ತೊಟ್ಟಿಕ್ಕುವ ಬೆಳವಣಿಗೆ  

ಟ್ರಿಕಲ್-ಡೌನ್ ಅರ್ಥಶಾಸ್ತ್ರದ ಕುತರ್ಕ: 'ಸಂಪತ್ತು ಸೃಷ್ಟಿ' ಯಾರಿಗೆ ಲಾಭಕಾರಕ ?


ತೆರಿಗೆ ಕಡಿತ,  ಮತ್ತು ಖಾಸಗಿ ವಲಯಕ್ಕೆ,   ವಲಯದ ಶ್ರೀಮಂತರಿಗೆ , ಲಾಭದಾಯಕವಾದ ಇತರ ಹಣಕಾಸಿನ ಪ್ರೋತ್ಸಾಹ, ಈ ತರಹದ ನವ-ಉದಾರವಾದಿ ಅರ್ಥಿಕ ನೀತಿಗಳನ್ನು ಸಮರ್ಥಿಸಿಕೊಳ್ಳಲು  ನಿಧಾನವಾಗಿ , ತೊಟ್ಟಿಕ್ಕುವ ಮೂಲಕ, ಆದರೆ ಕೊನೆಗೂ ಬಡವರಿಗೆ ಸ೦ಪತ್ತಿನ ಲಭ್ಯತೆಯ,  ಸಿದ್ಧಾಂತವನ್ನು  ಸಾಮಾನ್ಯವಾಗಿ  ಉದ್ಧರಿಸಲಾಗುತ್ತದೆ.  ವಾಸ್ತವದಲ್ಲಿ ಅಂತಹ ನವ ಉದಾರವಾದಿ ಆರ್ಥಿಕ ನೀತಿಗಳು - (ನಿಯೊ-ಲಿಬರಲಿಸ೦ - Neo-Liberalism - .ಮಾರುಕಟ್ಟೆ-ಆಧಾರಿತ ಸುಧಾರಣಾ ನೀತಿಗಳಾದ "ಬೆಲೆ ನಿಯಂತ್ರಣಗಳನ್ನು ತೆಗೆದುಹಾಕುವುದು, ಬಂಡವಾಳ ಮಾರುಕಟ್ಟೆಗಳನ್ನು ಅನಿಯಂತ್ರಿತಗೊಳಿಸುವುದು, ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವುದು" ಮತ್ತು ವಿಶೇಷವಾಗಿ ಖಾಸಗೀಕರಣ ಮತ್ತು ಉಗ್ರ ಆರ್ಥಿಕ ಸ೦ಯಮದ  ಮೂಲಕ ಆರ್ಥಿಕತೆಯಲ್ಲಿ ರಾಜ್ಯದ ಪ್ರಭಾವ ಕಡಿಮೆಗೊಳಿಸುವದು)  ಆರ್ಥಿಕ ಅಸಮಾನತೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿಲ್ಲ.


ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಯಲ್ಲಿ "ಸಂಪತ್ತು ಸೃಷ್ಟಿಕಾರರ" ಪಾತ್ರವನ್ನು ಅನೇಕ ಸಂದರ್ಭಗಳಲ್ಲಿ - ೨೦೧೯ ರ ಸ್ವಾತ೦ತ್ರ್ಯದಿನ ಭಾಷಣದಲ್ಲಿ, ಮತ್ತು ಲೋಕಸಭಾ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣಕ್ಕೆ  ಧನ್ಯವಾದಗಳು ಸಲ್ಲಿಸುವ ಸ೦ದರ್ಭದಲ್ಲಿ - ಹೊಗಳಿದ್ದಾರೆ. 


ಅವರದೊ೦ದು ಟ್ವೀಟ್ ಈ ವಿಷಯದಲ್ಲಿ:


PMO India

@PMOIndia

Wealth creation is a great national service. 

Let us never see wealth creators with suspicion. 

Only when wealth is created, wealth will be distributed. Wealth creation is absolutely essential.

Those who create wealth are India's wealth and we respect them: 

PM @narendramodi

8:40 AM · Aug 15, 2019·Twitter Web App


“ಸ೦ಪತ್ತಿನ ಸೃಷ್ಟಿ ಒ೦ದು ಮಹಾನ್ ರಾಷ್ಟ್ರ ಸೇವೆ. ಸಂಪತ್ತನ್ನು ಸೃಷ್ಟಿಸುವವರನ್ನು ಎ೦ದೂ ಸ೦ಶಯದಿ೦ದ ನಾವು ನೋಡಕೂಡದು. ಸಂಪತ್ತನ್ನು ಸೃಷ್ಟಿಮಾಡಿದನಂತರವೇ ಅದನ್ನು ಹಂಚಲಾಗುವದು.  ಸ೦ಪತ್ತಿನ ಸೃಷ್ಟಿಅತ್ಯವಶ್ಯ. ಸಂಪತ್ತನ್ನು ಸೃಷ್ಟಿಸುವವರು ಭಾರತದ ಸಂಪತ್ತು ಮತ್ತು ನಾವು ಅವರನ್ನು ಗೌರವಿಸುತ್ತೇವೆ .” - ನರೆ೦ದ್ರ ಮೊದಿ


ಸಾರ್ವಜನಿಕರಿಗೆ ಸಂಪತ್ತನ್ನು ವಿತರಿಸಲು ಖಾಸಗಿ ವಲಯದಿಂದ ಸಂಪತ್ತು ಸೃಷ್ಟಿಯ ಅತ್ಯಗತ್ಯತೆಯ ಪರಿಕಲ್ಪನೆಯು ಅರ್ಥಶಾಸ್ತ್ರದಲ್ಲಿನ ‘ಟ್ರಿಕಲ್-ಡೌನ್’ - ನಿಧಾನವಾಗಿ ಎಲ್ಲರಿಗೂ ತೊಟ್ಟಿಕ್ಕುವ ಸಂಪತ್ತಿನ - ಸಿದ್ಧಾಂತಕ್ಕೆ ಮೂಲಭೂತವಾಗಿದೆ. 


ಇದು ವಾದಿಸುವದು  ಶ್ರೀಮಂತರಿಗೆ ನೀಡುವ ಲಾಭಗಳು  ಉಳಿದೆಲ್ಲರಿಗೂ ತೊಟ್ಟಿಕ್ಕುತ್ತವೆ ಎನ್ನುವ ಪ್ರತಿಪಾದನೆ.  ಅಲ್ಪಾವಧಿಯಲ್ಲಿ (ತೆರಿಗೆ ವಿನಾಯಿತಿಗಳು, ಅನಿಯಂತ್ರಣ, ಸಬ್ಸಿಡಿಗಳು ಇತ್ಯಾದಿಗಳ ಮೂಲಕ) ಉದ್ಯಮ ಹೂಡಿಕೆಯನ್ನು ಹೆಚ್ಚಿಸಲು ಕಾರ್ಪೊರೇಟ್‌ಗಳು ಮತ್ತು ಶ್ರೀಮಂತರನ್ನು ಉತ್ತೇಜಿಸುವುದು ದೀರ್ಘಾವಧಿಯಲ್ಲಿ (ಉತ್ಪಾದನೆಗಳನ್ನು ಹೆಚ್ಚಿಸುವ ಮೂಲಕ, ಉದ್ಯೋಗವನ್ನು ಸೃಷ್ಟಿಸುವ ಮೂಲಕ, ವೆಚ್ಚವನ್ನು ಹೆಚ್ಚಿಸುವ ಮೂಲಕ) ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂಬುದು ಇದರ ಅಡಿಯಲ್ಲಿರುವ ಪ್ರಮೇಯ. 


ಆದರೆ ವಾಸ್ತವಿಕವಾಗಿ ಇದು ನಿಜವಾಗಿದೆಯೇ? ಶ್ರೀಮಂತರಿಗೆ ನೀಡಿದ ಲಾಭಗಳು  ನಿಜವಾಗಿ "ಕೆಳಗಿಳಿದು"  ಸಮಾಜದ ಬಡವರನ್ನು ತಲುಪುತ್ತವೆಯೇ , ಅಥವಾ , ಸೃಷ್ಟಿಸಲಾದ ಸಂಪತ್ತು ಕೆಲವರ ಕೈಯಲ್ಲಿಯೇ ಕೇಂದ್ರೀಕೃತವಾಗಿರುವುದನ್ನು ಮುಂದುವರಿಸುತ್ತದೆಯೇ? ಈ ಪ್ರಶ್ನೆಯನ್ನು ಹಲವು ಪ್ರಕಟಿತ ಲೇಖನಗಳನ್ನು ಅಭ್ಯಸಿಸಿ ಚರ್ಚೆ ಮಾಡಲಾಗಿದೆ

ಕಾರ್ಪೊರೇಟ್ ತೆರಿಗೆ ಕಡಿತದಿಂದ ಯಾರು ಪ್ರಯೋಜನ ಪಡೆಯುತ್ತಾರೆ?

‘ಟ್ರಿಕಲ್-ಡೌನ್’ ಅರ್ಥಶಾಸ್ತ್ರದ ಒಂದು ಸಾಮಾನ್ಯ ಅಂಶವೆಂದರೆ ವ್ಯವಹಾರ ಕಾರ್ಪೊರೇಷನ್‌ಗಳಿಗೆ ಮತ್ತು ಹೆಚ್ಚಿನ ಸ೦ಪತ್ತಿನ  ವ್ಯಕ್ತಿಗಳಿಗೆ (high net-worth individuals - HNIs) ತೆರಿಗೆ ಲಾಭಗಳನ್ನು ನೀಡುವದು.  ಅವರು ತೆರಿಗೆಯಿಂದ ಉಳಿಸುವ ಹಣವನ್ನು ಉದ್ಯಮಶೀಲ ಚಟುವಟಿಕೆಗಳಲ್ಲಿ ಹೂಡಿಕೆ ಮಾಡುವುದಾಗಿ ನಿರೀಕ್ಷಿಸಲಾಗುತ್ತದೆ, ಇದು ಪ್ರತಿಯಾಗಿ, ಉತ್ಪಾದನೆ ಉತ್ತೇಜಿಸುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ  ನಿರೀಕ್ಷೆಯಿದೆ.


ಆದರೂ, ೨೦೧೯ ರಿಂದ ಭಾರತದಲ್ಲಿ ತೆರಿಗೆ ಸುಧಾರಣಾ ಕ್ರಮಗಳ ಅನುಭವದ ಮೇರೆಗೆ, ಕಾರ್ಪೊರೇಟ್ ತೆರಿಗೆ ಕಡಿತವು ಬೆಳವಣಿಗೆ ಮತ್ತು ಹೂಡಿಕೆಯನ್ನು ಉತ್ತೇಜಿಸದೆ ಇರಬಹುದು ಎ೦ದು ಕಾಣುತ್ತದೆ. ಮತ್ತೊಂದೆಡೆ, ಅಂತಹ ಕಡಿತಗಳು ಸರ್ಕಾರದ ಆದಾಯವನ್ನು ಕಡಿಮೆಗೊಳಿಸಬಹುದು, ಇದರಿಂದಾಗಿ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸರ್ಕಾರದ ವೆಚ್ಚಗಳಿಗಾಗಿ ಹಣಕಾಸಿನ ಲಭ್ಯತೆಗೆ  ಪ್ರತಿಕೂಲ ಪರಿಣಾಮ ಆಗಬಹುದು. 


“ಕಾರ್ಪೊರೇಟ್ ತೆರಿಗೆ ದರ ಕಡಿತದ ಕಾರಣದಿಂದ ಕೈ ಬಿಟ್ಟುಹೋದ ಆದಾಯವು ಸರ್ಕಾರದ ತೆರಿಗೆ ಪ್ರಯತ್ನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ, ಇದು ೨೦೧೯-೨೦ರ ಪರಿಷ್ಕೃತ ಅಂದಾಜುಗಳ ಪ್ರಕಾರ GTR [ಒಟ್ಟು ತೆರಿಗೆ ಆದಾಯ] ಕಡಿತದಲ್ಲಿ ಪ್ರತಿಫಲಿಸಿದೆ.  ಪರಿಣಾಮವಾಗಿ, ಸಾಮಾಜಿಕ ವಲಯದ ವೆಚ್ಚವು ಬಳಲುವ  ಸಾಧ್ಯತೆಯಿದೆ.”

ಇದಲ್ಲದೆ, 

“ಅರ್ಥವ್ಯವಸ್ಥೆಯ ತೆರಿಗೆ ಉತ್ಪಾದನೆಯ ಸಾಮರ್ಥ್ಯದ ವಿಷಯದಲ್ಲಿ, ಆರ್ಥಿಕತೆಗೆ ಹೆಚ್ಚಿನ ಸಾರ್ವಜನಿಕ ಹೂಡಿಕೆ ಮತ್ತು ಬಳಕೆಯ (Investment and Consumption) ಚಟುವಟಿಕೆಗಳ ವಿಸ್ತರಣೆಯ ಅಗತ್ಯವಿರುವ ಅದೇ ಅವಧಿಯಲ್ಲಿ ಅಂತಹ ಸಂಭಾವ್ಯ ತೆರಿಗೆಯ  ದೊಡ್ಡ ಘಟಕವನ್ನು  ಹೊಸ ತೆರಿಗೆ ಸುಧಾರಣೆಯು ಕೈಬಿಡುತ್ತದೆ.  ನಿಸ್ಸಂದೇಹವಾಗಿ, ಕಾರ್ಪೊರೇಟ್ ತೆರಿಗೆ ದರದಲ್ಲಿನ ಅಗಾಧವಾದ ಕಡಿತವು ಕಾಣಬಹುದಾದ  ಭವಿಷ್ಯದಲ್ಲಿ ಸರ್ಕಾರದ ಹಣಕಾಸು ಸ೦ಪನ್ಮೂಲಗಳಲ್ಲಿ ಪ್ರತಿಕೂಲತೆಯನ್ನು ರಚಿಸುವ ಸಾಧ್ಯತೆಯಿದೆ ಮತ್ತು ಸರ್ಕಾರದ ಆದಾಯದ ಹೊರೆಯು ವೈಯಕ್ತಿಕ ಆದಾಯ ತೆರಿಗೆದಾರರ ಮೇಲೆ ಮತ್ತು ಸರಕು ಮತ್ತು ಸೇವಾ ತೆರಿಗೆ(GST)ಗಳಂತಹ ಪರೋಕ್ಷ ತೆರಿಗೆಗಳ ಮೇಲೆ ಬೀಳಬಹುದು.” (J Dennis Rajakumar and S L Shetty (2020)

.

ವ್ಯಾಪಾರ ಸಂಸ್ಥೆಗಳಿಗೆ   ಉದಾರ ಕೊಟ್ಟುಬಿಡುವಿಕೆಗಳಿ೦ದಾಗಿ  ಸರ್ಕಾರವು ಮಧ್ಯಮವರ್ಗ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಮಾಡುವ ಖರ್ಚುಗಳನ್ನು ಕಿವಿಚ ಬೇಕಾಗುತ್ತಾದೆ.  ಹೀಗಾಗಿ, ಒಟ್ಟಾರೆ ಸರ್ಕಾರಿ ವೆಚ್ಚವು ೨೦೨೧-೨೨ರಲ್ಲಿ  ೧%ರಿಂದ ರೂ. ೩೪೮.೩ ಲಕ್ಷ ಕೋಟಿಗಳಿಗೆ ಮತ್ತು ಬಂಡವಾಳ ವೆಚ್ಚವು ೨೬.೨% ರಿಂದ ರೂ. ೫.೫ ಲಕ್ಷ ಕೋಟಿಗೆ ಏರಿಕೆಯಾಗಲಿದ್ದರೆ, ಆದಾಯ ಹುಟ್ಟುವಳಿ ವೆಚ್ಚ(Revenue Expenditure)ವು ರೂ. ೮೨,೧೪೨ ಕೋಟಿ ಅಥವಾ -೨.೭% ರಷ್ಟು ಕುಸಿಯಲಿದೆ. ಇದು ಆಯ-ವ್ಯಯ ಹಂಚಿಕೆಗಳನ್ನು ಕಡಿತಗೊಳಿಸಿರುವ ಸುಮಾರು ಎರಡು ಡಜನ್ ಪ್ರಮುಖ ಸರ್ಕಾರಿ ಯೋಜನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಯೋಜನೆಗಳು  ಪೌಷ್ಟಿಕಾಂಶದ ಸಾಮಾಜಿಕ ನೆರವು ಕಾರ್ಯಕ್ರಮ, ಶಾಲಾ ಮಧ್ಯಾಹ್ನದ ಊಟದ ಕಾರ್ಯಕ್ರಮ, ಬೆಲೆ ಸ್ಥಿರೀಕರಣ ನಿಧಿ ಯೋಜನೆ, ಎಲ್‌ಪಿಜಿ (ಅಡುಗೆ ಅನಿಲ) ನಗದು ಸಹಾಯ ವಿತರಣೆ,   ಉದ್ಯೋಗಗಳು ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ವಿಶೇಷವಾಗಿ ಕತ್ತರಿಸುವದರಿ೦ದ ರೈತರಮೇಲೆ ಕೆಟ್ಟ ಪರಿಣಾಮ ಬೀಳುವ  ಅಲ್ಪಾವಧಿ ಸಾಲ ಸಹಾಯಧನ, ರಸಗೊಬ್ಬರ ಸಬ್ಸಿಡಿ, ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ನೆರವು ಇ೦ತಹ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.


ಕಡಿಮೆಯಾದ ಸರ್ಕಾರಿ ಖರ್ಚು ಮತ್ತು ಅದರ ಸಹವರ್ತಿ ಪರಿಣಾಮಗಳ ಜೊತೆಗೆ, ತೆರಿಗೆ ಕಡಿತದ ಹಿಂದಿನ ಪ್ರಮುಖ ಕಲ್ಪನೆ - ಕಂಪನಿಗಳು ತೆರಿಗೆ ಕಡಿತದ ಲಾಭಗಳನ್ನು ಮುಂದೆ ಸಾರ್ವಜನಿಕರಿಗೆ ದಾಟಿಸಲು ಸಾಧ್ಯವಾಗುತ್ತದೆ - ಎಂಬದನ್ನು ಪ್ರಶ್ನಿಸಬಹುದು. ಸೆಪ್ಟೆಂಬರ್  ೨೦೧೯ರಲ್ಲಿ ಸರ್ಕಾರವು ತಂದ ತೆರಿಗೆ ನೀತಿಯಲ್ಲಿನ ಬದಲಾವಣೆಗಳನ್ನು ಉಲ್ಲೇಖಿಸಿ, ರಾಜಕುಮಾರ್ ಮತ್ತು ಶೆಟ್ಟಿ (೨೦೨೦) ಗಮನಿಸಿದರು:


“… ಕಡಿಮೆಗೊಳಿಸಿದ ಕಾರ್ಪೊರೇಟ್ ತೆರಿಗೆ ದರದಿಂದ ಲಾಭ ಪಡೆಯುವ ಈ ಕಂಪನಿಗಳು ಗ್ರಾಹಕರಿಗೆ ಈ ಲಾಭಗಳನ್ನು ವರ್ಗಾಯಿಸುತ್ತವೆಯೇ ಎಂಬುದು ಪ್ರಸಕ್ತವಾದ  ಪ್ರಶ್ನೆಯಾಗಿದೆ. ಬಹುಪಾಲು ದೊಡ್ಡ ಕಂಪನಿಗಳ ಮಾಲೀಕತ್ವವು ಬೆರಳೆಣಿಕೆಯಷ್ಟು ಪ್ರವರ್ತಕರ ಪರವಾಗಿ ವಾಲುತ್ತದೆ. ಹೆಚ್ಚಿನ ಆದಾಯದ ಪರಿಣಾಮವಾಗಿ ಇವರು ಸಾಮೂಹಿಕ ಸರಕುಗಳನ್ನು ಹೆಚ್ಚಾಗಿ ಸೇವಿಸುವ  ಪ್ರಮಾಣವು ಗ್ರಹಿಸಬಹುದಾದಷ್ಟು ಕಡಿಮೆ.  ಹೀಗಾಗಿ, ಸರ್ಕಾರದ ಇತ್ತೀಚಿನ ಕಾರ್ಪೊರೇಟ್ ತೆರಿಗೆ ನೀತಿಯು ಕೇವಲ ತಪ್ಪಾದ ಆದ್ಯತೆಗಳನ್ನು ಆಧರಿಸಿದೆಯಲ್ಲದೆ  ತಿರೋಗಾಮಿಯಾಗಿದ್ದು ಬೆರಳೆಣಿಕೆಯಷ್ಟು ಕಂಪನಿಗಳಿಗೆ ಲಾಭವಾಗುವಂತೆ ವಿನ್ಯಾಸಗೊಳಿಸಲಾಗಿದೆ.” 


ಇದನ್ನೇ ಪ್ರತಿಬಿಂಬಿಸುತ್ತಾ :


“ಕಾಲಪ್ರಮಾಣ ಅ೦ಕೆ-ಸ೦ಖ್ಯೆಗಳನ್ನು ಪರಿಶೀಲಿಸಿದರೆ, ಸಾಂಸ್ಥಿಕ ತೆರಿಗೆಗಳಲ್ಲಿನ ಅಪಾರ ಕಡಿತವು ಇಲ್ಲಿಯವರೆಗೆ. ಸಾಂಸ್ಥಿಕ ಹೂಡಿಕೆಯನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಅಪೇಕ್ಷಿತ ಫಲಿತಾಂಶವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲ…

"ವೀರೋಚಿತ ತೆರಿಗೆ ಸುಧಾರಣಾ ಕ್ರಮಗಳು" ವಿತರಣಾ ನ್ಯಾಯದ ಅಂಶಗಳ ಮೇಲೆ, ವಿಶೇಷವಾಗಿ ಸಮಾಜದಲ್ಲಿ ಹೆಚ್ಚುತ್ತಿರುವ ಆದಾಯದ ಅಸಮಾನತೆಯನ್ನು ನಿಯ೦ತ್ರಿಸುವ ವಿಷಯದಲ್ಲಿ  ಹೆಚ್ಚು ಭಾರ ಹೊರೆಸುತ್ತವೆ. ಕಾರ್ಪೊರೇಟ್ ತೆರಿಗೆಯ ಕಡಿತದ ರಾಜ್ಯಾದಾಯದ  ಅಸಮರ್ಥನೀಯತೆಯಿ೦ದಾಗಿ  ಮನೆಜನರ ಆದಾಯದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ.” (Nayakara Veeresha (2020) )

ಹೆಚ್ಚಿನ "ಅಭಿವೃದ್ಧಿ" ಹೆಚ್ಚು ಅಸಮಾನತೆಗೆ ಕಾರಣವಾಗಿದೆಯೇ?

ತೆರಿಗೆ ಕಡಿತವಾಗಲಿ ಅಥವಾ ಇತರ ಸರ್ಕಾರಿ ಪ್ರೋತ್ಸಾಹಕಗಳಾಗಲಿ, ಟ್ರಿಕಲ್-ಡೌನ್ ಅರ್ಥಶಾಸ್ತ್ರವು ಅಳವಡಿಸಿಕೊಳ್ಳುವ ವಿಧಾನವೆಂದರೆ ಅಭಿವೃದ್ಧಿಯ ಲಾಭಗಳನ್ನು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳನ್ನು ಒಳಗೊಂಡಂತೆ ಎಲ್ಲರೂ ಹಂಚಿಕೊಳ್ಳುತ್ತಾರೆ ಎಂಬ ಆಶಯದೊಂದಿಗೆ ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಯನ್ನು ಉತ್ತೇಜಿಸುವುದು. ಆದರೆ ಸಂಪತ್ತೆನ್ನುವ ರಾಶಿಗೆ  ಹೆಚ್ಚಿನದನ್ನು ಸೇರಿಸುವ ಪ್ರಕ್ರಿಯೆ ಆ ರಾಶಿಯನ್ನು  ಹೇಗೆ ವಿವಿಧ  ಆರ್ಥಿಕ ಭಾಗವಹಿಕೆದಾರರ ಮಧ್ಯೆ ವಿತರಿಸಲಾಗುತ್ತದೆ ಎಂಬುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 


ಜಾಗತಿಕ ಮತ್ತು ಭಾರತೀಯ ಆರ್ಥಿಕತೆಯಲ್ಲಿ  ‘ಕಚ್ಚಾ’ ಅ೦ದರೆ ಒಟ್ಟಾರೆ ಬೆಳವಣಿಗೆ ಮತ್ತು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳದ ಹೊರತಾಗಿಯೂ ಸಂಪತ್ತು ಮತ್ತು ಆದಾಯದ ಅಸಮಾನತೆಗಳು ವಿಸ್ತರಿಸುತ್ತಲೇ ಇವೆ ಎಂಬ ಅಂಶದಿಂದ ಇದು ನಿರೂಪಿಸಲ್ಪಟ್ಟಿದೆ.


 


ಸ್ವಾತಂತ್ರ್ಯದ ನಂತರದ ಆರಂಭಿಕ ದಶಕಗಳಲ್ಲಿ  ೩.೫%ರಷ್ಟು ನಿಧಾನಗತಿಯ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ಅವಧಿಯಿಂದ ಭಾರತವು ೨೦೦೦ ರ ದಶಕದಲ್ಲಿ ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಒಂದಕ್ಕೆ ಪರಿವರ್ತನೆಗೊಂಡಿತು. ೧೯೯೧ರಲ್ಲಿ ಆರ್ಥಿಕತೆಯ ಉದಾರೀಕರಣದ ಪ್ರಾರಂಭದ ನಂತರ, ಮುಂದಿನ ಎರಡು ದಶಕಗಳಲ್ಲಿ ಬೆಳವಣಿಗೆಯ ವೇಗವು ೬.೪% ಕ್ಕೆ ಏರಿತು ಮತ್ತು ಕೇವಲ  ೧೬ ವರ್ಷಗಳಲ್ಲಿ ಸರಾಸರಿ ಉತ್ಪಾದಕತೆ ಮತ್ತು ಜೀವನಮಟ್ಟವನ್ನು ದ್ವಿಗುಣಗೊಳಿಸಿರ ಬಹುದು. ಆದಾಗ್ಯೂ, ಕೇವಲ GDP ಬೆಳವಣಿಗೆಯ ಸಂಖ್ಯೆಯು ಜನಸಂಖ್ಯೆಯ ವಿವಿಧ ಆದಾಯ ಗುಂಪುಗಳ ಬೆಳವಣಿಗೆಯ ದರಗಳಲ್ಲಿನ ವೈವಿಧ್ಯತೆ - ವ್ಯತ್ಯಾಸಗಳನ್ನು ವಾಸ್ತವವಾಗಿ ಮರೆಮಾಡಬಹುದು.


೧೯೯೧-೨೦೧೧ : ೨೦ ವರ್ಷದ ಅವಧಿಯ ಆದಾಯ ಮತ್ತು ಬಳಕೆಯ ಹಂಚಿಕೆ ಅ೦ಕೆ-ಸ೦ಖ್ಯೆಗಳು ಆದಾಯ ವಿತರಣೆಯ ವಿವಿಧ ದಶಾ೦ಶಗಳ ಮಧ್ಯದಲ್ಲಿ ಬೆಳವಣಿಗೆಯ ದರಗಳಲ್ಲಿ ದೊಡ್ಡ ವ್ಯತ್ಯಾಸವಿದೆ ಎಂದು ತೋರಿಸುತ್ತದೆ. ಈ ವ್ಯತ್ಯಾಸಗಳು ಆದಾಯ ಮತ್ತು ಬಳಕೆಯ ಅಸಮಾನತೆಯ ತೀವ್ರ ಹೆಚ್ಚಳಕ್ಕೆ ಕಾರಣವಾಗಿವೆ, ಇದನ್ನೇ ಹಿಂದಿನ ಅಧ್ಯಯನಗಳೂ ಸ್ಥಿರಪಡಿಸಿವೆ.


ಸಂಪತ್ತಿನ ಅಸಮಾನತೆಯ ಅಂಕಿ-ಸ೦ಖ್ಯೆ ಮಾಹಿತಿಗಳು ಸಹ ಇದೇ ರೀತಿಯಾಗಿವೆ. 

ಜನವರಿ  ೨೦೧೮ರಲ್ಲಿ, ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಜಾಗತಿಕ ಅಸಮಾನತೆಯ ಕುರಿತು ಆಕ್ಸ್‌ಫ್ಯಾಮ್ ವರದಿಯು ಮತ್ತೊಮ್ಮೆ, ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಹೆಚ್ಚು ಬಡವರಾಗುತ್ತಿದ್ದಾರೆ ಎಂದು ಪುನರುಚ್ಚರಿಸಿತು. ವರದಿಯ ಪ್ರಕಾರ, ಭಾರತದ  ೧೦% ಅಗ್ರ ಶ್ರೀಮಂತ ವರ್ಗ ಈಗ ಒಟ್ಟು ರಾಷ್ಟ್ರೀಯ ಸಂಪತ್ತಿನ ೭೭.೪% ಅನ್ನು ಹೊಂದಿದ್ದಾರೆ ಮತ್ತು ಶಿಖರ ಮಟ್ಟದ ೧% ನವರು ಅದರ ೫೧.೫೩%ಅನ್ನು ಹೊಂದಿದ್ದಾರೆ


ಬಡತನ ಅನುಭವಿಸುವವರ ಪೂರ್ಣ ಸ೦ಖ್ಯೆಗಳು ಕಡಿಮೆಯಾಗಿರಬಹುದು ಮತ್ತು ಬಡವರಲ್ಲಿ ಕೆಲವು ವಿಭಾಗದ  ಜೀವನಮಟ್ಟ ಸುಧಾರಿಸಿರಬಹುದು, ಆದರೂ ವಿಶಾಲವಾದ ಅಸಮಾನತೆಗಳು - ವ್ಯಕ್ತಿಗಳ ನಡುವೆ ಮತ್ತು ವಿಶಿಷ್ಟ ಗುರುತಿನ  ಗುಂಪುಗಳ ನಡುವೆ - ಕಳವಳಕಾರಿ ವಿಷಯವಾಗಿದೆ. 



ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುತ್ತಾ  ಅಸಮಾನತೆಯಲ್ಲಿ  ಕಡಿತವಿಲ್ಲದೆ ಬಡತನವನ್ನು ಕಡಿಮೆಗೊಳಿಸಿದರೆ, ಅಸಮಾನತೆಯನ್ನು ಅದೇ ಸಮಯದಲ್ಲಿ ಕಡಿಮೆಗೊಳಿಸಿದಾಗಿದ್ದರೆ ಒಟ್ಟಾರೆ ದೊರಕಲಾಗುವ  ಫಲಕ್ಕಿ೦ತ ತುಂಬಾ ಕಡಿಮೆ ಗಣನೀಯವಾಗಿರುತ್ತದೆ. (Thomas E Weisskopf (2011))

.


ಸುಧಾರಣೆಯ ನಂತರದ ಅವಧಿಯಲ್ಲಿ ಬಡತನ ಕಡಿತವು ಯಾವುದೇ ಸಂದರ್ಭದಲ್ಲಿ ಭಾರತದಲ್ಲಿನ ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಯೊಂದಿಗೆ ಸಮಾನವಾಗಿ ಹೆಜ್ಜೆ ಹಾಕಿಲ್ಲ.


ಸುಧಾರಣಾ ನಂತರದ ಅವಧಿಯಲ್ಲಿ ತಲಾವಾರು GDP ಯಲ್ಲಿ ವೇಗದ ದರದಲ್ಲಿ ಏರಿಕೆಯಾಗಿದ್ದರೂ ಬಡತನ ಕಡಿತದ ವೇಗ ಏಕೆ ಕಡಿಮೆಯಾಗಿದೆ? 


ಶ್ರೀಮಂತ-ಬಡವರ ವಿಭಜನೆಯು "ಸಾಮಾಜಿಕ ವಿಭಜನೆ" ಯನ್ನು ಒಳಗೊಳ್ಳುತ್ತದೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳಂತಹ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಜನರು,  ಮಹಿಳೆಯರು ಹಾಗೂ ಮಕ್ಕಳು, ಕನಿಷ್ಠ ಪ್ರಯೋಜನವನ್ನು ಮಾತ್ರ ಬೆಳವಣಿಗೆ ಮತ್ತು ಹೆಚ್ಚುತ್ತಿರುವ ಸಮೃದ್ಧಿಯಿಂದ ಪಡೆದಿದ್ದಾರೆ. ಈ ವಿಭಾಗಗಳಿಗೆ ವಿವಿಧ ಅಭಿವೃದ್ಧಿ ಸೂಚ್ಯಂಕಗಳಲ್ಲಿನ ಸುಧಾರಣೆಯ ನಿಧಾನಗತಿ,  ಮತ್ತು ಇವರಿಗೇ ಗುರಿಮಾಡುವ ಯೋಜನೆಗಳು ಮತ್ತು ಆರೋಗ್ಯ, ಶಿಕ್ಷಣ ಮತ್ತು ಬಡತನ ನಿರ್ಮೂಲನೆ ಕಾರ್ಯಕ್ರಮಗಳಂತಹ ಸಾಮಾಜಿಕ ಕ್ಷೇತ್ರಗಳಿಗೆ ಸಾರ್ವಜನಿಕ ವೆಚ್ಚದಲ್ಲಿ ನಿಧಾನಗತಿಯ ಏರಿಕೆ,   ಮತ್ತು ಈ ಅವಧಿಯಲ್ಲಿ ವಿವಿಧ ರೀತಿಯ ಅಪಾಯಗಳಿಗೆ ಬಡವರ ಹೆಚ್ಚಿನ ಭೇದ್ಯವನ್ನು  ಆರ್ಥಿಕ ಅಧ್ಯಯನಗಳಲ್ಲಿ  ವ್ಯಾಪಕವಾಗಿ ದಾಖಲಿಸಲಾಗಿದೆ. (C H Hanumantha Rao (2009))



ರಾವ್ ಅವರ ಮೌಲ್ಯಮಾಪನದ ನಿಷ್ಕರ್ಷೆಯ ಪ್ರಕಾರ, ಶ್ರೀಮಂತರಿಗೆ ತೆರಿಗೆ ಮತ್ತು ಇತರ ಹಣಕಾಸಿನ ಪ್ರೋತ್ಸಾಹಗಳ ಟ್ರಿಕಲ್-ಡೌನ್ ವಿಧಾನವು ಪ್ರತಿಕೂಲ ಅನುಭವಿಸುವ ವರ್ಗಗಳಿಗೆ ಉಪಯುಕ್ತವಾದ   ಸಾಮಾಜಿಕ ವಲಯದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸರ್ಕಾರಕ್ಕೆ ಹಣಕಾಸಿನ ಸೌಕರ್ಯವನ್ನು ಮತ್ತಷ್ಟು ಹಿಸುಕುತ್ತದೆ. 


ವಾಸ್ತವವಾಗಿ, ಆರ್ಥಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಸಾಮಾನ್ಯವಾಗಿ ‘ಟ್ರಿಕಲ್ ಡೌನ್’ ಪ್ರಮೇಯಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಕ್ರಮಗಳ ಅಗತ್ಯವಿರುತ್ತದೆ ಎಂದು ನಂಬಲಾಗಿದೆ. 



ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತ ಮತ್ತು ಬಡತನವನ್ನು ಎದುರಿಸುತ್ತಿರುವಾಗಲೂ  ಆರ್ಥಿಕ ಅಸಮಾನತೆಗಳನ್ನು ಕಡಿಮೆ ಮಾಡಲು ಭಾರತದಂತಹ ಬಡ ರಾಷ್ಟ್ರದ ಸರ್ಕಾರವು ಬಹಳಷ್ಟು ಮಾಡಬಹುದು. ಶ್ರೀಮಂತರ ಆರ್ಥಿಕ ಲಾಭಗಳನ್ನು ಮಿತಿಗೊಳಿಸುವ ಅತ್ಯಂತ ಆಶಾದಾಯಕ ಭರವಸೆಯ ನೀತಿಗಳೆಂದರೆ ಅವರ ಆದಾಯ ಮತ್ತು (ವಿಶೇಷವಾಗಿ) ಸಂಪತ್ತಿನ ಮೇಲೆ ಹಂತಹಂತವಾಗಿ ವರ್ಧಿಸುವ ಪ್ರಗತಿಪರ ತೆರಿಗೆ ವಿಧಿಸುವದು "ಕಾರ್ಪೊರೇಟ್ ಕಲ್ಯಾಣ" ಕಡಿಮೆ ಮಾಡುವದು, ಏಕಸ್ವಾಮ್ಯದ ಮಾರುಕಟ್ಟೆ ಸ್ಥಾನಗಳನ್ನು ಚೆದುರಿಸುವದು  ಮತ್ತು ಗೈರುಹಾಜರಾದ ಆಸ್ತಿ-ಮಾಲೀಕರಿಂದ ಮಾಲೀಕತ್ವವನ್ನು  ( ವಿಶೇಷವಾಗಿ ಭೂಮಿ) ಬದಲಾಯಿಸುವದು. ಬಡವರು ಮತ್ತು ಅಂಚಿನಲ್ಲಿರುವವರ ಆರ್ಥಿಕ ಲಾಭಗಳನ್ನು ವಿಸ್ತರಿಸುವ ಅತ್ಯಂತ ಯಶಸ್ವಿ ನೀತಿಗಳೆಂದರೆ ಅವರ ಆರೋಗ್ಯವನ್ನು ಸುಧಾರಿಸುವುದು, ಉತ್ತಮ-ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ಅವರ ಪ್ರವೇಶವನ್ನು ಹೆಚ್ಚಿಸುವುದು, ಸಾಲಗಳನ್ನುಸುಲಭವಾಗಿ ಒದಗಿಸುವದು, ಮಾರುಕಟ್ಟೆಗಳಿಗೆ ಅವರ ಪ್ರವೇಶವನ್ನು ಸುಧಾರಿಸುವುದು,  ಉದ್ಯೋಗವನ್ನು ಹೆಚ್ಚಾಗಿಸುವ ಕ್ರಮಗಳನ್ನು ಉತ್ತೇಜಿಸುವುದು ಮತ್ತು ಆಸ್ತಿಯ ಮಾಲೀಕತ್ವನ್ನು ನಿಜವಾದ ಉತ್ಪಾದಕರಿಗೆ (ವಿಶೇಷವಾಗಿ ಕೃಷಿಕರಿಗೆ). ಬದಲಾಯಿಸುವುದು (Weisskopf (2011)).

ಬಂಡವಾಳಶಾಹಿ ಅಭಿವೃದ್ಧಿಯ ಮಾದರಿಯು ಅಸಮಾನತೆಯಿಂದ ಮುಕ್ತವಾಗಬಹುದೇ?

ಅಸಮಾನತೆ ಮತ್ತು ಬಡತನವು ಟ್ರಿಕಲ್-ಡೌನ್ ಆರ್ಥಿಕ ಮಾದರಿ ಮತ್ತು ನವ-ಉದಾರವಾದಿ ನೀತಿಗಳ ಅಗತ್ಯ ಒಡನಾಡಿಯಾಗಲೇ ಬೇಕೆ ? ಅಥವಾ ಬಂಡವಾಳಶಾಹಿ ವ್ಯವಸ್ಥೆಯೊಳಗೆ ಆದಾಯ ಮತ್ತು ಸಂಪತ್ತು ವ್ಯತ್ಯಾಸಗಳನ್ನು ನಿರ್ಮೂಲಿಸ ಬಹುದೇ ? 


ನವ-ಉದಾರವಾದಿ ನೀತಿಗಳ ತಳಹದಿಯ ಸೈದ್ಧಾಂತಿಕ ಚೌಕಟ್ಟಿನಲ್ಲಿ ಏನಾದರೂ ಕೊರತೆಯಿರಬಹುದು ಎಂದು ವಾದಿಸಲಾಗಿದೆ: 

 

"ಒಳಗೊಳ್ಳುವಿಕೆಯ  ಬೆಳವಣಿಗೆ" ಎಂಬುದು ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಪದವಾಗಿದೆ, ಇದನ್ನು ಅಭಿವೃದ್ಧಿ ಸಾಹಿತ್ಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳವಣಿಗೆಯನ್ನು,  ಅಲ್ಲದೆ ಒಳಗೊಳ್ಳುವಿಕೆಯ  ಬೆಳವಣಿಗೆಯನ್ನು ಸಾಧಿಸುವ  ನಿರೀಕ್ಷೆಯಿ೦ದ - ನವ-ಉದಾರವಾದಿ ನೀತಿಯ ಚೌಕಟ್ಟಿನ ಸನ್ನಿವೇಶದಲ್ಲಿ  ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಪದವನ್ನು ಬಳಸಲಾಗುತ್ತದೆ.  ಆದಾಗ್ಯೂ, ಈ ಹೆಚ್ಚಿನ ದೇಶಗಳ ಪ್ರಾಯೋಗಿಕ ಪುರಾವೆಗಳು, ನವ-ಉದಾರವಾದಿ ನೀತಿಗಳು ಮುಖ್ಯವಾಹಿನಿಯ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೊರಗಿಡಲ್ಪಟ್ಟ ವಿಭಾಗಗಳನ್ನು  ಒಳಗೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿ  ಯಶಸ್ವಿಯಾಗಿಲ್ಲ ಎಂದು ಸೂಚಿಸುತ್ತದೆ. (Indira Hirway (2012))


ಬಂಡವಾಳಶಾಹಿ ಇತಿಹಾಸದಲ್ಲಿ ವಿಪರೀತ ಅಸಮಾನತೆಯು ಅಸಾಮಾನ್ಯ ಲಕ್ಷಣವಲ್ಲ.:


ಆರ್ಥಿಕತೆಯ ಶ್ರೀಮಂತ  ೧% ತನ್ನನ್ನು ತಾನೇ ಪ್ರತ್ಯೇಕಿಸುತ್ತದೆ ಎನ್ನುವದು ಬಂಡವಾಳಶಾಹಿಯ ಇತಿಹಾಸದಲ್ಲಿ "ಸಾಮಾನ್ಯ" ಭಾಗವಾಗಿದೆ, ಇದಕ್ಕೆ ಅಪವಾದ  ೧೯೧೪ ರಿಂದ  ೧೯೭೫ರ ವರೆಗಿನ ಎರಡು ವಿಶ್ವ ಯುದ್ಧಗಳು, ರಷ್ಯನ್ ಮತ್ತು ಚೀನೀ ಕ್ರಾಂತಿಗಳು, ಮಹಾ ಆರ್ಥಿಕ ಕುಸಿತ ಮತ್ತು ಎರಡನೇ ಮಹಾ ಯುದ್ಧದ ನ೦ತರದ ನಂತರದ ಪ್ರಪಂಚದ  ೧೯೭೫ರ ವರೆಗಿನ ಕಲ್ಯಾಣ ರಾಜ್ಯದ ಅಸಾಧಾರಣ ಅವಧಿ


ಅಸಮಾನತೆಯ ಅಸಾಧಾರಣ ಹೆಚ್ಚಳವು ಗಮನಾರ್ಹವಾದ ನಿರುದ್ಯೋಗ, ಕಡಿಮೆ ಉದ್ಯೋಗ, ಮತ್ತು ಹೂಡಿಕೆಯ ಗಣನೀಯ  ಕಡಿಮೆ ಬಳಕೆಯಿ೦ದ ಕೂಡಿದೆ...


ಈ ನೀತಿಯ ಚೌಕಟ್ಟಿನ ಅಡಿಯಲ್ಲಿ ಸೇರ್ಪಡಿಕೆಯು  ಟ್ರಿಕಲ್ ಡೌನ್ ಪರಿಣಾಮವಾಗಿ   ಉತ್ಪಾದಕ  ಉದ್ಯೋಗದ ಬೃಹತ್ ಬೆಳವಣಿಗೆಯ ಮೂಲಕ ಸಾಧಿಸಬಹುದು ಎಂದು ನಿರೀಕ್ಷಿಸಲಾಗಿದೆಯಾದರೂ,   ಕಾರ್ಮಿಕ ಬಲದ ಪೂರ್ಣ ಅಥವಾ ಅದಕ್ಕೆ ಹತ್ತಿರದ  ಉದ್ಯೋಗವನ್ನು ಖಾತ್ರಿಪಡಿಸುವದಕ್ಕೆ ಸಂಬಂಧಿಸಿದಂತೆ ಈ ಚೌಕಟ್ಟು ತೀವ್ರ ಮಿತಿಗಳನ್ನು ಹೊಂದಿದೆ ಎಂದು ಕ೦ಡುಬರುತ್ತದೆ.



ಆರ್ಥಿಕ ವಿಭಜನೆಯನ್ನು ನಿವಾರಿಸಲು ನವ-ಉದಾರವಾದಿ ನೀತಿಗಳ ಮೇಲೆ ಅವಲಂಬಿಸುವದರ ಮೂಲಭೂತ ನ್ಯೂನತೆಯನ್ನು ಈ ರೀತಿ ವಿವರಿಸಲಾಗಿದೆ:


ಈ ಮಾದರಿಯ ಅಡಿಯಲ್ಲಿ ಹೊರಗಿಡಲ್ಪಟ್ಟವರನ್ನುಸೇರ್ಪಡಿಸುವ ಮುಖ್ಯ ಹೊರೆ ಜಿಡಿಪಿಯ ಹೆಚ್ಚಿನ ದರದ ಬೆಳವಣಿಗೆಯ ಮೂಲಕ ಗಳಿಸಿದ ಆದಾಯದ ಮರುಹಂಚಿಕೆ ಮೇಲೆ ಬೀಳುತ್ತದೆ.  ಈ ವಿಧಾನದಲ್ಲಿ ಕೆಲವು ಮೂಲಭೂತ ಸಮಸ್ಯೆಗಳಿವೆ. ಮೊದಲನೆಯದಾಗಿ, ಈ ವಿಧಾನವು ಜನಸಂಖ್ಯೆಯ ಕೆಲವು ವಿಭಾಗಗಳು ಮತ್ತು ಆರ್ಥಿಕತೆಯ ಕೆಲವು ಪ್ರದೇಶಗಳನ್ನು ನಡೆಯುತ್ತಿರುವ ಬೆಳವಣಿಗೆಯ ಹೊರಗಿಡಲು ಕಾರಣವಾಗಿರುವ ಪ್ರಕ್ರಿಯೆಯನ್ನು ಬದಲಾಯಿಸುವುದಿಲ್ಲ. ಪರಿಣಾಮವಾಗಿ, ಆರ್ಥಿಕತೆಯಲ್ಲಿ ಹೊರಗಿಡುವ ಪ್ರಕ್ರಿಯೆಯು ಮುಂದುವರಿಯುತ್ತಲೇ ಇರುತ್ತದೆ, ಪುನರ್ವಿತರಣೆ ಪ್ರಯತ್ನಗಳು ಹೆಚ್ಚು ದುರ್ಬಲಗೊಳ್ಳುತ್ತವೆ. ಸೇರ್ಪಡೆ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿಲ್ಲದಿದ್ದಾಗ, ಅದರ ಫಲದ  ಮರುಹಂಚಿಕೆ ಸೇರ್ಪಡೆಯ ಮೇಲೆ ಯಾವುದೇ ಶಾಶ್ವತವಾದ ಪರಿಣಾಮವನ್ನು ಬೀರುವುದಿಲ್ಲ 


ಎರಡನೆಯದಾಗಿ, ಪುನರ್ವಿತರಣೆಯು ರಾಜಕೀಯ ಆರ್ಥಿಕತೆಯ ಪ್ರಶ್ನೆಯಾಗಿದೆ. ನವ-ಉದಾರವಾದಿ ನೀತಿಗಳ ಅಡಿಯಲ್ಲಿ ಬೆಳವಣಿಗೆಯ ಮೊದಲ ಹಂತದ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ ಬಲವಾದ ಪಟ್ಟಭದ್ರ ಹಿತಾಸಕ್ತಿಗಳು ಅಗತ್ಯ ಮಟ್ಟದ ಪುನರ್ವಿತರಣೆಯನ್ನು ಅನುಮತಿಸದಿರಬಹುದು


‘ನಿಯೋಕ್ಲಾಸಿಕಲ್’ ಎoದು ಕರೆಯುವ ಅರ್ಥಶಾಸ್ತ್ರದ "ಟ್ರಿಕಲ್-ಡೌನ್" ಸಿದ್ಧಾಂತವನ್ನು ಸಾಕಷ್ಟು ತಳ್ಳಿಹಾಕಿದ್ದರೂ ಸಹ, ಜನಪ್ರಿಯತೆಯನ್ನು ಪಡೆದಿರುವ  ಅಭಿವೃದ್ಧಿಯ ಐತಿಹಾಸಿಕ ವ್ಯಾಖ್ಯಾನದ ಸುತ್ತ ಬಲವಾದ ರಾಜಕೀಯ ಒಮ್ಮತವನ್ನು ನಿರ್ಮಿಸಲಾಗಿದೆ.


ನವ-ಉದಾರವಾದಿ ರಾಜ್ಯವು ವ್ಯಾಪಾರ ಉದ್ಯಮಗಳು ಮತ್ತು "ಅಭಿವೃದ್ಧಿ" ಯೋಜನೆಗಳ ನಡುವೆ ನೈಸರ್ಗಿಕ ಮತ್ತು ಈಗಾಗಲೇ ಭಾವಿಸಲಾದ ಸಂಬಂಧವನ್ನು ಸೆಳೆಯುತ್ತದೆ, ಈ ವಿಚಾರ ಧಾರೆಯು  ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಗಮನಾರ್ಹ ನೈತಿಕ ಬಲವನ್ನು ಪಡೆದು ಮುಂದುವರೆಸಿದೆ. 

 

ಒಂದು ವ೦ಚನೆಯ ಕ್ರಮದಲ್ಲಿ, ಬಂಡವಾಳದ ಅವಶ್ಯಕತೆಗಳು - ಕಾರ್ಮಿಕರು, ಮೂಲಸೌಕರ್ಯ ಮತ್ತು ಲಾಭದ ಉತ್ಪಾದನೆ - ಇವನ್ನು ಮಾತ್ರ ನಮಗೆ "ಅಭಿವೃದ್ಧಿಯ" ಸೂಚ್ಯಂಕಗಳಾಗಿ ಮಾರಲಾಗುತ್ತದೆ. 


ಅಭಿವೃದ್ಧಿಯ ಕಲ್ಪನೆಯು ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಹೆಚ್ಚು ನಿಕಟವಾಗಿ ರೂಪಿಸಲ್ಪಟ್ಟಿದೆ, ಸಮಾಜದ ಅತ್ಯಂತ ಬಡ ವರ್ಗಗಳ ಅಗತ್ಯತೆಗಳ ಬಗ್ಗೆ ಯಾವುದೇ ಬದ್ಧತೆಯನ್ನು ಶೂನ್ಯಗೊಳಿಸುತ್ತದೆ. (Vasundhara Jairath (2021))


ರಾಜನ್ ಗುರುಕ್ಕಲ್  (೨೦೧೮) ಅವರು "ಅಭಿವೃದ್ಧಿ" ಎಂಬ ಪದದ ಬಗ್ಗೆ ಇದೇ ರೀತಿಯ ವಾದವನ್ನು: ಮ೦ಡಿಸಿದರು: 

... ಜನಪ್ರಿಯ ಭಾಷೆಯಲ್ಲಿ "ಅಭಿವೃದ್ಧಿ" ಎಂಬ ಪದವನ್ನು ಜನರು ತಮಗಾಗಿ ಬಯಸುವ ಎಲ್ಲವನ್ನು ಅರ್ಥೈಸಲಾಗುತ್ತದೆ. ಇದರ ಬಳಕೆ ಮಾತ್ರ ಜಾಣತನದಿಂದ ಮತ್ತು ಯಶಸ್ವಿಯಾಗಿ ಅದರ ನೈಜ ಅರ್ಥವನ್ನು ಮರೆಮಾಚುತ್ತದೆ: ಅಡಿಯಲ್ಲಿರುವ  "ವಸಾಹತುಶಾಹಿ" ಮತ್ತು "ಸಾಮ್ರಾಜ್ಯಶಾಹಿ"   ಪರಿಣಾಮಗಳೊಂದಿಗೆ ಬಂಡವಾಳಶಾಹಿ ಬೆಳವಣಿಗೆ. 

… ಹಿಂಜರಿತಗಳ ಪುನರಾವರ್ತನೆಯ ಹೊರತಾಗಿಯೂ, ಬಂಡವಾಳಶಾಹಿ ಸಂಗ್ರಹಣೆಯ ಹೊಸ ತಂತ್ರಗಳ ಮೂಲಕ ವಿಸ್ತಾರಗೊ೦ಡು ,  "ಅಭಿವೃದ್ಧಿ" ಎಂಬ ಸೈದ್ಧಾಂತಿಕ ಮುಸುಕಿನ ಅಡಿಯಲ್ಲಿ ಸಾಮಾಜಿಕ ನ್ಯಾಯಸಮ್ಮತತೆಯನ್ನು ಪಡೆಯಲು ಸಾಧ್ಯವಾಯಿತು. ಆದ್ದರಿಂದ, ಅಭಿವೃದ್ಧಿಯು ಒಂದು ಚೇಷ್ಟೆಯ ಪದವಾಗಿದೆ, ಆದರೆ ಯಾವುದೋ ಆದರ್ಶಕ್ಕಾಗಿ ಸಾರ್ವತ್ರಿಕ ಮೆಚ್ಚುಗೆಯಾಗಿದೆ. (Rajan Gurukkal (2018))

 


ಅಭಿವೃದ್ಧಿಯ ಚರ್ಚೆಯಲ್ಲಿ  ಅಸಮಾನತೆಗಳ ಹೆಚ್ಚುತ್ತಿರುವ ವಾಸ್ತವತೆಯ ಅಂಗೀಕಾರದೊಂದಿಗೆ, GDP ಯಂತಹ  ಉತ್ಪಾದನೆ ಆಧಾರಿತ ಅಭಿವೃದ್ಧಿ ಮಾಪನಗಳು ಜನಪ್ರಿಯವಾಗಿವೆ. ಮಾನವ ಅಭಿವೃದ್ಧಿ ಸೂಚ್ಯಂಕದಂತಹ ಪರ್ಯಾಯ ವಿಧಾನಗಳು ಇದ್ದರೂ ಟ್ರಿಕಲ್-ಡೌನ್ ನಿರೂಪಣೆಯನ್ನು ಬದಲಿಸಲು ಸಾಧ್ಯವಾಗಲಿಲ್ಲ.


ಮಾನವ ಅಭಿವೃದ್ಧಿ ಎ೦ದರೇನು ? ಇದು  ಅಭಿವೃದ್ಧಿಯನ್ನು ಕಲ್ಯಾಣಕ್ಕೆ ಭಾಷಾಂತರಿಸಲು ಬಹುಶಃ ಅಗತ್ಯವಾದ ಕಲ್ಪನೆಯಾಗಿರಬಹುದು, ಆದಾಗ್ಯೂ, ಇದು ಇನ್ನೂ ‘ಗುರಿ’ಗಳಿಗೆ ಎದುರಾಗಿ,  ಪ್ರತಿಕೂಲವಾಗಿ ‘ಸಾಧನ’ಗಳ ಪ್ರಾಮುಖ್ಯತೆಗೆ ಒತ್ತಡಕೊಡುತ್ತದೆ.  ಅಂತಹ ವಾದವನ್ನು ‘ವಿತರಣೆ’ಯ ವಿರುಧ್ಧವಾಗಿ  ‘ಅಭಿವೃದ್ಧಿ’ಯ ಸಂದರ್ಭದಲ್ಲಿ ಮಾಡಲಾಗಿದೆ. ಇದರಲ್ಲಿ ನ್ಯಾಯೋಚಿತ ವಿತರಣೆಯನ್ನು ಆದರ್ಶವೆಂದು ಪರಿಗಣಿಸಲಾಗುತ್ತದೆ,  ಆದರೆ ಬೆಳವಣಿಗೆಯ  ‘ದ್ರವ್ಯ’ದ ಉತ್ತಮ ಪ್ರಮಾಣವನ್ನು ಹೊ೦ದುವದು ಪೂರ್ವಾಪೇಕ್ಷಿತವೆಂದು ಪರಿಗಣಿಸಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಯಾವುದೇ ವಿಧಾನದಿಂದ ಆಸ್ವಾದಿಸಬೇಕಾದ ರೊಟ್ಟಿಯ ಗಾತ್ರವನ್ನು  ದೊಡ್ಡ-ದೊಡ್ಡದಾಗಿ  ಮಾಡಲು ಒತ್ತು ನೀಡಬೇಕು ಮತ್ತು ಇದರಿ೦ದಾಗಿ ಸ್ವಯಂಚಾಲಿತವಾಗಿ ವಿತರಣೆಯ ಪ್ರಕ್ರಿಯೆಯ  ರೊಟ್ಟಿಯ  ಪಾಲು ಸಹ ದೊಡ್ಡದಾಗಿರುತ್ತದೆ ಎನ್ನುವ ಐತಿಹ್ಯವಿದೆ. ಸ್ಥಾಪಿತವಾದ ಗುರಿಯ  ಕಡೆಗೆ ಸಾಧನಗಳ ಸ್ಪಷ್ಟವಾದ ನ೦ಬಿಕೆಯ ಈ ಊಹೆಯು ಕಾಲ್ಪನಿಕವಾಗಿದೆ . ಹೇಗೆ ಮತ್ತು ಯಾವ ರೀತಿಯಲ್ಲಿ ಸಾಧನವನ್ನು ತಯಾರಿಸಲಾಗುತ್ತದೆ ಅಥವಾ ಸಂಗ್ರಹಿಸಲಾಗಿದೆ ಎಂಬುದರ ಮೇಲೆ ಗುರಿಯ ಕಾರ್ಯಸಿಧ್ಧಿಯು ಅವಲಂಬಿತವಾಗಿರುತ್ತದೆ.


ಈ ವಿಶ್ಲೇಷಣೆಯು ಆದಾಯ ಮತ್ತು ಉತ್ಪಾದನೆಯ ಬೆಳವಣಿಗೆಯು ಆರ್ಥಿಕ ಪೂರ್ವಾಪೇಕ್ಷಿತವಾಗಿದೆ, ಅದು ಇಲ್ಲದೆ ಅಸಮಾನತೆಗಳನ್ನು ಪರಿಹರಿಸಲಾಗುವುದಿಲ್ಲ ಎಂಬ ಕಲ್ಪನೆಯನ್ನು ತಿರಸ್ಕರಿಸುತ್ತದೆ.


The Fallacy of Trickle-down Economics: Whom Does ‘Wealth Creation’ Benefit?

Economic and Political Weekly

Read More

Present Crises of Capitalism and Its Reforms | Pulin B Nayak, 2020

Corporation Tax Cut: Who Bears the Burden? | EPW Editorial, 2019

From Trickle Down to Leapfrog: How to Go Beyond the Green Revolution? | Frédéric Landy, 2013

Patterns of Wealth Disparities in India during the Liberalisation Era | Arjun Jayadev, Sripad Motiram and Vamsi Vakulabharanam, 2007

Poverty and Inequality in China and India: Elusive Link with Globalisation | Pranab Bardhan, 2007

Poverty and Capitalism | Barbara Harriss-White, 2006



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು