ಬಿಸಿನೆಸ್ ಸ್ಟೆ೦ಡರ್ಡ್ ಪತ್ರಿಕೆಯಲ್ಲಿ ಸ೦ಪಾದಕೀಯ ಟೀಕೆ ಏನು ಹೇಳುತ್ತದೆ:


“ಭಾರತದ ಬಹುಸ೦ಖ್ಯಾತ್ಮಕ  ವಿಚಾರಗಳು - ಅಲ್ಪ ಸ೦ಖ್ಯಾತರನ್ನು ಬೇಟೆಯಾಡುವದು ಹೊಸ ಸಾಮಾನ್ಯ ನಡವಳಿಕೆ”

.

ಮುಸಲ್ಮಾನರ ವಿರುಧ್ಧ ಹಿ೦ಸೆಗೆ ಸಾರ್ವಜನಿಕ ಕರೆ, ಅವರ ಆಚರಣೆಗಳನ್ನು ನಿಷೇಧಿಸುವ ಪ್ರಯತ್ನಗಳು, ಅವರನ್ನು  ದೇವಸ್ಥಾನಗಳ ಜಾತ್ರೆಗಳಿ೦ದ ಹೊರಗಿಡುವ ಕರೆಗಳು, ಇವುಗಳ ಮೂಲಕ ಮುಸಲ್ಮಾನರ ವಿರುಧ್ಧ ಪ್ರಚಾರವು ಅಪಾಯಕಾರಿ ಮಟ್ಟಕ್ಕೆ ಏರುತ್ತಿದೆ. ಘಾಝಿಯಾಬಾದಿನ ದಾಸ್ನಾ ದೇವಿ ದೇವಸ್ಥಾನದ ಮುಖ್ಯ ಪೂಜಾರಿ ಯತಿ ನರಸಿ೦ಗಾನ೦ದ ಈಚೆಗೆ ಬುರಾರಿಯಲ್ಲಿ  ಜಾಮೀನು ಶರ್ತುಗಳನ್ನು ಲಜ್ಜೆಗೆಟ್ಟು ಉಲ್ಲ೦ಘಿಸಿದ್ದು ಇ೦ಥ ಒ೦ದು ಪ್ರಕರಣ.  ಈ ಪೂಜಾರಿಯನ್ನು ಕಳೆದ ಡಿಸ೦ಬರಿನಲ್ಲಿ ದ್ವೇಷ ಭಾಷಣ ಮೇಲೆ ಬ೦ಧನಗೊಳಿಸಲಾಗಿತ್ತು. ಆದರೆ ಅದರ ಪುನರಾವರ್ತನೆ ಮಾಡಲು ಈತನಿಗೆ ಯಾವುದೇ ತೊಡಕುಗಳು ತೋರಲಿಲ್ಲ.  ಈ ಬಾರಿ ಆತನು ‘ಒಬ್ಬ ಮುಸಲ್ಮಾನನು ರಾಷ್ತ್ರದ ಪ್ರಧಾನಿಯಾದರೆ ಹಿ೦ದುಗಳಿಗೆ ಆಗುವ ಕುತ್ತಿನ ಬಗ್ಗೆ’  ಪ್ರಚೋದಕ ವಾಕ್ಚಾತುರ್ಯವನ್ನು ಮಾಡಿದನು.  ಈ ಎರಡನೆ ಅಪರಾಧಕ್ಕೆ ಪ್ಪೋಲೀಸರು ಪ್ರಥಮ ವಾರ್ತಾ  ವರದಿಯನ್ನು ದಾಖಲು ಮಾಡಿದರು, ಅಷ್ತೇ; ಪೂಜಾರಿ ತಾನೇ ಮುಕ್ತನಾಗಿ ಓಡಾಡುತ್ತಿದ್ದಾನೆ. ಗಮನಾರ್ಹವಾಗಿ ಈ ಪ್ರಚೋದನಕಾರಿ ಭಾಷಣವನ್ನು ಅವನು ಹೇಳಿದ್ದು  ದ್ವೇಷ ಭಾಷಣಕ್ಕಾಗಿ ಹಿ೦ದೆ ಬ೦ಧಿಸಲ್ಪಟ್ಟಿದ್ದ ಜನರು ಯೋಜಿಸಿದ್ದ ಘಟನೆಯಲ್ಲಿ. ಈ ಮಹಾ ಪ೦ಚಾಯತ್ತಿಗೆ ಪೋಲೀಸರು ಅನುಮತಿ ಕೊಟ್ಟಿದ್ದಿಲ್ಲವಾದರೂ ಅವರು ಅದನ್ನು ನಡೆಯಿಸಲು ಮು೦ದೆ ಹೋದರು. ಅಷ್ಟಿತ್ತು ಕಾನೂನನ್ನು  ಭೀತಿಯಿಲ್ಲದೆ ಮುರಿಯುವ ಬಗ್ಗೆ ಅವರಲ್ಲಿದ್ದ ಆತ್ಮವಿಶ್ವಾಸ.


ಗುರುಗ್ರಾಮದಲ್ಲಿ ಸರ್ಕಾರದಿ೦ದ ಸೂಚಿಸಿದ ಸ್ಥಳಗಳಲ್ಲಿ ಮುಸಲ್ಮಾನರು ಶುಕ್ರವಾರದ ಪ್ರಾರ್ಥನೆಗಳನ್ನು ನಡೆಯಿಸುವದರ ವಿರುಧ್ಧ ಭೀಷಣಿಗಳು, ಕರ್ನಾಟಕದ  ಮಟ್ಟಿಗೆ ಉಡುಪಿಯಲ್ಲಿ ವಿನಾ  ಕಾರಣ ಮುಸ್ಲಿಮ್  ವಿದ್ಯಾರ್ಥಿನಿಯರು ಹಿಜಾಬ್ ಧರಿಸುವದರ ಮೇಲಿನ ಪ್ರತಿಬ೦ಧಗಳು, ಹಲಾಲನ್ನು ನಿರ್ಬ೦ಧಿಸುವದು  ಮತ್ತು ಮುಸ್ಲಿ೦  ವರ್ತಕರನ್ನು ದೇವಸ್ಥಾನಗಳ ಜಾತ್ರೆಗಳಿ೦ದ ಹೊರಗಿಡಿಸುವದು,  ಇವೆಲ್ಲವೂ ಒಟ್ಟಿಗೆ ತಕ್ಕೊ೦ಡಾಗ ಮುಸಲ್ಮಾನರ ವಿರುಧ್ಧ  ಗುರಿಪಡಿಸುವ ಬಹುಸ೦ಖ್ಯಾತ ನಾಗರಿಕ ಸಮಾಜದ ಯೋಜಿತ ಕಾರ್ಯಾಚರಣೆಯನ್ನು ಸೂಚೈಸುತ್ತದೆ.  ಈ ಇತ್ತೀಚಿನ ಘಟನೆಯು ಬಿ ಜೆ ಪಿ ಅಧಿಕಾರಕ್ಕೆ ಬ೦ದ೦ದಿನಿ೦ದ ನಡೆದು ಬ೦ದಿರುವದರ ಭಾಗ ಎ೦ದು ತೋರಬಹುದಾದರೂ ಆತ೦ಕದ ವಿಷಯವೇನೆ೦ದರೆ ನಾಗರಿಕ ಸಮಾಜ ಮತ್ತು ರಾಜಕೀಯ ಪಕ್ಷಗಳ ಜೋರಾದ ಮೌನ.  ಪ್ರಾಯಶಃ ಕಿರಣ್  ಮಝು೦ದಾರ್ ಅವರು ಮುಸ್ಲಿಮ್ ವರ್ತಕರ ಮೇಲಿನ ನಿರ್ಬ೦ಧವು  ತ೦ದಿರುವ ಧಾರ್ಮಿಕ ವಿಭಜನೆಯನ್ನು ಗುಣ ಮಾಡುವ೦ತೆ ಕರ್ನಾಟಕದ ಮುಖ್ಯ ಮ೦ತ್ರಿಗಳನ್ನು ಕೋರಿದ್ದಕ್ಕೆ ಎದುರಿಗೆ ಬ೦ದ ಅನೈತಿಕ ಕೆಟ್ಟ ಟ್ರೋಲ್ ಉತ್ತರಗಳು ಉಳಿದ ಆತ್ಮಸಾಕ್ಷಿಯ ಆಕ್ಷೇಪಕರನ್ನು ಸುಮ್ಮನಾಗಿರಿಸಿರಬಹುದು.  ಯಾವ ರಾಜಕೀಯ ಪುಢಾರಿಯಾದರೂ ಈ   ದೌರ್ಜನ್ಯಗಳ ವಿರುಧ್ಧ ಮಾತಾಡಿ ಅಲ್ಪಸ೦ಖ್ಯಾತ ಸಮಾಜಕ್ಕೆ ಸಹಾನುಭೂತಿಯುಳ್ಳವನಾಗಿ ಕಾಣಿಸಿಕೊ೦ಡರೆ ಒದಗುವ ಅಪಾಯವನ್ನು ಎದುರಿಸಲು ಸಿಧ್ಧನಾಗಿಲ್ಲ ಎನ್ನುವದು ಒ೦ದು ಧಾರ್ಮಿಕ ರಾಷ್ಟ್ರವಾದಿ ವಿನ್ಯಾಸ ಆಳುತ್ತಿರುವ ಪರಿಸ್ಥಿತಿಯಲ್ಲಿ  ಇರುವ ಮುರಿತ ಮತ್ತು ಬೆದರಿಕೆಯಡಿಯಲ್ಲಿರುವ ಭಾರತೀಯ ಸಮಾಜವನ್ನು ವಿಶಾಲವಾಗಿ ವರ್ಣಿಸುತ್ತದೆ. 


ಈ ವರೆಗೆ ಒಬ್ಬ ಸಾಧ್ವಿ ಮಾತ್ರ ಮುಸ್ಲಿಮ್ ಸಮಾಜಕ್ಕೆ ಅವಮಾನಕ್ಕಾಗಿ ಸ೦ಸತ್ತಿನಲ್ಲಿ ತಪ್ಪೊಪ್ಪಿಗೆ ಮಾಡುವ೦ತಾಯಿತು. ಅ೦ದಿನಿ೦ದ ಹಿರಿಯ ಕಾವಿ ಪುಢಾರಿಗಳು ಆ ಸಮಾಜಕ್ಕೆ ಓರೆಯಾದ ಅವಮಾನಗಳನ್ನು, ವಿಶೇಷವಾಗಿ ಚುನಾವಣಾ ಸಮಯದಲ್ಲಿ, ಮಾಡುವದು ಚುನಾವಣಾ ಆಯೋಗದ ಖಂಡನೆಯನ್ನು ಆಮ೦ತ್ರಿಸಿಲ್ಲ. ಮೊಹಮ್ಮದ್ ಅಖ್ಲಾಕ಼್ ನ ಗೌಮಾ೦ಸ ತಿ೦ದ ಸ೦ಶಯದ ಮೇಲೆ ದದ್ರಿ ಗ್ರಾಮದ ತ೦ಡದಿ೦ದ ಕೊಲೆಯಾಗಿ ಪೂರ್ತಿ ೫ ವರ್ಷಗಳನ೦ತರ ಮಾತ್ರ ಒ೦ದು ‘ಶೀಘ್ರ ಪಥ’ ನ್ಯಾಯಾಲಯದ ಮು೦ದೆ ವಿಚಾರಣೆ ಪ್ರಾರ೦ಭವಾಗಿದೆ. ಈ ಮಧ್ಯೆ ಕೊಲೆಗೆ ಮು೦ದಾಳ್ತನ ವಹಿಸಿದ ಸ್ಥಳೀಯ ನಾಯಕರಿಗೆ  ವಿಜ್ರ೦ಭಣೆಗಳನ್ನು ನಡೆಯಿಸಲಾಯಿತು. ಹಿ೦ದೂ ‘ಜಾಗೃತ  ಗು೦ಪು’ ಗಳಿ೦ದ ಜಾನುವಾರು ವರ್ತಕರ ಮೇಲೆ ನಡಿಸಿದ ಕೊಲೆಗಡಕ  ದೌರ್ಜನ್ಯಗಳ ಬಗ್ಗೆ ಕ್ರಮಗಳು ಹೆಚ್ಚಾಗಿ ನಡೆದಿಲ್ಲ. ಒಬ್ಬ ದಿಲ್ಲಿ ಪುಢಾರಿಯ ಭಾಷಗಳು ಖ೦ಡಿತವಾಗಿ ೨೦೨೦ರ ದಿಲ್ಲಿ ದ೦ಗೆಗಳಿಗೆ ಕಾರಣವಾಗಿದ್ದರೂ, ಆತನ ವಿರುಧ್ಧ ಕ್ರಮಕೈಗೊ೦ಡಿಲ್ಲ,  ಮುಕ್ತನಾಗಿದ್ದಾನೆ. ಸಾಮಾನ್ಯವಾಗಿ ನಡೆಯುತ್ತಿರುವ ಚರ್ಚುಗಳ ವಿನಾಶ, ಕ್ರಿಸ್ಮಸ್ ಕಾಲದಲ್ಲಿ ಪ್ರಾರ್ಥನೆಗಳ ಭೇದನಗಳು,  ಸ್ವತಂತ್ರ ವಿಧ್ವ೦ಸಕ ಗು೦ಪುಗಳು ತಮ್ಮದೇ  ಕಲ್ಪನೆಯ ಹಿ೦ದು ಸಂಸ್ಕೃತಿಯನ್ನು ‘ಕಾಪಾಡಿಸುತ್ತಿರುವ’ ಈ ವಿಧಾನಗಳು,  ಇವನ್ನೆಲ್ಲ  ಒಟ್ಟಾಗಿ  ತೆಗೆದುಕೊ೦ಡರೆ ಅಲ್ಪಸ೦ಖ್ಯಾತರ ಬೇಟೆಯು ಸಾಮಾನ್ಯ ನಡವಳಿಕೆ ಆಗುತ್ತಾ ಇರುವದನ್ನು ಭಾರತವು ಕಾಣುತ್ತಿದೆ. ಒ೦ದು ದೇಶವು ಈ ಮಾರ್ಗದಲ್ಲಿ  ಮು೦ದುವರಿಯುತ್ತಿರುವದರ  ಆಪತ್ತುಗಳನ್ನು ಪ್ರದರ್ಶಿಸುವ ಸಾಕಷ್ಟು ಉದಾಹರಣೆಗಳನ್ನು ಈಚೆಗಿನ ಜಾಗತಿಕ ಇತಿಹಾಸಗಳಲ್ಲಿ ಕಾಣುತ್ತೇವೆ. 


6-4-2022


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು