ಬಡತನ ಮತ್ತು ಸಂಪತ್ತಿನ ಜಾತಿ ಆಯಾಮಗಳು

 

ಆದಾಯ ಮತ್ತು ಆಸ್ತಿಗಳ ಕೊರತೆಗಳ ಹೆಚ್ಚಿನ ಪ್ರಮಾಣ ಹಿಂದುಳಿದ ಜಾತಿಗಳನ್ನು ದುರ್ಬಲಗೊಳಿಸುತ್ತವೆ.

ಮುಂದಿನ ದಶವಾರ್ಷಿಕ ಜನಗಣತಿಯಲ್ಲಿ ಜಾತಿಗಳ ದತ್ತಾಂಶವನ್ನು ಸೇರಿಸುವ ಕುರಿತು ದೇಶವು ಚರ್ಚಿಸುತ್ತಿರುವಾಗ, ಕಳೆದ ತಿಂಗಳು ಬಿಡುಗಡೆಯಾದ ಎರಡು ವರದಿಗಳು ಹಿಂದುಳಿದ ಜಾತಿಗಳು ಎದುರಿಸುತ್ತಿರುವ ಅಸಮಾನತೆಗಳನ್ನು ಎತ್ತಿ ತೋರಿಸುತ್ತವೆ.  The Oxford Poverty and Human Development Initiative and the United Nations Development Programme, (ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ನೇತ್ರತ್ವ, ಮತ್ತು ಸ೦ಯುಕ್ತ ರಾಷ್ಟ್ರ ಸ೦ಸ್ಥೆಯ ಅಭಿವೃ ಧ್ಧಿ ಯೋಜನೆ) ಪ್ರಕಟಿಸಿದ “Global Multidimensional Poverty Index (GMPI), 2021,” “ಜಾಗತಿಕ ಬಹು ಆಯಾಮದ ಬಡತನ ಸೂಚ್ಯಂಕ (ಜಿಎಂಪಿಐ), 2021” ಎಂಬ ಶೀರ್ಷಿಕೆಯ ಮೊದಲ ವರದಿಯು  ಪರಿಶಿಷ್ಟ ಪಂಗಡ (ಎಸ್‌ಟಿ), ಪರಿಶಿಷ್ಟ ಜಾತಿ (ಎಸ್‌ಸಿ)  ಮತ್ತು ಇತರೆ ಹಿಂದುಳಿದ ವರ್ಗ (OBC-ಒ ಬಿ ಸಿ) ವಿಭಾಗಗಳ ಹೆಚ್ಚಿನ ಬಡತನವನ್ನು ಬಹಿರಂಗಪಡಿಸುತ್ತದೆ. 

ರಾಷ್ಟ್ರೀಯ ಅಂಕಿಅಂಶ ಕಚೇರಿ ಪ್ರಕಟಿಸಿದ “All-India Debt and Investment Survey (AIDIS), 2019,”  “ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆ, 2019” ಎಂಬ ಶೀರ್ಷಿಕೆಯ ಎರಡನೇ ವರದಿಯು ಈ ಸಂಶೋಧನೆಗಳನ್ನು ಪುಷ್ಟೀಕರಿಸುತ್ತದೆ. ಇದು ಎಸ್‌ಟಿಗಳು, ಎಸ್‌ಸಿಗಳು ಮತ್ತು ಒಬಿಸಿಗಳು ಅತಿ ಕಡಿಮೆ ಪ್ರಮಾಣ ಹೊಂದಿರುವ ಆಸ್ತಿ ಅಥವಾ ಸಂಪತ್ತನ್ನು ಎತ್ತಿ ತೋರಿಸುತ್ತದೆ. ಒಟ್ಟಾಗಿ, ಈ ಎರಡು ವರದಿಗಳು ಮತ್ತೊಮ್ಮೆ,  ತಾರತಮ್ಯ ಅನುಭವಿಸುವ ಈ ಗುಂಪುಗಳು ಎದುರಿಸುತ್ತಿರುವ ನಿರಂತರ ಅಭಾವಗಳ ಸಮಸ್ಯೆಯನ್ನು ಮತ್ತೆ ಮುನ್ನೆಲೆಗೆ ತರುತ್ತವೆ.

ಬಡವರಲ್ಲಿ ಹಿಂದುಳಿದ ಅನಾನುಕೂಲಿತ ಬುಡಕಟ್ಟು ಮತ್ತು ಜಾತಿಗಳಿಗೆ ಸೇರಿದವರೇ ಅತಿ ದೊಡ್ಡ ಪ್ರಮಾಣದಲ್ಲಿದ್ದಾರೆ: GMPI, 2021 ರ ಪ್ರಕಾರ ಭಾರತದಲ್ಲಿ ಬಹುಆಯಾಮದ ಬಡತನದಲ್ಲಿ ವಾಸಿಸುವ ಆರು ಜನರಲ್ಲಿ ಐದು ಮಂದಿ ಹಿಂದುಳಿದ ಅನಾನುಕೂಲಿತ ಬುಡಕಟ್ಟು ಮತ್ತು ಜಾತಿಗಳಿಗೆ ಸೇರಿದವರು. 

ಬಡತನದ ಮಟ್ಟಗಳು  ಎಸ್ ಟಿಗಳಲ್ಲಿ 50.6%ರಷ್ಟಿದ್ದು ಅತ್ಯಧಿಕವಾಗಿದೆ. ಇವರ  ನಂತರ ಎಸ್ ಸಿ ಗಳಲ್ಲಿ ಬಡತನವು 33.3%, ಮತ್ತು ಒ ಬಿ ಸಿ  ಗಳಲ್ಲಿ 27.2% ಇವೆ. ಇದಕ್ಕೆ ವ್ಯತಿರಿಕ್ತವಾಗಿ, ಬಡತನವು 'ಇತರ'ರಲ್ಲಿ (ಎಸ್‌ಸಿಗಳು, ಎಸ್‌ಟಿಗಳು ಮತ್ತು ಒಬಿಸಿಗಳನ್ನು ಹೊರತುಪಡಿಸಿ) 15.6% ರಷ್ಟು ಇದ್ದು ಕಡಿಮೆ ಮಟ್ಟವಾಗಿದೆ. ಅಂದರೆ, 'ಇತರ ' ಅನುಕೂಲಸ್ಥ ಸಮುದಾಯಗಳಿಗಿಂತ ಎಸ್‌ಟಿಗಳಲ್ಲಿ ಬಡತನದ ಮಟ್ಟಗಳು ಮೂರು ಪಟ್ಟು ಹೆಚ್ಚು ಆಗಿದ್ದರೆ ಎಸ್‌ಸಿಗಳು ಮತ್ತು ಒಬಿಸಿಗಳ ಬಡತನವು  ಅನುಕೂಲಸ್ಥ ಸಮುದಾಯಗಳ ಮಟ್ಟಕ್ಕಿಂತ ಸುಮಾರು ದುಪ್ಪಟ್ಟಾಗಿತ್ತು.

ಮನೆಯ ಸ್ವತ್ತುಗಳು ಅಥವಾ ಸಂಪತ್ತು : AIDIS, 2019 ರ ವರದಿಯು ಮನೆಯ ಸ್ವತ್ತುಗಳು ಅಥವಾ ಸಂಪತ್ತಿನ (ಭೂಮಿ, ಕಟ್ಟಡಗಳು, ಜಾನುವಾರುಗಳು, ಯಂತ್ರೋಪಕರಣಗಳು, ಸಾರಿಗೆ ಉಪಕರಣಗಳು, ಠೇವಣಿಗಳು, ಷೇರುಗಳು, ಇತ್ಯಾದಿ) ಡೇಟಾವನ್ನು ಒಟ್ಟುಗೂಡಿಸಿದ್ದು, ಸಾಮಾಜಿಕ ಗುಂಪುಗಳ ನಡುವೆ ಸಂಪತ್ತಿನ ವಿತರಣೆಯು ಇನ್ನೂ ಹೆಚ್ಚು ತಿರುಚಲ್ಪಟ್ಟಿದೆ ಎಂದು ಸೂಚಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಎಸ್‌ಟಿ ಮತ್ತು ಎಸ್‌ಸಿ ಕುಟುಂಬಗಳು ಹೆಚ್ಚು ಹಿಂದುಳಿದಿವೆ ಎಂಬುದನ್ನು ಇದು ತೋರಿಸುತ್ತದೆ. ಅವರ ಸರಾಸರಿ ಆಸ್ತಿಯು ಸುಮಾರು ರೂ 9 ಲಕ್ಷಗಳು, ಒಟ್ಟಾರೆಯಾಗಿ ಗ್ರಾಮೀಣ ಕುಟುಂಬಗಳ ರೂ 16 ಲಕ್ಷದ ಸರಾಸರಿ ಆಸ್ತಿಯ ಅರ್ಧಕ್ಕಿಂತ ಸ್ವಲ್ಪ ಹೆಚ್ಚು. ಮತ್ತು ಇನ್ನೂ ಕೆಟ್ಟದಾಗಿ, ಎಸ್‌ಟಿ ಮತ್ತು ಎಸ್‌ಸಿ ಕುಟುಂಬಗಳ ಸರಾಸರಿ ಆಸ್ತಿಗಳು  ‘ಇತರ ಕುಟುಂಬ’ಗಳ ಅ೦ದರೆ ಎಸ್‌ಟಿಗಳು, ಎಸ್‌ಸಿಗಳು ಮತ್ತು ಒಬಿಸಿಗಳನ್ನು ಹೊರತುಪಡಿಸಿ ಎಲ್ಲಾ ಸಮುದಾಯಗಳನ್ನು ಒಳಗೊಂಡಿರುವ ಗುಂಪಿನ   ಸರಾಸರಿ ಆಸ್ತಿಯ ಮೂರನೇ ಒಂದು ಭಾಗದಷ್ಟು ಮಾತ್ರ. ಅದೇ ರೀತಿ, ಗ್ರಾಮೀಣ ಪ್ರದೇಶಗಳಲ್ಲಿ OBC ಗಳು ಹೊಂದಿರುವ ಸರಾಸರಿ ಗೃಹ ಆಸ್ತಿಗಳು ಸುಮಾರು ರೂ 16 ಲಕ್ಷ, ಇದು ಸಾಮಾನ್ಯವಾಗಿ ಗ್ರಾಮೀಣ ಕುಟುಂಬಗಳ ಸರಾಸರಿ ಆಸ್ತಿಯನ್ನು ಹೋಲುತ್ತದೆ, ಆದರೆ ಇದು ‘ಇತರ’ರ ಸರಾಸರಿ ಮನೆಯ ಸಂಪತ್ತಿನ ಮೂರನೇ ಎರಡಕ್ಕಿ೦ತ  ಕಡಿಮೆ.

ಆಶ್ಚರ್ಯಕರವಾಗಿ, ನಗರ ವಲಯದಲ್ಲಿ ಸಾಮಾಜಿಕ ಗುಂಪುಗಳಾದ್ಯಂತ ಸಂಪತ್ತಿನ ಹಂಚಿಕೆಯು ಇನ್ನಷ್ಟು ತಿರುಚಲ್ಪಟ್ಟಿದೆ. ಇಲ್ಲಿ, ಸಾಮಾಜಿಕ ಗುಂಪುಗಳಲ್ಲಿ ಎಸ್‌ಸಿಗಳು ಅತ್ಯಂತ ಕೆಟ್ಟವರಾಗಿದ್ದಾರೆ. ಅವರ ಸರಾಸರಿ ಗೃಹ ಸಂಪತ್ತಿನ ರೂ 13 ಲಕ್ಷವು ಸಾಮಾನ್ಯವಾಗಿ ನಗರ ಕುಟುಂಬಗಳು ಸರಾಸರಿ ರೂ 27 ಲಕ್ಷದ ಅರ್ಧದಷ್ಟು ಮತ್ತು ‘ಇತರ’ರ ಬಳಿ ಇರುವ ರೂ 40 ಲಕ್ಷದ ಸರಾಸರಿ ಮನೆಯ ಆಸ್ತಿಯ ಮೂರನೇ ಎರಡರಷ್ಟು. ಇದಕ್ಕೆ ವ್ಯತಿರಿಕ್ತವಾಗಿ, ನಗರ ಪ್ರದೇಶಗಳಲ್ಲಿಎಸ್‌ಟಿ ಕುಟುಂಬಗಳು ಹೊಂದಿರುವ ರೂ 19 ಲಕ್ಷ ಮತ್ತು ಒಬಿಸಿ ಕುಟುಂಬಗಳು ಹೊಂದಿರುವ ರೂ 21 ಲಕ್ಷದ ಸರಾಸರಿ ಆಸ್ತಿಯು ಒಟ್ಟು ನಗರ ಜನಸಂಖ್ಯೆಯ ಸರಾಸರಿ ಆಸ್ತಿಯ ಮೂರರಲ್ಲಿ ನಾಲ್ಕನೇ ಭಾಗ ಮತ್ತು ‘ಇತರ’ ಸಾಮಾಜಿಕ ಗುಂಪುಗಳ ಅರ್ಧದಷ್ಟು.  ನಗರೀಕರಣವು ಖಂಡಿತವಾಗಿಯೂ ಜಾತಿಗಳ ನಡುವಿನ ಸಂಪತ್ತಿನ ಅಸಮಾನತೆಯನ್ನು ಹೆಚ್ಚಿಸಿದೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ.

ರಾಜ್ಯಗಳಾದ್ಯಂತ ಗೃಹ ಆಸ್ತಿ ಅಥವಾ ಸಂಪತ್ತಿನ ಹಂಚಿಕೆಯ ವಿಶ್ಲೇಷಣೆಯು ಹಿಂದುಳಿದ ಜಾತಿಗಳ ಸಂಪತ್ತಿನ ಕೊರತೆಯು ಗ್ರಾಮೀಣ ಮತ್ತು ನಗರ ವಲಯಗಳಲ್ಲಿ ವ್ಯಾಪಕವಾಗಿದೆ ಎಂದು ತೋರಿಸುತ್ತದೆ. ಗ್ರಾಮೀಣ ವಲಯದಲ್ಲಿ, 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 27 ರಲ್ಲಿ  ಎಸ್ ಟಿ ಕುಟುಂಬಗಳ ಆಸ್ತಿಗಳು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರಾಸರಿಗಿಂತ ಕಡಿಮೆಯಾಗಿದೆ. ಅದೇ ರೀತಿ,  ಎಸ್ ಸಿ ಕುಟುಂಬಗಳ ಸರಾಸರಿ ಆಸ್ತಿಗಳು 29 ನ್ಯಾಯವ್ಯಾಪ್ತಿಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರಾಸರಿಗಿಂತ ಕಡಿಮೆಯಾಗಿದೆ. ಒ ಬಿ ಸಿ ಗಳ ವಿಷಯದಲ್ಲಿ, ಅವರ ಮನೆಯ ಆಸ್ತಿಗಳು 15 ನ್ಯಾಯವ್ಯಾಪ್ತಿಗಳಲ್ಲಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರಾಸರಿಗಿಂತ ಕಡಿಮೆಯಾಗಿದೆ. ಆದಾಗ್ಯೂ, ಎಸ್ ಸಿ/ ಎಸ್ ಟಿ/ ಒ ಬಿ ಸಿ ಅಲ್ಲದ ಗುಂಪುಗಳ ಆಸ್ತಿಗಳ ಮಟ್ಟಿಗೆ, ಅವರ ಮನೆಯ ಸಂಪತ್ತು 10 ನ್ಯಾಯವ್ಯಾಪ್ತಿಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರಾಸರಿಗಿಂತ ಕಡಿಮೆಯಾಗಿದೆ.

ನಗರ ಪ್ರದೇಶಗಳಲ್ಲಿ ಸನ್ನಿವೇಶವು ಹೆಚ್ಚು ಓರೆಯಾಗಿತ್ತು.  ಎಸ್ ಟಿ ಕುಟುಂಬಗಳ ಸರಾಸರಿ ಆಸ್ತಿಗಳು ಅಥವಾ ಸಂಪತ್ತು 24 ನ್ಯಾಯವ್ಯಾಪ್ತಿಗಳಲ್ಲಿ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರಾಸರಿಗಿಂತ ಕಡಿಮೆಯಾಗಿದೆ. ಎಸ್ ಸಿ ಕುಟುಂಬಗಳು ಸರಾಸರಿಗಿಂತ ಕಡಿಮೆ ಆಸ್ತಿ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 30 ಕ್ಕೆ ಏರಿತು.  ಒ ಬಿ ಸಿ ಕುಟುಂಬಗಳ ನಗರ ಸಂಪತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರಾಸರಿಗಿಂತ ಕಡಿಮೆ ಇರುವ ರಾಜ್ಯಗಳ ಸಂಖ್ಯೆ 28 ಕ್ಕೆ ವಿಸ್ತರಿಸಿದೆ. ಆದಾಗ್ಯೂ, ಎಸ್ ಟಿ /ಎಸ್‌ಸಿ/ಒಬಿಸಿ ಅಲ್ಲದ ಗುಂಪುಗಳ ಸಂದರ್ಭದಲ್ಲಿ, ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸರಾಸರಿಗಿಂತ ಕಡಿಮೆ ಸಂಪತ್ತನ್ನು ಹೊಂದಿರುವ ನಗರ ಕುಟುಂಬಗಳ ಸಂಖ್ಯೆಯು ಒಂಬತ್ತಕ್ಕೆ ಕಡಿಮೆಯಾಗಿದೆ.

ಹಿಂದುಳಿದ ಜಾತಿಗಳಿಂದ ಸಂಪತ್ತಿನ ವ್ಯಾಪಕವಾದ ಅಭಾವವನ್ನು ಇನ್ನಷ್ಟು ಹದಗೆಡಿಸುವುದು ಅಭಾವದ ತೀವ್ರತೆಯಾಗಿದೆ. ಗ್ರಾಮೀಣ ವಲಯದ ಅಂಕಿಅಂಶಗಳು ತೋರಿಸುವುದು ಎಸ್ ಟಿ ಮತ್ತು ಎಸ್‌ಸಿ ಕುಟುಂಬಗಳ ಆಸ್ತಿ ಅಥವಾ ಸಂಪತ್ತಿನ ಕೊರತೆಯು ಅತ್ಯಧಿಕವಾಗಿದ್ದು ಅವರ ಆಸ್ತಿಯ ಗಾತ್ರವು ರಾಜ್ಯದ ಸರಾಸರಿಗಿಂತ ಅರ್ಧಕ್ಕಿಂತ ಕಡಿಮೆಯಾಗಿರುವದು  ತುಲನಾತ್ಮಕವಾಗಿ ಶ್ರೀಮಂತವಾಗಿರುವ ದೆಹಲಿ, ಪಂಜಾಬ್, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ. ಮತ್ತು ನಗರ ವಲಯದಲ್ಲಿ, ಎಸ್‌ಟಿ ಮತ್ತು ಎಸ್‌ಸಿ ಕುಟುಂಬಗಳ ಆಸ್ತಿ ಗಾತ್ರವು ರಾಜ್ಯದ ಸರಾಸರಿ ಅರ್ಧಕ್ಕಿಂತ ಕಡಿಮೆ ಇರುವ ರಾಜ್ಯಗಳೆಂದರೆ ಗೋವಾ, ದೆಹಲಿ, ಪಂಜಾಬ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಜಮ್ಮು ಮತ್ತು ಕಾಶ್ಮೀರ, ಇವೆಲ್ಲವೂ ಹೆಚ್ಚಾಗಿ ಉತ್ತರದಲ್ಲಿವೆ. 

 

ಹಿಂದುಳಿದ ಜಾತಿಗಳು ಆದಾಯ ಮತ್ತು ಸಂಪತ್ತಿನ ಮೇಲಿನ ನ್ಯಾಯವಾದ ಅರ್ಹತೆ ಯಿ೦ದ ವಂಚಿತರಾಗುತ್ತಲೇ ಇರುತ್ತವೆ ಮತ್ತು ಹಿಂದುಳಿದ ಜಾತಿಗಳ ಸಂಪತ್ತಿನ ಕೊರತೆಯು ನಗರ ಪ್ರದೇಶಗಳಲ್ಲಿ ಮತ್ತು ಉತ್ತರ ಮತ್ತು ಶ್ರೀಮಂತ ರಾಜ್ಯಗಳಲ್ಲಿ ಅತ್ಯಧಿಕವಾಗಿದೆ ಎಂದು ತೀರ್ಮಾನಿಸುವುದು ಅಸಮಂಜಸವಲ್ಲ.

ECONOMIC AND POLITICAL WEEKLY NOV. 20, 2021


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು