ನನ್ನ ತಮಿಳಿನ ಕಥೆಯು


ಯಾವುದೇ ನಗರದ ಸಂಸ್ಕೃತಿಯ ಅವಿಭಾಜ್ಯ ಅಂಗದ -ಅದರ ಭಾಷೆಯ - ಒಂದು ಆರಾಮದಾಯಕವಾದ ಅಜ್ಞಾನವನ್ನು ಜಾತಿ-ವರ್ಗದ ಸವಲತ್ತುಗಳು ಹುಟ್ಟುಹಾಕುತ್ತವೆ.


ತಾರಾ ಬ್ರಹ್ಮೆ


ಆಗಾಗ್ಗೆ ನಾನು ಹೊಸ ಜನರನ್ನು ಮತ್ತು ಹಳೆಯ ಸಂಬಂಧಿಕರನ್ನು ಭೇಟಿಯಾದಾಗ, ನಾನು ಮಾತನಾಡುವ, ಓದುವ ಮತ್ತು ಬರೆಯುವ ಭಾಷೆಗಳ ಸಂಖ್ಯೆಯನ್ನು ಕೇಳುತ್ತಾರೆ. ಈ ಪ್ರಶ್ನೆ ಗಮನಾರ್ಹ ನಿರೀಕ್ಷೆಗಳೊ೦ದಿಗೆ ಕೇಳಲಾಗುತ್ತದೆ:  ಭಾಷೆಯ ವಿಷಯದಲ್ಲಿ ನಮ್ಮ ಮನೆ ಮಿಶ್ರ ಜಾಗವಾಗಿದೆ. ನನ್ನ ತಾಯಿಯು ತನ್ನ ಮಾತೃಭಾಷೆ (ಮಲಯಾಳಂ), ಅವರು ವಾಸಿಸುತ್ತಿದ್ದ ನಗರದ ಸ್ಥಳೀಯ ಭಾಷೆ (ತಮಿಳು),  ಮತ್ತು ನಂತರ ಅವರು ಸ್ನಾತಕೋತ್ತರ ಪದವಿಯನ್ನು ಪಡೆದ ಇಂಗ್ಲಿಷ್ , ಅನ್ನು ಅರಿತುಕೊ೦ಡು  ಬೆಳೆದರು.  ನನ್ನ ತಂದೆಯೂ ಬಹುಭಾಷಿಯಾಗಿ ಬೆಳೆದರು, ಮರಾಠಿ ಅವರ ಮಾತೃಭಾಷೆ ಮತ್ತು ಹಿಂದಿ (ಆಗಿನ) ನಾಲ್ಕು ದಕ್ಷಿಣದ ರಾಜ್ಯಗಳ ಉತ್ತರಕ್ಕೆ ಬೆಳೆಯುವ ನೈಸರ್ಗಿಕ ಉತ್ಪನ್ನವಾಗಿತ್ತು. ಅವರು ಇಂಗ್ಲಿಷ್ ಮತ್ತು ನ೦ತರ ತಮ್ಮ ವೃತ್ತಿಯಾಗುವ  ಜರ್ಮನ್ ಅನ್ನು ಸಹ ಬಲ್ಲವರಾದರು. ಆದ್ದರಿಂದ, ನನಗೆ “ಎಷ್ಟು ಭಾಷೆಗಳು ತಿಳಿದಿವೆ ?“ಎಂಬುದರ ಕುರಿತು ಅಂತ್ಯವಿಲ್ಲದ ಪ್ರಶ್ನೆಗಳು ಉದ್ದೇಶಪೂರ್ವಕವಾಗಿ,   "ಎಲ್ಲಾ" ಎನ್ನುವ ಉತ್ತರವನ್ನು ಪ್ರತೀಕ್ಷಿಸಿ ಕೇಳಲಾಗುತ್ತಿತ್ತು.  ಇದು ನನ್ನ ಬಾಲ್ಯದ ಆರಂಭಿಕ ವರ್ಷಗಳಲ್ಲಿ ಎಲ್ಲರೂ ಆಶ್ಚರ್ಯಪಡಲು ಬಯಸಿದ ಉತ್ತರವಾಗಿತ್ತು. ಶೀಘ್ರದಲ್ಲೇ, ಆ ಉತ್ತರವು ನಾನು "ಅರ್ಥಮಾಡಿಕೊಂಡ" ಎಲ್ಲಾ ಭಾಷೆಗಳನ್ನು ಪಟ್ಟಿ ಮಾಡುವ ಮೂಲಕ  ಮರ್ಯಾದೆ ಉಳಿಸುವ ಪೆಚ್ಚು ಪ್ರಯತ್ನವಾಗಿ ಬದಲಾಗುತ್ತದೆ. ನಾನು ಬೆಳೆದ ನಗರದ ಸ್ಥಳೀಯ ಭಾಷೆಯಾದ ತಮಿಳಿನ ಬಗ್ಗೆ ಕೇಳಿದಾಗ, ನಾನು " ಅವಶ್ಯಕತೆಗೆ ಸಾಕಷ್ಟು " ಎಂದು ಹೇಳುತ್ತಿದ್ದೆ.


ನಗರದ ಸಂಸ್ಕೃತಿಯ ಅತ್ಯಂತ ಅವಿಭಾಜ್ಯ ಅಂಶಗಳಲ್ಲಿ ಒಂದಾದ ಅದರ ಭಾಷೆಗೆ ನನ್ನ  ನಿರಾತ೦ಕವಾದ ಅಜ್ಞಾನವನ್ನು ಸಾಧ್ಯಗೊಳಿಸಿದ್ದು ಏನು?  ಕುಮುದ್ ಪಾವ್ಡೆಯವರ ಪ್ರಬಂಧ, "ದಿ ಸ್ಟೋರಿ ಆಫ್ ಮೈ ಸಂಸ್ಕೃತ" (ಅವರ ಆತ್ಮಚರಿತ್ರೆ ‘ಅಂತಸ್ಫೋಟ್,’ 1981 ರಿ೦ದ), ನಾನು ನನ್ನ ಸುತ್ತ ಬೆಳೆದು ಹೊಳೆದಿದ್ದ  ಭಾಷೆಗಳೊಂದಿಗಿನ ನನ್ನ ಸ್ವಂತ ಸಂಬಂಧದ ಬಗ್ಗೆ ಈ ಆತ್ಮಾವಲೋಕನವನ್ನು ಪ್ರಚೋದಿಸಿತು. ಸತೀಶ್ ದೇಶಪಾಂಡೆಯವರ “ದಿ ಸ್ಟೋರಿ ಆಫ್ ಮೈ ಇಂಗ್ಲಿಷ್” (2019) ಇದನ್ನು ಮತ್ತಷ್ಟು ಮುಂದಕ್ಕೆ ತಳ್ಳಿತು, ಭಾಷೆ ಮತ್ತು ಜಾತಿ-ವರ್ಗದ ಸವಲತ್ತುಗಳ ಪ್ರಶ್ನೆಗಳನ್ನು ಎದುರಿಸಲು ನನ್ನನ್ನು ಒತ್ತಾಯಿಸಿತು. ಪಾವ್ಡೆ ಮತ್ತು ದೇಶಪಾಂಡೆಯವರ ಪ್ರಬಂಧಗಳಿಗಿಂತ ಭಿನ್ನವಾಗಿ, ನನ್ನದು ಸವಲತ್ತುಗಳ ಪರಿಸ್ಥಿತಿಗಳು  ಮತ್ತು ಇವು ಹೇಗೆ ಆರಾಮದಾಯಕ ಅಜ್ಞಾನವನ್ನು ಬೆಳೆಸುತ್ತವೆ ಎನ್ನುವದರ ಚಿ೦ತನೆಯಾಗಿದೆ.  ಮತ್ತು ಎರಡು ಪ್ರಬಂಧಗಳಿಗೆ ಅವರು ಒಂದು ಭಾಷೆಯಲ್ಲಿ ಎಷ್ಟು ಒಳ್ಳೆಯವರಾಗಿದ್ದರು ಎಂಬ ಸ್ತುತಿಯ ಸಾಮಾನ್ಯ ಪ್ರತಿಕ್ರಿಯೆಗೆ ಅವರ ಕಡೆಯಿಂದ (ವಿವಿಧ ಪ್ರಮಾಣಗಳಲ್ಲಿ) ಕಿರಿಕಿರಿಯ ಭಾವನೆಗೆ ಸ್ಫೂರ್ತಿ ನೀಡಿದರೆ, ನನ್ನ ಸ್ವಂತ ಚಿ೦ತನೆಯು  ಹೇಗೆ ಈ ರೀತಿಯ ಅತಿ ಅಜ್ಞಾನವನ್ನು ಕನಿಷ್ಠ ಜರೆತದಿ೦ದ  ಬೆಳೆಯಲು ಅನುಮತಿಸಲಾಗಿದೆ ಎಂಬುದನ್ನು ಪರಿಶೀಲಿಸುತ್ತದೆ. 


ಇಂದು ನಾನು "ನನ್ನ ಭಾಷೆಗಳ" ಬಗ್ಗೆ ಪ್ರಶ್ನೆಗಳನ್ನು ಅತಿ  ವಿಷಾದದೊಂದಿಗೆ ಎದುರಿಸುತ್ತೇನೆ. ಇದು ಬಾಲ್ಯದಲ್ಲಿ ನಾನು ಹೊಂದಿದ್ದ ಭಾವನೆ ಎಷ್ಟೂ ಆಗಿದ್ದಿಲ್ಲ. . ದೇಶಪಾಂಡೆ ಮತ್ತು ಪಾವ್ಡೆ ಇಬ್ಬರೂ ಕ್ರಮವಾಗಿ ಇಂಗ್ಲಿಷ್ ಮತ್ತು ಸಂಸ್ಕೃತದೊಂದಿಗೆ ಅವರ ಸಂಬಂಧವನ್ನು ತೀರ್ಮಾನಿಸಿದ ಬಾಲ್ಯದ ನಿರ್ಣೀತ ಅನುಭವದ ಬಗ್ಗೆ ಮಾತನಾಡುತ್ತಾರೆ, ಅದು ಕ್ರಮವಾಗಿ ಇಂಗ್ಲಿಷ್ ಮತ್ತು ಸಂಸ್ಕೃತದೊಂದಿಗೆ ಅವರ ಸಂಬಂಧವನ್ನು ಬಣ್ಣಿಸಿದೆ. ತಮಿಳಿನೊಂದಿಗಿನ ನನ್ನ ಸಂಬಂಧವು ಕೂಡ ಬಾಲ್ಯದ ಒ೦ದು ಘಟನೆಯೊಂದಿಗೆ ಪ್ರಾರಂಭವಾಯಿತು (ಇದು ನನ್ನ ಹೆತ್ತವರ ಮರುಕಳಿಸುವಿಕೆಯ ಮೂಲಕ ಮಾತ್ರ ನನಗೆ ತಿಳಿದಿದೆ). ಶಾಲೆಯಲ್ಲಿ ನನ್ನ ಮೊದಲ ದಿನಗಳಲ್ಲಿ ಲೋವರ್ ಕಿಂಡರ್‌ಗಾರ್ಟನ್ ಪ್ರಾರಂಭವಾದ ಕೆಲವು ದಿನಗಳಲ್ಲಿ, ನಾಲ್ಕು ವರ್ಷದ ನಾವೆಲ್ಲರೂ ಮೊದಲ ಬಾರಿಗೆ ಸ್ನೇಹಿತರನ್ನು ಮಾಡುವ ಉನ್ಮಾದದಲ್ಲಿ ಸಿಲುಕಿಕೊಂಡಾಗ, ನಾನು ಶಾಲೆಯಿಂದ ಹಿಂತಿರುಗಿ  “ನನ್ನ ಸ್ನೇಹಿತರು ಮತ್ತು ನಾನು ಇಂಗ್ಲಿಷ್ ಮಾತನಾಡುತ್ತೇವೆ” ಮತ್ತು ‘ತಮಿಳು ಮಾತನಾಡುವ ಮಕ್ಕಳೊಂದಿಗೆ’ ಸ್ನೇಹಿತರಾಗಿರಲಿಲ್ಲ,” ಎಂದು ಹೆಮ್ಮೆಯಿಂದ ಘೋಷಿಸಿದೆ. ನನ್ನ ಎಡಪಂಥೀಯ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದ ಪೋಷಕರು ತಮ್ಮ ಸ್ವಂತ ಮಗಳು ಈ ರೀತಿ ಹೇಳುತ್ತಾಳೆ ಎಂದು ಸೂಕ್ತವಾಗಿ ಆಘಾತಕ್ಕೊಳಗಾಗಿದ್ದರು.


ವಿಶೇಷವಾಗಿ ಆತಂಕಕಾರಿಯಾದದ್ದು ನನ್ನ ವಯಸ್ಸು: ನಾಲ್ಕು. ಅಲ್ಲಿಯವರೆಗೆ, ನನ್ನ ಸಂವಾದಗಳು ನನ್ನ ಹೆತ್ತವರೊಂದಿಗೆ ಮತ್ತು ಶಿಶುಪಾಲನೆ ಸ್ಥಳದಲ್ಲಿದ್ದ ಸ್ನೇಹಿತರೊಂದಿಗೆ ಮಾತ್ರ. ಮತ್ತು ಇನ್ನೂ ಕೇವಲ ನಾಲ್ಕು ವರ್ಷಗಳ ವಯಸ್ಸಿನಲ್ಲಿ ನಾನು ಈಗಾಗಲೇ ಇಂಗ್ಲಿಷ್ ಮತ್ತು "ಇತರ" ಭಾರತೀಯ ಭಾಷೆಗಳ ನಡುವೆ ಭಾಷೆಗಳಲ್ಲಿನ ಶ್ರೇಣಿಯನ್ನು ಗುರುತಿಸಲು ಕಲಿತಿದ್ದೇನೆ, ಅವರು ಮಾತಾಡುವ  ಭಾಷೆಯ ಆಧಾರದ ಮೇಲೆ ನನ್ನ ಗೆಳೆಯರ ವರ್ಗ ಸ್ಥಾನವನ್ನು (ಪ್ರಾಯಶಃ ಜಾತಿಯನ್ನು)  ನಾನು ಊಹಿಸಿದ್ದೇನೆ.  ನಾನು ಊಹಿಸಿದ್ದು ಇದನ್ನೇ ಎಂದು ನನಗೆ ಆಗ ತಿಳಿದಿರಲಿಲ್ಲ, ಆದರೆ ಇಂಗ್ಲಿಷ್ ಮಾತನಾಡುವ ನನ್ನ ಹೆಮ್ಮೆಯ ಜೊತೆಗೆ ತಮಿಳು ಮಾತನಾಡುವವರ ಬಗ್ಗೆ  ಅಸಡ್ಡೆಯೂ ಸೇರಿತ್ತು.


            ಇಂಗ್ಲಿಷ್ ಅನ್ನು "ಉನ್ನತ" ಭಾಷೆಯಾಗಿ ಸ್ವೀಕರಿಸುವುದರ ಅರ್ಥವೆಂದರೆ ನಾನು  ಸರಳವಾಗಿ ಮಾತನಾಡಬಲ್ಲ ಮರಾಠಿ ಮತ್ತು ಮಲಯಾಳಂ ಭಾಷೆಗಳನ್ನು ದೂರವಿಟ್ಟಿದ್ದೇ. ನಾನು ಈ ಸಮಯದಿ೦ದ  ಬಳಸಿದ್ದೆಲ್ಲವೂ  ಇ೦ಗ್ಲಿಷ್ ಮತ್ತು ಪಾಶ್ಚಿಮಾತ್ಯ ಮೂಲದ್ದು - ತೋರಿಕೆಯಲ್ಲಿ ಮುಗ್ಧ ಎನಿಡ್ ಬ್ಲೈಟನ್ಸ್‌ನಿಂದ ಹದಿಹರೆಯದ ಡಿಸ್ನಿ ಚಾನಲ್‌ನವರೆಗೆ, ಹನ್ನಾ ಮೊಂಟಾನಾ ಮತ್ತು ಸ್ವೀಟ್ ಲೈಫ್‌ನಂತಹ ನಾಟಕಗಳು. ಈ ವಿಷಯಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಬಗ್ಗೆ ನನ್ನ ಹೆತ್ತವರ ಆಗಾಗಿನ  ಉಪನ್ಯಾಸಗಳ ವಿರುದ್ಧ ನಾನು ಇದನ್ನು ವೈಯಕ್ತಿಕ ದಂಗೆ ಎಂದು ಬಹಳ ಸಮಯದವರೆಗೆ ನುಣುಚಿಕೊಂಡಿದ್ದೆ. ನನ್ನ ನಿಜವಾದ ಬಂಡಾಯವು ನನಗೆ ಅಜ್ಞಾನದೊಳಗೇ ಇರಲು ಮನ್ನಿಸಿ ಕೊಟ್ಟಿದ್ದ ಈ ಸ೦ರಕ್ಷಿತ  ಪಾಲನೆಯ ವಿರುದ್ಧ ಆಗಿರಬೇಕಾಗಿತ್ತು ಆದರೆ  ಆತ್ಮಾವಲೋಕನಕ್ಕಿಂತ ನನ್ನ ಹೆತ್ತವರನ್ನು ದೂಷಿಸುವುದು ಸುಲಭವಾಗಿತ್ತು.


ನಾವು ನಮ್ಮ "ಎರಡನೇ ಭಾಷೆಯನ್ನು" ಆಯ್ಕೆ ಮಾಡಬೇಕಾದಾಗ ನಾನು 4 ನೇ ತರಗತಿಯಲ್ಲಿ ಎರಡನೇ ಬಾರಿಗೆ ತಮಿಳನ್ನು ತಿರಸ್ಕರಿಸಿದೆ.  ಇದು ನಾನು ಮಾಡಿದ ಮೊದಲ "ಶೈಕ್ಷಣಿಕ" ಆಯ್ಕೆಯಾಗಿ ಆಕರ್ಷಕವಾಗಿತ್ತು.  ಉತ್ತಮ ಪ್ರಗತಿಪರ ಕುಟುಂಬದಂತೆ, ನನಗೆ ಯಾವುದು - ಹಿಂದಿ ಅಥವಾ ತಮಿಳು - ಒಳಿತು ಎಂದು ನಾವು ಚರ್ಚಿಸಿದೆವು. ಆಶ್ಚರ್ಯಕರವಾಗಿ, ನಾವು ಹಿಂದಿ ಹೆಚ್ಚು "ಉಪಯುಕ್ತ" ಎಂದು ತೀರ್ಮಾನಿಸಿದೆವು. ತಮಿಳುನಾಡಿನ ಎಲ್ಲಾ ಪ್ರಗತಿಪರ ರಾಜಕೀಯ ಮತ್ತು ಭಾಷಾ ಹೇರಿಕೆಗೆ ಅದರ ಪ್ರತಿರೋಧದ ಹೊರತಾಗಿಯೂ, ನಾನು ಭಾಷೆ ತಿಳಿಯದೆ ಇಲ್ಲಿ ವಾಸಿಸಲು ಶಕ್ತಳಾಗಿದ್ದೆ. ನಾನು ಆಗ ಇದನ್ನು ಮಾಡಲು ಸಾಧ್ಯವಾಯಿತು ಮತ್ತು ಸ್ವಲ್ಪ ಮಟ್ಟಿಗೆ ಇನ್ನೂ ಮಾಡಬಹುದು, ಆದರೆ  ಅವರ ಕಾಲದಲ್ಲಿ ಅದೇ ನಗರದಲ್ಲಿ ಬೆಳೆದ ನನ್ನ ತಾಯಿಗೆ ಅಸಾಧ್ಯವಾಗಿತ್ತು - ಇದು ಮೂಡಿಬ೦ದ ಪೀಳಿಗೆಯ ಸವಲತ್ತುಗಳ ಸಂಯೋಜನೆಯನ್ನು ತೋರಿಸುತ್ತದೆ.


ಇಂಗ್ಲಿಷಿನೊಂದಿಗಿನ ನನ್ನ ಹೆತ್ತವರ ಸಂಬಂಧ ದೇಶಪಾಂಡೆಯವರಂತೆಯೇ ಇತ್ತು. ಕಾನ್ವೆಂಟ್ ವಿದ್ಯಾವಂತರು ಮತ್ತು ಪ್ರಬಲ-ಜಾತಿ, ಮಧ್ಯಮ-ವರ್ಗದ ಹಿನ್ನೆಲೆಯಿಂದ, ಅವರಿಬ್ಬರೂ ಅದನ್ನು ತಮ್ಮ "ವರ್ಣ" ಎಂದು ಧರಿಸಲು ಬೆಳೆದರು, ಆದರೆ ಅದು ಅವರ ಏಕೈಕ ಚರ್ಮವಾಗಿರಲಿಲ್ಲ. ಅವರ ಆರಾಮದಾಯಕ ಮಧ್ಯಮ ವರ್ಗದ ಪೋಷಣೆಯ ಹೊರತಾಗಿಯೂ, ಮಕ್ಕಳಾಗಿದ್ದಾಗಲೂ ಸ್ಥಳೀಯ ಭಾಷೆ ತಿಳಿಯದೆ ಅವರು ಬೆಳೆದ ನಗರಗಳಲ್ಲಿ ಅವರು ನಿರ್ವಹಿಸಲು ಸಾಧ್ಯವಾಗಲಿಲ್ಲ. ಇಂದಿಗೂ, ಭಾಷೆಯ ಬಗ್ಗೆ ನಿರೀಕ್ಷೆಗಳು ವಿಭಿನ್ನ ಜನರಿಗೆ ವಿಭಿನ್ನವಾಗಿರುವುದಕ್ಕೆ ಇ೦ತದೇ ಕಾರಣಗಳಿವೆ  ಎಂದು ನಾನು ಭಾವಿಸುತ್ತೇನೆ.


20 ನೇ ವಯಸ್ಸಿನಲ್ಲಿ ನಾನು ನನ್ನ ಜೀವನದುದ್ದಕ್ಕೂ ಇಲ್ಲಿ ವಾಸಿಸುತ್ತಿದ್ದರೂ ನಾನು ತಮಿಳು ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಸಾಧ್ಯವಿಲ್ಲ ಎಂಬುದು ಅಕ್ಷಮ್ಯ ಎಂದು ನಾನು ಅರಿತುಕೊಂಡೆ. ಇಷ್ಟಾದರೂ, ಹೆಚ್ಚಿನ ಜನರು ನನ್ನ ಮುರಿದ ತಮಿಳನ್ನು ಕ್ಷಮಿಸದಿದ್ದರೂ ಕನಿಷ್ಠ ಅರ್ಥಮಾಡಿಕೊಳ್ಳುತ್ತಿದ್ದಾರೆ. ನನಗೆ ಯಾವತ್ತೂ ಹೊಂದಿಕೊಳ್ಳುವ ಭಾಷೆಯ ಅಗತ್ಯವಿರಲಿಲ್ಲ. ಬದಲಿಗೆ, ದೀರ್ಘಕಾಲದವರೆಗೆ, ನಾನು ತಮಿಳನ್ನು ತಿರಸ್ಕರಿಸಿದ್ದೇ ನನಗೆ ನಿರ್ದಿಷ್ಟ ಮೇಲ್ಜಾತಿ, ಮೇಲ್ವರ್ಗದ ಸಂಸ್ಕೃತಿಗೆ "ಹೊಂದಿಕೊಳ್ಳುವಂತೆ" ಅವಕಾಶ ಮಾಡಿಕೊಟ್ಟಿತು. ತನ್ನ ಮಾತೃಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲಆದರೆ  ಇಂಗ್ಲಿಷ್ ಹೆಚ್ಚಾಗಿ ಗೊತ್ತಿಲ್ಲದ  ನಗರದ ವಲಸೆ ಕಾರ್ಮಿಕ-ವರ್ಗದ ವ್ಯಕ್ತಿಯ ಅನುಭವಕ್ಕೆ  ವಿರುಧ್ಧವಾಗಿ ಬಹಳ ಅಪರೂಪವಾಗಿ ನನ್ನ ತಮಿಳಿನ ಕೊರತೆಯು  ತಿರಸ್ಕಾರದ ವಸ್ತುವಾಗಿತ್ತು. 


ನಾನು ತಮಿಳಿನಲ್ಲಿ ಒದ್ದಾಡಿದ ರೀತಿಗಿ೦ತ  ನಾನು ಇಂಗ್ಲಿಷ್ ಮಾತನಾಡಿದ ರೀತಿ  ಹೆಚ್ಚು ಮುಖ್ಯವಾದ ಅ೦ಶ ಎ೦ದು ತೋರುತ್ತದೆ. ಮತ್ತು ಭಾಷೆಗಳ ಈ ಕ್ರಮಾನುಗತ ರಚನೆಯು ನನಗೆ ಆರಾಮವನ್ನು ನೀಡಿತು, ಏಕೆಂದರೆ ನಗರದಲ್ಲಿ ನನ್ನ ಉಳಿವು ಇಂಗ್ಲಿಷ್‌ ಭಾಷೆಯಲ್ಲಿ ಸ್ಪಷ್ಟವಾಗಿ ಒದ್ದಾಡುವ  ತಮಿಳೇತರ ಭಾಷಿಕರ ಅನುಭವಕ್ಕೆ ವಿರುಧ್ಢವಾಗಿ ತಮಿಳು ಭಾಷೆಯ ಮೇಲೆ ಅವಲಂಬಿತವಾಗಿಲ್ಲ,   


ಈ ಪ್ರಬಂಧದ  ಸಮಾರೋಪ  ಮಾಡಲು ನಾನು ಪ್ರಯತ್ನಿಸುತ್ತಿರುವಾಗ, ಅದು ನಿಖರವಾಗಿ ಏನು ಎಂದು ನಾನು ನನ್ನನ್ನು ಕೇಳಿಕೊಳ್ಳುತ್ತೇನೆ. ಕೊನೆಯಲ್ಲಿ, ಇದು ನನ್ನ ತಮಿಳು ಅಥವಾ ಇಂಗ್ಲಿಷ್‌ನ ಕಥೆಗಿಂತ ಕಡಿಮೆ ನಾನು ಬಹಳ ಮೊದಲೇ ನಿರಾಕರಿಸಲು ಆಯ್ಕೆ ಮಾಡಿಕೊಂಡ ಭಾಷೆಯ ವಿಧಿಯ ಮೂಲಕ ನನ್ನ ಸ್ವಂತ ಜಾತಿ-ವರ್ಗದ ಸವಲತ್ತಿನ ಕಥೆಯಾಗಿದೆ ಎಂದು ಹೇಳಲು ನಾನು ಒಲವು ತೋರುತ್ತೇನೆ.  ದೇಶಪಾಂಡೆಯವರ ಪ್ರಬಂಧದಲ್ಲಿನ ಮಹತ್ವದ ವಾದಕ್ಕೆ ಅನುಗುಣವಾಗಿ, ಈ ಕಥೆಯು ಇಂಗ್ಲಿಷ್ ಅನ್ನು "ಮಹತ್ವದ ನಿಲುವು" ಎಂದು ಒಳಗೊಂಡಿರಬೇಕು, ಏಕೆಂದರೆ ದೇಶಪಾಂಡೆ ಗಮನಿಸಿದಂತೆ, ಭಾರತೀಯ ಸನ್ನಿವೇಶದಲ್ಲಿ ಇಂಗ್ಲಿಷ್, "[ಒಂದು ವಿಶಿಷ್ಟ ಸ್ಥಾನವನ್ನು ಆಕ್ರಮಿಸುತ್ತದೆ] ಸಾಮಾಜಿಕ ಎರಡು ಪ್ರಮುಖ  ಕಾಳಜಿಗಳಿಗೆ ಸಂಬಂಧಿಸಿದಂತೆ  - ಚಲನಶೀಲತೆ ಮತ್ತು ಪ್ರತಿಷ್ಠೆ . "


            ಆದ್ದರಿಂದ, ನಾಲ್ಕನೇ ವಯಸ್ಸಿನಲ್ಲಿಯೂ ಇಂಗ್ಲಿಷ್ ಅನ್ನು ಆರಿಸುವ ಮೂಲಕ, ಸಾಮಾಜಿಕ ವೈಶಿಷ್ಟ್ಯದ  ಮಾರ್ಗವಾಗಿ  "[ನನ್ನನ್ನು] ನನಗಿ೦ತ ಕೆಳಗಿನವರೆ೦ದು ಗ್ರಹಿಸಲ್ಪಡುವವರಾದವರಿ೦ದ ದೂರವಿರಲು ಇದು ನನಗೆ ಅವಕಾಶ ನೀಡುತ್ತದೆ “ ಎಂದು ನಾನು ಎಲ್ಲೋ ಅರ್ಥಮಾಡಿಕೊಂಡಿದ್ದೇನೆ. ಸಹಜವಾಗಿ, ಈ ಆಯ್ಕೆಯನ್ನು ನನಗೆ ಅನುಮತಿಸಿದ ಸವಲತ್ತುಗಳನ್ನು ನಾನು ಪ್ರಶ್ನಿಸುತ್ತಿರುವುದು ವರ್ಷಗಳ ನಂತರವೇ. ಮೇಲ್ಮುಖ ಚಲನಶೀಲತೆಯ ಭಾರತೀಯ ಕಲ್ಪನೆಯಲ್ಲಿ ಆಧಿಪತ್ಯ ಹೊ೦ದಲು ಇ೦ಗ್ಲಿಷ್ ಭಾಷೆಗೆ  ನಾವು ಈ ಪ್ರಾಬಲ್ಯದ ಸ್ಥಾನವನ್ನು ನೀಡಿದ್ದೇವೆ, ಅದು ನಾವು ನಿಜವಾಗಿಯೂ ಗೆದ್ದಿದ್ದೇವೆ ಎಂದು ನಾವು ವಿಶ್ವಸಿಸುತ್ತಿರುವಾಗಲೇ  ಮೆದುಳಿನ ಜಖಮ್ ನಿ೦ದಾಗುವ ಮಾತೃಭಾಷೆಯಲ್ಲಿ ಮಾತಿನ ಅಡಚಣೆ ಪ್ರೇರೇಪಿಸಲು ಅನುವು ಮಾಡಿಕೊಡುತ್ತದೆ. ನಿಜವಾಗಲೂ ಭಾಷೆಯ ಈ ಸುಳ್ಳು ಶ್ರೇಣಿಯನ್ನು ನಂಬುವ ಮತ್ತು ಪ್ರಯೋಜನ ಪಡೆಯುವ ಮೂಲಕ ನಾವು "ನಮ್ಮ" ಭಾಷೆಗಳನ್ನು ಮಾತ್ರವಲ್ಲದೆ ನಮ್ಮ ಭಾಗಗಳನ್ನೂ ಕಳೆದುಕೊಂಡಿದ್ದೇವೆ. ಆದ್ದರಿಂದ, ಬಹುಭಾಷಿಕತೆಯನ್ನು ಮೆಚ್ಚುವ ಹಂತಕ್ಕೆ ಬಂದಿದ್ದರೂ, ನಾನು ಒಂದೇ ಭಾಷೆಯಲ್ಲಿ ಓದುತ್ತೇನೆ, ಬರೆಯುತ್ತೇನೆ, ಮಾತನಾಡುತ್ತೇನೆ ಮತ್ತು ಯೋಚಿಸುತ್ತೇನೆ!


ತಾರಾ ಬ್ರಹ್ಮೆ (tara.brahme19ug@apu.edu.in) ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಬಿಎ (ಮಾನವಿಕ) ವಿದ್ಯಾರ್ಥಿ.(ಇಕೊನೊಮಿಕ್ ಎ೦ಡ್ ಪೊಲಿಟಿಕಲ್ ವೀಕ್ಲಿಯಿ೦ದ)




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು