ಪಂಜಾಬ: ತೀಕ್ಷ್ಣವಾದ ವಿಭಜನೆಗಳು, ಭೂರಹಿತತೆ, ಉದಾಸೀನತೆಯು ಬಲವಾದ ಪರಿಶಿಷ್ಟ ಜಾತಿ ನಾಯಕತ್ವದ ಕೊರತೆಗೆ ಕಾರಣ
ದಿ ಹಿ೦ದು ಚಂಡೀಗಢ ಜನವರಿ 03, 2022ಟ
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ. ಕಡತ | ಫೋಟೋ ಕ್ರೆಡಿಟ್: PTI
ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಶೇಕಡಾ ಜನಸಂಖ್ಯೆಯು ಪ೦ಜಾಬಿನಲ್ಲಿದ್ದು, ವಿಘಟಿತವಾಗಿದೆ ಮತ್ತು ತಕ್ಕ ಪ್ರಾತಿನಿಧ್ಯವನ್ನು ಹೊ೦ದುತ್ತಿಲ್ಲ
ಪಂಜಾಬ್ ಭಾರತದಲ್ಲಿ ಅತಿ ಹೆಚ್ಚು - ಶೇಕಡಾ 32% ರಷ್ಟು - ಪರಿಶಿಷ್ಟ ಜಾತಿಯ ಜನಸಂಖ್ಯೆಯ ಶೇಕಡಾವಾರನ್ನು ಹೊಂದಿರುವ ರಾಜ್ಯವಾಗಿದೆ, ಆದರೂ ಸಮುದಾಯವು ಪ್ರಮುಖ ರಾಜಕೀಯ ಪಕ್ಷಗಳಾದ್ಯಂತ ಪ್ರಬಲವಾದ ನಾಯಕರ ಉದ್ಭವವನ್ನು ಕ೦ಡಿಲ್ಲ. ಪ. ಜಾತಿಗಳೊಳಗಿನ ತೀಕ್ಷ್ಣವಾದ ಜಾತಿ ವಿಭಜನೆಗಳು, ಭೂರಹಿತತೆ ಮತ್ತು ರಾಜಕೀಯ ಪಕ್ಷಗಳಲ್ಲಿನ ಅಸಡ್ಡೆಗಳು ಅವರ ನಾಯಕತ್ವದ ಏರಿಕೆಗೆ ಪ್ರಮುಖ ಪ್ರತಿಬಂಧಕಗಳಾಗಿವೆ.
2022 ರ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ, ಕಾಂಗ್ರೆಸ್ ಪಕ್ಷ ಚರನ್ ಜಿತ್ ಸಿಂಗ್ ಚನ್ನಿಯವರನ್ನು ಮುಖ್ಯಮಂತ್ರಿಯಾಗಿ ನೇಮಿಸುವ ಮುಷ್ಟಿ ಹೊಡೆತದಿ೦ದ ಪಂಜಾಬ್‌ನ ರಾಜಕೀಯ ಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯವನ್ನು ಮತ್ತೆ ಗಮನಕ್ಕೆ ಕೇ೦ದ್ರೀಕರಿಸಿತು.
ಪಂಜಾಬಿನ ಪರಿಶಿಷ್ಟ ಜಾತಿಗಳು, ದೇಶದ ಇತರ ಭಾಗಗಳಲ್ಲಿಯ ಅವರ ಸಹವರ್ತಿಗಳಂತೆ, ಏಕರೂಪದ ಸಮುದಾಯವಲ್ಲ. ಅವರು 39 ಜಾತಿಗಳು ಮತ್ತು ಐದು ಪ್ರಮುಖ ಧರ್ಮಗಳಾಗಿ ಚದುರಿಹೋಗಿದ್ದಾರೆ. ಪಂಜಾಬಿನ ಪರಿಶಿಷ್ಟ ಜಾತಿಗಳು ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಬೌದ್ಧರು, ಅಲ್ಲದೆ ರವಿದಾಸಿ, ರಾಮದಾಸಿ, ಕವಿರ್ ಪ೦ಥಿ ಮತ್ತು ರಾಧಾಸೋಮಿಗಳಂತಹ ಅನೇಖ ಪಂಥಗಳು ಮತ್ತು ನಂಬಿಕೆಗಳ ಅನುಯಾಯಿಗಳನ್ನು ಒಳಗೊಂಡಿರುತ್ತಾರೆ.
ಸಮುದಾಯದೊಳಗಿನ ತೀಕ್ಷ್ಣವಾದ ಜಾತಿ-ಧಾರ್ಮಿಕ ವಿಭಜನೆಯನ್ನು ಒತ್ತಿಹೇಳುತ್ತಾ, ಪಂಜಾಬ್ ವಿಶ್ವವಿದ್ಯಾನಿಲಯದ ರಾಜಕೀಯ ವಿಜ್ಞಾನದ ಪ್ರಾಧ್ಯಾಪಕರಾದ ಶಾಹೀದ್ ಭಘತ್ ಸಿಂಗ್ ಚೇರ್ ಪ್ರೊಫೆಸರ್ ರೋಂಕಿ ರಾಮ್, “ಅವರ 39 ಜಾತಿಗಳಲ್ಲಿ, ಎರಡು ಜಾತಿ ಗುಂಪುಗಳು ಒಟ್ಟು ಎಸ್‌ಸಿ ಜನಸಂಖ್ಯೆಯ 80% ರಷ್ಟಿವೆ (31.91%, 2011 ಜನಗಣತಿ). ಈ ಎರಡು ಜಾತಿ ಗುಂಪುಗಳು ನಾಲ್ಕು ಜಾತಿಗಳನ್ನು ಒಳಗೊಂಡಿವೆ - ವಾಲ್ಮೀಕಿಗಳು ಮತ್ತು ಮಜ ಹಬಿಗಳು, ಚಮಾರ್ ಗಳು ಮತ್ತು ಅದ್-ಧರ್ಮಿಗಳು. ಈ ಎರಡು ಮುಖ್ಯ ಜಾತಿ ಗುಂಪುಗಳಲ್ಲಿ ಪ್ರತಿಯೊಂದೂ ಪಂಜಾಬ್‌ನ ಒಟ್ಟು ಪ ಜಾತಿ ಜನಸಂಖ್ಯೆಯ 40% ಜನಸಂಖ್ಯೆಯನ್ನು ಒಳಗೊಂಡಿದೆ. ರಾಜಕೀಯವಾಗಿಯೂ, ಅವರು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಸೈದ್ಧಾಂತಿಕ ಮಾರ್ಗಗಳಲ್ಲಿ ಸಮಾನವಾಗಿ ವಿಂಗಡಿಸಲಾಗಿದೆ. 25% ರಷ್ಟು ಇರುವ ಪ ಜಾತಿ ಮೀಸಲಾತಿಯನ್ನು ವಾಲ್ಮೀಕಿ ಮತ್ತು ಮಜಹಬಿ ಜಾತಿಗಳಿಗೆ 12.5% ರಷ್ಟು, ಮತ್ತು ಉಳಿದ 37 ಪ ಜಾತಿಗಳಿಗೆ ಉಳಿದ 12.5% ರಷ್ಟು, ವಿಭಜಿಸುವಲ್ಲಿ ಅವರ ರಾಜಕೀಯ ವಿಭಜನೆಯು ಸ್ಪಷ್ಟವಾಗಿ ಪ್ರದರ್ಶಿಸಲ್ಪಟ್ಟಿದೆ. ಪಂಜಾಬಿನ ಪ ಜಾತಿಗಳೊಳಗೆ ಹಲವು ವರ್ಷಗಳಿಂದ ಬೆಳೆದು ಬ೦ದ ಜಾತಿ ಮತ್ತು ಧಾರ್ಮಿಕ ವಿಭಾಗಗಳು ಅವರು ತಮ್ಮದೇ ಆದ ವಿಶಿಷ್ಟ ಮತ್ತು ಪರಿಣಾಮಕಾರಿ ರಾಜ್ಯ-ಮಟ್ಟದ ನಾಯಕತ್ವವನ್ನು ಅಭಿವೃದ್ಧಿಪಡಿಸುವುದನ್ನು ತಡೆಯುತ್ತವೆ. ರಾಜ್ಯ ಮಟ್ಟದಲ್ಲಿ ಪ ಜಾ-ಆಧಾರಿತ ನಾಯಕತ್ವವನ್ನು ಬೆಳೆಸುವುದು ಕಷ್ಟಕರವಾದ ಕಾರಣ, ವಿವಿಧ ಜಾತಿ-ಆಧಾರಿತ ಪ ಜಾತಿ ಬಣಗಳು 34 ಮೀಸಲು ಅಸೆಂಬ್ಲಿ ಸ್ಥಾನಗಳಲ್ಲಿ ಚುನಾಯಿತರಾಗಲು ಪಂಜಾಬ್‌ನ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಕೈ ಜೋಡಿಸುತ್ತಾರೆ. ಪಂಜಾಬ್ ನಲ್ಲಿ ಒಟ್ಟು 117 ವಿಧಾನಸಭಾ ಕ್ಷೇತ್ರಗಳಿವೆ.
ಇದಲ್ಲದೆ, ಕೃಷಿಭೂಮಿಯ ಮಾಲೀಕತ್ವದ ಪ್ರಾಬಲ್ಯದಲ್ಲಿ ಪ ಜಾತಿ ಗಳು ಜಾಟ್ ಸಿಖ್‌ರ ಮು೦ದೆ ಯಾವ ಲೆಕ್ಕಕ್ಕೂ ಬರುವದಿಲ್ಲ. ರಾಜ್ಯದಲ್ಲಿನ ಬಹುಪಾಲು ಪ ಜಾತಿಗಳು, ಜಾಟ್ ಸಿಖ್ಖರ ಕೆಳಗೆ ಕೃಷಿ ಕಾರ್ಮಿಕರಾಗಿದ್ದು, ಆರ್ಥಿಕವಾಗಿ ಬಲಿಷ್ಠ ಸಮುದಾಯವಾಗಿರುವ ಜಾಟ್ ಸಿಖ್ಖರು , ಕಾಂಗ್ರೆಸ್ ಅಥವಾ ಶಿರೋಮಣಿ ಅಕಾಲಿ ದಳದಲ್ಲಿ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.
ಪಂಜಾಬ್ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಅಶುತೋಷ್ ಕುಮಾರ್ ವಿವರಿಸುತ್ತಾರೆ: “ಪಂಜಾಬ್ ಒಂದು ಕೃಷಿ ಆರ್ಥಿಕತೆಯಾಗಿದೆ ಮತ್ತು ಪ ಜಾತಿಗಳು ಪಂಜಾಬ್‌ನಲ್ಲಿ ಕನಿಷ್ಟ ಭೂಮಿಯನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಒಬ್ಬ ಬಲಿಷ್ಠ ದಲಿತ ನಾಯಕ ಉದಯಿಸದೇ ಇರುವುದಕ್ಕೆ ಇದೇ ಪ್ರಮುಖ ಕಾರಣ. ಪಂಜಾಬ್‌ನಲ್ಲಿ, ಕೃಷಿ ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಜಾಟ್ ಸಿಖ್‌ಗಳು ಪ್ರಾಬಲ್ಯ ಹೊಂದಿದ್ದಾರೆ. ಮತ್ತೊಂದೆಡೆ, ಪ ಜಾತಿಗಳು ಕಡಿಮೆ ಭೂಮಿಯನ್ನು ಹೊಂದಿದ್ದಾರೆ. ವಾಸ್ತವವಾಗಿ, ಹೆಚ್ಚಿನ ಸಂಖ್ಯೆಯ ಪ ಜಾತಿಗಳು ಜಾಟ್ ಸಿಖ್‌ಗಳ ಕೃಷಿ ಭೂಮಿಯಲ್ಲಿ ಕೆಲಸಗಾರರಾಗಿ ತೊಡಗಿಸಿಕೊಂಡಿದ್ದಾರೆ. ಪ ಜಾತಿ ಗಳ ನಡುವಿನ ಧಾರ್ಮಿಕ ಮತ್ತು ಜಾತಿ ವಿಭಜನೆಯು ಮತ್ತೊಂದು ಕಾರಣವಾಗಿದೆ.
ಬಹುಜನ ಸಮಾಜ ಪಕ್ಷವು 1992 ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ದಲಿತರನ್ನು ರಾಜಕೀಯ ತಾಣವಾಗಿ ತೋರಿಸಿತು, ಅದು 16% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿ ಒಂಬತ್ತು ಸ್ಥಾನಗಳನ್ನು ಗೆದ್ದಿತು, ಆದರೆ ನಂತರ, ಪಕ್ಷವು ಅದರ ಬೆಂಬಲವು 2017 ರ ಅಸೆಂಬ್ಲಿ ಚುನಾವಣೆಯಲ್ಲಿ ಸುಮಾರು 1.5 % ಮತಗಳಿಗೆ ಇಳಿಯುವುದನ್ನು ಕಂಡಿದೆ.
ರಾಜಕೀಯ ವೀಕ್ಷಕರು ಪ ಜಾತಿಗಳ ಬಗ್ಗೆ ರಾಜಕೀಯ ಪಕ್ಷಗಳ ಅಸಡ್ಡೆಯ ಧೋರಣೆಯು ಪಂಜಾಬಿನ ರಾಜಕೀಯದಲ್ಲಿ ಪ್ರಬಲ ಪ ಜಾತಿ ನಾಯಕತ್ವ ಹೊರಹೊಮ್ಮದಿರಲು ಮತ್ತೊಂದು ಪ್ರಮುಖ ಕಾರಣವೆಂದು ಭಾವಿಸುತ್ತಾರೆ. ಗದರ್ ಚಳವಳಿ, ಪ ಜಾತಿ ಸಮಸ್ಯೆಗಳು ಮತ್ತು ರಾಜ್ಯದ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಕೇಂದ್ರೀಕರಿಸಿದ ಪ್ರಸಿದ್ಧ ಪಂಜಾಬಿ ಕಾದಂಬರಿಕಾರ ಮತ್ತು ರಾಜಕೀಯ ವಿಶ್ಲೇಷಕ ದೇಸ್ ರಾಜ್ ಕಾಲಿ, ರಾಜಕೀಯ ಪಕ್ಷಗಳು - ಕಾಂಗ್ರೆಸ್, ಶಿರೋಮಣಿ ಅಕಾಲಿ ದಳ ಅಥವಾ ಇತರರು - ಓಲೈಕೆ ರಾಜಕಾರಣ ಬಿಟ್ಟು ಪ ಜಾತಿಗಳಿಗೆ ಮಹತ್ವದ ಏನನ್ನೂ ಮಾಡಿಲ್ಲ ಎನ್ನುತ್ತಾರೆ.
"ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಅಕಾಲಿದಳದ ನಾಯಕತ್ವವು ಜಾಟ್ ಸಿಖ್ಖರ ಪ್ರಾಬಲ್ಯದಲ್ಲಿದೆ. ತಮ್ಮ ಪ್ರಾಬಲ್ಯ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಅವರು ಯಾವುದೇ ದಲಿತ ನಾಯಕನನ್ನು ಎಂದಿಗೂ ಬೆಳೆಸಲಿಲ್ಲ. ಈಗಲಾದರೂ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ನೇಮಕ ಮಾಡಿರುವುದು ಬಲವಂತದಿಂದಲೇ ನಡೆದಿರುವ ಕ್ರಮ. ಮೊದಲನೆಯದಾಗಿ, ಅಂಬಿಕಾ ಸೋನಿ ಅವರು ಮುಖ್ಯಮಂತ್ರಿ ಸ್ಥಾನದ ಪ್ರಸ್ತಾಪವನ್ನು ನಿರಾಕರಿಸಿದರು, ನಂತರ ಪಕ್ಷವು ಸುನಿಲ್ ಜಾಖರ್ ಮತ್ತು ಸುಖಜಿಂದರ್ ರಾಂಧವಾ ಅವರ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಚನ್ನಿ ಹೆಸರು ಪರಿಗಣನೆಯಲ್ಲಿ ಇದ್ದೇ ಇರಲಿಲ್ಲ. ಪಕ್ಷವು ತನ್ನ ಪ್ರಾಥಮಿಕ ಆಯ್ಕೆಗಳನ್ನು ಕಳೆದುಕೊಂಡ ನಂತರವೇ ಅವರ ಹೆಸರು ಚರ್ಚೆಗೆ ಬಂದಿತು, ”ಎಂದು ಶ್ರೀ ಕಾಲಿ ಸೂಚಿಸುತ್ತಾರೆ.
ರಾಜ್ಯದ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ತಮ್ಮ ಪ್ರದೇಶವಾರು ಪ ಜಾತಿ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡಿವೆ ಎಂದು ಪ್ರೊಫೆಸರ್ ರಾಮ್ ಗಮನಿಸುತ್ತಾರೆ, ಇದು ಪಂಜಾಬ್‌ನ ಪ ಜಾತಿಗಳಲ್ಲಿ ಮತ್ತಷ್ಟು ಗುಂಪುಗಾರಿಕೆಯನ್ನು ಪ್ರೇರೇಪಿಸಿತು. "ಬಹುಜನ ಸಮಾಜ ಪಕ್ಷದ ಬಾಬು ಕಾನ್ಶಿ ರಾಮ್ ಅವರು ಪಂಜಾಬ್‌ನಲ್ಲಿ ಪ ಜಾತಿಗಳೊಳಗಿನ ವಿವಿಧ ಜಾತಿಗಳ ನಡುವೆ ರಾಜಕೀಯ ಐಕ್ಯತೆಯನ್ನು ತರಲು ಶ್ರಮಿಸಿದರು, ಆದರೆ ನ೦ತರ ಹೆಚ್ಚಿನ ಯಶಸ್ಸನ್ನು ಕಂಡುಕೊಳ್ಳದೆ ಅವರು ತಮ್ಮ ಗಮನವನ್ನು ಉತ್ತರ ಪ್ರದೇಶಕ್ಕೆ ಬದಲಾಯಿಸಿದರು" ಎಂದು ಅವರು ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ