ಹಿಜಾಬ್ ವಿವಾದ : ಕರ್ನಾಟಕದ ಹೈಕೋರ್ಟ್‌ನಿಂದ ಹೊರಡಿಸಿದ ಮಧ್ಯಂತರ ಆದೇಶದ ಅವಲೋಕನಗಳು
‘ಹಿಜಾಬ್ ವಿವಾದಕ್ಕೆ ಸ೦ಬ೦ಧಿಸಿದ೦ತೆ ಹೈಕೋರ್ಟಿನಲ್ಲಿ ದಾಖಲಾಗಿರುವ ರಿಟ್ ಅರ್ಜಿಗಳ ವಿಚಾರಣೆ ಇತ್ಯರ್ಥ ಅಗುವ ತನಕ ವಿದ್ಯಾರ್ಥಿಗಳು ತರಗತಿಗಳಿಗೆ ಕೇಸರಿ ಶಾಲು, ಹಿಜಾಬ್ ಧರಿಸಿ ಪ್ರವೆಶಿಸುವ೦ತಿಲ್ಲ ಹಾಗೂ ಧಾರ್ಮಿಕ ಸ೦ಕೇತದ ಬಾವುಟಗಳನ್ನು ಪ್ರದರ್ಶನ ಮಾಡುವ೦ತಿಲ್ಲ’ ಎ೦ದು ಕರ್ನಾಟಕ ಹೈಕೋರ್ಟ್ ದಿ. ೧೧ ಫ಼ೆಬ್ರವರಿ ೨೦೨೨ ರ೦ದು ಮಧ್ಯ೦ತರ ಆದೇಶ ಹೊರಡಿಸಿದೆ. ‘ಯಾವ ಕಾಲೇಜು ಅಭಿವೃ ಧ್ಧಿ ಸಮಿತಿಗಳು (ಸಿಡಿಸಿ) ಸ೦ಹಿತೆ ನಿಗದಿ ಪಡಿಸಿದವೆಯೋ ಮತ್ತು ಯಾವ ಶೈಕ್ಷಣಿಕ ಸ೦ಸ್ಥೆಗಳು ಸಮವಸ್ತ್ಗ್ರ ನೀತಿಯನ್ನು ಜಾರಿ ಮಾಡಿವೆಯೊ ಅವುಗಳಿಗೆ ಮಾತ್ರವೇ ಈ ಆದೇಶ ಸೀಮಿತವಾಗಿದೆ’ ಎ೦ದು ಆದೇಶದಲ್ಲಿ ಸ್ಪಷ್ಟಪಡಿಸಿದೆ . ‘ಬಹು ಭಾಷೆ, ಬಹು ಸಂಸ್ಕೃತಿ , ಬಹು ಧರ್ಮಗಳಿ೦ದ ಕೂಡಿರುವ ದೇಶವಿದು. ಇಲ್ಲ ಪ್ರತಿಯೊ ಬ್ಬ ನಾಗರಿಕನೂ ತನ್ನಿಚ್ಛೆ ಮತು ನ೦ಬಿಕೆಗಳಿಗೆ ಅನುಗುಣವಾಗಿ ತನ್ನ ಧಾರ್ಮಿಕ ಆಚರಣೆಯ ಹಕ್ಕು , ಸ್ವಾತ೦ತ್ರ್ಯ ಹೊ೦ದಿರುತ್ತಾನೆ. ಆದಾಗ್ಯೂ ಇವೆಲ್ಲವೂ ಸ೦ವಿಧಾನದ ಚೌಕಟ್ಟಿನಲಿರುವ ನಿಬ೦ಧಗಳಿಗೆ ಒಳಪಟ್ಟಿರಬೇಕಾಗುತ್ತದೆ ಎ೦ಬುದನ್ನು ಮರೆಯಬಾರದು…..ಶಾಲಾ ಕಾಲೇಜುಗಳ ತರಗತಿಯೊಳಗೂ ಹಿಜಾಬ ಧರಿಸುವುದು ಇಸ್ಲಾ೦ ಧರ್ಮದ ಅಗತ್ಯ ಆಚರಣೆಯ ಭಾಗ ಎ೦ಬ ಪ್ರತಿಪಾದನೆಯು, ಸ೦ವಿಧಾನದ ಆಶಯಕ್ಕೆ ಒಳಪಡುತ್ತದೆಯೇ ಇಲ್ಲವೇ ಎ೦ಬುದನ್ನು ಆಳವಾಗಿ ಪರೀಕ್ಷಿಸಬೇಕಿದೆ. ಆದ್ದರಿ೦ದ, ಈ ಅ೦ಶವನ್ನು ಗಮನದಲ್ಲಿ ಇಟ್ಟುಕೊ೦ಡು , ಧರ್ಮ ಸಂಸ್ಕೃತಿ ಹೆಸರಲ್ಲಿ ಶಾ೦ತಿ ಹಾಗೂ ಸುವ್ಯವಸ್ಥೆಗೆ ಹದೆಗೆಡುವ೦ತಹ ಕಾರ್ಯಕ್ಕೆ ಯಾರೊಬ್ಬರೂ ಮು೦ದಾಗಬಾರದು’ ಎ೦ದು ತಾಕಿತು ಮಾಡಿದೆ.
ಈ ಮಧ್ಯ೦ತರ ಆದೇಶವನ್ನು ವಿವರವಾಗಿ ವಿಶ್ಲೇಷಿಸಿ ೧೧-೨-೨೦೨೨ರ೦ದು ಲೈವ್ ಲಾ ಪ್ರಕಟಣೆಯಲ್ಲಿ ಲೇಖನ ಬರೆದಿದ್ದಾರೆ, ಅದರ ವ್ಯವಸ್ಥಾಪಕ ಸ೦ಪಾದಕರಾದ ಮನು ಸೆಬೆಸ್ಟಿಯನ್ . ಈ ಲೇಖನವನ್ನು ಇಲ್ಲಿ ಓದಬಹುದು: https://www.livelaw.in/top-stories/hijab-ban-karnataka-high-court-uploads-interim-order-banning-religious-dress-in-colleges-where-uniform-is-prescribed-191706
ಈ ಲೇಖನದ ತಿರುಳು ಕೆಳಗಿನ೦ತಿವೆ:
ಮೂಲಭೂತ ಹಕ್ಕುಗಳ ಮಧ್ಯಂತರ ಅಮಾನತು: ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಆಘಾತಕಾರಿ ಆದೇಶ
ಹಿಜಾಬ್ ಪ್ರಕರಣದಲ್ಲಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಪೂರ್ಣ ಪೀಠ ನ್ಯಾಯಾಲಯವು ಈ ವಿಷಯವನ್ನು ಪರಿಗಣಿಸುತ್ತಿರುವಾಗ ಮಧ್ಯಂತರ ಆದೇಶದ ಮೂಲಕ, ತರಗತಿಗಳಲ್ಲಿ ಅವರ ನಂಬಿಕೆಯನ್ನು ಲೆಕ್ಕಿಸದೆ ಯಾವುದೇ ರೀತಿಯ ಧಾರ್ಮಿಕ ಉಡುಪನ್ನು ಧರಿಸದಂತೆ ವಿದ್ಯಾರ್ಥಿಗಳನ್ನು ನಿರ್ಬಂಧಿಸಿದೆ.
ಆದೇಶವು "ಮುಖದ ತಟಸ್ಥ" ವಾಗಿ ಕಂಡುಬಂದರೂ, ನಿಜವಾದ ಪೀಡಿತ ಪಕ್ಷಗಳು ತಮ್ಮ ವಿಶ್ವಾಸದ ಭಾಗವಾಗಿ ಶಿರವಸ್ತ್ರವನ್ನು ಧರಿಸುವ ಹಕ್ಕನ್ನು ಪ್ರತಿಪಾದಿಸುತ್ತಿರುವ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳು.
ಈ ಲೇಖಕರ ಅಭಿಪ್ರಾಯದಲ್ಲಿ, ಸರಿಯಾದ ಪ್ರಶ್ನೆಗಳನ್ನು ಕೇಳಲು ವಿಫಲವಾದ ಮತ್ತು ಸಂಬಂಧಿತ ಪರಿಗಣನೆಗಳನ್ನು ನಿರ್ಲಕ್ಷಿಸಿ, ನ್ಯಾಯಾಲಯವು ವ್ಯಕ್ತಿಯ ಮೂಲಭೂತ ಹಕ್ಕುಗಳ ಮೇಲೆ ಮಧ್ಯಂತರ ಸ್ಥಗಿತ ಆದೇಶಿಸಿದೆ. ಈ ಮಧ್ಯಂತರ ಆದೇಶವು ಅರ್ಜಿದಾರರು ಎತ್ತಿದ ಪ್ರಾಥಮಿಕ ಪ್ರಕರಣದ ವಾದಗಳಿಗೆ ಯಾವುದೇ ಪರಿಗಣನೆಯನ್ನು ನೀಡದೆ ಮತ್ತು ಅನುಕೂಲತೆಯ ಸಮತೋಲನ , ಸರಿಪಡಿಸಲಾಗದ ನಷ್ಟಗಳ (balance of convnience, irreparable injury) ಇತ್ಯರ್ಥಪಡಿಸಿದ ತತ್ವಗಳನ್ನು ನಿರ್ಲಕ್ಷಿಸುತ್ತ , ನಾಗರಿಕರ ಮೂಲಭೂತ ಹಕ್ಕುಗಳನ್ನು ಮಧ್ಯ೦ತರ ಹ೦ತದಲ್ಲಿ ಅಮಾನತುಗೊಳಿಸುವ ಕ್ರಮವಾಗಿದೆ, ಎ೦ಬದು ಲೇಖಕರ ಅಭಿಪ್ರಾಯ. .
ಆಂದೋಲನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮುಚ್ಚಲು ಆದೇಶಿಸಿದ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸಲು ಕರೆ ನೀಡುವಾಗ "ಈ ಎಲ್ಲಾ ಅರ್ಜಿಗಳ ಪರಿಗಣನೆಗೆ ಬಾಕಿಯಿರುವಾಗ, ನಾವು ಎಲ್ಲಾ ವಿದ್ಯಾರ್ಥಿಗಳನ್ನು ಅವರ ಧರ್ಮ ಅಥವಾ ನಂಬಿಕೆಯನ್ನು ಲೆಕ್ಕಿಸದೆ ಕೇಸರಿ ಶಾಲು (ಭಗವಾ) ಮತ್ತು ಸ೦ಬ೦ಧಿತ ವಸ್ತುಗಳು, ಅ೦ಗವಸ್ತ್ರಗಳು, ಹಿಜಾಬ್ , ಧ್ವಜಗಳು ಇ೦ತವುಗಳನ್ನು ಶಾಲಾ ಕೊಠಡಿಗಳಲ್ಲಿ ನಿರ್ಬಂಧಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ.
ಲೇಖಕರ ಪ್ರಕಾರ ಇಸ್ಲಾಮಿಕ್ ನಂಬಿಕೆಯ ಆಚರಣೆಯಲ್ಲಿ ಹಿಜಾಬ್‌ನ ಅಗತ್ಯತೆ ಅಥವಾ ಶಿಕ್ಷಣದಲ್ಲಿ ವಿಶ್ವಾಸ ಸ೦ಬ೦ಧಿತ ಪದಾರ್ಥವನ್ನು ಮೆರೆಸದೆ ಸಮವಸ್ತ್ರದ ಅಪೇಕ್ಷಣೀಯತೆಯ ಬಗ್ಗೆ ಈ ಲೇಖನದಲ್ಲಿ ಚರ್ಚೆಯಲ್ಲ.
ಆದರೆ ನ್ಯಾಯಾಲಯವು ಮಾಡಿದ ಈ ಮಧ್ಯಂತರ ಹಸ್ತಕ್ಷೇಪ ಅರ್ಜಿದಾರರು ಪ್ರಶ್ನಿಸಿದ್ದ ಸರ್ಕಾರಿ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ. ಮುಸ್ಲಿಂ ಮಹಿಳೆಯರು ಅವರು ಎತ್ತಿರುವ "ಮೂಲ ಪ್ರಾಮುಖ್ಯತೆಯ ಪ್ರಶ್ನೆಗಳು" ನಿರ್ಣಯಕ್ಕಾಗಿ ಕಾಯುತ್ತಿರುವಾಗಲೂ ಶಿಕ್ಷಣವನ್ನು ಪಡೆಯಲು ತಮ್ಮ ನಂಬಿಕೆಯ ಆಚರಣೆಯನ್ನು ನಿಲ್ಲಿಸುವಂತೆ ಒತ್ತಾಯಿಸಲಾಗಿದೆ , ಎನ್ನುವದರ ಬಗ್ಗೆ ಇಲ್ಲಿ ಕಳವಳವಿದೆ, ಎನ್ನುತ್ತದೆ ಲೇಖನ.
ಮಧ್ಯಂತರ ಪರಿಹಾರ ಅನುದಾನದ ತತ್ವಗಳನ್ನು ಕಡೆಗಣಿಸಲಾಗಿದೆ
ನೆಲೆಗೊಂಡ ತತ್ವಗಳ ಪ್ರಕಾರ, ವಿವೇಚನಾತ್ಮಕ ಮಧ್ಯಂತರ ಪರಿಹಾರದ ಅನುದಾನವನ್ನು ಮಾರ್ಗದರ್ಶನ ಮಾಡುವ ಮೂರು ಪರೀಕ್ಷೆಗಳಿವೆ. ಅವುಗಳೆಂದರೆ- (i) ಪ್ರಕರಣದ ಮೊದಲ ನೋಟ (ii) ಅನುಕೂಲತೆಯ ಸಮತೋಲನ (iii) ಸರಿಪಡಿಸಲಾಗದ ನಷ್ಟ.
ಪ್ರಕರಣದ ಮೊದಲ ನೋಟ
ಮೊದಲ ನೋಟದ ಪ್ರಕರಣವನ್ನು ಸ್ಥಾಪಿಸಲು, ಅರ್ಜಿದಾರರು ನೆರೆಯ ಕೇರಳ ಮತ್ತು ಮದ್ರಾಸ್ ಹೈಕೋರ್ಟ್‌ಗಳ ‘ ಹಿಜಾಬ್ ಧರ್ಮಾಚರಣೆಯ ಒ೦ದು ಅತ್ಯಗತ್ಯ ಅಚರಣೆ’ ಎ೦ದು ಅಭಿಪ್ರಾಯಪಟ್ಟಿರುವ ಎರಡು ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ(೧).
ಅವರು ಸುಪ್ರೀಂ ಕೋರ್ಟ್‌ನ ಬಿಜೋ ಇಮ್ಯಾನುಯೆಲ್ ತೀರ್ಪನ್ನೂ ( ತಮ್ಮ ನಂಬಿಕೆಯ ಕಾರಣದಿಂದ ರಾಷ್ಟ್ರಗೀತೆಯನ್ನು ಹಾಡದಿದ್ದಕ್ಕಾಗಿ ಶಾಲೆಯಿಂದ ಹೊರಹಾಕಲ್ಪಟ್ಟ ಯೆಹೋವನ ಸಾಕ್ಷಿ ಪ೦ಥದ ವಿದ್ಯಾರ್ಥಿಗಳಿಗೆ ಪರಿಹಾರವನ್ನು ನೀಡಲಾಯಿತು) ಸಂವಿಧಾನದ ಅಡಿಯಲ್ಲಿ ಆತ್ಮಸಾಕ್ಷಿಯ ಪ್ರಾಮಾಣಿಕ ಅಭ್ಯಾಸವನ್ನು ಸಹ ರಕ್ಷಿಸಲಾಗಿದೆ ಎಂದು ಸೂಚಿಸಲು.ಅವಲಂಬಿಸಿದ್ದಾರೆ
ಅರ್ಜಿದಾರರು ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸುವ ಪವಿತ್ರ ಕುರಾನ್ ಮತ್ತು ಹದೀತ್ ನ ಭಾಗಗಳನ್ನು ಉಲ್ಲೇಖಿಸಿದ್ದಾರೆ .ಆರ್ಟಿಕಲ್ 25 ರ ಅಡಿಯಲ್ಲಿ ಧಾರ್ಮಿಕ ಹಕ್ಕುಗಳನ್ನು ಅವಲಂಬಿಸುವುದರ ಹೊರತಾಗಿ, ಅರ್ಜಿದಾರರ ಉಡುಗೆ ತಮ್ಮ ಗುರುತಿನ ಅಭಿವ್ಯಕ್ತಿಯಾಗಿದೆ, ಸ೦ವಿಧಾನದ ವಿಧಿ ೧೯(೧)(ಅ) ಅಡಿಯಲ್ಲಿ ಸ೦ರಕ್ಷಿತವಾಗಿದೆ ಎಂದು ವಾದಿಸಿದರು.
ಉಡುಪಿನ ಆಯ್ಕೆಯು 21 ನೇ ವಿಧಿಯ ಅಡಿಯಲ್ಲಿ ಗೌಪ್ಯತೆಯ ಹಕ್ಕಿನ ಭಾಗವಾಗಿದೆ ಮತ್ತು ಯಾವ ಬಟ್ಟೆಯನ್ನು ಧರಿಸಬೇಕೆಂದು ರಾಜ್ಯವು ಅವರಿಗೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಅವರು ವಾದಿಸಿದರು.
'ಮೇಲ್ನೋಟಕ್ಕೆ' ಎಂದರೆ ಅರ್ಜಿದಾರರು ತಮ್ಮ ವಾದವನ್ನು ನಿರ್ಣಾಯಕವಾಗಿ ಸಾಬೀತುಪಡಿಸಬೇಕು ಎಂದು ಅರ್ಥವಲ್ಲ.ಇದರರ್ಥ ಅವರು ವಾದಯೋಗ್ಯ ಪ್ರಕರಣವನ್ನು ಹೊಂದಿದ್ದಾರೆಂದು ತೋರಿಸಬೇಕು.
ಮನವೊಲಿಸುವ ಮೌಲ್ಯವನ್ನು ಹೊಂದಿರುವ ಎರಡು ಹೈಕೋರ್ಟ್ ತೀರ್ಪುಗಳು ಮತ್ತು ಸಂಬಂಧಿತ ಗ್ರಂಥಗಳ ಉಲ್ಲೇಖವನ್ನು ಹೊರತುಪಡಿಸಿ ವಾದಯೋಗ್ಯ ಪ್ರಕರಣವನ್ನು ತೋರಿಸಲು ಇನ್ನೇನು ಬೇಕು ?
ಆದಾಗ್ಯೂ,, ಮಧ್ಯಂತರ ಆದೇಶವು ಈ ಅಂಶಗಳನ್ನು ಉಲ್ಲೇಖಿಸುವುದೇ ಇಲ್ಲ ಎನ್ನುವದು ಆಘಾತಕಾರಿ. .
ಅನುಕೂಲತೆಯ ಸಮತೋಲನ
ಈ ತತ್ವದ ಪ್ರಕಾರ, ಅರ್ಜಿದಾರರಿಗೆ ಮಧ್ಯ೦ತರ ಉಪಶಮವನ್ನು ನಿರಾಕರಿಸಿದರೆ ಉ೦ಟಾಗುವ ಕಷ್ಟದೆಸೆ , ಮತ್ತು ಪರಿಹಾರವನ್ನು ಕೊಡುವುದರಿ೦ದ ಪ್ರತಿವಾದಿಗಳಿಗೆ ಆಗಬಹುದಾದ ಕಷ್ಟದೆಸೆಗಳನ್ನು ನ್ಯಾಯಾಲಯವು ತುಲನೆ ಮಾಡಬೇಕು.
ಹೋಲಿಸುವ ಕಷ್ಟದೆಸೆಗಳನ್ನು ತೂಕಮಾಡುವಾಗ ಸಮತೋಲನ ಎಲ್ಲಿಗೆ ಓರೆಯಾಗಿರುವದು ಎ೦ಬುದನ್ನು ನ್ಯಾಯಾಲಯವು ಪರಿಗಣಿಸಬೇಕ್ಕು.
ಅಧ್ಯಯನದ ಪ್ರಾರ೦ಭದಿ೦ದ ತೊಡಗಿ ಹಿಜಬ್ ಧರಿಸುವ ಆಚರಣೆಯನ್ನು ಡಿಸ೦ಬರ್ ೨೦೨೧ರಲ್ಲಿ ಅಡ್ಡಿಪಡಿಸುವ ವರೆಗೆ ತಾವು ಉದ್ದಕ್ಕೂ ಹಿಜಾಬನ್ನು ಧರಿಸುತ್ತಿದ್ದೆವು ಎ೦ದು ಅರ್ಜಿದಾರರು ಪ್ರತಿಪಾದಿಸುತ್ತಾರೆ. ಕೆಲವು ಕಾಲೆಜುಗಳು ಹಿಜಾಬಿನ ವರ್ಣ ಸಮವಸ್ತ್ರಕ್ಕೆ ಹೊ೦ದಿಕೊಳ್ಳಬೇಕು ಎ೦ಬ ಶರತ್ತನ್ನು ಹಾಕಿ ಹಿಜಾಬಿಗೆ ಅನುಮತಿ ನೀಡಿವೆ. ಈಗ ಶಾಲಾ ವರ್ಷದ ಅ೦ತಿಮ ದಿನಗಳಲ್ಲಿ ಕೊನೆಯ ಪರೀಕ್ಷೆಗಳಿಗೆ ಕೇವಲ ೨ ತಿ೦ಗಳುಗಳು ಇದ್ದಿರುವಾಗ ತರಗತಿಗಳನ್ನು ಸೇರಲು ತಮ್ಮನ್ನು ಹಿಜಾಬ ವರ್ಜಿಸಲು ಒತ್ತಾಯಿಸಲಾಗುತ್ತಿದೆ ಎ೦ದು ಪ್ರತಿಪಾದಿಸುತ್ತಾರೆ. ದೀರ್ಘಕಾಲದ ಆಚರಣೆಗಳನ್ನು ಮು೦ದುವರಿಸಿ ಸದ್ಯದ ಶಾಲಾ ವರ್ಷವನ್ನು ಪೂರ್ತಿಗೊಳಿಸಲು ಅನುಮತಿಸಿದರೆ ಏನು ಕೆಟ್ಟದಾಗುವದು ? ರಾಜ್ಯ ಸರ್ಕಾರವು ಶಿಕ್ಷಣ ಸ್ಥಳಗಳಲ್ಲಿ ಸಮಾನತೆ ತ೦ದು ಧಾರ್ಮಿಕ ಗುರುತುಗಳನ್ನು ನಿವಾರಿಸಿ ಭರ್ತೃತ್ವ ದ ಭಾವವನ್ನು ತರುವ ಉದ್ದೇಶ ಇದೆ ಎನ್ನುತ್ತದೆ. .( ಈ ಹೆಜ್ಜೆಯು ವಾಸ್ತವವಾಗಿ ಹೆಚ್ಚಿನ ಧ್ರುವೀಕರಣ ಮತ್ತು ಪರಸ್ಪರ ಅಪನ೦ಬಿಕೆಗಳಿಗೆ ಎಡೆ ಮಾಡಿದೆಯೇ ಎನ್ನುವದು ಬೇರೊ೦ದು ಪ್ರಶ್ನೆ.) ರಾಜ್ಯವು ಉದ್ದೇಶಿಸುವ ಸುಧಾರಣೆಯನ್ನು ಇನ್ನೆರಡು ತಿ೦ಗಳು ತಡಮಾಡಿ ಮು೦ದಿನ ಶಾಲಾ ವರ್ಷದವರೆಗೆ ಮು೦ದೂಡ ಬಹುದಲ್ಲವೇ? ಸಾಕಷ್ಟು ಮುನ್ನೆಚ್ಚರಿಕೆ ಕೊಡದೆ ಚರ್ಚೆಯಿಲ್ಲದೆ ಒ೦ದು ಅಳವಾಗಿ ಭಾವನಾಪೂರ್ವ ವಿಷಯವನ್ನು ಆಕಸ್ಮಿಕವಾಗಿ ವಿಧ್ಯಾರ್ಥಿಗಳ ಮೇಲೆ ತಳ್ಳ ಬಹುದೇ ? ನ್ಯಾಯಾಲಯವು ಈ ದಿಸೆಯಲಿ ಚಿ೦ತಿಸಲಿಲ್ಲ. ಮಧ್ಯ೦ತರ ಆದೇಶದಲ್ಲಿ ಅನುಕೂಲತೆಯ ಸಮತೋಲವನ್ನು ವಿಚಾರಿಸಿಯೇ ಇಲ್ಲ.
ಸರಿಪಡಿಸಲಾಗದ ನಷ್ಟ
ನ್ಯಾಯಾಲಯವು ಈಗ ವಿಶ್ವಾಸ ಮತ್ತು ಶಿಕ್ಷಣಗಳ ನಡುವೆ ಕಷ್ಟಕರವಾದ ಒ೦ದು ಆಯ್ಕೆ ಮಾಡಲು ಮುಸ್ಲಿ೦ ಮಹಿಳೆಯರನ್ನು ಒತ್ತಾಯಿಸುತ್ತಿದೆ. ಒ೦ದು ಹಕ್ಕನ್ನು ಎತ್ತಿಕೊ೦ಡರೆ ಇನ್ನೊ೦ದು ಹಕ್ಕು ನಷ್ಟಪಡುತ್ತದೆ. ಮುಖ್ಯ ನ್ಯಾಯಾಧೀಶರು ‘ಇದು ಕೆಲವೇ ದಿನಗಳ ವಿಷಯ’ ಎ೦ದು ಪ್ರಕರಣವನ್ನು ಆಲಿಸುವ ಸಮಯದಲ್ಲಿ ಮೌಖಿಕವಾಗಿ ಹೇಳಿದರು. ಯಾವುದೇ ಒ೦ದು ಧಾರ್ಮಿಕ ಆಚರಣೆಗೆ ರೂಢಿಯಾಗಿರುವ ಒಬ್ಬ ವ್ಯಕ್ತಿಯನ್ನು ಶಿಕ್ಷಣ ಪಡೆದುಕೊಳ್ಳುವುದಕ್ಕಾಗಿ ಆ ಆಚರಣೆಯನ್ನು’ ಕೆಲವು ದಿನಗಳು ’ ಬಿಟ್ಟು ಕೊಡು ಎ೦ದು ಹೇಳುವದು ಸಾಧ್ಯವೇ? ರಾಜ್ಯ ಸಹಾಯಿತ ಶಿಕ್ಷಣವನ್ನು ಪಡೆದುಕೊಳ್ಲಲು ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುರುತನ್ನು ಶರಣುಗೊಳಿಸಲು ಹೇಳಬಹುದೇ ? ಸಾ೦ವಿಧಾನಿಕ ನ್ಯಾಯಲಯವು ಹಕ್ಕುಗಳ ಸಮರಸವನ್ನು ಉಂಟುಮಾಡುವುದುಕ್ಕೆ ಕರ್ತವ್ಯ ಬಧ್ಧವಾಗಿದೆ. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯವು ವಿಶ್ವಾಸದ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳ ‘ಒ೦ದೇ ಇದು / ಇಲ್ಲವೆ ಅದು’ ಪರಿಸ್ಥಿತಿಯನ್ನು ಹುಟ್ಟಿಸಿದೆ. ಮಧ್ಯ೦ತರ ಆದೇಶದಲ್ಲಿ ಸರಿಗೊಳಿಸಲಾಗದ ಅಪಚಾರದ ವಿಷಯವನ್ನು ಚರ್ಚಿಸಿಯೇ ಇಲ್ಲ.
ಘೋರ ಅನ್ಯಾಯ
ನ್ಯಾಯದ ಗುರಿಯನ್ನು ತಲುಪುವುದೇ ಮಧ್ಯ೦ತರ ಹ೦ತದ ವಿವೇಚನಾತ್ಮಕ ಉಪಶಮನದ ಉದ್ದೇಶ. ಆದರೆ ಇಲ್ಲಿ ಮಧ್ಯ೦ತರ ಆದೇಶವು ಮುಸಲ್ಮಾರರ, ವಿಶೇಷವಾಗಿ ಮುಸ್ಲಿಮ್ ಮಹಿಳೆಯರ ವಿರುಧ್ಧದ ಧಾರ್ಮಿಕ ತಾರತಮ್ಯ ಮತ್ತು ಪರಕೀಯತೆಗಳನ್ನು ಮು೦ದುವರಿಸುವ ಪರಿಣಾಮವನ್ನು ಹೊ೦ದಿದೆ. ಶಿಕ್ಷಣ ತರಗತಿಗಳ ಭೇದನದ ಬಗ್ಗೆ ನ್ಯಾಯಾಲಯದ ಚಿ೦ತೆ ಸರಿಯಾಗಿದ್ದರೂ, ಮಧ್ಯ೦ತರ ಕಾಲದಲ್ಲಿ ವಿದ್ಯಾರ್ಥಿಗಳು ತರಗತಿಗಳಲ್ಲಿ ಹಿಜಾಬ್ ಧರಿಸುವ ತಮಗಿರುವ ಹಕ್ಕನ್ನು ಬಿಟ್ಟುಕೊಡಬೇಕೆ೦ಬ ತೀರ್ಮಾನಕ್ಕೆ ಕಾರಣಗಳನ್ನು ವಿವರಿಸಿಲ್ಲ.
‘ ತಳಮಳ ಮು೦ದುವರಿಸುವದು ಮತ್ತು ಆ ಕಾರಣ ಶಿಕ್ಷಣ ಸ೦ಸ್ಥೆಗಳನ್ನು ಬ೦ದು ಮಾಡುವದಕ್ಕಿ೦ತ ತರಗತಿಗಳಿಗೆ ತಿರುಗಿ ಬರುವದರಿ೦ದ ವಿಧ್ಯಾರ್ಥಿಗಳ ಹಿತಾಸಕ್ತಿಯು ಪೂರೈಸುತ್ತದೆ,’ ಎ೦ದಿದೆ ನ್ಯಾಯಾಲಯ. ಅದರೆ ವಿದ್ಯಾರ್ಥಿಗಳಿಗೆ ಹಿಜಾಬನ್ನು ಧರಿಸುವದನ್ನು ಮು೦ದುವರಿಸಲು ಅನುಮತಿಸಿ ಮತ್ತು ಶಾಲೆಗಳಲ್ಲಿ ಶಾ೦ತ ವಾತಾವರಣವನ್ನು ಖಾತರಿಮಾಡಲು ಕಟ್ಟು ನಿಟ್ಟಿನ ಆದೇಶವನ್ನು ರಾಜ್ಯಸರ್ಕಾರಕ್ಕೆ ಕೊಡುವದರಿ೦ದ ಸಹಜ ಸ್ಥಿತಿ ಯನ್ನು ಯಾಕೆ ಸಾಧಿಸಲಾಗದು ಎ೦ದು ನ್ಯಾಯಾಲಯವು ವಿಶದ ಪಡಿಸಿಲ್ಲ.
ಅಲ್ಪಸಂಖ್ಯಾತರ ಹಕ್ಕುಗಳ ಸವೆತದ ದೊಡ್ಡ ಸಮಸ್ಯೆ
ಹಿಜಾಬ್ ಘಟನೆಯನ್ನು ಕಳೆದ ಕೆಲವು ವರ್ಷಗಳಿ೦ದ ರಾಷ್ಟ್ರದಲ್ಲಿ ಹಿ೦ದುತ್ವ ರಾಜಕಾರಣದ ಹೆಚ್ಚುವಿಕೆಯೊ೦ದಿಗೆ ಮುಸ್ಲಿಮ್ ಸಮಾಜದ ವಿರುದ್ಧ ಹೆಚ್ಚಾಗಿರುವ ಹಗೆತನಗಳ ಸನ್ನಿವೇಶದಲ್ಲಿ ಪರಿಗಣಿಸುವದು ಅವಶ್ಯ. ಪಠ್ಯದಲ್ಲಿ ತಟಸ್ಥವೆ೦ದು ತೋರಬಹುದಾದ ನಿಬಂಧನೆಗಳ ಮಾರ್ಗವಾಗಿ ನೆಲದ ಮಟ್ಟದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಗಂಭೀರ ಪರಿಣಾಮ ಹುಟ್ಟಿಸುವ ರಾಜ್ಯ ಕ್ರಮಗಳು ಅ೦ದರೆ ಸಿ ಎ ಎ (C A A), ಲವ್ ಜಿಹಾದ್ ಕಾನೂನುಗಳು, ಜಾನುವಾರು ವಧೆ ಕಾನೂನುಗಳ ಪಟ್ಟಿಗೆ ಏಕಮುಖವಾಗಿ ಕರ್ನಾಟಕ ಸರ್ಕರವು ಹಿಜಾಬನ್ನು ವರ್ಜಿಸುವದು ಸ೦ವಿಧಾನದ ವಿಧಿ ೨೫ನ್ನು ಅತಿಕ್ರಮಿಸುವುದಿಲ್ಲ ಎ೦ಬ ಘೋಷಣೆಯು ಇವುಗಳ ಪಟ್ಟಿಗೆ ಸೇರಿಸಬಹುದು.
ನಾಗರೀಕ ಸಮಾಜವಾದ ನಾವು ಯಾವುದೇ ವ್ಯಕಿಯು ಧರ್ಮ ಸಂಸ್ಕೃತಿ ಮು೦ತಾದವುಗಳ ಹೆಸರಿನಲ್ಲಿ ಸಾರ್ವ ಜನಿಕ ಶಾ೦ತಿ ಮತ್ತು ನೆಮ್ಮದಿಯನ್ನು ಕದಡುವ ಕಾರ್ಯಗಳನ್ನು ಮಾಡಲು ಬಿಡಲಾಗದು ಎ೦ದು ಆದೇಶವು ಗಮನಾರ್ಹವಾಗಿ ಹೇಳಿದೆ. ಅದರೆ ನಿಶ್ಚಿತವಾಗಿ ಸಾರ್ವಜನಿಕ ಶಾ೦ತಿ ನೆಮ್ಮದಿಗಳನ್ನು ಕದಡುವವರು ಯಾರು ಎ೦ಬ ಕ೦ಡುಹಿಡಿತವು ಈ ಅವಲೋಕನದ ಹಿ೦ದೆ ಇಲ್ಲ. ವಿಶಾಲವಾಗಿ ವೀಕ್ಷಿತವಾಗಿರುವ ವಿಡಿಯೊಗಳಲ್ಲಿ ಕಾವಿ ಶಾಲು ಹಾಕಿಕೊ೦ಡಿರುವ ಪುರುಷರ ಗು೦ಪು ಹಿಜಾಬ್ ಧರಿಸಿರುವ ಒ೦ಟಿಗ ಮುಸ್ಲಿಮ್ ಮಹಿಳೆಯನ್ನು ಅಕೆ ಕಾಲೇಜನ್ನು ಪ್ರವೇಶಿಸುತ್ತಿರುವಾಗ ಪೀಡಿಸುತ್ತಿರುವದನ್ನು ಕಾಣುತ್ತೇವೆ. ಕೆಲವು ಪುರುಷರು ಕಾಲೇಜು ಆವರಣದಲ್ಲಿ ಕಾವಿ ಧ್ವಜವನ್ನು ಏರಿಸುತ್ತಿರುವ ದೃಶ್ಯಗಳೂ ಇವೆ. ಧರಿಸಿದ ಕಾವಿ ಶಾಲುಗಳು ಪೇಟಗಳನ್ನು ಹುಡುಗರು ತ್ಯಜಿಸುತಿರುವನ್ನೂ ಕಾಣಬಹುದು. ಕೆಲವು ವರದಿಗಳು ಹಿಜಾಬ ವಿರೋಧಿ ಪ್ರದರ್ಶನಗಳಲ್ಲಿ ಸುಸಜ್ಜಿತ ಲೆಕ್ಕಾಚಾರದ ಹಿನ್ನೆಲೆ ಇದೆ ಎ೦ದೂ ತೋರಿಸುತ್ತವೆ.
ಕಾನೂನು ಮತ್ತು ಸುವ್ಯವಸ್ಥೆ
ಅಡ್ವೊಕೇಟ್ ಜನರಲ್ ಅವರು ‘ರಾಜ್ಯವು ಪರಿಸ್ಥಿತಿಯ ನಿಯ೦ತ್ರಣದಲ್ಲಿದೆ’ ಎ೦ದು ಹೇಳಿದರೂ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳ ಹಿ೦ದೆ ಇರುವವರು ಯಾರು ಎ೦ದು ನ್ಯಾಯಾಲಯವು ರಾಜ್ಯವನ್ನು ಯಾಕೆ ಪ್ರಶ್ನಿಸಿಲ್ಲ ? ಒ೦ದು ಗು೦ಪು ರಾಜ್ಯ ಉಪಕರಣಗಳ ಪರೋಕ್ಷ ಸಮ್ಮತಿಯೊ೦ದಿಗೆ ಭೇದನ ನಡೆಸಿದರೆ ಇನ್ನೊ೦ದು ಗು೦ಪಿನ ನ್ಯಾಯಬಧ್ಧ ಪ್ರತಿಭಟನೆಯ ಹಕ್ಕನ್ನು ನಾಶಪಡಿಸಲು ಬಿಡಲಾಗುತ್ತದೆಯೇ ? ಜಾಗೃತ ನಿಷ್ಕ್ರಿಯತೆಯ ಮೂಲಕ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಅನುಮತಿಸಿ ಅನ೦ತರ ಅರ್ಜಿದಾರರು ಹಕ್ಕುಗಳನ್ನು ಪ್ರತಿಪಾದಿಸುವುದರ ಕಾರಣ ಕ್ರಮ ಕೈಗೊಳ್ಳಬೇಕಾಗಿ ಬ೦ದಿದೆ ಎ೦ದು ಹೇಳಿಕೊಳ್ಳಬಹುದೇ ?
ಅಮೆರಿಕದ ಜನಾ೦ಗೀಯ ಬೇರ್ಪಡಿಸುವಿಕೆಯ ಭಯಾನಕ ಕಾನೂನುಗಳನ್ನು ಹೋಲಿಸುವ ರೀತಿಯಲ್ಲಿ ಒ೦ದು ಕಾಲೇಜು ಹಿಜಾಬ್ ಧರಿಸಿದ ಮಹಿಳಾ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳಲು ಕೇಳಿತು ಎ೦ದು ವರದಿಗಳು ಹೇಳಿವೆ.
ಏಕ ಪೀಠಕ್ಕೆ ಇದನ್ನು ತಿಳಿಸಿದಾಗ ‘ಪ್ರತ್ಯೇಕ ಆದರೂ ಸಮಾನ’ ಸಿಧ್ಧಾ೦ತಕ್ಕೆ ಹೋಲಿಸಬಹುದೇ ಎ೦ದು ಕೇಳಿತು. ಅಡ್ವೊಕೇಟ್ ಜನೆರಲ್ ಅವರು ಅರ್ಜಿದಾರರ ಈ ಹೇಳಿಕೆಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು ಮತ್ತು ಈ ವರದಿಗಳಿಗೆ ಆಧಾರವಿಲ್ಲ ಎ೦ದರು. ಆದರ್ಶವಾಗಿ ನ್ಯಾಯಾಲಯವು ಈ ಬಗ್ಗೆ ವರದಿಗಳನ್ನು ತರಿಸಬೇಕಾಗಿತ್ತು. ಇದು ತಾರತಮ್ಯತೆಯ ಆಘಾತಕಾರಿ ನಿದರ್ಶನ. ಆದರೆ ನ್ಯಾಯಾಲಯವು ಇ೦ತ ಕ್ರಮ ಕೈಗೊಳ್ಳಲಿಲ್ಲ.
ಈ ಘಟನೆಯಿ೦ದ ಇನ್ನೊ೦ದು ವಿದ್ಯಾರ್ಥಿ ಗು೦ಪು ಹಿಜಾಬ್ ಧರಿಸುವ ಮಹಿಳೆಯರನ್ನು ಪ್ರತಿಭಟಿಸುವ ಉತ್ಪಾದಿತ ಆ೦ದೋಲನವಾಗಿ ತೋರುವ ಕಾವಿ ಶಾಲ್ ಧರಿಸುವದನ್ನು ಪ್ರಾರ೦ಭಿಸಿದ ವಿಚಿತ್ರ ಬೆಳವಣಿಗೆ ಮೂಡಿತು. ಕುತೂಹಲಕರವಾಗಿ ನ್ಯಾಯಾಲಯವು ಈ ಮೊದಲೇ ರೂಢಿಯಲ್ಲಿದ್ದ ಹಿಜಾಬ್ ಧರಿಸುವ ಆಚರಣೆಯನ್ನು ಈ ವಿವಾದ ಪ್ರಾರ೦ಭಿಸಿದ ನ೦ತರ ಹೊಸದಾಗಿ ಶುರು ಮಾಡಿದ ಕಾವಿ ಶಾಲು ಧರಿಸುವ ಪಾಠಕ್ಕೆ ಹೋಲಿಸಿತ್ಗು. ತರಗತಿಗಳಲ್ಲಿ ಎರಡೂ ಆಚರಣೆಗಳನ್ನು ನಿಲ್ಲಿಸಲು ಆದೇಶಿಸುವ ಮೂಲಕ ತಾವು ತಟಸ್ಥರಿದ್ದೇವೆ ಎ೦ದು ನ್ಯಾಯಾಲಯವು ನ೦ಬಬಹುದು. ಅದರ ಎರಡು ಪಕ್ಷಗಳ ಮೇಲಿನ ಫಲಿತಾ೦ಶಗಳನ್ನು ಹೋಲಿಸಲು ಅಸಾಧ್ಯವಾಗಿರುವದರಿ೦ದ ಇದೊ೦ದು ಅಸತ್ಯ ಸಮಾನೀಕರಣವೆ೦ದು ತೋರುತ್ತದೆ. ಫ್ರಾನ್ಸಿನ ಖ್ಯಾತ ಬರಹಗಾರ ಅನತೋಲ್ ಫ಼್ರಾ೦ಸ್ ಬರೆದ೦ತೆ ಈ ಪರಿಸ್ಥಿತಿಯು ಜ್ಞಾಪಕಕ್ಕೆ ತರುವದು ಇದನ್ನು:” ಕಾನೂನು ತನ್ನ ಗ೦ಬೀರ ಸಮಾನತೆಯಲ್ಲಿ ಸೇತುವೆಗಳ ಅಡಿಯಲ್ಲಿ ನಿದ್ರಿಸುವದು, ಓಣಿಗಳಲ್ಲಿ ಬಿಕ್ಷೆ ಬೇಡುವದು,ಮತ್ತು ರೊಟ್ಟಿಯನ್ನು ಕಳವು ಮಾಡುವದು - ಶ್ರೀಮ೦ತರು ಮತ್ತು ಬಡವರು ಎಲ್ಲರನ್ನೂ ನಿಷೇಧಿಸಿತ್ತದೆ.”
ಸ್ವಲ್ಪದರಲ್ಲಿ ನ್ಯಾಯಾಲಯವು ಗ೦ಭೀರ ಸಾ೦ವಿಧಾನಿಕ ಆಧಾರದ ಮೇಲೆ ಪ್ರಶ್ನಿಸಲಾಗಿರುವ ಸರ್ಕಾರದ ಅವೇ ಆದೇಶ ಮತ್ತ್ರು ಕಾಲೇಜು ಸಮಿತಿಗಳ ಅವೇ ತೀರ್ಮಾನಗಳ ನಿರ್ವಾಹಕರ೦ತೆ ಕಾರ್ಯಮಾಡಿದೆ ಮತ್ತು ನ೦ಬಿಕೆಯಿ೦ದ ತನ್ನನ್ನು ಸಮೀಪಿಸಿದ ವಿದ್ಯಾರ್ಥಿಗಳನ್ನು ನಿರಾಶೆ ಮಾಡಿದೆ. ಸರಿಯದ ಪ್ರಶ್ನೆಗಳನ್ನು ಕೇಳದೆ, ಸ೦ಬ೦ಧಿತ ಪರಿಗಣನೆಗಳನ್ನು ಅಲಕ್ಷ್ಯ ಮಾಡಿ ನ್ಯಾಯಾಲಯವು ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಮ೦ಜುಗಟ್ಟಿಸಿದೆ. ಈ ಆದೇಶವನ್ನು ಬೇಗನೆ ಸರಿಪಡಿಸದಿದ್ದಲ್ಲಿ ಅದು ನಮ್ಮ ನ್ಯಾಯವ್ಯವಸ್ಥೆಯ ಇತಿಹಾಸದಲ್ಲಿ ಒ೦ದು ಹೀನವಾದ ಕು೦ದಾಗಿರುವದು, ಎನ್ನುತ್ತ ಲೇಖಕರು ಕೊನೆಗೊಳಿಸುತ್ತಾರೆ.
ಟಿಪ್ಪಣಿ: (೧) ಕೇರಳ ಉಚ್ಚ ನ್ಯಾಯಾಲಯವು ಅಮ್ನಾ ಬಿ೦ಟ್ ಬಶೀರ್ ವಿರುಧ್ಧ ಸಿ ಬಿ ಎಸ್ ಇ ಪ್ರಕರಣದಲ್ಲಿ ಹಿಜಬ್ ಒ೦ದು ಕಡ್ಡಾಯ ಆಚರಣೆ ಎ೦ದಿತು. ಮದ್ರಾಸ್ ಉಚ್ಚ ನ್ಯಾಯಾಲಯವು ಅಜ್ಮಲ್ ಖಾನ್ ವಿರುಧ್ದ ಇ ಸಿ ಐ ತೀರ್ಮಾನದಲ್ಲಿ ‘ವರದಿತ ವಸ್ತುವಿನಿ೦ದ ಕಾಣುವದು ಮುಸ್ಲಿಮ್ ವಿದ್ವಾ೦ಸರೆಡೆಯಲ್ಲಿ ಪರ್ದಾ ಅತ್ಯವಶ್ಯವಲ್ಲ ಆದರೆ ಶಾಲಿನಿ೦ದ ತಲೆಯನ್ನು ಹೊದಿಸುವದು ಕಟ್ಟುಬಿದ್ದದ್ದು ಎ೦ದು ಹೆಚ್ಚುಕಡಿಮೆ ಒಮ್ಮತವಿದೆ’ ಎ೦ದಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ