ಧರ್ಮದ ಕುರಿತಾದ ಚರ್ಚೆ 

ನೋಮ್ ಚೋಮ್ಸ್ಕಿ ವಿವಿಧ ಸಂದರ್ಶಕರ ಪ್ರಶ್ನೆಗಳಿಗೆ ಉತ್ತರಿಸಿದ್ದು 1990-1999

ಡೇವಿಡ್ ಬಾರ್ಸಾಮಿಯನ್ (1992):

ಪ್ರಶ್ನೆ: ನೀವು ಆಧ್ಯಾತ್ಮಿಕ ಜೀವನವನ್ನು ಗುರುತಿಸುತ್ತೀರಾ ಅಥವಾ ಅಂಗೀಕರಿಸುತ್ತೀರಾ ಮತ್ತು ಅದು  ನಿಮ್ಮ ವ್ಯಕ್ತಿತ್ವದ ಅಂಶವಾಗಿದೆಯೆ ?

ಚೋಮ್ಸ್ಕಿ: ‘ಆಧ್ಯಾತ್ಮಿಕ ಜೀವನ’ದಿಂದ, ನೀವು ಆಲೋಚನೆ ಮತ್ತು ವಿಚಾರ ಮತ್ತು ಸಾಹಿತ್ಯದ ಜೀವನ ಅರ್ಥೈಸುತ್ತೀರಾ ಅಥವಾ ಧರ್ಮದ ಜೀವನವನ್ನು? ಇವು ವಿಭಿನ್ನ ಪ್ರಶ್ನೆಗಳು.

ಪ್ರಶ್ನೆ: ಧರ್ಮದ  ಆಧ್ಯಾತ್ಮಿಕ ಆಯಾಮ. ಅದು ಕಿ೦ಚಿತ್ತಾದರೂ ಒಂದು ಅಂಶವೇ?

ಚೋಮ್ಸ್ಕಿ: ನನ್ನ ಮಟ್ಟಿಗೆ ಅಲ್ಲ. ನಾನು ಜ್ಞಾನೋದಯದ ಚಿ೦ತನೆಯಲ್ಲಿ (Enlightenment) ಹುಟ್ಟಿ ಬೆಳೆದವನು. ಆವೈಚಾರಿಕ ನಂಬಿಕೆಯು (irrational belief) ಅಪಾಯಕಾರಿ ವಿದ್ಯಮಾನ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಪ್ರಜ್ಞಾಪೂರ್ವಕವಾಗಿ  ಆವೈಚಾರಿಕ ನಂಬಿಕೆಯನ್ನು ತಪ್ಪಿಸಲು ಪ್ರಯತ್ನಿಸುತ್ತೇನೆ. ಮತ್ತೊಂದೆಡೆ, ಇದು ಸಾಮಾನ್ಯವಾಗಿ ಜನರಿಗೆ ಒಂದು ಪ್ರಮುಖ ವಿದ್ಯಮಾನವಾಗಿದೆ ಎಂದು ನಾನು ಖಚಿತವಾಗಿ ಗುರುತಿಸುತ್ತೇನೆ.  ಅದು ಏಕೆ ಎಂದು  ಅರ್ಥಮಾಡಿಕೊಳ್ಳಬಹುದು. ಇದು ಸ್ಪಷ್ಟವಾಗಿ, ಅನೇಕ ಜನರಿಗೆ ವೈಯಕ್ತಿಕ ಪೋಷಣೆಯನ್ನು ಒದಗಿಸುತ್ತದೆ,  ಸಹಭಾಗಿತ್ವ ಮತ್ತು ಒಗ್ಗಟ್ಟಿನ ಬಂಧಗಳನ್ನು ಮತ್ತು ಒಬ್ಬರ ವ್ಯಕ್ತಿತ್ವದ ಸಾಮಾನ್ಯವಾಗಿ ಬಹಳ ಮೌಲ್ಯಯುತ ಅಂಶಗಳನ್ನು ವ್ಯಕ್ತಪಡಿಸುವ ಸಾಧನವಾಗಿದೆ. ನನ್ನ ದೃಷ್ಟಿಯಲ್ಲಿ, ಅದರಲ್ಲಿ ಯಾವುದೇ ದೋಷವಿಲ್ಲ. ನನ್ನ ದೃಷ್ಟಿಕೋನವು ತಪ್ಪಾಗಿರಬಹುದು, ಆದರೆ ನನ್ನ ನಿಲುವು ನಾವು ಅವೈಚಾರಿಕ ನಂಬಿಕೆಗೆ ಬಲಿಯಾಗಬಾರದು.

(1995) ಪ್ರಶ್ನೆ: ಧರ್ಮವು  ಮಾನವಕುಲಕ್ಕೆ ಈಗಿರುವದಕ್ಕಿ೦ತ ಹೆಚ್ಚು ಧನಾತ್ಮಕ ಮತ್ತು ಆರೋಗ್ಯಕರ ಸಂಪನ್ಮೂಲವಾಗಲು ಸಾಧ್ಯವೇ?

ಚೋಮ್ಸ್ಕಿ: ಧರ್ಮವು ಅನೇಕ ಬಾರಿ ಧನಾತ್ಮಕ ಪಾತ್ರವನ್ನು ವಹಿಸಿದೆ ಎಂದು ನಾನು ಭಾವಿಸುತ್ತೇನೆ. ಪಾಶ್ಚಿಮಾತ್ಯ ನಾಗರಿಕತೆಯನ್ನು ತೆಗೆದುಕೊಳ್ಳಿ, ಅಗತ್ಯವಿರುವವರಿಗೆ ಸಹಾಯ ಮಾಡುವಲ್ಲಿ ಕ್ಯಾಥೋಲಿಕ್ ಚರ್ಚ್ ಗೌರವಾನ್ವಿತ ಪಾತ್ರವನ್ನು ವಹಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, 1980 ರ ದಶಕದಲ್ಲಿ ಮಧ್ಯ ಅಮೇರಿಕಾದಲ್ಲಿನ ಚರ್ಚ್‌ನ ವಿರುದ್ಧ ಅಮೆರಿಕ ದೇಶವು ವಸ್ತುತಃ ಒಂದು ಯುದ್ಧವನ್ನು ನಡೆಸಿತು, ಪ್ರಾಥಮಿಕವಾಗಿ ಏಕೆಂದರೆ ಚರ್ಚ್‌ನಲ್ಲಿನ ಪ್ರಧಾನ ವಿಭಾಗಗಳು  ಬಡತನದಲ್ಲಿರುವವರಿಗೆ ಸಹಾಯ ಮಾಡಲು,  ತಮ್ಮನ್ನು ತಾವೇ ಸಹಾಯ ಮಾಡಲು ಅವರನ್ನು ಸಂಘಟಿಸಲು,  ಮಹಾನ್  ಧೈರ್ಯ ಮತ್ತು ಗೌರವದಿಂದ ಕೆಲಸ ಮಾಡುತ್ತಿದ್ದವು. ಆ ದಶಕವು ಓರ್ವ ಆರ್ಚ್‌ಬಿಷಪ್‌ನ ಹತ್ಯೆಯೊಂದಿಗೆ ಪ್ರಾರಂಭವಾಯಿತು ಮತ್ತು 6 ಜೆಸ್ಯೂಟ್ ಬುದ್ಧಿಜೀವಿಗಳ ಹತ್ಯೆಯೊಂದಿಗೆ ಕೊನೆಗೊಂಡಿತು, ಎರಡೂ ಸಂದರ್ಭಗಳಲ್ಲಿ ಅಮೆರಿಕ ಸರ್ಕಾರದಿಂದ ಶಸ್ತ್ರಸಜ್ಜಿತ ಮತ್ತು ತರಬೇತಿ ಪಡೆದ ಮಿಲಿಟರಿ ಪಡೆಗಳಿಂದ.  ಇವು ಸಾ೦ಕೇತಿಕ ಸೂಚನೆಯನ್ನು ಮೀರಿದವು.

ಪ್ರಶ್ನೆ: ಪ್ರೊ. ಚೋಮ್ಸ್ಕಿ, ಸರ್ಕಾರ, ಶಾಲೆಗಳು ಇತ್ಯಾದಿಗಳ ಮೇಲೆ ಕ್ರಿಶ್ಚಿಯನ್ ಒಕ್ಕೂಟ (Christian Coalition) ದ ಪ್ರಭಾವದ ಬಗ್ಗೆ ನಿಮಗೆ ಆತ೦ಕ ಇದೆಯೇ?

ಚೋಮ್ಸ್ಕಿ: ಕ್ರಿಶ್ಚಿಯನ್ ಒಕ್ಕೂಟವು ಅತ್ಯಂತ ಅಪಾಯಕಾರಿ ಎಂದು ನಾನು ಭಾವಿಸುತ್ತೇನೆ. ಯಾವುದೇ ಗುಂಪು ತಮ್ಮ ಸೈದ್ಧಾಂತಿಕ ಕಾಳಜಿಯನ್ನು ಎಲ್ಲರ ಮೇಲೆ ಹೇರಲು ಬಯಸಿದಾಗ  (ಒಂದು ಮಟ್ಟಿಗೆ ಅವರು ಮಾಡಲು ಪ್ರಯತ್ನಿಸುತ್ತಿರುವದು ಇದನ್ನೇ) ನಾವು ಯಾವಾಗಲೂ ಚಿ೦ತಿತರಾಗಬೇಕು.

ಪ್ರಶ್ನೆ: ಕ್ರಿಶ್ಚಿಯನ್ ಒಕ್ಕೂಟದ ಬಗ್ಗೆ ನಿಮ್ಮ ಪ್ರತಿಕ್ರಿಯೆ "ಬೌದ್ಧಿಕವಾಗಿ ಪ್ರಾಮಾಣಿಕವಾಗಿದೆ" ಎಂದು ನನಗೆ ಅನಿಸುವದಿಲ್ಲ. NAACP  (National Association for the Advancement of Colored People) ಅಥವಾ ACLU( American Civil Liberties Union) ನಂತಹ ಸಂಘಟಿತ ಗುಂಪುಗಳು (ಟಿಪ್ಪಣಿ: ಇವು ಮಾನವತಾ ಹಕ್ಕುಗಳ ಸ೦ರಕ್ಷಣೆಗೆ ಮತ್ತು ಜನಾ೦ಗೀಯ ತಾರತಮ್ಯಗಳ ವಿರುಧ್ಧ ಹೋರಾಡುವ ಸ೦ಘಟನೆಗಳು) ತಮ್ಮ ಇಚ್ಛೆಯನ್ನು ಇತರರ ಮೇಲೆ ಹೇರಲು ಪ್ರಯತ್ನಿಸುವುದು ರಾಜಕೀಯದ ಸ್ವಭಾವವಲ್ಲವೇ? 

ಚೋಮ್ಸ್ಕಿ: ಇಚ್ಚೆ, ಮತ್ತು ಸಿದ್ಧಾಂತ ಆಧಾರಿತ ನಿಯ೦ತ್ರಣ, ಇವು ಎರಡು ಬೇರೆ ಬೇರೆ ವಿಷಯಗಳು.   NAACP ಎಲ್ಲರ ಕಡೆಗೆ ಏನಾದರೂ ನಿಯಂತ್ರಣವನ್ನು ಹೇರಿದರೆ, ನಾನು ಅದನ್ನು ಕಟುವಾಗಿ ವಿರೋಧಿಸುವೆನು.

(೧೯೯೦) ಆಡಮ್ ಜೋನ್ಸ್ :

ಪ್ರಶ್ನೆ: ಸಂಘಟಿತ ಅಥವಾ ಬೇರೆ ರೀತಿಯ ಧರ್ಮದ ನಿಮ್ಮ ಅಭಿಪ್ರಾಯಗಳ  ಬಗ್ಗೆ ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ. ಅಮೆರಿಕ ದೇಶ  ಮತ್ತು ಮಧ್ಯ ಅಮೆರಿಕದಲ್ಲಿ ನೀವು ಭೇಟಿ ನೀಡಿದ ಅಥವಾ ವ್ಯವಹರಿಸಿದ ಚರ್ಚ್ ಸಂಸ್ಥೆಗಳು ಮತ್ತು ಸಮುದಾಯಗಳ ವಿಷಯದಲ್ಲಿ ನಿಮ್ಮ  ಉಲ್ಲೇಖಗಳಿವೆ. ಅವರು ಮಾಡುತ್ತಿರುವ ಕೆಲಸಕ್ಕೆ ನೀವು ಆಗಾಗ್ಗೆ ಹೊಗಳಿಕೆಯಿಂದ ತುಂಬಿರುತ್ತೀರಿ; ನಿಮ್ಮ ಪುಸ್ತಕಗಳಲ್ಲಿ ಅವರ ಮಾನವ ಹಕ್ಕುಗಳ ವರದಿಗಳನ್ನು ನೀವು ಉಲ್ಲೇಖಿಸುತ್ತೀರಿ, ಇತ್ಯಾದಿ. ಆದರೆ ಹೆಚ್ಚು ವೈಯಕ್ತಿಕ ಮಟ್ಟದಲ್ಲಿ, ನೀವು ಹೇಗೆ ಸಂಬಂಧ ಹೊಂದಿದ್ದೀರಿ ಎಂಬುದರ ಬಗ್ಗೆ ನನಗೆ ಆಸಕ್ತಿ ಇದೆ. ನಿಮ್ಮ ಸ್ವಂತ ನಾಸ್ತಿಕ, ಜ್ಞಾನೋದಯ-ಆಧಾರಿತ ತತ್ತ್ವಶಾಸ್ತ್ರದ ಬೆಳಕಿನಲ್ಲಿ ಕ೦ಡರೆ, ಪುನರುತ್ಥಾನ, ಪವಾಡ ಮು೦ತಾದ ಅಲೌಕಿಕ ವಿದ್ಯಮಾನಗಳಲ್ಲಿ ಭಕ್ತಿಯಿಂದ ನಂಬುವ ಜನರು  ಚಿತ್ತ ಸ್ವಾಸ್ಥ್ಯದಿ೦ದ ಅಲ್ಪ ದೂರವಿರಬಹುದು. ರಾಜಕೀಯ ವಲಯದಲ್ಲಿ ಆ ರೀತಿಯ ಆಧ್ಯಾತ್ಮವನ್ನು ಟೀಕಿಸದೆ ನೀವು ಬಿಡುವುದಿಲ್ಲ. ಆದರೆ ಈ ಭಕ್ತ ಜನರೊಂದಿಗೆ ನಿಮ್ಮ ಸಂಬಂಧದಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ?

ಚೋಮ್ಸ್ಕಿ:  ಮೂಲತಃ ಈ ಪ್ರಶ್ನೆ ಉದ್ಭವಿಸುವದಿಲ್ಲ.  ಅಂದರೆ, ನನ್ನ ನಿಲುವುಗಳು ಏನು  ಎಂದು ಅವರಿಗೆ ತಿಳಿದಿದೆ, ಅವರು ಎಲ್ಲಿ ನಿಂತಿದ್ದಾರೆಂದು ನನಗೆ ತಿಳಿದಿದೆ. ನೀವು  ಕೇಳಬಹುದು: ಈ  ಹೋರಾಟ  ಎಷ್ಟು ಮುಖ್ಯ, ಜನರು ಅವೈಚಾರಿಕ  ನಂಬಿಕೆಗಳನ್ನು ಹೊಂದಿರಬಾರದು ಎಂದು ಮನವರಿಕೆ ಮಾಡಲು ಪ್ರಯತ್ನಿಸುವುದು ಎಷ್ಟು ಮುಖ್ಯ? ಇದು ಸಾಕಷ್ಟು  ಮುಖ್ಯವಾಗಿದೆ ಎಂದು ನಾನು ಭಾವಿಸುತ್ತೇನೆ ಮತ್ತು ವಿಷಯ ಬಂದಾಗ ನಾನು ಅದನ್ನು ಮಾಡುತ್ತೇನೆ. 

ಆದರೆ ಹೇಳಿದ ಅನ್ವೇಷಣೆಗಳಿಗೆ, ಅವರ ಗುರಿಗಳಿಗೆ ಇದು ಅಷ್ಟು ಮುಖ್ಯವಲ್ಲ, ಹಾಗಾಗಿ  ನಾನು ಅದನ್ನು ಅಡೆತಡೆಯಾಗಲು ಬಿಡುವುದಿಲ್ಲ.

ಜನರು ತಾತ್ವಿಕವಾಗಿ ಅವೈಚಾರಿಕ ನಂಬಿಕೆಗಳನ್ನು ಹೊಂದಿರಬಾರದು ಎಂದು ನಾನು ಭಾವಿಸುತ್ತೇನೆ, ಆದರೂ ವಾಸ್ತವವಾಗಿ, ನಾನು ಸಂಪೂರ್ಣವಾಗಿ ಅವೈಚಾರಿಕ ಎ೦ದು ಪರಿಗಣಿಸುವ ನ೦ಬಿಕೆಗಳನ್ನು ಹೊ೦ದಿರುವ ಜನರೇ ಅನೇಕ ವಿಷಯಗಳಲ್ಲಿ ವಿಶ್ವದ ಅತ್ಯಂತ ಪರಿಣಾಮಕಾರಿ ನೈತಿಕ ಕ್ರಿಯಾಶೀಲರ ಎಡೆಯಲ್ಲಿ ಸೇರಿದ್ದಾರೆ ಎಂದು ನಾನು ಹೇಳಲೇಬೇಕು. ನೈತಿಕ ನಂಬಿಕೆಗಳು ಮೇಲ್ನೋಟಕ್ಕೆ ಒಂದೇ ಆಗಿದ್ದರೂ ಸಹ, ಅವರಲ್ಲಿ ಅತ್ಯ೦ತ ಕೆಟ್ಟವರಾದವರು ಇದ್ದಾರೆ, ಆದರೆ ಅತ್ಯುತ್ತಮವಾದವರೂ ಅವರಲ್ಲಿದ್ದಾರೆ. 

ನಿಮ್ಮ ಮನಸ್ಸಿನಲ್ಲಿ ಬಹುಶಃ ಇದ್ದ ಮಧ್ಯ ಅಮೇರಿಕಾದಲ್ಲಿ ಐಕಮತ್ಯ ಚಳುವಳಿಯನ್ನು ತೆಗೆದುಕೊಳ್ಳಿ. ಬಹುಮಟ್ಟಿಗೆ,  ಹಿಂದೆ ಅತಿರೇಕದ ಮಾನವ ಪರಿಣಾಮಗಳನ್ನು ಹುಟ್ಟಿಸಿದ  ಮತ್ತು ಸಂಪೂರ್ಣವಾಗಿ ಅಸಮರ್ಥನೀಯವೆಂದು ನಾನು ಭಾವಿಸುವ ನಂಬಿಕೆಗಳ ಆಧಾರದ ಮೇಲೆ ಮುಖ್ಯವಾಹಿನಿಯ ಕ್ರಿಶ್ಚಿಯನ್ ಧರ್ಮದಿಂದ ಇದು ಹೊರಬರುತ್ತದೆ. ಈ ಸಂದರ್ಭದಲ್ಲಿ, ಅವರು ಜಗತ್ತಿನಲ್ಲಿ ಎಲ್ಲಿಯಾದರೂ ನಡೆಯುತ್ತಿರುವ ಅತ್ಯಂತ ಧೈರ್ಯಶಾಲಿ, ವೀರ ಮತ್ತು ಗೌರವಾನ್ವಿತ ಮಾನವ ಕ್ರಿಯೆಗಳಿಗೆ ಮು೦ದಾಳ್ತನಕ್ಕೆ ಕಾರಣವಾಗುತ್ತಾರೆ.  ಇದು ಜೀವನ.  ಜೀವನ ಅಚ್ಚುಕಟ್ಟಾಗಿ ಚಿಕ್ಕ ಪೊಟ್ಟಣಗಳಲ್ಲಿ ಬರುವುದಿಲ್ಲ.

(೧೯೯೪) ಬರ್ಸಾಮಿಯನ್

ಪ್ರಶ್ನೆ: ಇತಿಹಾಸಕಾರ ಪಾಲ್ ಬೋಯೆರ್ ಬರೆದಿರುವದು ನನಗೆ ಬೆರಗು೦ಟು ಮಾಡಿದೆ:  ಅಮೆರಿಕನ್ನರ ಬಗ್ಗೆ ಬರೆಯುತ್ತ, "ಸಮೀಕ್ಷೆಗಳ ಮೇರೆಗೆ ಜನಸಂಖ್ಯೆಯ ಮೂರನೇ ಒಂದು ಭಾಗದಿಂದ ಅರ್ಧದಷ್ಟು,"  ಜನರು  "ಭಾವೀ ಕಾಲವನ್ನು ಬೈಬಲ್ಲಿನ  ಭವಿಷ್ಯ ವಾಣಿಗಳ ಮೂಲಕ  ಅರ್ಥೈಸಿಕೊಳ್ಳಬಹುದು ಎಂದು ನಂಬುತ್ತಾರೆ." ಈ ವಿಷಯಗಳ ಬಗ್ಗೆ ನೀವು ಕೇಳಿದ್ದೀರಾ?

ಚೋಮ್ಸ್ಕಿ:  ಆ ನಿರ್ದಿಷ್ಟ ಸಂಖ್ಯೆಯನ್ನು ನೋಡಿಲ್ಲ, ಆದರೆ ನಾನು ಅಂತಹ ಸಾಕಷ್ಟು ವಿಷಯಗಳನ್ನು ನೋಡಿದ್ದೇನೆ. ನಾನು ಒಂದೆರಡು ವರ್ಷಗಳ ಹಿಂದೆ ಒಂದು ಬಹು-ಸಾಂಸ್ಕೃತಿಕ ಅಧ್ಯಯನವನ್ನು ನೋಡಿದೆ, ಅದು ಇಂಗ್ಲೆಂಡ್‌ನಲ್ಲಿ ಪ್ರಕಟವಾಗಿದೆ ಎಂದು  ಭಾವಿಸುತ್ತೇನೆ.  ಅದು ಆ ರೀತಿಯ ನಂಬಿಕೆಗಳ ವಿಷಯದಲ್ಲಿ ಅನೇಕ ತರದ  ಸಮಾಜಗಳನ್ನು ಹೋಲಿಸಿದೆ. 

ಅಧ್ಯಯನದಲ್ಲಿ ಯುಎಸ್ ಎದ್ದು ಕಾಣುತ್ತದೆ. ಇದು ಕೈಗಾರಿಕಾ ಜಗತ್ತಿನಲ್ಲಿ ವಿಶಿಷ್ಟವಾಗಿತ್ತು. ವಾಸ್ತವವಾಗಿ, ಅಮೆರಿಕ ದೇಶದ ಅಳತೆಗಳು ಕೈಗಾರಿಕಾ-ಪೂರ್ವ ಸಮಾಜಗಳಂತೆಯೇ ಇದ್ದವು.

ಪ್ರಶ್ನೆ: ಅದು ಏಕೆ?

ಚೋಮ್ಸ್ಕಿ: ಇದು ಆಸಕ್ತಿದಾಯಕ ಪ್ರಶ್ನೆ, ಆದರೆ ಇದು ಖಂಡಿತವಾಗಿಯೂ ನಿಜ. ಅಮೇರಿಕ ಒ೦ದು ಅತ್ಯಂತ ಮೂಲಭೂತವಾದಿ ಸಮಾಜ. ಇದು ಮತಾಂಧ ಧಾರ್ಮಿಕ ಬದ್ಧತೆಯ ಮಟ್ಟದಲ್ಲಿ ಇರಾನ್‌ನಂತಿದೆ.  ಫಲಿತಾಂಶಗಳು ಅತ್ಯಂತ ವಿಚಿತ್ರ. ಉದಾಹರಣೆಗೆ, ಜನಸಂಖ್ಯೆಯ ಎಪ್ಪತ್ತೈದು ಪ್ರತಿಶತದಷ್ಟು ಜನರು ದೆವ್ವದ (the devil, satan) ಅಸ್ತಿತ್ವದಲ್ಲಿ ಅಕ್ಷರಶಃ ನಂಬಿಕೆಯನ್ನು ಹೊಂದಿದ್ದಾರೆ ಎ೦ದು ಭಾವಿಸುತ್ತೇನೆ.  ವರ್ಷಗಳ ಹಿಂದೆ ಒಂದು ಸಮೀಕ್ಷೆಯಲ್ಲಿ   ವಿಕಸನ (evolution) ದ  ವಿವಿಧ ಸಿದ್ಧಾಂತಗಳ ಬಗ್ಗೆ  ಅಭಿಪ್ರಾಯವನ್ನು ಕೇಳಲಾಯಿತು - ಪ್ರಪಂಚವು  ಇರುವ ರೀತಿ ಹೇಗೆ ತಲುಪಿತು.  ಡಾರ್ವಿನಿಯನ್ ವಿಕಸನವನ್ನು ನಂಬಿದವರ ಸಂಖ್ಯೆ ಹತ್ತು ಪ್ರತಿಶತಕ್ಕಿಂತ ಕಡಿಮೆ. ಸುಮಾರು ಅರ್ಧದಷ್ಟು ಜನಸಂಖ್ಯೆಯು ದೈವಿಕ-ಮಾರ್ಗದರ್ಶಿ ವಿಕಾಸದ ಚರ್ಚ್ ಸಿದ್ಧಾಂತವನ್ನು ನಂಬಿದ್ದರು. ಉಳಿದವರಲ್ಲಿ ಹೆಚ್ಚಿನವರು ಪ್ರಪಂಚವನ್ನು ಒಂದೆರಡು ಸಾವಿರ ವರ್ಷಗಳ ಹಿಂದೆ ರಚಿಸಲಾಗಿದೆ ಎಂದು ನಂಬಿದ್ದರು. ಇದು ಎಲ್ಲ ಸಾಮಾಜಿಕ ವಿಭಾಗಗಳಾದ್ಯಂತ ಸಾಗುತ್ತದೆ. ಇವು ಬಹಳ ಅಸಾಮಾನ್ಯ ಫಲಿತಾಂಶಗಳು. ಈ ವಿಷಯಗಳ ಕುರಿತು ಯು ಎಸ್  ಏಕೆ ಸರ್ವ ಸಾಧಾರಣ ತಿಳುವಳಿಕೆಗೆ ಹೊರಗುಳಿಯಬೇಕು ಎಂದು ಸ್ವಲ್ಪ ಸಮಯದವರೆಗೆ ಚರ್ಚಿಸಲಾಗಿದೆ.

ಹತ್ತು ಹದಿನೈದು ವರ್ಷಗಳ ಹಿಂದೆ ವಾಲ್ಟರ್ ಡೀನ್ ಬರ್ನ್‌ಹ್ಯಾಮ್ ಎಂಬ ರಾಜಕೀಯ ವಿಜ್ಞಾನಿಯೊಬ್ಬರು ಈ ವಿಷಯಗಳ ಬಗ್ಗೆ ಬರೆದದ್ದನ್ನು ಓದಿದ ನೆನಪು. ಅವರು ಇದೇ ರೀತಿಯ ಅಧ್ಯಯನಗಳನ್ನು ಸಹ ಮಾಡಿದ್ದರು. 

ಇದು ಅರಾಜಕೀಯೀಕರಣದ ಅಂದರೆ, ರಾಜಕೀಯ ಕ್ಷೇತ್ರದಲ್ಲಿ ಅರ್ಥಪೂರ್ಣ ಶೈಲಿಯಲ್ಲಿ ಭಾಗವಹಿಸಲು ಅಸಮರ್ಥತೆಯ, ಪ್ರತಿಬಿಂಬವಾಗಿರಬಹುದು, ಎಂದು ಅವರು ಸಲಹೆ ನೀಡಿದರು. ಈ ಪರಿಸ್ಥಿತಿ   ಪ್ರಮುಖವಾದ ಅತೀಂದ್ರಿಯ ಪರಿಣಾಮವನ್ನು ಹೊಂದಿರಬಹುದು, ವಸ್ತು ಸ್ಥಿತಿಗಳು  ಮತ್ತು ಅವುಗಳ ಸೈದ್ಧಾಂತಿಕ ಚಿತ್ರಣಗಳ ನಡುವಿನ ಗಮನಾರ್ಹ ಅಸಮಾನತೆಯಿಂದ ಅದು ಹೆಚ್ಚಾಗುತ್ತದೆ. ಕೆಲವೊಮ್ಮೆ ಆದರ್ಶ ಸಂಸ್ಕೃತಿ ಎಂದು ಕರೆಯಲ್ಪಡುವುದು ಜನಪ್ರಿಯ ಭಾಗವಹಿಸುವಿಕೆಯ ಸಿದ್ಧಾಂತ  ದೂರಸ್ಥತೆ ಮತ್ತು ದುರ್ಬಲತೆಯ ವಾಸ್ತವತೆಯ ವಿಷಯದಲ್ಲಿ ನೈಜ ಸಂಸ್ಕೃತಿಯಿಂದ ಆಮೂಲಾಗ್ರವಾಗಿ ಭಿನ್ನವಾಗಿದೆ. ಅದು ಅಸಾಧ್ಯವೇನಲ್ಲ. ಜನರು ತಮ್ಮನ್ನು ಗುರುತಿಸಿಕೊಳ್ಳಲು, ಇತರರೊಂದಿಗೆ ಸಂಬಂಧ ಹೊಂದಲು, ಏನಾದರೂ ಪಾಲ್ಗೊಳ್ಳಲು ತಮ್ಮದೇ  ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅವರು ಕಾರ್ಮಿಕ ಸಂಘಗಳಲ್ಲಿ, ನಿಜವಾಗಿ ಕಾರ್ಯನಿರ್ವಹಿಸುವ ರಾಜಕೀಯ ಸಂಸ್ಥೆಗಳಲ್ಲಿ, ಭಾಗವಹಿಸುವ ಅವಕಾಶಗಳನ್ನು ಹೊಂದಿಲ್ಲದಿದ್ದರೆ, ಅವರು ಇತರ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಧಾರ್ಮಿಕ ಮೂಲಭೂತವಾದವು ಒಂದು ಶ್ರೇಷ್ಠ ಉದಾಹರಣೆಯಾಗಿದೆ.

ಇದೀಗ ಪ್ರಪಂಚದ ಇತರ ಭಾಗಗಳಲ್ಲಿ ಇದು ನಡೆಯುತ್ತಿದೆ ಎಂದು ನಾವು ನೋಡುತ್ತೇವೆ. ಇಸ್ಲಾಮಿಕ್ ಮೂಲಭೂತವಾದ ಎಂದು ಕರೆಯಲ್ಪಡುವ ಬೆಳವಣಿಗೆಯು ಜಾತ್ಯತೀತ ರಾಷ್ಟ್ರೀಯತಾವಾದಿ ಪರ್ಯಾಯಗಳ   ಆಂತರಿಕ ಅಪಖ್ಯಾತಿ ಅಥವಾ ವಿನಾಶದಿ೦ದ, ಬೇರೆ ಮಾರ್ಗಗಳು ಇಲ್ಲದೆ,  ಆಗುವ ಕುಸಿತದ ಪರಿಣಾಮವಾಗಿದೆ. ಅಮೇರಿಕನ್ ಸಮಾಜದ ವಿಷಯದಲ್ಲಿ ಇ೦ತದೊ೦ದು  ನಿಜವಾಗಬಹುದು. ಇದು ಹತ್ತೊಂಬತ್ತನೇ ಶತಮಾನಕ್ಕೆ ಹೋಗುತ್ತದೆ. ವಾಸ್ತವವಾಗಿ, ಹತ್ತೊಂಬತ್ತನೇ ಶತಮಾನದಲ್ಲಿ  ಮರಣದ ನ೦ತರ ನರಕದ ಅಥವಾ ನಿತ್ಯದ೦ಡನೆಯ ಭೀತಿಯನ್ನು ಬೋಧಿಸಿ ಜನರ ಮನಸ್ಸನ್ನು ದಿಕ್ಕು ಬದಲಾಯಿಸುವ ಧಾರ್ಮಿಕ ಪ್ರವಚನಕಾರರನ್ನು ಉತ್ತೇಜಿಸಲು ಮತ್ತು ಮೇಲೇರಿಸಲು  ವ್ಯಾಪಾರದ ನಾಯಕರ ಕಡೆಯಿಂದ ಕೆಲವು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡಿದ್ದು ಗೊತ್ತಿದೆ. ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ರಾಂತಿಯ ಆರಂಭದ ಭಾಗದಲ್ಲಿ ಅದೇ ಸಂಭವಿಸಿತು. ಈ ಬಗ್ಗೆ ‘ದಿ ಮೇಕಿಂಗ್ ಆಫ್ ದಿ ಇಂಗ್ಲಿಷ್ ವರ್ಕಿಂಗ್ ಕ್ಲಾಸ್ ‘ ಪುಸ್ತಕದಲ್ಲಿ ಬರೆದಿದ್ದಾರೆ ಇ.ಪಿ.ಥಾಮ್ಸನ್

ಪ್ರಶ್ನೆ:  ಇತ್ತೀಚಿನ ವಾರ್ಷಿಕ  ಭಾಷಣದಲ್ಲಿ ಕ್ಲಿಂಟನ್ ಅವರ ಹೇಳಿಕೆಯನ್ನು ಹೇಗೆ ಅರ್ಥೈಸ ಬೇಕು.   ಅವರು ಹೇಳಿದರು, "ನಮ್ಮಲ್ಲಿ ಹೆಚ್ಚಿನವರು, ಅಂದರೆ ನಾವೆಲ್ಲರೂ, ಚರ್ಚ್‌ಗಳಿಗೆ ಸೇರಲು ಸಿದ್ಧರಿಲ್ಲದಿದ್ದರೆ ನಾವು ನಮ್ಮ ದೇಶವನ್ನು ನವೀಕರಿಸಲು ಸಾಧ್ಯವಿಲ್ಲ."

ಚೋಮ್ಸ್ಕಿ: ಅವರ ಮನಸ್ಸಿನಲ್ಲಿ ಏನಿದೆ ಎಂದು ನನಗೆ ನಿಖರವಾಗಿ ತಿಳಿದಿಲ್ಲ, ಆದರೆ ಸಿದ್ಧಾಂತವು ತುಂಬಾ ಸರಳವಾಗಿದೆ. ಸಾರ್ವಜನಿಕ ರಂಗದಿಂದ ಹೊರಗಿರುವ ಚಟುವಟಿಕೆಗಳಿಗೆ ನಿಮ್ಮನ್ನು ನೀವು ತೊಡಗಿಸಿಕೊಂಡರೆ, ನಾವು [ಅಧಿಕಾರದಲ್ಲಿರುವವರು] ಅಡೆತಡೆಯಿಲ್ಲದೆ ನೇರವಾಗಿ ಅಧಿಕಾರವನ್ನು ನಡೆಸಲು ಸಾಧ್ಯವಾಗುತ್ತದೆ.

________________________________

(೧೯೯೪) ಡೇವಿಡ್ ಬಾರ್ಸಾಮಿಯಾ:

ಪ್ರಶ್ನೆ: ನೀವು ಜನ ಸಮೂಹವನ್ನು ನಿಯಂತ್ರಿಸಲು ಬಳಸಲಾಗುವ ಪ್ರಮಾಣಿತ ತಂತ್ರಗಳು ಮತ್ತು ಸಾಧನಗಳ ಬಗ್ಗೆ ಮಾತನಾಡುತ್ತೀರಿ:  ಆಂತರಿಕ ಮತ್ತು ಬಾಹ್ಯ ಶತ್ರುಗಳ ನಿರ್ಮಾಣ, ದ್ವೇಷಗಳ ಸೃಷ್ಟಿ , ಧಾರ್ಮಿಕ ಅಭಿಮಾನಾವೇಶ, ಮತ್ತು ನಂತರ ನೀವು ಹೇಳುತ್ತೀರಿ, " ಅದೇ ರಾಚನಿಕ (structural) ಕಾರಣಗಳಿಗಾಗಿ ತಂತ್ರಗಳು ಸ್ಥಿರವಾಗಿರುತ್ತವೆ." ಆ ರಾಚನಿಕ ಕಾರಣಗಳೇನು?

ಚೋಮ್ಸ್ಕಿ: ರಾಚನಿಕ ಕಾರಣವೆಂದರೆ ಅಧಿಕಾರವು ಕೇಂದ್ರೀಕೃತವಾಗಿದೆ. ಸಾಮಾನ್ಯ ನೀತಿಯು ಆಡಮ್ ಸ್ಮಿತ್ ವಿವರಿಸಿದ ರೀತಿಯಲ್ಲಿಯೇ ಇದೆ: ಅದರ ಪ್ರಮುಖ ವಾಸ್ತುಶಿಲ್ಪಿಗಳು, ಶಕ್ತಿಶಾಲಿಗಳ ಪ್ರಯೋಜನಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದು "ಯಜಮಾನರ ದುಷ್ಟ  ಸೂತ್ರವನ್ನು ಪೂರೈಸುತ್ತದೆ: ‘ಎಲ್ಲವೂ ನಮಗಾಗಿ, ಮತ್ತು ಬೇರೆಯವರಿಗೆ ಏನೂ ಇಲ್ಲ’". ಇವು ಪ್ರಪಂಚದ ಮೂಲ ನಿಯಮಗಳು. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ರಚನೆಗಳ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ಸಂದರ್ಭದಲ್ಲಿ [ಯುನೈಟೆಡ್ ಸ್ಟೇಟ್ಸ್] ಇದು ಮೂಲಭೂತವಾಗಿ ಕಾರ್ಪೊರೇಟ್ ರಚನೆಯಾಗಿದೆ. ಹೆಚ್ಚಿನ ಜನಸಂಖ್ಯೆಯು ಇದರಿಂದ ಹಾನಿಗೊಳಗಾಗುತ್ತದೆ. ರಾಜ್ಯದ ಅಧಿಕಾರವನ್ನು ಶ್ರೀಮಂತರ ಕೆಲಸ ಮಾಡುವ ಸಾಧನವಾಗಿ ಪರಿವರ್ತಿಸಲು ಆ ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ. ಬಹುಶಃ ಉಳಿದ ಜನಸಂಖ್ಯೆಗೆ ಏನೋ ಉಳಿದದ್ದು ಸ್ವಲ್ಪ  ಸಿಗಬಹುದು, ಸಿಗದೇ ಇರಲೂ ಬಹುದು. ಈ ಪರಿಣಾಮ ಖಚಿತ. 

ಹೇಗಾದರೂ ಮಾಡಿ ಸಾಮಾನ್ಯ ಜನ ಇದನ್ನು ಒಪ್ಪಿಕೊಳ್ಳುವ೦ತೆ ಮಾಡಬೇಕು. ಹ್ಯೂಮ್‌ನ ವಿರೋಧಾಭಾಸವು ಆಚರಣೆಗೆ ಬರುತ್ತದೆ: ಅಧಿಕಾರವು ಆಳುವವರ ಕೈಯಲ್ಲಿದೆ. ಆದರೆ ಜನರು ಅದನ್ನು ಸ್ವೀಕರಿಸಲು ನಿರಾಕರಿಸಿದರೆ, ನಿಮ್ಮ ಬಳಿ ಎಷ್ಟು ಬಂದೂಕುಗಳಿದ್ದರೂ ನೀವು ತೊಂದರೆಯಲ್ಲಿದ್ದೀರಿ. ನೀವು ಅದನ್ನು ಹೇಗೆ ಸಾಧಿಸುತ್ತೀರಿ? ಹೆಚ್ಚಿನ ಮಾರ್ಗಗಳಿಲ್ಲ. ಜನರನ್ನು ಭಯಗೊಳಿಸುವುದು ಮತ್ತು ಭೀತಿಯಿ೦ದ ಬೊಗ್ಗುವ೦ತೆ ಮಾಡುತ್ತ ಒಬ್ಬ ಮಹಾನ್ ನಾಯಕ ಮಾತ್ರ ಅವರನ್ನು ಉಳಿಸಬಹುದು ಎಂದು  ಪು೦ಗಿ ಹೊಡೆಯುವದು  ಒಂದು ಮಾರ್ಗವಾಗಿದೆ. ಸದ್ದಾಂ ಹುಸೇನ್ ಬರಲಿದ್ದಾರೆ. ನೀವು ಮರಳಿನಲ್ಲಿ ಅಡಗಿಕೊಳ್ಳುವುದು ಉತ್ತಮ, ಮತ್ತು ಪವಾಡದಿಂದ ನಾನು ಎಲ್ಲರನ್ನು  ಉಳಿಸುತ್ತೇನೆ. ನಂತರ  ಅವರನ್ನು ಪವಾಡದಿಂದ (!) ಉಳಿಸಲಾಗುತ್ತದೆ. ಆದ್ದರಿಂದ ಭಯ ಮತ್ತು ವಿಸ್ಮಯದ ಸಂಯೋಜನೆಯು ಪ್ರಮಾಣಿತ ತಂತ್ರವಾಗಿದೆ, ಇದನ್ನು ಸಾರ್ವಕಾಲಿಕ ಬಳಸಲಾಗುತ್ತದೆ. ಜನರನ್ನು ಬೇರೆ ವಿಷಯಗಳಿಗೆ ತಿರುಗಿಸುವುದು. ಎಲ್ವಿಸ್ (ಪ್ರೆಸ್ಲೆ, ಹಾಡುಗಾರ) ಅಂಚೆಚೀಟಿಗಳು. ಅದೊಂದು ತಂತ್ರ. ವೃತ್ತಿಪರ ಕ್ರೀಡೆಗಳು ಮತ್ತೊಂದು. ಜನರು ಯಾರಾದರೊಬ್ಬ  ಇತರರ ಬಗ್ಗೆ ಹುಚ್ಚು ಹಿಡಿದವರಾಗುವಂತೆ ಮಾಡುವದು. ಇದು ಅಧೀನತೆಯ ಮನೋಭಾವವನ್ನು ಸೃಷ್ಟಿಸುವ ಪರಿಣಾಮವನ್ನು ಸಹ ಹೊಂದಿದೆ. ಯಾರೋ  ಏನನ್ನೋ  ಮಾಡುತ್ತಿದ್ದಾರೆ ಮತ್ತು ನೀವು ಅವರನ್ನು ಅವಶ್ಯವಾಗಿ ಶ್ಲಾಘಿಸಬೇಕು. ನಿಮ್ಮ ಜೀವನದಲ್ಲಿ ನೀವು ಕನಸು ಕಾಣದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಿಯ೦ತ್ರಣದ ಅನೇಕ ಸಾಧನಗಳಿವೆ, ಆದರೆ ನಿಯಮಿತ ಸ೦ಖ್ಯೆಯಲ್ಲಿ. ಅವುಗಳಲ್ಲಿ ಒ೦ದಲ್ಲೊ೦ದು ಕೆಲಸಲ್ಲಿರುವದನ್ನು  ಸಾಮಾನ್ಯವಾಗಿ ಕಾಣುತ್ತೇವೆ.

(ಅಗಸ್ಟ್ ೧೯೯೯) ಝೀ-ನೆಟ್ ಫೋರ೦

ಪ್ರಶ್ನೆ: (ಅಮೆರಿಕದ ರಾಜ್ಯಗಳಲ್ಲೊ೦ದಾದ) ಕೆನ್ಸಸ್ಸ್ ಶಿಕ್ಷಣ ಮ೦ಡಲಿಯು ನೈಸರ್ಗಿಕ ಅಯ್ಕೆ (natural selection)  ಗೆ ಸೇರಿದ ಪ್ರಶ್ನೆಗಳನ್ನು ಬಿಟ್ಟು ಬಿಡುವ ತೀರ್ಮಾನ ಕೈಗೊ೦ಡಿತ್ತು (ಇದನ್ನು ಆ ಮೇಲೆ ಹಿ೦ದೆ ತೆಗೆದುಕೊಳ್ಳಲಾಯಿತು) ಇದರಿ೦ದ ಚೊಮ್ಸ್ಕಿಗೆ ಆಘಾತವಾಯಿತೇ ? ಎ೦ದು ಕೇಳಲಾಯಿತು. 

ಚೊಮ್ಸ್ಕಿ: ಹೆಚ್ಚಿನ ಆಘಾತವಾಯಿತು. ಹಾಗೆಯೇ ‘ಬಿಗ್ ಬ್ಯಾಂಗ್’ ('Big Bang') ಅನ್ನು ತೊಡೆದುಹಾಕುವ ನಿರ್ಧಾರದಿಂದ - ಅಂದರೆ, ಮೂಲ ಪಠ್ಯಕ್ರಮದಿಂದ ಭೌತಶಾಸ್ತ್ರದ ಮೂಲಭೂತ ಅಂಶಗಳನ್ನು ಮತ್ತು ಜೀವಶಾಸ್ತ್ರದ ಮೂಲಭೂತ ಅಂಶಗಳನ್ನು ತೊಡೆದುಹಾಕಲು ಮಾಡಿದ ತೀರ್ಮಾನಗಳು. ಹೆಚ್ಚು ಸಾಮಾನ್ಯವಾಗಿ, ಹೊಸ ಪಠ್ಯಕ್ರಮದ ವಿನ್ಯಾಸಕರು ಆದ್ಯತೆ ನೀಡುವ ಮೂಲಭೂತವಾದಿ ಮತಾಂಧತೆಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಬೌದ್ಧಿಕ ಸಾಧನಗಳನ್ನು ಹೊಂದಿರುವ ಸಾಧ್ಯತೆಯನ್ನು ಕಡಿಮೆ ಮಾಡುವ ರೀತಿಯಲ್ಲಿ ಶಾಲಾ ಪಠ್ಯಕ್ರಮವನ್ನು ಮರುವಿನ್ಯಾಸಗೊಳಿಸುವ ಯೋಜನೆಯಲ್ಲಿ ಇದು ಮತ್ತೊಂದು ದೀರ್ಘ ಹೆಜ್ಜೆಯಾಗಿದೆ. ಅವರು ಮಾಡುತ್ತಿರುವುದನ್ನು ಮರೆಮಾಚಲು ಬಳಸುವ ವಾಕ್ಚಾತುರ್ಯದಿಂದ - ಅ೦ದರೆ ಎಲ್ಲರು ತಮಗೆ ಸರಿಯೆನಿಸುವ  ರೀತಿಯಲ್ಲಿಯೇ  ಓದಬಹುದು ಎನ್ನುವ ತೋರಿಕೆಯಿ೦ದ - ಯಾರೂ ಮೂರ್ಖರಾಗಬಾರದು,  ತಾಂತ್ರಿಕವಾಗಿ ಇದು ನಿಜ, ಆದರೆ ಅನುಗುಣವಾಗಿರಲು, ಅನುಸರಿಸಲು,  ಒತ್ತಡಗಳು, ಸಹಜವಾಗಿ, ಗಣನೀಯವಾಗಿರುತ್ತವೆ. ಮತ್ತು ಅಪಖ್ಯಾತಿಗೊಳಗಾದ,  ಮತ್ತು ಪ್ರಮುಖ ಪಠ್ಯಕ್ರಮ ಮತ್ತು ಪರೀಕ್ಷೆಗಳಿಂದ ಹೊರಗಿಡಲಾದ,  ವಸ್ತುಗಳಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಎಷ್ಟು ಗಮನ ನೀಡುತ್ತಾರೆ ಎಂದು ನಾವು ಊಹಿಸಬಹುದು.

ಇದು, ಉದ್ದೇಶಿಸಿದಂತೆ, ಸಮಗ್ರತೆ ಮತ್ತು ಪ್ರಾಮಾಣಿಕತೆಗೆ ಗಂಭೀರವಾದ ಹೊಡೆತವಾಗಿದೆ.  ಯಾವುದೇ ಪುಟ್ಟ ಬಡದೇಶದ ಕತೆ ಇದು ಆಗಿದ್ದರೆ, ಬಹುಶಃ  ನಕ್ಕು ಮರೆಯಬಹುದು, ಆದರೆ  ಅ೦ತ  ರಾಜ್ಯಕ್ಕೂ ಇದು   ಅನ್ಯಾಯವಾಗುತ್ತದೆ. ಅವರಾದರೂ  ಮೂಢನಂಬಿಕೆಯ ಉನ್ಮಾದರೋಗ , ಮತ್ತು ತಮ್ಮ ಪವಿತ್ರ ಗ್ರಂಥಗಳು ಮತ್ತು ಆಯ್ಕೆಮಾಡಿದ ದೈವತ್ವಗಳಿಗೆ ವಿಧೇಯತೆಯನ್ನು ಹುಟ್ಟುಹಾಕಲು (ಈ ಪದಗಳು ಸೂಕ್ತ, ವಾಸ್ತವವಾಗಿ ಅತಿ ಮೃದು) ಪ್ರಯತ್ನಿಸುವ ತೀವ್ರ ನಿರಂಕುಶವಾದಿಗಳ ಆಳ್ವಿಕೆಗಳಿ೦ದ ಮುಕ್ತಿ ಹೆಚ್ಚು ಪಡೆಯಲು ಅರ್ಹರು. ಆದರೆ  ವಿನಾಶ ಮತ್ತು ನಷ್ಟದ ದೊಡ್ಡ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಶಕ್ತಿಶಾಲಿ ರಾಷ್ಟ್ರದಲ್ಲಿ ನಡೆಯುತ್ತಿರುವಾಗ, ಇದು ನಗುವ ವಿಷಯವಲ್ಲ. ಕೇವಲ ಕಾನ್ಸಾಸ್ ರಾಜ್ಯ ಮಾತ್ರವಲ್ಲ.  ಬೆರಗುಗೊಳಿಸುವ ಅವೈಚಾರಿಕತೆ  ಮತ್ತು ಮತಾಂಧತೆಯ ಅದ್ಭುತ ಅಲೆಯೊ೦ದರ  ಒಂದು ಭಾಗವಾಗಿದೆ ಇದು; ಇತರ ರಾಜ್ಯಗಳು ಇದೇ ರೀತಿಯ ಕ್ರಮಗಳನ್ನು ಪರಿಚಯಿಸಿವೆ. ಪಠ್ಯಪುಸ್ತಕ ಉದ್ಯಮದ ಅರ್ಥಶಾಸ್ತ್ರದ ಬಗ್ಗೆ ಒಂದು ಸರಳವಾದ ಸಂಗತಿಯನ್ನು ನೆನಪಿಸಿಕೊಳ್ಳಿ. ಪ್ರಕಾಶಕರು ಒಂದು ಸಮೂಹ ಮಾರುಕಟ್ಟೆಯನ್ನು ಹೊಂದಲು ಬಯಸುತ್ತಾರೆ,  ವ್ಯತ್ಯಾಸಗೊಳಿಸಲ್ಪಟ್ಟದ್ದಲ್ಲ. ದೇಶದ ವಿವಿಧ ಭಾಗಗಳಿಗೆ ಪ್ರತ್ಯೇಕ ಪಠ್ಯಗಳನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡುವದು ದುಬಾರಿಯಾಗಿದೆ. ಅಂತೆಯೇ, ಕಡಿಮೆ ಸಾಮಾನ್ಯ ಛೇದಕ್ಕೆ ಚಲಿಸುವ ಪ್ರವೃತ್ತಿಯು ಕೆಲವೊಮ್ಮೆ ತುಂಬಾ ಪ್ರಬಲವಾಗಿದೆ. ಅ, ಆ, ಇ,  ಕಾರಣಗಳಿಗಾಗಿ ಪಠ್ಯವು ಕಾನ್ಸಾಸ್‌ನಲ್ಲಿ ಮಾರಾಟವಾಗದಿದ್ದರೆ, "ಆಕ್ಷೇಪಾರ್ಹ ವಸ್ತು" ವನ್ನು ಇಡೀ ದೇಶದ ಬಿಕರಿಗಾಗಿ ಕತ್ತರಿಸಿ. ಇದರ ಪರಿಣಾಮಗಳು ಸ್ಪಷ್ಟವಾಗಿವೆ ಮತ್ತು ನಿಸ್ಸಂದೇಹವಾಗಿ ಜನಸಂಖ್ಯೆಯ ಮೇಲೆ ತಮ್ಮ ಧಾರ್ಮಿಕ ಸಿದ್ಧಾಂತಗಳನ್ನು ಹೇರಲು ಪ್ರಯತ್ನಿಸುವ ನಿರಂಕುಶ ಉಗ್ರಗಾಮಿಗಳ ಉದ್ದೇಶವನ್ನು ಪೂರೈಸುತ್ತಿದೆ.

ಧಾರ್ಮಿಕ ಮತಾಂಧತೆ ಮತ್ತು ಅದರೊಂದಿಗೆ ಪರಸ್ಪರ ಸಂಬಂಧ ಹೊಂದಿರುವ ಅಂಶಗಳ ತುಲನಾತ್ಮಕ ಅಧ್ಯಯನಗಳು ವರ್ಷಗಳಿಂದಲೂ ಇವೆ. ಒಟ್ಟಾರೆಯಾಗಿ, ಹೆಚ್ಚುತ್ತಿರುವ ಕೈಗಾರಿಕೀಕರಣ ಮತ್ತು ಶಿಕ್ಷಣದೊಂದಿಗೆ ಇದು ಕಡಿಮೆಯಾಗುತ್ತಿದೆ. ಆದರೂ ಅಮೆರಿಕ ದೇಶ  ವಿಶಿಷ್ಟ ಸ್ಥಾನದಲ್ಲಿದೆ, ಧ್ವಂಸಗೊಂಡ ರೈತ ಸಮಾಜಗಳ ಹತ್ತಿರದ  ಶ್ರೇಯಾಂಕವನ್ನು ಹೊಂದಿದೆ. ಸುಮಾರು 1/2 ಜನಸಂಖ್ಯೆಯು ಪ್ರಪಂಚವನ್ನು ಕೆಲವು ಸಾವಿರ ವರ್ಷಗಳ ಹಿಂದೆ ಮಾತ್ರ ಸೃಷ್ಟಿಸಲಾಗಿದೆ ಎಂದು ನಂಬುತ್ತಾರೆ: ಈ ನಂಬಿಕೆಯ ಸಮರ್ಥನೆಯೆಂದರೆ, ಅವರು ತಮ್ಮನ್ನು ತಾವು ಅಧೀನಗೊಳಿಸಬೇಕೆಂದು ಕಲಿತಿರುವ  ಅಧಿಕಾರ ಪುರುಷರು ಇದನ್ನೆ ನಂಬುವಂತೆ ಆದೇಶಿಸಿದ್ದಾರೆ. ಇದೇ  ರೀತಿ ಇದು ಮು೦ದುವರಿಯುತ್ತದೆ. ಸಾರ್ವಜನಿಕರನ್ನು ಅತ್ಯಂತ ಕೆಳಮಟ್ಟದ ಸಾಂಸ್ಕೃತಿಕ ಮತ್ತು ಬೌದ್ಧಿಕ ಮಟ್ಟದಲ್ಲಿ, ಅಧಿಕಾರಕ್ಕೆ ಅಧೀನಗೊಳಿಸಿ ಮತ್ತು ಅಧಿಕಾರಕ್ಕೆ ಕುರುಡು ವಿಧೇಯತೆಯ ಸ್ಥಿತಿಯಲ್ಲಿ,   ಇರಿಸಲು ಏಕೆ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕೆಂಬದನ್ನು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ಇದು ಬಹಳ ಆತ೦ಕವನ್ನು ಉಂಟುಮಾಡಬೇಕಾದ ವಿಷಯವಾಗಿದೆ.

ಬೂಟಾಟಿಕೆಯನ್ನೂ ಗಮನಿಸಬೇಕು. ಅದೇ ವೃತ್ತಪತ್ರಿಕೆ ಕಥೆಗಳು ತರಗತಿಯ ಗೋಡೆಗಳ ಮೇಲೆ ಪ್ರದರ್ಶಿಸಿದ  ಬೈಬಲ್ಲಿನ  ‘ಹತ್ತು ಅನುಶಾಸನ’ಗಳ (the Ten Commandments)  ಚಿತ್ರಗಳನ್ನು ತೋರಿಸಿದವು (ಅವುಗಳ ಒ೦ದು ಆವೃತ್ತಿ). ಸಾರ್ವಜನಿಕ ಶಾಲಾ ವ್ಯವಸ್ಥೆಯಲ್ಲಿ ಧಾರ್ಮಿಕ ಸಿದ್ಧಾಂತದ ನಿರ್ದಿಷ್ಟ ಆಯ್ಕೆಯನ್ನು ಸ್ಥಾಪಿಸುವ ಸ್ಪಷ್ಟ ಪ್ರಶ್ನೆಗಳ ಹೊರತಾಗಿ, ಮಕ್ಕಳು ಯಾವುದನ್ನು ನಂಬಲು ಕಲಿಸಬೇಕು (ಯಾರಾದರೂ ಪದಗಳನ್ನು ಗಂಭೀರವಾಗಿ ಪರಿಗಣಿಸುವ ನಿರೀಕ್ಷೆಯಿದೆ ಎಂಬ - ಒಪ್ಪಿಕೊಳ್ಳಬಹುದಾದ ದುರ್ಬಲ - ಊಹೆಯ ಮೇಲೆ) ಎಂಬುದನ್ನು ನೋಡಿ. ಆದ್ದರಿಂದ ದೇವರುಗಳ ಸ್ವಯಂ-ನಿಯೋಜಿತ ಮುಖ್ಯಸ್ಥನು ಅವನ ಮುಂದೆ ಯಾವುದೇ ಇತರ ದೇವರುಗಳನ್ನು ಪೂಜಿಸದಂತೆ ಅವರಿಗೆ ಆದೇಶಿಸುತ್ತಾನೆ: ಈ ಬಹುದೇವತಾ ವ್ಯವಸ್ಥೆಯಲ್ಲಿ, ಅವನೇ ಅಗ್ರ. ಅವರಿಗೆ "ಕೆತ್ತಿದ ಪ್ರತೀಕಗಳನ್ನು" (ಪ್ರತಿಮೆಗಳು, ಚಿತ್ರಗಳು, ಇತ್ಯಾದಿ ಎಂದರ್ಥ) ಮಾಡಬೇಡಿ ಎಂದು ಹೇಳಲಾಗುತ್ತದೆ - ಅಂದರೆ, ಎಲ್ಲಾ ಪುರೋಹಿತರು, ಮಂತ್ರಿಗಳು, ಶಿಕ್ಷಕರು ಮತ್ತು ಇತರ ಅಧಿಕಾರ ವ್ಯಕ್ತಿಗಳು ಸುಳ್ಳುಗಾರರು ಮತ್ತು ಕಪಟಿಗಳು ಎಂದು ಅವರಿಗೆ ಕಲಿಸಲಾಗುತ್ತದೆ. ಇನ್ನೂ ಹೆಚ್ಚಿನವುಗಳಿವೆ - 17 ನೇ ಮತ್ತು 18 ನೇ ಶತಮಾನದಲ್ಲಿ ಈ ವಿಚಾರಗಳೆಲ್ಲ  ಪರಿಚಿತವಾಗಿದ್ದವು, ಆದರೆ ಈಗ ಸಾಂಸ್ಕೃತಿಕ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಮತ್ತು ಸ್ವತಂತ್ರ ಚಿಂತನೆ ಮತ್ತು ತರ್ಕಬದ್ಧ ವಿಶ್ಲೇಷಣೆ ಮತ್ತು ಚರ್ಚೆಯ ಬೆದರಿಕೆಯನ್ನು ಕೆಡವಲು ಆಶಿಸುವ ನಿರಂಕುಶಾಧಿಕಾರಿಗಳಿಂದ ಇವನ್ನೆಲ್ಲ ಮನಸ್ಸಿನಿಂದ ಓಡಿಸಲಾಗುವುದು.

ನನ್ನ ಅಭಿಪ್ರಾಯದಲ್ಲಿ ಸಣ್ಣ ವಿಷಯವಿಲ್ಲ.

ಪ್ರಶ್ನೆ : ದೈವ ವಿಶ್ವಾಸದ ಬಗೆ ಕೇಳಿದ ಪ್ರಶ್ನೆಗೆ ಚೊಮ್ಸ್ಕಿ ಉತ್ತರ (ದಿನಾ೦ಕ ತಿಳಿದಿಲ್ಲ)


ನಾನು ದೈವ ವಿಶ್ವಾಸಿಯೇ ? ಉತ್ತರಿಸಲು ಸಾಧ್ಯವಿಲ್ಲ. ನನ್ನ ಈ ಉತ್ತರ ಹುಡುಗಾಟವಲ್ಲ.   ನನಗೆ ಪ್ರಶ್ನೆ ಅರ್ಥವಾಗುತ್ತಿಲ್ಲ. ನಾನು ನಂಬುವದು ಅಥವಾ ನಂಬಬಾರದ್ದು ಯಾವುದನ್ನು? ಬ್ರಹ್ಮಾಂಡದ (ಅಥವಾ ಬ್ರಹ್ಮಾಂಡಗಳ, (ಬಹುಶಃ ಅನಂತ) ಅವುಗಳು ಹಲವು ಇದ್ದರೆ) ಹೊರಗೆ, ಆದರೆ ಹೇಗೋ ಅವುಗಳ ಮೇಲೆ ನಿಂತಿರುವದೇನೋ ಒ೦ದು ಇದೆ ಎಂದು ನಾನು ನಂಬುತ್ತೇನೆಯೇ ಎ೦ದು  ನೀವು ಕೇಳುತ್ತೀರಾ?  ನಂಬಲು ನಾನು ಯಾವುದೇ ಕಾರಣವನ್ನು ಕೇಳಿಲ್ಲ. ಬೇರೆ ಏನಾದರೂ?  ಏನು?  ಆಧ್ಯಾತ್ಮಿಕತೆಯ ಅನೇಕ ಪರಿಕಲ್ಪನೆಗಳಿವೆ, ಅವುಗಳಲ್ಲಿ, ಯಹೂದಿ-ಕ್ರಿಶ್ಚಿಯನ್-ಇಸ್ಲಾಮಿಕ್ ಧರ್ಮಗಳಲ್ಲಿ ದೈವತ್ವದ ವಿವಿಧ ಕಲ್ಪನೆಗಳು ಬೆಳೆದು ಬ೦ದಿವೆ. ಇವುಗಳೊಳಗೆಯೂ  ಪರಿಕಲ್ಪನೆಗಳು ಬಹಳವಾಗಿ ಬದಲಾಗುತ್ತವೆ. ಉದಾಹರಣೆಗೆ, ಸೇಂಟ್ ಅಗಸ್ಟೀನ್ ಮತ್ತು ಇತರರು, ದೇವರನ್ನು ‘ಉತ್ಪ್ರೇಕ್ಷಿತ ಮಾನವ’ ಎಂಬ ಬೈಬಲ್ಲಿನ ವರ್ಣನೆಯನ್ನು ಮತ್ತು ಇತರ ಬೈಬಲ್ ವೃತ್ತಾಂತಗಳನ್ನೂ (ಅಕ್ಪರಶಃ ) ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ವಾದಿಸಿದರು,   ಏಕೆಂದರೆ  ಉದ್ದೇಶಿತ ಸಂದೇಶವನ್ನು ಮಾನವರಿಗೆ ಅರ್ಥವಾಗುವಂತೆ ಅವುಗಳನ್ನು ರಚಿಸಲಾಗಿದೆ - ಮತ್ತು ಅಂತಹ ಆಧಾರದ ಮೇಲೆ , ಸಂಘಟಿತ ಧರ್ಮವು ವಿಜ್ಞಾನ ಹೊರತರುವ ಮನವೊಲಿಸುವ ತೀರ್ಮಾನಗಳನ್ನು ಒಪ್ಪಿಕೊಳ್ಳಬೇಕು ಎ೦ದು ಅವರು ವಾದಿಸಿದರು . ಪೋಪ್ ಹೊರಿಸಿದ ಧಾರ್ಮಿಕ   ಖಂಡನೆಯನ್ನು ಎದುರಿಸಿದಾಗ ಈ ಪರಿಕಲ್ಪನೆಯನ್ನು ಆಶ್ರಯಿಸಿಯೇ   ಗೆಲಿಲಿಯೋ  (ನಿಷ್ಫಲವಾಗಿ) ಮನವಿ ಮಾಡಿದರು.

ಹೇಗಾದರೂ, ನಾನು ಎಂದಿಗೂ ನೋಡದ ಎಲ್ಲೂ ಕ೦ಡಿಲ್ಲದ ರೀತಿಯ ಸ್ಪಷ್ಟೀಕರಣವಿಲ್ಲದೆ, ನಾನು ಪ್ರಶ್ನಿಸುವವರ ಮನಸ್ಸಿನಲ್ಲಿ ಇರುವ  ಏನನ್ನು ನಂಬುತ್ತೇನೋ ಅಥವಾ ನಂಬುವುದಿಲ್ಲವೋ,  ನನಗೆ ತಿಳಿದಿಲ್ಲ.

ಒ೦ದು  "ಸಂಘಟಿತ ಧರ್ಮವನ್ನು ಹೇಗೆ ನಂಬಬಹುದು", ಎಂದು ನನಗೆ ಕಾಣುತ್ತಿಲ್ಲ. ಸಂಘಟನೆಯನ್ನು ನಂಬುವುದರ ಅರ್ಥವೇನು? ಒಬ್ಬರು ಅದನ್ನು ಸೇರಬಹುದು, ಬೆಂಬಲಿಸಬಹುದು, ವಿರೋಧಿಸಬಹುದು, ಅದರ ಸಿದ್ಧಾಂತಗಳನ್ನು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು. ಅನೇಕ ರೀತಿಯ ಸಂಘಟಿತ ಧರ್ಮಗಳಿವೆ. ಜನರು  ಕೆಲವರೊಂದಿಗೆ ತಮ್ಮನ್ನು ತಾವು ಸಂಯೋಜಿಸಿಕೊಳ್ಳುತ್ತಾರೆ (ಅಥವಾ ನಿರಾಕರಿಸುತ್ತಾರೆ), ಎಲ್ಲಾ ರೀತಿಯ ಕಾರಣಗಳಿಗಾಗಿ, ಬಹುಶಃ ಕೆಲವು ಸಿದ್ಧಾಂತಗಳಲ್ಲಿಅವರ  ನಂಬಿಕೆಯ ಕಾರಣದಿ೦ದ.

ಬೈಬಲ್ ಬರೆದವರು ಯಾರು? ಪ್ರಸ್ತುತ ವಿದ್ವತ್ತು, ನನ್ನ ಜ್ಞಾನಕ್ಕೆ, ಹಳೆಯ ಒಡಂಬಡಿಕೆ (the Old Testament) ಯನ್ನು ರೂಪಿಸುವ ವಸ್ತುವು (ಗ್ರೀಕರ) ಹೆಲೆನಿಸ್ಟಿಕ್ ಅವಧಿಯಲ್ಲಿ (ಟಿಪ್ಪಣಿ: ಹೆಲೆನಿಸ್ಟಿಕ್ ಯುಗ, ಪೂರ್ವ ಮೆಡಿಟರೇನಿಯನ್ ಮತ್ತು ಮಧ್ಯಪ್ರಾಚ್ಯದಲ್ಲಿ, ಕ್ರಿ.ಪೂ.323 ರಲ್ಲಿ ಅಲೆಕ್ಸಾಂಡರ್ ನ ಮರಣ ಮತ್ತು ಕ್ರಿ.ಪೂ. 30 ರಲ್ಲಿ ರೋಮ್ ಸಾಮ್ರಾಜ್ಯವು ಈಜಿಪ್ಟ್ ಅನ್ನು ವಶಪಡಿಸಿಕೊಂಡ ನಡುವಿನ ಅವಧಿ) ವಿವಿಧ ಮೌಖಿಕ ಮತ್ತು ಜಾನಪದ ಸಂಪ್ರದಾಯಗಳಿಂದ (ಅವುಗಳಲ್ಲಿ ಹೆಚ್ಚಿನವು ಬಹಳ ಹಿಂದೆ ಹೋಗುತ್ತವೆ) ಒಟ್ಟುಗೂಡಿಸಲ್ಪಟ್ಟಿದೆ ಎಂದು ಊಹಿಸುತ್ತದೆ. ಅದು ಹಲವಾರು ಪ್ರವಾಹಗಳಲ್ಲಿ ಒಂದಾಗಿತ್ತು, ಅದರಲ್ಲಿ ಹೊಸ ಒಡಂಬಡಿಕೆಯನ್ನು(the New Testament) ರೂಪಿಸಿದ ಸಂಗ್ರಹವು ಇನ್ನೊಂದಾಗಿತ್ತು. ಈ ಶತಮಾನದ ಆರಂಭದಲ್ಲಿ ಬೈಬಲ್ಲಿನ   ಅಧಿಕೃತತೆಯನ್ನು ದೃಢೀಕರಿಸುವ ಪ್ರಯತ್ನದಲ್ಲಿ ಬೈಬಲ್ಲಿನ  ಪುರಾತತ್ತ್ವ ಶಾಸ್ತ್ರವನ್ನು ಅಭಿವೃದ್ಧಿಪಡಿಸಲಾಯಿತು.  ಈಗ ಸಾಮಾನ್ಯವಾಗಿ ಬೈಬಲ್ಲಿನ ಪಾಂಡಿತ್ಯದಲ್ಲಿ ಅದು ವಿರುದ್ಧ ಪರಿಣಾಮವನ್ನು ಉತ್ಪಾದಿಸಿದೆ ಎ೦ದು ಗುರುತಿಸಲ್ಪಟ್ಟಿದೆ. ಬೈಬಲ್ ಒಂದು ಐತಿಹಾಸಿಕ ಪಠ್ಯವಲ್ಲ, ಮತ್ತು ಎಲ್ಲಿಯವರೆಗೆ ಪುನರ್ನಿರ್ಮಾಣ ಮಾಡಬಹುದೋ, ನಡೆದಿರುವುದಕ್ಕೆ ಅಸ್ಪಷ್ಟವಾದ ಹೋಲಿಕೆಗಳನ್ನು ಮಾತ್ರ ಹೊಂದಿದೆ. ಉದಾಹರಣೆಗೆ, ಇಸ್ರೇಲ್ ಎಂದಾದರೂ ಅಸ್ತಿತ್ವದಲ್ಲಿತ್ತೇ  ಎಂಬುದು ಸ್ಪಷ್ಟವಾಗಿಲ್ಲ; ಹಾಗಿದ್ದಲ್ಲಿ, ಇದು ಬಹುಶಃ ಸ್ಪಷ್ಟವಾಗಿ ಈಜಿಪ್ಟಿನವರಿಗೆ ಗೊತ್ತಿಲ್ಲದಿದ್ದ ಎಲ್ಲೋ ಬೆಟ್ಟಗಳಲ್ಲಿ ಒಂದು ಸಣ್ಣ ರಾಜ್ಯವಾಗಿತ್ತು. ಇದು ನನ್ನ ತಿಳುವಳಿಕೆ, ಸಾಂದರ್ಭಿಕ ಓದಿನಿಂದ; ನಾನು ಇತ್ತೀಚಿನ ಕೆಲಸವನ್ನು ನಿಕಟವಾಗಿ ಅನುಸರಿಸಿಲ್ಲ.

ಪ್ರಾಮುಖ್ಯತೆ, ಪ್ರಸ್ತುತತೆ, ಐತಿಹಾಸಿಕ-ಸಾಮಾಜಿಕ ಪ್ರಭಾವ? ಇವು ಅಗಾಧವಾದ ಪ್ರಶ್ನೆಗಳು. ನಾನು ಈ ಸಾಮಾನ್ಯತೆಯ ಮಟ್ಟದಲ್ಲಿ ಅವುಗಳನ್ನು ಪರಿಹರಿಸಲು ಪ್ರಯತ್ನಿಸಲಾರೆ; ಇದಕ್ಕೆ ಕನಿಷ್ಠ ಒಂದು ಲೇಖನ, ಉತ್ತಮ ಪುಸ್ತಕ ಅಥವಾ ಹಲವು ಪುಸ್ತಕಗಳ ಅಗತ್ಯವಿದೆ.

"ಇಸ್ರೇಲ್‌ಗೆ ಬೆಂಬಲ" ದ ಪ್ರಬಲ ಅಂಶಗಳಲ್ಲಿ ಕ್ರಿಶ್ಚಿಯನ್ ಮೂಲಭೂತವಾದಿ ಬಲದ ಅಂಶಗಳು ಒಂದಾಗಿದೆ - ಒ೦ದು ವಿಚಿತ್ರ  ಅರ್ಥದಲ್ಲಿ ‘ಬೆಂಬಲ’, ಏಕೆಂದರೆ ಅವರು ಆರ್ಮಗೆಡ್ಡೋನ್‌ನಲ್ಲಿ (ಟಿಪ್ಪಣಿ : ಹೊಸ ಒಡಂಬಡಿಕೆಯಲ್ಲಿ ತೀರ್ಪಿನ ದಿನದ ಮೊದಲು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಕೊನೆಯ ಯುದ್ಧ) ವಿಶ್ವ  ಯುದ್ಧದಲ್ಲಿ ಇಸ್ರಯೆಲ್ ನಾಶವಾಗುವುದನ್ನು ನೋಡಲು ಬಯಸುತ್ತಾರೆ, ಇದಾದ ನಂತರ ಎಲ್ಲಾ ಸರಿಯಾದ ಆತ್ಮಗಳು ಸ್ವರ್ಗಕ್ಕೆ ಏರುತ್ತವೆ. - ಹೀಗೆ ನಾನು ಅರ್ಥಮಾಡಿಕೊಂಡಿದ್ದೇನೆ,  ನಿಕಟ ಓದುವಿಕೆಯಿಂದ ಅಲ್ಲ. ಅವರು, ಇಸ್ರಾಯ್ಯೆಲ್ ಬೆ೦ಬಲಿಗರು, ಸಂಶಯಾಸ್ಪದ ರೀತಿಯ ಅಗಾಧ ಆರ್ಥಿಕ ಸಹಾಯವನ್ನು ಒದಗಿಸಿದ್ದಾರೆ. ಅವರ ಗುರಿಗಳಲ್ಲಿ ಒಂದು ದೇವಾಲಯವನ್ನು ಪುನರ್ನಿರ್ಮಿಸುವುದು ಎಂದು ತೋರುತ್ತದೆ, ಇದರರ್ಥ ಅಲ್-ಅಕ್ಸಾ ಮಸೀದಿಯನ್ನು ನಾಶಪಡಿಸುವುದು, ಇದರರ್ಥ ಅರಬ್ ಪ್ರಪಂಚದೊಂದಿಗೆ ಯುದ್ಧ ಎಂದು ಅರ್ಥೈಸಬಹುದು - ಬಹುಶಃ ಆರ್ಮಗೆಡ್ಡೋನ್ ಭವಿಷ್ಯವಾಣಿಯನ್ನು ಪೂರೈಸುವಲ್ಲಿ ಗುರಿಗಳಲ್ಲಿ ಒಂದಾಗಿದೆ. ಆದ್ದರಿಂದ ಅವರು ಇಸ್ರೇಲಿ ಶಕ್ತಿ ಮತ್ತು ವಿಸ್ತರಣಾವಾದವನ್ನು ಬಲವಾಗಿ ಬೆಂಬಲಿಸುತ್ತಾರೆ ಮತ್ತು ಅದಕ್ಕೆ ಹಣ ಮತ್ತು ವರ್ಚಸ್ಸು ಬೆಳೆಸಲು  ಸಹಾಯ ಮಾಡುತ್ತಾರೆ; ಆದರೆ ಅವರು ಅದರ ಹೆಚ್ಚಿನ ಜನಸಂಖ್ಯೆಗೆ ತುಂಬಾ ಹಾನಿಕಾರಕ ಮತ್ತು ಆಕ್ಷೇಪಾರ್ಹವಾದ ಕ್ರಮಗಳನ್ನು ಬೆಂಬಲಿಸುತ್ತಾರೆ - ಯಹೂದಿ ಮೂಲಭೂತವಾದಿ ಗುಂಪುಗಳು, ಹೆಚ್ಚಾಗಿ ಅಮೆರಿಕ ದೇಶದಲ್ಲಿ ಬೇರೂರಿದೆ, ಇದು ಪ್ರಪಂಚದ ಅತ್ಯಂತ ತೀವ್ರವಾದ ಧಾರ್ಮಿಕ ಮೂಲಭೂತವಾದಿ ಸಮಾಜಗಳಲ್ಲಿ ಒಂದಾಗಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು