ದಿಶಾ ರವಿ ಗ್ಲಾಸ್ಗೋ ಶೃಂಗಸಭೆಗೆ ಹೋಗದ ಹಾಗೆ ಮಾಡಿದ್ದಕ್ಕೆ ಅಧಿಕಾರಿಗಳನ್ನು ದೂಷಿಸಿದ್ದಾರೆ
ನವೆಂಬರ್ 13, 2021
ಅರ್ಜಿಯನ್ನು ಕಳುಹಿಸಿದ 88 ದಿನಗಳ ನಂತರವೂ ತನಗೆ ಭಾರತೀಯ ಪಾಸ್‌ಪೋರ್ಟ್ ಸಿಗಲಿಲ್ಲ ಎಂದು ಕಾರ್ಯಕರ್ತೆ ಹೇಳಿಕೊಂಡಿದ್ದಾರೆ.
ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರು ತಮ್ಮ ಪಾಸ್‌ಪೋರ್ಟ್ ಅನ್ನು ಸಮಯಕ್ಕೆ ಸರಿಯಾಗಿ ಪಡೆಯದಿದ್ದಕ್ಕಾಗಿ ಸರ್ಕಾರಿ ಅಧಿಕಾರಿಗಳ ಅಸಹಕಾರವನ್ನು ದೂಷಿಸಿದ್ದಾರೆ, ಇದು ಅಂತಿಮವಾಗಿ ಗ್ಲಾಸ್ಗೋದಲ್ಲಿ ನಡೆದ COP26 ಜಾಗತಿಕ ತಾಪಮಾನ ಸಮಸ್ಯೆಯ ಶೃಂಗಸಭೆಯಲ್ಲಿ ದಿಶಾ ರವಿ ಭಾಗವಹಿಸದಿರುವದಕ್ಕೆ ಕಾರಣವಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಕಾರ್ಯಕರ್ತೆ ಅವರು ಅರ್ಜಿ ಮಾಡಿ 88 ದಿನಗಳ ನ೦ತರವೂ ತನ್ನ ಭಾರತೀಯ ಪಾಸ್‌ಪೋರ್ಟ್ ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
"ನಾನು COP26 ನಲ್ಲಿ ಇರಬೇಕಾಗಿತ್ತು ಏಕೆಂದರೆ ನಾನು @ ಗ್ರಿಸ್ಟ್‌ಗಾಗಿ (ಲಾಭರಹಿತ, ಸ್ವತಂತ್ರ ಹವಾಮಾನ ಪರಿಹಾರಗಳ ಮಾಧ್ಯಮ ಸಂಸ್ಥೆ) ವರದಿ ಮಾಡಬೇಕಾಗಿತ್ತು. ನಾನು ಅಲ್ಲಿರಲು ಅರ್ಹಳಾಗಿದ್ದೇನೆ, ಆದರೆ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದರೂ ನನ್ನ ಪಾಸ್‌ಪೋರ್ಟ್ ಅನ್ನು ನಿರಾಕರಿಸಲಾಯಿತು. ನಾನು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ 88 ದಿನಗಳು ಕಳೆದರೂ ಇನ್ನೂ ನನ್ನ ಕೈಗೆ ಬ೦ದಿಲ್ಲ,” ಎಂದು ರವಿ ಅವರು ಅಗತ್ಯ ದಾಖಲೆ ಪಡೆಯಲು ತನಗಿರುವ ಕಷ್ಟವನ್ನು ವಿವರಿಸಿದರು.
ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹಕ್ಕುಗಳನ್ನು ಬೆಂಬಲಿಸುವ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ೨೨ ವರ್ಷದ ರವಿ, ಈ ವರ್ಷ ಫೆಬ್ರವರಿಯಲ್ಲಿ ದೆಹಲಿ ಪೊಲೀಸರು ಅವರ ಬೆಂಗಳೂರಿನ ನಿವಾಸದಿಂದ ಬಂಧಿಸಿದ್ದರು. ಪೊಲೀಸರು ಆಕೆಯ ಮೇಲೆ ದೇಶದ್ರೋಹ ಮತ್ತು ಪಿತೂರಿ ಆರೋಪಿಸಿದ್ದಾರೆ. ನಂತರ ಆಕೆಗೆ ಜಾಮೀನು ಸಿಕ್ಕಿತು.
ಲಿಖಿತ ಹೇಳಿಕೆಯಲ್ಲಿ, ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ತನ್ನ ಪಾಸ್‌ಪೋರ್ಟ್ ವಿತರಣೆಯನ್ನು ಸುಗಮಗೊಳಿಸಲು ನಿರಾಕರಿಸಿದರು ಮತ್ತು ಬದಲಿಗೆ "ದಂಗೆಕೋರಳನ್ನು ಬೆಳೆಸಿದ್ದಕ್ಕಾಗಿ" ತನ್ನ ತಾಯಿಯನ್ನು ಖಂಡಿಸಿದರು ಎಂದು ಅವರು ವಿವರಿಸಿದ್ದಾರೆ. ಪೊಲೀಸ್ ಅಧಿಕಾರಿ ತನ್ನನ್ನು ಪರಾರಿಯಾಗಿರುವ ಕೋಟೀಶ್ವರ ವಿಜಯ್ ಮಲ್ಯಗೆ ಹೋಲಿಸಿ, "ನಾನು ಸಹ ಪಲಾಯನ ಮಾಡಲು ಬಯಸಿದ್ದರಿಂದ ನಾನು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದೇನೆ ಎಂದು ಅವರು ಸೂಚಿಸಿದರು, ಪಾಸ್‌ಪೋರ್ಟ್ ಪಡೆಯುವುದು ಮತ್ತು ದೇಶವನ್ನು ತೊರೆಯುವುದು ಎರಡು ವಿಭಿನ್ನ ವಿಷಯಗಳು ಎಂದು ಒಪ್ಪಿಕೊಳ್ಳಲು ಈ ಅಧಿಕಾರಿಯಿ೦ದ ಸಾಧ್ಯವಾಗಲಿಲ್ಲ" ಎಂದು ಅವರು ಹೇಳಿದರು.
ತಾವು ಭಾರತವನ್ನು ತೊರೆಯುವ ಕನಸು ಕಂಡಿರಲಿಲ್ಲ ಎಂದು ಹೇಳಿದರು.
ತನ್ನ ಪಾಸ್‌ಪೋರ್ಟ್ ಅನ್ನು ಪಡೆದುಕೊಳ್ಳುವಲ್ಲಿನ ವಿಳಂಬದ ಕುರಿತು ಶ್ರೀಮತಿ ರವಿ ಅವರ ಆರೋಪಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ