ಅಭಿಪ್ರಾಯಮಾಧ್ಯಮ

ಸಿಧ್ಧಾರ್ಥ್ ವರದರಾಜನ್ ಭಾಷಣ ಭಾಗ - ೧

ಭಾರತದ ಪ್ರಜಾಪ್ರಭುತ್ವ ಮತ್ತು ಮಾಧ್ಯಮ ರಕ್ಷಣೆಗೆ ಕರೆ 

ನಮ್ಮ ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುವ ನಿಜವಾದ ಅಪಾಯವನ್ನು ನಾವು ಎದುರಿಸುತ್ತಿರುವಾಗ, ಮುಖ್ಯವಾದದ್ದು ನಾವು ವಿಪತ್ತಿನಿಂದ ನಮ್ಮನ್ನು ಹಿಂದೆಗೆದುಕೊಳ್ಳುವದು ಸಾಧ್ಯ  ಮತ್ತು ನಮ್ಮನ್ನು ಹಿಂದೆಗೆದುಕೊಳ್ಳುತ್ತೇವೆ  ಎಂದು ನಂಬುವುದು. 

An SOS for India's Democracy and Media

ಮಾಧ್ಯಮರಾಜಕೀಯಗಳು21/APR/2022    ‘ದಿ ವಯರ್’

“ಇದು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಲೇಖಕರು ಏಪ್ರಿಲ್ 15, 2022 ರಂದು ನೀಡಿದ OP ಜಿಂದಾಲ್ ವಿಶಿಷ್ಟ ಉಪನ್ಯಾಸ ‘ದಿ ವಯರ್’ನಲ್ಲಿ  ಪ್ರಕಟಿಸಲಾಗಿದ್ದು, ಅದರಿ೦ದ  ಆಯ್ದ  ಪಠ್ಯ.”

******************************************************************************************************

ಭಾರತದ ಪ್ರಜಾಪ್ರಭುತ್ವವು ಯಾವಾಗಲೂ ಪರಿಪೂರ್ಣತೆಗಿಂತ ಕಡಿಮೆಯಾಗಿದೆ ಮತ್ತು ಅದರ ಮಾಧ್ಯಮಗಳು ಆ ಅಪೂರ್ಣತೆಗಳನ್ನು ಪ್ರತಿಬಿಂಬಿಸುತ್ತವೆ. ಇಂದು ನಾವು ಇವೆರಡರ ಜೀವನದಲ್ಲಿ ವಿಶೇಷವಾಗಿ ಅಪಾಯಕಾರಿ ಕ್ಷಣದಲ್ಲಿದ್ದೇವೆ.

ಭವಿಷ್ಯದ ಇತಿಹಾಸಕಾರರು ‘ಹೊಸ ದೆಹಲಿಯನ್ನು ಒಂದು ದಿನದಲ್ಲಿ ನಾಶಪಡಿಸಲಿಲ್ಲ’ ಎಂದು ಸಮ೦ಜಸವಾಗಿ ಹೇಳಬಹುದು. ಹಾಗೆಯೇ ಇ೦ದಿನ ಸ್ಥಿತಿ ಅನೇಕ ವರ್ಷಗಳಿ೦ದ ರಚನೆಯಲ್ಲಿತ್ತು.

ಆದರೆ ನರೇಂದ್ರ ಮೋದಿ, ಅವರ ಪಕ್ಷ ಮತ್ತು ಅವರ ಸರ್ಕಾರದಿಂದ ಭಾರತೀಯ ಪ್ರಜಾಪ್ರಭುತ್ವದ ಕಟ್ಟೋಣವು ತುಂಬಾ ದುರುಳವಾಗಿ ಮತ್ತು ಉದ್ದೇಶಪೂರ್ವಕವಾಗಿ ಹಾನಿಗೊಳಗಾಗಿದೆ ಎಂದು ಗುರುತಿಸುವ ಪ್ರಾಮಾಣಿಕತೆಯನ್ನು ನಾವು ಹೊಂದಿರಬೇಕು  1977 ರಲ್ಲಿ ಇಂದಿರಾ ಗಾಂಧಿ ಅವರು ಎರಡು ವರ್ಷಗಳ "ತುರ್ತು ಪರಿಸ್ಥಿತಿ" ಹೇರಿದ ನಂತರ ಅಧಿಕಾರದಿಂದ ಹೊರಗುಳಿದ ಸಂದರ್ಭದಲ್ಲಿ ಭಾರತ ಪಡೆದುಕೊ೦ಡ ಸುಲಭ ವಿಮೋಚನೆಯ   ರೀತಿಯ ಅನುಭವದ೦ತಲ್ಲ ಇ೦ದು ನಾವು ಅನುಭವಿಸುತ್ತಿರುವ  ಅಪೂರ್ವ ಬದಲಾವಣೆಯ ಸಮಯ. 

ಇದರಿಂದ ನಾವು ಇಂದು ಸುಲಭವಾಗಿ ಮುಕ್ತಿ ಹೊಂದಲು ಸಾಧ್ಯವಿಲ್ಲ. 

ನಾನು  ಏಕೆ ಹೀಗೆ ಹೇಳಲಿ? ಒಂದು, ಇಂದಿನ ಅಘೋಷಿತ ತುರ್ತು ಪರಿಸ್ಥಿತಿಯು ಒಬ್ಬ ನಾಯಕನ ಹುಚ್ಚಾಟಿಕೆ ಅಥವಾ ಅಭದ್ರತೆಯ ಉತ್ಪನ್ನವಲ್ಲ, ಆದರೆ ಹಿಂದುತ್ವದ ಯೋಜನೆಯಾದ 1925 ರಿಂದ ಕಾರ್ಯಗತವಾಗಿರುವ ಯೋಜನೆಯ ಅನುಷ್ಠಾನದಲ್ಲಿ ಒಂದು ಮೈಲಿಗಲ್ಲನ್ನು ಗುರುತಿಸುತ್ತದೆ.

ಮಾಧ್ಯಮದ ಪುರಾವೆಯನ್ನು ಪರಿಗಣಿಸಿ. 1977 ರ ಹೊತ್ತಿಗೆ, ಹೆಚ್ಚಿನ ಮಾಧ್ಯಮ ಸಂಸ್ಥೆಗಳು 'ಕೇವಲ ಬಾಗುವುದನ್ನು ಮಾತ್ರವಲ್ಲದೆ ತೆವಳುವುದನ್ನು’ (‘chosen not just to bend but crawl’),  ಕುಖ್ಯಾತವಾಗಿ, ಆರಿಸಿಕೊಂಡವರೂ ಸಹ, ಶ್ರೀಮತಿ ಗಾಂಧಿಯವರು ತಮ್ಮ ಮೇಲೆ ಹೇರಿದ ನಿರ್ಬಂಧಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದವು . ಆದರೆ ಇಂದು, ಮಾಧ್ಯಮದ ಒಂದು ದೊಡ್ಡ ವಿಭಾಗವು ತನ್ನನ್ನು ಆಳುವ ಶಕ್ತಿಯೊಂದಿಗೆ ಬೆಸೆದುಕೊಂಡಿದೆ ಮತ್ತು ಈ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿರುವ ಪ್ರಜಾಸತ್ತಾತ್ಮಕ ಹಿನ್ನಡೆ ಮತ್ತು ಮುಸ್ಲಿಮರ ಕೋಮುವಾದ ಗುರಿಯನ್ನು ಸಕ್ರಿಯಗೊಳಿಸಲು ಮತ್ತು ವೇಗಗೊಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ. ಮತ್ತೊಂದು ದೊಡ್ಡ ವಿಭಾಗವು ಏನು ನಡೆಯುತ್ತಿದೆ ಎಂಬುದರ ವಾಸ್ತವಾ೦ಶದ ಕುರಿತು ವರದಿ ಮಾಡಲು ಇರುವ ಸ್ವಾತಂತ್ರ್ಯವನ್ನು ಬಳಸಲು ಸಿದ್ಧರಿಲ್ಲ. ಮಾಧ್ಯಮಗಳ ಈ ನಿರಾಸಕ್ತಿಯು ಭಾರತದ ಪ್ರಜಾಪ್ರಭುತ್ವದ ಬಿಕ್ಕಟ್ಟಿಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದೆ.

ಪ್ರಜಾಪ್ರಭುತ್ವವು  ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡುವ ವಿಷಯವಲ್ಲ.  ಅದೊ೦ದು ಜೀವನ ವಿಧಾನ.  ಅದನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಮತ್ತು ವಿಸ್ತರಿಸಲು  ಹೋರಾಡಬೇಕಾಗಿದೆ. ಪ್ರಸ್ತುತ ಭಾರತದ ಸಂಸತ್ತನ್ನು ಹೊಂದಿರುವ ಕಟ್ಟಡದಲ್ಲಿಯೇ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವಕ್ಕಾಗಿ ಸ್ಮಾರಕವನ್ನು ಯೋಜಿಸುತ್ತಿದ್ದಾರೆ ಎಂಬುದು ಒ೦ದು ವಿಪರ್ಯಾಸ. ಭಾರತದ ಪಾರಂಪರಿಕ ಸಂರಕ್ಷಣಾ ಕಾನೂನುಗಳನ್ನು ಧಿಕ್ಕರಿಸಿ ನೆಹರೂ ಸ್ಮಾರಕವನ್ನು ಮರೆಮಾಚಲು ನಿರ್ಮಿಸಲಾದ ದೆಹಲಿಯಲ್ಲಿರುವ ಕೊಳಕು ಹೊಸ 'ಪ್ರಧಾನಿಗಳ ವಸ್ತುಸಂಗ್ರಹಾಲಯ'ಕ್ಕೆ ಮೊದಲ ಟಿಕೆಟ್ ಖರೀದಿಸಿದ ನಂತರ - ಶ್ರೀ ಮೋದಿ ಅವರು ತಮ್ಮ 'ಭಾರತೀಯ ಪ್ರಜಾಪ್ರಭುತ್ವದ ವಸ್ತುಸಂಗ್ರಹಾಲಯ'ವನ್ನು 2025 ರಲ್ಲಿ ಉದ್ಘಾಟಿಸಲು ಆಶಿಸುತ್ತಿದ್ದಾರೆ. ಆ ವರ್ಷವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮ ಶತಮಾನೋತ್ಸವವನ್ನು ಗುರುತಿಸುತ್ತದೆ. ಸ೦ಘವು  ಪ್ರಧಾನ ಮಂತ್ರಿ ಮತ್ತು ಅವರ ಹೆಚ್ಚಿನ ನಾಯಕರು ಸೇರಿರುವ ಹಿಂದೂ ಪ್ರಾಬಲ್ಯವಾದಿ ಸಂಘಟನೆಯಾಗಿದೆ. ಈ ಪುರುಷರು ತಮ್ಮ ಶತಮಾನೋತ್ಸವವನ್ನು ಇತರ ಮೈಲಿಗಲ್ಲುಗಳೊಂದಿಗೆ ಆಚರಿಸಲು ಇಷ್ಟಪಡುತ್ತಾರೆ. ಮತ್ತು ಅಲ್ಲಿಗೆ ತಲುಪುವ ಕೆಲಸ ಈಗಾಗಲೇ ತೀವ್ರವಾಗಿ ಪ್ರಾರಂಭವಾಗಿದೆ.

1. 'ಪ್ರಗತಿಯಲ್ಲಿರುವ ಒಂದು ಕಾರ್ಯ'

ಜುಲೈ 2021 ರಲ್ಲಿ ದೆಹಲಿಗೆ ಭೇಟಿ ನೀಡಿದಾಗ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ಅವರನ್ನು  ಭಾರತೀಯ ವಿದೇಶಾ೦ಗ ಸಚಿವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ "ಮಾನವ ಹಕ್ಕುಗಳಂತಹ ವಿಷಯಗಳಲ್ಲಿ ಭಾರತ ಸರ್ಕಾರದ ಹಿನ್ನಡೆಯನ್ನು ಹೇಗೆ ಪರಿಗಣಿಸುತ್ತೀರಿ" ಎಂದು ಕೇಳಲಾಯಿತು. ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆ ಮತ್ತು ರಾಜ್ಯತ್ವದ ರದ್ದತಿ, ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿದವರ ದಮನ, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸುವ ಸಾಮೂಹಿಕ ಬಂಧನಗಳು ಮತ್ತು ಹಿಂದುತ್ವ ಸಂಘಟನೆಗಳು ನಡೆಸುವ ದಮನಗಳು, ಮತ್ತು - ದೇಶಾದ್ಯಂತ 50 ಕ್ಕೂ ಹೆಚ್ಚು ಪತ್ರಕರ್ತರು ತಾವು ಬರೆದ ವರದಿಗಳಿಗಾಗಿ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿದ್ದ   ಪತ್ರಕರ್ತರ ಕಿರುಕುಳ - ಇವೆಲ್ಲಾ  ಸ್ಪಷ್ಟವಾಗಿ ಈ  ಪ್ರಶ್ನೆಯ ಗುರಿಯಾಗಿದ್ದುವು.

ಶ್ರೀ. ಬ್ಲಿಂಕೆನ್ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ಜಾಗರೂಕರಾಗಿದ್ದರು, 'ಪ್ರಜಾಪ್ರಭುತ್ವದ ಹಿಂಜರಿತ'ದ ಬಗ್ಗೆ ಅವರ ಮೌಲ್ಯಮಾಪನವನ್ನು ಹದಗೊಳಿಸಿದರು:

"ಪ್ರತಿಯೊಂದು ಪ್ರಜಾಪ್ರಭುತ್ವವೂ  ಪ್ರಗತಿಯಲ್ಲಿರುವ ಒ೦ದು ಕೆಲಸ... ನಮ್ಮದೇ ಪ್ರಜಾಪ್ರಭುತ್ವವು ಹಿಂದೆ ಮತ್ತು ಇಂದು ಎದುರಿಸುತ್ತಿರುವ ಸವಾಲುಗಳನ್ನು ನಾವು ನೋಡಿದ್ದೇವೆ. ಆದರೆ ಇದು ಒಂದರ್ಥದಲ್ಲಿ ಎಲ್ಲ ಪ್ರಜಾಪ್ರಭುತ್ವಗಳಿಗೂ ಸಾಮಾನ್ಯ. ನಾವು ಪರಿಪೂರ್ಣರಲ್ಲ. ….ನಮ್ಮ ಪ್ರಜಾಪ್ರಭುತ್ವದಲ್ಲಿ ನಾವು ಸ್ವಯಂ-ಬಲಪಡಿಸುವ ಕಾರ್ಯವಿಧಾನಗಳನ್ನು ಹೊಂದಿದ್ದೇವೆ.”

ಡಾ. ಎಸ್. ಜೈಶಂಕರ್ ಅವರ ಪ್ರತಿಕ್ರಿಯೆ ಆಧುನಿಕ ರಾಜಕೀಯದ ಭಾಷಾವೈಶಿಷ್ಟ್ಯದಲ್ಲಿ - ಪ್ರಜಾಪ್ರಭುತ್ವದ ಕಡೆಗೆ ಮೋದಿ ಸರ್ಕಾರದ ವರ್ತನೆಯ ಸ್ಪಷ್ಟವಾದ ಹೇಳಿಕೆ. ಮೂರು ವಿಷಯಗಳನ್ನು ಹೇಳಿದರು:

"ಒಂದು, ಹೆಚ್ಚು ಪರಿಪೂರ್ಣ ಒಕ್ಕೂಟದ ಅನ್ವೇಷಣೆಯು ಅಮೆರಿಕದ೦ತೆ ಭಾರತೀಯ ಪ್ರಜಾಪ್ರಭುತ್ವಕ್ಕೂ, ವಾಸ್ತವವಾಗಿ, ಎಲ್ಲಾ ಪ್ರಜಾಪ್ರಭುತ್ವಗಳಿಗೆ, ಅನ್ವಯಿಸುತ್ತದೆ ; 

ಎರಡು,  ಐತಿಹಾಸಿಕವಾಗಿ ಹಿ೦ದೆ ನಡೆದಿದ್ದವನ್ನು ಸೇರಿದಂತೆ (ಯಾವದೇ) ತಪ್ಪುಗಳಾಗಿದ್ದರೂ ಅವನ್ನು ಸರಿಪಡಿಸುವದು  ಎಲ್ಲಾ ರಾಜ್ಯಾಧಿಕಾರಗಳ  ನೈತಿಕ ಹೊಣೆಗಾರಿಕೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ  ಆಚರಿಸಿದ ಹಲವು ನಿರ್ಧಾರಗಳು ಮತ್ತು ನೀತಿಗಳು ಆ ವರ್ಗಕ್ಕೆ ಸೇರುತ್ತವೆ; 

ಮತ್ತು 

ಮೂರನೆಯದಾಗಿ, ಸ್ವಾತಂತ್ರ್ಯಗಳು ಮುಖ್ಯವಾಗಿವೆ,  ಅವುಗಳಿಗೆ ಮೌಲ್ಯವಿದೆ,  ಆದರೆ ಎಂದಿಗೂ ಸ್ವಾತಂತ್ರ್ಯವನ್ನು ಆಡಳಿತವಿಲ್ಲದಿರುವದು ಅಥವಾ ಆಡಳಿತದ ಕೊರತೆ, ಅಥವಾ ಕಳಪೆ ಆಡಳಿತದೊಂದಿಗೆ ಸಮೀಕರಿಸುವುದಿಲ್ಲ. ಅವು ಎರಡು ಸಂಪೂರ್ಣವಾಗಿ ವಿಭಿನ್ನ ವಿಷಯಗಳು.

ಏಪ್ರಿಲ್ 12 ರಂದು ಭಾರತದ ಪ್ರಜಾಪ್ರಭುತ್ವದ ಸ್ಥಿತಿಯ ಬಗ್ಗೆ ಶ್ರೀ ಬ್ಲಿಂಕೆನ್  ತಮ್ಮಅಭಿಪ್ರಾಯಗಳನ್ನು ವಾಷಿಂಗ್ಟನ್‌ನಲ್ಲಿ ಭಾರತೀಯ ವಿದೇಶಾಂಗ ಮತ್ತು ರಕ್ಷಣಾ ಮಂತ್ರಿಗಳೊಂದಿಗಿನ 2+2 ಸಭೆಯಲ್ಲಿ ತಾವಾಗಿಯೇ ಉಚ್ಚರಿಸಿದರು:

“ಮಾನವ ಹಕ್ಕುಗಳನ್ನು ರಕ್ಷಿಸುವಂತಹ ಪ್ರಜಾಪ್ರಭುತ್ವ ಮೌಲ್ಯಗಳ ಬದ್ಧತೆಯಲ್ಲಿ ನಾವು  (ಯು ಎಸ್ ಮತ್ತು ಭಾರತ) ಭಾಗೀದಾರರಾಗಿದ್ದೇವೆ. …. ನಾವು ನಮ್ಮ ಭಾರತೀಯ ಪಾಲುದಾರರೊಂದಿಗೆ ಕ್ರಮವಾಗಿ ತೊಡಗಿಸಿಕೊಳ್ಳುತ್ತೇವೆ ಮತ್ತು ಆ ನಿಟ್ಟಿನಲ್ಲಿ ಕೆಲವು ಸರ್ಕಾರ, ಪೋಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯ ಹೆಚ್ಚಳ ಸೇರಿದಂತೆ ಭಾರತದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನಾವು ಎಚ್ಚರಿಕೆಯಿಂದ ವೀಕ್ಷಿಸುತ್ತಿದ್ದೇವೆ.”

ಇದು ನೇರವಾದ ವಾಗ್ದಂಡನೆಯಾಗಿದ್ದು, ಶ್ರೀ ಬ್ಲಿಂಕೆನ್ ಅವರು ಮಾನವ ಹಕ್ಕುಗಳ ಉಲ್ಲಂಘನೆಯ ಹೆಚ್ಚಳವನ್ನು  ಉಲ್ಲೇಖಿಸಿದಷ್ಟೇ ಅಲ್ಲದೆ  ಭಾರತೀಯ ರಾಜ್ಯದತ್ತ ಬೆರಳು ತೋರಿಸುವ ಬಗ್ಗೆ ತೆರೆದು ಹೇಳಿದ್ದದ್ದು ಅದನ್ನು ಇನ್ನಷ್ಟು ತೀವ್ರಗೊಳಿಸಿತು.

ಒಂದು ಅಥವಾ ಎರಡು ದಿನಗಳ ನಂತರ ಡಾ.ಜೈಶಂಕರ್ ಅವರ ಪ್ರತಿಕ್ರಿಯೆ ಬಂದಿತು. ಭಾರತದ ಬಗ್ಗೆ ತನ್ನ ಅಮೆರಿಕನ್ ಸಹವರ್ತಿ ನೀಡಿದ ರೀತಿಯ ದೃಷ್ಟಿಕೋನಗಳು "ಹಿತಾಸಕ್ತಿಗಳು, ಲಾಬಿಗಳು ಮತ್ತು ವೋಟ್ ಬ್ಯಾಂಕ್‌ಗಳಿಂದ" ನಡೆಸಲ್ಪಡುತ್ತವೆ ಎ೦ದು ಸೂಚಿಸುವದಲ್ಲದೆ  ಭಾರತವು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಇತರೆಡೆ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ತನ್ನದೇ ಅಭಿಪ್ರಾಯಗಳನ್ನು ಹೊಂದಿದೆ,  ಎ೦ದರು.

ಬೈಡೆನ್ ಆಡಳಿತ ಜಾಗತಿಕವಾಗಿ ಅದರ ಹಿ೦ದಿನವರ೦ತೆ ಮಾನವಹಕ್ಕುಗಳನ್ನು ಅನುಕೂಲತೆಯ ಪ್ರಕಾರ ಪರಿಗಣಿಸಬಹುದು. ಆದರೂ ಯು ಎಸ್ ಆಡಳಿತದ  ವಿದೇಶಾ೦ಗ ಇಲಾಖೆಯ ವರದಿಗಳು ಹಿ೦ದೆ ಸಹ ಭಾರತದ ಬಗ್ಗೆ ಅಷ್ಟೇನೂ ಹೊಗಳಿಕೆಯದದಾಗಿದ್ದಿಲ್ಲ.  ಮೊದಿ ಆಡಳಿತಕ್ಕೆ ಸಮಕಾಲೀನರಾಗಿದ್ದ ಅಧ್ಯಕ್ಷರಾದ ಒಬಾಮಾ ಮತ್ತು ಟ್ರಂಪ್ ಅವರು ಭಾರತದ ಮಾನವ ಹಕ್ಕುಗಳ ದಾಖಲೆ ಹದಗೆಡುತ್ತಿರುವ ವರದಿಗಳು ತಮ್ಮ ಮು೦ದೆ ಇದ್ದರೂ ಮೌನವನ್ನು ಆರಿಸಿದರೆ, ಅವರು ಅಧ್ಯಕ್ಷ ಬಿಡೆನ್‌ಗಿಂತ ವಿಭಿನ್ನವಾದ "ಆಸಕ್ತಿಗಳು, ಲಾಬಿಗಳು ಮತ್ತು ಮತ ಬ್ಯಾಂಕ್‌ಗಳಿಂದ" ನಡೆಸಲ್ಪಟ್ಟದ್ದು ಕಾರಣವೇ? 

ಮೊದಿ ಸರ್ಕಾರದ ಸಮರ್ಥನೆಗಾಗಿ ಶ್ರೀ ಜೈಶಂಕರ್ ಮಾಡಿದ ಮೂರು ಅಂಶಗಳನು ನೋಡೋಣ:

ಒ೦ದು, ಶ್ರೀ ಬ್ಲಿಂಕೆನ್ ಸ್ವತಃ ಒಪ್ಪಿಕೊಂಡಂತೆ - 'ಪರಿಪೂರ್ಣ ಒಕ್ಕೂಟ'ದ ಅನ್ವೇಷಣೆ ಭಾರತ ಮತ್ತು ಯುಎಸ್ ಎರಡಕ್ಕೂ ಸಾಮಾನ್ಯವಾಗಿದೆ.  ಅದರಿ೦ದಾಗಿ  ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಬಗ್ಗೆ ನಮಗೆ ಹೇಳಬೇಡಿ ಎ೦ದರು. 

ಜೈಶಂಕರ್ ಮಾಡಿದ ಎರಡನೆಯ ಅಂಶವೆಂದರೆ ಮೋದಿ ಸರ್ಕಾರವು ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು "ನೈತಿಕ ಬಾಧ್ಯತೆ" ಹೊಂದಿದೆ ಮತ್ತು "ತನ್ನ ಅನೇಕ ನಿರ್ಧಾರಗಳ ಮತ್ತು ನೀತಿಗಳ ಮೂಲಕ ಅದನ್ನು ಮಾಡುತ್ತಿದೆ". ಅವರು ಯಾವುದೇ ನಿರ್ದಿಷ್ಟ ನಿರ್ಧಾರಗಳನ್ನು ಗುರುತಿಸಲಿಲ್ಲ ಆದರೆ ಕಾಶ್ಮೀರದ ಸ್ವಾಯತ್ತತೆಯನ್ನು ರದ್ದುಗೊಳಿಸುವುದು, ತಾರತಮ್ಯದ ಪೌರತ್ವ (ತಿದ್ದುಪಡಿ) ಕಾಯಿದೆಯ ಅಂಗೀಕಾರ ಮತ್ತು ಮೊದಿ  ಇನ್ನೊ೦ದೆಡೆ 'ಪ್ರತಿಜ್ಞೆಪೂರೈಸುವದು, ಪರಂಪರೆ ಮರಳಿ ಪಡೆಯುವದು’  ಎ೦ದು ವರ್ಣಿಸಿದ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ಅವರ ಸರ್ಕಾರದ ಒತ್ತಾಯ,  ಇವೆಲ್ಲಾ ಬಿಜೆಪಿಯು 'ಐತಿಹಾಸಿಕ ತಪ್ಪುಗಳು' ಎಂದು ಪರಿಗಣಿಸುವುದನ್ನು  ಹಿಮ್ಮೆಟ್ಟಿಸುವ ವರ್ಗಕ್ಕೆ ಸೇರುತ್ತದೆ ಎಂದು ತೋರುತ್ತದೆ.

ಆದರೆ ಈ ನಿರ್ಧಾರಗಳು ಮತ್ತು ನೀತಿಗಳು ಅಭೂತಪೂರ್ವ ಪ್ರಮಾಣದಲ್ಲಿ ಜನರ ಹಕ್ಕುಗಳ ಉಲ್ಲಂಘನೆಗೆ ಮತ್ತು ಭಾರತೀಯ ಮುಸ್ಲಿಮರು ಅನುಭವಿಸುತ್ತಿರುವ ಅಭದ್ರತೆ ಮತ್ತು ದುರ್ಬಲತೆಯ ಭಾವನೆಗೆ ಕಾರಣವಾಗಿವೆ ಎಂಬುದು ಬೇರೆ ವಿಷಯ. 

ಚಾರಿತ್ರಿಕ ತಪ್ಪುಗಳ ತಿದ್ದುವಿಕೆಗೆ ಉತ್ತೇಜನ ನೀಡುವ ವಾಕ್ಚಾತುರ್ಯವು ಹಿಂದುತ್ವದ ಶಸ್ತ್ರಾಗಾರದ ಭಾಗವಾಗಿದೆ.  ಇದು ಭಾರತದ ಸ್ವಾತಂತ್ರ್ಯದ ಅನ್ವೇಷಣೆಯು ಬ್ರಿಟಿಷ್ ವಸಾಹತುಶಾಹಿಯ ಆಗಮನದ ದಿನದಿ೦ದ  ಅಲ್ಲ ಆದರೆ  ಎಂಟು ಶತಮಾನಗಳ ಹಿಂದೆ 'ಮುಸ್ಲಿಂ ಆಳ್ವಿಕೆ' ಎಂದು ಕರೆಯುವ ಇತಿಹಾಸದ ಮೂಲಕ ಪ್ರಾರಂಭವಾಯಿತು ಎಂದು ನಂಬುತ್ತದೆ. ಶ್ರೀ ಮೋದಿಯವರು ಸ್ವತಃ  '1,200 ವರ್ಷಗಳ ಗುಲಾಮ ಮನಸ್ಥಿತಿಯ' ಬಗ್ಗೆ ಮಾತಾಡಿದ್ದಾರೆ.  ಇದು ನಮ್ಮನ್ನು ಸಿಂಧ್ ಪ್ರಾ೦ತವನ್ನು ಅರಬ್ಬರು ವಶಪಡಿಸಿಕೊಂಡ ಕೆಲವು ನೂರು ವರ್ಷಗಳ ನಂತರ, 9 ನೇ ಶತಮಾನದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ,

ಮೂರನೆಯದಾಗಿ ಮತ್ತು ಸ್ವಲ್ಪ ನಿಗೂಢವಾಗಿ, ಡಾ. ಜೈಶಂಕರ್ ಅವರು ಮೋದಿ ಸರ್ಕಾರವು "ಸ್ವಾತಂತ್ರ್ಯಗಳು", ಅಂದರೆ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಗೌರವಿಸುತ್ತದೆ, ಆದರೆ ಇವುಗಳನ್ನು ಆಡಳಿತದ ಕೊರತೆಯೊಂದಿಗೆ ಸಮೀಕರಿಸಬಾರದು ಎಂದು ಹೇಳಿದರು.  ಇದು ದೆಹಲಿಯಲ್ಲಿ ಭೇಟಿಯಾದ ನಾಗರಿಕ ಸಮಾಜದ ಕಾರ್ಯಕರ್ತರಿಂದ ಶ್ರೀ ಬ್ಲಿಂಕೆನ್ ಅವರು ಕೇಳಿದ ಪ್ರಲಾಪಗಳ ಬಗ್ಗೆ ಎನ್ನುವದರಲ್ಲಿ  ಸಂದೇಹವಿಲ್ಲ.  ಇತ್ತೀಚಿನ ವರ್ಷಗಳಲ್ಲಿ ಭಾರತದ ಶ್ರೇಯಾಂಕವು ತೀವ್ರವಾಗಿ ಕುಸಿದಿರುವ ವಿವಿಧ ಜಾಗತಿಕ ಸ್ವಾತಂತ್ರ್ಯ ಮತ್ತು ಆಡಳಿತ ಸೂಚ್ಯಂಕಗಳ ವಿರುಧ್ಧ ಭಾರತ ಸರ್ಕಾರವು ಈಗಾಗಲೇ "ವಿಶ್ವದ ಸ್ವಯಂ-ನೇಮಿತ ಪಾಲಕರು" ಎಂದು ಈ ವರದಿಗಳ ಮೂಲಗಳನ್ನು ಅಪಹಾಸ್ಯ ಮಾಡಿತ್ತು. ಸ್ವಾತಂತ್ರ್ಯವನ್ನು ಕಳಪೆ ಆಡಳಿತದೊಂದಿಗೆ ಸಮೀಕರಿಸಬಾರದು ಎಂದು ಹೇಳುವ ಮೂಲಕ, ಡಾ. ಜೈಶಂಕರ್ ಅವರು ‘ಸಮಯಕ್ಕೆ ಸರಿಯಾಗಿ ಓಡುವ ರೈಲುಗಳ’ ಹಳೆಯ ಸರ್ವಾಧಿಕಾರಿಯ ನ್ಯಾಯೀಕರಣವನ್ನು ಮರುಬಳಕೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯಕ್ಕೆ ಧಕ್ಕೆಯಾದರೂ ಮೋದಿ ಸರಕಾರ ನೀಡುತ್ತಿರುವುದು ಉತ್ತಮ ಆಡಳಿತ ಎಂಬ ಸಂದೇಶ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ - ಅವರು ತರಬೇತಿ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಾ ಈ ಮೂರನೇ ಅಂಶವನ್ನು ವಿಸ್ತರಿಸಿದರು, "ಯುದ್ಧದ ಹೊಸ ಗಡಿ - ನಾವು ನಾಲ್ಕನೇ ತಲೆಮಾರಿನ ಯುದ್ಧ ಎಂದು ಕರೆಯುತ್ತೇವೆ - ನಾಗರಿಕ ಸಮಾಜ." ನಾಗರಿಕ ಸಮಾಜವನ್ನು, ಅವರು ಹೇಳಿದರು, "ಅದನ್ನು (ನಾಗರಿಕ ಸಮಾಜವನ್ನು) ಬುಡಮೇಲು ಮಾಡಬಹುದು,  ಅಧೀನಗೊಳಿಸಬಹುದು, ಅದು ವಿಭಜಿತ ಕಲ್ಪನೆಯಾಗಬಹುದು, ಅದನ್ನು ಕುಶಲತೆಯಿ೦ದ ಪ್ರಯೋಗಿಸಿ  ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ತರಬಹುದು."

ಒಟ್ಟಾರೆಯಾಗಿ,  ಶ್ರೀಮಾನ್ ದೋವಲ್ ಮತ್ತು ಜೈಶಂಕರ್ ಹೇಳುತ್ತಿರುವುದು ನಾಗರಿಕ ಸಮಾಜದ ಕಾರ್ಯಕರ್ತರು, ಮಾನವ ಹಕ್ಕುಗಳ ರಕ್ಷಕರು, ಪರಿಸರವಾದಿಗಳು, ರೈತ ಸಂಘಗಳು, ದಲಿತ ಮತ್ತು ಆದಿವಾಸಿಗಳ ಹೋರಾಟಗಾರರು, ವಿದ್ಯಾರ್ಥಿಗಳು ಮತ್ತು ಸ್ವತಂತ್ರ ಮಾಧ್ಯಮಗಳ ಕೆಲಸವು  ರಾಷ್ಟ್ರದ ಹಿತಾಸಕ್ತಿಗಳಿಗೆ ಧಕ್ಕೆ ತರಬಹುದು. . ಮತ್ತು  ಉತ್ತಮ ಆಡಳಿತ ಮತ್ತು ಕಾನೂನಿನ ನಿಯಮಗಳ ಆಚರಣೆ ಎ೦ದರೆ ಈ ವಿಧ್ವಂಸಕತೆ,  ಈ ಸ್ವಾತಂತ್ರ್ಯದ ದುರುಪಯೋಗ, ಇವನ್ನು ತಡೆಯುವದು.  ಸಂಕ್ಷಿಪ್ತವಾಗಿ ಹೇಳುವುದಾದರೆ, ನಾಗರಿಕ ಸಮಾಜವು ಅಪಾಯಕಾರಿ (ಮತ್ತು ಅಂತರ್ಗತವಾಗಿ) ಅನಾಗರಿಕವಾಗಿದೆ !

ಅಧಿಕೃ ತ ಆಖ್ಯಾನದ ಪ್ರಕಾರ, ಜನತ೦ತ್ರದ ಏನೇ ದೋಷಗಳಿದ್ದರೂ ಭಾರತದ ಸಾಂವಿಧಾನಿಕ ಸಂಸ್ಥೆಗಳು ಅವನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿವೆ ಎನ್ನುವ ತರ್ಕವಿದೆ.  ಭಾರತೀಯ ಪ್ರಜಾಪ್ರಭುತ್ವದ ಸ್ಥಿತಿಯ ಈ ಸಮರ್ಥನೆಯ ಪರೀಕ್ಷೆಗೆ ನಾವು ಈಗ ತಿರುಗಬೇಕಾಗಿದೆ.

2. 'ಹೆಚ್ಚು ಪರಿಪೂರ್ಣ ಒಕ್ಕೂಟಕ್ಕಾಗಿ ಅನ್ವೇಷಣೆ'

ರಾಜ್ಯ ಕಾರ್ಯದರ್ಶಿ ಬ್ಲಿಂಕನ್ ಅವರು ಪ್ರತಿ ಪ್ರಜಾಪ್ರಭುತ್ವದಲ್ಲಿ 'ಹೆಚ್ಚು ಪರಿಪೂರ್ಣ ಒಕ್ಕೂಟ'ಕ್ಕಾಗಿ 'ಸಾಮಾನ್ಯ ಅನ್ವೇಷಣೆ' ಕುರಿತು ಮಾತನಾಡುವಾಗ ಡಾ.ಜೈಶಂಕರ್ ಅದಕ್ಕೆ ತಾಳ ಹಾಕಿದರೆ ಆಶ್ಚರ್ಯವಿಲ್ಲ. ಆದಾಗ್ಯೂ, ನೆರವಾಗಿ ಹೇಳಬೇಕಾದರೆ,  "ಸಾಮಾನ್ಯ ಅನ್ವೇಷಣೆ" ಯ ಯಾವುದೇ ಚರ್ಚೆಯು ಎರಡು  ದೇಶಗಳ ನಡುವೆ ಇರುವ ಅಜಗಜಾ೦ತರವನು ಗಮನಿಸಬೇಕಾಗಿಬರುತ್ತದೆ. 

ಭಾರತದಂತೆಯೇ, ಯುಎಸ್ ರಾಜಕೀಯವಾಗಿ ತೀವ್ರವಾಗಿ ಧ್ರುವೀಕರಣಗೊಂಡಿದೆ. ಮತ್ತು ಟ್ರಂಪ್ ಆಡಳಿತದ ಕೊನೆಯ ಕೆಲವು ವಾರಗಳಲ್ಲಿ ಅಮೆರಿಕವು ಅಭೂತಪೂರ್ವ ಕ್ರಾಂತಿಗಳಿಗೆ ಒಳಗಾಯಿತು, ಇದು ರಾಜ್ಯದ ಅತ್ಯಂತ ಮೇಲಿನ ಶ್ರೇಣಿಯಿ೦ದ ಉಗಮಿಸಿದ ಕಾನೂನುಬಾಹಿರತೆಯಿಂದ ನಡೆಸಲ್ಪಟ್ಟಿತು. ಅದೇ ರೀತಿಯಲ್ಲಿ, ಭಾರತೀಯರ ಮೂಲಭೂತ ಹಕ್ಕುಗಳನ್ನು ದುರ್ಬಲಗೊಳಿಸುವ ಅನೇಕ ಕ್ರಮಗಳು ರಾಜಕೀಯ ಪರಾಕಾಷ್ಠೆಯಿಂದ ಹೊರಹೊಮ್ಮಿವೆ, ಆದರೆ ಇಲ್ಲಿ ಹೋಲಿಕೆ ತೆಳುವಾಗಿದೆ. 

ಭಾರತದಲ್ಲಿ, ಸಮತೋಲನ ಮಾಡಬೇಕಾದ ಸಂಸ್ಥೆಗಳು ವಹಿಸಿದ ಪಾತ್ರದ ಬಗ್ಗೆ ಮಾತ್ರ  ನಾನು ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. ಮಾಧ್ಯಮಗಳ ವರ್ತನೆ, ಪ್ರಜಾಪ್ರಭುತ್ವಕ್ಕೆ ನಡೆಯುತ್ತಿರುವ ಬೆದರಿಕೆಗಳ ಮುಖದಲ್ಲಿ ತಮ್ಮ ಹೊಣೆಗಾರಿಕೆಯ ಚ್ಯುತಿ, ಅಲ್ಲದೆ ಅದಕ್ಕೂ ಮೀರಿ ಭಾಗೀದಾರಿಕೆಯಿ೦ದ ಕೂಡಿದೆ. ಈ ವಸ್ತುಸ್ಥಿತಿ ಆಳವಾದ ವ್ಯತ್ಯಾಸಗಳನ್ನು ಮಾಡುತ್ತದೆ. ಪ್ರತಿಯೊಂದು "ಸ್ವಯಂ-ಸರಿಪಡಿಸುವ  ಕಾರ್ಯವಿಧಾನಗಳು" - ಮತ ಧರ್ಮ ನಂಬಿಕೆಯನ್ನು ಲೆಕ್ಕಿಸದೆ ನಾಗರಿಕರ ಸಮಾನತೆ, ಮುಕ್ತ ಮಾಧ್ಯಮ, ಸ್ವತಂತ್ರ ನ್ಯಾಯಾಂಗ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆ - ಇವೊ೦ದೊ೦ದೂ ಭಾರತದಲ್ಲಿ ಸಾಕಷ್ಟು ಗೋಚರವಾಗಿ ಮುರಿದುಹೋಗಿವೆ.

ಸಮಸ್ಯೆ ಎಲ್ಲಿದೆ ಎಂಬುದನ್ನು ಎತ್ತಿ ತೋರಿಸಲು ಮೊದಲು ನ್ಯಾಯಾಂಗ, ಮಾಧ್ಯಮ ಮತ್ತು ಚುನಾವಣೆಗಳ ಮೇಲೆ  ಗಮನಹರಿಸುತ್ತೇನೆ. ಅನ೦ತರ ನಾಗರಿಕರ ಸಮಾನತೆಯ ಬಗ್ಗೆ ವ್ಯವಹರಿಸುತ್ತೇನೆ  

ಭಾರತೀಯ ಸಂವಿಧಾನವು ನ್ಯಾಯಾಂಗವನ್ನು ಪ್ರಜಾಪ್ರಭುತ್ವದ ಸ್ವತಂತ್ರ ಸ್ತಂಭವಾಗಿ, ಕಾರ್ಯಾಂಗ ಮತ್ತು ಶಾಸಕಾಂಗದಿಂದ ಭಿನ್ನವಾಗಿ ಪರಿಕಲ್ಪಿಸಿದೆ. ವಾಸ್ತವದಲ್ಲಿ, ಮೂಲಭೂತ ಹಕ್ಕುಗಳು ಅಪಾಯದಲ್ಲಿರುವಾಗ ಕೆಳಮಟ್ಟದ ನ್ಯಾಯಾಂಗವು ಸರ್ಕಾರವನ್ನು ಎದುರು ಹಾಕಿಕೊಳ್ಳುವುದು ಅಪರೂಪ. ಹಾಗೇನಾದರೂ ಮಾಡಿದಲ್ಲಿ,  ಅದರ ನಿರ್ಧಾರಗಳನ್ನು ಸುಲಭವಾಗಿ ಬದಲಾಯಿಸಲಾಗುತ್ತದೆ. 

ಆಕರ್ ಪಟೇಲ್ ಅವರು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾದ ಮಾಜಿ ಮುಖ್ಯಸ್ಥರು ಮತ್ತು ದಿ ಪ್ರೈಸ್ ಆಫ್ ದಿ ಮೋದಿ ಇಯರ್ಸ್‌ (The Price of the Modi Years),  ಮೋದಿಯ ಭಾರತದ ಕುರಿತ ಇತ್ತೀಚಿನ ಪುಸ್ತಕದ ಲೇಖಕರು. ಕಳೆದ ವಾರ, ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡಲು ಅವರು ಹೋಗುತ್ತಿದ್ದಾಗ ಅವರನ್ನು ದೇಶವನ್ನು ತೊರೆಯದಂತೆ ತಡೆಯಲಾಯಿತು. ಕೆಳ ನ್ಯಾಯಾಲಯ - ಈ ಪ್ರಕರಣದಲ್ಲಿ, ವಿಶೇಷ ಕೇಂದ್ರೀಯ ತನಿಖಾ ನ್ಯಾಯಾಲಯ - ಶ್ರೀ ಪಟೇಲ್ ಅವರನ್ನು ನಿಲ್ಲಿಸಿದ ನಿರಂಕುಶ ವಿಧಾನಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು ಮತ್ತು ಅವರನ್ನು ವಿದೇಶಕ್ಕೆ ಹೋಗಲು ಅನುಮತಿಸುವಂತೆ ಆದೇಶಿಸಿತು. ಆದರೂ ಸಿಬಿಐ ಆದೇಶವನ್ನು ನಿರ್ಲಕ್ಷಿಸಿತು, ಮತ್ತು ಶ್ರೀ ಪಟೇಲ್ ಅವರನ್ನು ಎರಡನೇ ಬಾರಿ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದರು.   ಈ ಪ್ರಕರಣದ ಒಂದು ಅಂಶಕ್ಕೆ ಗಮನ ಸೆಳೆಯಲು, ಇಂದು ಭಾರತೀಯರ ಮೂಲಭೂತ ಹಕ್ಕುಗಳನ್ನು ದುರ್ಬಲಗೊಳಿಸುತ್ತಿರುವ ಅಧಿಕಾರಶಾಹಿಯ ಗೈರು ಕಾನೂನು ಅನಿಯಂತ್ರಿತತೆಯ (official arbitrariness) ಅರ್ಥವನ್ನು ಇದು ವಿಶದೀಕರಿಸುತ್ತದೆ.  ಕ್ರಿಮಿನಲ್ ಮೊಕದ್ದಮೆಯಲ್ಲಿ ಪಟೇಲ್ ಅವರನ್ನು ವಿಚಾರಣೆಗೆ ಒಳಪಡಿಸಬೇಕಾಗಿರುವದರಿ೦ದ  ಪಟೇಲ್ ಅವರನ್ನು ವಿಮಾನ ನಿಲ್ದಾಣದಲ್ಲಿ ನಿಲ್ಲಿಸುವಂತೆ ವಲಸೆ ಅಧಿಕಾರಿಗಳಿಗೆ ತಿಳಿಸಲಾಯಿತು. ಆದರೆ ಸಿಬಿಐ ಅವರನ್ನು ಪ್ರಶ್ನಿಸಲು ಬಯಸಿದೆ ಎಂದು ಶ್ರೀ ಪಟೇಲ್ ಅವರಿಗೇ ತಿಳಿಸಲಾಗಿದ್ದಿಲ್ಲ! ಇದೊ೦ದು  ‘ಅ೦ಧೇರ್ ನಗರಿ’ ಗೆ ಸೂಕ್ತವಾದ ಕಥೆ !

ಸಮಸ್ಯೆ ಕೆಳಮಟ್ಟದ ನ್ಯಾಯಾಂಗಕ್ಕೆ ಸೀಮಿತವಾಗಿಲ್ಲ. ಮೋದಿ ಸರ್ಕಾರವು ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ವಿವಿಧ ಅರ್ಜಿಗಳನ್ನು ವ್ಯವಹರಿಸಲು ಭಾರತದ ಸುಪ್ರೀಂ ಕೋರ್ಟ್ ಇನ್ನೂ ಸಮಯವನ್ನು ಕಂಡುಕೊಂಡಿಲ್ಲ. 

ಜಮ್ಮು ಮತ್ತು ಕಾಶ್ಮೀರದ ಜನರಿಗೆ  ಖಾತರಿಪಡಿಸಿದ ಸ್ವಾಯತ್ತತೆ ಮತ್ತು ಅವರ ರಾಜ್ಯತ್ವವನ್ನು ಕಸಿದುಕೊಳ್ಳಲು ಸಂವಿಧಾನದ 370 ನೇ ವಿಧಿಯನ್ನು ವ್ಯಾಖ್ಯಾನಿಸುವ  ವಿಧಾನ ಇವುಗಳಲ್ಲಿ ಮುಖ್ಯವಾದುದು. ಈ ನಿರ್ಧಾರವು ಕಾಶ್ಮೀರ ಕಣಿವೆಯ ನಾಗರಿಕ ಜನಸಂಖ್ಯೆಯ ಮೇಲಿನ ಹಿಂದೆಂದೂ ನೋಡಿರದ ಕಠಿಣ ಮತ್ತು ಸುದೀರ್ಘವಾದ ದಬ್ಬಾಳಿಕೆಯೊಂದಿಗೆ ಸೇರಿದೆ: ಮೂರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಹತ್ತಾರು ಮುಖ್ಯವಾಹಿನಿಯ ರಾಜಕೀಯ ನಾಯಕರನ್ನು ಬಂಧಿಸಲಾಯಿತು ಮತ್ತು ಸೆರೆಯಿಡಲಾಯಿತು. ಇಂಟರ್ನೆಟ್ ಅನ್ನು ತಿಂಗಳುಗಟ್ಟಲೆ ಸ್ಥಗಿತಗೊಳಿಸಲಾಯಿತು. ಮತ್ತು ಮಾಧ್ಯಮದ ಕಾರ್ಯನಿರ್ವಹಣೆಯು ವಾಸ್ತವಿಕವಾಗಿ ಅಸಾಧ್ಯವಾಗಿದೆ. ಸುಮಾರು ಐದು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರಿನ  ಜನತೆ ಚುನಾಯಿತ ಪ್ರತಿನಿಧಿಗಳ ಹಕ್ಕಿನಿಂದ ವಂಚಿತರಾಗಿದ್ದಾರೆ. ಈ ಎಲ್ಲದರಲ್ಲೂ, ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಮಧ್ಯಪ್ರವೇಶವನ್ನು ಕನಿಷ್ಠ ಮಟ್ಟಕ್ಕೆ ಇರಿಸಿದೆ. ಆರ್ಟಿಕಲ್ 370 ಅನ್ನು ನಿರರ್ಥಕಗೊಳಿಸಲು ಬಳಸಿದ ಚಾಕಚಕ್ಯತೆಯು  - ಮೂಲಭೂತವಾಗಿ, ರಾಜ್ಯದ ಚುನಾಯಿತ ಪ್ರತಿನಿಧಿಗಳ ಅಗತ್ಯ ಒಪ್ಪಿಗೆಯನ್ನು ಕೇ೦ದ್ರ ಸರ್ಕಾರದಿಂದ ನೇಮಕಗೊಂಡ ರಾಜ್ಯಪಾಲರ ಒಪ್ಪಿಗೆಯಾಗಿ ಬದಲಾಯಿಸಲಾಗಿದೆ - ನ್ಯಾಯಾಂಗ ಪರಿಶೀಲನೆಯನ್ನು ತಡೆದುಕೊಳ್ಳುವ ಸಾಧ್ಯತೆಯಿಲ್ಲದಿರುವುದರಿಂದ ಬಿಜೆಪಿ ಸರ್ಕಾರ  ನ್ಯಾಯಾಲಯದ ವಿಳಂಬದಿಂದ ಸಾಕಷ್ಟು ಸಂತೋಷದಿ೦ದಿದೆ. ಈ ವಿಷಯವು ತೀರ್ಪಿನ ಹ೦ತಕ್ಕೆ ಬ೦ದಾಗ, ಸಾಕಷ್ಟು ಸಮಯ ಕಳೆದುಹೋಗಿರುವುದು ಸವಾಲನ್ನು ‘ನಿರುಪಯುಕ್ತಗೊಳಿಸಿದೆ’   (ಭಾರತೀಯ ನ್ಯಾಯಾಧೀಶರ ಪ್ರೀತಿಯ ಪದವನ್ನು ಬಳಸುವುದು - ‘rendered the challenge infructuous’   ) ಎಂದು ತೀರ್ಮಾನಿಸಲು ನ್ಯಾಯಾಲಯಕ್ಕೆ  ಸುಲಭವಾಗಿ ಸಾಧಿಸಬಹುದು . ಶ್ರೀ ಮೋದಿಯವರು ಮಾಡಿದ್ದು ಕೇವಲ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯ ಮೇಲಿನ ಆಕ್ರಮಣವಲ್ಲ ಬದಲಿಗೆ ಭಾರತೀಯ ಫೆಡರಲಿಸಂನ (ಗಣ ರಾಜ್ಯ ಪಧ್ಧತಿಯ) ಮೂಲ ರಚನೆಯ ಮೇಲೆ ಎಂಬುದನ್ನು  ಗಮನಿಸಬೇಕು. ‘ಭಾರತ’ವು ವಾಸ್ತವವಾಗಿ ‘ಭಾರತದ ಒಕ್ಕೂಟ’ವಾಗಿದೆ ಮತ್ತು ರಾಷ್ಟ್ರೀಯ ಸಂಸತ್ತಿನಲ್ಲಿನ ತನ್ನ ಬಲದ ಆಧಾರದ ಮೇಲೆ ಕೇಂದ್ರ ಸರ್ಕಾರವು ಯಾವುದೇ ರಾಜ್ಯದ ರಾಜ್ಯತ್ವವನ್ನು ಸುಲಭವಾಗಿ ತೆಗೆದುಹಾಕಿದರೆ, ಅದು ಫೆಡರಲ್ (ಗಣ ರಾಜ್ಯ) ತತ್ವವನ್ನು ಅಪಹಾಸ್ಯ ಮಾಡುತ್ತದೆ. ನಿನ್ನೆ ಜಮ್ಮು ಮತ್ತು ಕಾಶ್ಮೀರಕ್ಕೆ ಮಾಡಿದ್ದನ್ನು ನಾಳೆ ತಮಿಳುನಾಡಿಗೆ ಮಾಡಬಹುದೇ? ನಿಸ್ಸಂಶಯವಾಗಿ, ಇದು ಕಾಶ್ಮೀರಿಗಳ ರಕ್ಷಣೆಗಾಗಿ ಮಾತನಾಡುವ ಕೆಲವೇ ಕೆಲವು ಪ್ರಾದೇಶಿಕ ಪಕ್ಷಗಳಲ್ಲಿ ಒಂದಾದ ಡಿಎಂಕೆಯ ಮನಸ್ಸಿನ ಮುಂಚೂಣಿಯಲ್ಲಿರುವ  ಪ್ರಶ್ನೆಯಾಗಿತ್ತು.

ಅನಾಮಧೇಯ ಚುನಾವಣಾ ಬಾಂಡ್‌ಗಳ ಸಾಂವಿಧಾನಿಕತೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣವನ್ನು ಆಲಿಸಲು ಸುಪ್ರೀಂ ಕೋರ್ಟ್ ದೃಢವಾಗಿ ನಿರಾಕರಿಸಿದೆ. ಮೋದಿ ಸರ್ಕಾರವು 2017-18 ರಲ್ಲಿ ಜಾರಿಗೆ ತ೦ದ  ಈ ಸಾಧನದ ಮೂಲಕ ಸಂಗ್ರಹಿಸಿದ ಎಲ್ಲಾ ಹಣದ ಮುಕ್ಕಾಲು ಭಾಗವನ್ನು ನಿರಂತರವಾಗಿ ಬಿಜೆಪಿಯು ಜೇಬಿಗೆ ಹಾಕಿಕೊಂಡಿದೆ. 2019-2020 ರಲ್ಲಿ, ಇದು 2,555 ಕೋಟಿ ರೂಪಾಯಿಗಳು ಆಗಿತ್ತು. ಬಾಂಡ್‌ಗಳು ಸಾರ್ವಜನಿಕರಿಂದ ಮತ್ತು ಭಾರತದ ಚುನಾವಣಾ ಆಯೋಗದಿಂದ ಗುರುತನ್ನು ಮರೆಮಾಡಲಾಗಿರುವ ಕಾರ್ಪೊರೇಷನ್‌ಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಹಣವಾಗಿದೆ. ಮತ್ತು ಈ ಚುನಾವಣಾ ಹಣಕಾಸು ವಿಧಾನವನ್ನು ಮೋದಿ ಸರ್ಕಾರವು ಹೆಚ್ಚಿನ ಪಾರದರ್ಶಕತೆಯತ್ತ ಒಂದು ಹೆಜ್ಜೆಯಾಗಿ ಪ್ರಸ್ತುತಪಡಿಸಿದೆ! ಅನಾಮಧೇಯ ಬಾಂಡ್‌ಗಳನ್ನು ಪ್ರಶ್ನಿಸುವ ಅರ್ಜಿಯನ್ನು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎ ಡಿ ಆರ್- ADR) ಸೆಪ್ಟೆಂಬರ್ 2017 ರಲ್ಲಿ ಸಲ್ಲಿಸಿದೆ. ಅ೦ದರೆ ಸುಮಾರು ಐದು ವರ್ಷಗಳ ಹಿಂದೆ. ಚುನಾವಣಾ ಆಯೋಗವು ಯೋಜನೆಯನ್ನು "ರಾಜಕೀಯ ಹಣಕಾಸಿನಲ್ಲಿ ಪಾರದರ್ಶಕತೆಯ ಗುರಿಗೆ ವಿರುದ್ಧವಾಗಿದೆ” ಎ೦ದು ವಿರೋಧಿಸಿ ಅಫಿಡವಿಟ್ ಅನ್ನು ಸಲ್ಲಿಸಿತು, ಕೊನೆಯ ಬಾರಿಗೆ ಮಾರ್ಚ್ 2021 ರಲ್ಲಿ ಈ ವಿಷಯವನ್ನು ಆಲಿಸಿದಾಗ, ಎಡಿಆರ್ ಈ ಬಾಂಡ್‌ಗಳ ಮಾರಾಟದ ಮೇಲೆ ಮಧ್ಯಂತರ ತಡೆ ಕೋರಿದಾಗ, ಅದನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ಅಷ್ಟೊತ್ತಿಗಾಗಲೇ ಚುನಾವಣಾ ಆಯೋಗ ಮನಸ್ಸು ಬದಲಿಸಿದಂತಿತ್ತು. ತಾತ್ಕಾಲಿಕ ತಡೆಗೆ  ಕರೆಯನ್ನು ವಿರೋಧಿಸಿತು ಮತ್ತು ಚುನಾವಣಾ ಬಾಂಡ್‌ಗಳನ್ನು ಆಯೋಗವು ಬೆಂಬಲಿಸುತ್ತದೆ  ಆದರೆ ಅವು ಹೆಚ್ಚು ಪಾರದರ್ಶಕವಾಗಿರಬೇಕು ಎಂದು ಹೇಳಿತು. ಏಪ್ರಿಲ್ 5 ರಂದು, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಚುನಾವಣಾ ಬಾಂಡ್‌ಗಳ ವಿಷಯದ ತುರ್ತು ವಿಚಾರಣೆ ಅನುಮತಿಸುವುದಾಗಿ ಹೇಳಿದರು. ಏನಾಗುತ್ತದೆಯೊ ಕಾದು ನೋಡಬೇಕು.

ಅನಾಮಧೇಯ ಚುನಾವಣಾ ಬಾಂಡ್‌ಗಳು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ಒಡ್ಡುವ ಬೆದರಿಕೆಯು ಸ್ಪಷ್ಟವಾಗಿದ್ದರೂ ಸಹ - ಆಡಳಿತಾರೂಢ ರಾಜಕೀಯ ಪಕ್ಷವು ತನ್ನ ಹಣ ಎಲ್ಲಿಂದ ಬರುತ್ತಿದೆ ಎಂಬುದರ ಕುರಿತು ಸಾರ್ವಜನಿಕರಿಗೆ ಯಾವುದೇ ಕಲ್ಪನೆಯಿಲ್ಲದೆ ಅನುಕೂಲಕರ ನೀತಿ ನಿರ್ಧಾರಗಳಿಗೆ ವಿನಿಮಯವಾಗಿ  ಉದಾರ ದೇಣಿಗೆ ಪಡೆದುಕೊಳ್ಳಲು ಕಾರ್ಪೊರೇಟ್‌ಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಬಹುದು -  ಈ ನಿರ್ಣಾಯಕ ವಿಷಯದ ವಿಚಾರಣೆಯನ್ನು ತ್ವರಿತಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಚುನಾವಣಾ ಬಾಂಡ್‌ ವಿಷಯದಲ್ಲಿ ಚುನಾವಣಾ ಆಯೋಗದ ಸ್ಪಷ್ಟವಾದ ಹಿಂತಿರುವು, ಮೋದಿ ಸರ್ಕಾರದ ಪ್ರಮುಖ ಸದಸ್ಯರ ಚುನಾವಣಾ ಕಾನೂನಿನ ಉಲ್ಲಂಘನೆಯ ವಿಷಯಕ್ಕೆ ಬಂದಾಗ ಪಕ್ಷಾತೀತವಾಗಿ ಮೇಲ್ವಿಚಾರಣೆ ಮಾಡದಿರುವುದಕ್ಕೆ  ಸಾಟಿಯಾಗಿದೆ. . 2019 ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ, ಮುಸ್ಲಿಂ ವಿರೋಧಿ ಸಂದೇಶಗಳನ್ನು ಬಳಸುವುದಕ್ಕಾಗಿ ಶ್ರೀ ಮೋದಿಯವರ ವಿರುದ್ಧ ಮಾಡಲಾದ ದೂರುಗಳ ಮೇಲೆ ಚುನಾವಣಾ ಆಯೋಗ ಕೈಕಟ್ಟಿ ಕುಳಿತುಕೊಂಡಿತು. ಉದಾಹರಣೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕೇರಳದ ವಯನಾಡ್ ಕ್ಷೇತ್ರದಿಂದ ನಿಂತಿದ್ದಕ್ಕಾಗಿ  ಲೇವಡಿ ಮಾಡಿ, ಮೋದಿ  "ಅಲ್ಪಸಂಖ್ಯಾತರು ಇಲ್ಲಿ ಬಹುಸಂಖ್ಯಾತರು" ಎಂದು ಹೇಳಿದರು. ದೂರಿನ ತೀರ್ಪು ನೀಡಲು  ನಿರ್ದೇಶನ ನೀಡುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ ನಂತರವೇ, ಮೂರು ಸದಸ್ಯರ ಆಯೋಗವು  2-1 ನಿರ್ಧಾರದಲ್ಲಿ, ಶ್ರೀ ಮೋದಿ ವಿರುದ್ಧದ ಆರೋಪಗಳನ್ನು ಅಮಾನ್ಯವೆಂದು ಕಂಡುಕೊಳ್ಳಲು ತ್ವರಿತವಾಗಿ ಚಲಿಸಿತು. ಅಸಮ್ಮತಿ ತೋರಿದ ಮತ್ತು ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗಬೇಕಾಗಿದ್ದ  ಅಶೋಕ್ ಲಾವಾಸಾ ಅವರು  ಶೀಘ್ರದಲ್ಲೇ ಭ್ರಷ್ಟಾಚಾರ ಆರೋಪಗಳ ವಿರುದ್ಧ ಹೋರಾಡಬೇಕಾಗಿ ಬ೦ದಿತು.  ಕೊನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ್ನು ಸೇರಲು ಉದ್ಯೋಗವನ್ನು ತೆಗೆದುಕೊಳ್ಳಲು ಆಯೋಗವನ್ನು ತೊರೆದಾಗ ಅವರ ವಿರುಧ್ಧದ ಪ್ರಕರಣವು  ನಿಗೂಢವಾಗಿ ಮಾಯವಾಯಿತು. ಪೆಗಸಸ್ ಗುಪ್ತಚರದ ಸಂಭವನೀಯ ಗುರಿಗಳ ಪಟ್ಟಿಯಲ್ಲಿ ಶ್ರೀ ಲಾವಾಸಾ ಅವರ ಫೋನ್ ಸಂಖ್ಯೆಯನ್ನೂ   ಕಂಡಿದ್ದೇವೆ. 

 

ಸುಪ್ರೀಂ ಕೋರ್ಟ್‌ನ ಉದಾಸೀನತೆ ಮತ್ತು ಸರ್ಕಾರವು ಪ್ರಜಾಪ್ರಭುತ್ವದ ಮಾನದಂಡಗಳನ್ನು ಬುಡಮೇಲು ಮಾಡುವಲ್ಲಿ ಚುನಾವಣಾ ಆಯೋಗದ ಸಹಭಾಗಿತ್ವವು ಸಾಕಷ್ಟು ಕೆಟ್ಟದ್ದಲ್ಲ ಎಂಬಂತೆ, ನಿರ್ಣಾಯಕ ಚುನಾವಣಾ ಪ್ರಚಾರಗಳ ನಡುವೆ ಪ್ರತಿಪಕ್ಷಗಳ ನಾಯಕರ ವಿರುದ್ಧ ಪೆಗಾಸಸ್ ಅನ್ನು ಬಳಸಿರುವುದು ಚುನಾವಣಾ ಪೈಪೋಟಿ  ಎಷ್ಟು ಅಸಮಾನವಾಗಿದೆ ಎಂಬುದನ್ನು ನಮಗೆ ತಿಳಿಸುತ್ತದೆ. ಇದು ಯುಎಸ್‌ನಲ್ಲಿನ ವಾಟರ್‌ಗೇಟ್ ಹಗರಣಕ್ಕಿಂತ ಕೆಟ್ಟದಾಗಿದೆ,  ಏಕೆಂದರೆ  ಇದರಲ್ಲಿ ಪ್ರತಿಸ್ಪರ್ಧಿ ಪಕ್ಷದ ನಾಯಕರ ವಿರುದ್ಧ ರಾಜಕೀಯ ಬೇಹುಗಾರಿಕೆ ನಡೆಸಲು ಸರ್ಕಾರದ ಹಣದಿಂದ ಖರೀದಿಸಿದ ಗುಪ್ತಚರ ಸಾಧನವನ್ನು ಸರ್ಕಾರಿ ಅಧಿಕಾರಿಗಳು ಬಳಸುವದು ಒಳಗೊಂಡಿತ್ತು.

(ಭಾಷಣದ ಉಳಿದ ಭಾಗ ಎರಡನೇ ಭಾಗದಲ್ಲಿ ಮು೦ದುವರಿಯಲಿದೆ)

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು