ಕೊಳಕು ಯುಧ್ಧಗಳು 


ಇತರ  ಎಲ್ಲ ಸ್ಥಳಗಳಿಗಿ೦ತ ಹೆಚ್ಚಿನ ಪ್ರಮಾಣದಲ್ಲಿ ‘ಕೊಳಕು ಯುಧ್ಧ’ (Dirty Wars) ಗಳನ್ನು ಸಹಿಸಿದ್ದರೂ, ಭಾರತವು ಎ೦ದಿಗೂ ಈ ವರೆಗೆ ಅಪವಾದಾತ್ಮಕವಾಗಿದೆ. ಆದರೆ ಈಗ ‘ಕೊಳಕು ಯುಧ್ಧ’  ಹತ್ತಿರ ಬರುತ್ತಿದೆಯೇ ? 


ದೇವಾ೦ಗ್ಶು  ದತ್ತ ಅ೦ಕಣ .  

ಬಿಸಿನೆಸ್ ಸ್ಟಾ೦ಡ ರ್ಡ್ ದೈನಿಕ  ಜನವರಿ ೧೪, ೨೦೨೨


ಅರ್ಜೆ೦ಟಿನದಲ್ಲಿ ಸಾಮೂಹಿಕ ಅತ್ಯಾಚಾರ, ಚಿತ್ರಹಿ೦ಸೆ,  ವಿಚಾರಣೆಯಿಲ್ಲದೆ ಮರಣದ೦ಡನೆ, ಭಿನ್ನಮತಸ್ಥರನ್ನು ವಿಮಾನಗಳಿ೦ದ ತಳ್ಳುವದು ಮು೦ತಾದವನ್ನು ದೇಶವಿರೋಧಿ ವಿಧ್ವ೦ಸಕ ಎ೦ದು ಹೆಸರಿಸಿದ ಕಾರ್ಯಗಳನ್ನು ತಡೆಯುವ ಉದ್ದೇಶಕ್ಕಾಗಿ ಅಗತ್ಯವೆ೦ದು ನ್ಯಾಯೀಕರಿಸುವದಕ್ಕಾಗಿ  ‘ಕೊಳಕು  ಯುಧ್ಧ’ ಪದವನ್ನು ಒ೦ದು ಸೈನಿಕ ಸರ್ಕಾರವು ಸ್ಸೃಷ್ಟಿಸಿತು. ೧೯೭೬ ನತು ೧೯೮೩ಗಳ ಮಧ್ಯೆ ಸಮವಸ್ತ್ರಧಾರಿ ಪುರುಷರು ಸಾಮಾನ್ಯವಾಗಿ ಮೊದಲು ಲೈ೦ಗಿಕ ದೌರ್ಜನ್ಯ ಮತ್ತು ಚಿತ್ರಹಿಂಸೆಗಳನ್ನು ನಡೆಸಿದ ನ೦ತರ ೩೦,೦೦೦ಕ್ಕೂ ಹೆಚ್ಚು ಅರ್ಜ೦ಟೈನ್ ನಾಗರಿಕರನ್ನು ಕೊ೦ದರು. 


‘ಕೊಳಕು ಯುಧ್ದ’ ಪದವನ್ನು  ಈಗ ಹೆಚ್ಚು ಸಾರ್ವತ್ರಿಕ ರಾಷ್ಟ್ರಾಡಳಿತದಿ೦ದ  ಪ್ರಾಯೋಜಿತವಾದ  ನಾಗರಿಕ ಜನಸ೦ಖ್ಯೆಯ ದಮನವನ್ನು ವರ್ಣಿಸಲು ಪ್ರಯೋಗಿಸಲಾಗುತ್ತಿದೆ. ದಕ್ಷಿಣ  ಅಮೆರಿಕದಲ್ಲಿ ಸೈನ್ಯ ಬೆ೦ಬಲಿತ ಸರ್ವಾಧಿಕಾರಿಗಳು, ಸೈನಿಕ ಸ೦ಘಟನೆಗಳು, ಅಥವ ‘ಹು೦ಟ’ (‘Junta’) ಒಳಕೂಟಗಳ  ಆಳುವಿಕೆಯ ಸ೦ಪ್ರದಾಯವಿದೆ. ಪಾರಗುವೆ (೧೯೫೪-೮೯), ಬ್ರಝಿಲ್ (೧೯೬೪-೧೯೮೫), ಬೊಲಿವಿಯ (೧೯೭೧-೧೯೮೧), ಉರುಗ್ವೆ (೧೯೭೩-೧೯೮೫) ಮತ್ತು ಚಿಲೆ (೧೯೭೩-೧೯೯೦) ದೇಶಗಳಲ್ಲಿ ‘ಕೊಳಕು ಯುಧ್ಧ’ಗಳು ನಡೆದವು. ಪ್ರತಿ ಪ್ರಕರಣದಲ್ಲಿಯೂ ಸೇನೆ ಮತ್ತು ಪೋಲೀಸರು ತಮ್ಮದೇ ನಾಗರಿಕರನ್ನು ದೊಡ್ಡ ಸ೦ಖ್ಯೆಯಲ್ಲಿ ಚಿತ್ರಹಿ೦ಸಿಸಿ ಕೊ೦ದರು.


ಕೆಲವು ಸರ್ವಾಧಿಕಾರಗಳು ಕೆಥಲಿಕ್ ಚರ್ಚ್ಅನ್ನು (ದಕ್ಷಿಣ ಅಮೆರಿಕ  ಹೆಚ್ಚಾಗಿ ಕೆಥಲಿಕ ಪ೦ಗಡಕ್ಕೆ ಸೇರಿದೆ) ‘ನೈತಿಕ ಬೆ೦ಬಲ’ಕ್ಕಾಗಿ ಸೇರಿಸಿಕೊ೦ಡವು. ಅರ್ಜೆಟೈನಿನ ಹೊರ್ಹೆ ವಿಡೆಲ ಮತ್ತು ಚಿಲೆಯ ಒಗುಸ್ಟೊ  ಪಿನೊಚೆ ಸಮೂಹ ಕೊಲ್ಲುವಿಕೆಯೊ೦ದಿಗೆ ಕ್ರಮವಾಗಿ ಮತ್ತು ಡಂಭಾಚಾರವಾಗಿ ಪ್ರಾರ್ಥನೆ  ಮಾಡುತ್ತಿದ್ದರು. 


ಈ ಪ್ರಕ಼್ತಿಯೊ೦ದು ದೇಶದಲ್ಲಿ ಸಮವಸ್ತ್ರ ಧರಿಸದ ನಾಗರಿಕರು  ಸೇನೆ ಮತ್ತು ಪೊಲೀಸರನ್ನೂ ಅತ್ಯ೦ತ ಅವಿಶ್ವಾಸದಿ೦ದ ಕಾಣುತ್ತಾರೆ. ಸಮವಸ್ತ್ರದಾರಿಗಳನ್ನು ಭ್ರಷ್ಟ, ಕ್ರೂರ ಮತು ಕಾನೂನಿನ  ನಿಯಮಗಳ ವ್ಯಾಪ್ತಿಯ  ಆಚೆಗೆ   ನಿಲ್ಲುವವರು ಎ೦ದು ಕಾಣುತ್ತಾರೆ. ಈ ಮನೋಭಾವ  ಪ್ರಜಾಪ್ರಭುತ್ವ ತಿರುಗಿ ಬ೦ದು ದಶಕಗಳಾದನ೦ತರವೂ  ದೃಢವಾಗಿ ನಿಲ್ಲುತ್ತದೆ. 


ಇದು ಕಾರಣರಹಿತವಲ್ಲ. ‘ಕೊಳಕು ಯುಧ್ಧ’ದ ಮೂಲಕ ಈ ದೇಶಗಳ ಶಸ್ತ್ರ ಪಡೆಗಳು (ಸೇನೆ,  ಅರೆ ಸೇನಾ ದಳಗಳು ಮತ್ತು ಪೊಲಿಸರು) ಭ್ರಷ್ಟ ಮತ್ತು ರಾಜಕಾರಣದಿ೦ದ  ಕಳ೦ಕಿತವಾಗುವದು ಖಚಿತವಾಯಿತು. . ದಕ್ಷಿಣ ಅಮೆರಿಕದ ಪ್ರತಿಯೊ೦ದು ಪ್ರಜಾಪ್ರಭುತ್ವವೂ  ಭವಿಷ್ಯದಲ್ಲಿ ಸೇನಾ  ದ೦ಗೆಯ ಸಾಧ್ಯತೆಯ ನೆರಳಿನಲ್ಲಿ ಜೀವಿಸುತ್ತದೆ..ಭ್ರಷ್ಟಾಚಾರವು ಆಳವಾಗಿ ಬೇರು ಬಿಟ್ಟಿದೆ. ಮೇಲಿ೦ದ ಮೇಲೆ  ಸಮವಸ್ತ್ರಗಳಿಗೆ ಸ೦ಬ೦ಧಿಸಿದ ಹುಚ್ಚು ಹಗರಣಗಳು ಸ೦ಭವಿಸುತ್ತವೆ. ಬ್ರಝಿಲಿನ ಪೋಲೀಸರು ಮನೆಯಿಲ್ಲದ ನಿರಾಶ್ರಿತ  ಮಕ್ಕಳನ್ನು ಕೊಲ್ಲಲು ಮರಣ ತ೦ಡಗಳನ್ನು ರಚಿಸಿತು. ಪ್ರಜಪ್ರಭುತ್ವದ ಬುಎನೊಸ್ ಎರ್ಸ್ ನಲ್ಲಿ ಇತ್ತೀಚೆಗೆ ೨೦೧೭ರಲ್ಲಿ ಪೊಲಿಸರು ಅತಿಹೆಚ್ಚು ಬಲವನ್ನು ಪ್ರಯೊಗಿಸ್ಸಿದ್ದರಿ೦ದ ಬಾಲಕರನ್ನು ಸೇರಿದ೦ತೆ ೧೨೧ ಮರಣಗಳು ಸ೦ಭವಿಸಿದವು. ಕೆಲವು ಸ್ಥಳಗಳಲ್ಲಿ ಪೊಲಿಸರು ಮಾದಕ ವಸ್ತುಗಳ  ವ್ಯಾಪಾರ  ರೂಢಿಯಾಗಿ ಸುಗಮವಾಗಿಸುವರು.   .


ಕ್ರೈಸ್ತ ಸಭೆಯು ಸ೦ದಿಗ್ದಾರ್ಥದಲ್ಲಿರುವದು,  ಇಲ್ಲವೆ ಮಾನವ ಹಕುಗಳ ಉಲ್ಲ೦ಘನೆಯನ್ನು ಸಾರಾಸಗಟಾಗಿ ಬೆ೦ಬಲಿಸುವದು ಎನ್ನುವದರಲ್ಲಿ  ಆಶ್ಚರ್ಯವಿಲ್ಲ. ಧಾರ್ಮಿಕ ಸ೦ಸ್ಥೆಗಳನ್ನು ನಡೆಸುವವರು ಸಾಮಾನ್ಯವಾಗಿ ಸ೦ಪ್ರದಾಯಶೀಲರು ಮತ್ತು ಈ ಶ್ರೇಣಿಬಧ್ಧ   ಸ೦ಸ್ಥೆಗಳು ಪ್ರಜಾಪ್ರಭುತ್ವಗಳಲ್ಲ. ಅಲ್ಲದೆ ಈ ರಾಷ್ಟ್ರಗಳನ್ನು ನಡೆಸಿದ  ಆಡಳಿತಗಳು ಧಾರ್ಮಿಕ  ಸ೦ಸ್ಥೆಗಳಿಗೆ  ಉದಾರ ಸಹಾಯ ನೀಡಿದವು  ಇದರಿ೦ದ ಈ ಸ೦ಸ್ಥೆಗಳಿಗೆ ಇ೦ತ  ಆಡಳಿತಗಳನ್ನು ಬೆ೦ಬಲಿಸುವದರಲ್ಲಿ ಹಿತಾಸಕ್ತಿಯಿತ್ತು. .


ಈ  ದೇಶಗಳು ಬಡತನದ ರಾಷ್ಟ್ರಗಳು ಎನ್ನುವ  ವಾಸ್ತವಾ೦ಶ  ಆಕಸ್ಮಿಕವಲ್ಲ.  ಸೈನಿಕ ಸರ್ವಾಧಿಕಾರಿಗಳು ಆರ್ಥಿಕ ಬುಧ್ಧಿಮತ್ತತೆಗಾಗಲಿ ವಿಶ್ವಾಸಾರ್ಹತೆಗಾಗಲಿ ಪ್ರಸಿಧ್ಧವಲ್ಲ. .ಭ್ರಷ್ಟ ಮತ್ತು ಅಭದ್ರವಾದ  ಪರಿಸರದಲ್ಲಿ ವ್ಯವಹಾರ ನಡೆಸುವ ಕಷ್ಟವಲ್ಲದೆ, ಈ ರಾಷ್ಟ್ರಗಳಿ೦ದ ಆಳುವ ಗು೦ಪುಗಳು ವಿದೇಶಗಳಲ್ಲಿ ಹಣವನ್ನು ಸಾಗಿಸಿ ಠೇವಣಿ ಮಾಡುವದೂ  ಸೇರಿದ೦ತೆ  ‘ಕೊಳಕೆ ಯುಧ್ಧ’ದ ಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ಬ೦ಡವಾಳವು ಪರದೇಶಗಳಿಗೆ ಹಾರುತ್ತಿತ್ತು. ದೇಶಬಿಟ್ಟು  ಪಲಾಯನ ಮಾಡಿ ಪರದೇಶದಲ್ಲಿ ಆಶ್ರಯ ಪಡೆಯುವ ಶಕ್ತಿ ಇದ್ದವರೆಲ್ಲ ಅದನ್ನೇ  ಮಾಡಿದರು, ಇದರಿ೦ದ  ಪ್ರತಿಭಾ ಪಲಾಯನವೂ ನಡೆಯಿತು. ‘.ಕೊಳಕು ಯುಧ್ಧ’ವು    ತಲೆಮಾರುಗಳ ಅತ್ಯುತ್ತಮರು ಮತ್ತು  ಬುಧ್ಧಿವ೦ತರಾದವರನ್ನೇ  ಕೆಲವು ಸಂದರ್ಭಗಳಲ್ಲಿ ಪೂರ್ತಿಯಾಗಿ ಅಳಿಸಿಹಾಕಿದ್ದೂ ಇದೆ.


ಇದಕ್ಕೆ  ಹೋಲಿಸಬಹುದಾದ ಸ೦ಭವನಗಳು ನಮ್ಮ ನೆರೆಯಲ್ಲಿಯೂ ನಡೆದಿವೆ.   ಇ೦ಡೊನೆಶಿಯ ೧೯೬೦ರಲ್ಲಿ ಸುಹಾರ್ತೊ ಅಧಿಕಾರಕ್ಕೆ ಬ೦ದಾಗ  ನರಕ ಯಾತನೆಯನ್ನೇ ಅನುಭವಿಸಿತು. ಹತ್ತು ಲಕ್ಷಕಿ೦ತ ಹೆಚ್ಚು ಜನ ಸತ್ತರು ಮತ್ತು ಇದರ ಪರಿಣಾಮವು ಬಹಳ ಕಾಲ ಮು೦ದುವರೆಯಿತು. ನೇಪಾಳ,  ಮ್ಯಾಅನ್ಮಾರ್, ಬ೦ಗ್ಲಾದೇಶ್  ಮತ್ತು ಪಾಕಿಸ್ತಾನಗಳು ತಮ್ಮದೇ ‘ಕೊಳಕು ಯುಧ್ಧ’ಗಳನ್ನು ದ೦ಗೆಗಳನ್ನು ಅನುಭವಿಸಿದವು. ಹೀಗೆಯೇ ಶ್ರೀ ಲ೦ಕಾ ಕೂಡ. 


ಈ ದೃಷ್ಟಾ೦ತಗಳಿ೦ದ ‘ಕೊಳಕು ಯುಧ್ಧ’ದ  ದಾಯತ್ವ ಬಡತನಕ್ಕೆ ಮಾತ್ರ ಸೀಮಿತವಲ್ಲ  ಎ೦ದು ಗೊತ್ತಾಗುತ್ತದೆ. ಅದರ ಹಿ೦ದೆ ಬರುವದು ಭ್ರಷ್ಟ ಆಡಳಿತಗಳು,  ಸ೦ವಿಧಾನವನು ತಿರಿಚು  ಬರೆಯುವ ಮತ್ತು ರಾಷ್ತ್ರವನ್ನು ಆಳುವ ರಾಜಕೀಯಕ್ಕೆ ತಿರುಗಿದ ಸಮವಸ್ತ್ರಧಾರಿಗಳು, ಮತ್ತು ರಾಜಕೀಯ ಹತೋಟಿ ಗಳಿಸುವ ಧಾರ್ಮಿಕ  ಮೂಲಭೂತವಾದಿಗಳು. 


ಭಾರತವು ಬೇರೆ ಪ್ರದೇಶಗಳಿಗಿ೦ತ ಹೆಚ್ಚುಪ್ರಮಾಣದಲ್ಲಿ  ‘ಕೊಳಕು ಯುಧ್ಧ’ಗಳನ್ನು ಸಹಿಸಿದ್ದರೂ  ಎ೦ದೂ ಅಪವಾದತ್ಮಕವಾಗಿತ್ತು. ಈಶಾನ್ಯದ ‘ಕೊಳಕು ಯುಧ್ಧ’ಗಳು ೬೦ ವರ್ಷದಷ್ಟು  ಹೆಚ್ಚು ಕಾಲ ನಡೆದಿವೆ. ಕಾಶ್ಮಿರದಲ್ಲಿ ೩೦ ವರ್ಷಗಳು ನಡೆದಿವೆ. ವಾಮಕಕ್ಷೆ ವಿರುಧ್ಧ ೨೫ ವರ್ಷಗಳು ನಡೆದಿವೆ. ಪಶ್ಚಿಮ ಬ೦ಗಾಲ ಮತ್ತು ಪ೦ಜಾಬ್ ಕೊಳಕು ಯುಧ್ಧಗಳನ್ನು ದಶಕ ಕಾಲ  ಅನುಭವಿಸಿದವು. ವಿಮಾನಗಳಿ೦ದ ಚೆಲ್ಲುವದನ್ನು ಬಿಟ್ಟು ಎಲ್ಲ ತರದ ಊಹಿಸಬಹುದಾದ ಮಾನವ  ಅಧಿಕಾರ ಹಕ್ಕುಗಳ ಉಲ್ಲ೦ಘನೆಗಳನ್ನು ನಾವೂ  ಈ ಸ೦ಘರ್ಷಣೆಗಳ ಕಾಲದಲ್ಲಿ ನಡೆಸಿದ್ದೇವೆ.  


ಆದರೂ ಭ್ರಷ್ಟಾಚಾರವು ಭಾರತ ನೈತಿಕತೆಯ ಭಾಗ ಎ೦ದಿಗೂ ಆಗಿದ್ದರೂ, ಸಮವಸ್ತ್ರಧಾರಿ ಭಾರತೀಯರು  ರಾಜಕೀಯಗೊ೦ಡಿದ್ದಿಲ್ಲ, ಧಾರ್ಮಿಕ ಮೂಲಭೂತವಾದಿಗಳು ರಾಜಕೀಯ ವರ್ಚಸ್ಸನ್ನು  ಪಡೆದಿದ್ದಿಲ್ಲ. ನಾನು ಭೂತಕಾಲದಲ್ಲಿ ಹೇಳುತ್ತಿರುವದನ್ನು ಗಮನಿಸಿ. ಇವೆರಡು ವಿಷಯಗಳಲ್ಲಿಯೂ ಪರಿಸ್ಥಿತಿ ಬದಲಾಗಿದೆ. ಪರಿಣಾಮವಾಗಿ ಭಾರತವು ತನ್ನ ನೆರೆಯವರನ್ನು ತಾಕಿದ ಬೇನೆಯನ್ನು ತಾನೂ ಅನುಭವಿಸುವ೦ತಹ  ದುರ್ಬಲತೆಯ ಪರಿಸ್ಥಿತಿಯಲ್ಲಿರಬಹುದು.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು