ಮತಗಟ್ಟೆಗೆ, ರಾಜಕೀಯ ಪಕ್ಷಗಳ ದಾನಿಗಳು ಯಾರೆ೦ಬ ಯಾವುದೇ ಜ್ಞಾನವಿಲ್ಲದೆ
ದಿ ಹಿ೦ದು ಜನವರಿ 29, 2022
ಚುನಾವಣಾ ದಾನಪತ್ರಗಳ (ಎಲೆಕ್ಟೋರಲ್ ಬಾಂಡ್) ಯೋಜನೆಯು ಅದರ ಸ೦ಪೂರ್ಣ ಅಸಾಂವಿಧಾನಿಕತೆಯನ್ನು ಮೀರಿದೆ - ಇದು ಪ್ರಜಾಪ್ರಭುತ್ವ ಮತ್ತು ಚುನಾವಣೆಗಳನ್ನುಹೊಲಗೆಡಿಸುತ್ತದೆ
ಕಳೆದ ವರ್ಷದ ಕೊನೆಯಲ್ಲಿ, ಕೇಂದ್ರ ಸರ್ಕಾರವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಹೊಸ ಚುನಾವಣಾ ಬಾಂಡ್‌ಗಳ ಕ೦ತನ್ನು ವಿತರಿಸಲು ಮತ್ತು ನಗದು ಮಾಡಲು ಅಧಿಕಾರ ನೀಡಿತು. 2018ರಲ್ಲಿ ಯೋಜನೆಯ ಅಧಿಸೂಚನೆಯನಂತರ ಇದು ೧೯ನೇ ಇ೦ಥ ಗ೦ಟು. ಮುಂದಿನ ತಿಂಗಳು ಪ್ರಾರಂಭವಾಗುವ ಐದು ವಿವಿಧ ರಾಜ್ಯಗಳ ಅಸೆಂಬ್ಲಿಗಳಿಗೆ ಚುನಾವಣೆಗಳು ನಡೆಯಲಿದ್ದು, ದಾನಪತ್ರಗಳ ಈ ಗ೦ಟಿನ ಘೋಷಣೆಯ ಸಂದರ್ಭ ಸ್ಪಷ್ಟವಾಗಿದೆ. ಈಗ, ಪರಿಣಾಮವಾಗಿ, ಆ ರಾಜ್ಯಗಳಲ್ಲಿನ ಮತದಾರರು ವಿವಿಧ ಸ್ಪರ್ಧಿಗಳನ್ನು ಬೆಂಬಲಿಸುವ ದಾನಿಗಳ ಬಗ್ಗೆ ಯಾವುದೇ ಜ್ಞಾನವಿಲ್ಲದೆ ಮತಗಟ್ಟೆಗೆ ಹೋಗುತ್ತಾರೆ.
ಖ೦ಡಿತ ಪಾರದರ್ಶಕವಲ್ಲ
ನಾಗರಿಕರಿಗೆ ವಿಶೇಷವಾಗಿ ರಾಜಕೀಯ ದೇಣಿಗೆಗಳ ವಿಷಯದಲ್ಲಿವಿವರಗಳನ್ನು ತಿಳಿದುಕೊಳ್ಳುವ ಅವಕಾಶ, ಪ್ರಜಾಪ್ರಭುತ್ವದ ಅತ್ಯಗತ್ಯ ಲಕ್ಷಣವಾಗಿದೆ ಎಂದು ಯಾರಿಗಾದರೂ ಹೊಳೆಯಬಹುದು. ಆದರೆ, ಚುನಾವಣಾ ಬಾಂಡ್ ಯೋಜನೆಯು ಅನುಷ್ಠಾನಕ್ಕೆ ಬ೦ದ೦ದಿನಿ೦ದ ರಾಜಕೀಯ ದೇಣಿಗೆ-ನಿಧಿಗಳ ಪಾರದರ್ಶಕತೆಯ ಯಾವುದೇ ಕಲ್ಪನೆಯನ್ನು ಸಂಪೂರ್ಣವಾಗಿ ನಾಶಪಡಿಸುವ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ವಿಷಪೂರಿತಗೊಳಿಸಿದೆ. ಭಾರತದ ಸರ್ವೋಚ್ಛ ನ್ಯಾಯಾಲಯವು ಈ ವಿಷಯದ ಬಗ್ಗೆ ಸಾಕಷ್ಟು ಗಮನ ಹರಿಸಿಲ್ಲ. ಈ ಯೋಜನೆಯನ್ನು ಅಡೆತಡೆಯಿಲ್ಲದೆ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ ಮತ್ತು ಪೂರ್ಣ ಪ್ರಮಾಣದ ವಿಚಾರಣೆಯನ್ನು ನಡೆಸದೆಯೇ ಅದರ ಕಾರ್ಯಾಚರಣೆಗೆ ಮಧ್ಯಂತರ ತಡೆಯನ್ನು ನಿರಾಕರಿಸಿದೆ.
ಇದನ್ನೂ ಓದಿ
ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಆಸ್ತಿಯಲ್ಲಿ ಸುಮಾರು 70% ಬಿಜೆಪಿ ಒ೦ದೇ ಪಕ್ಷ ಹೊಂದಿದೆ: ಎಡಿಆರ್ ವರದಿ
ತನ್ನ ತಾತ್ಕಾಲಿಕ ಆದೇಶ ಒ೦ದರಲ್ಲಿ , ಬಾಂಡ್‌ಗಳು ವಾಸ್ತವವಾಗಿ ಅನಾಮಧೇಯವಾಗಿಲ್ಲ ಎಂದು ನ್ಯಾಯಾಲಯವು ಪ್ರತಿಪಾದಿಸಿತು. ರಾಜಕೀಯ ದಾನಿಗಳ ಗುರುತನ್ನು ಕಂಡುಹಿಡಿಯಲು ಆಸಕ್ತಿ ಹೊಂದಿರುವ ಮತದಾರರು, "ಒ೦ದಕ್ಕೊ೦ದನ್ನು ಹೊಂದಿಕೆ" ಮಾಡುವದರ ಮೂಲಕ ಸರಳವಾಗಿ ನಿರ್ವಹಿಸಬಹುದು ಎಂದಿತು. ನ್ಯಾಯಾಲಯದ ಪ್ರಕಾರ, ಬಾಂಡ್‌ಗಳ ಖರೀದಿ ಮತ್ತು ನಗದುಗೊಳಿಸುವಿಕೆ ಎರಡನ್ನೂ ಬ್ಯಾಂಕುಗಳ ಮೂಲಕ ಮಾಡಲಾಗಿರುವುದರಿಂದ, ದಾನಿಗಳ ಗುರುತನ್ನು ಯಾವುದೇ ಕಾರ್ಪೊರೇಶನ್‌ನ ವಾರ್ಷಿಕ ಹಣಕಾಸು ವರದಿ ಯನ್ನು ಪರಿಶೀಲಿಸಿ ತಿಳಿದುಕೊಳ್ಳ ಬಹುದು. ನ್ಯಾಯಾಲಯದ ಪ್ರಕಾರ ಈ ದಾಖಲೆಗಳು, ಕಂಪನಿಗಳ ನೋ೦ದಣಿ ಕಚೇರಿಯಲ್ಲಿ ಲಭ್ಯವಿರಬೇಕು .
ಪಕ್ಷಗಳಿಗೆ ಯಾವುದೇ ಬಾಧ್ಯತೆ ಇಲ್ಲ.
ಭಾರತದಲ್ಲಿನ ಪ್ರತಿ ಕಾರ್ಪೊರೇಷನ್ ಸಲ್ಲಿಸುವ ವಾರ್ಷಿಕ ವರದಿಗಳನ್ನು ಪಡೆದು ಪರಿಶೀಲಿಸಲು ಮತದಾರರಿಗೆ ಅವಕಾಶ-ಸಂಪನ್ಮೂಲಗಳಿವೆ ಎಂದು ಒಂದು ಕ್ಷಣ ಭಾವಿಸಿದರೂ, ಈ ಆದೇಶವು ನಿರ್ಲಕ್ಷಿಸಿರುವುದು ಏನೆಂದರೆ, ಸ್ವೀಕರಿಸಿದ ಒ೦ದೊ೦ದು ದೇಣಿಗೆಯ ಬಗ್ಗೆ ಸಾರ್ವಜನಿಕರಿಗೆ ವಿವರಗಳನ್ನು ನೀಡಲು ರಾಜಕೀಯ ಪಕ್ಷಗಳಿಗೆ ಯಾವುದೇ ಅನುರೂಪವಾದ ಬಾಧ್ಯತೆ ಇಲ್ಲ. ಹಾಗೆಯೇ ಚುನಾವಣಾ ಬಾಂಡ್‌ಗಳ ಮೂಲಕ ತಾವು ದೇಣಿಗೆ ನೀಡಿದ ಪಕ್ಷದ ಹೆಸರನ್ನು ಬಹಿರಂಗಪಡಿಸಲು ಕಂಪನಿಗಳೂ ಯಾವುದೇ ಬಾಧ್ಯತೆಯನ್ನು ಹೊಂದಿಲ್ಲ. ಆದ್ದರಿಂದ, ಈ " ಒ೦ದಕ್ಕೊ೦ದನ್ನು ಹೊಂದಿಸುವ " ವ್ಯಾಯಾಮವು ನಿರ್ವಹಿಸಲು ಅಸಾಧ್ಯವಾಗಿರುವುದಲ್ಲದೆ , ಬಂಧಗಳನ್ನು ಮರೆಮಾಚುವ ಮುಸುಕನ್ನು ಭೇದಿಸಿ ಪ್ರವೇಶಿಸಲು ಯಾವ ಸಹಾಯವೂ ಸಿಗುತ್ತಿಲ್ಲ. ಕಾರಣ ಇಷ್ಟೇ: ಅನಾಮಧೇಯತೆಯನ್ನುಈ ಯೋಜನೆಯ ಆದರ್ಶಗಳಲ್ಲಿ ಕಟ್ಟಿಟ್ಟಿದೆ; ಇದು ಈ ವ್ಯವಸ್ಥೆಯ ಮೂಲ ಉದ್ದೇಶವನ್ನು ಪ್ರತಿನಿಧಿಸುತ್ತದೆ.
ಚುನಾವಣಾ ಬಾಂಡ್ ಯೋಜನೆಯ ರೂಪರೇಖೆಗಳನ್ನು ಲೋಕಸಭೆಗೆ ವಿವರಿಸಿದಾಗ, ಆಗಿನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ವೈಶಿಷ್ಟ್ಯವನ್ನು ಒತ್ತಿ ಹೇಳಿದರು. ಯಾವ ಪಕ್ಷಕ್ಕೆ ಹಣವನ್ನು ಠೇವಣಿ ಇಡುತ್ತಿದ್ದೇವೆ ಎನ್ನುವದು ದಾನಿಗಳಿಗೆ ತಿಳಿಯುತ್ತದೆ ಎಂದು ಅವರು ಹೇಳಿದರು. “ರಾಜಕೀಯ ಪಕ್ಷವು [ಭಾರತದ] ಚುನಾವಣಾ ಆಯೋಗಕ್ಕೆ ರಿಟರ್ನ್ (ವರದಿ, ಹೇಳಿಕೆ) ಸಲ್ಲಿಸುತ್ತದೆ. ಈಗ ಯಾವ ದಾನಿಗಳು ಯಾವ ರಾಜಕೀಯ ಪಕ್ಷಕ್ಕೆ ಕೊಟ್ಟಿದ್ದಾರೆ ಎಂಬುದು ಮಾತ್ರ ಗೊತ್ತಾಗುವುದಿಲ್ಲ.” (ಒತ್ತು ಸೇರಿಸಲಾಗಿದೆ). ಸಂವಿಧಾನವು ಖಾತರಿಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ತಿಳಿದುಕೊಳ್ಳುವ ಹಕ್ಕನ್ನೂ ತನ್ನೊಳಗೆ ಒಳಗೊಂಡಿರುತ್ತದೆ ಎಂಬ ಪ್ರಜಾಪ್ರಭುತ್ವದ ಮೂಲಭೂತ ಲಕ್ಷಣಗಳಲ್ಲಿ ಒಂದನ್ನು ಈ ಉದ್ದೇಶಿತ ನಿಬ೦ಧನೆಯು ಅಡ್ಡಿಪಡಿಸುತ್ತದೆ.
ಸಹ ಓದಿ
ರಾಜಕೀಯ ಪಕ್ಷಗಳು ೨೦೧೯-೨೦ರಲ್ಲಿ ಅಜ್ಞಾತ ಮೂಲಗಳಿ೦ದ ರೂ ೩೩೭೦ ಕೋಟಿಗಳನ್ನು ಸ೦ಗ್ರಹಿಸಿದವು.
ಚುನಾವಣಾ ಬಾಂಡ್ ಯೋಜನೆಯನ್ನು ಅಧಿಸೂಚಿತ ಅವಧಿಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಬಾಂಡ್‌ಗಳನ್ನು ಖರೀದಿಸಲು ಒಬ್ಬ ವ್ಯಕ್ತಿಗೆ ಅಥವಾ ಕಾರ್ಪೊರೇಟ್ ಸ೦ಸ್ಥೆಗಳನ್ನು ಒಳಗೊಂಡಂತೆ ಯಾವುದೇ "ಕೃತಕ ನ್ಯಾಯಾಂಗ ವ್ಯಕ್ತಿಗೆ" ಅನುಮತಿಸಲು ವಿನ್ಯಾಸಗೊಳಿಸಲಾಗಿದೆ. ಈ ಉಪಕರಣಗಳನ್ನು ಪ್ರಾಮಿಸರಿ ನೋಟುಗಳ ರೂಪದಲ್ಲಿ ಮತ್ತು ₹ 1,000 ರಿಂದ ₹ 1 ಕೋಟಿ ವರೆಗಿನ ಮುಖಬೆಲೆಯಲ್ಲಿ ನೀಡಲಾಗುತ್ತದೆ. ಒಮ್ಮೆ ಖರೀದಿಸಿದ ನಂತರ, ಖರೀದಿದಾರರು ತಮ್ಮ ಆಯ್ಕೆಯ ಯಾವುದೇ ರಾಜಕೀಯ ಪಕ್ಷಕ್ಕೆ ಬಾಂಡ್ ದಾನಪತ್ರವನ್ನು ದೇಣಿಗೆ ನೀಡಬಹುದು ಮತ್ತು ಪಕ್ಷವು ಅದನ್ನು ತನ್ನ ಬೇಡಿಕೆಯ ಮೇರೆಗೆ ನಗದುಗೊಳಿಸಬಹುದು. ಖರೀದಿದಾರರು ತಾವು ಬಾಂಡ್ ಅನ್ನು ಯಾರಿಗೆ ಉಡುಗರೆ ಮಾಡಿದೆ ಎಂಬುದನ್ನು ಬಹಿರಂಗಪಡಿಸಲು ನಿರ್ಬಂಧವಿಲ್ಲ. ಮತ್ತು ಬಾಂಡ್ ಅನ್ನು ಪಡೆದು ನಗದು ಮಾಡುವ ರಾಜಕೀಯ ಪಕ್ಷವು ದಾನಿಗಳ ಗುರುತನ್ನು ರಹಸ್ಯವಾಗಿಡಲು ಬಧ್ಧವಾಗಿದೆ.
ಸಮರ್ಥನೀಯವಲ್ಲದ ವಾದಗಳು
ಇಷ್ಟೇ ಅಲ್ಲದೆ ಯೋಜನೆಯ ಅನುಷ್ಟಾನದ ಮೊದಲು ಜಾರಿಯಲ್ಲಿದ್ದ ನಿರ್ಬಂಧಗಳ ಸರಣಿಯನ್ನು ಈಗ ತೆಗೆದುಹಾಕಲಾಗಿದೆ. ಉದಾಹರಣೆಗೆ, ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಕಂಪನಿಯು ತನ್ನ ನಿವ್ವಳ ಲಾಭದ 7.5% ಕ್ಕಿಂತ ಹೆಚ್ಚಿನದನ್ನು ದೇಣಿಗೆ ನೀಡುವುದನ್ನು ಅನುಮತಿಸದ ಹಿಂದಿನ ನಿಷೇಧವನ್ನು ತೆಗೆದುಹಾಕಲು ತಿದ್ದುಪಡಿಗಳನ್ನು ಮಾಡಲಾಗಿದೆ. ಅಂತೆಯೇ, ಕಂಪನಿಯು ದೇಣಿಗೆಗಳನ್ನು ನೀಡುವ ಮೊದಲು ಕನಿಷ್ಠ ಮೂರು ವರ್ಷಗಳ ಕಾಲ ಅಸ್ತಿತ್ವದಲ್ಲಿರಬೇಕು ಎಂಬ ಆದೇಶವನ್ನು (ರಾಜಕೀಯಕ್ಕೆ ಹಣವನ್ನು ಹೂಡಲು ಟೊಳ್ಳು ‘ಶೆಲ್’ ಕ೦ಪನಿಗಳನ್ನು ಕಾರ್ಪೊರೇಷನ್‌ಗಳನ್ನು ಬಳಸುವದನ್ನು ತಡೆಯುವ ಗುರಿಯನ್ನು ಹೊಂದಿರುವ ಅವಶ್ಯಕತೆ) ಸಹ ತೆಗೆದುಹಾಕಲಾಯಿತು .
ಹೀಗಾಗಿ, ಅದರ ವಿನ್ಯಾಸದ ಮೂಲಕ, ಚುನಾವಣಾ ಬಾಂಡ್ ಯೋಜನೆಯು ರಾಜಕೀಯ ಪಕ್ಷಗಳ ಅನಿಯಮಿತ ಮತ್ತು ಅನಾಮಧೇಯ ಕಾರ್ಪೊರೇಟ್ ಧನಸಹಾಯವನ್ನು ಅನುಮತಿಸುತ್ತದೆ. ಯೋಜನೆಯ ನ್ಯಾಯೀಕರಣಕ್ಕಾಗಿ ಸರ್ಕಾರವು ಎರಡು ವಾದಗಳನ್ನು ಮಾಡುತ್ತದೆ: ಒಂದು, ರಾಜಕೀಯ ಪಕ್ಷಗಳಿಗೆ ಹೇಗೆ ಹಣ ನೀಡಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಮತದಾರರಿಗೆ ಯಾವುದೇ ಮೂಲಭೂತ ಹಕ್ಕು ಇಲ್ಲ; ಮತ್ತು ಎರಡು, ಈ ಯೋಜನೆಯು ಚುನಾವಣೆಗೆ ಧನಸಹಾಯ ನೀಡುವಲ್ಲಿ ಕಪ್ಪು ಹಣದ ಪಾತ್ರವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಯಾವುದೇ ಸಮಂಜಸವಾದ ಪರೀಕ್ಷೆಯಲ್ಲಿ, ಈ ಎರಡೂ ವಾದಗಳೂ ಸಮರ್ಥನೀಯವಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ
ಮತದಾರರು ರಾಜಕೀಯ ಹಣದ ಮೂಲ ತಿಳಿಯಬೇಕಿಲ್ಲ: ಸರ್ಕಾರ
ಮೊದಲನೆಯದಾಗಿ, ಚುನಾವಣೆಯ ಸಮಯದಲ್ಲಿ ಮತದಾರರು ಮುಕ್ತವಾಗಿ ವ್ಯಕ್ತಪಡಿಸುವ ಹಕ್ಕನ್ನು ಹೊಂದಿದ್ದಾರೆ ಮತ್ತು ಈ ಹಕ್ಕಿಗೆ ಉದ್ದೇಶ ಮತ್ತು ಹುರುಪು ನೀಡುವ ಎಲ್ಲಾ ಮಾಹಿತಿಯ ತುಣುಕುಗಳಿಗೆ ಅವರು ಅರ್ಹರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸತತವಾಗಿ ಹೇಳಿದೆ. ಖಂಡಿತವಾಗಿಯೂ, ಚುನಾವಣಾ ಪ್ರಕ್ರಿಯೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಮತ್ತು ಒಬ್ಬರ ಮತಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಲು, ಅಭ್ಯರ್ಥಿಗಳನ್ನು (ಹಣ ಕೊಟ್ಟು) ಬೆಂಬಲಿಸುವವರ ಗುರುತನ್ನು ನಾಗರಿಕನು ತಿಳಿದಿರಬೇಕು.
ಎರಡನೆಯದಾಗಿ, ಸುಪ್ರೀಂ ಕೋರ್ಟ್‌ನಲ್ಲಿ ಭಾರತದ ಚುನಾವಣಾ ಆಯೋಗವು ಸಲ್ಲಿಸಿದ ಪ್ರಮಾಣಪತ್ರ (ಅಫಿಡವಿಟ್)ಗಳು ತೋರಿಸಿದಂತೆ, ಈ ಯೋಜನೆಯು ಇತರ ವಿಷಯಗಳ ಜೊತೆಗೆ, ಟೊಳ್ಳು ‘ಶೆಲ್’ ಘಟಕಗಳು ಮತ್ತು ಮರಣಶಯ್ಯೆಯಲ್ಲಿರುವ ಘಟಕಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದರ ವಿರುದ್ಧ ಅಸ್ತಿತ್ವದ್ದಲ್ಲಿದ್ದ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಚುನಾವಣೆಯಲ್ಲಿ ಕಪ್ಪು ಹಣದ ಸಂಭಾವ್ಯ ಪಾತ್ರದ ವಿಪತ್ತನ್ನು ಹೆಚ್ಚಿಸುತ್ತದೆ .
ಇದಲ್ಲದೆ, ಬಾಂಡ್‌ಗಳು ಲೆಕ್ಕಕ್ಕೆ ಸಿಗದ ಹಣ (ಕಪ್ಪು ಹಣ) ದ ಉಪಸ್ಥಿತಿಯನ್ನು ತೊಡೆದುಹಾಕಲು ಉದ್ದೇಶಿಸಿದ್ದರೂ ಸಹ, ದಾನಿಗಳ ಸಂಪೂರ್ಣ ಅನಾಮಧೇಯತೆಯನ್ನು ಒದಗಿಸುವ ನಿರ್ಧಾರವು ಈ ಉದ್ದೇಶಕ್ಕೆ ಯಾವ ಸಂಬಂಧವನ್ನು ಹೊಂದಿದೆ ಎಂಬುದನ್ನು ಕಾಣುವದು ಕಷ್ಟ. ವಾಸ್ತವವಾಗಿ, ಈ ಕಾರಣಕ್ಕಾಗಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಯೋಜನೆಯ ವಿರುದ್ಧ ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ
2019-20ರಲ್ಲಿ ರಾಷ್ಟ್ರೀಯ ಪಕ್ಷಗಳು ಅಜ್ಞಾತ ಮೂಲಗಳಿಂದ ₹3,370 ಕೋಟಿ ಸಂಗ್ರಹಿಸಿವೆ: ಎಡಿಆರ್
ಉನ್ನತ ನ್ಯಾಯಾಂಗಕ್ಕೆ
ಎಲೆಕ್ಟೋರಲ್ ಬಾಂಡ್ ಯೋಜನೆಗೆ ಸಂಬಂಧಿಸಿದ ಚಿಂತೆಗಳು ಅದರ ಸ೦ಪೂರ್ಣ ಅಸಂವಿಧಾನಿಕತೆಯನ್ನು ಮೀರಿವೆ. ಏಕೆಂದರೆ ಅನಾಮಧೇಯತೆಗೆ ಅವಕಾಶ ನೀಡುವುದರಿಂದ ಅದು ನಮ್ಮ ಪ್ರಜಾಪ್ರಭುತ್ವದ ತಳಹದಿಯನ್ನು ಕೆಡಿಸುತ್ತದೆ ಮತ್ತು ನಮ್ಮ ಚುನಾವಣೆಗಳು ನಿಜವಾದ ಮುಕ್ತ ಮತ್ತು ನ್ಯಾಯಸಮ್ಮತವಾಗಿರುವುದನ್ನು ತಡೆಯುತ್ತದೆ. ಆದ್ದರಿಂದ, ಸುಪ್ರೀಂ ಕೋರ್ಟ್‌ನ ಪರಿಗಣನೆಗೆ ಕಾಯುತ್ತಿರುವ ಇದಕ್ಕಿಂತ ಹೆಚ್ಚಿನ ನೈತಿಕ ಜರೂರಿನ ವಿಷಯಗಳು ಯಾವುದೂ ಇಲ್ಲ. ಆದರೂ, 2018 ರಲ್ಲಿ ಅದರ ಅಧಿಸೂಚನೆಯ ಬೆನ್ನ ಹಿ೦ದೆಯೇ ತ್ವರಿತವಾಗಿ ಪ್ರಾರಂಭಿಸಲಾದ ಸವಾಲುಗಳ ಹೊರತಾಗಿಯೂ, ಕಾರ್ಯಕ್ರಮದ ಸಿಂಧುತ್ವವನ್ನು ಆಲಿಸಲು ಮತ್ತು ನಿರ್ಧರಿಸಲು ನ್ಯಾಯಾಲಯವು ವಿಫಲವಾಗಿದೆ.
ತೀರ್ಪಿನಲ್ಲಿನ ವಿಳಂಬ, ಪರಿಗಣನೆಗೆ ಬಾಕಿಯಿರುವ ಹಲವಾರು ಪ್ರಕರಣಗಳಲ್ಲಿ ನಾವು ನೋಡಿದಂತೆ, ಏಕರೂಪವಾಗಿ ಪ್ರಶ್ನೆಯಡಿಯಲ್ಲಿರುವ ವಿಷಯವನ್ನು ‘ಮಾಡಿ ಮುಗಿಸು’ತ್ತದೆ - ಅದರ ಆತ೦ಕಗೊಳ್ಳುವ ಹಾನಿ ಆಗಿಯೇ ಬಿಡುತ್ತದೆ. ಈ ಪ್ರಕರಣದಲ್ಲಿ ಪರಿಣಮಿಸುವ ಹಾನಿಯು ಅತ್ಯ೦ತ ಸ್ಪಷ್ಟವಾಗಿದೆ , ಏಕೆಂದರೆ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯು ಅಪಾಯದಲ್ಲಿದೆ. 1957 ರಷ್ಟು ಹಿ೦ದೆಯೇ ಹಿಂದಿನ ನ್ಯಾಯಾಧೀಶರು ಚುನಾವಣೆಗಳ ಮಿತಿಯಿಲ್ಲದ ಕಾರ್ಪೊರೇಟ್ ದೇಣಿಗೆಯಿಂದ ಉಂಟಾಗುವ ಬೆದರಿಕೆಗಳ ಬಗ್ಗೆ ಎಚ್ಚರಿಸಿದ್ದಾರೆ. ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಂಸಿ ಚಾಗ್ಲಾ ಅವರು ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡಲು ಕಂಪನಿಗಳಿಗೆ ಅವಕಾಶ ನೀಡುವ ಯಾವುದೇ ನಿರ್ಧಾರವು "ಅಂತಿಮವಾಗಿ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಅತಿಕ್ರಮಿಸ ಬಹುದು ಮತ್ತು ಕತ್ತು ಹಿಸುಕಿ ನಾಶ ಮಾಡಬಹುದು" ಎಂದು ಭವಿಷ್ಯ ನುಡಿದಿದ್ದರು.
ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಪಿಬಿ ಮುಖರ್ಜಿ ಅವರು ಇನ್ನೂ ಬಲವಾದ ಭಾಷೆಯನ್ನು ಬಳಸಿದ್ದಾರೆ. "ರಾಜಕೀಯ ಪಕ್ಷಗಳ ರಾಜಕೀಯ ನಿಧಿಗಳಿಗೆ ಹಣವನ್ನು ಕೊಡುಗೆ ನೀಡುವ ಮೂಲಕ ದಿನದ ಸರ್ಕಾರವನ್ನು ಪ್ರಚೋದಿಸುವುದು, ವಾಣಿಜ್ಯ ಮತ್ತು ಸಾರ್ವಜನಿಕ ಆಡಳಿತದ ಮಾನದಂಡಗಳಿಗೆ ಗಂಭೀರ ಅಪಾಯಗಳಿಂದ ತುಂಬಿರುವ ಅತ್ಯಂತ ಕೆಟ್ಟ ತತ್ವವನ್ನು ಅಳವಡಿಸಿಕೊಳ್ಳುವುದು" ಎಂದು ಅವರು ಬರೆದಿದ್ದಾರೆ. ಅಲ್ಲದೆ "... ಹೆಸರಿಗೆ ಸಮಾನವಾಗಿದ್ದರೂ ವೈಯಕ್ತಿಕ ನಾಗರಿಕರು ತಮ್ಮ ಅಭಿವ್ಯಕ್ತಿಯಲ್ಲಿ ತೀವ್ರವಾಗಿ ವಿಕಲರಾಗುತ್ತಾರೆ ಏಕೆಂದರೆ ಎ೦ದಿಗೂ ಅವರ ಕೊಡುಗೆಯ ಉದ್ದವು ದೊಡ್ಡ ಕಂಪನಿಗಳ ಕೊಡುಗೆಯ ಉದ್ದವನ್ನು ಸಮನಾಗಿರುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ."
ಇಂದು, ವೈಯಕ್ತಿಕ ಮತದಾರರು ನಿಗಮಗಳು ನೀಡುವ ಕೊಡುಗೆಗಳನ್ನು ಸರಿಜೋಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವುದಲ್ಲದೆ ರಾಜಕೀಯ ಘಟಕವನ್ನು ದೊಡ್ಡ ಪ್ರಮಾಣದಲ್ಲಿ ಧನೀಕರಿಸುವ ದಾನಿಗಳ ಗುರುತಿನ ಬಗ್ಗೆ ಯಾವುದೇ ಜ್ಞಾನವಿಲ್ಲದ ಸ್ಥಿತಿಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ನಮ್ಮ ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ದೊಡ್ಡ ಅಪಾಯ ಇರಬಹುದೇ?
ಸುಹೃತ್ ಪಾರ್ಥಸಾರಥಿ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ