'ನವ ಭಾರತ'ದ ಭಾಗವಾಗಿ ನವ ಕರ್ನಾಟಕ
(ಜಾನಕಿ ನಾಯರ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಐತಿಹಾಸಿಕ ಅಧ್ಯಯನ ಕೇಂದ್ರದಲ್ಲಿ ಬೋಧಿಸಿದರು. ಎಆರ್ ವಾಸವಿ ಅವರು ಕರ್ನಾಟಕದಲ್ಲಿ ‘ಪುನರ್ಚಿತ್ ಕಲೆಕ್ಟಿವ್’ನ ಸಾಮಾಜಿಕ ಮಾನವಶಾಸ್ತ್ರಜ್ಞ (social anthropologist) ರಾಗಿದ್ದಾರೆ.)
ದಿ ಇ೦ಡಿಯಾ ಫೊರಮ್ ಸಂಚಿಕೆ: ಫೆಬ್ರುವರಿ 4, 2022
'ನವ ಕರ್ನಾಟಕ ನಿರ್ಮಾಣ ಯಾತ್ರೆ'ಗಾಗಿ 2017 ರ ಆಹ್ವಾನ ಫಲಕ: ಕರ್ನಾಟಕದ ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ. | Facebook
ಕರ್ನಾಟಕದ ಭೂ ಸುಧಾರಣೆಗಳು, ಮತ್ತು 1970 ಮತ್ತು 1980 ರ ದಶಕದಲ್ಲಿ ಸೃಜನಾತ್ಮಕ ಹಿಂದುಳಿದ-ಜಾತಿ ಮೈತ್ರಿಗಳು, ಭೂಮಾಲೀಕ ಜಾತಿಗಳ ಪ್ರಾಬಲ್ಯವನ್ನು ಮುರಿಯಿತು ಮತ್ತು ಹೊಸದಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉತ್ತೇಜಿಸಿತು. ಇಂದು ಸಂಕುಚಿತ ಗುರಿಗಳಿಗಾಗಿ ರಾಜ್ಯವು ಈ ಪರಂಪರೆಯನ್ನು ತ್ಯಜಿಸುತ್ತಿದೆ.
ರಾಷ್ಟ್ರೀಯ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರನ್ನು ವಜಾಗೊಳಿಸಿ, ಅವರ ಬದಲಿಗೆ ಬಸವರಾಜ್ ಬೊಮ್ಮಾಯಿ ಅವರನ್ನು ನೇಮಿಸಿದ ಕೆಲವು ತಿಂಗಳ ನಂತರ, ರಾಜ್ಯದ ಬಸ್ಸುಗಳು, ಬಸ್ ತಂಗುದಾಣಗಳು ಮತ್ತು ಪ್ರಮುಖ ರಸ್ತೆ ಜಂಕ್ಷನ್‌ಗಳಲ್ಲಿ ಪ್ರಚಾರ ಜಾಹೀರಾತು ಫಲಕಗಳು 'ನವ ಭಾರತಕ್ಕಾಗಿ ನವ ಕರ್ನಾಟಕ' ಎಂಬ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ನೂತನ ಮುಖ್ಯಮಂತ್ರಿ. ಅವರ ಭಾವಚಿತ್ರಗಳನ್ನು ಪಕ್ಕಪಕ್ಕಕ್ಕೆ ಹಾಕಿದವು. ಪ್ರಚಾರ ಫಲಕಗಳು ಮತ್ತು ವೀರಘೋಷಗಳು ಕರ್ನಾಟಕಕ್ಕೆ ಹೊಸ ಮಾದರಿಯ ಆಡಳಿತದ ಘನೀಕರಣದ ಆತ್ಮವಿಶ್ವಾಸವನ್ನು ಸಾರಿದವು; ಮತ್ತು ಅದರೊಟ್ಟಿಗೆ ರಾಜ್ಯ ಸ್ವಾಯತ್ತತೆಯ ಸಮ್ಮತಿಯ ಶರಣಾಗತಿಯನ್ನೂ ಘೋಷಿಸಿದವು. ಒಂದು ಶತಮಾನಕ್ಕೂ ಹೆಚ್ಚು ಕಾಲ ರಾಜ್ಯ-ಚಾಲಿತ 'ಅಭಿವೃದ್ಧಿ'ಯ ಸಮರ್ಥನೀಯ ಖ್ಯಾತಿಯನ್ನು ಗಳಿಸಿದ ಮತ್ತು ಅಂತರ್ಗತ ಸಾಮಾಜಿಕ ನ್ಯಾಯ ಕಾರ್ಯಕ್ರಮಗಳ ಆದ್ಯಪ್ರವರ್ತಕ ಕರ್ನಾಟಕವು ಈಗ ಗುಜರಾತ್ ಮತ್ತು ಯುಪಿ ಮಾದರಿಗಳ ಪ್ರತಿರೂಪದತ್ತ ದಾಪುಗಾಲಿಡುತ್ತಿದೆ.
ಹಳೆಯ ಮೈಸೂರು ರಾಜಕೀಯ ಪರಂಪರೆಯಿಂದ ಪಡೆದ ಪ್ರಜಾಪ್ರಭುತ್ವದ 'ವಿಶಾಲೀಕರಣ' ಮತ್ತು 'ಆಳವಾಗುವಿಕೆ'ಗಳನ್ನು ಕರ್ನಾಟಕ ಒಂದು ಶತಮಾನಕಾಲ ಕಣ್ಣಾರೆ ಕ೦ಡಿದೆ.
ಇಂತಹ ರಾಜಕೀಯ ಸಂರಚನೆಯು ಸಾಮಾಜಿಕ ಮತ್ತು ರಾಷ್ಟ್ರೀಯ ಕಾರ್ಯಸೂಚಿಯಾಗಿ ಹಿಂದುತ್ವಕ್ಕೆ ಹೆಚ್ಚು ಸಾಮಾಜಿಕ ಬೆ೦ಬಲ, ಯಾವುದೇ ಗಣನೀಯ ಪ್ರಾದೇಶಿಕ ಪಕ್ಷದ ಅನುಪಸ್ಥಿತಿ, ಅಭಿವೃದ್ಧಿಯ ಪರಿಕಲ್ಪನೆಗಳ ಮರುವ್ಯಾಖ್ಯಾನ, ಹೆಚ್ಚುತ್ತಿರುವ ಕೋಮುವಾದ, ಮತ್ತು 'ಚುನಾವಣಾ ನಿರಂಕುಶಾಧಿಕಾರ'ದ ಸಾಕ್ಕ್ಷಾತ್ಕಾರವಾಗಿ ಯಾವುದೇ ರೀತಿಯ ಭಿನ್ನಾಭಿಪ್ರಾಯದ ವಿರುದ್ಧ ರಾಜ್ಯವು ನಿಯೋಜಿಸುವ ಅದರ ಶಕ್ತಿ, ಇವುಗಳ ಮೂಲಕ ಗುರುತಿಸಲ್ಪಟ್ಟಿದೆ,
ಇದು ಒಂದು ಶತಮಾನದವರೆಗೆ ಹಳೆಯ ಮೈಸೂರು ರಾಜಕೀಯ ಪರಂಪರೆಯಿಂದ ಸೆಳೆಯಲ್ಪಟ್ಟ ಪ್ರಜಾಪ್ರಭುತ್ವದ 'ವಿಶಾಲೀಕರಣ' ಮತ್ತು 'ಆಳವಾಗುವಿಕೆ'ಗೆ ಸಾಕ್ಷಿಯಾಗಿದ್ದ ಕರ್ನಾಟಕದ ಇ೦ದಿನ ವಾಸ್ತವ ಚಿತ್ರ. . (ರಾಘವನ್ ಮತ್ತು ಮ್ಯಾನರ್ 2009). ಅದರ ಸಂಸ್ಕಾರಕ, ಪೂರ್ವದ ಮೈಸೂರು ರಾಜ್ಯವು 1918 ರಷ್ಟು ಮು೦ಚೆಯೇ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಪ್ರಾರಂಭಿಸಿತು. 1970 ರ ದಶಕದಲ್ಲಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ನೇತೃತ್ವದಲ್ಲಿ ಕರ್ನಾಟಕವು ಭೂಸುಧಾರಣೆಗಳು ಮತ್ತು ಹಿಂದುಳಿದ ಜಾತಿಗಳ ಸೃಜನಶೀಲ ಮೈತ್ರಿಗಳ ಮೂಲಕ ವಿತರಣಾ ನ್ಯಾಯದ ತತ್ವಗಳನ್ನು ಮರುವ್ಯಾಖ್ಯಾನಿಸಿತು. ಈ ನೀತಿಗಳು ಭೂಮಾಲೀಕ ಜಾತಿಗಳ ಪ್ರಾಬಲ್ಯವನ್ನು ಪ್ರಶ್ನಿಸಿದವು ಮತ್ತು ನವೀನ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದವು. ಅವು ರಾಜ್ಯವನ್ನು ತುರ್ತು ಪರಿಸ್ಥಿತಿಯ ಅತಿ ಕೆಟ್ಟ ವೈಪರೀತ್ಯಗಳಿ೦ದ ಕಾಪಾಡಿತು. 1983 ಮತ್ತು 1988 ರ ನಡುವೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಪಂಚಾಯತ್ ರಾಜ್ ಶಾಸನದ ಮಾರ್ಗವಾಗಿ ವಿಕೇಂದ್ರೀಕರಣಕ್ಕೆ ತಮ್ಮ ಸರ್ಕಾರದ ಬದ್ಧತೆಯ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಿದರು.
ಕರ್ನಾಟಕವು ಈ ದೊಡ್ಡ ಮತ್ತು ನವೀನ ಆಲೋಚನೆಗಳ ಬಳುವಳಿಯನ್ನು ಇಂದು ಸಣ್ಣ, ಸಂಕುಚಿತ ಮತ್ತು ಪಂಥೀಯ ಕ್ರಮಗಳಿಗಾಗಿ ಏಕೆ ತ್ಯಜಿಸುತ್ತಿದೆ ? ಈ ಲೇಖನವು ಕಳೆದ ಕೆಲವು ವರ್ಷಗಳಿಂದ ರಾಜ್ಯದ ತೀವ್ರ ಕುಸಿತದ, ಮತ್ತು ದೇಶದ ಇತರ ಭಾಗಗಳೊಂದಿಗೆ ಕರ್ನಾಟಕವು ಏನನ್ನು ಹಂಚಿಕೊಳ್ಳುತ್ತದೆ ಮತ್ತು ಏನು ಈ ಪ್ರದೇಶಕ್ಕೆ ನಿರ್ದಿಷ್ಟವಾಗಿ ಉಳಿದಿದೆ ಎನ್ನುವದರ ಸ್ಥೂಲವಾದ ವಿವರಣೆಯನ್ನು ಪ್ರಯತ್ನಿಸುತ್ತದೆ,
ಹೊರಗಿಡುವ ಕಾರ್ಯಸೂಚಿಗಳ ಸೇವೆಯಲ್ಲಿ ಹೊಸ ಶಾಸನವು
ದೇಶದ ಇತರ ಕೆಲವು ಭಾಗಗಳಲ್ಲಿರುವಂತೆ, ಕರ್ನಾಟಕದಲ್ಲಿ 2019 ರಿಂದ ಕಠೋರ ಮತ್ತು ಜನವಿರೋಧಿ ಶಾಸನಗಳನ್ನು ಮಾಡಲಾಗುತ್ತಿದೆ. 2020 ರಲ್ಲಿ ಶಾಸಕಾಂಗ ಭವನದಲ್ಲಿ ಕೋರೈಸುವ ಅಭೂತಪೂರ್ವವಾದ ಗೋವಿನ ಪೂಜೆಯನ್ನು ನಡೆಸುವುದರೊಟ್ಟಿಗೆ ಹೊಸ ಸಂವಿಧಾನ-ವಿರೋಧಿ ಪೂಜ್ಯತೆಯನ್ನುಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 (Karnataka Prevention of Slaughter and Preservation of Cattle Act) ಮೂಲಕ 3.5 ಕೋಟಿ ಜಾನುವಾರುಗಳಿಗೆ ಅನುಗ್ರಹಿಸಲಾಯಿತು. ಮುಸ್ಲಿಮರು ಮತ್ತು ದಲಿತರ ಆಹಾರ ಸಂಸ್ಕೃತಿಗಳು ಮತ್ತು ಜೀವನೋಪಾಯಗಳನ್ನು ಗುರಿಪಡಿಸಲು ಉದ್ದೇಶ ಹೊಂದಿದ್ದರೂ, ಈ ಕಾನೂನು ರೈತ ಸಮುದಾಯದ ಎಲ್ಲಾ ವರ್ಗಗಳಲ್ಲಿ ವ್ಯಾಪಕ ಆರ್ಥಿಕ ಸಂಕಷ್ಟವನ್ನು ಉಂಟುಮಾಡಿದೆ.
ಮಾಂಸದ ವ್ಯಾಪಾರವು ಈಗ ಪೊಲೀಸ್ ಮತ್ತು ಜಾಗೃತರ ರೂಪದಲ್ಲಿ 'ಬಾಡಿಗೆದಾರರ' (ಅ೦ದರೆ ಪರಿಶ್ರಮವಿಲ್ಲದೆ ಲಾಭ ಪಡೆಯುವ) ಹೊಸದೊ೦ದು ಪ್ರಾಧಿಕಾರದಿ೦ದ ನಿಯಂತ್ರಿಸಲ್ಪಡುತ್ತದೆ, ಅವರು ಸುಲಿಗೆ, ಮುಟ್ಟುಗೋಲು ಹಾಕಿಕೊಳ್ಳುವದಲ್ಲದೆ ಬಂಧಿಸಲೂ ಮು೦ದುವರೆಯುತ್ತಾರೆ.
ಆರ್ಥಿಕ ಚಟುವಟಿಕೆಯನ್ನು ಅಪರಾಧೀಕರಿಸುವ ಮೂಲಕ, ಅಕ್ರಮದಿ೦ದಾಗಿ ಪುಷ್ಟವಾಗಿ ಬೆಳೆಯುವ ಆರ್ಥಿಕತೆಯನ್ನು ಈ ಹೊಸ ನಿಷೇಧಗಳು ಹುಟ್ಟುಹಾಕಿದವೆ. ಮಾಂಸ ವ್ಯಾಪಾರವು ಈಗ 'ಬಾಡಿಗೆದಾರರ' ಹೊಸ ಕ್ಷೇತ್ರದಿಂದ ನಿಯಂತ್ರಿಸಲ್ಪಡುತ್ತದೆ. ಅವರು ಬಲಾತ್ಕಾರದ ವಸೂಲಿ, ಮುಟ್ಟುಗೋಲು ಹಾಕಿಕೊಳ್ಳುವದು, ಮತ್ತು ಬಂಧಿಸಲೂ ಮು೦ದುವರೆಯುತ್ತಾರೆ; ತಾವೇ ಯಾವುದೇ ಹೊಣೆಗಾರಿಕೆಯ ವ್ಯವಸ್ಥೆಯಿಂದ ಕೈಸೋಕದೆ ಉಳಿದುಕೊಳ್ಳುತ್ತಾರೆ..
ಕರ್ನಾಟಕವು ಶಾಸನ ಸಭೆಯ ಮೂಲಕ ವ್ಯಂಗ್ಯವಾಗಿ ಹೆಸರಿಸಲಾದ “ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ರಕ್ಷಣೆ ಮಸೂದೆ” (Protection of the Right to Freedom of Religion) ಯನ್ನು ಒಯ್ಯಲಾಗಿದೆ. ಇತರ ಇದೇ ರೀತಿಯ ಕಾಯಿದೆಗಳಿಗಿಂತ ದೂರ ಹೋಗುವ ಅಂತರ್ಧರ್ಮೀಯ ವಿವಾಹಗಳಲ್ಲಿ ಮಧ್ಯಪ್ರವೇಶಿಸುವ ಮತ್ತು ಕೇವಲ 'ಮತಾಂತರ'ದ ಶಂಕೆಯ ಮೇಲೆ ಸಂಸ್ಥೆಗಳ ಪರವಾನಗಿಗಳನ್ನು ಅಮಾನತುಗೊಳಿಸಬಹುದಾದ ನಿಬಂಧನೆಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಮಹಿಳೆಯರು, ಪರಿಶಿಷ್ಟ ಜಾತಿ ಪರಿಶಿಷ್ಟಸಮುದಾಯಗಳಿಗೆ ಸೇರಿದವರು ಮತ್ತು ಇತರ ದುರ್ಬಲ ಗುಂಪುಗಳನ್ನು ಹಸುಗೂಸುಗಳ೦ತೆ ನಡೆಸಿಕೊಳ್ಳುವ ಇಂತಹ ಶಾಸನವು ಹಿಂದೂಗಳು ಮತ್ತು ಹಿಂದೂ ಧರ್ಮವನ್ನು ಗ್ರಹಿಸಿದ ಬೆದರಿಕೆಗಳಿಂದ ರಕ್ಷಿಸುವ ಮೋಕ್ಷವಾದಿ ವಾಕ್ಚಾತುರ್ಯದಲ್ಲಿ ವರ್ಣಿಸಲಾಗಿದೆ.
ಸರ್ಕಾರವು ಈಗ ಸದ್ಯಕ್ಕೆ ಕೆಲಸದ ದಿನವನ್ನು ಎಂಟು ಗಂಟೆಗಳಿಂದ ಹನ್ನೆರಡು ಗಂಟೆಗೆ ಹೆಚ್ಚಿಸಲು ವೇತನ ಮತ್ತು ಕಾರ್ಮಿಕ ಹಕ್ಕುಗಳ ಸುಗ್ರೀವಾಜ್ಞೆಯನ್ನು ತಡೆಹಿಡಿದಿದ್ದರೂ,, 'ವ್ಯವಹಾರದ.ಹೆಚ್ಚಿನ ಸರಾಗತೆ'ಗಿಂತ ಕಾರ್ಮಿಕರನ್ನು ರಕ್ಷಿಸುವಲ್ಲಿ ರಾಜ್ಯದ ಆಸಕ್ತಿ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗಿದೆ.
ಆದರೆ ಅಂತಹ ಶಾಸಕಾಂಗ ಚಟುವಟಿಕೆಯ ಬೇರೊ೦ದು ಮುಖವು ಹೆಚ್ಚು ಆಸಕ್ತಿದಾಯಕವಾಗಿದೆ. ಕೆಲವೊಮ್ಮೆ, ಕಾನೂನಿನ ನಿಯಮವನ್ನು ಉಲ್ಲಂಘಿಸುವ ಸಲುವಾಗಿ ಕಾನೂನುಗಳನ್ನು ಜಾರಿಗೆ ತರಲಾಗುತ್ತದೆ. ಕರ್ನಾಟಕ ಸರ್ಕಾರವು ಸಾರ್ವಜನಿಕ ಭೂಮಿಯಲ್ಲಿ ಅನಧಿಕೃತ ಧಾರ್ಮಿಕ ರಚನೆಗಳನ್ನು ಕೆಡವುವಿಕೆಯಿಂದ ರಕ್ಷಿಸಲು ಕಾನೂನನ್ನು ಅಂಗೀಕರಿಸುವ ಮೂಲಕ ಅವುಗಳನ್ನು ತೆಗೆದುಹಾಕುವದರ ಕುರಿತು ಸುಪ್ರೀಂ ಕೋರ್ಟ್ ನ ತೀರ್ಪನ್ನು ಧಿಕ್ಕರಿಸಿದೆ. ಒಂದೇ ಹೊಡೆತದಲ್ಲಿ, ಸಾರ್ವಜನಿಕ ಸ್ಥಳಗಳನ್ನು ರಕ್ಷಿಸಲು ಮತ್ತು ಪ್ರಜಾಸತ್ತಾತ್ಮಕವಾಗಿ ಅಭಿವೃದ್ಧಿಪಡಿಸಲು ಪುರಸಭೆಯ ಕಾನೂನುಗಳ ಸಾಮರ್ಥ್ಯವನ್ನು ಸರ್ಕಾರವು ದುರ್ಬಲಗೊಳಿಸಿದೆ.
ಕಾನೂನಿನ ನಿಯಮವನ್ನು ತಲೆಕೆಳಗು ಮಾಡುವುದು
ಈ ದಂಡನಾತ್ಮಕ ಶಾಸಕಾಂಗದ ಮಿತಿಮೀರಿದ ಕ್ರಿಯಾಶೀಲತೆಯ ಜೊತೆಯಲ್ಲಿ ರಾಜ್ಯದ ರಾಜಕೀಯ ಟೀಕೆಗಳು, ಪಕ್ಷಗಳ ಆಂತರಿಕ ಮತಭೇದಗಳು ಅಥವಾ ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಯ ಅಡಚಣೆಗಳನ್ನು 'ಭಯೋತ್ಪಾದಕ' ಚಟುವಟಿಕೆಗಳಾಗಿ ಹೆಸರಿಸುವ ವ್ಯವಸ್ಥಿತ ಪ್ರಯತ್ನ ನಡೆದಿದೆ. .
ಕರ್ನಾಟಕದ ಸಾರ್ವಜನಿಕ ಜೀವನವು ಈಗ ಅಸಹಿಷ್ಣುತೆಯ ಆಳವಾದ ಭಾವದಿ೦ದ ಗುರುತಿಸಲ್ಪಟ್ಟಿದೆ, ನಾಗರಿಕ ಜೀವನವನ್ನು ಅಪರಾಧೀಕರಿಸುವ ಪೋಲೀಸ್ ಬಲ ಇದನ್ನು ಸ್ವಇಚ್ಛೆಯಿಂದ ಉತ್ತೇಜಿಸುತ್ತಿದೆ
ರಾಜ್ಯವು ಕಠೋರವಾದ UAPA - ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು - ಮುಕ್ತವಾಗಿ ಮತ್ತು ಇತರ ಯಾವುದೇ ರಾಜ್ಯಗಳಿಗಿಂತ ಹೆಚ್ಚು ದೇಶದ್ರೋಹದ ಪ್ರಕರಣಗಳನ್ನು ಸಾಮಾಜಿಕ ಮಾಧ್ಯಮ ಪ್ರಕಟನೆಗಳ ಆಧಾರದ ಮೇಲೆ ಹೊರಿಸಿದೆ. ಕರ್ನಾಟಕದ ಸಾರ್ವಜನಿಕ ಜೀವನವು ಈಗ ಅಸಹಿಷ್ಣುತೆಯ ಆಳವಾದ ಭಾವದಿ೦ದ ಗುರುತಿಸಲ್ಪಟ್ಟಿದೆ, ಇದು ನಾಗರಿಕ ಜೀವನವನ್ನು ಅಪರಾಧೀಕರಿಸುವ ಪೊಲೀಸ್ ಪಡೆಯಿಂದ - ಮುನಾವರ್ ಫರುಕಿಯ ‘ಸ್ಟ್ಯಾಂಡ್-ಅಪ್’ ಹಾಸ್ಯ ಕಾರ್ಯಕ್ರಮ ಪ್ರದರ್ಶನದ ನಿಷೇಧದ ನಿದರ್ಶನದ೦ತೆ - ಸ್ವಇಚ್ಛೆಯಿಂದ ಉತ್ತೇಜಿಸಲ್ಪಟ್ಟಿದೆ ಮತ್ತು ಅದೇ ಕಾಲದಲ್ಲಿ ಅಧಿಕಾರದಲ್ಲಿರುವವರ ವಿರುದ್ಧದ ಪ್ರಕರಣಗಳನ್ನು ಕೈಬಿಡುವ ಕ್ರಮಗಳ ಮೂಲಕ ಅಪರಾಧದ ಸ್ವರೂಪಗಳನ್ನು ಸಾಮಾನ್ಯಗೊಳಿಸುತ್ತದೆ. ಸೆಪ್ಟೆಂಬರ್ 2020 ರಲ್ಲಿ, ಬಿಜೆಪಿ ಸರ್ಕಾರವು ಮಂತ್ರಿಗಳು, ಸಂಸದರು ಮತ್ತು ಶಾಸಕರು ಸೇರಿದಂತೆ ತನ್ನ ಪಕ್ಷದ ನಾಯಕರ ವಿರುದ್ಧ ಬಾಕಿ ಉಳಿದಿದ್ದ 62 ಹಿಂಸಾಚಾರ, ಆಸ್ತಿ ನಾಶ ಮತ್ತು ವಿಧ್ವಂಸಕ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿತು. ಉನ್ನತ ಪೊಲೀಸ್ ಅಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು ಮತ್ತು ಕಾನೂನು ಇಲಾಖೆಯ ಆಕ್ಷೇಪದ ಹೊರತಾಗಿಯೂ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಒಂದು ತಿಂಗಳ ಹಿಂದೆ, ಹಿಂಸಾತ್ಮಕ ತಿರುವು ಪಡೆದ ಕಾಂಗ್ರೆಸ್-ಪಕ್ಷದೊಳಗಿನ ಹೋರಾಟವನ್ನು ತ್ವರಿತವಾಗಿ 'ಕೋಮುವಾದ' ಗಲಭೆಯಾಗಿ ಬಣ್ಣಿಸಿ ರಾಜ್ಯವು ಯುಎಪಿಎ ಕಾನೂನನ್ನು ಅನ್ವಯಿಸಿತು. ಬಂಧಿತರಾದ 370 ಜನರಲ್ಲಿ, ಮುಖ್ಯವಾಗಿ ಮುಸ್ಲಿಮರಿಗೆ ಜಾಮೀನು ನಿರಾಕರಿಸಲಾಯಿತು (ಇತ್ತೀಚೆಗೆ ಬಂಧಿತರಲ್ಲಿ ಒಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.)
ಕನಿಷ್ಠ ಎರಡು - ದಕ್ಷಿಣ ಕನ್ನಡದ ಕಾಪು ಮತ್ತು ಬಿಜಾಪುರದ ವಿಜಯಪುರ - ಪೊಲೀಸ್ ಠಾಣೆಗಳಿಗೆ ಸೇರಿದ ಪೊಲೀಸ್ ಸಿಬ್ಬಂದಿ, 2021 ರಲ್ಲಿ ವಿಜಯದಶಮಿ ದಿನದಂದು ಮಂತ್ರಿಗಳು ಮತ್ತು ರಾಜಕಾರಣಿಗಳಿಬ್ಬರದೂ ಬೆಂಬಲ ಮತ್ತು ಅನುಮೋದನೆಯಿಂದ ಧೈರ್ಯ ಪಡೆದು, ಪೊಲೀಸ್ ಆವರಣದಲ್ಲಿ ಕೇಸರಿ ಬಟ್ಟೆಗಳನ್ನು ಪ್ರದರ್ಶಿಸಿದರು ಎನ್ನುವದರಲ್ಲಿ ಅಶ್ಚರ್ಯವೇನಿಲ್ಲ. .
ರಾಜಕೀಯ ಪ್ರಾತಿನಿಧ್ಯ ಮತ್ತು ಬಂಡವಾಳದ ಶಕ್ತಿ
ನಿರಾಕರಣೆ ಹೊರತಾಗಿಯೂ, ಕರ್ನಾಟಕದಲ್ಲಿ ಬಿಜೆಪಿ ಆಡಳಿತವು ಮೂರು ಶಕ್ತ್ತಿಗಳನ್ನು ನಿಯೋಜಿಸುತ್ತದೆ: ಹಣ, ಮಾಧ್ಯಮ ಮತ್ತು ತೋಳುಬಲ. ಹಂತಗಳಾದ್ಯಂತ ಚುನಾಯಿತ ಸ್ಥಾನಗಳು ಈಗ ಹೊಸ ಸಂಗ್ರಹಣೆಯ ಮೂಲವಾಗಿದೆ ಮತ್ತು ಸುರಕ್ಷಿತತೆಯ ಖಾತರಿಯಾಗಿದೆ. ಚುನಾಯಿತ ಪ್ರತಿನಿಧಿಗಳು 'ಯಜಮಾನರು', ಪ್ರಜಾಪ್ರಭುತ್ವದ ಸಂಕೀರ್ಣ ಮತ್ತು ದಟ್ಟವಾದ ಔಪಚಾರಿಕ ಪಧ್ಧತಿಯ ಹೊರಗೆ ಪರಿಹಾರಗಳನ್ನು ಮತ್ತು ಸಹಾಯವನ್ನು ಒದಗಿಸುವ 'ದೊಡ್ಡ ಮನುಷ್ಯರು' ಆಗುತ್ತಾರೆ,
ರಾಜಕೀಯ ಶಕ್ತಿ ಮತ್ತು ಆರ್ಥಿಕ ವರ್ಧನೆಯ ನಡುವಿನ ಫಲಪ್ರದ ನೆ೦ಟಸ್ತನವು ರಾಜಕೀಯ ಪಕ್ಷಗಳಾದ್ಯಂತ ತಮ್ಮ ಪ್ರಭುತ್ವವನ್ನು ಸ್ಥಾಪಿಸಲು ಮುಖ೦ಡರಿಗೆ ಸಹಾಯಕರವಾಗಿದೆ. ಕನಕಪುರ ಕಾಂಗ್ರೆಸ್ಸಿಗ ಡಿಕೆ ಶಿವಕುಮಾರ್, ಜನತಾ ದಳದ (ಜಾತ್ಯತೀತ) ಎಚ್‌ಡಿ ದೇವೇಗೌಡ ಮತ್ತು ಅವರ ಪುತ್ರರು ಮತ್ತು ಮೊಮ್ಮಕ್ಕಳ ಹಾಸನ, ಮತ್ತು ಬಿಜೆಪಿಯ ಯಡಿಯೂರಪ್ಪ ಮತ್ತು ಪುತ್ರರ ಶಿವಮೊಗ್ಗ ಅವರವರ ಭದ್ರಕೋಟೆಯಾಗಿದೆ. ರಾಜಕೀಯ ಶಕ್ತಿ ಮತ್ತು ಆರ್ಥಿಕ ಬಲವು ಹೇಗೆ ಪರಸ್ಪರ ಸಮ್ಮಿಶ್ರಣವಾಗಿದೆ ಎಂಬುದಕ್ಕೆ ಇವು ಉದಾಹರಣೆಗಳಾಗಿವೆ. 2018 ರ ವಿಧಾನಸಭೆಯ ೯೭% ಸದಸ್ಯರು ಕೋಟ್ಯಾಧಿಪತಿಗಳಾಗಿದ್ದರು ಮತ್ತು 221 ಶಾಸಕರ ಪೈಕಿ 77 ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿರುವುದು ಅಚ್ಚರಿಯ ವಿಷಯವಲ್ಲ.
ಬಿಜೆಪಿಯು ಭ್ರಷ್ಟಾಚಾರವನ್ನು ಮರುವ್ಯಾಖ್ಯಾನಿಸಿದೆ, ಕೇಂದ್ರದ ಪಕ್ಷಕ್ಕೆ ಹಣವನ್ನು ಮೇಲಕ್ಕೆತ್ತಿಸುತ್ತಿದೆ. ಭ್ರಷ್ಟಾಚಾರವು ವಾಡಿಕೆಯಾಗಿದೆ, ಮತ್ತು ಸಾಮಾನ್ಯವಾಗಿದೆ.
ಆದರೆ ಇವು ಹಳೆಯ ಶೈಲಿಯ ಕಾಂಗ್ರೆಸ್ ಭ್ರಷ್ಟಾಚಾರದ ಉದಾಹರಣೆಗಳಾಗಿವೆ. ಗುತ್ತಿಗೆದಾರರ ಸಂಘವು ಇತ್ತೀಚೆಗೆ ಪ್ರಧಾನ ಮಂತ್ರಿಗೆ ಪತ್ರ ಬರೆದು ಸಾರ್ವಜನಿಕ ನಿರ್ಮಾಣ ವಹಿವಾಟುಗಳಲ್ಲಿ 40% ನಷ್ಟು ಕಡಿತದ ಅಭೂತಪೂರ್ವ ನಿರೀಕ್ಷೆಯ ಬಗ್ಗೆ ದೂರು ನೀಡಿತು. ಗುತ್ತಿಗೆದಾರರೇ ಇಂತಹ ದೂರು ನೀಡಿರುವುದನ್ನು ಮಾಜಿ ಅಧಿಕಾರಿ ಒಬ್ಬರು ‘ಮಾಮೂಲಿ’ನಲ್ಲಿ ತೃಪ್ತಿ ಸಾಕಾಗದೆ ‘ಮಹಾನ್-ಭ್ರಷ್ಟಾಚಾರ’ಕ್ಕೆ ಬದಲ್ಲಾವಣೆಯಾಗಿದೆ ಎ೦ದು ವರ್ಣಿಸಿದ್ದಾರೆ.
ಇದು ಕೇವಲ ಪ್ರಮಾಣದಲ್ಲಿ ವಿಸ್ತರಣೆಯಲ್ಲ. ಭ್ರಷ್ಟಾಚಾರಕ್ಕೆ ಹೊಸ ವ್ಯಾಖ್ಯಾನವನ್ನು ಬಿಜೆಪಿಯು ಉತ್ಪತ್ತಿಸಿದೆ. ಕೇಂದ್ರದಲ್ಲಿ ಪಕ್ಷಕ್ಕೆ ಹಣವನ್ನು ಮೇಲಕ್ಕೆತ್ತಲಾಗುತ್ತಿದೆ. ಸರ್ಕಾರಿ ಹುದ್ದೆಗಳು ಮತ್ತು ಸ್ಥಾನಗಳ ಬಹಿರಂಗ ಹಣಗಳಿಕೆಯನ್ನು ಗಮನಿಸಿದರೆ ಭ್ರಷ್ಟಾಚಾರವು ರೂಢಿ ಮತ್ತು ಸರ್ವೇಸಾಧಾರಣವಾಗಿದೆ. ಮಾಜಿ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಲಂಚವು ತನಗೆ ರಾಜ್ಯಪಾಲರ ಸ್ಥಾನವನ್ನು ದೊರಕಿಸದಿದ್ದಾಗ ನಿರಾಶೆಗೊಂಡಿದ್ದಲ್ಲದೆ ತನ್ನ 'ಹೂಡಿಕೆ'ಯನ್ನು ಸಾರ್ವಜನಿಕವಾಗಿ ಮರುಪಡೆಯಲು ಹಿ೦ಜರಿಯಲಿಲ್ಲ ಎನ್ನುವದು ಪುರಾಣ ಗಾತ್ರದ ಕಥೆಯನ್ನು ನಿರೂಪಿಸುತ್ತದೆ.
ಬಂಡವಾಳ ಮತ್ತು ಅದು ನು೦ಗಿದ ಸಾರ್ವಜನಿಕ ಹಿತಾಸಕ್ತಿ
ಕರ್ನಾಟಕದಲ್ಲಿ ಬಂಡವಾಳದ ಬೆಳವಣಿಗೆ ಮತ್ತು ಕ್ರೋಢೀಕರಣವು ಎರಡು ಅಂತರ್ಸಂಪರ್ಕಿತ ಅಂಶಗಳನ್ನು ಹೊಂದಿದೆ. ಒಂದು ಕಡೆ ಬೆಂಗಳೂರು 'ಹೊಸ ಆರ್ಥಿಕತೆ'ಯ ಅಗ್ರಗಣ್ಯ ಮಹಾನಗರವಾಗಿ ಬೆಳೆಯುತ್ತಿದೆ. ಇದರ ತಕ್ಷಣದ ಪರಿಣಾಮವು ಸಟ್ಟಾ ಊಹಾಪೋಹ ಆಧಾರಿತ ನಗರೀಕರಣದ ಪೂರಕ ಬೆಳವಣಿಗೆಯಾಗಿದೆ, ಇದು ಸ್ಥಿರಾಸ್ತಿವಾಣಿಜ್ಯೋದ್ಯಮಿಗಳು ಹಾಗೂ ರಾಜಕಾರಣಿಗಳು ಇಬ್ಬರಿಗೂ ಅತ್ಯಂತ ಲಾಭದಾಯಕ ಹೂಡಿಕೆಯಾಗಿ ಹೊರಹೊಮ್ಮಿದೆ (ಬಾಲಕೃಷ್ಣನ್ ಮತ್ತು ಪಾಣಿ 2021).
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಗಳು ಹೆಚ್ಚು ಬೇಡಿಕೆಯಿರುವ ಸಾರ್ವಜನಿಕ ನೇಮಕಾತಿಗಳು ಎನ್ನುವ ವಾಸ್ತವಾ೦ಶ ಅರ್ಥವಿಲ್ಲದ್ದಲ್ಲ. ಕಂದಾಯ ಸಚಿವಾಲಯವು ಎರಡನೇ ಸ್ಥಾನದಲ್ಲಿದೆ. ಮಾಜಿ ವಸತಿ ಸಚಿವರನ್ನು 'ಲೇಔಟ್' ಕೃಷ್ಣಪ್ಪ ಎಂದು ಜನಪ್ರಿಯವಾಗಿ ಕರೆಯುವುದು ರಿಯಲ್ ಎಸ್ಟೇಟ್ ಸ್ಥಿರಾಸ್ತಿ ಮತ್ತು ಕಟ್ಟಡ ನಿರ್ಮಾಣ ಉದ್ಯಮಗಳು ರಾಜಕೀಯ ಲಾಭಗಳಿಗೆ ಸಮಾನಾರ್ಥಕವಾಗಿದೆ ಎಂಬುದಕ್ಕೆ ಒಂದು ಸೂಚಕ ಮಾತ್ರ.
ಅಂತಹ ಊಹಾತ್ಮಕ ಆರ್ಥಿಕತೆಯನ್ನು ಬೆಂಬಲಿಸಲು ಮತ್ತು ವಿಸ್ತರಿಸಲು 'ಭೂ ಸುಧಾರಣಾ ತಿದ್ದುಪಡಿ ಕಾಯಿದೆ (2020)' ಅನ್ನು ತರಲಾಯಿತು - ಮೊದಲು 'ವ್ಯವಹಾರವನ್ನು ಸುಲಭಗೊಳಿಸಲು' ಒಂದು ಸುಗ್ರೀವಾಜ್ಞೆಯಾಗಿ ಮತ್ತು ನಂತರ ನೆಪಕ್ಕೆ ಮತ್ರ ಸಮಾಲೋಚನೆ ಅಥವಾ ಶಾಸಕಾಂಗ ಚರ್ಚೆಯೊಂದಿಗೆ ಜಾರಿಗೆ ತರಲಾಯಿತು. ಇದರ ಅಂಗೀಕಾರವು ಕೃಷಿ ಮತ್ತು ಗ್ರಾಮೀಣ ಭೂಸ್ವಾಧೀನದಲ್ಲಿ ಮುಕ್ತ ಮತ್ತು ಊಹಾತ್ಮಕ ಮಾರುಕಟ್ಟೆಗೆ ಕಾರಣವಾಗಿದೆ ಮತ್ತು ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಕೃಷಿಯ ಮೇಲೆ ಅದರ ಋಣಾತ್ಮಕ ಪರಿಣಾಮವು ಸನ್ನಿಹಿತವಾಗಿದೆ.
ಪಂಚಾಯತ್ ವ್ಯವಸ್ಥೆಯು ಹಣಕಾಸಿನ ಕೊರತೆ, ವಿಳಂಬವಾದ ಚುನಾವಣೆಗಳು ಮತ್ತು ನಿರಂತರ ರಾಜಕೀಯ ಹಸ್ತಕ್ಷೇಪಗಳಿಂದ ಸ್ಥಿರವಾಗಿ ಸವಕಳಿಯಾಗಿದೆ.
ಸಾರ್ವಜನಿಕ ಆಡಳಿತಾತ್ಮಕ ಹೊಣೆಗಾರಿಕೆಯನ್ನು ಎತ್ತಿಹಿಡಿಯಲು ಈ ಹಿಂದೆ ಗಮನಾರ್ಹ ಕೊಡುಗೆಗಳನ್ನು ನೀಡಿದ ಸಾರ್ವಜನಿಕ ತನಿಖಾಧಿಕಾರಿ ( Ombudsman) ಲೋಕಾಯುಕ್ತ ಕಚೇರಿಯು ಅಧಿಕಾರಶಾಹಿಯ ಮತ್ತೊಂದು ಪದರವಾಗಿ ಕೊಳೆದಿದೆ. ಭ್ರಷ್ಟಾಚಾರ ನಿಗ್ರಹ ದಳವು ನಿಷ್ಪರಿಣಾಮಕಾರಿತ್ವದಿಂದ ಇದಕ್ಕೆ ಸಮಾನಾಂತರವಾಗಿದೆ. ಪರಿಣಾಮವಾಗಿ ರಾಜ್ಯದ ಆಡಳಿತ ಯಂತ್ರ ಕೀಳಾಗಿದೆ..
ವಿಕೇಂದ್ರೀಕೃತ ಪ್ರಜಾಪ್ರಭುತ್ವವನ್ನು ಸಾಂಸ್ಥಿಕಗೊಳಿಸುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿತ್ತು , ಇದು ದೇಶದಾದ್ಯಂತ ಪರಿಣಾಮಕಾರಿ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ತಿದ್ದುಪಡಿಗಳಿಗೆ ದಾರಿ ತೋರಿಸಿತು. . ಆದಾಗ್ಯೂ, 2018 ರಿಂದ ಈಚೆಗೆ , ಪಂಚಾಯತ್ ವ್ಯವಸ್ಥೆಯು ಸ್ಥಿರವಾಗಿ ಸವೆತಗೊಂಡಿದೆ, ಹಣಕಾಸಿನ ಕೊರತೆ, ವಿಳಂಬವಾದ ಚುನಾವಣೆಗಳು ಮತ್ತು ನಿರಂತರ ರಾಜಕೀಯ ಹಸ್ತಕ್ಷೇಪದಿಂದ ದುರ್ಬಲಗೊಂಡಿದೆ. ಇತ್ತೀಚಿನ ಚುನಾವಣಾ ಕ್ಷೇತ್ರ ನಿಗದಿಸುವ ಪ್ರಯತ್ನವು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆಗಳನ್ನು ಮುಂದೂಡಲು ಮತ್ತು ವಿಕೇಂದ್ರೀಕೃತ ಆಡಳಿತ ರಚನೆಗಳ ನಿಯಮಿತ ಕಾರ್ಯನಿರ್ವಹಣೆಯನ್ನು ಹಳಿತಪ್ಪಿಸುವ ಪ್ರಯತ್ನಗಳನ್ನು ಸೂಚಿಸುತ್ತದೆ. 2015ರಿಂದಲೂ ಪ್ರಮುಖ ನಗರ ಪಾಲಿಕೆಯಾಗಿರುವ ಬೆ೦ಗಳೂರು ಮಹಾ ನಗರ ಪಾಲಿಕೆಗೆ ಚುನಾವಣೆ ನಡೆಸಲು ಈ ‘ಕಾಸು ಕರೆಯುವ ಹಸು’ವಿನ ಹಿಡಿತವನ್ನು ಬಿಟ್ಟುಕೊಡಲು ಶಾಸಕರು ತೀವ್ರ ನಿರಾಸಕ್ತಿ ತೋರುತ್ತಿದ್ದು ವಿಳಂಬವಾಗುತ್ತಿರುವುದು, ಇದಕ್ಕೆ ನಿದರ್ಶನ.
ಕರ್ನಾಟಕವು ಆಡಳಿತದಲ್ಲಿನ ಹೊಸತನಗಳ ಬೇರೆಡೆಯ ಅತ್ಯುತ್ತಮ ಉದಾಹರಣೆಗಳನ್ನು ನೋಡದೆ ಕಣ್ಣು ಮುಚ್ಚಿದೆ. ಹೊಸ ಮತ್ತು ನವೀನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪುನರ್ನಿರ್ಮಿಸುವ ಬದಲು (ಕೇರಳದ ಕುಟುಂಬ ಕಲ್ಯಾಣ ಕೇಂದ್ರಗಳು ಅಥವಾ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಪ್ರಾರ೦ಭಿಸಿದ ಮೊಹಲ್ಲಾ ಚಿಕಿತ್ಸಾಲಯಗಳ ಉದಾಹರಣೆಗಳನ್ನು ಬಳಸಿಕೊಂಡು), ಆರೋಗ್ಯದ ಹೆಚ್ಚಿದ ಖಾಸಗೀಕರಣವು ಅಡೆತಡೆಯಿಲ್ಲದೆ ಉಳಿದಿದೆ. ಪ್ರಸ್ತುತ, 70% ಆರೋಗ್ಯ ರಕ್ಷಣೆ ಅಗತ್ಯಗಳನ್ನು ಕೈಗೆಟುಕುವಿಕೆ ಮತ್ತು ನಿಯಂತ್ರಣದ ಕೊರತೆ ಪ್ರಮುಖ ಸಮಸ್ಯೆಗಳಾಗಿರುವ ಖಾಸಗಿ ವಲಯದಿಂದ ಪೂರೈಸಲಾಗುತ್ತದೆ. ಮತ್ತು (ಎಎಪಿ ದೆಹಲಿಯಲ್ಲಿ ಮಾಡಿದಂತೆ) ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವ ಮತ್ತು ಸರ್ಕಾರಿ ಶಾಲಾ ಶಿಕ್ಷಣವನ್ನು ನವೀಕರಿಸುವ ಬದಲು, ಅಥವಾ ಶಾಲಾ ಹಂತದಲ್ಲಿ ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವ ಬದಲು, ರಾಜ್ಯವು ಶಿಕ್ಷಣದ ಅತಿರೇಕದ ಖಾಸಗೀಕರಣವನ್ನು ಬೆಂಬಲಿಸಿದೆ.
ಹಕ್ಕುಗಳ ಭಾಷೆಯ ಸ್ಥಳದಲ್ಲಿ ಮಹಿಳೆಯರ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಭಾವನಾತ್ಮಕ ದೋಷಾರೋಪಣೆ
ಸ್ವಾಯತ್ತತೆ ಮತ್ತು ಹಕ್ಕುಗಳ ಭಾಷೆಗಳಿಂದ ದೂರವಿರುವ ರಾಷ್ಟ್ರೀಯವಾದಿ ಮತ್ತು ನೆ೦ಟಸ್ತಿಕ ಬಂಧುತ್ವದ ಆದರ್ಶಗಳ ಆವಾಹನೆಗೆ ನಿರಂತರ ಮತ್ತು ಅಪಾಯಕಾರಿ ಮರಳುವಿಕೆಯೊಂದಿಗೆ ಮಹಿಳೆಯರ ವಿರುದ್ಧದ ಪ್ರತ್ಯಕ್ಷವಾದ ಹಿನ್ನಡೆಗೆ ಕರ್ನಾಟಕವು ಹೊರತಾಗಿಲ್ಲ. ರಾಜಕಾರಣಿಗಳ ಹೇಳಿಕೆಗಳು ಈ ರೀತಿಯ ಸ್ತ್ರೀದ್ವೇಷವನ್ನು ಅನುಮೋದಿಸುತ್ತವೆ. ಆರೋಗ್ಯ ಸಚಿವ ಕೆ.ಸುಧಾಕರ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಖ್ಯಮಂತ್ರಿ ಬೊಮ್ಮಾಯಿ, ಒಂಟಿಯಾಗಿರಲು ಇಷ್ಟಪಡುವ, ಮಕ್ಕಳಿಲ್ಲದ ಅಥವಾ ಬಾಡಿಗೆ ತಾಯ್ತನದ ಹೆರಿಗೆ (surrogacy childbirth) ಯಲ್ಲಿ ಭಾಗವಹಿಸುವ ಮಹಿಳೆಯರ ವಿರುದ್ಧ ‘ಸಂಸ್ಕೃತಿ ಅಪಾಯದಲ್ಲಿದೆ’ ಎ೦ದು ಕೂಗಿದ್ದಾರೆ.
ಇಂತಹ ಹೇಳಿಕೆಗಳನ್ನು ಸರ್ಕಾರದ ಇತರ ಕ್ರಮಗಳೊಂದಿಗೆ, ಉದಾಹರಣೆಗೆ ಕೌಟುಂಬಿಕ ದೌರ್ಜನ್ಯ ಮತ್ತು ಹಿಂಸೆಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಹೆಚ್ಚು ಬೇಡಿಕೆಯಿರುವ ಸೇವೆಗಳನ್ನು ಒದಗಿಸುವ 187 ಸಲಹಾ ಕೇಂದ್ರಗಳನ್ನು ಮುಚ್ಚುವ೦ತ ಕ್ರಮದೊಟ್ಟಿಗೆ ಒ೦ದುಗೂಡಿಸಿ ಪರಿಗಣಿಸಬೇಕು. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ 2019-20 ರಲ್ಲಿ ಐದನೇ ಸುತ್ತಿನ ವರದಿಯ ಪ್ರಕಾರ ಸಂಗಾತಿಯ ಹಿಂಸೆಯಲ್ಲಿ ಕರ್ನಾಟಕವು ಭಾರಿ ಹೆಚ್ಚಳವನ್ನು ಕಂಡಿರುವ ಸಮಯದಲ್ಲಿ ಇದು ಬಂದಿದೆ . ಹಿಂದೂ ಸಂಸ್ಕೃತಿಯ ಮೇಲಿನ ಆಕ್ರಮಣಗಳು ಎಂದು ಹೆಸರಿಸುವ ವಿಷಯಗಳಲ್ಲಿ ಬಲವಂತವಾಗಿ ಮಧ್ಯಪ್ರವೇಶಿಸಲು (ಸಾಮಾನ್ಯವಾಗಿ ಪುರುಷ) ಜಾಗೃತ ಗುಂಪುಗಳಿಗೆ ಬಿಟ್ಟುಕೊಟ್ಟಿರುವ ಖುಲ್ಲಾ ಶಕ್ತಿಯೊಂದಿಗೆ ಸೇರಿಕೊಂಡು, ಹಕ್ಕುಗಳ ಭಾಷೆಯನ್ನು ಮಹಿಳೆಯರ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಭಾವನಾತ್ಮಕ ದೋಷಾರೋಪಣೆ ಯೊ೦ದಿಗೆ ಬದಲಾಯಿಸಲಾಗಿದೆ.
ಕಾನೂನುಬದ್ಧ ಸಂಸ್ಥೆಗಳು, ವೈಚಾರಿಕ ಗು೦ಪುಗಳು (‘ಥಿಂಕ್ ಟ್ಯಾಂಕ್’ಗಳು) ಮತ್ತು ಸ್ವತಂತ್ರ ಸಂಸ್ಥೆಗಳನ್ನು ಅಂಚಿನಲ್ಲಿಡಲಾಗಿದೆ ಮತ್ತು ರಾಜ್ಯವು ಆಯ್ದ ವ್ಯಕ್ತಿಗಳಿಂದ ಮಾತ್ರ ಸಲಹೆಯನ್ನು ಪಡೆಯುತ್ತದೆ. ಆಗಾಗ್ಗೆ, ಅವರು ಪ್ರತಿನಿಧಿಸಬಹುದಾದ ಹಿತಾಸಕ್ತಿಗಳ ಸಂಘರ್ಷಕ್ಕೆ ಯಾವುದೇ ಗಮನವಿಲ್ಲ. ಉದಾಹರಣೆಗೆ, ಹೊಸ ಶಿಕ್ಷಣ ನೀತಿ 2020 ಅನ್ನು ವಿಮರ್ಶಾರಹಿತವಾಗಿ ಅನುಮೋದಿಸುವ ಮೂಲಕ, ಶಿಕ್ಷಣದ ಕೇಸರಿಕರಣದ ದೊಡ್ಡ ಕಾರ್ಯಸೂಚಿಗೆ ಸರಿಹೊಂದುವ ಪಠ್ಯಕ್ರಮ ಬದಲಾವಣೆಗಳಲ್ಲಿ ಮಧ್ಯಪ್ರವೇಶಿಸಲು ಪಟ್ಟಭದ್ರ ಮತ್ತು ಸಂಕುಚಿತ ವರ್ಗೀಯ ಹಿತಾಸಕ್ತಿಗಳನ್ನು ಕರ್ನಾಟಕವು ಈಗ ಕಾನೂನುಬದ್ಧಗೊಳಿಸಿದೆ. ಶಿಕ್ಷಣಕ್ಕಾಗಿ ಹೆಚ್ಚು ರಾಜ್ಯ-ನಿರ್ದಿಷ್ಟ ನೀತಿಗಳನ್ನು ರೂಪಿಸುವ ತನ್ನ ಹಕ್ಕನ್ನು ಅದು ಸ್ವಇಚ್ಛೆಯಿಂದ ಬಿಟ್ಟುಕೊಟ್ಟಿದೆ.
ತಜ್ಞರ ನಿಯಮವನ್ನು ಸತತವಾಗಿ ಅತಿಕ್ರಮಿಸುವ ಮೂಲಕ, ರಾಜ್ಯವು ಜ್ಞಾನವನ್ನು ರಾಜ್ಯದ ನೀತಿಯ ಆಧಾರವಾಗಿ ಮಾಡುವ ಅಭ್ಯಾಸದಿ೦ದ ದೂರಹೋಗಿದೆ.
ಪ್ರಬಲ ಜಾತಿಗಳಿಗೆ ಉಡುಗೊರೆಗಳು
ಬಹುಶಃ 2019 ರಿಂದ ಅತ್ಯಂತ ಗಮನಾರ್ಹವಾದ ರೂಪಾಂತರವು ಅರಸು ಮತ್ತು ಹೆಗಡೆಯವರ ಕಾಲದಲ್ಲಿ ನಿಯ೦ತ್ರಿಸಲಾಗಿದ್ದ ಪ್ರಬಲ ಜಾತಿಗಳ ಪ್ರತ್ಯಕ್ಷ ಪುನರುತ್ಥಾನದಲ್ಲಿದೆ.
ಪರಿಶಿಷ್ಟ ಜಾತಿಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹಿಂದಿನ ಆದ್ಯತೆಯಿ೦ದ, ಸರ್ಕಾರವು ಈಗ ಪ್ರಬಲ ಜಾತಿಗಳಿಗೆ ಗಮನಾರ್ಹ ಒಲವನ್ನು ತೋರಿಸುತ್ತದೆ. ಇದು ಒಂದು ಅಥವಾ ಇನ್ನೊಂದು (ಸಾಮಾನ್ಯವಾಗಿ ಪ್ರಬಲ) ಜಾತಿಗಳ ಹೆಸರಿನಲ್ಲಿ ಜಾತಿ ಅಭಿವೃದ್ಧಿ ನಿಗಮಗಳ ಸರಣಿಯನ್ನು ಪ್ರಾರಂಭಿಸಿದೆ. ಬ್ರಾಹ್ಮಣ, ಲಿಂಗಾಯತ, ಮತ್ತು ಈಗ, ವೊಕ್ಕಲಿಗ ನಿಗಮಗಳು ಬಜೆಟ್ ಹಂಚಿಕೆಗಳಲ್ಲಿ ಒಲವು ತೋರುತ್ತಿವೆ. ಇದರಿ೦ದ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ನಿಗಮಗಳ ಅನುದಾನದ ಮೇಲೆ ಪರಿಣಮಿಸುತ್ತಲೂ , ಆ ಮೂಲಕ ದೇವರಾಜ್ ಅರಸರ ಹಿಂದುಳಿದ ವರ್ಗದ ಪರಂಪರೆಯನ್ನು ರದ್ದುಗೊಳಿಸಲಾಗಿದೆ.
ಅಭಿವೃದ್ಧಿಯನ್ನು ಜಾತಿಯ ಗುರುತುಗಳು ಮತ್ತು ಮೈತ್ರಿಗಳ ಬಲವರ್ಧನೆಯ ಮೂಲಕ ಮರು ವ್ಯಾಖ್ಯಾನಿಸಲಾಗಿದೆ, ಬದಲಿಗೆ, ಅದರ ಮೇಲ್ಮುಖವಾದ ಹಿಂದುಳಿದಿರುವಿಕೆಯನ್ನು ಆಕ್ರಮಣಕಾರಿಯಾಗಿ ಮರು ವ್ಯಾಖ್ಯಾನಿಸಲಾಗಿದೆ.
ವಿಕೇಂದ್ರೀಕೃತ ಅಭಿವೃದ್ಧಿ, ಹಿಂದುಳಿದವರ ಕಲ್ಯಾಣ ಮತ್ತು ಪ್ರದೇಶ-ನಿರ್ದಿಷ್ಟ ನೀತಿಗಳು ಹಿಮ್ಮೆಟ್ಟಿಸಲ್ಪಟ್ಟಿವೆ. ಅಭಿವೃದ್ಧಿಯನ್ನು ಜಾತಿ ಗುರುತುಗಳು ಮತ್ತು ಮೈತ್ರಿಗಳ ಬಲವರ್ಧನೆಯ ಮೂಲಕ ಮರುವ್ಯಾಖ್ಯಾನಿಸಲಾಗಿದೆ. ಬದಲಾಗಿ, ಅಭಿವೃದ್ಧಿಯ ಮೇಲ್ಮುಖ, ಹಿಂದುಳಿದಿರುವಿಕೆಯನ್ನು ಆಕ್ರಮಣಕಾರಿಯಾಗಿ ಮರು ವ್ಯಾಖ್ಯಾನಿಸಲಾಗಿದೆ. ವಿವಿಧ ಜಾತಿ ಗುಂಪುಗಳ ಉಪ-ಜಾತಿಗಳಿಂದ ಉಪ-ಮೀಸಲಾತಿಗಾಗಿ, ಅಥವಾ ಮೀಸಲಾತಿ ಸ್ಥಾನಮಾನದಲ್ಲಿನ ಬದಲಾವಣೆಗಳಿಗಾಗಿ ಹೊಸ ಚಳುವಳಿಗಳ ಪರಿಣಾಮವು (ಜಾತಿ) ತಾರತಮ್ಯವನ್ನು ದೂರವಿಟ್ಟು ನಿರ್ದಿಷ್ಟ ಜಾತಿಗಳು ಮತ್ತು ಉಪಜಾತಿಗಳಿಗೆ ಸೇರಿದ 'ಆರ್ಥಿಕವಾಗಿ ದುರ್ಬಲ ವರ್ಗಗಳು' ಮತ್ತು 'ಕಡಿಮೆ ವಿಕಾಸ' ಗಳ ದಿಸೆಯಲ್ಲಿ ಸಾರ್ವಜನಿಕ ಚರ್ಚೆಯನ್ನು ಸ್ಪಷ್ಟವಾಗಿ ಬದಲಾಯಿಸುತ್ತವೆ.
ತೀರ್ಮಾನಗಳು
ಅತ್ಯ೦ತ ಧ್ರುವೀಕರಿಸಿರುವ ಮತ್ತು ಸುಮಾರು ಒಂದು ಶತಮಾನದಿಂದಲೂ ಕೋಮುವಾದದ ಪ್ರಯೋಗಾಲಯವಾಗಿರುವ ದಕ್ಷಿಣ ಕನ್ನಡದಲ್ಲಿ ಬೆಳೆದುಬ೦ದ ಹಿಂದುತ್ವದ ಮಾದರಿಯು ಹರಡುತ್ತಿರುವದು ಕಂಡುಬಂದಿದೆ. ದಕ್ಷಿಣ ಕನ್ನಡದಲ್ಲಿ ಜಾಗೃತ ಗುಂಪುಗಳು (Vigilante groups) ಯಾವುದೇ ರೀತಿಯ ಸೌಹಾರ್ದತೆ, ಸ್ನೇಹ, ಪಾಲುದಾರಿಕೆ ಅಥವಾ ಅನ್ಯೋನ್ಯತೆಯನ್ನು ತಡೆಯುವ, ಅಲ್ಪಸಂಖ್ಯಾತರ ವಿರುದ್ಧ ದೈನಂದಿನ, ನಿರಂತರ ಮತ್ತು ಕೆಳದರ್ಜೆಯ ಹಿಂಸಾಚಾರದಲ್ಲಿ ದೀರ್ಘಕಾಲ ಸೈರಿಸುವ ಕೋಮುವಾದದಲ್ಲಿ ತೊಡಗಿವೆ. ವಾಸ್ತವವಾಗಿ, 'ಲವ್ ಜಿಹಾದ್' ಎಂಬ ದ್ವೇಷಪೂರಿತವಾದ ಸುಳ್ಳುಅಪವಾದವನ್ನು ಮೊದಲು 2007 ರಲ್ಲಿ ದಕ್ಷಿಣ ಕನ್ನಡದಲ್ಲಿ ಮುಸ್ಲಿಂ ಪುರುಷರು ಮತ್ತು ಹಿಂದೂ ಮಹಿಳೆಯರ ನಡುವಿನ ಅಂತರ-ಧರ್ಮೀಯ ಸಂಬಂಧಗಳನ್ನು ಹಳಿಯಲು ಬಳಸಲಾಯಿತು.
ಜಾಗೃತ ಕೂಟಗಳು ಅಲ್ಪಸಂಖ್ಯಾತರ ವ್ಯವಹಾರಗಳನ್ನು ಮತ್ತು ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ಸಹ ವಿರೋಧಿಸಿದ್ದಾರೆ. ಈ ಮಾದರಿಯು ತ್ವರಿತವಾಗಿ ಹರಡಿದೆ. ಅಲ್ಪಸಂಖ್ಯಾತರ ವ್ಯವಹಾರಗಳ ಆರ್ಥಿಕ ಬಹಿಷ್ಕಾರದ ಕರೆಗಳು ರಾಜ್ಯದಾದ್ಯಂತ ಜನಪ್ರಿಯತೆಯನ್ನು ಗಳಿಸುವ ತಂತ್ರವಾಗಿದೆ. ಹಾಗೆಯೇ ಅಲ್ಪಸಂಖ್ಯಾತರನ್ನು ಕಣ್ಗಾವಲಿನಡಿಯಲ್ಲಿರಿಸುವ ನಿಯ೦ತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳಿ: ಉದಾಹರಣೆಗೆ, ಚಿತ್ರದುರ್ಗದಲ್ಲಿ, ಒಬ್ಬ ತಹಶೀಲ್ದಾರ್ ಎಲ್ಲಾ ಕ್ರಿಶ್ಚಿಯನ್ನರ ಗಣತಿಗೆ ಕರೆ ನೀಡಿದ್ದಾರೆ.
ಒಟ್ಟಾರೆಯಾಗಿ, ಸಾರ್ವಜನಿಕ ಕಲ್ಯಾಣಕ್ಕಿಂತ ಹೆಚ್ಚಾಗಿ ಪ್ರಬಲ ಜಾತಿಗಳ ಪಂಥೀಯ ಭಾವನೆಗಳು ಸರ್ಕಾರದ ನೀತಿಗಳನ್ನು ಮಾರ್ಗದರ್ಶಿಸುವಲ್ಲಿ ನಿರ್ಣಾಯಕವಾಗಿವೆ. ಉದಾಹರಣೆಗೆ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ತಿನ್ನಲು ಬಿಡಬೇಕೇ ಅಥವಾ ಬೇಡವೇ ಎಂದು ಮಠಗಳ ಮುಖ್ಯಸ್ಥರು ಈಗ ನಿರ್ಧರಿಸುತ್ತಾರೆ.
ಮಠಾಧೀಶರು ದೃಷ್ಟಿಗೋಚರ ಮತ್ತು ಜೋರಾಗಿ ಪ್ರತಿಪಾದಿಸುವ ರಾಜಕೀಯ ಪಾತ್ರವಹಿಸುವವರಾಗಲು ಅಣಿಯಾಗಿದ್ದಾರೆ... ರಾಜ್ಯಕ್ಕೆ ಬೆದರಿಕೆಗಳನ್ನು ನೀಡುತ್ತಾರೆ ಮತ್ತು ಅಧಿಕಾರದ ಪ್ರದರ್ಶನಗಳು ಮತ್ತು ಚಮತ್ಕಾರಗಳಲ್ಲಿ ತಮ್ಮದೇ ಆದ ಮತದಾರರನ್ನು ಸಜ್ಜುಗೊಳಿಸುತ್ತಾರೆ.
ಈ ನಿದರ್ಶನಗಳು ತೋರಿಸುವಂತೆ, ಇಂದು ಕರ್ನಾಟಕವು ಹೆಚ್ಚಾಗಿ ಗೋಚರಿಸಲಾಗುತ್ತಿರುವ ಎರಡು ರೀತಿಯ ಅನೌಪಚಾರಿಕ ಶಕ್ತಿಗಳ ಮೇಲೆ ಅವಲಂಬಿತವಾಗಿದೆ. ಈ ರೀತಿಯ 'ವಿಭಜಿತ ಸಾರ್ವಭೌಮತ್ವ'ವನ್ನು ಮೊದಲೇ ತಿಳಿದಿದ್ದರೂ ಮತ್ತು ಅಭ್ಯಾಸ ಮಾಡಲಾಗಿದ್ದರೂ (ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿಷಯದಲ್ಲಿ ಥಾಮಸ್ ಹ್ಯಾನ್ಸೆನ್ ತೋರಿಸಿರುವಂತೆ), ಕರ್ನಾಟಕದಲ್ಲಿ ಇವು ಕಳೆದ ಒಂದು ದಶಕದಲ್ಲಿ ತೀಕ್ಷ್ಣವಾದ ಮತ್ತು ತನ್ನದೇ ಆದ ರೂಪವನ್ನು ಪಡೆದುಕೊಂಡಿದೆ.
ಮೊದಲನೆಯದಾಗಿ, ಮೀಸಲಾತಿಯೊಳಗೆ ಉಪಜಾತಿ ಮೀಸಲಾತಿಗಾಗಿ ಮತ್ತು ಮೀಸಲಾತಿ ಸ್ಥಾನಮಾನದಲ್ಲಿನ ಬದಲಾವಣೆಗಳಿಗಾಗಿ ಹೋರಾಟಗಳಲ್ಲಿ, ರಾಜ್ಯ ಮತ್ತು ಧಾರ್ಮಿಕ ಮುಖಂಡರ ನಡುವೆ ಅಧಿಕಾರದ ಬಹಿರಂಗ ಹಂಚಿಕೆಯನ್ನು ನಾವು ನೋಡುತ್ತೇವೆ. ಮಠಾಧೀಶರು ಪ್ರತ್ಯಕ್ಷ ಮತ್ತು ಜೋರಾಗಿ ಪ್ರತಿಪಾದಿಸುವ ರಾಜಕೀಯ ಪಾತ್ರಧಾರಿಗಳಾಗಲು ಅಣಿಯಾಗಿದ್ದಾರೆ, ಹಲವಾರು ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ, ಸಾರ್ವಜನಿಕ ಮೇಳಗಳಲ್ಲಿ ಭಾಗವಹಿಸುತ್ತಾರೆ, ರಾಜ್ಯಕ್ಕೆ ಬೆದರಿಕೆಗಳನ್ನು ನೀಡುತ್ತಾರೆ ಮತ್ತು ಅಧಿಕಾರದ ಪ್ರದರ್ಶನಗಳು ಮತ್ತು ಚಮತ್ಕಾರಗಳಲ್ಲಿ ತಮ್ಮದೇ ಆದ ಘಟಕಗಳನ್ನು ಸಜ್ಜುಗೊಳಿಸುತ್ತಾರೆ. ಇಲ್ಲಿಯವರೆಗೆ ಪ್ರಾತಿನಿಧ್ಯದ ರಾಜಕೀಯಕ್ಕೆ ಪ್ರವೇಶಿಸುವುದನ್ನು ಹಿ೦ಜರಿಸಿದ್ದರೂ, ಅವರು ರಾಜ್ಯದ ಕಾನೂನು ಅಧಿಕಾರ ಮತ್ತು ಮಠದ ನೈತಿಕ ಅಧಿಕಾರದ ನಡುವಿನ ಕಾರ್ಯನಿರ್ವಹಣೆಯ ಸ್ಪಷ್ಟ ವಿಭಜನೆಯನ್ನು ಮಸುಕುಗೊಳಿಸುತ್ತಾರೆ.
ಅಧಿಕಾರದ ಎರಡನೇ ರೀತಿಯ ಹಂಚಿಕೆಯು ಸ್ಥಳೀಯ ಜಾಗೃತ ಗುಂಪುಗಳು ನಿರ್ವಹಿಸುವ ಪ್ರಮುಖ ಪಾತ್ರದಲ್ಲಿ ಸ್ಪಷ್ಟವಾಗುತ್ತಿದೆ, ಇವು ಕೇವಲ ಅ೦ಚಿನ ಗುಂಪುಗಳಾಗಿರದೆ ವ್ಯಾಪಕ ಉಪಸ್ಥಿತಿ ಮತ್ತು ಅಧಿಕಾರವನ್ನು ಒಟ್ಟುಗೂಡಿಸುತ್ತಿವೆ. ಬಹುಮಟ್ಟಿಗೆ ಹಿಂದೂ ಬಲಪಂಥೀಯರಾದರೂ ಬೇರೆಯವರನ್ನೂ ಒಳಗೊಳ್ಳುವ ಈ ಗುಂಪುಗಳು ಸಾಮಾಜಿಕ ವಿಷಯಗಳಲ್ಲಿ ಹಿಂಸಾತ್ಮಕವಾಗಿ ಮಧ್ಯಪ್ರವೇಶಿಸುತ್ತವೆ. ಇವು ಬೇರೊ೦ದು ರೀತಿಯ, ಅ೦ದರೆ ಅಸ್ತಿತ್ವಕ್ಕೆ ತರಲಾಗುತ್ತಿರುವ 'ಹಿಂದೂ ರಾಷ್ಟ್ರದ, 'ನೈತಿಕ' ಅಧಿಕಾರವನ್ನು ಪ್ರತಿಪಾದಿಸುತ್ತವೆ .
ಆದರೂ ಯಾವುದೇ ರೀತಿಯಲ್ಲಿ ರಾಜ್ಯವು ತನ್ನ ಶಾಸಕಾಂಗ ಅಧಿಕಾರವನ್ನು ತ್ಯಜಿಸಿಲ್ಲ ಅಥವಾ ಬಿಟ್ಟುಕೊಟ್ಟಿಲ್ಲ. ಬದಲಾಗಿ, ಕಾನೂನು ರಚನೆಯ ಶಕ್ತಿಯನ್ನು ಜನಾಂಗೀಯ ಹಿಂದೂ ರಾಷ್ಟ್ರದ ಉತ್ಪಾದನೆಗೆ ಅಳವಡಿಸಲಾಗಿದೆ. ಕರ್ನಾಟಕ ಬಿಜೆಪಿಯು ಎಲ್ಲಾ ರಾಜಕೀಯ ಪಕ್ಷಗಳನ್ನು ಅಂತಹ ರಾಷ್ಟ್ರದ ಬದ್ಧತೆಯ ಕಡೆಗೆ ಯಶಸ್ವಿಯಾಗಿ ತಳ್ಳಿದೆ.
ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಮತ್ತು ಜಾತಿ ಚಿಹ್ನೆಗಳು ಮತ್ತು ಬಿಂಬಗಳನ್ನು ಹಿಂದೂ ಹಿರಿಮೆಯ ಸರ್ವ ವ್ಯಾಪಿ ವಾಕ್ಚಾತುರ್ಯದೊ೦ದಿಗೆ ಸಹ-ಆಯ್ಕೆ ಮಾಡುವದು ನಿಜವಾದ ಹಕ್ಕುಗಳಲ್ಲ ಆದರೆ ಕೇವಲ ಗುರುತಿಸುವಿಕೆ, ಸಮಾಧಾನಗೊಳಿಸುವಿಕೆ ಮಾತ್ರ ಆದರೆ ನೀತಿಗಳಲ್ಲ, ಮತ್ತು ಪ್ರಜಾಪ್ರಭುತ್ವದ ಭ್ರಮೆ ಇವುಗಳನ್ನು ಮಾತ್ರವೇ ನೀಡುತ್ತದೆ. ಕಾನೂನಿನ ಉದಯೋನ್ಮುಖ ರೂಪಗಳು ಜಾಗರೂಕತೆ, ರಕ್ಷಣಾ ನೀತಿ ಮತ್ತು ಸುಲಿಗೆ ಮಾಡುವ ಮೂಲಕ ಸೀಮಿತ ಅವಕಾಶಗಳು ಮತ್ತು ಸರಕುಗಳ ವಿಷಯದಲ್ಲಿ ಹೋರಾಡಲು ಹಿಂದುಳಿದ ಮತ್ತು ಅಂಚಿನಲ್ಲಿರುವ ವಿಭಾಗಗಳನ್ನೂ ಪ್ರೋತ್ಸಾಹಿಸುತ್ತವೆ.
ಅಧಿಕಾರ, ರಾಜಕೀಯ ಮತ್ತು ಪೌರತ್ವವನ್ನು ಮರು ವ್ಯಾಖ್ಯಾನಿಸಲಾಗುತ್ತಿದೆ ಆದರೆ ಕರ್ನಾಟಕದ ಅಸ್ಮಿತೆಯನ್ನೇ ಮರುರೂಪಿಸಲಾಗುತ್ತಿದೆ.
ಭಾಷೆಯ ಬಹುಮುಖ್ಯ ಪ್ರಶ್ನೆಯಲ್ಲಿ, ಕರ್ನಾಟಕವು ತನ್ನ ಪ್ರಾದೇಶಿಕ ಶಕ್ತಿಯನ್ನು ಅಧಿಕೃತ ಭಾಷೆಯಾದ ಹಿಂದಿಯ ಆಕ್ರಮಿತ ಶಕ್ತಿಗೆ ಬಿಟ್ಟುಕೊಟ್ಟು 2021 ಅನ್ನು ‘ಕನ್ನಡ ಕಾಯಕ’ದ ವರ್ಷವೆಂದು ಘೋಷಿಸುವ ಸಾಂಕೇತಿಕತೆಯಷ್ಟಕ್ಕೆ ತೃಪ್ತವಾಗಿದೆ. ನವೀನ ಸಮುದಾಯ ಗ್ರಂಥಾಲಯ ವ್ಯವಸ್ಥೆಗಳು ಮತ್ತು ಭಾಷಾಂತರ ಯೋಜನೆಗಳ ಮೂಲಕ ಭಾಷೆಯನ್ನು ಶಕ್ತವಾಗಿ ನಿರ್ಮಿಸುವ ಆದ್ಯತೆಯನ್ನು ಬಿಟ್ಟುಕೊಟ್ಟು ಇದು ತನ್ನ ಭಾಷಾ ಸ್ವಾಯತ್ತತೆ ಮತ್ತು ಹೆಮ್ಮೆಗಳನ್ನು ಶರಣು ಕೊಟ್ಟುಬಿಟ್ಟಿದೆ.
ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಅವನತಿಯು ಸಾಂವಿಧಾನಿಕ ತತ್ವಗಳು, ಪ್ರಜಾಪ್ರಭುತ್ವದ ಮಾನದಂಡಗಳು ಮತ್ತು ಮೂಲಭೂತ ಮಾನವೀಯತೆಯ ಏಕಕಾಲಿಕ ಸವೆತದಿಂದ ಗುರುತಿಸಲ್ಪಟ್ಟಿದೆ. ರಾಜ್ಯಾಧಿಕಾರ ಮತ್ತು ಖಾಸಗಿ ಬಂಡವಾಳ, ರಾಜ್ಯಗಳ ಒಕ್ಕೂಟದ ಲಕ್ಷಣಗಳು ಮತ್ತು ಕೇ೦ದ್ರ, ಜಾತ್ಯತೀತವಾದದ್ದು ಮತ್ತು ಪವಿತ್ರವಾದದ್ದು, ಮತ್ತು, ಸಹಜವಾಗಿ, ಖಾಸಗಿ ಆಗಿರುವದು ಮತ್ತು ಸಾರ್ವಜನಿಕವಾದದ್ದು ಇವೆಲ್ಲವುಗಳಲ್ಲಿನಡುವಿನ ಸಂಬಂಧದ ಮರುಹೊಂದಿಕೆ ಮತ್ತು ಮರುಜೋಡಣೆ ಕಂಡುಬಂದಿದೆ; ಅಧಿಕಾರ, ರಾಜಕಾರಣ ಮತ್ತು ಪೌರತ್ವ ಇವೆಲ್ಲ ಮರುವ್ಯಾಖ್ಯಾನವಾಗುವುದಲ್ಲದೆ ಕರ್ನಾಟಕದ ಅಸ್ಮಿತೆಯನ್ನೇ ಮರುರೂಪಿಸಲಾಗುತ್ತಿದೆ.
ಆರೆಸ್ಸೆಸ್ (RSS) ನವ ಕರ್ನಾಟಕವನ್ನು ಹುಟ್ಟು ಹಾಕುತ್ತಿದೆ, ಕಲ್ಪಿಸುತ್ತಿದೆ ಮತ್ತು ನಿರ್ದೇಶಿಸುತ್ತಿದೆ. ಮುಂದಿನ ವರ್ಷ ಅಥವಾ ಎರಡು ವರ್ಷಗಳಲ್ಲಿ ಹೊಸ ದಿಕ್ಕುಗಳನ್ನು ಕ್ರೋಢೀಕರಿಸಲಾಗುತ್ತದೆಯೇ ಎಂಬುದು ಕರ್ನಾಟಕದಲ್ಲಿ ಬಿಜೆಪಿಯು ತನ್ನದೇ ಆದ ಶ್ರೇಣಿಯಲ್ಲಿನ ತೀವ್ರಗೊಳ್ಳುತ್ತಿರುವ ಭಿನ್ನಾಭಿಪ್ರಾಯಗಳನ್ನು ನಿಗ್ರಹಿಸಲು ಮತ್ತು ಹಿಂದೂ ರಾಷ್ಟ್ರದ ಭರವಸೆಯೊಂದಿಗೆ ಹಳೆಯ ಶೈಲಿಯ ಕಾಂಗ್ರೆಸ್ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ಬದಲಿಸಲು ಎಷ್ಟು ಯಶಸ್ವಿಯಾಗಿ ಸಮರ್ಥವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಮತ್ತು, ಸಹಜವಾಗಿ, ಆ ಭರವಸೆಯಿಂದ ಬಂಡವಾಳವು ಅಪಾಯಕ್ಕೀಡಾಗುವುದಿಲ್ಲ ಎಂದು ಪ್ರಮುಖ ಕೈಗಾರಿಕಾ ಹಿತಾಸಕ್ತಿಗಳಿಗೆ (ಅವರಲ್ಲಿ 'ಹೊಸ ಕೈಗಾರಿಕೋದ್ಯಮಿಗಳು' ಕನಿಷ್ಠ ಇಲ್ಲಿಯವರೆಗೆ ಮೌನವಾಗಿದ್ದಾರೆ) ಮನವರಿಕೆ ಮಾಡುವುದನ್ನು ಮುಂದುವರಿಸಬೇಕು.
ಬೆಂಬಲಿಸಿ:ಇಂಡಿಯಾ ಫೋರಮ್
ಉಲ್ಲೇಖಗಳು:
ಬಾಲಕೃಷ್ಣನ್, ಸಾಯಿ ಮತ್ತು ನರೇಂದರ್ ಪಾಣಿ. (2021) 'ಭಾರತದಲ್ಲಿ ರಿಯಲ್ ಎಸ್ಟೇಟ್ ರಾಜಕಾರಣಿಗಳು'. ಅರ್ಬನ್ ಸ್ಟಡೀಸ್ 59 (10): 2079-2094.
ರಾಘವನ್, ಇ. ಮತ್ತು ಜೇಮ್ಸ್ ಮ್ಯಾನರ್. ಪ್ರಜಾಪ್ರಭುತ್ವವನ್ನು ವಿಸ್ತರಿಸುವುದು ಮತ್ತು ಆಳಗೊಳಿಸುವುದು: ಕರ್ನಾಟಕದಲ್ಲಿ ರಾಜಕೀಯ ಆವಿಷ್ಕಾರ. (ರೂಟ್ಲೆಡ್ಜ್, 2009).
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ