ಕೋವಿಡ್-19 ರ ಮಧ್ಯೆ ಹವಾಮಾನ ಬದಲಾವಣೆಯ ಸವಾಲುಗಳು

.

ಜಾಗತಿಕವಾಗಿ ಇಲ್ಲಿಯವರೆಗೆ ೨೦ ಲಕ್ಷಕ್ಕಿ೦ತಲೂ ಹೆಚ್ಚು ಜನರನ್ನು ಕೊಂದಿರುವ ಸಾಂಕ್ರಾಮಿಕ ರೋಗವು ೨೦೨೦ ರ ಅತ್ಯಂತ ಪ್ರಮುಖ ಘಟನೆಯಾಗಿದೆ. ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಗೋಚರ ಪರಿಣಾಮಗಳು, ಉದಾಹರಣೆಗೆ ದಾಖಲೆ ಮುರಿಯುವ ಕಾಳ್ಗಿಚ್ಚುಗಳು, ಪ್ರವಾಹಗಳು ಮತ್ತು ಹೆಚ್ಚು ತೀವ್ರವಾದ ತಾಪಮಾನಗಳು ವಿಶೇಷವಾಗಿ ೨೦೨೧ರಲ್ಲಿ ಪ್ರಮುಖವಾಗಿವೆ.  ಈ ಎರಡು ಬಿಕ್ಕಟ್ಟುಗಳು ಗಮನಾರ್ಹವಾದ ಹೋಲಿಕೆಯನ್ನು ಹೊಂದಿವೆ.   ಎರಡೂ ಘಟನೆಗಳು ವಿಶ್ವಾದ್ಯಂತ ಪ್ರಯತ್ನಗಳನ್ನು ಮಾಡಿದ್ದರೆ  ತಪ್ಪಿಸಬಹುದಾದ್ದ ಸಾವಿಗೆ ಕಾರಣವಾದವು.  ಇದಲ್ಲದೆ, ಸಾಂಕ್ರಾಮಿಕವು ಈಗಾಗಲೇ ಹವಾಮಾನ ಬದಲಾವಣೆಯಿಂದ ಬಳಲುತ್ತಿರುವ ಜೀವನೋಪಾಯಗಳು ಮತ್ತು ಸಂಪನ್ಮೂಲಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಬಹುದು.


ರಾಜಕೀಯ ಮತ್ತು ಸಾಮಾಜಿಕ ಗಮನವು ಸಾಂಕ್ರಾಮಿಕ ರೋಗದ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ಕಡಿಮೆ ಮಾಡುವ ದಿಶೆಯಲ್ಲಿ ಬದಲಾಗಿದ್ದರೂ, ಹವಾಮಾನ ಬದಲಾವಣೆ ಮತ್ತು ಅದರ ಪರಿಣಾಮಗಳನ್ನು ಕಡೆಗಣಿಸಲೇ ಬಾರದು. ಹವಾಮಾನ ಬದಲಾವಣೆಯು ವಿಶೇಷವಾಗಿ ಮುಖ್ಯವಾಗಿದೆ ಏಕೆಂದರೆ ಡಿಸೆಂಬರ್ ೨೦೨೦ ರಲ್ಲಿ ಪ್ರಕಟವಾದ ಸ೦ಯುಕ್ತ ರಾಷ್ಟ್ರ ಸ೦ಸ್ಥೆಯ  (UN) ಪರಿಸರ ಕಾರ್ಯಕ್ರಮದ ಹೊರಸೂಸುವಿಕೆಯ ಅಂತರ ವರದಿ ೨೦೨೦  ರ ಪ್ರಕಾರ, ಈ ಶತಮಾನದಲ್ಲಿ ಪ್ರಪಂಚವು  ೩ ° ಸೆಲ್ಸಿಯಸ್ ಗಿಂತ ಹೆಚ್ಚಿನ ಜಾಗತಿಕ ತಾಪಮಾನ ಏರಿಕೆಯನ್ನು ಅನುಭವಿಸುವ ಹಾದಿಯಲ್ಲಿದೆ. ಈ ಏರಿಕೆಯು ಭಯಾನಕ ಕಲ್ಪನೆಯಾಗಿದೆ, ಏಕ೦ದರೆ ಕೈಗಾರಿಕಾ ಪೂರ್ವದ ಮಟ್ಟಗಳಿಗೆ ಹೋಲಿಸಿದರೆ ಜಾಗತಿಕ ತಾಪಮಾನವನ್ನು ೨ ° ಸೆಲ್ಸಿಯಸ್ ಗಿಂತ ಕಡಿಮೆ ಮಾಡಲು ಪ್ರಯತ್ನಿಸುವ ಪ್ಯಾರಿಸ್ ಒಪ್ಪಂದದ ಐದನೇ ವಾರ್ಷಿಕೋತ್ಸವವನ್ನು ಡಿಸೆಂಬರ್ ೨೦೨೦ ನೆನಪಿಸುತ್ತದೆ.

ಅದೇ ತಿಂಗಳಲ್ಲಿಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಬಗ್ಗೆ  ನಿಯತ ಕಾಲಿಕ  ಪ್ರಕಟಣೆ  ಲಾನ್ಸೆಟ್  ಪ್ರಕಟಿಸಿದ   ಲ್ಯಾನ್ಸೆಟ್ ಕೌ೦ಟ್ ಡೌನ್ ವರದಿಯು ಹವಾಮಾನ ಬದಲಾವಣೆಯು ನಮ್ಮ ಆರೋಗ್ಯಕ್ಕೆ  ಹಾನಿ ಮಾಡುತ್ತದೆ ಮತ್ತು ಪರಿಣಾಮವಾಗಿ ನಮ್ಮ ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ  ಎ೦ದು ಒತ್ತಿ ಹೇಳಿದೆ.  ಹವಾಮಾನ ಬದಲಾವಣೆಯನ್ನು ನಾವು ನಿಭಾಯಿಸಬೇಕಾದ ತುರ್ತುಸ್ಥಿತಿಯನ್ನು ಗ೦ಭೀರವಾಗಿ ಕಾಣಬೇಕು , ಏಕೆಂದರೆ ದೀರ್ಘಾವಧಿ ಉತ್ತಮ ಪರಿಣಾಮಗಳನ್ನು ಸಾಧಿಸುವ  ಅವಕಾಶಗಳ ಕಿಟಕಿಯು ದಿನದಿಂದ ದಿನಕ್ಕೆ ಕುಗ್ಗುತ್ತಿದೆ. 


ಲಾಕ್‌ಡೌನ್ ಮತ್ತು ದೈಹಿಕ ಅಂತರದಂತಹ ತಂತ್ರಗಳಿಂದಾಗಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪ್ರಯಾಣ ಮತ್ತು ಉತ್ಪನ್ನಗಳು ಮತ್ತು ಸೇವೆಗಳ ಬಳಕೆಯಲ್ಲಿ ಗಣನೀಯ ಇಳಿಕೆ ಕಂಡುಬಂದು,  ೨೦೨೦ ರ ಲಾಕ್‌ಡೌನ್‌ಗಳ ಆರಂಭದಲ್ಲಿ, ವಿಶ್ವಾದ್ಯಂತ ಮಾಲಿನ್ಯದ ಮಟ್ಟಗಳು ಅಸಾಧಾರಣವಾಗಿ ಕಡಿಮೆ ಆದವು ಎಂದು ವರದಿಯಾಗಿದೆ. ಆದರೆ ಲಾಕ್‌ಡೌನ್ ಎತ್ತಿದ ನಂತರ, ಹೊರಸೂಸುವಿಕೆಯಲ್ಲಿ ಜಿಗಿತವನ್ನು ಗಮನಿಸಲಾಗಿದೆ ಮತ್ತು ಪ್ರಕಟಿಸಿದ ಅಧ್ಯಯನದ ಪ್ರಕಾರ ಜೂನ್೨೦೨೦ ರ ಅಂತ್ಯದ ವೇಳೆಗೆ ಹಲವಾರು ದೇಶಗಳಲ್ಲಿ ಹೊರಸೂಸುವಿಕೆಯು ತಿರುಗಿ ಚೇತರಿಸಿಕೊಂಡಿದೆ. ಎಮಿಷನ್ಸ್ ಗ್ಯಾಪ್ ವರದಿ  ಹೊರಸೂಸುವಿಕೆಯಲ್ಲಿನ  ಅಲ್ಪ ಕಾಲದ ಕಡಿತವು ಕೂಡ ಹವಾಮಾನ ಬದಲಾವಣೆಯ ಮೇಲೆ  ಅಲ್ಪವಾದರೂ   ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದೆ. ಈಗ ಕೋವಿಡ್-19 ಲಸಿಕೆಗಳನ್ನು ವಿತರಿಸಲಾಗುತ್ತಿರುವುದರಿಂದ ಆರ್ಥಿಕ ಚಟುವಟಿಕೆಯು ಹೆಚ್ಚಾಗಲಿದೆ ಎಂಬದು ಸ೦ಭಾವ್ಯ, ಆದರೆ   ಯಾವುದೇ ಪ್ರಮುಖ ನೀತಿ ಹೊಂದಾಣಿಕೆಗಳಿಲ್ಲದಿದ್ದರೆ, ಮಾಲಿನ್ಯಕಾರಕಗಳ ಹೊರಸೂಸುವಿಕೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ.


ವ್ಯಾಯಾಮ ಮತ್ತು ಮನರಂಜನೆಗಾಗಿ ಉದ್ಯಾನವನಗಳು ಮತ್ತು ಇತರ ಹಸಿರು ಪ್ರದೇಶಗಳ ಹೆಚ್ಚಿದ ಬಳಕೆಯು ಪ್ರಪಂಚದಾದ್ಯಂತ  ಕೊವಿಡ್ - ೧೯ ನಿರ್ಬಂಧಗಳಿಗೆ ಗಮನಾರ್ಹ ಪ್ರತಿಕ್ರಿಯೆಯಾಗಿದೆ.  ಸಾಂಕ್ರಾಮಿಕ ಘಟನೆಯು ನಮ್ಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸುವಲ್ಲಿ ಹೊರಾಂಗಣ ಸ್ಥಳಗಳ ಮೌಲ್ಯದ ಅರಿವನ್ನು ಮೂಡಿಸಿದೆ. ಸುರಕ್ಷಿತ ಪರಿಸರವನ್ನು ರಚಿಸಲು ಪ್ರಪಂಚದಾದ್ಯಂತ ಹಲವಾರು ನಗರಗಳು, ಮಿಲಾನ್ ಮತ್ತು ಲಂಡನ್‌ನಲ್ಲಿ ಸೈಕಲ್ ಸವಾರಿ ಮಾರ್ಗಗಳಿಂದ ನ್ಯೂಯಾರ್ಕ್‌ನಲ್ಲಿ ಪಾದಚಾರಿ ರಸ್ತೆ ವಿಸ್ತರಣೆ ಮತ್ತು ಪಾದಚಾರವನ್ನು ಹೆಚ್ಚಿಸುವದು ಸೇರಿದ೦ತೆ, ವಿವಿಧ ಕ್ರಮಗಳನ್ನು ಘೋಷಿಸಿವೆ.  ಸಾಂಕ್ರಾಮಿಕ ಸಮಯದಲ್ಲಿ, ಈ ಉಪಕ್ರಮಗಳು ವ್ಯಕ್ತಿಗಳಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸದೆ ಪ್ರಯಾಣಿಸಲು ಅನುವು ಮಾಡಿಕೊಡುತ್ತವೆ. 


ಆಗಸ್ಟ್ 2020 ರಲ್ಲಿ ಯುರೋಪಿಯನ್ ಪರಿಸರ  ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಯುರೋಪಿನಲ್ಲಿ ಪ್ರತಿ ಎಂಟು ಸಾವುಗಳಲ್ಲಿ ಒಂದಕ್ಕೆ ಮಾಲಿನ್ಯ ಕಾರಣವಾಗಿದೆ. ಹೆಚ್ಚುವರಿಯಾಗಿ, COVID-19 ನಂತೆಯೇ, ಬಡ ಸಮುದಾಯಗಳು ಮತ್ತು ದುರ್ಬಲ ಜನರು ಹೆಚ್ಚು ಮಾಲಿನ್ಯದ  ದುಷ್ಪರಿಣಾಮ ಅನುಭವಿಸುತ್ತಾರೆ ಎಂದು ವರದಿ ಹೇಳಿದೆ. ಮಾಲಿನ್ಯದ ಹಾನಿಕಾರಕ ಪರಿಣಾಮಗಳಿಗೆ ಮಕ್ಕಳು ವಿಶೇಷವಾಗಿ ನಿಸ್ಸಹಾಯರಾಗಿದ್ದಾರೆ ಮತ್ತು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್‌ನಲ್ಲಿ  ೨೦೧೯  ರಲ್ಲಿ ಪ್ರಕಟಿಸಿದ ಅಧ್ಯಯನವು ಜಾಗತಿಕವಾಗಿ ಬಾಲ್ಯದ ಉಬ್ಬಸ (ಆಸ್ತಮಾ)ದ  ೪೦ ಲಕ್ಷ ಪ್ರಕರಣಗಳಿಗೆ ಸಂಚಾರ-ಸಂಬಂಧಿತ ವಾಯುಮಾಲಿನ್ಯ ಸಂಬಂಧಿಸಿರಬಹುದು ಎಂದು ಅಂದಾಜಿಸಿದೆ. ೨೦೨೦ ರ ಡಿಸೆಂಬರ್‌ನಲ್ಲಿ ಯುನೈಟೆಡ್ ಕಿಂಗ್‌ಡಮ್ ಪರೀಕ್ಷಕರೊಬ್ಬರು ತೀವ್ರ ಆಸ್ತಮಾದಿಂದ ಬಳಲುತ್ತಿರುವ ಒಂಬತ್ತು ವರ್ಷದ ಲಂಡನ್ ಹುಡುಗಿಯ ಸಾವಿಗೆ ವಾಯು ಮಾಲಿನ್ಯ ಕಾರಣ ಎಂದು ಕಂಡುಕೊಂಡಾಗ ಸಮಸ್ಯೆಯ ಗಂಭೀರತೆಯನ್ನು ಮಾಧ್ಯಮಗಳ ಗಮನಕ್ಕೆ ತರಲಾಯಿತು.


ಸಾಂಕ್ರಾಮಿಕದ ಸಂದರ್ಭದಲ್ಲಿ, ವಾಯು ಮಾಲಿನ್ಯ ಸೀಮಿತಗೊಳಿಸುವದರ  ಗಮನಾರ್ಹ ಪ್ರಯೋಜನಗಳು ವಿಶೇಷವಾಗಿ ಮುಖ್ಯವಾಗಿವೆ. ಪ್ರಕಟಿಸಿದ ಅಧ್ಯಯನದ ಪ್ರಕಾರ ವಾಯು ಮಾಲಿನ್ಯವು ಕೊವಿಡ್-೧೯ ಸಂಬಂಧಿತ ಸಾವುಗಳ ಅಪಾಯವನ್ನು ಹೆಚ್ಚಿಸುತ್ತದೆ. ಸಮಾಜದ ನಿರ್ದಿಷ್ಟ ಗುಂಪುಗಳು ಸಾಂಕ್ರಾಮಿಕ ರೋಗದಿಂದ ಅಸಮಾನವಾಗಿ ನೋಯುತ್ತವೆ. ಜನಾಂಗೀಯ ಅಲ್ಪಸಂಖ್ಯಾತರು ಮತ್ತು  ವಿವಿಧ ಕಾಯಿಲೆಗಳನ್ನು ಮೊದಲೇ ಹೊಂದಿರುವ ಜನರು ಕೊವಿಡ್-೧೯ ಮತ್ತು ವಾಯು ಮಾಲಿನ್ಯದ ಕೆಟ್ಟ ಆರೋಗ್ಯ ಪರಿಣಾಮಗಳನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಕೊವಿಡ್-೧೯ ಸಾಂಕ್ರಾಮಿಕ, ಹಾಗೆಯೇ ಹವಾಮಾನ ಬದಲಾವಣೆಯು ಆರೋಗ್ಯವನ್ನು ಮತ್ತು ವಿಸ್ತರಿಸುವ ಅಸಮಾನತೆಗಳನ್ನು ಸುಧಾರಿಸುವ ಪ್ರಯತ್ನಗಳಿಗೆ   ಅಡೆತಡೆಗಳನ್ನು ಸೃಷ್ಟಿಸುತ್ತವೆ  ಎಂದು ತೋರಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಸಾಂಕ್ರಾಮಿಕ ರೋಗವು ಆರೋಗ್ಯ ಮತ್ತು ವಿಜ್ಞಾನದಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಬಹುದು ಎಂದು ತೋರಿಸಿದೆ.  ವೈರಸ್ ಪತ್ತೆಯಾದ ಒಂದು ವರ್ಷದೊಳಗೆ ಅನೇಕ ಕಾರ್ಯಸಾಧ್ಯವಾದ ಲಸಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ, ಅನುಮೋದಿಸಲಾಗಿದೆ ಮತ್ತು ಉತ್ಪಾದಿಸಲಾಗುತ್ತದೆ. ಸಾಂಕ್ರಾಮಿಕವು ಜಾಗತಿಕ ಸಮಸ್ಯೆಗಳಿಗೆ ಜಾಗತಿಕ ಪರಿಹಾರಗಳ ಅಗತ್ಯವನ್ನು ಒತ್ತಿಹೇಳಿದೆ. ಕೋವಿಡ್-೧೯ ರ ನಂತರ ರಾಷ್ಟ್ರಗಳು ತಮ್ಮ ಆರ್ಥಿಕ ಚೇತರಿಕೆಯ ಕಾರ್ಯತಂತ್ರಗಳನ್ನು ರೂಪಿಸುವುದರಿಂದ, ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಎಲ್ಲರಿಗೂ ಹೆಚ್ಚು ನ್ಯಾಯೋಚಿತ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಕೆಲಸ ಮಾಡಲು ಅವಕಾಶವಿದೆ.


ಪವಿತ್ತರ್ಬೀರ್ ಸಗ್ಗು

ಚಂಡೀಗಢ


ಓದುಗರ ಪತ್ರ,  ಎಕನೊಮಿಕ್ ಅ೦ಡ್ ಪೊಲಿಟಿಕ ಲ್ ವೀಕ್ಲಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು