'ಅಮೆರಿಕದ ಕಾಂಗ್ರೆಸ್ ನರಮೇಧದ ಕುರಿತು ಭಾರತಕ್ಕೆ ಎಚ್ಚರಿಕೆಯ ಠರಾವನ್ನು ರವಾನಿಸಬೇಕು': ಗ್ರೆಗೊರಿ ಸ್ಟಾಂಟನ್

Genocide Watch (ಜಿನೋಸೈಡ್ ವಾಚ್‌ - ನರಮೇಧ ಕಾವಲು ಸ೦ಸ್ಥೆ) ಯ  ಸಂಸ್ಥಾಪಕ ಅಧ್ಯಕ್ಷ ಗ್ರೆಗರಿ ಸ್ಟಾ೦ಟನ್ ಕರಣ್ ಥಾಪರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದ್ವೇಷದ ಭಾಷಣವನ್ನು ಖಂಡಿಸುವ ನೈತಿಕ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

Watch | 'US Congress Must Pass Resolution Warning India On Genocide': Gregory Stanton

ಕರಣ್ ಥಾಪರ್ ಮತ್ತು ಗ್ರೆಗೊರಿ ಸ್ಟಾಂಟನ್. ಫೋಟೋ: ದಿ ವೈರ್

 

ಕರಣ್  ಥಾಪರಯೊ19/ಜನವರಿ/2022

ಜಿನೋಸೈಡ್ ವಾ ಚ್‌ನ ಸಂಸ್ಥಾಪಕ ಅಧ್ಯಕ್ಷ ಗ್ರೆಗೊರಿ ಸ್ಟಾಂಟನ್ ಅವರೊಂದಿಗೆ ಭಾ ರತದ ಪತ್ರಿಕೋದ್ಯಮಿ ಕರಣ್ ಥಾಪರ್ ನಡೆಸಿದ  ಸಂದರ್ಶನವನ್ನು ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಕರು ವೀಕ್ಷಿಸಿದ್ದಾರೆ. ಅವರಲ್ಲಿ ಸುಮಾರು 2000 ಮಂದಿ ತಮ್ಮ ಪ್ರತಿಕ್ರಿಯೆಗಳನ್ನು ನೋಂದಾಯಿಸಿದ್ದಾರೆ.  ನಿರೀಕ್ಷಿಸಬಹುದಾದಂತೆ, ಪ್ರತಿಕ್ರಿಯೆಗಳು  ನರಮೇಧದ ಸಾಧ್ಯತೆಯ ಎಚ್ಚರಿಕೆಯ ಕಾರಣದಿಂದ ಸಂದರ್ಶನವು ಮುಖ್ಯವೆಂದು ಭಾವಿಸುವರಿ೦ದಲೂ,  ವಿವಿಧ ಹೇಳಿಕೆಗಳಿಗಾಗಿ  ಅಥವಾ ಹೇಳದಿರುವ ವಿಷಯಗಳಿ೦ದಾಗಿ ಥಾಪರ್ ಮತ್ತು ಸ್ಟಾಂಟನ್ ಇಬ್ಬರನ್ನೂ  ಒಪ್ಪದವರಿಂದಲೂ, ಬ೦ದಿವೆ.  ಸಂದರ್ಶನವು ದಿ ವೈರ್ ಅಡಿಯಲ್ಲಿ YouTube ನಲ್ಲಿ ಲಭ್ಯವಿದೆ.

ದಿ ವೈರ್‌ನಲ್ಲಿ ಕಾಣಿಸಿಕೊಂಡ ಕರಣ್ ಥಾಪರ್ ಅವರ ಸಂದರ್ಶನದ ಸಾರಾಂಶ ಹೀಗಿದೆ:

"ಭಾರತದಲ್ಲಿ ನರಮೇಧವು  ಸಂಭವಿಸುವ ಒಳ್ಳೆಯ ಸಾಧ್ಯತೆ ಇದೆ " ಎಂದು ಅಮೆರಿಕದ  ಕಾಂಗ್ರೆಸ್‌ಗೆ ಎಚ್ಚರಿಸುವ ವರದಿ ನೀಡಿದ ಒಂದು ವಾರದ ನಂತರ, ಜಿನೋಸೈಡ್ ವಾಚ್‌ನ ಸಂಸ್ಥಾಪಕ ಅಧ್ಯಕ್ಷ ಗ್ರೆಗೊರಿ ಸ್ಟಾಂಟನ್ ಅವರು  "ಭಾರತದಲ್ಲಿ ನರಮೇಧಕ್ಕೆ ಅವಕಾಶ ನೀಡಬಾರದು” ಎಂದು ಎಚ್ಚರಿಸುವ ಠರಾವನ್ನು  ಅಂಗೀಕರಿಸಲು ಅಮೆರಿಕದ  ಕಾಂಗ್ರೆಸಿಗೆ ಹೇಳಿದ್ದಾಗಿ ತಿಳಿಸಿದ್ದಾರೆ.  ಅಲ್ಲದೆ "(ಅಧ್ಯಕ್ಷ ಜೋ) ಬಿಡೆನ್ ಅವರು (ಪ್ರಧಾನಿ ನರೇಂದ್ರ) ಮೋದಿಗೆ ನರಮೇಧ ಸಂಭವಿಸಿದರೆ ಅದು ಭಾರತದೊಂದಿಗಿನ ನಮ್ಮ (ಅಮೇರಿಕಾದ) ಎಲ್ಲಾ ಸಂಬಂಧಗಳನ್ನು  ಪುನಃ ಪರಿಶೀಲಿಸುವ  ಅಗತ್ಯವಿದೆ ಎಂದು ಹೇಳಬೇಕು."

ದಿ ವೈರ್‌ ಪ್ರಕಟಣೆಗಾಗಿ ಕರಣ್ ಥಾಪರ್ ಅವರೊಂದಿಗಿನ 28 ನಿಮಿಷಗಳ ಸಂದರ್ಶನದಲ್ಲಿ, ಸ್ಟಾಂಟನ್ ಅವರು ತಮ್ಮ ಸಂಘಟನೆಯಾದ ಜೆನೋಸೈಡ್ ವಾಚ್ ದೇಶಗಳಿಗೆ ಶ್ರೇಯಾಂಕ ನೀಡದಿದ್ದರೂ, ಯುಎಸ್ ಹತ್ಯಾಕಾಂಡದ ಸ್ಮಾರಕ ವಸ್ತುಸಂಗ್ರಹಾಲಯವು (the US Holocaust Memorial Museum) ಪಾಕಿಸ್ತಾನದ ನಂತರ ಭಾರತವು ನರಮೇಧಕ್ಕೆ ಎರಡನೇ ಅತಿ ಹೆಚ್ಚು ಸಂಭವನೀಯ ದೇಶ ಎಂದು ನಂಬುತ್ತದೆ ಎಂದು ಹೇಳಿದರು.

ಸಂದರ್ಶನದಲ್ಲಿ, ಸ್ಟಾಂಟನ್ "(ಜನಾಂಗೀಯ ಹತ್ಯೆ)ಯ ಮುಂಚಿನ ಎಚ್ಚರಿಕೆಯ ಚಿಹ್ನೆಗಳು ಭಾರತದಲ್ಲಿವೆ" ಎಂದು ಹೇಳಿದರು. ಜಿನೋಸೈಡ್ ವಾಚ್‌ನ '10 ಹಂತಗಳ ನರಮೇಧ'ವನ್ನು ಉಲ್ಲೇಖಿಸಿದ ಅವರು, ಅವುಗಳಲ್ಲಿ ಹಲವು ಭಾರತದಲ್ಲಿ ಈಡೇರಿವೆ ಎಂದು ಹೇಳಿದರು. ಅವರು ಗುರುತಿಸಿದವುಗಳೆಂದರೆ :

ವರ್ಗೀಕರಣ (ಜನರನ್ನು ‘ನಾವು’ ಮತ್ತು ‘ಅವರು’ ಎ೦ದು ವಿಭಾಗಿಸುವದು  ಮತ್ತು ‘ಇತರ’ರನ್ನು ಗುರುತಿಸುವುದು), 

ಸಾಂಕೇತಿಕತೆ (ಜನರನ್ನು ಅವರು ಧರಿಸುವ ಬಟ್ಟೆಯಿಂದ ಗುರುತಿಸುವುದು ಅಥವಾ ಅವರನ್ನು ಅಬ್ಬಾ ಜಾನ್ ಎಂದು ಕರೆಯುವುದು), 

ತಾರತಮ್ಯ (ಪೌರತ್ವ ತಿದ್ದುಪಡಿ ಕಾಯ್ದೆ), 

ಅಮಾನವೀಕರಣ  (ಅವರನ್ನು ಗೆದ್ದಲು ಎಂದು ಕರೆಯುವುದು ಮತ್ತು  ಅವರನ್ನು ಪಾಕಿಸ್ತಾನಕ್ಕೆ ಹೋಗಲು ಹೇಳುವದು ) 

ಮತ್ತು ಧ್ರುವೀಕರಣ (ಅವರ ಮೇಲೆ 'ಲವ್ ಜಿಹಾದ್' ಮತ್ತು ಅಂತರ್-ವಿವಾಹದ ವಿರುದ್ಧ ತಾರತಮ್ಯ ಕಾನೂನುಗಳ ಆರೋಪ).

ಈ ಎಲ್ಲದರ ಮೇಲೆ, ನರಮೇಧಕ್ಕೆ ವಾಸ್ತವವಾದ ಕರೆಗಳು ಬಂದಿವೆ ಎಂದು  ಹೇಳಿದರು ಸ್ಟಾಂಟನ್, ಇದು ನರಮೇಧದ ಅ೦ತಾರಾಷ್ಟ್ರೀಯ ಸಮಾವೇಶದ ಒಪ್ಪ೦ದದ ಅಡಿಯಲ್ಲಿ ನರಮೇಧದ ವ್ಯಾಖ್ಯಾನಕ್ಕೆ ಹೋಲುತ್ತದೆ, ಇದಕ್ಕೆ ಭಾರತ ಸಹಿ ಹಾಕಿದೆ.

ಸ್ಟಾಂಟನ್ "ದೇಶವು ಪ್ರಜಾಪ್ರಭುತ್ವವಾಗಿರುವ ಒ೦ದೇ ಕಾರಣದಿ೦ದಾಗಿ ನರಮೇಧ ಸಂಭವಿಸುವುದು ಅಸಾಧ್ಯ ಎ೦ದು ಪರಿಗಣಿಸಲಾಗುವುದಿಲ್ಲ" ಎಂದು ಹೇಳಿದರು. ಅಮೆರಿಕದ ದೃಷ್ಟಾ೦ತವನ್ನು ಉಲ್ಲೇಖಿಸುತ್ತ,   ಹಿ೦ದೆ ಸ್ಥಳೀಯ ಅಮೆರಿಕನ್ ರ ( ಅಮೆರಿಕ ಭೂಖ೦ಡದ ಬುಡಕಟ್ಟು  ನಿವಾಸಿಗಳು - ರೆಡ್ ಇ೦ಡಿಯನ್ನರು ಎ೦ದು ಕರೆಯಲಾಗುತ್ತಿದ್ದವರು)   ವಿರುದ್ಧ ಮತ್ತು ಆಫ್ರಿಕನ್ ಅಮೆರಿಕನ್ನರ (ಆಫ್ರಿಕದಿ೦ದ ಗುಲಾಮರನ್ನಾಗಿ ತ೦ದವರ) ವಿರುದ್ಧ ನರಮೇಧವನ್ನು (ಅಮೆರಿಕದ ಬಿಳಿಯರಿ೦ದ) ನಡೆಸಲಾಗಿದೆ ಎಂದು ಅವರು ಹೇಳಿದರು.

ಈ ಸಮಯದಲ್ಲಿ ಭಾರತದಲ್ಲಿ ನರಮೇಧ ನಡೆಯುತ್ತಿದೆ ಎಂಬುದು ಅವರ ಅಭಿಪ್ರಾಯವಲ್ಲ.  ಆದರೆ ಅವರು ಹತ್ಯಾಕಾಂಡಕ್ಕೆ ಕಾರಣವಾಗುವ ಹಂತಗಳು ಸಂಭವಿಸಿವೆ ಎಂದು ಅವರು ಭಯಪಡುತ್ತಾರೆ, ಇವನ್ನು ಅವರು ಆರಂಭಿಕ ಎಚ್ಚರಿಕೆಯ ಚಿಹ್ನೆಗಳು ಎಂದು ಕರೆಯುತ್ತಾರೆ. “ಜನಾಂಗೀಯ ಹತ್ಯೆ ಒಂದು ಘಟನೆಯಲ್ಲ, ಅದೊಂದು ಪ್ರಕ್ರಿಯೆ. ಇದು ಹೆಜ್ಜೆ ಹೆಜ್ಜೆಯಾಗಿ ಅಭಿವೃದ್ಧಿಗೊಳ್ಳುತ್ತದೆ, ” ಅವರು ಹೇಳಿದರು.

ನರಮೇಧ ಸಂಭವಿಸಿದರೆ "ಅದು ರಾಜ್ಯವಲ್ಲ ಆದರೆ ಜನಸಮೂಹವು ಅದನ್ನು ನಡೆಸುತ್ತದೆ" ಎಂದು ಸ್ಟಾಂಟನ್ ಹೇಳಿದರು.

ಪ್ರಧಾನಿ ಮೋದಿಯವರ ಬಗ್ಗೆ ನಿರ್ದಿಷ್ಟವಾಗಿ ಮಾತನಾಡುತ್ತಾ, ಸ್ಟಾಂಟನ್ ಅವರು 2002 ರ ಹತ್ಯಾಕಾಂಡವನ್ನು ಮೋದಿ ಪ್ರೋತ್ಸಾಹಿಸಿದ್ದಾರೆ ಮತ್ತು ತಮ್ಮ ರಾಜಕೀಯ ನೆಲೆಯನ್ನು ನಿರ್ಮಿಸಲು ಮುಸ್ಲಿಂ ವಿರೋಧಿ ವಾಕ್ಚಾತುರ್ಯವನ್ನು ಬಳಸಿದ್ದಾರೆ ಎಂದು ತಾನು ನಂಬುತ್ತೇನೆ ಎಂದು ಯುಎಸ್ ಕಾಂಗ್ರೆಸ್‌ಗೆ ತಿಳಿಸಿದ್ದೇನೆ ಎಂದು ಹೇಳಿದರು. "ಅವರು (ಮೋದಿ), ಐತಿಹಾಸಿಕ ಘಟನೆಗಳ ದಾಖಲೆಯನ್ನು ಹೊಂದಿದ್ದಾರೆ (ಮತ್ತು) ಅವರು ಉತ್ತರಿಸಬೇಕಾಗಿದೆ" ಎಂದು ಅವರು ಹೇಳಿದರು. "ಅವರು (ಮೋದಿ, ತಮ್ಮ ಕಾರ್ಯಗಳ ಬಗ್ಗೆ) ಜವಾಬ್ದಾರರಾಗಿರಬೇಕು."

ಪ್ರಧಾನ ಮಂತ್ರಿಯವರ ಮೌನದ ಬಗ್ಗೆ ಮಾತನಾಡುತ್ತಾ – ಹರಿದ್ವಾರದಲ್ಲಿ ಧರ್ಮ ಸಂಸದ್ ನಡೆದು ಒಂದು ತಿಂಗಳು ಕಳೆದಿದೆ – ಸ್ಟಾಂಟನ್ ಹೇಳಿದರು: “ಅವರು ಭಾರತದ ಪ್ರಧಾನ ಮಂತ್ರಿ. ಅವರು ದೇಶದ ನಾಯಕ. ಅವರು ದ್ವೇಷದ ಭಾಷಣವನ್ನು ಖಂಡಿಸುವ ನೈತಿಕ ಹೊಣೆಗಾರಿಕೆಯನ್ನು ಹೊಂದಿದ್ದಾರೆ. ಮೌನವಾಗಿರದಿರುವ ಜವಾಬ್ದಾರಿ ನಾಯಕರ ಮೇಲಿದೆ,” ಎಂದು ಅವರು ಹೇಳಿದರು.

ಮೋದಿಯವರ ಮೌನವನ್ನು ನೀವು ಹೇಗೆ ಅರ್ಥೈಸುತ್ತೀರಿ, ಎಂಬ ದಿ ವೈರ್‌ನ ಪ್ರಶ್ನೆಗೆ, (ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ)  ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರನ್ನು ಉಲ್ಲೇಖಿಸಿ, "ನಮಗೆ ವಿರುದ್ಧವಾಗಿರುವವರು ಯಾರು ಎಂಬುದನ್ನು ಅವರು ಏನು ಹೇಳುತ್ತಿದ್ದಾರೆಂದಲ್ಲ ಆದರೆ ಅವರ ಮೌನದಿಂದ ನಮಗೆ ತಿಳಿಯುತ್ತದೆ" ಎಂದು ಸ್ಟಾಂಟನ್ ಹೇಳಿದರು.

ಮೋದಿಯವರ ಮೌನವು ತನಗೆ ಹಾನಿಯನ್ನುಂಟುಮಾಡುತ್ತದೆ ಎಂದು ನೀವು ಹೇಳುತ್ತಿದ್ದೀರಾ ಎಂದು ಕೇಳಿದಾಗ, ಸ್ಟಾಂಟನ್ ಉತ್ತರಿಸಿದರು: "ಅದು ಖಂಡಿತ."

1989 ರಲ್ಲಿ, ಗುರುತಿನ ಕಾರ್ಡ್‌ಗಳಲ್ಲಿ ಜನಾಂಗೀಯತೆಯನ್ನು ದಾಖಲಿಸಿಕೊಳ್ಳುವುದು ನರಮೇಧ ಸಂಭವಿಸುವುದನ್ನು ಖಚಿತಪಡಿಸುತ್ತದೆ ಎಂದು ಸ್ಟಾಂಟನ್ ರುವಾಂಡಾದ ಅಧ್ಯಕ್ಷರಿಗೆ ಮುನ್ಸೂಚನೆ ನೀಡಿದರು. ಐದು ವರ್ಷಗಳ ನಂತರ, ಅದು ನಿಜವಾಗಿ ಸ೦ಭವಿಸಿತತು. ಸಂದರ್ಶನದಲ್ಲಿ, ಸ್ಟಾಂಟನ್ ಅವರು ರುವಾಂಡಾ ಸರ್ಕಾರಕ್ಕೆ ನೀಡಿದ ಎಚ್ಚರಿಕೆ ಮತ್ತು ಅಧ್ಯಕ್ಷರ ಪ್ರತಿಕ್ರಿಯೆಯ ವಿವರಗಳನ್ನು ನೀಡುತ್ತಾರೆ.

(ಇದೊ೦ದು ಸ೦ದರ್ಶನದ ಸಾರಾ೦ಶವಷ್ಟೆ. ಸ್ಟಾಂಟನ್ ಅವರ ಅಭಿಪ್ರಾಯಗಳು ಮತ್ತು ವಾದಗಳ  ನಿಶ್ಚಿತ   ತಿಳುವಳಿಕೆಗಾಗಿ  ಪೂರ್ಣ ಸಂದರ್ಶನವನ್ನು ನೋಡಬಹುದು.) 



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು