ಕೆಲಸದ ಸ್ಥಳದಲ್ಲಿ ಅಪಘಾತಗಳು: ಭಾರತದ 'ಸಾವಿನ ಕಾರ್ಖಾನೆಗಳು'

ಅರ್ಚನಾ ಶುಕ್ಲಾ

ಬಿಬಿಸಿ ವ್ಯವಹಾರ ವರದಿ 5 ಸೆಪ್ಟೆಂಬರ್ 2022


Muskan (in photo in the foreground) was among 21 people who died in a fire in Delhi

ಮೇ ತಿಂಗಳಲ್ಲಿ ದೆಹಲಿಯಲ್ಲಿ ಕಾರ್ಖಾನೆಯ ಬೆಂಕಿಯಲ್ಲಿ ಸಾವನ್ನಪ್ಪಿದ 21 ಜನರಲ್ಲಿ ಮುಸ್ಕಾನ್ (ಮುಂಭಾಗದಲ್ಲಿರುವ ಫೋಟೋದಲ್ಲಿ) ಸೇರಿದ್ದರು. 

 

 

"ಇದು ಸಾವುಗಳ ಕಾರ್ಖಾನೆ."

 

ಭಾರತದ ರಾಜಧಾನಿ ದೆಹಲಿಯಲ್ಲಿ ಸುಟ್ಟ ಕಟ್ಟಡದ ಎರಡನೇ ಮಹಡಿಯ ಕಡೆಗೆ ತೋರಿಸುತ್ತಿರುವಾಗ ಇಸ್ಮಾಯಿಲ್ ಖಾನ್ ಕೈ ನಡುಗುತ್ತದೆ.

 

ಅಲ್ಲಿ ಅವನು  ಬೆಂಕಿಯಿಂದ ಸುಟ್ಟುಹೋಗುತ್ತಿದ್ದ ಕಟ್ಟಡದೊಳಗೆ ಹೊಗೆಯಿ೦ದ ಪಾರಾಗಲು ಸಾಧಿಸದೆ   ಹತಾಶಳಾಗಿ ಕೊನೆಯ ಬಾರಿಗೆ ತನ್ನ ತಂಗಿಯನ್ನು ನೋಡಿದನು. 

 

ನಾಲ್ಕು ಅಂತಸ್ತಿನ ಕಟ್ಟಡದಲ್ಲಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕದಲ್ಲಿ ಮೇ ತಿಂಗಳಲ್ಲಿ ಸಂಭವಿಸಿದ ಬೃಹತ್ ಬೆಂಕಿಯಲ್ಲಿ 27 ಮಂದಿ ಸಾವನ್ನಪ್ಪಿದವರಲ್ಲಿ 21 ವರ್ಷದ ಮುಸ್ಕಾನ್ ಸೇರಿದ್ದಳು.

 

ಕಟ್ಟಡದ ಮಾಲೀಕರು ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರಿಂದ ಸಮ್ಮತಿಯ  ಪ್ರಮಾಣಪತ್ರಗಳನ್ನು ಪಡೆದಿದ್ದಿಲ್ಲ, ಹಾಗೆಯೇ , ಕಟ್ಟಡದ ಮೂರು ಮಹಡಿಗಳನ್ನು ಉತ್ಪಾದನಾ ಘಟಕವನ್ನು ನಡೆಸುತ್ತಿದ್ದ ಇಬ್ಬರು ಸಹೋದರರಿಗೆ ಬಾಡಿಗೆಗೆ ಕೊಡುವ  ಮೊದಲು, ಈ ಘಟಕವು ಕಾರ್ಯಾಚರಣೆಗೆ ಅಗತ್ಯವಾದ ಪರವಾನಗಿಗಳನ್ನು ಹೊಂದಿದ್ದಿಲ್ಲ ಎಂದು ದೆಹಲಿ ಪೊಲೀಸರು  ಬೆಂಕಿಯ ನಂತರ ಬಿಬಿಸಿಗೆ ತಿಳಿಸಿದ್ದಾರೆ.

 

ಕಾರ್ಖಾನೆ ಮಾಲೀಕರಿಗೆ ಬಿಬಿಸಿ ಹಲವು ಬಾರಿ ಫೋನ್ ಮಾಡಿದರೂ ಉತ್ತರ ಸಿಗಲಿಲ್ಲ. ಪ್ರಶ್ನೆಗಳನ್ನು ಎಲ್ಲಿ ಕಳುಹಿಸಬಹುದು ಎಂದು ತಿಳಿಸಲು ಅವರ ವಕೀಲರು ನಿರಾಕರಿಸಿದರು.

 

ಹೂಡಿಕೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಸರ್ಕಾರದ ಯೋಜನೆಗಳು ಮತ್ತು ಸುಧಾರಣೆಗಳೊಂದಿಗೆ ಭಾರತವು ಕೈಗಾರಿಕಾ ಶಕ್ತಿ ಕೇಂದ್ರವಾಗಲು ಗುರಿಯನ್ನು ಹೊಂದಿದೆ. ಆದರೆ ದೆಹಲಿ ಬೆಂಕಿಯಂತಹ ದುರಂತಗಳು ತುಂಬಾ ಸಾಮಾನ್ಯವಾಗಿದೆ. ಅದರ ಬೆಲೆಯನ್ನು  ಹತಾಶ ಮತ್ತು ದುರ್ಬಲ ಕಾರ್ಮಿಕರು ಆಗಾಗ್ಗೆ  ಪಾವತಿಸುತ್ತಾರೆ.

 

 

The five-storey building in Mundka, Delhi where the fire accident took place

 

 

ದೆಹಲಿಯ ಕಟ್ಟಡದ ಬೆಂಕಿಯಲ್ಲಿ ಇಪ್ಪತ್ತೇಳು ಕಾರ್ಮಿಕರು ಸಾವನ್ನಪ್ಪಿದರು

 

 

ಕೈಗಾರಿಕಾ ಅಪಘಾತಗಳು ನೂರಾರು ಜನರನ್ನು ಕೊಲ್ಲುತ್ತವೆ ಮತ್ತು ಪ್ರತಿವರ್ಷ ಸಾವಿರಾರು ಜನರು ಶಾಶ್ವತವಾಗಿ ಅಂಗವಿಕಲರಾಗುತ್ತಾರೆ.ಎಂದು ಕೇ೦ದ್ರ ಸಚಿವರು 2021 ರಲ್ಲಿ ಸಂಸತ್ತಿಗೆ ತಿಳಿಸಿದರು . ಐದು ವರ್ಷಗಳಲ್ಲಿ ಕಾರ್ಖಾನೆಗಳು, ಬಂದರುಗಳು, ಗಣಿಗಳು ಮತ್ತು ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುವಾಗ ಕನಿಷ್ಠ 6,500 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎ೦ದು ಈ ಕ್ಷೇತ್ರದಲ್ಲಿ ವರ್ಷಗಳ ಕಾಲ ಕೆಲಸ ಮಾಡಿದ ಕಾರ್ಮಿಕ ಕಾರ್ಯಕರ್ತರು ಬಿಬಿಸಿಗೆ ತಿಳಿಸಿದರು, ಇದರಲ್ಲಿ ಅನೇಕ ಘಟನೆಗಳು ವರದಿಯಾಗಿಲ್ಲ ಅಥವಾ ದಾಖಲಾಗಿಲ್ಲ.

 


ಜಾಗತಿಕ ಕಾರ್ಮಿಕರ ಒಕ್ಕೂಟ ಇಂಡಸ್ಟ್ರಿಯಾಲ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಉತ್ಪಾದನೆ, ರಾಸಾಯನಿಕಗಳು ಮತ್ತು ನಿರ್ಮಾಣದಂತಹ ಕ್ಷೇತ್ರಗಳು ಭಾರತದಲ್ಲಿ ಹೆಚ್ಚು ಸಾವುನೋವುಗಳನ್ನು ವರದಿ ಮಾಡಿದೆ. 2021 ರಲ್ಲಿ ಭಾರತೀಯ ಉತ್ಪಾದನಾ ಉದ್ಯಮಗಳಲ್ಲಿ ಪ್ರತಿ ತಿಂಗಳು ಸರಾಸರಿ ಏಳು ಅಪಘಾತಗಳು ವರದಿಯಾಗಿದ್ದು, 162 ಕ್ಕೂ ಹೆಚ್ಚು ಕಾರ್ಮಿಕರು ಆ ವರ್ಷದಲ್ಲಿ ಸಾವನ್ನಪ್ಪಿದ್ದಾರೆ.

 

ಕಾರ್ಮಿಕರು  "ಸಣ್ಣ, ನೋಂದಾಯಿಸದ ಕಾರ್ಖಾನೆಗಳಲ್ಲಿ" ಹೆಚ್ಚಾಗಿ ಕೈಗಾರಿಕಾ ಅಪಘಾತಗಳನ್ನು ಅನುಭವಿಸುವರು    ಎಂದು ಸೂಚಿಸಿದೆ.   ಬಲಿಪಶುಗಳು ಸಾಮಾನ್ಯವಾಗಿ ಬಡ ಕಾರ್ಮಿಕರು ಅಥವಾ ವಲಸಿಗರು. ಅವರ ಕುಟುಂಬಗಳು ಕಾನೂನು ಹೋರಾಟಗಳನ್ನು ಹೋರಾಡಲು ಸಂಪನ್ಮೂಲಗಳನ್ನು ಹೊಂದಿಲ್ಲ.

 

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಕಾರ್ಮಿಕ ಆಯುಕ್ತರಿಗೆ ಮತ್ತು ಕೇ೦ದ್ರದ ಕಾರ್ಮಿಕ ಸಚಿವಾಲಯದ ಅಧಿಕಾರಿಗಳಿಗೆ BBC ಇಮೇಲ್‌ನಲ್ಲಿ ಪ್ರಶ್ನೆಗಳನ್ನು ಕಳುಹಿಸಿದೆ, ಆದರೆ ಇನ್ನೂ ಪ್ರತಿಕ್ರಿಯೆಗಳನ್ನು ಸ್ವೀಕರಿಸಿಲ್ಲ.

 

'ನನಗೆ ನ್ಯಾಯ ಬೇಕು'

 

ರಾಕೇಶ್ ಕುಮಾರ್ ಮಧ್ಯರಾತ್ರಿ ಕಿರುಚಾಡುತ್ತಾ ಆಗಾಗ ಏಳುತ್ತಾರೆ. ದೆಹಲಿಯ ಕಾರ್ಖಾನೆಯಲ್ಲಿನ ಬೆಂಕಿಯಲ್ಲಿ ಅವರು ತಮ್ಮ ಮೂವರು ಹೆಣ್ಣು ಮಕ್ಕಳನ್ನು ಕಳೆದುಕೊಂಡರು. ಅವರು ವೈ-ಫೈ ರೂಟರ್‌ಗಳನ್ನು ಜೋಡಿಸುವ ಉದ್ಯೋಗವನ್ನು ತಿಂಗಳಿಗೆ 8,000 ರೂಪಾಯಿಗಳ ವೇತನಕ್ಕೆ   ಮಾಡುತ್ತಿದ್ದರು. 

 

"ನನ್ನ ಹೆಣ್ಣುಮಕ್ಕಳು ತುಂಬಾ ನೋವನ್ನು ಅನುಭವಿಸಿರಬೇಕು" ಎಂದು ಅವರು ಹೇಳುತ್ತಾರೆ.

Portraits of Rakesh Kumar's three daughters at his home

ರಾಕೇಶ್ ಕುಮಾರ್ ದೆಹಲಿಯ ಫ್ಯಾಕ್ಟರಿ ಬೆಂಕಿಯಲ್ಲಿ ತನ್ನ ಮೂವರು ಹೆಣ್ಣು ಮಕ್ಕಳನ್ನು ಕಳೆದುಕೊಂಡರು

 

ಬೆಂಕಿಯ ನಂತರ ಅವರ ಸುಟ್ಟ ಅವಶೇಷಗಳನ್ನು ಗುರುತಿಸಲು ಪೊಲೀಸರು ಅವರನ್ನು ಡಿಎನ್‌ಎ ಪರೀಕ್ಷೆಗೆ ಕರೆಯುವವರೆಗೂ ಕುಟುಂಬವು ಅವರ ಬಗ್ಗೆ ಸುದ್ದಿಗಾಗಿ ಕಾಯುತ್ತಲೇ ಇದ್ದರು.  ಬೆಂಕಿಯ ನಂತರ ಒಂದು ತಿಂಗಳ ನಂತರ ಅವರ ಹೆಣ್ಣುಮಕ್ಕಳನ್ನು ಅಂತಿಮವಾಗಿ ದಹಿಸಲಾಯಿತು.

 

"ನಾನು ಅವರಿಗೆ ನ್ಯಾಯವನ್ನು ಬಯಸುತ್ತೇನೆ," ಶ್ರೀ ಕುಮಾರ್ ಹೇಳುತ್ತಾರೆ.

ಆಗಸ್ಟ್‌ನಲ್ಲಿ ದೆಹಲಿ ಪೊಲೀಸರು ಪ್ರಕರಣದ ಐವರು ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪಗಳನ್ನು ಸಲ್ಲಿಸಿದ್ದರು. ಅವುಗಳು  ಕೊಲೆ  ಮತ್ತು ನಿರ್ಲಕ್ಷ್ಯದಿಂದ ಸಾವನ್ನು ಉಂಟುಮಾಡುವ ಪ್ರಯತ್ನದ ಅಪರಾಧಗಳನ್ನು  ಒಳಗೊಂಡಿವೆ.

 

ದೆಹಲಿಯ ಟ್ರೇಡ್ ಯೂನಿಯನ್ ಕಾರ್ಯಕರ್ತ ರಾಜೇಶ್ ಕಶ್ಯಪ್, ಭಾರತದ ರಾಜಧಾನಿ ಮತ್ತು ಅದರ ಉಪನಗರಗಳಲ್ಲಿನ ಅನೇಕ ಕಾರ್ಖಾನೆಗಳು ಕನಿಷ್ಠ ಒಂದಾದರೂ ಕೈಗಾರಿಕಾ ಅಥವಾ ಸುರಕ್ಷತಾ ಕಾನೂನನ್ನು ಉಲ್ಲಂಘಿಸುತ್ತವೆ ಎಂದು ಆರೋಪಿಸಿದ್ದಾರೆ, ಆದರೆ ಅವರ ವಿರುಧ್ಧ ಕ್ರಮ ಕೈಗೊಳ್ಳುವುದು ಅಪರೂಪ.

 

ಅನೇಕ ಕೈಗಾರಿಕಾ ಅಪಘಾತಗಳಲ್ಲಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗುವ ಸಂದರ್ಭದಲ್ಲಿ ಪ್ರಕರಣಗಳು ತೀರ್ಮಾನವಾಗದೆ ವರ್ಷಗಟ್ಟಲೆ ನ್ಯಾಯಾಲಯದ ಮು೦ದೆ ಕೊಳೆಯುತ್ತವೆ ಎಂದು ಅವರು ಮತ್ತು ಇತರ ಕಾರ್ಮಿಕ ಕಾರ್ಯಕರ್ತರು ಆರೋಪಿಸಿದ್ದಾರೆ.

ದೆಹಲಿ ಪೊಲೀಸರ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ರಾಜಧಾನಿಯಲ್ಲಿ 663 ಕಾರ್ಖಾನೆ ಅಪಘಾತಗಳು ದಾಖಲಾಗಿವೆ, ಅದರಲ್ಲಿ 245 ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತಗಳಿಗೆ ಸಂಬಂಧಿಸಿದಂತೆ ಸುಮಾರು 84 ಜನರನ್ನು ಬಂಧಿಸಲಾಗಿದೆ.

 

ಈ ರೀತಿಯ ಪ್ರಕರಣಗಳಲ್ಲಿ ಆರಂಭಿಕ ತನಿಖೆಯು ಸಾಮಾನ್ಯವಾಗಿ ದೋಷಪೂರಿತವಾಗಿದೆ ಎಂಬ ಕಾರ್ಮಿಕ ಕಾರ್ಯಕರ್ತರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, "ತಪ್ಪಿತಸ್ಥರ ವಿರುದ್ಧ ತಕ್ಷಣದ ಕ್ರಮ" ವನ್ನು ಖಚಿತಪಡಿಸಿಕೊಳ್ಳಲು  ಪ್ರಯತ್ನಿಸುತ್ತಿದ್ದಾಗಿ  ಪೊಲೀಸರು ಹೇಳುತ್ತಾರೆ. ಆದರೆ, ಫೋರೆನ್ಸಿಕ್ ಫಲಿತಾಂಶಗಳು ಮತ್ತು ತಾಂತ್ರಿಕ ತಜ್ಞರ ಅಭಿಪ್ರಾಯಗಳನ್ನು ಪಡೆಯುವಲ್ಲಿ ವಿಳಂಬ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಅನೇಕ ಸಂದರ್ಭಗಳಲ್ಲಿ ಅಪರಾಧ ನಿರ್ಣಯಗಳು ಸಂಭವಿಸುವುದಿಲ್ಲ ಎಂದು ಅವರು ಒಪ್ಪುತ್ತಾರೆ.

 

ಪರಿಹಾರಕ್ಕಾಗಿ ಹೋರಾಟ

 

BBC ಹಲವಾರು ಕುಟುಂಬಗಳನ್ನು ಭೇಟಿ ಮಾಡಿತು.  ಅವರು ಇನ್ನೂ ತಮ್ಮ ಪ್ರೀತಿಪಾತ್ರರ ನಷ್ಟದಿಂದ ಅಳಲುತ್ತಿದ್ದಾರೆ.   ಮೃತರಲ್ಲಿ  ಅನೇಕರು  ಕುಟು೦ಬದ ಗಳಿಕೆಯ ಏಕ ಸದಸ್ಯರಾಗಿರ ಬಹುದು.  

 

ಆದರೆ ಕಾನೂನು ತೊಡಕುಗಳು  ಮತ್ತು ಇತರ  ಅಂಶಗಳ ಕಾರಣ  ಕಂಪನಿಗಳಿಂದ ಪರಿಹಾರವನ್ನು ಪಡೆಯಲು  ಕಷ್ಟವಾಗಬಹುದು.

 

ಹಲವಾರು ಕಾರ್ಮಿಕರ ಪರಿಹಾರ ಪ್ರಕರಣಗಳಲ್ಲಿ ಕೆಲಸ ಮಾಡಿದ ಹಿರಿಯ ವಕೀಲರು, ಅಂತಹ ಕಾನೂನು ಪ್ರಕ್ರಿಯೆಗಳು ಸಾಮಾನ್ಯವಾಗಿ ಅನೇಕ ವರ್ಷಗಳವರೆಗೆ ನಡೆಯುತ್ತವೆ ಎಂದು ಬಿಬಿಸಿಗೆ ತಿಳಿಸಿದರು.

 

Sangeeta Roy

ಸಂಗೀತಾ ರಾಯ್ ಮೂರು ವರ್ಷಗಳ ಹಿಂದೆ ಕೆಲಸದ ಸ್ಥಳದಲ್ಲಿ ಅಪಘಾತದಲ್ಲಿ ತನ್ನ ಕೈಯನ್ನು ಕಳೆದುಕೊಂಡರು

 

ಆಗಾಗ್ಗೆ, ಸರ್ಕಾರವು ಕುಟುಂಬಗಳಿಗೆ ಒಂದು ದೊಡ್ಡ ಮೊತ್ತದ ಪಾವತಿಯನ್ನು ಘೋಷಿಸುತ್ತದೆ, ಇದು ಕಂಪನಿಗಳಿಂದ ಪರಿಹಾರದ ಬೇಡಿಕೆಯಿ೦ದ  ಗಮನ ತಪ್ಪಿಸುತ್ತದೆ.

 

ಪ್ರಕರಣವನ್ನು ಕೈಗೆತ್ತಿಕೊಳ್ಳುವ ಹೊತ್ತಿಗೆ, ವಲಸೆ ಕಾರ್ಮಿಕರ ಕುಟುಂಬಗಳು - ಅವರ ನಷ್ಟದಿ೦ದಾದ ನೋವು ಮತ್ತು ಕ್ಷೀಣತೆ ಅನುಭವಿಸುತ್ತಾ   - ಉದ್ಯೋಗದ ಹುಡುಕಾಟದಲ್ಲಿ ತಮ್ಮ ಹಳ್ಳಿಗೆ ಅಥವಾ ಬೇರೆ ನಗರಕ್ಕೆ ಮರಳಿರಬಹುದು.

 

“ಸುದೀರ್ಘ, ಸಂಕೀರ್ಣ ಪ್ರಕ್ರಿಯೆಗಳಿಂದ ಕಾರ್ಮಿಕರಿಗೆ ಕಾನೂನು ವ್ಯವಸ್ಥೆಯಲ್ಲಿ ಹೆಚ್ಚಿನ ನಂಬಿಕೆಯಿಲ್ಲ. ಹಾಗಾಗಿ, ಅವರು ಸರ್ಕಾರದಿಂದ ಪರಿಹಾರ ಅಥವಾ ಸಹಾಯಧನ ಎಂದು ಪಡೆದ ಯಾವುದೇ ಹಣವನ್ನು ತೆಗೆದುಕೊಂಡು ಹೋಗುತ್ತಾರೆ," ಎಂದು  ಹೇಳುತ್ತಾರೆ, ಅನೌಪಚಾರಿಕ ಕಾರ್ಮಿಕರಿಗೆ ಸಹಾಯ ಮಾಡುವ ನಾಗರಿಕ ಸಮಾಜದ ಸಂಘಟನೆಯೊ೦ದಕ್ಕೆ ಸೇರಿದ  ಚ೦ದನ್ ಕುಮಾರ್. .

 

2018 ರಲ್ಲಿ ದೆಹಲಿಯ ಫ್ಯಾಕ್ಟರಿ ಬೆಂಕಿಯಲ್ಲಿ 17 ಕಾರ್ಮಿಕರು ಸಾವನ್ನಪ್ಪಿದ ಸಂತ್ರಸ್ತರ ಕುಟುಂಬಗಳನ್ನು ಸಂಪರ್ಕಿಸಲು BBC ಪ್ರಯತ್ನಿಸಿತು, ಆದರೆ ಬಹುತೇಕ ಎಲ್ಲರೂ ನಗರವನ್ನು ತೊರೆದಿದ್ದರು.

 

ಈ ಅಪಘಾತಗಳಿಂದ ಅಂಗವಿಕಲರ ಪ್ರಕರಣವೂ ಇದೇ ಆಗಿದೆ.

50 ವರ್ಷದ ಸಂಗೀತಾ ರಾಯ್ ಮೂರು ವರ್ಷಗಳ ಹಿಂದೆ ತಮ್ಮ ಕಂಪನಿಯಲ್ಲಿ ಕಾರ್ಡ್‌ಬೋರ್ಡ್ ಕತ್ತರಿಸುವ ಯಂತ್ರವನ್ನು ಬಳಸುವಾಗ ಒಂದು ಕೈಯನ್ನು ಕಳೆದುಕೊಂಡರು. ತನ್ನ ಮಾಲೀಕರಿಂದ ಯಾವುದೇ ಪರಿಹಾರವನ್ನು ಪಡೆದಿಲ್ಲ ಮತ್ತು ಗಾಯಗೊಂಡ ಕಾರ್ಮಿಕರಿಗೆ ಸರ್ಕಾರಿ ಪಿಂಚಣಿ ಪಡೆಯಲು ಮೂರು ವರ್ಷಗಳ ಕಾಲ ಕಾಯಬೇಕಾಯಿತು ಎಂದು ಅವರು ಹೇಳುತ್ತಾರೆ.

 

ಕೈಗಾರಿಕಾ ಅಪಘಾತಗಳಿಂದ ಅಂಗವಿಕಲರಾದ ಕಾರ್ಮಿಕರ ಬಗ್ಗೆ ಯಾವುದೇ ಅಧಿಕೃತ ರಾಷ್ಟ್ರೀಯ ಮಾಹಿತಿ ಇಲ್ಲ. ಆದರೆ ಸೇವಾ ಸ೦ಸ್ಥೆ  ಸೇಫ್ ಇನ್ ಇಂಡಿಯಾ ಫೌಂಡೇಶನ್‌ನ ಇತ್ತೀಚಿನ ಸಮೀಕ್ಷೆ - ಇದನ್ನು ಮುಖ್ಯವಾಗಿ ಉತ್ತರ ಭಾರತದಲ್ಲಿ ವಾಹನ ಬಿಡಿಭಾಗಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಮಾಡಲಾಗಿದೆ - 2016 ಮತ್ತು 2022 ರ ನಡುವೆ 3,955 ಗಂಭೀರ ಅಪಘಾತಗಳು ನಡೆದಿವೆ ಎಂದು ಹೇಳುತ್ತದೆ. ಗಾಯಗೊಂಡವರಲ್ಲಿ ಎಪ್ಪತ್ತು ಪ್ರತಿಶತದಷ್ಟು ಜನರು ತಮ್ಮ ಬೆರಳುಗಳನ್ನು ಕಳೆದುಕೊಂಡಿದ್ದಾರೆ ಅಥವಾ ಕೈಗಳನ್ನು ಲೋಹದ ಒತ್ತುವ ಯಂತ್ರವನ್ನು ಬಳಸುವಾಗ ಪುಡಿಮಾಡಿಕೊಂಡಿದ್ದಾರೆ.


ಭಾರತವು ದಕ್ಷಿಣ ಏಷ್ಯಾದಲ್ಲಿ ಪ್ರಮುಖ ವಾಹನ ಉತ್ಪಾದನಾ ಕೇಂದ್ರವಾಗಿದ್ದು, ಅಂದಾಜು 10 ಮಿಲಿಯನ್ ಕಾರ್ಮಿಕರನ್ನು ನೇಮಿಸಿಕೊಂಡಿದೆ. ಉತ್ಪಾದನೆಯ ಹೆಚ್ಚಿನ ಭಾಗವನ್ನು ಸಣ್ಣ ಕಂಪನಿಗಳಿಗೆ ಗುತ್ತಿಗೆ ಮತ್ತು ಉಪಗುತ್ತಿಗೆ ನೀಡಲಾಗುತ್ತದೆ.

 

ಸೇವಾ ಸಂಸ್ಥೆಯ ಸಂಸ್ಥಾಪಕ ಸಂದೀಪ್ ಸಚ್‌ದೇವ ಬಿಬಿಸಿಗೆ ಮಾತನಾಡಿ, ಹಲವು ರಾಜ್ಯಗಳು ಇಂತಹ ಪ್ರಕರಣಗಳನ್ನು ನಿಖರವಾಗಿ ವರದಿ ಮಾಡುವುದಿಲ್ಲ, ಎ೦ದು ತಿಳಿಸಿದ್ದಾರೆ. 

 

ಭವಿಷ್ಯದ ಚಿಂತೆ

 

ಭಾರತವು ತನ್ನ ಕಾರ್ಮಿಕ ಕಾನೂನುಗಳನ್ನು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಮೂಲಕ ಸುಧಾರಿಸಲು ಪ್ರಾರಂಭಿಸಿದೆ, ಅದು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳಿಗೆ ನಿಬಂಧನೆಗಳನ್ನು ಒಳಗೊಂಡಿದೆ.

ಆದರೆ ಹೊಸ ಕಾನೂನುಗಳು ಅನುಸರಣೆಯ ಮಟ್ಟವನ್ನು  ಇನ್ನಷ್ಟು ಕಡಿಮೆಗೊಳಿಸಬಹುದು ಎಂದು ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

 

 

A police officer looks on while fireman douses a fire after an explosion at a cracker factory on the outskirts of Amritsar on August 2020

 

 

ಕೈಗಾರಿಕಾ ಅಪಘಾತಗಳ ಸಂತ್ರಸ್ತರಿಗೆ ಪರಿಹಾರವನ್ನು ಪಡೆಯಲು ಕಷ್ಟವಾಗುತ್ತದೆ.

 

 

ಹಿಂದಿನ ಕಾನೂನು 10 ಅಥವಾ ಅದಕ್ಕಿಂತ ಹೆಚ್ಚಿನ ಕಾರ್ಮಿಕರನ್ನು ಹೊಂದಿರುವ ಯಾವುದೇ ಕಂಪನಿಯು ಸುರಕ್ಷತಾ ಸಮಿತಿಯನ್ನು ಹೊಂದಿರಬೇಕು ಎಂದು ಹೇಳಿದ್ದರೆ, ಪ್ರಸ್ತಾವಿತ ಹೊಸ ಕಾನೂನು ಸಂಖ್ಯೆಯನ್ನು 250 ಕ್ಕೆ ಏರಿಸಿದೆ.

 

ಆದರೆ 2016 ರ ಆರ್ಥಿಕ ಜನಗಣತಿಯ ಪ್ರಕಾರ, ಒಟ್ಟು ಕೃಷಿಯೇತರ ಸಂಸ್ಥೆಗಳಲ್ಲಿ ಕೇವಲ 1.66%, ಉತ್ಪಾದನೆಯಲ್ಲಿ 2% ಮತ್ತು ನಿರ್ಮಾಣ ಉದ್ಯಮದಲ್ಲಿ 1.25%  ಘಟಕಗಳು ಮಾತ್ರ 10 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರನ್ನು ನೇಮಿಸಿಕೊಂಡಿದೆ.

 

ಭಾರತದ 90% ಉದ್ಯೋಗಿಗಳನ್ನು ಹೊಂದಿರುವ ಅನೌಪಚಾರಿಕ ಆರ್ಥಿಕತೆಗೆ ಯಾವುದೇ ಅ೦ಕೆ-ಸ೦ಖ್ಯೆಗಳು  ಲಭ್ಯವಿಲ್ಲ.

 

ಅನೇಕ ಕಂಪನಿಗಳು ಖಾಯ೦  ಕಾರ್ಮಿಕರ ಸ್ಥಳದಲ್ಲಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಲು ತೊಡಗಿವೆ. ಇದು ಕಾರ್ಮಿಕರ ಹಕ್ಕುಗಳನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎಂದು ವಕೀಲೆ ಮತ್ತು ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ಸುಧಾ ಭಾರದ್ವಾಜ್ ಹೇಳುತ್ತಾರೆ.

ಉದ್ಯೋಗ ಕಳೆದುಕೊಳ್ಳುವ  ಹೆದರುವಿಕೆಯು ಕಾರ್ಮಿಕರನ್ನು ಸಂಘಗಳಿಗೆ ಸೇರಲು ಹಿಂದೇಟು ಹಾಕುವಂತೆ ಮಾಡಿದೆ.

 

ಕಂಪನಿಗಳಿಗೆ ಪ್ರಕ್ರಿಯೆಯನ್ನು ಸುಲಭಗೊಳಿಸುವ ಪ್ರಯತ್ನದಲ್ಲಿ ಸರ್ಕಾರವು ಕೆಲಸದ ಸ್ಥಳ ತಪಾಸಣೆಗಾಗಿ ನಿಯಮಗಳನ್ನು ಬದಲಾಯಿಸಿದೆ. ಪ್ರಸ್ತುತ, ಕಾರ್ಮಿಕ ಅಧಿಕಾರಿಗಳು ಸುರಕ್ಷತಾ ನಿಯಮಗಳ ಅನುಷ್ಠಾನವನ್ನು ಪರಿಶೀಲಿಸುವ ಮತ್ತು ಖಚಿತಪಡಿಸಿಕೊಳ್ಳಲು ಜವಾಬ್ದಾರರಾಗಿರುತ್ತಾರೆ, ಆದರೆ ಅವರ ಪಾತ್ರವು ಹೊಸ ಕೋಡ್‌ಗಳ ಅಡಿಯಲ್ಲಿ ಮಧ್ಯವರ್ತಿಗಳ ಪಾತ್ರಕ್ಕೆ ಬದಲಾಗುತ್ತದೆ.

 

ಇದು ಕಾರ್ಖಾನೆ ಮಾಲೀಕರು ಕಾರ್ಮಿಕರ ಸುರಕ್ಷತೆ ಅಥವಾ ಸಾಮಾಜಿಕ ಭದ್ರತೆಗೆ ಆದ್ಯತೆ ನೀಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಕಾರ್ಮಿಕ ತಜ್ಞರು ಹೇಳುತ್ತಾರೆ.

 

"ಕಾರ್ಮಿಕರ ಸುರಕ್ಷತೆಯು ಅಂತಿಮವಾಗಿ ಯಾರ ಜವಾಬ್ದಾರಿಯೂ ಆಗಿರುವುದಿಲ್ಲ" ಎಂದು ಶೈಕ್ಷಣಿಕ ಮತ್ತು ಕಾರ್ಮಿಕ ಕಾರ್ಯಕರ್ತ ಸಿದ್ದೇಶ್ವರ ಪ್ರಸಾದ್ ಶುಕ್ಲಾ ಹೇಳುತ್ತಾರೆ.

Presentational grey line


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು