ಸಾರ್ವಜನಿಕರ ಹಣದಿ೦ದ ಪಕ್ಷದ ಕಾರ್ಯಕರ್ತರನ್ನು ಓಲೈಸುವದು
ಡೆಕ್ಕನ್ ಹೆರಲ್ಡ್ ಸ೦ಪಾದಕೀಯ ದಿನಾ೦ಕ ೫ ಮಾರ್ಚ್ ೨೦೨೨
ಇತ್ತೀಚೆಗೆ ಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಘೋಷಿಸಿರುವ 25 ಲಕ್ಷ ರೂ.ಗಳ ಪರಿಹಾರವು ಕಾನೂನು ಬಾಹಿರ, ತಾರತಮ್ಯಕರ, ಮತ್ತು ಕೇವಲ ಆಡಳಿತದ ಭಾ ಜ ಪಾ ಪಕ್ಷದ ಹಿಂದುತ್ವವಾದಿ ಘಟಕದ ಓಲೈಕೆಯ ಗುರಿ ಹೊ೦ದಿದೆ. ಕೊಲೆಯಾದ ಅಥವಾ ಊನರಾದ ಇತರರ ಸಂಬಂಧಿಕರಿಂದ ಇದೇ ರೀತಿಯ ಬೇಡಿಕೆಗಳಿಗಾಗಿ ಇದು ಪ್ರವಾಹದ ಬಾಗಿಲುಗಳನ್ನೇ ತೆರೆಯಬಹುದು. ಬಿಜೆಪಿ ಮತ್ತು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹರ್ಷನ ಹತ್ಯೆಯನ್ನು (ಸಾಮಾನ್ಯ, ಕೇವಲ) “ ಕೊಲೆಗಿಂತ ಹೆಚ್ಚು" ಎಂದು ಪ್ರತಿಪಾದಿಸಿದ್ದಾರೆ, ಹೀಗೆ ಇದಕ್ಕೆ ರಾಜಕೀಯ ಅಥವಾ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ, ಹರ್ಷ ಅಪರಾಧ ಕೃತ್ಯ ಗಳ ಪೂರ್ವಭಾವಿಗಳನ್ನು ಹೊಂದಿದ್ದಾನೆ ಮತ್ತು ಕನಿಷ್ಠ ಐದು ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎಂದು ಪೊಲೀಸರು ದಾಖಲಿಸಿದ್ದಾರೆ, ಈ ಪ್ರಕರಣಗಳೂ ಕೋಮುವಾದದ ಛಾಯೆಯನ್ನು ಹೊಂದಿವೆ. ಆತನು ಶಿವಮೊಗ್ಗದಲ್ಲಿ ಮುಸ್ಲಿಂ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿದ ತ೦ಡದ ಭಾಗವಾಗಿದ್ದಾಗಿಯೂ ಆರೋಪವಿದೆ .ಈವರೆಗಿನ ತನಿಖೆಯು ಪ್ರತಿಸ್ಪರ್ಧಿಗಳಿಂದ ಪ್ರತೀಕಾರವನ್ನು ತಳ್ಳಿಹಾಕಿಲ್ಲ, ಇನ್ನೂ ಯಾವುದೇ ಆರೋಪಪಟ್ಟಿ ಸಲ್ಲಿಸಲಾಗಿಲ್ಲ, ಯಾವುದೇ ವಿಚಾರಣೆ ನಡೆದಿಲ್ಲ, ಮತ್ತು ಕೊಲೆಯ ಹಿಂದೆ ಏನಿದೆ ಎಂಬುದರ ಕುರಿತು ನ್ಯಾಯಾಲಯದ ತೀರ್ಪು ಘೋಷಿತವಾಗಿಲ್ಲ.
ಈ ಪರಿಸ್ಥಿತಿಯಲ್ಲಿ ಸರ್ಕಾರವು ಸಂತ್ರಸ್ತರ ಕುಟುಂಬಕ್ಕೆ ತೆರಿಗೆದಾರರ ಹಣದಿಂದ ಪರಿಹಾರವನ್ನು ನೀಡುವುದು ಅನುಚಿತವಾಗಿದೆ. ಒಂದು ಪಕ್ಷವಾಗಿ ಬಿಜೆಪಿ ತನ್ನ ಸ್ವಂತ ಬೊಕ್ಕಸದಿ೦ದ ಯಾವುದೇ ಪರಿಹಾರವನ್ನು ನೀಡಲು ಮುಕ್ತವಾಗಿದೆ, ಆದರೆ ಅದನ್ನು ಸರ್ಕಾರದ ಹಣದಿಂದ ನೀಡಲು ಸಾಧ್ಯವಿಲ್ಲ.
ಬಿಜೆಪಿಯು ಈ ಹಿಂದೆ ತಾನು ಪಕ್ಷ ಅಥವಾ ಸಂಘಪರಿವಾರದ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ವ್ಯಕ್ತಿಗಳ ಸಾವಿಗೆ ರಾಜಕೀಯ ಅಥವಾ ಕೋಮು ಬಣ್ಣ ನೀಡಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಮಾಡಿರುವ 25 ಪ್ರಕರಣಗಳ ಪಟ್ಟಿಯನ್ನು ಹೊರತಂದಿದ್ದಾರೆ. ಆದರೆ ಪೊಲೀಸ್ ಚಾರ್ಜ್‌ಶೀಟ್‌ನಲ್ಲಿ ಖಿನ್ನತೆಯಿ೦ದಾದ ಆತ್ಮಹತ್ಯೆ, ಅಥವಾ ಜಮೀನು ವಿವಾದ , ವೈಯಕ್ತಿಕ ದ್ವೇಷ, ಅಕ್ರಮ ಸಂಬಂಧ ಪ್ರೇರಿತ ಕೊಲೆ ಎಂದು ಉಲ್ಲೇಖಿಸಲಾಗಿದೆ. ಅವರ ಆರೋಪವನ್ನು ಸರ್ಕಾರ ಅಥವಾ ಬಿಜೆಪಿ ಇನ್ನೂ ನಿರಾಕರಿಸಿಲ್ಲ.
ಅಪರಾಧದ ಬಲಿಪಶುಗಳಿಗೆ ನ್ಯಾಯಕ್ಕಾಗಿ ಯುಎನ್ ಘೋಷಣೆಗೆ ಸಹಿ ಹಾಕಿರುವ ಭಾರತವು 200 ಕೋಟಿ ರೂಪಾಯಿಗಳ ಆರಂಭಿಕ ನಿಧಿಯೊ೦ದಿಗೆ ಕೇಂದ್ರ ಸಂತ್ರಸ್ತ ಪರಿಹಾರ ನಿಧಿಯನ್ನು ಪ್ರಾರಂಭಿಸಿದೆ, ಆದರೆ ಯೋಜನೆಯ ವಿವರಗಳನ್ನು ಇನ್ನೂ ಅ೦ತಿಮಗೊಳಿಸಿಲ್ಲ. ದಲಿತ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಲಪಂಥೀಯ ಕಾರ್ಯಕರ್ತನಿಂದ ಮನಬಂದಂತೆ ಥಳಿಸಿ ಸಾವನ್ನಪ್ಪಿದಾಗ, ಅಥವಾ ಡಿಜೆ ಹಳ್ಳಿ ದ೦ಗೆಯಲ್ಲಿ ಹಲವಾರು ಮುಸ್ಲಿಮರು ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಾಗ, ಅಥವಾ ಭಾರತೀಯ ಸೇನೆಯ ಓರ್ವ ಯೋಧ ಕೊಡಗು ಮೂಲದ ಅಲ್ತಾಫ್ ಅಹ್ಮದ್, ಈಚೆಗೆ ಕಾಶ್ಮೀರದಲ್ಲಿ ಹುತಾತ್ಮನಾದಾಗ ಕೂಡ ಹರ್ಷ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ತೋರಿದ ಉತ್ಸಾಹ ಎದ್ದು ಕಾಣಲಿಲ್ಲ.
ಸಮಗ್ರ ಮತ್ತು ನ್ಯಾಯಯುತ ನೀತಿಯನ್ನು ರೂಪಿಸುವ ತುರ್ತು ಅಗತ್ಯವಿದೆ, ಆದರೆ ಸರ್ಕಾರವು ಸಾರ್ವಜನಿಕ ಬೊಕ್ಕಸದಿ೦ದ ಪರಿಹಾರವನ್ನು ನೀಡುವಲ್ಲಿ ಸಮಾನತೆ, ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯ ತತ್ವವನ್ನು ಅನುಸರಿಸಬೇಕು. ಹರ್ಷ ಪ್ರಕರಣವು ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಿಲ್ಲ.
****************************
ಹವಲ್ದಾರ್ ಅಲ್ತಫ಼್ ಅಹ್ಮೆದ್ ರ ಅ೦ತ್ಯಕ್ರಿಯೆಯನ್ನು ಮಡಿಕೇರಿಯಲ್ಲಿ ಪೂರ್ಣ ಸೈನಿಕ ಮರ್ಯಾದೆಗಳೊ೦ದಿಗೆ ನಡೆಯಿಸಲಾಯಿತು (ಉದಯವಾಣಿ, ದಿ, ೨೭ ಫೆಬ್ರವರಿ ೨೦೨೨)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ