ತ್ರಿಪುರಾದಲ್ಲಿ ವಕೀಲರು, ಪತ್ರಕರ್ತರ ವಿರುದ್ಧ ಯುಎಪಿಎ ಪ್ರಯೋಗಿಸುವದು ರಾಜ್ಯದ ವಿಪರೀತ ಕ್ರಮಗಳ ಸಾಧಾರಣ ಅನ್ವಯಿಸುವಿಕೆಯ  ಭಾಗವಾಗಿದೆ

ತ್ರಿಪುರಾದಲ್ಲಿ ಮತ್ತು ಇತರೆಡೆ, ನಾಗರಿಕರ ಮೂಲಭೂತ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಪ್ರಶ್ನೆಗಳನ್ನು ಎತ್ತುವ , ಮತ್ತು ಉಲ್ಲಂಘನೆ ಮಾಡುತ್ತಿರುವ ಕಾರ್ಯನಿರ್ವಾಹಕ ಅಧಿಕಾರದ ಹೆಜ್ಜೆಯಲ್ಲಿ ಲಕ್ಷ್ಮಣ ರೇಖೆಯನ್ನು  ಎಳೆಯುವ , ಜವಾಬ್ದಾರಿ ನ್ಯಾಯಾಂಗದ ಮೇಲಿದೆ. 


 ನವೆಂಬರ್ 9, 2021 ಸ೦ಪಾದಕೀಯ, ಇ೦ಡಿಯನ್ ಎಕ್ಸ್ಪ್ರೆಸ್ ದಿನ ಪತ್ರಿಕೆ



“ಕಠಿಣ ಕಾನೂನುಗಳು ಅಸ್ತಿತ್ವದಲ್ಲಿದ್ದವು  ಮತ್ತು ಹಿಂದಿನಿಂದಲೂ ದುರುಪಯೋಗಪಡಿಸಿಕೊಂಡಿದ್ದರೂ, ಇಂದು ಎದ್ದುಕಾಣುವ ಸಂಗತಿಯೆಂದರೆ, ಆಡಳಿತ ಸ್ಥಾಪನೆಗಳಲ್ಲಿ  ನಾಗರಿಕರ ವಿರುದ್ಧ ಅವುಗಳನ್ನು ಅಸ್ತ್ರಗಳಾಗಿ ಬಳಸುವಲ್ಲಿ ಎಷ್ಟೇ ಸಂಕೋಚದ  ಕೊರತೆ.”



ಕೋಮು ಹಿಂಸಾಚಾರದ ವರದಿ ಪ್ರಕಟಣೆಗಾಗಿ ವಕೀಲರು, ಪತ್ರಕರ್ತರು ಮತ್ತು 100-ರಷ್ಟು ಸಾಮಾಜಿಕ ಮಾಧ್ಯಮ ಬಳಕೆದಾರರ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ವಿಧಿಸುವ ತ್ರಿಪುರಾ ಪೋಲೀಸರ ನಿರ್ಧಾರವು ಕಠೋರವಾದ ಕಾನೂನಿನ ಅತಿರೇಕದ ಬಳಕೆಗೆ ಮತ್ತೊಂದು ಉದಾಹರಣೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾರತ-ಪಾಕಿಸ್ತಾನ ಟಿ 20 ಪಂದ್ಯದಲ್ಲಿ "ಪಾಕಿಸ್ತಾನಕ್ಕೆ ಹುರಿದುಂಬಿಸಿದ" ನಂತರ ಶ್ರೀನಗರದ ಎರಡು ವೈದ್ಯಕೀಯ ಕಾಲೇಜುಗಳಲ್ಲಿ ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ ಕೆಲವು ದಿನಗಳ ನಂತರ ಇದು ಬಂದಿದೆ. ತ್ರಿಪುರಾ ಪೊಲೀಸರು ಕೂಡ ಕಠಿಣವಾದ ಭಯೋತ್ಪಾದನಾ-ವಿರೋಧಿ ಕಾನೂನನ್ನು ಸತ್ಯಶೋಧನೆಯ ವರದಿಯ ಲೇಖಕರ ವಿರುದ್ಧ ಪ್ರಯೋಗಿಸುವ ಮೂಲಕ ಕಾನೂನಿನ ಪ್ರಮುಖ ವ್ಯತ್ಯಾಸಗಳು ಮತ್ತು ಗಡಿಗಳನ್ನು ದಾಟಿದ್ದಾರೆ.  


ಕಳೆದ ತಿಂಗಳು ರಾಜ್ಯದಲ್ಲಿ  ದುರ್ಗಾಪೂಜೆ ಆಚರಣೆಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಗಡಿಯಾಚೆ ನಡೆದ ಹಿಂದೂ ವಿರೋಧಿ ಹಿಂಸಾಚಾರದ ಗೊಂದಲದ ಪ್ರತಿಧ್ವನಿಯಾಗಿ  ಮುಸ್ಲಿಮರ ವಿರುದ್ಧ ಹಿಂಸಾಚಾರ ಭುಗಿಲೆದ್ದಿದೆ ಎಂದು ವರದಿಯಾದ ನಂತರ ದೆಹಲಿಯ ನಾಲ್ವರು ವಕೀಲರು ತ್ರಿಪುರಾಕ್ಕೆ ಸತ್ಯಶೋಧನಾ ಕಾರ್ಯಾಚರಣೆಗೆ ತೆರಳಿದ್ದರು . ಆನ್‌ಲೈನ್‌ನಲ್ಲಿ ಬಿಡುಗಡೆಯಾದ ವಕೀಲರ ವರದಿಯು ಮಸೀದಿಗಳ ಧ್ವಂಸವನ್ನು ಗುರಿಯಾಗಿಸಿಕೊಂಡಿದ್ದದು, ಮತ್ತು ಅಲ್ಪಸಂಖ್ಯಾತರ ವಿರೋಧಿ ಚಳುವಳಿಗಳನ್ನು ಎದುರಿಸುವಲ್ಲಿ ಬಿ ಜೆ ಪಿ ಸರ್ಕಾರದ ನ್ಯೂನತೆಗಳನ್ನು ಎತ್ತಿ ತೋರಿಸಿದೆ  ಮತ್ತು ನ್ಯಾಯಾಂಗ ತನಿಖೆಗೆ ಶಿಫಾರಸು ಮಾಡಿದೆ. ಸರ್ಕಾರಗಳು ಕಾರ್ಯನಿರ್ವಹಿಸುವಂತೆ ಒತ್ತಡ ಹೇರಲು ಪ್ರಜಾಪ್ರಭುತ್ವದಲ್ಲಿ ನಾಗರಿಕರು ಮತ್ತು ನಾಗರಿಕ ಸಮಾಜದ ಸದಸ್ಯರು ಕೈಗೊಳ್ಳಬಹುದಾದ - ಮತ್ತು  ಮಾಡುವುದಾದ -  ಕ್ರಿಯೆಗಳ ಮಿತಿಯಿಂದ ಇವು ಯಾವುದೂ ಹೊರಗಿಲ್ಲ. ಇವುಗಳಲ್ಲಿ ಯಾವುದಾದರೂ "ವಿಭಜನೆಯನ್ನು ಪ್ರಚೋದಿಸುವ" ಅಥವಾ "ಭಾರತದ ಸಾರ್ವಭೌಮತ್ವವನ್ನು ಅಡ್ಡಿಪಡಿಸುವ" ಅಥವಾ "ಭಾರತದ ವಿರುದ್ಧ ಅಸಮಾಧಾನವನ್ನು ಉಂಟುಮಾಡುವ" ಕ್ರಮಗಳಿಗೆ  ಅನ್ವಯಿಸುವ ಯುಎಪಿಎಯ ಸೆಕ್ಷನ್ 13 ರ ಅಡಿಯಲ್ಲಿ ಹೇಗೆ ಅಪರಾಧವಾಗುತ್ತದೆ ಎಂಬುದನ್ನು ಕಾಣುವುದು ಕಷ್ಟ, ಇದರ ತರುವಾಯ, ತ್ರಿಪುರಾದಲ್ಲಿನ ಹಿಂಸಾಚಾರದ ಬಗ್ಗೆ  ಪ್ರಕಟಣೆ ಮಾಡಿದ ಮತ್ತು ವರದಿಯನ್ನು ಪುಷ್ಟೀಕರಿಸಿದ  ಪತ್ರಕರ್ತರು ಸೇರಿದಂತೆ 102 ಸಾಮಾಜಿಕ ಮಾಧ್ಯಮ ಖಾತೆಗಳ ಮಾಲೀಕರು ಯುಎಪಿಎ ಜೊತೆಗೆ ಸಮುದಾಯಗಳ ನಡುವೆ “ಹಗೆತನವನ್ನು ಉತ್ತೇಜಿಸುವ” ಐಪಿಸಿಯ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಎದುರಿಸಿದರು.


 ವಕೀಲರ ಭೇಟಿ ಮತ್ತು ಸಾಮಾಜಿಕ ಮಾಧ್ಯಮದ ವಿಮರ್ಶೆಗಳ  ನಡುವೆ "ಸಂಭಾವ್ಯವಾಗಿ" ಕೋಮು ದ್ವೇಷವನ್ನು ಉಂಟುಮಾಡುವ  "ಒಂದಕ್ಕೆ  ಒಂದು" ಪರಸ್ಪರ ಸಂಬಂಧವನ್ನು ಪೋಲೀಸರು ಸೆಳೆದಿದ್ದಾರೆ, ಆದರೆ ಕಾನೂನು ಸ್ವತಃ - ಮತ್ತು ಸುಪ್ರೀಂ ಕೋರ್ಟ್ - ಈ ಬಗೆಯಲ್ಲಿ ಹೆಚ್ಚಿನ ನಿರ್ಬಂಧವನ್ನು ಸ್ಥಾಪಿಸಿದೆ. ಹಿಂಸಾಚಾರ ಅಥವಾ ಹಿಂಸೆಯನ್ನು ಪ್ರಚೋದಿಸದ ಹೊರತು ನಾಗರಿಕನ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮೊಟಕುಗೊಳಿಸಲಾಗುವುದಿಲ್ಲ.

ವಾಸ್ತವವಾಗಿ, ಇದು ಸರ್ಕಾರಗಳಿಂದ ಪರಿಪೂರ್ಣಗೊಳಿಸಲ್ಪಟ್ಟ ಅತಿರೇಕ ಪ್ರಮಾಣದ ಪ್ರತಿಕ್ರಿಯೆಯ ಒಂದು ನಿದರ್ಶನವಾಗಿ ಕಂಡುಬರುತ್ತದೆ. ಭಿನ್ನಾಭಿಪ್ರಾಯವನ್ನು ಶಮನಗೊಳಿಸಲು ಅಥವಾ ರಾಜ್ಯದ ಆಖ್ಯಾನವನ್ನು  ಪ್ರಶ್ನಿಸುವ  ಅಥವಾ ಪ್ರಶ್ನಿಸಬಹುದಾದ ಯಾರನ್ನಾದರೂ ಬೆದರಿಸಲು UAPA ಅಥವಾ ದೇಶದ್ರೋಹದ ಕಾನೂನಿನಂತಹ ಕಠಿಣ ಕಾನೂನುಗಳನ್ನು ತಿರುಚುವುದನ್ನು ಇದು ಒಳಗೊಂಡಿರುತ್ತದೆ. 


ಈ ಹಿಂದೆಯೂ ಕಠಿಣ ಕಾನೂನುಗಳು ಅಸ್ತಿತ್ವದಲ್ಲಿವೆ ಮತ್ತು ದುರುಪಯೋಗವಾಗಿದ್ದರೂ, ಇಂದು ಎದ್ದು ಕಾಣುತ್ತಿರುವುದು ಆಡಳಿತಾರೂಢ ಸಂಸ್ಥೆಯಲ್ಲಿ ನಾಗರಿಕರ ವಿರುದ್ಧ ಅಸ್ತ್ರವಾಗಿ ಬಳಸುವಲ್ಲಿ ತೋರುವ ಸಂಕೋಚದ ಕೊರತೆ.  UAPA ಪ್ರಕರಣಗಳಲ್ಲಿ, ಕೆಲವು ಅಪವಾದಗಳನ್ನು ಹೊರತುಪಡಿಸಿ, ಆರೋಪಿಗಳಿಗೆ ಜಾಮೀನು ನೀಡಲು ಕೆಳಮಟ್ಟದ ನ್ಯಾಯಾಂಗದ ಹಿಂಜರಿಕೆಯಿ೦ದಾಗಿ ಕಾನೂನು ಪ್ರಕ್ರಿಯೆಯೇ ದೀರ್ಘಾವಧಿಯ ಶಿಕ್ಷೆಯಾಗಬಹುದು. ಆದಾಗ್ಯೂ, ದೆಹಲಿ ಹೈಕೋರ್ಟ್, ಈ ವರ್ಷದ ಆರಂಭದಲ್ಲಿ ಸಿಎಎ ವಿರೋಧಿ ಕಾರ್ಯಕರ್ತರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಭಿನ್ನಾಭಿಪ್ರಾಯದ ಸ್ವಾಗತಾರ್ಹ ಟಿಪ್ಪಣಿಯನ್ನು ತಿಳಿಯಪಡಿಸಿದೆ  - ಇದು  "ಪ್ರತಿಭಟನೆ" ಯನ್ನು "ಭಯೋತ್ಪಾದಕ ಚಟುವಟಿಕೆ" ಎ೦ದು  ಗೊಂದಲಗೊಳಿಸುವ ರಾಜ್ಯದ ಪ್ರವೃತ್ತಿಯನ್ನು ಟೀಕಿಸಿತು. ತ್ವಾಹ ಫಸಲ್ ಪ್ರಕರಣದಲ್ಲಿ ಕಳೆದ ತಿಂಗಳ ಸುಪ್ರೀಂ ಕೋರ್ಟ್ ತೀರ್ಪು ಕೂಡ UAPA ಕಾನೂನಿನ  ಕಡಿಮೆ ದಬ್ಬಾಳಿಕೆಯ ವ್ಯಾಖ್ಯಾನಗಳಿಗೆ ಮಾರ್ಗವನ್ನು ತೆರವುಗೊಳಿಸುತ್ತದೆ.


ತ್ರಿಪುರಾದಲ್ಲಿ ಮತ್ತು ಇತರೆಡೆ, ನಾಗರಿಕರ ಮೂಲಭೂತ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಪ್ರಶ್ನೆಗಳನ್ನು ಎತ್ತುವ ಮತ್ತು ಉಲ್ಲಂಘನೆ ಮಾಡುತ್ತಿರುವ ಕಾರ್ಯನಿರ್ವಾಹಕ ಅಧಿಕಾರದ ಹೆಜ್ಜೆಯಲ್ಲಿ ದಾಟಲಾಗದ ಲಕ್ಷ್ಮಣ ರೇಖೆಯನ್ನು  ಎಳೆಯುವ ಜವಾಬ್ದಾರಿ ನ್ಯಾಯಾಂಗದ ಮೇಲಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು