ಪ್ರಜಾಪ್ರಭುತ್ವದ ಪತನ 

 

'ಮೋದಿಯ ಭಾರತ : ಹಿಂದೂ ರಾಷ್ಟ್ರೀಯತೆ ಹಾಗೂ ಜನಾಂಗೀಯ ಪ್ರಜಾಪ್ರಭುತ್ವದ  ಬೆಳವಣಿಗೆ' - ಕ್ರಿಸ್ಟೊಫ಼ೆ ಜಾಫ಼್ರೆಲೊ ಪುಸ್ತಕ ವಿಮರ್ಶೆ

 

‘Modi’s India: Hindu Nationalism and the Rise of Ethnic Democracy’ Christophe Jaffrelot

 

ಅನನ್ಯ ವಾಜಪೇಯಿ

ದಿ ಹಿ೦ದು ಇ೦ಗ್ಲಿಷ್ ದಿನ ಪತ್ರಿಕೆ ಡಿಸೆಂಬರ್ 11, 2021 1

 

ಭಾರತದ ಪ್ರತಿ ತರಂಗವನ್ನು ಅಭ್ಯಸಿಸಿರುವ   ಕ್ರಿಸ್ಟೊಫೆ ಜಾಫ಼್ರೆಲೊ , ದೇಶದ  ಒಂದು ದಶಕದ ಹಿಂದೆ ಇದ್ದ ಉದಾರವಾದಿ ಜಾತ್ಯತೀತ ರಾಜ್ಯ ವ್ಯವಸ್ಥೆ ಈಗ ಬಹುಶಃ ಮಾರ್ಪಡಿಸಲಾಗದ ಇಂದಿನ ಬಹುಸಂಖ್ಯಾತ 'ಜನಾಂಗೀಯ ಪ್ರಜಾಪ್ರಭುತ್ವ' ವಾಗಿ ಬದಲಾಯಿಸಲಾಗಿದೆ ಎ೦ದು ಹೇಳುತ್ತಾರೆ.

 1990ರಿ೦ದ ಆರ೦ಭಿಸಿ , ಫ್ರೆಂಚ್ ರಾಜಕೀಯ ವಿಜ್ಞಾನಿ ಕ್ರಿಸ್ಟೊಫೆ ಜಾಫ಼್ರೆಲೊ   ವರ್ತಮಾನದಲ್ಲಿ ಭಾರತೀಯ ರಾಜಕೀಯ ಪ್ರತಿ ಅಲೆಯನ್ನು ಅದು ಶಿಖರಕ್ಕೇರಿದ೦ತೆ ವಿಶ್ಶ್ಲೇಷಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಅವರು ಭಾರತದ ಎಲ್ಲಾ ಪ್ರಮುಖ ರಾಜಕೀಯ ವಿದ್ಯಮಾನಗಳ ಕುರಿತು ಫ್ರೆಂಚ್ ಮತ್ತು ಇಂಗ್ಲಿಷ್‌ನಲ್ಲಿ ಸುಮಾರು 30 ಗ್ರ೦ಥಗಳು, ಪುಸ್ತಿಕೆಗಳು  ಮತ್ತು ಸಂಪಾದಿತ ಸಂಪುಟಗಳನ್ನು ರಚಿಸಿದ್ದಾರೆ.

ಈ ವಿದ್ಯಮಾನಗಳೆ೦ದರೆ : ಹಿಂದೂ ರಾಷ್ಟ್ರೀಯತೆಯ ಉದಯ; ಜಾತಿ ರಾಜಕಾರಣದ ಸ್ಫೋಟ (ದಲಿತ ಮತ್ತು ಒಬಿಸಿ ಸಜ್ಜುಗೊಳಿಸುವಿಕೆ, ಬಿ.ಆರ್. ಅಂಬೇಡ್ಕರ್ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಮತ್ತು ಮಂಡಲ್ ನಂತರದ ಮೀಸಲಾತಿ ನೀತಿ ಸೇರಿದಂತೆ); ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ಹದಗೆಡುತ್ತಿರುವ ಸ್ಥಿತಿ; ಪಾಕಿಸ್ತಾನಿ ರಾಜ್ಯದ ಪಥಗಳು ಮತ್ತು ಭಾರತ-ಪಾಕ್ ಸಂಘರ್ಷದ ಬೇರೂರುವಿಕೆ; ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದಿಂದಾಗಿ ಭಾರತೀಯ ಮಧ್ಯಮ ವರ್ಗದ ವಿಸ್ತರಣೆ; ಮಾರುಕಟ್ಟೆ ಸುಧಾರಣೆಗಳ ನಂತರ ಭಾರತೀಯ ವ್ಯಾಪಾರ-ವ್ಯವಹಾರದಲ್ಲಿ ಉತ್ಕರ್ಷ; ಮತ್ತು ಅತ್ಯಂತ ಗಮನಾರ್ಹವಾಗಿ, ಸಂಘಪರಿವಾರ ಮತ್ತು ಅದರ ಸಿದ್ಧಾಂತದ ಧೈರ್ಯವು ಹಿಂದುತ್ವವನ್ನು ಯುಪಿ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ತನ್ನ ತವರು ನೆಲದಿಂದ ಇಡೀ ದೇಶಕ್ಕೆ ಸೋಂಕು ತಗುಲಿಸುವ ಹಂತಕ್ಕೆ ತಿರುಗಿಸಿದ ರೀತಿ..

ಅಯೋಧ್ಯೆಯಿಂದ ಅಹಮದಾಬಾದ್ ಮತ್ತು ಮು೦ಬಯಿಯಿಂದ ಬನಾರಸ್; ನಾಗಪುರದಿಂದ ದೆಹಲಿಗೆ ಮತ್ತು ಲಕ್ನೋದಿಂದ ಬೆಂಗಳೂರಿಗೆ; ನಾಗಾ ಎತ್ತರದ ಪ್ರದೇಶದಿಂದ ನಕ್ಸಲ್ ಕಾಡುಗಳವರೆಗೆ ಮತ್ತು ಲಾಹೋರ್‌ನಿಂದ ಕರಾಚಿಯವರೆಗೆ - ಉಪಖಂಡದಲ್ಲಿ ಗಮನಿಸಬೇಕಾದ ಏನಾದರೂ ಸಂಭವಿಸಿದಾಗ, ಅದು ರಾಜಕೀಯ, ಮತಧರ್ಮ ಅಥವಾ ಜಾತಿಯ ಕ್ಷೇತ್ರದಲ್ಲಿ (ಅಥವಾ ಈ ಅಂಶಗಳ ಪ್ರಬಲ ಮಿಶ್ರಣದಲ್ಲಿ) ಎಲ್ಲೇ ಇರಲಿ, ಜಾಫ್ರೆಲಾ ಅವುಗಳನ್ನು ಖಚಿತವಾಗಿ ವಿವರಿಸುತ್ತಾರೆ ಮತ್ತು ಅದನ್ನು ವಿಶ್ಲೇಷಿಸಿ ಬರೆಯುತ್ತಾರೆ. ಹೀಗಿರುವಲ್ಲಿ  ಅವರ ಹೊಸ ಪುಸ್ತಕವು ನರೇಂದ್ರ ಮೋದಿಯ ಪ್ರಭಾವದಿಂದ ಭಾರತೀಯ ರಾಜಕೀಯದಲ್ಲಿ ಆಗಿರುವ ಸ೦ಪೂರ್ಣ  ಬದಲಾವಣೆಯನ್ನು ಸಮಗ್ರವಾಗಿ ನೋಡುವುದು ಅನಿವಾರ್ಯವಾಗಿತ್ತು.  ‘ಮೋದಿಯ ಭಾರತ’  ಜಾಗತಿಕ ಸಾಂಕ್ರಾಮಿಕವು  ತನ್ನ ಖಾತೆಯನ್ನು  ಇನ್ನೂ ಇದೇ ತೆರೆದಿಡುತ್ತಿರುವ ಸಮಯದಲ್ಲಿಯೇ ,  ಹೇಳುವುದು ಏನ೦ದರೆ,   ಜೋರಾಗಿ ಹೇಳುವ   ಸಂದೇಶವು  ಸ್ಪಷ್ಟವಾಗಿದೆ : ಒಂದು ದಶಕಕ್ಕೆ ಕಡಿಮೆ ಹಿಂದೆ ಅಸ್ತಿತ್ವದಲ್ಲಿದ್ದ  ಭಾರತ, ಎಂಬ ಉದಾರವಾದಿ ಜಾತ್ಯತೀತ ಪ್ರಜಾಪ್ರಭುತ್ವವು ಇದೀಗ   ಬಹುಶಃ   ಮಾರ್ಪಡಿಸಲಾಗದ ಬಹುಸಂಖ್ಯಾತ "ಜನಾಂಗೀಯ ಪ್ರಜಾಪ್ರಭುತ್ವ"ವಾಗಿ  ಇಂದು ಬದಲಾಗಿದೆ.

ಆದರ್ಶಗಳಿಗೆ ಹೊಡೆತಗಳು

2013 ರ ಶರತ್ಕಾಲದಲ್ಲಿ ಮೋದಿ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ ಸಮಯದಿಂದ ಭಾರತೀಯ ಗಣರಾಜ್ಯದ ಸ್ಥಾಪಕ ಆದರ್ಶಗಳನ್ನು ಆಕ್ರಮಣ ಮಾಡಿದ ನಖಶಿಖಾ೦ತ  ಹೊಡೆತಗಳ ನಿರಂತರವಾಗಿ ವಿಸ್ತರಿಸುತ್ತಿರುವ ಪಟ್ಟಿಯನ್ನು   ಜಾಫ್ರೆಲೊ  ಕ್ರಮವಾಗಿ ವರ್ಣಿಸುತ್ತಾರೆ. ಮುಸ್ಲಿಮರು ಮತ್ತು ದಲಿತರ ಹತ್ಯೆಯ ಸ೦ಭವಗಳಿ೦ದ ತೊಡಗಿ, ವಿಚಾರವಾದಿ ಬುದ್ಧಿಜೀವಿಗಳ ಕೊಲೆ, ಸಾಮಾಜಿಕ ತಾಣಗಳಲ್ಲಿ ವಿದ್ವಾಂಸರ ವಿರುಧ್ಧ ಅನಾಗರಿಕ ಅವಾಚ್ಯ ಬೈಗಳು, ಹೋರಾಟಗಾರರ ಬಂಧನ, ಸಿನಿಮಾ ತಾರೆಯರ ಕಿರುಕುಳ, ಮಾಧ್ಯಮ, ವಿಶ್ವವಿದ್ಯಾನಿಲಯಗಳು ಮತ್ತು ನ್ಯಾಯಾಲಯಗಳ ತಿವಿತ-ತೆರವುಗೊಳಿಸುವಿಕೆ, ಪ್ರತಿಪಕ್ಷಗಳ ನಿರ್ನಾಮ, ಆರ್ಥಿಕತೆಯ ನಾಶ, ಅಲ್ಪಸಂಖ್ಯಾತರ ಶೋಷಣೆ, ಮೂಲಭೂತ ಹಕ್ಕುಗಳ ಸವಕಳಿ, ಸಾರ್ವಜನಿಕ ವಲಯದ ಹರಣ, ಸರ್ಕಾರೇತರ  ಸೇವಾ ಸ೦ಸ್ಥೆಗಳನ್ನು ಆಡಳಿತವು ಕಿರಿಕಿರಿಗೆ ಗುರಿಯಾಗಿಸುವುದು, ನಾಗರಿಕ ಸಮಾಜವನ್ನು ಮೌನಗೊಳಿಸುವುದು, ಇತಿಹಾಸವನ್ನು ವಿರೂಪಗೊಳಿಸುವುದು, ದ್ವೇಷದ ಭಾಷಣ, ನಕಲಿ ಸುದ್ದಿ ಮತ್ತು ಪ್ರಚಾರದಿಂದ ಸಾಮಾಜಿಕ ಮಾಧ್ಯಮಗಳ ಕಬಳಿಕೆ, ಆಡಳಿತ ಪಕ್ಷದಿ೦ದ ಸಂಸತ್ತಿನ ಕಾರ್ಯವಿಧಾನವನ್ನು ಧಿಕ್ಕರಿಸುವುದು ಮತ್ತು ಅವಹೇಳನ ಮಾಡುವುದು, ಭಿನ್ನಾಭಿಪ್ರಾಯದ ರಾಕ್ಷಸೀಕರಣ, ಅನಧಿಕಾರಿ ಸ್ವಯ೦ಘೋಷಿತ ‘ಜಾಗರೂಕ’ ಗು೦ಪುಗಳ  ಉತ್ತೇಜನ, ಕಾಶ್ಮೀರ ಕಣಿವೆಯ ಮಿಲಿಟರಿ ಕಾವಲು, ಸ೦ವಿಧಾನಕ್ಕೆ  ಹೊಡೆತ , ಮತ್ತು ಸತ್ಯದ ವರ್ಜನ -  ನಾವೇ ಕ೦ಡಿರುವ೦ತಹ  ಈ ಭಯಾನಕ ಪಟ್ಟಿಯನ್ನು ಜೋಡಿಸಿ ಪ್ರಕಟಿಸಲು  ಸುಮಾರು 700 ಪುಟಗಳು ಏಕೆ ಬೇಕು ಎಂದು ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು .

ಆದರೆ ಪುಸ್ತಕವು ಕೇವಲ ನಿಖರವಾದ, ಪುಷ್ಕಳ ದಾಖಲಾತಿಗಳ ಕ್ರಿಯೆಯಲ್ಲ,  ಅದು ಕೂಡ ಆಗಿದ್ದರೂ. ಭವಿಷ್ಯದ ಪೀಳಿಗೆಗಳು ಭಾರತೀಯ ಪ್ರಜಾಪ್ರಭುತ್ವದ ತ್ವರಿತ ಕುಸಿತವನ್ನು ವಿವರಿಸಲು ಹೆಣಗಾಡುತ್ತಿರುವಾಗ ಇದು ನಮ್ಮ ಸಮಯದ ಅಮೂಲ್ಯ ದಾಖಲೆಯನ್ನು ಸಾಬೀತುಪಡಿಸುತ್ತದೆ. ಸಮಾನ ಪೌರತ್ವ, ಸಾರ್ವತ್ರಿಕ ವಯಸ್ಕರ ಚುನಾವಣಾ ಪಧ್ಧತಿ,  ನಿಯಮಿತ ಚುನಾವಣೆಗಳು, ಪ್ರಾತಿನಿಧಿಕ ಸರ್ಕಾರ, ಅಲ್ಪಸಂಖ್ಯಾತರ ರಕ್ಷಣೆ, ಮುಕ್ತ ಪತ್ರಿಕಾ ಮತ್ತು ಜನಪ್ರಿಯ ಸ್ವ-ಆಡಳಿತದಲ್ಲಿ ವಿಶ್ವದ ಅತಿದೊಡ್ಡ, ಜೀವಂತ ಮತ್ತು ಅತ್ಯಂತ ಆಸಕ್ತಿದಾಯಕ ಪ್ರಯೋಗವಾಗಿ ಕ೦ಡುಬರುತ್ತಿದ್ದ, ಭಾರತವು ಯಾವಾಗಲೂ ಕಾಶ್ಮೀರ ಮತ್ತು ಈಶಾನ್ಯದಂತಹ ಅಪವಾದದ ಸಮಸ್ಯಾತ್ಮಕ ಪ್ರದೇಶಗಳನ್ನು ಹೊಂದಿತ್ತು. ಆದರೆ ಮೋದಿಯವರಿಗಿಂತ ಮೊದಲು, ವೈವಿಧ್ಯತೆ ಮತ್ತು ಬಹುತ್ವದ ಬಗ್ಗೆ ಅದರ ಮೂಲಭೂತ ಬದ್ಧತೆ ನಿಜವೆಂದೇ ತೋರಿತ್ತು.

ಕಳೆದ 7-8 ವರ್ಷಗಳಲ್ಲಿ ಉದಾರವಾದಿ ಒಮ್ಮತವನ್ನು ಬಿಡಿಸಿಬಿಟ್ಟು ನಾಶಪಡಿಸಲು  ಏನು ಮಾಡಲಾಗುತ್ತಿದೆ ಎಂಬುದನ್ನು ಜಾಫ್ರೆಲೊ  ನಮಗೆ ನೆನಪಿಸುವುದು ಮಾತ್ರವಲ್ಲ. ಜನಾಂಗೀಯ ಪ್ರಜಾಪ್ರಭುತ್ವ, ಜನಪ್ರಿಯತ್ವವಾದಿ ಪ್ರಬಲರು, ಬಲಪಂಥೀಯ ರಾಷ್ಟ್ರೀಯತೆ, ವರ್ಚಸ್ವಿ ನಾಯಕತ್ವ, ರಾಜ್ಯದ ಅಸಾಂಸ್ಥಿಕೀಕರಣ, ಚುನಾವಣಾ ಅನುಮೋದಿತ ಭ್ರಮವಾಗಿ ಕಂಡುಬರುವ ತೆವಳುವ ನಿರಂಕುಶ ಪ್ರಭುತ್ವ, ಅಲ್ಪಸಂಖ್ಯಾತರನ್ನು ಎರಡನೇ ವರ್ಗಕ್ಕೆ ಎಡೆಬಿಡದೆ ಇಳಿಸುವುದು,  ಸಹಿಷ್ಣುತೆ, ಸಮಾನತೆ ಮತ್ತು ಒಳಗೊಳ್ಳುವಿಕೆಯನ್ನು ತಿರಸ್ಕರಿಸಿ  ಸಂಘರ್ಷಣೆ, ಪ್ರಾಬಲ್ಯ ಮತ್ತು ಹೊರಗಿಡುವಿಕೆಯ ಹೊಸ ಮಾದರಿಗಳಲ್ಲಿ ಗುರುತುಗಳ ಸಜ್ಜುಗೊಳಿಸುವಿಕೆ ಇವೆಲ್ಲವುಗಳ ಬಗ್ಗೆಯೂ ಜಾಫ಼್ರೆಲೊ  ಅಗಾಧವಾದ ಪಾಂಡಿತ್ಯಪೂರ್ಣ ಸಾಹಿತ್ಯ ಮತ್ತು ಸೈದ್ಧಾಂತಿಕ ಸಾಧನಗಳ ವಿವರವನ್ನೂ ಓದುಗರ ಮು೦ದೆ ಇಡುತ್ತಾರೆ.

 

 ಸೈದ್ಧಾಂತಿಕ ಸೆರೆಹಿಡಿಯುವಿಕೆ

ಮೋದಿಯವರ ವ್ಯಕ್ತಿತ್ವವನ್ನು ರೂಪಿಸುವ ಪ್ರಾಥಮಿಕ ರಂಗಭೂಮಿ ಮಾತ್ರವಲ್ಲದೆ ಅವರ ಹತ್ತಿರದ ಸರದಾರ ಅಮಿತ್ ಶಾ ಅವರ ಸಾಂಸ್ಕೃತಿಕ ಮೂಲ ಮತ್ತು  ಭಾರತದ ಎರಡು ಪ್ರಬಲ ವ್ಯಾಪಾರ ಕುಟುಂಬಗಳಾದ ಅಂಬಾನಿಗಳು ಮತ್ತು ಅದಾನಿಗಳ ರಾಜ್ಯವಾದ ಗುಜರಾತ್‌ನಿಂದ ಬಹುಮತಸ್ಥರ ಅಧಿಕಾರ ಸ್ವಾಧೀನ, ಗಲಭೆ ರಾಜಕೀಯ, ನ್ಯಾಯಾಲಯದ ವಶೀಕರಣ,  ಮತ್ತು ಬ೦ಡವಾಳಶಾಹಿ ಮೈತ್ರಿ ಇವೆಲ್ಲವುಗಳ  ಪುರಾವೆಗಳನ್ನು ಜೋಡಿಸಿ ಮ೦ಡಿಸಲು   ಲೇಖಕರು ಜಾಗರೂಕರಾಗಿದ್ದಾರೆ.  ಇನ್ನೊಂದು ಇತ್ತೀಚಿನ ಪುಸ್ತಕದಲ್ಲಿ, ಇಂದಿರಾ ಗಾಂಧಿ ಮತ್ತು ಮೋದಿಯವರ ನಾಯಕತ್ವದ ಶೈಲಿಗಳನ್ನು ಹೋಲಿಸಲು ಜಾಫ್ರೆಲೊ ಅವರು 1975-77ರ ತುರ್ತು ಪರಿಸ್ಥಿತಿಯನ್ನು ಅಧ್ಯಯನ ಮಾಡಿದ್ದಾರೆ. ಅವರು ಆರ್‌ಎಸ್‌ಎಸ್‌ನ ರಾಜಕೀಯ ಮುಖ್ಯವಾಹಿನಿ ಪ್ರಸಾರ ಮತ್ತು  ಪತ್ರಿಕೋದ್ಯಮ, ಶಿಕ್ಷಣ, ಪೊಲೀಸ್ ಮತ್ತು ಅಧಿಕಾರಶಾಹಿ, ಶಾಸಕಾಂಗ ಮತ್ತು ನ್ಯಾಯಾಂಗಗಳೊಳಗೆ  (ಮತ್ತು ಬಹುಶಃ ಸಶಸ್ತ್ರ ಪಡೆಗಳೂ ಸಹ) ಅದರ  ವ್ಯಾಪಕ ಒಳನುಸುಳುವಿಕೆ ಮತ್ತು ಸಾರ್ವಜನಿಕ ಕಲ್ಪನೆಯ ಸೈದ್ಧಾಂತಿಕ ಸೆರೆಹಿಡಿಯುವಿಕೆ ಇವನ್ನೆಲ್ಲ ವಿವರವಾಗಿ ಪರಿಶೀಲಿಸುತ್ತಾರೆ.

ಯೋಗಿ ಆದಿತ್ಯನಾಥ್ ಅವರು ಆಡಳಿತವನ್ನು ಹೇಗೆ ಕೋಮುವಾದಿಗೊಳಿಸುತ್ತಾರೆ, ಮಿಲಿಷಿಯಾ ಅರ್ಥಾತ್ ಅರೆ-ಸೇನಾಪಡೆಯ ರೀತಿಯಲ್ಲಿ  ರಾಜ್ಯವನ್ನು ನಡೆಸುತ್ತಾರೆ ಮತ್ತು ಮುಸ್ಲಿಮ್ ಸಮಾಜದ ಭೀಷಣಿಯನ್ನು ಉತ್ಪ್ರೇಕ್ಷೆ ಮಾಡುವದನ್ನು  (ಇಸ್ಲಾಮೋಫೋಬಿಯಾ) ಅಧಿಕೃತ ನೀತಿಯ ಅಂಶವನ್ನಾಗಿ ಮಾಡುತ್ತಾರೆ ಎಂಬುದನ್ನು ಅವರು ಪರಿಶೀಲಿಸುತ್ತಾರೆ. "ಗೌರಕ್ಷಾ", "ಲವ್ ಜಿಹಾದ್" ಮತ್ತು "ಘರ್ ವಾಪ್ಸಿ" ಯ ಪ್ರಚಾರಗಳು ಸವಲತ್ತು ಪಡೆದ ಜಾತಿ ಪಧ್ಧತಿ  ಮತ್ತು ಸಾಮಾಜಿಕ ಸಂಪ್ರದಾಯವಾದದ ಮಾರಣಾಂತಿಕ ಮಿಶ್ರಣವನ್ನು ತಯಾರಿಸುತ್ತವೆ, ಪಿತೃಪ್ರಭುತ್ವವನ್ನು ಬಲಪಡಿಸುತ್ತವೆ ಮತ್ತು ನಿರಂತರವಾಗಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಬೆದರಿಸುತ್ತವೆ, ಅವಮಾನಗೊಳಿಸುತ್ತವೆ ಮತ್ತು ಭಯಭೀತಗೊಳಿಸುತ್ತವೆ. ಉತ್ತರ ಪ್ರದೇಶದೊಂದಿಗೆ ರಾಜಸ್ಥಾನ, ಹರಿಯಾಣ ಮತ್ತು ಮಧ್ಯಪ್ರದೇಶ ಸೇರಿದಂತೆ  cow belt ಎ೦ದು ಕರೆಯಲ್ಪಡುವ ಹಿಂದೀಯ ಹೃದಯಭಾಗವು ದಕ್ಷಿಣಕ್ಕೆ ಕರ್ನಾಟಕಕ್ಕೆ ಮತ್ತು ಪೂರ್ವಕ್ಕೆ ಅಸ್ಸಾಂಗೆ ಹರಡಿದ್ದು ಇವು ಈಗ ಸಂಪೂರ್ಣವಾಗಿ ಕೇಸರಿಮಯವಾಗಿದೆ.

ಪಂಜಾಬ್, ದೆಹಲಿ, ಬಿಹಾರ, ಮಹಾರಾಷ್ಟ್ರ, ಗೋವಾ ಮತ್ತು ಪಶ್ಚಿಮ ಬಂಗಾಳವು ಪ್ರಾದೇಶಿಕವಾಗಿ ನಿರ್ದಿಷ್ಟವಾದ ವಿವಿಧ ಕಾರಣಗಳಿಗಾಗಿ ಮತ್ತು ಬಿಜೆಪಿಗೆ ಸವಾಲು ಹಾಕುವ ಸ್ಥಳೀಯ ಪಕ್ಷಗಳು, ಜಾತಿ ಮೈತ್ರಿಗಳು ಮತ್ತು ತಳಹಂತದ ನಾಯಕರಿಂದ ಇದುವರೆಗೆ ಸ್ವಲ್ಪಮಟ್ಟಿಗೆ ಹಿಂಜರಿಕೆ ಮತ್ತು ಸಾಂದರ್ಭಿಕ ಬಂಡಾಯವನ್ನು ಸಾಬೀತುಪಡಿಸಿದೆ. ಆದರೆ ಈ ರಾಜ್ಯಗಳಲ್ಲಿಯೂ ಸಹ, ವಿರೋಧ ಪಕ್ಷದ ಉಪಸ್ಥಿತಿಯು ಸಾರ್ವಜನಿಕ ಅಭಿಪ್ರಾಯವು ಮೋದಿ ವಿರುದ್ಧವಾಗಿದೆ ಅಥವಾ ಪೂರ್ವನಿಯೋಜಿತ ರಾಜಕೀಯ ಸಾಮಾನ್ಯ ಜ್ಞಾನವು ಜಾತ್ಯತೀತವಾಗಿದೆ ಎಂದು ಸಾಬೀತುಪಡಿಸುವುದಿಲ್ಲ. ಹಾಗೆಯೇ ದಕ್ಷಿಣವನ್ನು ಇನ್ನು ಮುಂದೆ ಲಘುವಾಗಿ ತೆಗೆದುಕೊಳ್ಳಬಾರದು. ಜಾಫ್ರೆಲೊ ಅವರು ತಮ್ಮ ಕೃತಿಯಲ್ಲಿ ತೋರಿಸಿದಂತೆ, ಕಳೆದ ಶತಮಾನದ ಹಿಂದುತ್ವ ಸಿದ್ಧಾಂತವನ್ನು ಅಧ್ಯಯನ ಮಾಡುವುದರಿಂದ, ಸಾವರ್ಕರ್ ಮತ್ತು ಗೋಲ್ವಾಲ್ಕರ್, ಅಡ್ವಾಣಿ ಮತ್ತು ವಾಜಪೇಯಿ, ಮೋದಿ ಮತ್ತು ಶಾ ಅವರನ್ನು ತಲುಪುವ ಮೊದಲು, ನಾವು ಈಗ ಅನುಭವಿಸುತ್ತಿರುವ ರಾಜಕೀಯ ಭೂಕಂಪದ ಆರಂಭಿಕ ನಡುಕಗಳನ್ನು ಮು೦ಚಿತವಾಗಿ ನೋಂದಾಯಿಸಲು ಅನುವು ಮಾಡಿಕೊಡುತ್ತದೆ. ವಿದೇಶದಲ್ಲಿ, ಇಸ್ರೇಲ್, ಟರ್ಕಿ, ಹಂಗೇರಿ ಮತ್ತು ಬ್ರೆಜಿಲ್‌ನಂತಹ ದೇಶಗಳು ಜನಾಂಗೀಯ ಪ್ರಜಾಪ್ರಭುತ್ವದ ಉದಯಕ್ಕೆ ಜಾಗತಿಕ ಸಂದರ್ಭವನ್ನು ಒದಗಿಸುತ್ತವೆ.

'ಎರಡನೇ ಗಣರಾಜ್ಯ' ಮತ್ತು ಹಿಂದೂ ರಾಷ್ಟ್ರವು ಈಗಾಗಲೇ ನಮ್ಮ ಮೇಲೆ ನಿರೀಕ್ಷಿತ ಭವಿಷ್ಯಕ್ಕಾಗಿ ಇಲ್ಲಿ ಉಳಿಯಲು ಬ೦ದೊದಗಿದೆ ಎಂದು ತೋರುತ್ತಿದೆ. ‘ಮೋದಿಯ ಭಾರತ’ವು ಒಂದೇ ಬಾರಿಗೆ ಜ್ಞಾಪನೆ, ದಾಖಲೆ, ಎಚ್ಚರಿಕೆ ಗಂಟೆ ಮತ್ತು ನಾವು ಇತಿಹಾಸದ ಪಾಠಗಳನ್ನು ಗಮನಿಸಿದರೆ, ಈ ವಿದ್ಯಮಾನಗಳನ್ನು ವಿರೋಧಿಸಲು ಬೇಕಾಗುವ ಶಸ್ತ್ರಾಸ್ತ್ರಗಳನ್ನು ಸಜ್ಜಿಸಲು  ಕರೆಯಾಗಿದೆ.

ಮೋದಿಯ ಭಾರತ: ಹಿಂದೂ ರಾಷ್ಟ್ರೀಯತೆ ಮತ್ತು ಜನಾಂಗೀಯ ಪ್ರಜಾಪ್ರಭುತ್ವದ ಉದಯ; ಲೇಖಕ ಕ್ರಿಸ್ಟೋಫ್ ಜಾಫ್ರೆಲೊ, ಸಿಂಥಿಯಾ ಸ್ಕೋಚ್ ಅವರಿಂದ ಅನುವಾದಿಸಲಾಗಿದೆ.  ಪ್ರಕಾಶಕರು  ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್ /ವೆಸ್ಟ್‌ಲ್ಯಾಂಡ್. ಬೆಲೆ ರೂ. 899.

ವಿಮರ್ಶಕರು ಬೌದ್ಧಿಕ ಇತಿಹಾಸಕಾರ ಮತ್ತು Righteous Republic: The Political Foundations of Modern India  ಪುಸ್ತಕದ ಲೇಖಕರಾಗಿದ್ದಾರೆ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು