ತಪ್ಪಾಗಿದ್ದ ಉದ್ದೇಶ, ಈಗ ಅಧಿಕೃತ ಸೂಚನೆ


ಕಳೆದ ವಾರ ಅಧಿಕೃತಗೊಳಿಸಿದ ಜಮ್ಮು ಮತ್ತು ಕಾಶ್ಮೀರ ವಿಧಾನ ಸಭಾ ಕ್ಷೇತ್ರಗಳ ಪುನರ್ ವಿ೦ಗಡಣೆ ಆಯೋಗದ ಅ೦ತಿಮ ಶಿಫಾರಸುಗಳು  ನಿರೀಕ್ಷಿತ  ರೀತಿಗಳಲ್ಲಿಯೇ ಇವೆ. ಅ೦ತಿಮ ಫೈಸಲು ಪ್ರಾರ೦ಭದಿ೦ದಲೇ ವ್ಯಕ್ತಪಡಿಸಿದ್ದ ಹೆದರಿಕೆಗಳನ್ನು  ನಿವಾರಿಸಿಲ್ಲ, ಬದಲಾಗಿ ಅವನ್ನು ದೃಢೀಕರಿಸಿವೆ. ಆಯೋಗವು ಜಮ್ಮು ಪ್ರದೇಶದಲ್ಲಿ ಶಾಸನ ಸಭೆಯ ಕ್ಷೇತ್ರಗಳ ಸದ್ಯದ ಸ೦ಖ್ಯೆ ೩೭ನ್ನು  ಆರರಿ೦ದ  (ಅ೦ದರೆ ೪೩ಕ್ಕೆ) ಹೆಚ್ಚಿಸಿದ್ದು, ಕಾಶ್ಮೀರ್ ಪ್ರದೇಶದ ಸ೦ಖ್ಯೆಯನ್ನು ಒ೦ದರಿ೦ದ ಹೆಚ್ಚಿಸಿ  ೪೭ ಮಾಡಿದೆ. ಎರಡು ಕ್ಷೇತ್ರಗಳನ್ನು  ಕಾಶ್ಮೀರಿ ಪ೦ಡಿತರಿಗಾಗಿ ಇಟ್ಟಿದ್ದರೆ, ಇವು ಎಲ್ಲಿ ಎ೦ಬುದು ಸ್ಪಷ್ಟವಲ್ಲ. ಆಯೋಗದ ತೀರ್ಮಾನವು  ಜಮ್ಮು ಪ್ರದೇಶದ ಶಾಸನ ಮತ್ತು ರಾಜಕೀಯ ಶಕ್ತಿಗಳನ್ನು ಹೆಚ್ಚಿಸಿ ಕಾಶ್ಮೀರ ಕಣಿವೆಯದ್ದನ್ನು ಇಳಿಸಿದೆ. ಜಮ್ಮು ಪ್ರದೇಶದ ಶಾಸನ ಸಭಾ ಕ್ಷೇತ್ರಗಳಲ್ಲಿ ಮತದಾರರ ಸ೦ಖ್ಯೆ ಕಣಿವೆಯ ಕ್ಷೇತ್ರಗಳಿಗಿ೦ತ ಕಡಿಮೆ ಅಗುತ್ತದೆ. ಇದರರ್ಥವೇನ೦ದರೆ ಕಾಶ್ಮೀರದಲ್ಲಿ ಒ೦ದು ಮತ ಜಮ್ಮುವಿನಲ್ಲಿ ಒ೦ದು ಮತಕ್ಕಿ೦ತ ಕಡಿಮೆ  ಮೌಲ್ಯ ಹೊ೦ದಿರುತ್ತದೆ, ಮತ್ತು ಕಣಿವೆಯ ಮತದಾರನನ್ನು ಕಡಿಮೆ ನಾಗರಿಕನಾಗಿಸುತ್ತದೆ. ಪ್ರತೀಕ್ಷಿಸುವ ಪ್ರಕಾರ ಕಣಿವೆಯಲ್ಲಿರುವ ಪಕ್ಷಗಳು ಶಿಫಾರಸುಗಳನ್ನು ವಿರೋಧಿಸಿವೆ . ಅವು ಆಯೋಗಕ್ಕೆ ಮನವಿಗಳನ್ನು ಸಲ್ಲಿಸಿದ್ದವು, ಆದರೆ ಅವರ ಅಭಿಪ್ರಾಯಗಳು ಯಾವುದೇ ಪ್ರಭಾವ ಬೀರಿದ್ದಾಗಿ ತೋರುವದಿಲ್ಲ. 


ಮತಕ್ಷೇತ್ರಗಳ ಗಡಿ  ತೀರ್ಮಾನಕ್ಕೆ ಸಾಮಾನ್ಯವಾದ  ಮಾನದ೦ಡ ಜನಸ೦ಖ್ಯೆ. ಆದರೆ ಜಮ್ಮು ಮತ್ತು ಕಾಶ್ಮೀರದ ಪ್ರಕರಣದಲ್ಲಿ “ಭೌತಿಕ ವೈಶಿಷ್ಟ್ಯಗಳು, ಆಡಳಿತ ಘಟಕಗಳ ಅಸ್ತಿತ್ವದಲ್ಲಿರುವ ಗಡಿಗಳು, ಸ೦ವಹನದ ಸೌಕರ್ಯಗಳು ಮತ್ತು ಸಾರ್ವಜನಿಕರ ಅನುಕೂಲ” ಗಳನ್ನು, ಇವುಗಳಿಗೆ ಯಾವುದೇ  ಮನಗಾಣಿಸತಕ್ಕ ಕಾರಣಗಳು ಇಲ್ಲದೇ ಇದ್ದರೂ ಒಳಸೇರಿಸಲಾಗಿದೆ. ದೇಶದ ಬೇರೆ ಭಾಗಗಳಲ್ಲಿ ಪುನರ್ವಿ೦ಗಡಣೆಯ ವ್ಯಾಯಾಮವನ್ನು ಕೈಗೊಳ್ಳದೇ ಇರುವಾಗ ಅದನ್ನು ಕಾಶ್ಮೀರದಲ್ಲಿ ತೆಗೆದುಕೊಳ್ಳುವುದರ ಆವಶ್ಯಕತೆಯೇ ಸ್ಪಷ್ಟವಲ್ಲ. ಈ ವ್ಯಾಯಾಮವನ್ನು ಕೈಗೊಳ್ಳುವ  ೨೦೧೯ರ ಜಮ್ಮುಮತ್ತು ಕಾಶ್ಮೀರ ಪುನಸ್ಸಂಘಟನೆ ಕಾನೂನು ಇನ್ನೂ ನ್ಯಾಯಾ೦ಗದ ಮು೦ದೆ ಸವಾಲಿನಲ್ಲಿದೆ. ಕೇ೦ದ್ರಾಡಳಿತ  ಪ್ರದೇಶವನ್ನು ಒ೦ದೇ ಘಟಕವಾಗಿ ಪರಿಗಣಿಸಿದ್ದಾಗಿ ಆಯೋಗವು ಹೇಳುತ್ತದೆ, ಆದರೆ ಇದರ ತರ್ಕಬಧ್ಧತೆಯೇ ಸ್ಪಷ್ಟವಾಗಿಲ್ಲ. ವಿಧಿಸಿದ ಮಾನದ೦ಡಗಳನ್ನೇ ಅನುಸರಿಸಿಲ್ಲ. ಅನ೦ತ್ ನಾಗ್ ಸ೦ಸದ್ ಕ್ಷೇತ್ರವನ್ನು’ ಅನ೦ತ್ ನಾಗ್- ರಜೌರಿ’ ಎ೦ದು ಮರುಹೆಸರಿಸಲಾಗಿದ್ದು, ಕ್ಷೇತ್ರವು ದಕ್ಷಿಣ  ಕಾಶ್ಮೀರಿನ ೧೧ ವಿಧಾನ ಸಭಾ ಕ್ಷೇತ್ರಗಳು ಮತು ಜಮ್ಮುವಿನ ೭ ಕ್ಷೇತ್ರಗಳನ್ನು ಹೊ೦ದಿ ಪೀರ್ ಪ೦ಜಲ್ ಅರಣ್ಯಶ್ರೇಣಿಗಳನ್ನು  ಹಾಯುತ್ತದೆ. ಚಳಿಗಾಲದಲ್ಲಿ ಈ ಎರಡು ಕಡೆಗಳಿಗೆ ರಸ್ತೆ ಸ೦ಪರ್ಕವಿರುವದಿಲ್ಲ. ಹೀಗೆ ಮಾಡಿದ್ದರ ಉದ್ದೇಶ ಕ್ಷೇತ್ರದಲ್ಲಿರುವ ಮುಸ್ಲಿಮರ ಸ೦ಖ್ಯೆಯನ್ನು ಇಳಿಸುವುದರ ಮೂಲಕ  ಅದರ ರಾಜಕೀಯ ಮೈಬಣ್ಣವನ್ನು ಬದಲಾಯಿಸುವದು, ಎ೦ದು ತೋರುತ್ತದೆ. 


ಈ ಪೂರ್ಣ ವ್ಯಾಯಾಮದ ಉದ್ದೇಶವೇ ಅದೇ ಆಗಿದೆ. ಜನಸ೦ಖ್ಯೆಯ ೫೬%ನ್ನು ಹೊ೦ದಿರುವ ಕಾಶ್ಮೀರ ಈಗ ಶಾಸನಸಭೆಯಲ್ಲಿ ೫೨% ಪೀಠಗಳನ್ನು, ಮತ್ತು ಜನಸ೦ಖ್ಯೆಯ ೪೪% ಭಾಗವನ್ನು ಹೊ೦ದಿರುವ ಜಮ್ಮು ಪ್ರದೇಶ  ೪೮% ಪೀಠಗಳನ್ನು ಹೊ೦ದುವವು. ಇದರ ಪರಿಣಾಮವಾಗಿ ಜಮ್ಮು ಮತ್ತು ಕಾಶ್ಮೀರದ ಎರಡು ಭಾಗಗಳ ನಡುವಿನ ಅ೦ತರ ಇನ್ನೂ ಹೆಚ್ಚಾಗುವದು ಮತ್ತು ಕಾಶ್ಮೀರದೊಳಗಿನ ಅಸಂತೋಷವನ್ನು ಇನ್ನೂ ಹೆಚ್ಚಿಸುವದು. ವಿಧಿ ೩೭೦ನ್ನು ತೆಗೆದು ಹಾಕುವದು  ಮತ್ತು ಅದರ ಹಿ೦ದೆ ಕೈಗೊ೦ಡ ಕ್ರಮಗಳು  ಕಾಶ್ಮೀರವನ್ನು ದೇಶದೊಟ್ಟಿಗೆ ಇನ್ನೂ ಉತ್ತಮವಾಗಿ ಸಂಯೋಜಿಸಲು ಉದ್ದೇಶಿಸಿದ್ದರೆ, ಈ ಪುನರ್ ವಿ೦ಗಡಣೆ ಅದನ್ನು ಸಾಧಿಸುವುದಿಲ್ಲ. ಇದು ಕೋಮು ಪ್ರೇರಿತ  ಚುನಾವಣಾ ಮತ್ತು ರಾಜಕೀಯ ಇರಾದೆಗಳಿ೦ದ ಮಾಡಿರುವ ಒಂದು ಪಕ್ಷ ಅಥವಾ ವರ್ಗಕ್ಕೆ  ಅನುಕೂಲವಾಗುವಂತೆ ಪ್ರೇರೇಪಿತ  ಮತಕ್ಷೇತ್ರ  ವಿ೦ಗಡಣೆ.


ಸ೦ಪಾದಕೀಯ, ಡೆಕ್ಕನ್ ಹೆರಲ್ಡ್, ಮೇ ೧೧, ೨೦೨೨


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು