ರಾಷ್ಟ್ರೀಯ ವಿದ್ಯಾರ್ಥಿವೇತನದಿಂದ ವಿದೇಶದಲ್ಲಿ 'ಭಾರತೀಯ' ವಿಷಯಗಳನ್ನು ಅಧ್ಯಯನ ಮಾಡಲು ಬಯಸುವ SC ವಿದ್ಯಾರ್ಥಿಗಳನ್ನು ಏಕೆ ಹೊರಪಡಿಸಲಾಗಿದೆ ? 

 

ಭಾರತೀಯ ಗಣರಾಜ್ಯದ ಸ್ಥಾಪಕ ತತ್ವಗಳ ಮೇಲೆ ನಡೆಯುತ್ತಿರುವ ಹೆಚ್ಚಿನ ನೇರ ಆಕ್ರಮಣಗಳ ನಡುವೆ, ನಿರುಪದ್ರವಿಯಾಗಿ ಕಾಣುವ, ಬಹುಶಃ ಒಂದೆರಡು ಡಜನ್ ವಿದ್ಯಾರ್ಥಿಗಳಿಗಿಂತ ಹೆಚ್ಚು ಪರಿಣಾಮ ಬೀರದಿರುವ, ಸರ್ಕಾರಿ ಸುತ್ತೋಲೆಯನ್ನು ಗಮನಿಸದೆ ಇರುವದು ಸುಲಭವಾಗಿದೆ.  ಆದರೆ, ಹೀಗೆ ಮಾಡುವದು ದೊಡ್ಡದೊ೦ದು ಪ್ರಮಾದ .

Why Exclude SC Students Wanting to Study ‘Indian’ Topics Abroad from National Scholarship?

ಫೋಟೋ: ಜೋಶುವಾ ಹೋಹ್ನೆ/

 ಸಿದ್ಧಾರ್ಥ್ ಜೋಶಿ ಮತ್ತು ದೀಪಕ್ ಮಲ್ಘನ್

ಜಾತಿಶಿಕ್ಷಣಸರ್ಕಾರ20/FEB/2022 ದಿ ವಯರ್ ಪ್ರಕಟಣೆ 

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆ (National Overseas Scholarship - NOS) SC, ST ಮತ್ತು ಭೂರಹಿತ ಕೃಷಿ ಕಾರ್ಮಿಕರ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಭಾರತದ ಹೊರಗಿನ ಉನ್ನತ ಶ್ರೇಣಿಯ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯಲು  ( ಮಾಸ್ಟರ್ಸ್ ಮತ್ತು ಡಾಕ್ಟರೇಟ್ ಮಟ್ಟಗಳು) ಧನಸಹಾಯವನ್ನು ಒದಗಿಸುತ್ತದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮವು 1954 ರಲ್ಲಿ ಪ್ರಾರಂಭವಾಗಿ ಸುಮಾರು ಏಳು ದಶಕಗಳಿಂದ ಜಾರಿಯಲ್ಲಿದೆ. 

ಸಾಧಾರಣ ವಾರ್ಷಿಕ ಬಜೆಟ್‌ನೊಂದಿಗೆ (2021 ರಲ್ಲಿ ವರ್ಷಕ್ಕೆ ರೂ. 20 ಕೋಟಿಗಿಂತ ಕಡಿಮೆ),  100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಈ ಯೋಜನೆ ಉದ್ದೇಶಿಸುತ್ತದೆ (ಈ ವರ್ಷ ಈ ಸ೦ಖ್ಯೆಯನ್ನು  125 ಕ್ಕೆ ಹೆಚ್ಚಿಸಲಾಗಿದೆ,  ಅದರಲ್ಲಿ 115 ನ್ನು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ). ಆದಾಗ್ಯೂ, ಕಳೆದ ಆರು ವರ್ಷಗಳಲ್ಲಿ, ಕೇವಲ 50-70 ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿವೇತನವನ್ನು ನೀಡಲಾಗಿದೆ ( ವಾರ್ಷಿಕ ವರದಿಗಳು ತಾತ್ಕಾಲಿಕ ಪ್ರಶಸ್ತಿಗಳ ಗಮನಾರ್ಹ ಭಾಗವು  ಪಟ್ಟಿಯಲ್ಲಿ ತೋರಿಸಿರುವ೦ತೆ  ಅಂತಿಮ ವಿತರಣೆಯಾಗಿ  ಪರಿವರ್ತಿಸುವುದಿಲ್ಲ ಎಂಬ ಅಂಶವನ್ನು ವಿಶದೀಕರಿಸುವದಿಲ್ಲ.).

ಕೋಷ್ಟಕ: 2016-17 ರಿಂದ 2021-22


2021-22

2020-21

2019-20

2018-19

2017-18

2016-17

ಪುರುಷ

28

51

32

30

37

30

ಪುರುಷ

11

22

14

20

18

16

2020

39

73

46

50

65

46

ಮೂಲ: ಶ್ರೀ ಎ. ಮೆಶ್ರಾಮ್ ಅವರು  RTI ಅಡಿಯಲ್ಲಿ ಪಡೆದ ಮಾಹಿತಿ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸುಮಾರು 5.53 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುತ್ತಾರೆ. ಇದಕ್ಕೆ ಹೋಲಿಸಿದರೆ, NOS ಕಾರ್ಯಕ್ರಮದ ಪ್ರಮಾಣಿತ ಗುರಿಯು ಅತಿ ಸಣ್ಣ ಸ೦ಖ್ಯೆ - ಕೇವಲ 100 ವಿದ್ಯಾರ್ಥಿಗಳು . ಕಾರ್ಯಕ್ರಮದ ಕಳಪೆ ವಿನ್ಯಾಸ ಮತ್ತು  ಬದ್ಧತೆಯ ಅಸ್ಪಷ್ಟ ಅನುಷ್ಠಾನ, ಅಪ್ರಾಯೋಗಿಕ ಅನರ್ಹತೆಯ  ಮಾನದಂಡಗಳ ಜೊತೆಗೆ, ಅಂತಿಮ ಸಂಖ್ಯೆಯು ಇನ್ನೂ ಕಡಿಮೆ.  ಉದಾಹರಣೆಗೆ, ಸಾರ್ವಜನಿಕ ಸಂಸ್ಥೆಯಲ್ಲಿ ಸಾಧಾರಣ ವಿದ್ಯಾರ್ಥಿವೇತನವನ್ನು ಪಡೆಯುವ ಯಾವುದೇ ಎಂಫಿಲ್ ವಿದ್ಯಾರ್ಥಿ NOS ಕಾರ್ಯಕ್ರಮದ ನಿಗದಿತ  ಆದಾಯದ ಮಿತಿಯನ್ನು ದಾಟಿ ಅನರ್ಹರಾಗ ಬಹುದು. NOS ಕಾರ್ಯಕ್ರಮಕ್ಕೆ  ಅರ್ಹರಾಗಲು  ವಿದ್ಯಾರ್ಥಿಗಳು ವಿದ್ಯಾರ್ಥಿವೇತನ (ಸ್ಟೈಫಂಡ್) ಇಲ್ಲದೆ ಒಂದು ವರ್ಷ ಕಾಯುವದನ್ನು ನಾವು ಕ೦ಡಿದ್ದೇವೆ.

ಕಳೆದ ವರ್ಷದವರೆಗೆ, NOS ವಿದ್ಯಾರ್ಥಿವೇತನ ಕಾರ್ಯಕ್ರಮವು ಎಲ್ಲಾ ಪ್ರಮುಖ ಶಿಸ್ತುಗಳಲ್ಲಿ ವಿದ್ಯಾರ್ಥಿಗಳನ್ನು ಸಹಾಯಿಸುತ್ತಿತ್ತು. ಆದಾಗ್ಯೂ, ಈ ವರ್ಷ ಹೊರಡಿಸಲಾದ ಹೊಸ ಮಾರ್ಗಸೂಚಿಗಳು " ಭಾರತೀಯ ಸಂಸ್ಕೃತಿ/ಪರಂಪರೆ/ಇತಿಹಾಸಗಳು/ಭಾರತದ  ಸಾಮಾಜಿಕ ಅಧ್ಯಯನಗಳಿಗೆ ಸಂಬಂಧಿಸಿದ ವಿಷಯಗಳು/ಕೋರ್ಸು”ಗಳನ್ನು ಹೊರಗಿಟ್ಟಿವೆ.  ಇದಲ್ಲದೆ, ಯಾವ ವಿಷಯವು ಈ ವರ್ಗಗಳ ಅಡಿಯಲ್ಲಿ ಬರುತ್ತದೆ ಎಂಬುದರ ಕುರಿತು ಅಂತಿಮ ನಿರ್ಧಾರವು "NOS ನ ಆಯ್ಕೆ-ಕಮ್-ಸ್ಕ್ರೀನಿಂಗ್ ಸಮಿತಿಯ ಹಿಡಿತದಲ್ಲಿರುತ್ತದೆ." ಈ ಹಠಾತ್ ಬದಲಾವಣೆಯನ್ನು ಅಂತಿಮ ಅಪ್ಲಿಕೇಶನ್ ಗಡುವಿನ ಕೇವಲ ಎರಡು ತಿಂಗಳ ಮೊದಲು ಮಾಡಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಈ ವಿದ್ಯಾರ್ಥಿವೇತನವನ್ನು ಪಡೆಯಲು ಆಶಿಸುತ್ತಿರುವವರಿಗೆ ಇದು ಹೀನಾಯ ಹೊಡೆತವಾಗಿದೆ. ನಮ್ಮ  ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಇ೦ಗ್ಲ೦ಡಿನಲ್ಲಿ ಉನ್ನತ ಶ್ರೇಣಿಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶವನ್ನು ಪಡೆದುಕೊಂಡಿದ್ದಾರೆ ಮತ್ತು NOS ವಿದ್ಯಾರ್ಥಿವೇತನ ಧನಸಹಾಯವನ್ನು ಬಳಸಿಕೊಂಡು ತಮ್ಮ ಡಾಕ್ಟರೇಟ್ ಶಿಕ್ಷಣವನ್ನು  ಮಾಡಲು ಆಶಿಸುತ್ತಿದ್ದರು.

ಇಂತಹ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಚಿವಾಲಯವು ಯಾವುದೇ ಸಾರ್ವಜನಿಕ ಸಮಾಲೋಚನೆ ನಡೆಸಲಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು

1954-55ರಲ್ಲಿ NOS ಪ್ರೋಗ್ರಾಂ ಪ್ರಾರಂಭವಾದಾಗ, ಅದು , ವಿಜ್ಞಾನ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿತ್ತು. ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳನ್ನು 2012 ರಲ್ಲಿ ಸೇರಿಸಲಾಯಿತು.

2006ರ  ಸಂಸದೀಯ ಸ್ಥಾಯಿ ಸಮಿತಿಯು ಈ ಹೊರಗಿಡುವಿಕೆಯ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದಾಗ, ಸಚಿವಾಲಯದ ಪ್ರತಿಕ್ರಿಯೆಯು "ಭಾರತದಲ್ಲಿ ಸಾಕಷ್ಟು ಸೌಲಭ್ಯಗಳು ಲಭ್ಯವಿರುವ ವಿಷಯಗಳು ಸಾಗರೋತ್ತರ ವಿದ್ಯಾರ್ಥಿವೇತನದ ವಿಷಯಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ" ಎಂದು ಉತ್ತರಿಸಿತು. 

ಐತಿಹಾಸಿಕವಾಗಿ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳು ವಿದೇಶದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಲು ಬಯಸುವ ಏಕೈಕ ಕಾರಣವೆಂದರೆ ವಿದೇಶದಲ್ಲಿ ಉತ್ತಮ ಸೌಲಭ್ಯಗಳು ಎಂದು ಈ ವಾದವು ಊಹಿಸುತ್ತದೆ. ಆದರೆ ಐತಿಹಾಸಿಕವಾಗಿ ಅಂಚಿನಲ್ಲಿರುವ ಗುಂಪುಗಳ ವಿದ್ವಾಂಸರು ಭಾರತೀಯ ಕ್ಯಾಂಪಸ್‌ಗಳಲ್ಲಿ ಸ್ಪಷ್ಟವಾದ ಮತ್ತು ಸೂಚ್ಯವಾದ ಜಾತಿ ತಾರತಮ್ಯವನ್ನು ಅನುಭವಿಸುವದು ಅಸಾಧಾರಣ ಸ೦ಗತಿಯಲ್ಲ. ಸಾಗರೋತ್ತರ ಸಂಸ್ಥೆಯಿಂದ ಪಿಎಚ್‌ಡಿ ಪದವಿಯನ್ನು ಪಡೆಯುವುದು ಗಣ್ಯ ಭಾರತೀಯ ಸಂಸ್ಥೆಗಳಲ್ಲಿ ಅಧ್ಯಾಪಕ ಹುದ್ದೆಗಳನ್ನು ಪಡೆಯಲು ಉತ್ತಮ ಅವಕಾಶಗಳನ್ನು ನೀಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಅಂಚಿನಲ್ಲಿರುವ ಸಮುದಾಯಗಳ ವಿದ್ವಾಂಸರು ಪ್ರತಿದಿನ ಸಹಿಸಿಕೊಳ್ಳುವ (ಅ೦ತಹ  ವಿದ್ವಾಂಸರು ಮೀಸಲಾತಿ ಪ್ರಯೋಜನಗಳನ್ನು ಪಡೆಯದಿದ್ದರೂ ಸಹ) 'ಅರ್ಹತೆಯ ಕೊರತೆ'ಯ  ಪರೋಕ್ಷ ಯಾ ರಹಸ್ಯ ಟೀಕೆ/ಸೂಚನೆಯಿ೦ದ ಪಾರಾಗಲು ವಿದೇಶಿ ಪದವಿ ಮಾರ್ಗ ನೀಡುತ್ತದೆ.

ಈ ಹೊಸ ನಿರ್ಬಂಧವು  ಬ೦ದಿರುವದು ಸಾಮಾಜಿಕ ಮತ್ತು ಮಾನವಿಕ ವಿಜ್ಞಾನಗಳ ನಿಖರವಾದ  ಪಾ೦ಡಿತ್ಯಕ್ಕೆ  ಸತತವಾಗಿ ಸಂಪೂರ್ಣ ತಿರಸ್ಕಾರ ಮತ್ತು ತಾತ್ಸಾರವನ್ನು ಪ್ರದರ್ಶಿಸಿದ ಅಧಿಕಾರೂಢ ಸ್ಥಾಪನೆಯಿಂದ ಎನ್ನುವ ವಾಸ್ತವಿಕತೆಯಲ್ಲಿ ಆಶ್ಚರ್ಯವೇನಿಲ್ಲ. ಆದಾಗ್ಯೂ, "ಇಡೀ ರಾಜಕೀಯ ವಿಜ್ಞಾನ" (ಅನುವಾದಕ ಟಿಪ್ಪಣಿ: ನರೇ೦ದ್ರ ಮೋದಿ "ಇಡೀ ರಾಜಕೀಯ ವಿಜ್ಞಾನ" ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊ೦ದಿದ್ದಾರೆ ಎ೦ದು ಹೇಳಿಕೊಳ್ಳುವದು  ಸಾಕಷ್ಟು ಗೇಲಿ ಎದುರಿಸಿದೆ) ದ ಇತಿಹಾಸದಿ೦ದ  ಹೊರಹೊಮ್ಮುವ  ಬಾಹುಬಲ ಆಧಾರಿತ ಮತ್ತು ಕೆಲವರನ್ನು ಹೊರಗಿಡುವ ರಾಷ್ಟ್ರೀಯತೆಯ ಹಿಂದೆ ಅಡಗಿರುವ ಹೇಡಿತನವು ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳಿಗೆ ಏಕೆ ಅನುದಾನವನ್ನು ನಿರಾಕರಿಸಲಾಗುತ್ತಿದೆ  ಎಂಬುದನ್ನು ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ.

ಇತ್ತೀಚಿನ ತಿಂಗಳುಗಳಲ್ಲಿ, ಯುನೈಟೆಡ್ ಸ್ಟೇಟ್ಸ್ ಅಮೆರಿಕ ಮತ್ತು ಇತರೆಡೆಗಳಲ್ಲಿ ದೃಢವಾದ ದಲಿತ ಮಧ್ಯಮ ವರ್ಗವು ಭಾರತದ ಜಾತಿ ಶ್ರೇಣಿಯ ವಿನಾಶಕಾರಿ ಪರಿಣಾಮಗಳನ್ನು ಗುರುತಿಸಲು ಸಂಸ್ಥೆಗಳನ್ನು ಒತ್ತಾಯಿಸಿದೆ. ಜಾತಿ ತಾರತಮ್ಯಕ್ಕೆ ಕುಮ್ಮಕ್ಕು ನೀಡಿದ್ದಕ್ಕಾಗಿ  (ಅತಿ ದೊಡ್ಡ ವ್ಯವಹಾರ ಸ೦ಸ್ಥೆಯ ಮಾಪನ) ಫಾರ್ಚೂನ್ 500 ಕಾರ್ಪೊರೇಷನ್ನೊ೦ದರ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಮತ್ತು ಹಲವಾರು ಪ್ರಮುಖ ವಿಶ್ವವಿದ್ಯಾನಿಲಯಗಳು ಜಾತಿಯನ್ನು ಸಂರಕ್ಷಿತ ವರ್ಗವಾಗಿ ಸೇರಿಸಲು ಪ್ರಾರಂಭಿಸಿವೆ. ಜಾಗತಿಕ ಬ್ರಾಹ್ಮಣತ್ವವನ್ನು ಮೊದಲು ಕಿತ್ತೊಗೆಯದೆ “ಜಾಗತಿಕ ಹಿಂದುತ್ವವನ್ನು ಕಿತ್ತುಹಾಕುವುದು” ಏಕೆ ಯಶಸ್ವಿಯಾಗುವುದಿಲ್ಲ ಎಂಬುವ   ಪರಿಕಲ್ಪನೆಗೆ  ವಿದೇಶದಲ್ಲಿರುವ ದಲಿತ ಬುದ್ಧಿಜೀವಿಗಳು ಮುಂಚೂಣಿಯಲ್ಲಿದ್ದಾರೆ.

ಪರದೇಶಗಳಲ್ಲಿ ಹರಡಿರುವ  ಇದೇ ದಲಿತ  ಜನಸಂಖ್ಯೆಯು  ಅಮೆರಿಕದ ಸಂಸ್ಥೆಗಳಲ್ಲಿ ಭಾರತೀಯರಿಗೆ ಲಾಭದಾಯಕವಾಗಿರುವ  ವೈವಿಧ್ಯತೆ ಮತ್ತು ದೃಢೀಕರಣದ ಕಾರ್ಯನೀತಿಗಳನ್ನು (diversity and affirmative action policies) "ಮೇಲ್ಮಟ್ಟದ" ಜಾತಿಗಳ  ವಿದ್ಯಾರ್ಥಿಗಳು ಹೇಗೆ ಸಂಪೂರ್ಣವಾಗಿ ಏಕಸ್ವಾಮ್ಯ ಮಾಡುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಪ್ರಾಬಲ್ಯವು ವಿಶೇಷವಾಗಿ ಸಮಾಜ ಮತ್ತು ಮಾನವಿಕವಿಜ್ಞಾನಗಳಲ್ಲಿ ಸಂಪೂರ್ಣವಾಗಿದೆ. ಈ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿ ಭಾರತೀಯ ಮೂಲದ ವಿದ್ವಾಂಸರ ಯಾವುದೇ ಪಟ್ಟಿಯು ಭಾರತೀಯ ಅಧಿಕಾರಶಾಹಿಯ ಉನ್ನತ ಸ್ತರದಲ್ಲಿ ಕೌಟುಂಬಿಕ ಸಂಬಂಧಗಳನ್ನು ಬಳಸಿಕೊಂಡು ಶೈಕ್ಷಣಿಕ ಹಿರಿಮೆಗೆ ಏರಿಸಿದ  ಸಂಶೋಧನೆಯನ್ನು ಉತ್ಪಾದಿಸಿದವರ ಪ್ರಾಬಲ್ಯವನ್ನು  ಹೊರಪಡಿಸುತ್ತದೆ.  ಪ್ರಮುಖ ಜಾಗತಿಕ ಸಂಸ್ಥೆಗಳಲ್ಲಿ ಪ್ರವೇಶ ದ್ವಾರ ನಿಯ೦ತ್ರಿಸುವ  ಅಧಿಕಾರವನ್ನು ಭದ್ರವಾಗಿ ಹೊಂದಿರುವ ಭಾರತೀಯ ಮೂಲದ ವಿದ್ವಾಂಸರು ಅಪರೂಪವಾಗಿ ಒಪ್ಪಿಕೊಂಡಿರುವ ಈ ಬ್ರಾಹ್ಮಣರ ಸ೦ಘ- ಜಾಲಗಳನ್ನು  ಹೊರದೇಶಗಳ ದಲಿತ ಸಮಾಜಗಳು  ಪರಿಣಾಮಕಾರಿಯಾಗಿ ಬಹಿರಂಗಪಡಿಸಿದ್ದಾರೆ. ಶ್ವೇತವರ್ಣೀಯ ಸವಲತ್ತುಗಳ ವಿರುದ್ಧ ತಮ್ಮನ್ನು ತಾವು ಕಣಕ್ಕಿಳಿಸುವಾಗ, ತಮ್ಮದೇ ಆದ ಆರೋಹಣವನ್ನು ಪ್ರಾರಂಭಿಸಿದ ಬ್ರಾಹ್ಮಣರ ಸವಲತ್ತುಗಳ ಸುತ್ತ ಯಾವಾಗಲೂ ವಿಸ್ಮೃತಿಯನ್ನುಆಚರಣೆ  ಮಾಡಲಾಗುತ್ತದೆ. 

ಹೊರದೇಶ-ಆಧಾರಿತ ದಲಿತರು  ಗಣ್ಯ ಭಾರತೀಯ ಸಂಸ್ಥೆಗಳ ಮೇಲಿನ ಸಂಪೂರ್ಣ ಬ್ರಾಹ್ಮಣರ ಹಿಸುಕುವ ನಿಯ೦ತ್ರಣದ ಮೇಲೆ ಬೆಳಕು ಹಾಕುವದರಲ್ಲಿ  ಕೂಡ ಮುಂಚೂಣಿಯಲ್ಲಿದ್ದಾರೆ. ನಮ್ಮದೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ,  ಅಧ್ಯಾಪಕ  ವೃಂದದಲ್ಲಿ ಕನಿಷ್ಠ 80% ರಷ್ಟು ಜನರು ಭಾರತದ ವೈವಿಧ್ಯಮಯ ಜನಸಂಖ್ಯೆಯ 7% ಕ್ಕಿಂತ ಕಡಿಮೆ ಪ್ರತಿನಿಧಿಸುವ ಕೇವಲ ಎರಡು "ಮೇಲಿನ" ಜಾತಿ ಗುಂಪುಗಳಿಂದ ಪಡೆದಿದ್ದಾರೆ ಎಂದು ನಾವು ಅಂದಾಜು ಮಾಡುತ್ತೇವೆ. ಅದ್ಯಾಪಕರೊಬ್ಬರು  ಸಾರ್ವಜನಿಕ ಸಂಸ್ಥೆಯ ಸೌಲಭ್ಯಗಳನ್ನು ಬಳಸಿಕೊಂಡುಸತ್ಸಂಗ’ಗಳ  ಖಾಸಗಿ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ.  

ಅತ್ಯುತ್ತಮ ಜಾಗತಿಕ ಸಂಸ್ಥೆಯಲ್ಲಿ ತರಬೇತಿ ಪಡೆದ ಆತ್ಮವಿಶ್ವಾಸದ ಬಹುಜನ ವಿದ್ವಾಂಸರು ಈ ಪ್ರಾಬಲ್ಯಕ್ಕೆ ಬೆದರಿಕೆಯನ್ನು ಒಡ್ಡುತ್ತಾರೆ.

ಯಾವುದೇ ಫ್ಯಾಸಿಸ್ಟ್ ತ೦ತ್ರಗಳಲ್ಲಿ ಅತ್ಯಗತ್ಯ ಸಾಧನವೆಂದರೆ ಭಿನ್ನಾಭಿಪ್ರಾಯ ಹೊಂದಿರುವವರನ್ನು ದಣಿಸುವುದು. ಭಾರತೀಯ ಗಣರಾಜ್ಯದ ಸ್ಥಾಪಕ ತತ್ವಗಳ ಮೇಲೆ ನಡೆಯುತ್ತಿರುವ ಹೆಚ್ಚಿನ ನೇರ ಆಕ್ರಮಣಗಳ ನಡುವೆ, ನಿರುಪದ್ರವಿಯಾಗಿ ಕಾಣುವ, ಬಹುಶಃ ಒಂದೆರಡು ಡಜನ್ ವಿದ್ಯಾರ್ಥಿಗಳಿಗಿಂತ ಹೆಚ್ಚು ಪರಿಣಾಮ ಬೀರದಿರುವ, ಸರ್ಕಾರಿ ಸುತ್ತೋಲೆಯನ್ನು ಗಮನಿಸದೆ ಇರುವದು ಸುಲಭವಾಗಿದೆ. ಆದರೆ ಇ೦ತಹ ನಿರ್ಲಕ್ಷ  ದೊಡ್ಡ ಪ್ರಮಾದವಾಗುವದು .

ಆಧುನಿಕ ಸಾಮ್ರಾಜ್ಯಗಳಿಗೆ ಅತ್ಯಂತ ಯಶಸ್ವಿ ಸವಾಲುಗಳು ಸಾಮ್ರಾಜ್ಯದ "ಭಾಷೆ" ಯನ್ನು ಕರಗತ ಮಾಡಿಕೊಂಡ ವ್ಯಕ್ತಿಗಳು ಮತ್ತು ಗುಂಪುಗಳಿಂದ ಬಂದಿವೆ. ಒಬ್ಬ ಗಾಂಧಿ, ಅಂಬೇಡ್ಕರ್ ಅಥವಾ ನೆಹರು ಎಲ್ಲರೂ ಸಾಮ್ರಾಜ್ಯದ ಮಹಾನಗರಗಳಲ್ಲಿ ಅಧ್ಯಯನ ಮಾಡಿದರು. ಶತಮಾನಗಳ ಪ್ರಾಬಲ್ಯ ಮತ್ತು ಅಧೀನತೆಯನ್ನು ಪ್ರಶ್ನಿಸಲು ಅಧಿಕಾರ ಪಡೆದ ಬಹುಜನ ವಿದ್ವಾಂಸರ ಪೀಳಿಗೆಯು (ಇ೦ದಿನ  ಆಡಳಿತವು  ಎಷ್ಟೇ  ವೆಚ್ಚಕ್ಕೂ ಸಂರಕ್ಷಿಸಲು ಪ್ರತಿಜ್ಞೆ ಮಾಡಿರುವ) ಬ್ರಾಹ್ಮಣ ಸಾಮ್ರಾಜ್ಯಕ್ಕೆ ಅಸ್ತಿತ್ವವಾದಕ್ಕೆ ಬೆದರಿಕೆಯನ್ನು ಪ್ರಸ್ತುತಪಡಿಸುತ್ತದೆ.  ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ಅವರ ಅಧ್ಯಯನಕ್ಕೆ ಬರೋಡಾ ರಾಜ್ಯವು ಹಣವನ್ನು ನೀಡಿದ್ದರಿಂದ ಆಧುನಿಕ ಭಾರತದ ಇತಿಹಾಸವನ್ನು ಬದಲಾಯಿಸಲಾಯಿತು. ನಮ್ಮ ದೊರೆಗಳು ಮತ್ತೊಬ್ಬ ಅಂಬೇಡ್ಕರ್ ಉದಯಿಸುವದು  ಮತ್ತು ಅದರಿ೦ದಾಗುವ ಅಪಾಯವನ್ನು ಎದುರಿಸುವದಕ್ಕೆ ಸಿಧ್ಧರಲ್ಲ. ಈ ಕಾರಣಕ್ಕಾಗಿಯೇ, ನಮ್ಮ ಅತ್ಯುತ್ತಮ ಸಾರ್ವಜನಿಕ ಸಂಸ್ಥೆಗಳು ನಿರಂತರ ದಾಳಿಗೆ ಒಳಗಾಗಿವೆ - ಕೆಲವೊಮ್ಮೆ ಅಕ್ಷರಶಃ. ರೋಹಿತ್ ವೇಮುಲಾ ಅವರ ಕಟುವಾದ ಆತ್ಮಹತ್ಯಾ ಟಿಪ್ಪಣಿ ಬ್ರಾಹ್ಮಣ ಸಾಮ್ರಾಜ್ಯಕ್ಕೆ ಮಾರಣಾಂತಿಕ ಬೆದರಿಕೆಯನ್ನು ಪ್ರತಿನಿಧಿಸುತ್ತದೆ.

ಸಿದ್ಧಾರ್ಥ್ ಜೋಶಿ ಐಐಎಂ ಬೆಂಗಳೂರಿನ ಫೆಲೋ ಆಗಿದ್ದು, ದೀಪಕ್ ಮಾಲ್ಘಾನ್ ಐಐಎಂಬಿ ಬೆಂಗಳೂರಿನಲ್ಲಿ ಅಧ್ಯಾಪಕರಾಗಿದ್ದಾರೆ. ಅಭಿಪ್ರಾಯಗಳು ವೈಯಕ್ತಿಕ.  ಇವರ ಟ್ವೀಟ್ ಗಳು :  @siddharthkjoshi ಮತ್ತು @deepak_malghan .


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು