ಧರ್ಮ ಅಥವಾ ದೈವ ವಿಶ್ವಾಸವನ್ನು ಮನುಷ್ಯರೇ ಕಂಡುಹಿಡಿದರು: ದೇವರಲ್ಲ. (ಟಿಪ್ಪಣಿ : ಈ ಲೇಖನದಲ್ಲಿ ಬಹುವಾಗಿ ಧರ್ಮ ಎಂಬ ಪದವನ್ನು ಆಂಗ್ಲ ಪದ Religion ಗೆ ಅನುಕೂಲಕರವಾದ ಸಂಕ್ಷಿಪ್ತ ಪರ್ಯಾಯ ರೂಪವಾಗಿ ಬಳಸಲಾಗುತ್ತದೆ. ) ಒಂದು ಸರಳ ಅವಲೋಕನದಿಂದ ಪ್ರಾರಂಭಿಸೋಣ. ಪ್ರಪಂಚದಾದ್ಯಂತ ಮಾನವರು ಸಾವಿರಾರು ವಿಭಿನ್ನ ಧರ್ಮಗಳನ್ನು ನಂಬುತ್ತಾರೆ - ಕೆಲವೇ ಅಲ್ಲ , ಆದರೆ ಅಕ್ಷರಶಃ ಸಾವಿರಾರು, ಪ್ರತಿಯೊಂದೂ ಅಂತಿಮ ಸತ್ಯವನ್ನು ಹೊಂದಿದೆ ಎಂದು ಹೇಳಿ ಕೊಳ್ಳುತ್ತದೆ, ಪ್ರತಿಯೊಂದೂ ವಿಭಿನ್ನ, ವಿಭಿನ್ನ ಸೃಷ್ಟಿ ಕಥೆಗಳು, ವಿಭಿನ್ನ ನಿಯಮಗಳು, ಆಚರಣೆಗಳು, ಮತ್ತು ಮರಣಾನಂತರದ ಜೀವನ ನಂಬಿಕೆಗಳು. ಕೆಲವರು ಒಬ್ಬನೇ ದೇವರು ಇದ್ದಾನೆ ಎಂದು ಹೇಳುತ್ತಾರೆ, ಇತರರು ದೇವರು ಹಲವರು ಎನ್ನುತ್ತಾರೆ. ಕೆಲವರು ಮೂರ್ತಿಗಳು ಬಾರದು ಎಂದು ಹೇಳಿದರೆ , ಇತರ ದೈವ ವಿಶ್ವಾಸ ಪಧ್ದತಿಗಳು ಪ್ರತಿಮೆಗಳಿಂದ ತುಂಬಿವೆ. . ಕೆಲವರು ಮರಣಾನಂತರ ಸ್ವರ್ಗ ಮತ್ತು ನರಕಗಳು ಅಂತಿಮ , ಶಾಶ್ವತ ಎಂದು ಹೇಳುತ್ತಾರೆ, ಇತರರು ಪುನರ್ಜನ್ಮ ಸಂಭವಿಸುತ್ತದೆ ಎಂದು ವಾದಿಸುತ್ತಾರೆ ಮಾನವರು ತಮ್ಮ ಸುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ವಿಭಿನ್ನ ಕಥೆಗಳು ಮತ್ತು ವ್ಯವಸ್ಥೆಗಳನ್ನು ಪ್ರಯತ್ನಿಸುತ್ತಾ ಬಹುಸಂಖ್ಯೆಯಲ್ಲಿ ವಿವಿಧ ವಿಚಾರಗಳನ್ನು ಪರೀಕ್ಷಿಸುತ್ತಿರುವ...
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು
‘ಮಧ್ಯಮ ಆದಾಯದ ಬಲೆ’ “ಭಾರತವು ಮಧ್ಯಮ ಆದಾಯದ ಬಲೆಗೆ ಬೀಳಬಹುದು : ಆದರೆ ದೇಶವು ಎಂದಿಗೂ ವಿಕಸಿತ ಆಗದೆ ಇರ ಬಹುದೇ ? ಹಾಗೇನಾದರೂ ಆದಲ್ಲಿ ಇದು ನಮ್ಮ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರಬಹುದು” 2007 ರಲ್ಲಿ ವಿಶ್ವ ಬ್ಯಾಂಕ್ ಪ್ರಕಟಿಸಿದ ವರದಿಯಲ್ಲಿ ಮೊದಲಬಾರಿಗೆ "ಮಧ್ಯಮ ಆದಾಯದ ಬಲೆ" ಎಂಬ ಪರಿಕಲ್ಪನೆಯನ್ನು ಮತ್ತು ಪದಗುಚ್ಛವನ್ನು ಸೂಚಿಸಲಾಯಿತು. ‘ಬಲೆ’ ಎ೦ದರೆ ಬಿಡಿಸಿಕೊಳ್ಳಲು ಕಠಿಣವಾದ ಒ೦ದು ಪರಿಸ್ಥಿತಿ. 2007 ರಲ್ಲಿಯೇ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಬಡತನ ಕಡಿತದ ಒಂದು ದಶಕದ ಹೊರತಾಗಿಯೂ ಅನೇಕ ಆರ್ಥಿಕತೆಗಳು - ವಿಶೇಷವಾಗಿ ಲ್ಯಾಟಿನ್ ಅಮೇರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ - ಹೆಚ್ಚಿನ ಆದಾಯದ ಸ್ಥಿತಿಗೆ ಏರುವ ಪ್ರಯತ್ನಗಳಲ್ಲಿ ಅಸಫ಼ಲವಾಗಿವೆ ಎಂಬುದು ಸ್ಪಷ್ಟವಾಗಿ ತೋರಿತ್ತು. ‘ಮಧ್ಯಮ’ - ದಿಂದ ‘ಹೆಚ್ಚಿನ’ - ಆದಾಯದ ಸ್ಥಿತಿಗೆ ಪರಿವರ್ತನೆಯನ್ನು ಸಾಧಿಸುವಲ್ಲಿ ಸಹಾಯ ಮಾಡಲು ಬೆಳವಣಿಗೆಯ ಅರ್ಥಶಾಸ್ತ್ರ ವಿಶ್ವಾಸಾರ್ಹ ಸಿದ್ಧಾಂತವನ್ನು, ಹಾಗೆಯೇ ಪರಿಣಾಮಕಾರಿ ಅಭಿವೃದ್ಧಿ ಕಾರ್ಯತಂತ್ರಗಳನ್ನು ನಿರ್ಮಿಸಲು ಉತ್ತಮವಾದ ಬೆಳವಣಿಗೆಯ ಚೌಕಟ್ಟನ್ನು, ಅರ್ಥಶಾಸ್ತ್ರಜ್ಞರು ಇನ್ನೂ ಒದಗಿಸಬೇಕಾಗಿಯೂ ತೋರಿತ್ತು. 2007 ರ ಪರೀಕ್ಷಾರ್ಥ ಕಲ್ಪನೆಯು ಇ೦ದು ಗಂಭೀರ ವಿಚಾರಕ್ಕೆ ಒಳಪಡಿಸುವ ವಿಷಯವ...
ಸ್ಪಿನೋಜಾ : ಧರ್ಮ, ನಾಸ್ತಿಕತೆ, ಮತಾಂಧತೆ (ಭಾಗ ೨) ಮತಾಂಧತೆ ಇಷ್ಟೊಂದು ವಿನಾಶಕಾರಿಯಾಗಿದ್ದರೆ, ಅದು ಏಕೆ ಸಾಮಾನ್ಯವಾಗಿದೆ ಎಂದು ನಾವು ಆಶ್ಚರ್ಯಪಡಬಹುದು. ಅನೇಕರು ಈ ಮಾರ್ಗವನ್ನು ಏಕೆ ಆರಿಸಿಕೊಳ್ಳುತ್ತಾರೆ? ಸ್ಪಿನೋಜಾ ನೀಡುವ ಉತ್ತರ: ಮತಾಂಧತೆಯು ಆಕರ್ಷಕವಾದ ಪ್ರಲೋಭವನ್ನು ನೀಡುತ್ತದೆ. ಅನಿಶ್ಚಿತತೆಯ ಕಾಲದಲ್ಲಿ ಸಂಪೂರ್ಣ ಖಚಿತತೆ. ಸಂಕೀರ್ಣ, ಗೊಂದಲಮಯ ಜಗತ್ತಿನಲ್ಲಿ, ಮತಾಂಧನಿಂದ ಎಲ್ಲಾ ಪ್ರಶ್ನೆಗಳಿಗೆ ಸರಳ ಉತ್ತರಗಳ ಭರವಸೆ , ಪ್ರತ್ಯೇಕತೆಯ ಬಲವಾದ ಗುರುತು, ನೈತಿಕ ಶ್ರೇಷ್ಠತೆಯ ಭಾವನೆ (ಭ್ರಮೆ ?). ಇದು ಮಾದಕ ವ್ಯಸನದಂತಿದೆ ಏಕೆಂದರೆ ಇದು ತಾತ್ಕಾಲಿಕವಾಗಿ ಅಸ್ತಿತ್ವವಾದದ ವೇದನೆಯನ್ನು ನಿವಾರಿಸುತ್ತದೆ ಆದರೆ ಆಳವಾದ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ವಾಸ್ತವವಾಗಿ, ಇದು ಮತಾಂಧರಾದವರನ್ನು ಹದಗೆಡಿಸುತ್ತದೆ. ಮತಾಂಧನು ದುರಹಂಕಾರದ ಮೇಲೆ ಅವಲಂಬಿತನಾಗುತ್ತಾನೆ, ಅದರಿಂದಾಗಿ ಬೆಳೆಯಲು, ಕಲಿಯಲು ಅಥವಾ ವಿಕಸನಗೊಳ್ಳಲು ಅವನಿಂದ ಸಾಧ್ಯವಾಗುವುದಿಲ್ಲ. ಸ್ಪಿನೋಜಾ ಮತಾಂಧತೆ ಮತ್ತು ಸಹಿಷ್ಣುತೆಯ ನಡುವಿನ ಸಮಾಜದ ಪರ್ಯಾಯಗಳ ಚಕ್ರವನ್ನು ಗಮನಿಸುತ್ತಾನೆ. ಬಿಕ್ಕಟ್ಟು, ಭಯ ಮತ್ತು ಅನಿಶ್ಚಿತತೆಗಳ ಕ್ಷಣಗಳಲ್ಲಿ ಜನರು ಮತಾಂಧ ಸಂದೇಶಗಳಿಗೆ ಹೆಚ್ಚು ಭೇದ್ಯರಾಗುತ್ತಾರೆ. ಜನರಿಗೆ ಬೇಕಾಗಿರುವದು ಬಲಿಪಶುಗ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ