ಸೂಕ್ತವಾದ ಶಾಸನ-ಪೂರ್ವ ಸಮಾಲೋಚನೆ ನೀತಿ ಅಗತ್ಯ
ದಿ ಹಿ೦ದು ನವೆಂಬರ್ ೨೫/ ೨೬, ೨೦೨೧
ಪೂರ್ವ ಚರ್ಚೆಗಳಿಲ್ಲದೆ ಎಷ್ಟು ಮಸೂದೆಗಳನ್ನು ಮಂಡಿಸಲಾಗಿದೆ? ನೀತಿ ನಿರೂಪಣೆಯಲ್ಲಿ ಸಾರ್ವಜನಿಕ ಸಮಾಲೋಚನೆಯನ್ನು ಸುಧಾರಿಸಲು ಏನು ಮಾಡಬೇಕು?
ಇಲ್ಲಿಯವರೆಗಿನ ಕಥೆ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ೨೯ ಮಸೂದೆಗಳನ್ನು (೨೬ ಹೊಸ ಮತ್ತು ಮೂರು ಬಾಕಿಉಳಿದಿದ್ದ) ಕೇಂದ್ರ ಸರ್ಕಾರ ಪಟ್ಟಿ ಮಾಡಿದೆ. ೨೦೧೪ ರಲ್ಲಿ, ಶಾಸಕಾಂಗ ಪೂರ್ವ ಸಮಾಲೋಚನೆ ನೀತಿಯನ್ನು ಅಂಗೀಕರಿಸಲಾಯಿತು. ಸರ್ಕಾರವು ಯಾವುದೇ ಕಾನೂನನ್ನು ರಚಿಸಿದಾಗ, ಕನಿಷ್ಠ ೩೦ ದಿನಗಳವರೆಗೆ ಸಾರ್ವಜನಿಕ ಕ್ಷೇತ್ರದಲ್ಲಿ ಅದರ ಕರಡು ಆವೃತ್ತಿಯನ್ನು ಇರಿಸಬೇಕು ಸೇರಿದಂತೆ ಹಲವಾರು ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ. ನೀತಿಯ ಪ್ರಾರಂಭದಿಂದಲೂ, ಸಂಸತ್ತಿನಲ್ಲಿ ಮಂಡಿಸಲಾದ ೩೦೧ ಮಸೂದೆಗಳಲ್ಲಿ ೨೨೭ ಮಸೂದೆಗಳನ್ನು ಯಾವುದೇ ಪೂರ್ವ ಸಮಾಲೋಚನೆಯಿಲ್ಲದೆ ಮಂಡಿಸಲಾಗಿದೆ. ಟಿಪ್ಪಣಿಗಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಇರಿಸಲಾದ ೭೪ ರಲ್ಲಿ, ಕನಿಷ್ಠ ೪೦ ಕರಡುಗಳು ಅಗತ್ಯವಿರುವ ೩೦-ದಿನಗಳ ಅವಧಿಯನ್ನು ನೇರವೇರಿಸಲಿಲ್ಲ.
GIST
ನೀತಿ ಏನು?
ಸರ್ಕಾರವು ಯಾವುದೇ ಕಾನೂನುಗಳನ್ನು (ಕರಡು ಮಸೂದೆಗಳು, ನಿಯಮಗಳು, ನಿಬಂಧನೆಗಳು ಇತ್ಯಾದಿ) ರಚಿಸಿದಾಗ, ಕನಿಷ್ಠ ೩೦ ದಿನಗಳವರೆಗೆ ಸಾರ್ವಜನಿಕ ಕಳದಲ್ಲಿ ಅದರ ಕರಡು ಆವೃತ್ತಿಯನ್ನು ಇರಿಸಬೇಕು ಎಂದು ಶಾಸಕಾಂಗ ಪೂರ್ವ ಸಮಾಲೋಚನೆ ನೀತಿ The Pre-Legislative Consultation Policy (PLCP) 2014 ((PLCP) 2014 ) ಯು ಕಡ್ಡಾಯಗೊಳಿಸುತ್ತದೆ. ಕರಡು ಜೊತೆಗೆ ಸರಳ ಭಾಷೆಯಲ್ಲಿ ಕಾನೂನನ್ನು ವಿವರಿಸುವ ಮತ್ತು ಪ್ರಸ್ತಾವನೆಯನ್ನು ಸಮರ್ಥಿಸುವ ಟಿಪ್ಪಣಿ, ಅದರ ಆರ್ಥಿಕ ಪರಿಣಾಮಗಳು, ಪರಿಸರ ಮತ್ತು ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ, ಮಸೂದೆಯ ಸಾಮಾಜಿಕ ಮತ್ತು ಆರ್ಥಿಕ ವೆಚ್ಚಗಳ ಅಧ್ಯಯನ ಇತ್ಯಾದಿಗಳನ್ನುಒದಗಿಸಬೇಕು ಎಂದು ನೀತಿ ಹೇಳುತ್ತದೆ. ಆಯಾ ಇಲಾಖೆಗಳು ಪ್ರಚಾರಮಾಡಿದ ಕರಡಿನ ಬಗ್ಗೆ ಸ್ವೀಕೃತವಾದ ಎಲ್ಲಾ ಪ್ರತಿಕ್ರಿಯೆಗಳ ಸಾರಾಂಶವನ್ನು ಸಾರ್ವಜನಿಕವಾಗಿ ಪ್ರಕಟಣೆ ಮಾಡಬೇಕು.
ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಳಿ (2013) ಮತ್ತು ಸಂವಿಧಾನದ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವ ರಾಷ್ಟ್ರೀಯ ಆಯೋಗ (2002) ದ ಸಾಮಾನ್ಯ ಶಿಫಾರಸುಗಳ ಆಧಾರದ ಮೇಲೆ PLCP ಅನ್ನು ರೂಪಿಸಲಾಗಿದೆ. ಕಾನೂನು ರಚನೆ ಪ್ರಕ್ರಿಯೆಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆಗಾಗಿ ಸಾಂಸ್ಥಿಕ ಕಣವೊ೦ದನ್ನು ರಚಿಸುವ ಗುರಿಯನ್ನು ಇದು ಹೊಂದಿದೆ.
ಇದು ಏಕೆ ಮುಖ್ಯ?
ಈ ನೀತಿಯು ಕಾನೂನು ರಚನೆಯ ಆರಂಭಿಕ ಹಂತಗಳಲ್ಲಿ ಕಾರ್ಯನಿರ್ವಾಹಕರ ಮಧ್ಯೆ ಸೇರಿರುವ ನೀತಿ ನಿರೂಪಕರೊಂದಿಗೆ ಸಂವಹನ ನಡೆಸಲು ನಾಗರಿಕರು ಮತ್ತು ಸಂಬಂಧಿತ ಆಸಕ್ತ ಪಾಲುದಾರರಿಗೆ ವೇದಿಕೆಯನ್ನು ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಕಾನೂನುಗಳು, ಆರ್‌ಟಿಐ (ಮಾಹಿತಿ ಹಕ್ಕು) ತಿದ್ದುಪಡಿ ಕಾಯಿದೆ, ಮಿಶ್ರಲಿಂಗ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ ಮುಂತಾದ ಕಾನೂನುಗಳ ಮೇಲಿನ ಪ್ರತಿಭಟನೆಗಳು, ಅಂತಹ ಕಾನೂನುಗಳನ್ನು ರೂಪಿಸುವಾಗ ಸಂಬಂಧಿತ ಪಾಲುದಾರರು ಮತ್ತು ಸಾರ್ವಜನಿಕರರನ್ನು ತೊಡಗಿಸದೆ ಇದ್ದದ್ದರಿ೦ದ ಈ ಗು೦ಪುಗಳಲ್ಲಿ ಅಸಮಾಧಾನವಿದೆ ಎಂದು ಎತ್ತಿ ತೋರಿಸಿವೆ. ಸಾರ್ವಜನಿಕ ಸಮಾಲೋಚನೆಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ, ಹೊಣೆಗಾರಿಕೆಯನ್ನು ವರ್ಧಿಸುತ್ತವೆ ಮತ್ತು ಮಾಹಿತಿಯುಕ್ತ ಸರ್ಕಾರವನ್ನು ನಿರ್ಮಿಸಲು ಕಾರಣವಾಗಬಹುದು ಅಲ್ಲದೆ ನಾಗರಿಕರನ್ನು ಕೇವಲ ಸರ್ಕಾರಕ್ಕೆ ಅಧೀನರಾಗುವವರಲ್ಲ ಪಾಲುದಾರರು ಎ೦ದು ಪರಿಗಣಿಸಲಾಗುವುದು.
ಉದಾಹರಣೆಗೆ, ನಾಗರಿಕ ಸಮಾಜದ ಸದಸ್ಯರು (#SaveTheInternet ಅಭಿಯಾನ) ವ್ಯಕ್ತಪಡಿಸಿದ ಕಳವಳಗಳನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಅವರು ಅಳವಡಿಸಿಕೊಂಡ ವ್ಯಾಪಕವಾದ ಸಮಾಲೋಚನೆ ಮತ್ತು ಚರ್ಚೆಯ ಪ್ರಕ್ರಿಯೆಗಳ ನಂತರ ಇ೦ಟರ್ ನೆಟ್ ತಟಸ್ಥತೆ ನಿಯಮಗಳ (net neutrality rules) ರಚನೆಯಲ್ಲಿ ತಿಳಿಸಲಾಗಿದೆ. (ಮೂಲ: https://ourgovdotin.wordpress.com/plcp/)
ಪ್ರಕಟಿತ ನೀತಿಯ ಅನುಷ್ಠಾನದ ಸ್ಥಿತಿ ಏನು?
೧೬ನೇ ಲೋಕಸಭೆಯ ಅವಧಿಯಲ್ಲಿ (ಮೇ ೨೦೧೪ ರಿಂದ ಮೇ ೨೦೧೯) ಸಂಸತ್ತಿನಲ್ಲಿ ೧೮೬ ಮಸೂದೆಗಳನ್ನು ಮ೦ಡಿಸಲಾಯಿತು, ಅದರಲ್ಲಿ ೧೪೨ ಮಸೂದೆಗಳನ್ನು ಮ೦ಡಿಸುವ ಮೊದಲು ಯಾವುದೇ ಸಮಾಲೋಚನೆಯನ್ನು ನಡೆಸಲಿಲ್ಲ. ಟಿಪ್ಪಣಿಗಳ ಸ್ವೀಕೃತಿಗಾಗಿ ಸಾರ್ವಜನಿಕ ಕಣದಲ್ಲಿ ಇರಿಸಲಾದ ೪೪ ಕರಡು ಮಸೂದೆಗಳಲ್ಲಿ, ೨೪ ಕರಡುಗಳನ್ನು ೩೦ ದಿನಗಳ ಗಡುವಿಗೆ ಬದ್ಧವಾಗಿಸಿದ್ದಿಲ್ಲ. ೧೭ನೇ ಲೋಕಸಭೆಯ ಅವಧಿಯಲ್ಲಿ (ಜೂನ್ ೨೦೧೯ರಿಂದ ಇಂದಿನವರೆಗೆ), ೧೧೫ ಮಸೂದೆಗಳನ್ನು ಸಂಸತ್ತಿನಲ್ಲಿ ಮ೦ಡಿಸಲಾಯಿತು, ಅದರಲ್ಲಿ ೮೫ ಮಸೂದೆಗಳನ್ನು ಮ೦ಡಿಸುವ ಮೊದಲು ಯಾವುದೇ ಸಮಾಲೋಚನೆಯನ್ನು ಮಾಡಿದ್ದಿಲ್ಲ.ಟಿಪ್ಪಣಿ ಸ್ವೀಕೃತಿಗಾಗಿ ಸಾರ್ವಜನಿಕ ರ೦ಗದಲ್ಲಿ ಇರಿಸಲಾದ ೩೦ ಕರಡು ಮಸೂದೆಗಳಲ್ಲಿ, ೧೬ ಮಸೂದೆಗಳನ್ನು ೩೦ ದಿನಗಳ ಗಡುವಿನ ಅವಶ್ಯಕತೆಯನ್ನು ಉಲ್ಲ೦ಘಿಸಿ ಮ೦ಡಿಸಲಾಗಿತ್ತು.
ಚಳಿಗಾಲದ ಅಧಿವೇಶನದ ತಾತ್ಕಾಲಿಕ ವೇಳಾಪಟ್ಟಿಯು ಒಟ್ಟು ೨೯ ಮಸೂದೆಗಳನ್ನು ಮ೦ಡಿಸಲು ಮತ್ತು ಅಂಗೀಕಾರಕ್ಕಾಗಿ ಪಟ್ಟಿಮಾಡಲಾಗಿದೆ ಎಂದು ಸೂಚಿಸುತ್ತದೆ. ಇವುಗಳಲ್ಲಿ, ೧೭ ಮಸೂದೆಗಳು ಯಾವುದೇ ಪೂರ್ವ ಸಮಾಲೋಚನೆ ಕ೦ಡಿಲ್ಲ ಆದರೆ ಸಾರ್ವಜನಿಕ ರ೦ಗದಲ್ಲಿ ಪ್ರಕಟಿಸಲಾದ ೧೨ ರಲ್ಲಿ ಆರು ಮಾತ್ರ ೩೦ ದಿನಗಳ ಗಡುವಿಗೆ ಬದ್ಧವಾಗಿವೆ.
ಅನುಷ್ಠಾನ ಏಕೆ ಕಷ್ಟ?
ಅನುಮೋದಿತ ನೀತಿಯ ಆದೇಶಗಳನ್ನು ಎಲ್ಲಾ ಸರ್ಕಾರಿ ಇಲಾಖೆಗಳು ಗಮನಿಸಬೇಕಾದ ಅಗತ್ಯವಿದ್ದರೂ, ಶಾಸನಬದ್ಧ ಅಥವಾ ಸಾಂವಿಧಾನಿಕ ಹಕ್ಕಿನ ಅನುಪಸ್ಥಿತಿಯು ಅದರ ಪರಿಣಾಮವನ್ನು ತೆಳುಗಳಿಸಿದೆ. ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಸದೀಯ ಕಾರ್ಯವಿಧಾನಗಳ ಕೈಪಿಡಿ ಮತ್ತು ಮ೦ತ್ರಿಮ೦ಡಲ ಟಿಪ್ಪಣಿಗಳನ್ನು ಬರೆಯುವ ಕೈಪಿಡಿಗಳಂತಹ ಕಾರ್ಯನಿರ್ವಾಹಕ ಕಾರ್ಯವಿಧಾನದ ಮಾರ್ಗಸೂಚಿಗಳಲ್ಲಿ ತತ್ಪರಿಣಾಮ ತಿದ್ದುಪಡಿಗಳ ಅಗತ್ಯವಿದೆ. ಆದಾಗ್ಯೂ, ಸಂಸದೀಯ ಕಾರ್ಯವಿಧಾನಗಳ ಕೈಪಿಡಿಗೆ ನಡೆಸಿದ ತಿದ್ದುಪಡಿಯ ಸ೦ದರ್ಭದಲ್ಲಿ, ಸಂಸದೀಯ ವ್ಯವಹಾರಗಳ ಸಚಿವಾಲಯವು ಕೈಪಿಡಿಯಲ್ಲಿ PLCP ನಿಬಂಧನೆಗಳನ್ನು ಅಳವಡಿಸಲು ವಿನಂತಿಸಿದಾಗ ಕಾನೂನು ಮತ್ತು ನ್ಯಾಯ ಸಚಿವಾಲಯವನ್ನು ಅದನ್ನು ನಿರ್ಲಕ್ಷಿಸಿತು.
ಕ್ಯಾಬಿನೆಟ್, ಲೋಕಸಭೆ, ರಾಜ್ಯಸಭೆ ಮುಂತಾದವುಗಳ ಕಾರ್ಯವಿಧಾನಗಳಲ್ಲಿ ಶಾಸಕಾಂಗ ಪೂರ್ವ ಸಮಾಲೋಚನೆಯನ್ನು ಅಳವಡಿಸಲು ಆದ್ಯತೆ ನೀಡಬೇಕು. ಅಂತೆಯೇ, ಮಸೂದೆಯನ್ನು ಮ೦ಡಿಸುವಾಗ ಶಾಸಕಾಂಗವು ಪೂರ್ವ ಸಮಾಲೋಚನೆಯ ವಿವರಗಳ ಮೇಲೆ ಹೆಚ್ಚುವರಿ ಟಿಪ್ಪಣಿಯನ್ನು ಇರಿಸಲು ಮಂತ್ರಿಗಳು ಅಗತ್ಯಪಡಿಸಬೇಕು. ಶಾಸನಬದ್ಧ ಮತ್ತು ಸಾಂವಿಧಾನಿಕ ಬದ್ಧತೆಯ ಮೂಲಕ ಶಾಸಕಾಂಗ ಪೂರ್ವ ಸಮಾಲೋಚನೆಗಳಲ್ಲಿ ಭಾಗವಹಿಸುವ ಹಕ್ಕನ್ನು ಅಧಿಕಾರಹೊಂದಿರುವ ನಾಗರಿಕರಿಗೆ ನೀಡುವುದು ಮಹತ್ವದ ಬದಲಾವಣೆಯಾಗಬಹುದು.
ಅರುಣ್ ಪಿಎಸ್ ಕೇರಳ ಮೂಲದ ಸಾರ್ವಜನಿಕ ನೀತಿ ಸಂಶೋಧಕರಾಗಿದ್ದಾರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ