀಡಿ , ಇಲ್ಲದಿದ್ದರೆ   ತಾವು  ಮತ್ತು ತಮ್ಮ ಬೆಂಬಲಿಗರು ಸ್ವತಃ  ತೆರವು ಮಾಡುವುದಾಗಿ ಹೇಳಿದರು.  ಅವರು ಉಲ್ಲೇಖಿಸಿದ್ದು ಈ ಪ್ರದೇಶಗಳಲ್ಲಿ ನಡೆಯುತ್ತಿರುವ ಸಿ ಎ ಎ ವಿರೋಧಿ ಪ್ರತಿಭಟನೆಗಳ ಬಗ್ಗೆ.   ಭಾಷಣ ಮಾಡಿದ ತರುವಾಯ  ಸಿ ಎ ಎ-ಪರ ಮತ್ತು ಸಿ ಎ ಎ -ವಿರೋಧಿ ಬಣಗಳ ನಡುವೆ ಕಲ್ಲು ತೂರಾಟ  ಪ್ರಾರಂಭವಾಯಿತು.   ಫೆಬ್ರವರಿ ೨೨-೨೩ ರಂದು ನಡೆಸಲಾದ ದ್ವೇಷಪೂರಿತ ಭಾಷಣದ ವಿಷಯ ಹಿಂಸಾಚಾರದ ಕ್ರಿಯೆಗಳನ್ನು   ಪ್ರಬೋಧಿಸಿ, ಪ್ರೇರಿಸಿ,  ಉತ್ತೇಜಿಸುವ ಉದ್ದೇಶವನ್ನು ಪಡೆದಿತ್ತು, ಮತ್ತು   ಕರೆಗಳು ತತ್ಕ್ಷಣದ  ಪ್ರಚೋದನೆಯಾಗಿ ಕಾರ್ಯನಿರ್ವಹಿಸಿವೆ ಎಂದು ಸ್ಪಷ್ಟವಾಗುತ್ತದೆ

   ಮೌಜ್ಪುರ-ಜಾಫ್ರಾಬಾದ್ ಪ್ರದೇಶದಾದ್ಯಂತ ಕಲ್ಲು ತೂರಾಟವು ಫೆಬ್ರವರಿ 24 ಬೆಳಿಗ್ಗೆ ಸಾಮೂಹಿಕ ಹಿಂಸಾಚಾರಕ್ಕೆ ತಿರುಗಿತು. ಎರಡೂ ಕಡೆಯ ಗುಂಪುಗಳಿಂದ ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಮತ್ತು ಬಂದೂಕು ಹೊಡೆತ  ಹಿಂಸಾಚಾರವು ಮುಂದಿನ ಕೆಲವು ದಿನಗಳಲ್ಲಿ ಈಶಾನ್ಯ ದೆಹಲಿಯಾದ್ಯಂತ ನೆರೆಹೊರೆಗಳಲ್ಲಿ ಹರಡಿತು. ಹಿಂಸಾಚಾರದ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ದಾಳಿಗಳು ನಡೆದವು. ಆಪಾದಿತ ಪೋಲಿಸ್ ಸಹಭಾಗಿತ್ವವು ಹಿಂಸಾಚಾರದ ಸ್ವರೂಪಕ್ಕೆ ಮತ್ತೊ೦ದು ಪ್ರಮುಖ ಪದರನ್ನು ಜೋಡಿಸಿತು. 

ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರವು ಮೊದಲು ಸಿ ಎ ಎ - ಪರ ಮತ್ತು ಸಿ ಎ ಎ - ವಿರೋಧಿ ಶಿಬಿರಗಳ ವಿರುದ್ಧ ಭುಗಿಲೆದ್ದಿತು, ಅನ೦ತರ ಇದು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಪೂರ್ಣ ಪ್ರಮಾಣದ ಕೋಮು ಗಲಭೆಯಾಗಿ ಪರಿವರ್ತಿಸಿತು.   ಹಿಂಸಾಚಾರವು ಪ್ರಾರಂಭವಾಗುವ ಪೂರ್ವದಲ್ಲಿ ತಳೆದಿದ್ದ ಮುಸ್ಲಿಂ ವಿರೋಧಿ ದ್ವೇಷವು ಬೃಹದಾದಾಕರವಾಗಿ ಬೆಳೆದು ಎಲ್ಲೆಡೆ ಹರಡಿತು. ಗುಂಪುಗಳು ಘರ್ಷಣೆ ಮತ್ತು ಪರಸ್ಪರ ಹಾನಿಯನ್ನು ಉ೦ಟುಮಾಡುತಿದ್ದ೦ತೆ ಮುಸ್ಲಿಮ್ ಗುರುತನ್ನು ,  ವ್ಯಕ್ತಿಗಳಿಂದ ಹಿಡಿದು ಮನೆಗಳು, ವ್ಯಾಪಾರ ಸ್ಥಳಗಳು ಮತ್ತು ಪೂಜಾ ಸ್ಥಳಗಳವರೆಗೆ  ಗುರಿಯಾಗಿಸಲಾಯಿತು. ಉದ್ದೇಶಿತ ಮತ್ತು ಸಾಮಾನ್ಯ ಹಿಂಸಾಚಾರದ ಕಠೋರ ಮಿಶ್ರಣವು ೪೦ ಮುಸ್ಲಿಮರು ಮತ್ತು ೧೩ ಹಿಂದೂಗಳ ಸಾವಿಗೆ ಕಾರಣವಾಯಿತು. ಗಲಭೆಗೆ ಹಿ೦ದಿನ ತಿಂಗಳುಗಳಲ್ಲಿ  ಹಿಂದೂ ಮತ್ತು ಮುಸ್ಲಿಮರನ್ನು ಬಿಗುವಾಗಿ ಪ್ರತ್ಯೇಕಿಸಲು ನಡೆದ ಪ್ರಯತ್ನಗಳು  ಉದ್ದೇಶಿತ ಆಕಾರವನ್ನು ಪಡೆದು   ಅಂತಿಮವಾಗಿ ಕೋಮು ಗಲಭೆಯ  ಹಿಂಸಾಚಾರದ ರೂಪದಲ್ಲಿ ಪ್ರಕಟವಾಯಿತು  ಎಂದು ಸಮಿತಿಯು ತೀರ್ಮಾನಿಸಿತು. ಸಾಮಾಜಿಕ ಸಂಬಂಧಗಳನ್ನು ಬದಲಾಯಿಸುವ ಪ್ರಯತ್ನದಲ್ಲಿ, ಮುಸ್ಲಿಂ ಗುರುತು ಮತ್ತು ಸ್ವಾಯತ್ತತೆಗಳು ಖಿನ್ನವಾಗಿದೆ. ಚಾಂದ್ ಬಾಗ್, ಕರ್ದಂಪುರಿ, ಜಾಫ್ರಾಬಾದ್, ಮುಸ್ತಫಾಬಾದ್ ಮತ್ತು ಖಜೂರಿ ಖಾಸ್ ಸೇರಿದಂತೆ  ಸಿ ಎ ಎ ವಿರೋಧಿ ಪ್ರತಿಭಟನಾ ಸ್ಥಳಗಳನ್ನು ನಿರ್ದಿಷ್ಟವಾಗಿ ಗುರಿಪಡಿಸಿದ್ದನ್ನು  ಗಮನಿಸಿ, ಹಿಂಸಾಚಾರದ ಒ೦ದು ಉದ್ದೇಶ  ಸಿ ಎ ಎ ವಿರೋಧಿ ಭಾವನೆಯನ್ನು ನಿಯಂತ್ರಿಸುವ ಪ್ರಯತ್ನವಾಗಿದ್ದಾಗಿ ಇದು ಸೂಚಿಸುತ್ತದೆ ಎ೦ದು   ಸಮಿತಿಯು ಅಭಿಪ್ರಾಯ ಹೊ೦ದಿದೆ. 

 

 ಸರ್ಕಾರದ  ವೈಫಲ್ಯಗಳು :

ಫೆಬ್ರವರಿ ೨೦೨೦ ಗಲಭೆಯ  ಪ್ರಾರಂಭ, ಅದು ನಡೆದ ರೀತಿ,  ಮತ್ತು ನಂತರ ನಡೆದ ಹಿಂಸಾಚಾರದ ತನಿಖೆ, ಇವೆಲ್ಲವುಗಳಲ್ಲಿಯೂ  ಪ್ರಜಾಪ್ರಭುತ್ವದ ಮೌಲ್ಯಗಳನ್ನು ಭಯಾನಕವಾಗಿ ದುರ್ಬಲಗೊಳಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ದುರಂತವೆಂದರೆ ಹಿಂಸಾಚಾರಕ್ಕೆ ಕಾರಣವಾದ ಕೋಮು ಧ್ರುವೀಕರಣವು  ಸರ್ಕಾರದ ಆಡಳಿತವು  ನೀಡಿದ ಪ್ರತಿಕ್ರಿಯೆಯಿಂದ  ಮತ್ತಷ್ಟು ಉತ್ತುಂಗಕ್ಕೇರಿತು.

ದೆಹಲಿ ಪೊಲೀಸರು:

ಫೆಬ್ರವರಿ ೨೩ ಕ್ಕೆ ಮೊದಲು ಮತ್ತು ಅ೦ದಿನ  ದಿನದ೦ದು  ರಾಜಕೀಯ ನಾಯಕರು ಮತ್ತು ಇತರರು ಮಾಡಿದ ದ್ವೇಷದ ಭಾಷಣಗಳ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ದೆಹಲಿ ಪೊಲೀಸರು ವಿಫಲರಾದರು. ಪೊಲೀಸರು ಗು೦ಪುಗಳಿಗೆ ಸಹಾಯ ನೀಡಿದರು ಮತ್ತು ಮುಸ್ಲಿಮರ ವಿರುದ್ದ, ಸಿ ಎ ಎ ವಿರೋಧಿ  ಪ್ರತಿಭಟನಾ ಸ್ಥಳಗಳು  ಮತ್ತು ಮಸೀದೆಗಳ ಮೇಲೆ  ದಾಳಿಗಳಲ್ಲಿ ಭಾಗವಹಿಸಿದರು  ಎಂಬ ಆರೋಪಗಳನ್ನು   ಪ್ರತ್ಯಕ್ಷದರ್ಶಿಗಳು, ಮಾಧ್ಯಮಗಳು ಮತ್ತು  ಬಾಧಿತ ವ್ಯಕ್ತಿಗಳ  ಹೇಳಿಕೆಗಳಲ್ಲಿ ದಾಖಲಿಸಲಾಗಿದೆ. ಸಮಿತಿಯು ಸ್ಪಷ್ಟವಾದ ಪೋಲೀಸ್ ಜಟಿಲತೆ ಸೇರಿದಂತೆ ಪೊಲೀಸ್ ವೈಫಲ್ಯಗಳನ್ನು ಸೂಚಿಸುವ ಸೀಮಿತವಾದ ಆದರೆ ನಂಬಲರ್ಹವಾದ ಮಾಹಿತಿಯನ್ನು ಪಡೆದುಕೊಂಡಿದೆ.  ಇದು ಹಿಂಸಾಚಾರದ ವಿವಿಧ ಹಂತಗಳಿಗೆ ಸೇರಿದ್ದು, ಇವುಗಳ  ಸತ್ಯಾಸತ್ಯೆಯನ್ನು ತಿಳಿಯಲು ಬಹುಶಃ ನ್ಯಾಯಾಲಯದ ಮೇಲ್ವಿಚಾರಣೆಯಡಿಯಲ್ಲಿ ನಡೆಸುವ  ಸ್ವತಂತ್ರ  ತನಿಖೆಯ ಅಗತ್ಯವಿದೆ ಎಂದು ಸಮಿತಿಯು ಭಾವಿಸುತ್ತದೆ.

ಗೃಹ ವ್ಯವಹಾರಗಳ ಸಚಿವಾಲಯ :

ಗಲಭೆಗೆ ಸಂಬಂದಿಸಿದಂತೆ ಭಾರತ ಸರ್ಕಾರದ, ಅ೦ದರೆ ಗೃಹ ವ್ಯವಹಾರಗಳ ಸಚಿವಾಲಯದ (Ministry of Home Affairs - M H A)    ಪ್ರತಿಕ್ರಿಯೆಯು  ಅವಶ್ಯ ಮಟ್ಟಕ್ಕೆ ತಲುಪಲೇ ಇಲ್ಲ.  ದೆಹಲಿ ಪೋಲೀಸ್ ಮತ್ತು ಕೇಂದ್ರ ಅರೆಸೇನಾ ಪಡೆಗಳೆರಡರ ಮೇಲೆ ಗೃಹ ವ್ಯವಹಾರಗಳ ಸಚಿವಾಲಯವು  ಅಧಿಕಾರ ಹೊಂದಿದ್ದರೂ, ಕೋಮು ಹಿಂಸಾಚಾರದ ಹರಡುವಿಕೆಯನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು M H A ವಿಫಲವಾಯಿತು.  ಫೆಬ್ರವರಿ ೨೪ ಮತ್ತು ೨೫ ರಂದು ಪೊಲೀಸ್ ಉನ್ನತ ಅಧಿಕಾರಿಗಳ ಮತ್ತು ಸರ್ಕಾರಿ ಅಧಿಕಾರಿಗಳಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂಬ  ಪುನರಾವರ್ತಿತ ಭರವಸೆಗಳು  ವಾಸ್ತವವಾಗಿ ನಡೆದ ಕಾಣಲಾಗುತ್ತಿದ್ದ ಹಿಂಸಾಚಾರ ಘಟನೆಗಳಿಗೆ  ತಕ್ಕದ್ದಾಗಿರಲಿಲ್ಲ. ಫೆಬ್ರವರಿ ೨೩ ರಂದು ಈಶಾನ್ಯ ದೆಹಲಿಯಲ್ಲಿ  ಪೊಲೀಸರ ನಿಯೋಜನೆಯನ್ನು ಹೆಚ್ಚಿಸುವಂತೆ ದೆಹಲಿಯ ಪೋಲೀಸ್ ಇಲಾಖೆ ಪರಿಚಲನೆ ಮಾಡಿದ  ಆ೦ತರಿಕ ಎಚ್ಚರಿಕೆಗಳು ಸಲಹೆ ಮಾಡಿದ್ದರೂ, ಅಧಿಕೃತ ಮಾಹಿತಿಯ ಪ್ರಕಾರ ಫೆಬ್ರುವರಿ ೨೬ರಂದು ಮಾತ್ರವೇ ನಿಯೋಜನೆಯನ್ನು ಹೆಚ್ಚಿಸಲಾಗಿದ್ದಾಗಿ ತೋರಿಸುತ್ತದೆ.    ಫೆಬ್ರವರಿ ೨೪-೨೫ ರಂದು ಈಶಾನ್ಯ ದೆಹಲಿಯ ಪೊಲೀಸ್ ಠಾಣೆಗಳಿಗೆ ಗರಿಷ್ಠ ಸಂಖ್ಯೆಯ ಸಂಕಷ್ಟದ ಕರೆಗಳು ಬಂದಿದ್ದರೂ ಸಹ, ಪೊಲೀಸ್ ಸಿಬ್ಬಂದಿ ನಿಯೋಜನೆಯ ಸಂಖ್ಯೆಯನ್ನು ಹೆಚ್ಚಿಸಿರಲಿಲ್ಲ. ಹಿಂಸಾಚಾರಕ್ಕೆ ಸರಿಯಾಗಿ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಈ ಸಮಿತಿಯು ತೀರ್ಮಾನಿಸಿದೆ ಮತ್ತು ಇದರ ಬಗ್ಗೆ ಗಂಭೀರ ಪರೀಕ್ಷೆಯನ್ನುಅತ್ಯವಶ್ಯವಾಗಿ  ಬಯಸುತ್ತದೆ. ಅರಿತಿದ್ದ ಎಲ್ಲ ಗುಪ್ತಚರ ಮಾಹಿತಿ,  ಪೊಲೀಸ್ಸಿಬ್ಬಂದಿಗಳ  ಮತ್ತು ಇತರೆ ಭದ್ರತಾ ಪಡೆಗಳ ಸಾಮರ್ಥ್ಯದ ಮಾಹಿತಿ,  ಹಾಗೂ ಗಲಭೆ ನಡೆದ  ಸ್ಥಳಕ್ಕೆ ಕ್ರಮಾನುಗತವಾಗಿ ನಿಯೋಜಿಸಿದ ಭದ್ರತಾ ಪಡೆಗಳ ಸಿಬ್ಬಂದಿಗಳ ಕುರಿತು ಸಮಗ್ರವಾದ ಸ್ವತಂತ್ರ ತನಿಖೆಯ ಅವಶ್ಯವಿದೆ. 

ದೆಹಲಿ ಸರ್ಕಾರ :

ಈ ಸಂಪೂರ್ಣ ಸಮಯದಲ್ಲಿ ದೆಹಲಿ ಸರ್ಕಾರವು ಎಚ್ಚರಿಕೆಯ ಚಿಹ್ನೆಗಳು ಕಣ್ಣ ಮು೦ದೆ ಇದ್ದರೂ,  ಸಮುದಾಯಗಳ ನಡುವೆ ಮಧ್ಯಸ್ಥಿಕೆ ವಹಿಸಲು ಅವಶ್ಯವಾದ ಏನನ್ನೂ ಮಾಡಲಿಲ್ಲ  ಎಂದು ಸಮಿತಿಯು ಕಂಡಿದೆ.. ಹಿಂಸಾಚಾರವನ್ನು ನಿಯಂತ್ರಿಸುವ ವಿಷಯದಲ್ಲಿ ದೆಹಲಿ ಸರ್ಕಾರದ ಸಾಮರ್ಥ್ಯವು ಸೀಮಿತವಾಗಿದೆ, ಏಕೆಂದರೆ ದೆಹಲಿ ಪೊಲೀಸರ ಮೇಲಿನ ಆಡಳಿತಾತ್ಮಕ ನಿಯಂತ್ರಣವು ಕೇಂದ್ರ ಸರ್ಕಾರದಲ್ಲಿದೆ; ಹೀಗಿದ್ದರೂ ಪರಿಸ್ಥಿತಿಯನ್ನು ಶಾಂತಗೊಳಿಸಲು ನಾಗರಿಕ ಮಧ್ಯಸ್ಥಿಕೆ ಮತ್ತು ರಾಜನೀತಿತ್ವದ ಪಾತ್ರವನ್ನು ನಿರ್ವಹಿಸುವಲ್ಲಿ ದೆಹಲಿ ಸರ್ಕಾರವು ವಿಫಲವಾಗಿದೆ. ಇದಲ್ಲದೆ, ದೆಹಲಿ ಸರ್ಕಾರವು ಹಿಂಸೆಯಿಂದ ಹಾನಿಗೊಳಗಾದವರಿಗೆ ಸಕಾಲಿಕ ಮತ್ತು ಸಮರ್ಪಕ ಉಪಶಮನ ಮತ್ತು ಪರಿಹಾರವನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ. ಸರ್ಕಾರ ಮತ್ತು  ಪರಿಹಾರದ ಅನುಮೋದನೆಯ ಆಯೋಗವು ಪರಿಹಾರದ ನಿರ್ಧಾರದಲ್ಲಿ ವಿಳಂಬ ಮಾಡಿವೆ;   ನಿರ್ಧಾರ ಮಾಡಿದ ಪ್ರಕರಣಗಳಲ್ಲಿ ಪರಿಹಾರದ ಪ್ರಮಾಣವು ಅನುಭವಿಸಿದ ಹಾನಿಗೆ ಅನುಗುಣವಾಗಿಲ್ಲ ಎನ್ನುವದರ ಬಗ್ಗೆ ಕಳವಳವಿದೆ 

ದೆಹಲಿ ಪೊಲೀಸರ ತನಿಖೆಗಳು :

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ದೆಹಲಿ ಪೊಲೀಸರು ಒಟ್ಟು ೭೫೮ ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಿದ್ದಾರೆ. ಮಾರ್ಚ್ ೨೦೨೦ ತನಿಖೆಯ ಆರಂಭದಲ್ಲಿ ದೆಹಲಿ ಪೊಲೀಸ್ ವಿಶೇಷ ಕೋಶವು ಎಫ್ಐಆರ್ ಸಂಖ್ಯೆ ೫೯/೨೦೨೦ರಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿ, ಭಯೋತ್ಪಾದಕ ಕೃತ್ಯಗಳನ್ನು ಒಳಗೊಂಡಿರುವ ಮತ್ತು  ಹಿಂಸಾಚಾರವನ್ನು ಪ್ರಚೋದಿಸಲು ಪೂರ್ವ ಯೋಜಿತ ಸಂಚು ನಡೆದಿದೆ ಎಂದು ಪ್ರತಿಪಾದಿಸಿ ಯು ಎ ಪಿ ಎ ಕಾನೂನನ್ನು ಲಾಗು ಮಾಡಿತು. ಆಪಾದಿತ ಭಯೋತ್ಪಾದನಾ ಕೃತ್ಯಗಳ ಕುರಿತು ಎಫ್ಐಆರ್ ೫೯/೨೦೨೦ ರಲ್ಲಿ ಸಲ್ಲಿಸಲಾದ ಮೊದಲ ಆರೋಪಪಟ್ಟಿಯನ್ನು ಸಮಿತಿಯು ನಿರ್ದಿಷ್ಟವಾಗಿ ಪರಿಶೀಲಿಸಿದೆ.

ಯು ಎ ಪ್ ಎ  ಅಡಿಯಲ್ಲಿ ದೊಡ್ಡ ಪಿತೂರಿಯ ಆರೋಪಗಳು :

      ಎಫ್ಐ ಆರ್ನಲ್ಲಿ ಸಲ್ಲಿಸಲಾದ ಮೊದಲ ಆರೋಪಪಟ್ಟಿಯಲ್ಲಿ ಆರೋಪಿಸಲಾದ ಕ್ರಿಮಿನಲ್ ಕ್ರಮಗಳುಭಯೋತ್ಪಾದಕ ಕೃತ್ಯಗಳು’ ಎ೦ದು ಪರಿಗಣಿಸಲು  ಅರ್ಹವಾಗಿದೆಯೇ ಎಂಬುದನ್ನು  ಸಮಿತಿಯು ಜಾಗರೂಕವಾಗಿ ಗಮನಿಸಿತು (ಅಧ್ಯಾಯನೋಡಿ), ಆದರೆ ಭಾರತದ ಏಕತೆ, ಸಮಗ್ರತೆ, ಭದ್ರತೆ, ಆರ್ಥಿಕ ಭದ್ರತೆ ಅಥವಾ ಸಾರ್ವಭೌಮತ್ವದ ಆರೋಪವನ್ನು ಸಮರ್ಥಿಸುವ ಯಾವುದೇ ಸಂಗತಿಯನ್ನು ಕಾಣಲಿಲ್ಲ.   ಸಿ ಎ ಎ ರದ್ದತಿಯನ್ನು ಒತ್ತಾಯಿಸುವ ವ್ಯಕ್ತಿಗಳು ಸಮುದಾಯದಲ್ಲಿ ಭಯೋತ್ಪಾದನೆಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದ್ದಾರೆ ಎಂಬ ಪ್ರತಿಪಾದನೆಯನ್ನು ಮೊದಲ ಆರೋಪಪಟ್ಟಿಯು ನಂಬಲರ್ಹವಾಗಿ  ವಿಸ್ತಾರ  ಮಾಡುವುದಿಲ್ಲ ಏಕೆಂದರೆ ಎಫ್ಐಆರ್ ೫೯ ಚಾರ್ಜ್ಶೀಟ್ನಲ್ಲಿ ದೆಹಲಿ ಪೊಲೀಸರು ಮಂಡಿಸಿದ ವಿಷಯವು ಭಯೋತ್ಪಾದನೆಯ ಅಪರಾಧಗಳನ್ನು ಆರೋಪಿಸುವ ಕಾನೂನಿನ  ಹೊಸ್ತಿಲನ್ನು ತಲುಪುವುದಿಲ್ಲ ಎಂದು ಸಮಿತಿಯ ವಿಶ್ಲೇಷಣೆ ಪ್ರತಿಬಿಂಬಿಸುತ್ತದೆ.

  ಪ್ರಾಸಿಕ್ಯೂಷನ್ನಿನ ಪ್ರಕರಣದ ಬುನಾದಿಯಾದ  ಕೋಮು ಗಲಭೆಗಳನ್ನು ಸಂಘಟಿಸುವ ಗುರಿಯನ್ನು ಹೊಂದಿರುವ ಪೂರ್ವಭಾವಿ ಪಿತೂರಿಯ ಆರೋಪಗಳನ್ನು ಸಾಬೀತುಪಡಿಸಲು   ಅವಲ೦ಬಿಸಿರುವ ಹೇಳಿಕೆಗಳು ವಿವರಣೆ ಏನೂ ಇಲ್ಲದೆ  ತಡವಾಗಿ ಮಾಡಿದ್ದಲ್ಲದೆ ಅವು    ಕಾನೂನಿನಡಿಯಲ್ಲಿ ಸಹಜವಾಗಿ ವಿಶ್ವಾಸಾರ್ಹವಲ್ಲ  ಎಂದು ಸಮಿತಿಯು   ಅಭಿಪ್ರಾಯಿಸಿದೆ.   ಭಾರತೀಯ ದಂಡ ಸಂಹಿತೆ (I P C) ಅಡಿಯಲ್ಲಿ ದಾಖಲಿಸಿದ ಎಫ್ ಐ ಆರ್ಗಳಲ್ಲಿನ ತನಿಖೆಯ ಕ್ರಮವನ್ನು ಅದೇ ಆರೋಪಗಳ   ಎಫ್ ಐ ಆರ್ ೫೯ ರಲ್ಲಿನ  ತನಿಖೆಯೊಂದಿಗೆ ಹೋಲಿಸಿದಾಗ ಹಲವಾರು ವಿರೋಧಾಭಾಸಗಳು ಮತ್ತು ಹೊಂದಾಣಿಕೆ ಇಲ್ಲದಿರುವುದನ್ನು ತೋರಿಸುತ್ತದೆ. ಇವು ಮೊದಲ ಆರೋಪಪಟ್ಟಿಯಲ್ಲಿ ಮಾಡಿದ ಹೇಳಿಕೆಗಳ  ಮೇಲೆ ಮತ್ತಷ್ಟು ಕರಿ ನೆರಳನ್ನು  ಮೂಡಿಸುತ್ತದೆ. ಪ್ರಾಸಿಕ್ಯೂಷನಿನ ಮುಖ್ಯ ಆರೋಪಗಳ ಪ್ರಕರಣದ ತನಿಖೆಯು ಹೇಳಿ ಕೊಡಿಸಿದ ಪುರಾವೆ ಮತ್ತು ಕಟ್ಟುಕಥೆಯ ಕಳಂಕವನ್ನು ಹೊಂದಿದ್ದರೆ  ಕಳಂಕವು ಇಡೀ ತನಿಖೆಯ ಮೇಲೆ ದೊಡ್ಡದಾಗಿ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಮಿತಿಯ ಅಭಿಪ್ರಾಯಿಸಿರುತ್ತದೆ.

 ಐ ಪಿ ಸಿ ಪ್ರಕರಣಗಳ ತನಿಖೆಗಳು :

‌   ತಡವಾಗಿ - ಆದರೆ ವಿಳ೦ಬದ ಕಾರಣಕ್ಕೆ ಸೂಕ್ತ ಸಮಜಾಯಿಷಿ ಇಲ್ಲದೆ   - ದಾಖಲಿಸಿದ ಪೋಲಿಸ್  ಮತ್ತು ಸಾರ್ವಜನಿಕ ಸಾಕ್ಷಿಗಳು ಅವುಗಳನ್ನು ವಿಶ್ವಾಸಾರ್ಹವಲ್ಲದಂತೆ ಮಾಡುತ್ತವೆ, ಆದರೆ ಈ ತರದ  ಹೇಳಿಕೆಗಳು  ಐ ಪಿ ಸಿ  ಪ್ರಕರಣಗಳ  ನಿರ೦ತರ ವೈಶಿಷ್ಟ್ಯವಾಗಿರುವುದನ್ನು ಸಮಿತಿಯ   ವಿಶ್ಲೇಷಣೆ  ಪುನರುಚ್ಚರಿಸುತ್ತದೆ.  ‘ಮುಸ್ಲಿಮರನ್ನು ಥಳಿಸುವಲ್ಲಿ ಮುಸ್ಲಿಮರು ಹಿಂದೂ ಸಮುದಾಯದ ಸದಸ್ಯರೊಂದಿಗೆ ಸೇರಿಕೊಂಡಿದ್ದಾರೆ’ ಎಂದು ಮುಸ್ಲಿಮರ ವಿರುಧ್ಧ ಆರೋಪದ ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ನಿರೂಪಣೆಯ ಅಸಮರ್ಪಕತೆಯ ಬಗ್ಗೆಯೂ ಐ ಪಿ ಸಿ ಪ್ರಕರಣಗಳಲ್ಲಿ ಜಾಮೀನು ನೀಡುವ ಸ೦ದರ್ಭದಲ್ಲಿ  ವಿಚಾರಣಾ ನ್ಯಾಯಾಲಯಗಳು ಟೀಕೆ ಮಾಡಿವೆ. ದ್ವೇಷಪೂರಿತ ಭಾಷಣಗಳನ್ನು ಮಾಡಿದವರು (ಅವುಗಳಲ್ಲಿ ಹೆಚ್ಚಿನವು ದ್ವೇಷ ಭಾಷಣದ ಅಪರಾಧಕ್ಕೆ ಸಮನಾಗಿರುತ್ತದೆ) ಮತ್ತು ಹಿಂಸಾಚಾರದ ಪ್ರಾರಂಭದ ಗಳಿಗೆಯಲ್ಲಿ  ಹಿಂಸಾತ್ಮಕ ಕೃತ್ಯಗಳಿಗಾಗಿ   ಸಜ್ಜುಗೊಳಿಸಲು ಕರೆಗಳನ್ನು ನೀಡಿದವರು ವಹಿಸಿದ ಪಾತ್ರವನ್ನು ತನಿಖೆ ಮಾಡಲು ಪೊಲೀಸರು ನಿರ್ಲಕ್ಷಿಸಿದ್ದಾರೆ ಎಂದು ಸಮಿತಿಯು ಗಮನಿಸುತ್ತದೆ.

 ತನಿಖೆಯ ದಿಕ್ಕು ಒಟ್ಟಾರೆ  ತಿರುಚಲ್ಪಟ್ಟಿದೆ ಎಂದು ಸಮಿತಿಯು ತೀರ್ಮಾನಿಸಿದೆ. ತನಿಖೆಯು ಹಿಂಸಾಚಾರದ ಘಟನೆಗಳು, ಹಾಗೂ   ದ್ವೇಷದ ಭಾಷಣಗಳ  ಸರಣಿ ಮತ್ತು ಹಿಂಸಾಚಾರದ ಕರೆಗಳ ನಡುವಿನ ಸಂಬಂಧಗಳನ್ನು  ಪರಿಶೀಲಿಸುವುದನ್ನು ಕೈಬಿಟ್ಟಿದೆ.  ಅಸಂಗತವಾಗಿ,  ಕೊನೆಯಲ್ಲಿ ಮುಸ್ಲಿಮರನ್ನು ಮತ್ತು ಸಿ ಎ ಎ  ಕಾನೂನಿನ ಬಗ್ಗೆ ಪ್ರತಿಭಟಿಸುವವರನ್ನು ಗುರಿ ಪಡಿಸಿದ ಹಿ೦ಸಾಚಾರದ ಅಪರಾಧಗಳಿಗೆ, ಸಿ ಎ ಎ ವಿರೋಧಿ ಪ್ರತಿಭಟನಾಕಾರರನ್ನೇ  ಆರೋಪಿಗಳನ್ನಾಗಿ ಮಾಡಿ ಯು ಎ ಪಿ ಎ ಕಾನೂನಿನ  ಕ್ರಮಕ್ಕೆ ಒಳಪಡಿಸಲಾಗಿದೆ.  ವಿವರವಾದ   ಸ್ವತ೦ತ್ರ ತನಿಖೆಯೊ೦ದರಿ೦ದ ಮಾತ್ರ  ಸತ್ಯದ ಮೇಲೆ ಬೆಳಕು ಚೆಲ್ಲಿ, ಹೊಣೆಗಾರಿಕೆಯನ್ನು ಖಚಿತಪಡಿಸಿ,  ಹಿಂಸಾಚಾರದ ಬಲಿಪಶುಗಳಿಗೆ ನ್ಯಾಯವನ್ನು ನೀಡುವುದು ಸಾಧ್ಯವಾಗುವದು.

 ಯು ಎ ಪಿ ಎ ಕಾನೂನಿನ ಅಸಮರ್ಥನೀಯವಾದ ಬಳಕೆ :

  ಯು ಎ ಪಿ ಎ ಕಾನೂನಿನ ದೊಡ್ಡ ಪ್ರಮಾಣದ ಬಳಕೆಯ ನಮೂನೆ, ಸರ್ಕಾರಿ   ಆಡಳಿತವು   ಉದ್ದೇಶಪೂರ್ವಕವಾಗಿ ಕೆಲವರನ್ನು ಗುರಿಮಾಡಿ ಈ ಕಾನೂನನ್ನು ಅನ್ವಯಿಸುವದನ್ನು  ಸೂಚಿಸುತ್ತವೆ. ಕಾನೂನಿನಡಿಯಲ್ಲಿ  ಸುದೀರ್ಘವಾದ ತನಿಖೆಯ ಮೂಲಕ, ಮತ್ತು  ಅತ್ಯ೦ತ ಕಡಿಮೆ  ಸ೦ದರ್ಭಗಳಲ್ಲಿ  ಜಾಮೀನು ಪಡೆಯುವ ಅವಕಾಶವನ್ನು ಕಲ್ಪಿಸಿರುವುದರಿ೦ದ  ವ್ಯಕ್ತಿಗಳು ಪೂರ್ವ-ವಿಚಾರಣೆಯಲ್ಲಿಯೇ ದೀರ್ಘ ಕಾಲಕ್ಕೆ  ಬಂಧನದಲ್ಲಿರುವದನ್ನು ಸಾಧ್ಯಪಡಿಸುತ್ತದೆ. ಇದರಿಂದಾಗಿ  ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ  ಯು ಎ ಪಿ ಎ ಆರೋಪಿಗಳು ಅನೇಕ ಬಾರಿ ತಮ್ಮ ವಿಚಾರಣೆಗಳಲ್ಲಿ  ದೋಷಮುಕ್ತರಾದರೂ, ಬಲವ೦ತವಾಗಿ ಬಂಧನದಲ್ಲಿರಬೇಕಾಗುತ್ತದೆ. ಇದು ಕೆಲವೊಮ್ಮೆ ವರ್ಷಗಟ್ಟಲೆ ನಡೆಯುತ್ತದೆ. ಇದರಿ೦ದಾಗಿ ಇವರಿಗೆ ಕಾನೂನಿನ ಪ್ರಕ್ರಿಯೆಯೇ  ಖ೦ಡಿತವಾದ ಶಿಕ್ಷೆಯಾಗುತ್ತದೆ.     ಸಮಿತಿಯು ಯು ಎ ಪಿ ಎ ಕಾನೂನಿನ ಸಮಗ್ರ ಪುನರ್ಪರಿಶೀಲನೆಯ ಜರೂರು ಅವಶ್ಯಕತೆಯನ್ನು  ಪುನರುಚ್ಚರಿಸುತ್ತದೆ.

ತನಿಖಾ ಆಯೋಗದ ಅಗತ್ಯತೆ :

ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ  ಸಂಪೂರ್ಣ ಅಂಶಗಳ ಸತ್ಯಾಸತ್ಯತೆ ತಿಳಿಯಲು   ನಿಷ್ಪಕ್ಷಪಾತ ತನಿಖೆಗಾಗಿ ತನಿಖಾ ಆಯೋಗವನ್ನು ರಚಿಸುವ ಅಗತ್ಯವಿದೆ. ಪ್ರಸ್ತಾವಿತ ತನಿಖಾ ಆಯೋಗಕ್ಕೆ ಒಪ್ಪಿಸುವ ಹೊಣೆಯ ನಿಯಮಗಳು ಮತ್ತು ಅಧ್ಯಕ್ಷರ ಆಯ್ಕೆಯು, ಅದರ ಸ್ವತಂತ್ರ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯು,   ಬಾಧಿತ ಸಮುದಾಯಗಳಿಗೆ ಭರವಸೆ ನೀಡುತ್ತದೆ.

 

ವಿಶಾಲವಾದ ಕಲಿಯಬಹುದಾದ  ಪಾಠಗಳು

ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ಪರಿಶೀಲನೆಯು ಸಾಂವಿಧಾನಿಕ ಮೌಲ್ಯಗಳು ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವದ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಶಾಲವಾದ ಪರಿಣಾಮಗಳನ್ನು ವಿವೇಚಿಸಲು ನಮ್ಮ ಸಮಿತಿಗೆ ದಾರಿ ಮಾಡಿಕೊಟ್ಟಿದೆ. ಹಿಂಸಾಚಾರಕ್ಕೆ ಕಾರಣವಾಗುವ   ಮುಸ್ಲಿಂ ವಿರೋಧಿ ನಿರೂಪಣೆಯ ಸೂಕ್ಷ್ಮರೂಪವು ಹಿಂಸಾಚಾರದ ನೈಜ ಘಟನೆಯೊಂದಿಗೆ ಸಾರ್ವಜನಿಕ ಭಾಷಣದಲ್ಲಿ ದ್ವೇಷದ ಸಂದೇಶಗಳ ಬೆಳೆಯುತ್ತಿರುವ ಸಮ್ಮಿಲನವನ್ನು ಸೂಚಿಸುತ್ತದೆ. ದ್ವೇಷಪೂರಿತ ವಿಷಯಗಳ ವಿರುದ್ಧ ಕಾರ್ಯನಿರ್ವಹಿಸಲು ಸಾಂಸ್ಥಿಕ ಇಚ್ಛಾಶಕ್ತಿಯ ಕೊರತೆ ಸುಸ್ಪಷ್ವವಾಗಿ ಕಾಣುತ್ತಿದೆ.

 ನಮ್ಮ ವರದಿಯಲ್ಲಿನ ಅಧ್ಯಯನದ ಮೂಲಕ ಸೂಕ್ಷ್ಮವಾಗಿ ವಿವರಿಸಿರುವಂತೆ ಮಾಧ್ಯಮದ ಕೆಲವು ವಿಭಾಗಗಳು ದ್ವೇಷಪೂರಿತ ನಿರೂಪಣೆಗಳನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ..  ದಿನನಿತ್ಯ ಮನೆಗಳಲ್ಲಿ  ವೀಕ್ಷಿಸುವ  ಪ್ರೇಕ್ಷಕರು, ಹಾಗೆಯೇ ಸಾಮಾಜಿಕ ಮಾಧ್ಯಮದಲ್ಲಿ ಇದೇ ಪ್ರೇಕ್ಷಕರ  ಉಪಸ್ಥಿತಿಯು, ದ್ವೇಷಪೂರಿತ ನಿರೂಪಣೆಗಳು ಬಹಳ ದೊಡ್ಡ ಸಂಖ್ಯೆಯ ಜನರನ್ನು ತಲುಪುವುದನ್ನು ಖಚಿತಪಡಿಸುತ್ತದೆ. ಚಾನೆಲ್ಗಳ  ವ್ಯಾಪ್ತಿ ಮತ್ತು ಅವಕಾಶದ ಅನುಪಾತದಲ್ಲಿ ಅಸ್ತಿತ್ವದಲ್ಲಿರುವ ಪ್ರಸಾರ ಮೇಲ್ವಿಚಾರಣಾ ಸಂಸ್ಥೆಗಳು ನಿರ್ವಹಿಸುವ ಯಾವುದೇ ಮೇಲ್ವಿಚಾರಣೆಯ ಅಪರ್ಯಾಪ್ತತೆ ಸ್ಪಷ್ಟವಾಗಿದೆ. ನುಡಿ ಮತ್ತು ಅಭಿವ್ಯಕ್ತಿಯ ಅನಿಯಂತ್ರಿತ ಸ್ಥಳವಾಗಿ ಎಷ್ಟೇ ಅದರ  ಪ್ರಯೋಜನಗಳಿದ್ದರೂ  ಸಾಮಾಜಿಕ ಮಾಧ್ಯಮದ ನಿಖರವಾದ ಗುಣಮಟ್ಟವು ದ್ವೇಷದ ಭಾಷಣ ಮತ್ತು ಹಿಂಸಾತ್ಮಕ ವಿಷಯದ ವಾಹಕವಾಗಿ ಗಂಭೀರ ಅಪಾಯಗಳನ್ನು ಒದಗಿಸುತ್ತದೆ. ಸಾಮಾಜಿಕ ಮಾಧ್ಯಮವು ನೀಡುವ ಮುಕ್ತ ಸ್ಥಳವನ್ನು ಉಳಿಸಿಕೊಂಡುಆಳವಾದ ಹಾನಿಕಾರಕ ವಿಷಯವನ್ನು ನಿಯಂತ್ರಿಸುವ ಅಗತ್ಯತೆ ಇದ್ದು, ಅದು ನಮ್ಮ ಕಾಲದ ಅತ್ಯಂತ ತುರ್ತು ಸವಾಲುಗಳಲ್ಲಿ ಒಂದಾಗಿದೆ.

 ಈಶಾನ್ಯ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಲ್ಲಿ  ಸಿ ಎ ಎ ವಿರೋಧಿ ಪ್ರತಿಭಟನಾಕಾರರನ್ನು ತೆರವುಗೊಳಿಸುವುದನ್ನು  ಒಂಟಿಯಾದ ಉದಾಹರಣೆಯಾಗಿ ಕಡೆಗಣಿಸಲಾಗುವುದಿಲ್ಲ.  ಯು ಎ ಪಿ ಎಯ  ಆಯ್ದ ಗುರಿ ಉದ್ದೇಶಿತ ಬಳಕೆಯನ್ನು ನಿರುಪದ್ರವಿ ಎಂದು ನಿರ್ಲಕ್ಷಿಸಲಾಗುವುದಿಲ್ಲ. ಇದು ಕಾನೂನಿನ ಸಂಪೂರ್ಣ ದುರುಪಯೋಗಕ್ಕೆ ಸಮವಾಗುವದು ಮಾತ್ರವಲ್ಲ  ಕ್ರಿಮಿನಲ್ ಅಪರಾಧಗಳ ಕಾನೂನಿನ ಸಾಧನವನ್ನು ಅನ್ವಯಿಸುವ ಮೂಲಕ ಭಿನ್ನಾಭಿಪ್ರಾಯವನ್ನು ತಲೆಯೆತ್ತದಂತೆ ಮಾಡುವ  ಸ್ಥಿರ ಪ್ರವೃತ್ತಿಯನ್ನು ಪ್ರತಿನಿಧಿಸುತ್ತದೆ. ಪ್ರತಿಭಟನಾಕಾರರನ್ನು ಮೌನಗೊಳಿಸಲು ಹಿಂಸಾಚಾರದ ಬಳಕೆ ಮತ್ತು ನಂತರದ ತನಿಖೆಯಲ್ಲಿ  ಯು ಎ ಪಿ ಎ ಕಾನೂನಿನ ಬಳಕೆಯು ಒಟ್ಟಾರೆ ಪ್ರತಿಭಟನೆಯ ಕ್ರಿಯೆಯ ಮೇಲೆ ಗ೦ಭೀರ ನಕಾರಾತ್ಮಕ  ಪರಿಣಾಮವನ್ನು ಬೀರಿದೆ. ಇಂತಹ ಕ್ರಮಗಳು ನಮ್ಮ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತವೆ.

 

 

ಸಾಮರಸ್ಯದ ಪರಸ್ಪರ ಕ್ರಿಯೆಗಳನ್ನು ಸಕ್ರಿಯಗೊಳಿಸಲು ಸಹಾನುಭೂತಿಯ ಚಿಂತನೆ ಮತ್ತು ಕ್ರಿಯೆಯ ಸಾಮರ್ಥ್ಯ,  ಮತ್ತು ಬಹು ಮುಖ್ಯವಾಗಿ ಸಂಘರ್ಷವನ್ನು ಪರಿಹರಿಸುವ ಕಲ್ಪನೆಯು ಬಹುತ್ವ ಸಮಾಜವು ದೀರ್ಘಾವಧಿಯಲ್ಲಿ   ಬದುಕಿ ಉಳಿಯಲು ಬೇಕಾದ ಅಗತ್ಯ ಗುಣಲಕ್ಷಣಗಳಾಗಿವೆ. ಬಹು-ಸಾಂಸ್ಕೃತಿಕ ಸಮಾಜವು ಶಾಂತಿ ಮತ್ತು ಸಾಮರಸ್ಯವನ್ನು ಹುಟ್ಟುಹಾಕುವ, ತನ್ನ ಬಹುತ್ವವನ್ನು ಬಲವೊ೦ದಾಗಿ  ರೂಪಿಸುವ ಆಂತರಿಕ ಪ್ರಕ್ರಿಯೆಗಳಿಗೆ ಕೋಮು ಪ್ರಸಂಗವು ಹಿನ್ನಡೆಯಾಗಿದೆಬದಲಾಗಿ ದ್ವೇಷದ ವಾಸ್ತುಶಿಲ್ಪ ಮತ್ತು ಹಿಂಸೆಯ ಮಾರ್ಗಗಳನ್ನು ಬಲಪಡಿಸಲಾಗಿದೆ ಎಂಬುದು ಸಮಿತಿಯ ಅಭಿಪ್ರಾಯವಾಗಿದೆ. ಸಮುದಾಯಗಳು ಗುಣಪಡಿಸಲು ಮತ್ತು ಪುನಃಸ್ಥಾಪಿಸಲು ತಮ್ಮ ಸಾಮರ್ಥ್ಯದಲ್ಲಿ ಕ್ಷೀಣಿಸುತ್ತಿವೆ. ಭ್ರಾತೃತ್ವ, ಸಮಾನತೆ ಮತ್ತು ಸ್ವಾತಂತ್ರ್ಯದ ಸಂಯೋಜಿತ ಆಚರಣೆಯಲ್ಲಿ ನೆಲೆಗೊಂಡಿರುವ ನ್ಯಾಯದ ಕಡೆಗೆ ರಾಜ್ಯವು ಕಾರ್ಯನಿರ್ವಹಿಸುವುದು ಮಾತ್ರ ಮುಂದಿರುವ ಮಾರ್ಗವಾಗಿದೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು