ಆದರದೊ೦ದಿಗೆ ಹೇಳುವದು

ಉಮರ್ ಖಾಲಿದ್ ಬಳಸಿದ ರಾಜಕೀಯ ಶಬ್ದಕೋಶದ ಬಗ್ಗೆ ದೆಹಲಿ ಹೈಕೋರ್ಟ್‌ನ ಟಿಪ್ಪಣಿಗಳು ಕರ್ಕಶ  ಮತ್ತು ವ್ಯಾಕುಲಕಾರಿಯಾಗಿದೆ

 ಸಂಪಾದಕೀಯ                ದಿ ಇ೦ಡಿಯನ್ ಎಕ್ಸ್ಪ್ರೆಸ್

ಏಪ್ರಿಲ್ 29, 2022

delhi high court, Umar Khalid, Northeast Delhi riots, Delhi riots 2020, Indian express, Opinion, Editorial, Current Affairs


ಬುಧವಾರದ೦ದು  ೨೦೨೦ರ ಈಶಾನ್ಯ ದೆಹಲಿ ಗಲಭೆಯ ಪಿತೂರಿಯ ಮುಖ್ಯ  ಪ್ರಕರಣದಲ್ಲಿ ವಿದ್ಯಾರ್ಥಿ ಮತ್ತು ಕಾರ್ಯಕರ್ತ ಉಮರ್ ಖಾಲಿದ್ ಇವರ ಜಾಮೀನಿನ ಅರ್ಜಿಯನ್ನು ಪರಿಗಣಿಸುತ್ತ  ಭಾರತದ ಪ್ರಧಾನಿಗೆ ಸೇರಿದ೦ತೆ  "ಜುಮ್ಲಾ" ಪದವನ್ನು ಬಳಸುವುದು "ಸರಿ"ಯೇ  ಎಂದು ದೆಹಲಿ ಉಚ್ಚ ನ್ಯಾಯಾಲಯವು ಕೇಳಿದೆ. 

ಒ೦ದು ದಿನ ಕಳೆದನ೦ತರ   ಅದಲ್ಲ  ಪ್ರಶ್ನೆ.  ಪ್ರಶ್ನೆ ಇದು:   ನ್ಯಾಯಾಲಯವು  ತಾನು ಕೇಳಿದ ಪ್ರಶ್ನೆಯನ್ನು ಕೇಳುವುದರ    ಅರ್ಥವೇನು? 

ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ಜಸ್ಟಿಸ್ ರಜನೀಶ್ ಭಟ್ನಾಗರ್ ಅವರ ವಿಭಾಗೀಯ ಪೀಠವು ಪ್ರಧಾನ ಮಂತ್ರಿಯ ಪರವಾಗಿ ತುಂಬಾ ಸುಲಭವಾಗಿ ಮನನೊಂದುಕೊಳ್ಳುತ್ತಾರೆ, ಪೀಠವು  ಸರ್ಕಾರದ ಟೀಕೆಗೆ "ಲಕ್ಷ್ಮಣ ರೇಖೆ’ಯ  ಬಗ್ಗೆ ಮಾತನಾಡುತ್ತವೆ, ಇವು  ಹೆಚ್ಚು ಗೊಂದಲದ ಸಂಗತಿಗಳನ್ನು ಸೂಚಿಸುತ್ತದೆ. 

ಆಡಳಿತಾರೂಢ ಸ್ಥಾಪನೆಯು ಭಿನ್ನಮತೀಯರು ಮತ್ತು ರಾಜಕೀಯ ಎದುರಾಳಿಗಳನ್ನು "ರಾಷ್ಟ್ರವಿರೋಧಿ" ಎಂದು ಹಣೆಪಟ್ಟಿ ಕಟ್ಟುವ ಹೀನಾಯ ಅಭ್ಯಾಸವನ್ನು ಮಾಡಿಕೊಂಡಿರುವ ಸಮಯಗಳು ಮತ್ತು ಟೀಕಾಕಾರರನ್ನು ಗುರಿಯಾಗಿಸಲು UAPA ನಂತಹ ಕಠಿಣ ಕಾನೂನುಗಳನ್ನು ಅಸ್ತ್ರಗೊಳಿಸಲಾಗುತ್ತಿರುವ ಸಮಯಗಳು ಈಗ ಅಸ್ತಿತ್ವದಲ್ಲಿ ಇವೆ.  ಇವು ನಾಗರಿಕರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಕಾನೂನಿನ ದುರುಪಯೋಗದ ವಿರುದ್ಧ ನ್ಯಾಯಾಲಯಗಳು ಸಾಕಷ್ಟು ಜಾಗರೂಕರಾಗಿರದ,  ಮತ್ತು  ಕಾರ್ಯನಿರ್ವಾಹಕರಿಗೆ ಬಾರಿ ಬಾರಿಗೆ ಅನುಮಾನದ ಲಾಭವನ್ನು ಅನೇಕ ಸಲ ನೀಡುವ   ಸಮಯಗಳೂ ಆಗಿವೆ.  ವಿಶೇಷವಾಗಿ ಇ೦ತಹ ಸಂದರ್ಭಗಳಲ್ಲಿ,  ಫೆಬ್ರವರಿ ೨೦೨೦ ರಲ್ಲಿ ಅಮರಾವತಿಯಲ್ಲಿ ಉಮರ್ ಖಾಲಿದ್ ಅವರು ಭಾಷಣದಲ್ಲಿ ಬಳಸಿದ ಪದಗಳಿಗೆ ದೆಹಲಿ ಹೈಕೋರ್ಟ್‌ನ ಆಕ್ಷೇಪಣೆಗಳು ಒ೦ದು ಕರ್ಕಶ ಸ್ವರವನ್ನು ಕೇಳಿಸುತ್ತದೆ.  


ದೆಹಲಿ ಉಚ್ಚ ನ್ಯಾಯಾಲಯವು ಭಾಷಣದಲ್ಲಿ  "ಊಂಟ್ ಪಹಾಡ್ ಕೆ ನೀಚೆ ಆ ಗಯಾ (ಅಹಂಕಾರಿಗಳನ್ನು ಕಡಿಮೆ ಗಾತ್ರಕ್ಕೆ ಕತ್ತರಿಸುವ ಭಾಷಾವೈಶಿಷ್ಟ್ಯದ ಹಿಂದಿ)" ಮತ್ತು "ಇಂಕ್ವಿಲಾಬಿ" ಮತ್ತು "ಕ್ರಾಂತಿಕಾರಿ " ಯ೦ತಹ ಅಭಿವ್ಯಕ್ತಿಗಳ ಬಳಕೆಯನ್ನು ಸಹ ಒತ್ತಿ ಹೇಳಿದೆ. ನ್ಯಾಯಾಲಯವು ವಿಡಂಬನಾತ್ಮಕ ಮತ್ತು ವಿವಾದಾತ್ಮಕ ಪದಗಳು ಮತ್ತು  ನಿರುಪದ್ರವಿ ನುಡಿಗಟ್ಟುಗಳನ್ನೇ ಎತ್ತಿ ತೆಗೆದಿರುವದು ದೆಹಲಿ ದ೦ಗೆಗಳ ಪ್ರಕರಣದ ಬಗೆ ಆಳವಾದ ಚಿಂತೆಗೆ ಕಾರಣವಾಗುತ್ತದೆ, ಏನ೦ದರೆ  ಒ೦ದು ಕಾನೂನಿನ - ಸಿ ಎ ಎ/ ಎನ್ ಆರ್ ಸಿ - ವಿರುಧ್ಧ  ಖಾಲಿದ್ ಸಹ ಭಾಗವಹಿಸಿದ ನ್ಯಾಯವಾದ  ಪ್ರತಿಭಟನೆ,  ಮತ್ತು ಈಶಾನ್ಯ ದೆಹಲಿಯಲ್ಲಿ ನಡೆದ  53 ಮಂದಿ ಸಾವನ್ನಪ್ಪಿದ  ಹಿಂಸಾಚಾರಗಳ  ನಡುವೆ ಸಡಿಲವಾಗಿ ಮತ್ತು ವಿವೇಚನಾಹೀನವಾಗಿ ಸ೦ಬ೦ಧ ಕಲ್ಪಿಸಲಾಗುತ್ತಿದೆ.  

ಪ್ರಾಸಿಕ್ಯೂಷನ್‌ನ  ಕೇಂದ್ರ ಆಧಾರಸ್ತಂಭವೆಂದರೆ ಹಿಂಸಾಚಾರಕ್ಕೆ ಸ೦ಬ೦ಧ  ಕಲ್ಪಿಸುವ  ಮೂಲಕ ಪ್ರತಿಭಟನೆಯನ್ನುಅಪರಾಧೀಕರಣಗೊಳಿಸುವುದಲ್ಲದೆ  UAPA ಅನ್ನು ಅನ್ವಯಿಸುವ ಮೂಲಕ ಭಯೋತ್ಪಾದನೆಗೂ ಸ೦ಬ೦ಧ ಕಲ್ಪಿಸುವುದು. ಕಳೆದ ವರ್ಷ ದೆಹಲಿ ಹೈಕೋರ್ಟ್‌ನ ಮತ್ತೊಂದು ಪೀಠವು ಖಲೀದ್‌ನ ಸಹ ಆರೋಪಿಗಳಾದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಮತ್ತು ಆಸಿಫ್ ತನ್ಹಾ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಬುದ್ಧಿವಂತಿಕೆಯಿಂದ ಮತ್ತು ತೀಕ್ಷ್ಣವಾಗಿ ಇದರ ವಿರುಧ್ಧ ಮಾತನಾಡಿದೆ: “ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಆತಂಕವನ್ನು ತೋರಿಸುತ್ತಿರುವ ರಾಜ್ಯದ  ಮನಸ್ಸಿನಲ್ಲಿ ಪ್ರತಿಭಟನೆಗೆ ಸಾಂವಿಧಾನಿಕವಾಗಿ ಖಾತರಿಪಡಿಸಿದ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ರೇಖೆಯು ಸ್ವಲ್ಪಮಟ್ಟಿಗೆ ಮಸುಕಾಗುತ್ತಿದೆ. ಒಂದು ವೇಳೆ ಈ ಮನಸ್ಥಿತಿಗೆ ಬಲ ಬಂದರೆ ಅದು ಪ್ರಜಾಪ್ರಭುತ್ವಕ್ಕೆ ದುಃಖದ ದಿನವಾಗಲಿದೆ.” ಆ ಹೈಕೋರ್ಟ್ ಆದೇಶದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತು, ಮತ್ತು ಅದು ಜಾಮೀನನ್ನು ರದ್ದುಗೊಳಿಸದಿದ್ದರೂ, ಭಯೋತ್ಪಾದನಾ-ವಿರೋಧಿ ಕಾನೂನನ್ನು ಸಂಕುಚಿತವಾಗಿ ಅರ್ಥೈಸಿ ಓದುವುದನ್ನು "ಯಾವುದೇ ನ್ಯಾಯಾಲಯವು ಪೂರ್ವನಿದರ್ಶನವೆಂದು ಪರಿಗಣಿಸಬಾರದು" ಎಂದು ಅದು ಹೇಳಿದೆ.

ಆದರೆ ಕಠಿಣ ಕಾನೂನನ್ನು ಸಂಕುಚಿತವಾಗಿ ಅರ್ಥೈಸಿ ಓದುವುದು, "ಪ್ರತಿಭಟನೆ", "ಕಾನೂನು ಮತ್ತು ಸುವ್ಯವಸ್ಥೆ", "ರಾಜ್ಯದ ಭದ್ರತೆ",  "ಭಯೋತ್ಪಾದನೆ", ಇವುಗಳ  ನಡುವಿನ ನಿರ್ಣಾಯಕ ವ್ಯತ್ಯಾಸಗಳನ್ನು ಒತ್ತಿಹೇಳುವುದು,  ಮತ್ತು "ಗಂಭೀರ ದಂಡದ ನಿಬಂಧನೆಗಳ ಅನಗತ್ಯ ಬಳಕೆ ಅವುಗಳನ್ನು ಕ್ಷುಲ್ಲಕಗೊಳಿಸುವುದು ಮಾತ್ರ" ಎಂಬ ನ್ಯಾಯಾಲಯದ ಎಚ್ಚರಿಕೆ,  ಇದು ನ್ಯಾಯಚಿ೦ತನೆ  ಅಪ್ಪಿಕೊಳ್ಳಬೇಕಾದ ಒ೦ದು ಕ್ಷಣವಾಗಿದೆ. ಕಾರ್ಯಾಂಗದ ಅತಿರೇಕಗಳಿಗೆ ನ್ಯಾಯಾಲಯವು ಕಡಿವಾಣ ಹಾಕುತ್ತದೆ ಎನ್ನುವ   ಭರವಸೆಗೆ  ಇದು ಕಾರಣವನ್ನು ನೀಡುತ್ತದೆ. ಆದರದಿ೦ದ, ನ್ಯಾಯಾಲಯವು ಖಾಲಿದ್ ಅವರ ಶಬ್ದಕೋಶದ ಮೇಲಿನ ತನ್ನ ಟೀಕೆಗಳ ಮೂಲಕ ನ್ಯಾಯಾಲಯ ವಿಚಾರಣೆಗಳ ಪ್ರಕ್ರಿಯೆಯ ಗುರುತಾದ ವಿರೋಧಿತ ಪಕ್ಷಗಳು ನಡೆಸುವ  ವಾದ ಪ್ರತಿವಾದದ ಶೈಲಿಯಲ್ಲಿ ಕೆಣಕುತ್ತಿತ್ತು  ಎಂದು ಆಶಿಸಬಹುದೇ ?  ಏಕೆಂದರೆ ನಾಗರಿಕರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾದಾಗ, ದ್ವಂದ್ವಾರ್ಥತೆ ಅಥವಾ ವಿಳಂಬವಿಲ್ಲದೆ, ಶೈಲಿಗಿಂತ ಸತ್ವದ  ಮೇಲೆ ಮಾತನಾಡುವ ನ್ಯಾಯಾಂಗವು ಏಕೈಕ ಭದ್ರಕೋಟೆಯಾಗಿದೆ. ಪ್ರಧಾನಿಯ   ಮನಸ್ಸಿಗೆ ಏನು ನೋವು ಮಾಡಬಹುದು ಅಥವಾ ಮಾಡಲಾರದು ಎಂಬುದನ್ನು ಎತ್ತಿ ಹೇಳುವದು  ಸ್ವತಂತ್ರ ನ್ಯಾಯಾಂಗದ ಜವಾಬ್ದಾರಿಯಲ್ಲ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು