ರೈತರ ಸ೦ಘಟನೆಯ ಸಮರ್ಥನೆಯಲ್ಲಿ

 

೨೦೨೦ ರ ಭಾರತದ ಮೂರು ಕೃಷಿ ಕಾಯ್ದೆಗಳು ರೈತರಲ್ಲಿ ಆಳವಾದ ಮತ್ತು ವ್ಯಾಪಕ ಅಸಮಾಧಾನವನ್ನು ಸೃಷ್ಟಿಸಿವೆ. ನಡೆಯುತ್ತಿರುವ ಆಂದೋಲನದ ಮೂಲ ಕಾರಣಗಳನ್ನು ರೈತರ ದುರ್ಬಲತೆ, ಸಾಮಾಜಿಕ-ಪರಿಸರ ವ್ಯವಸ್ಥೆಗಳು ಮತ್ತು ಪರಿಸರ ಆಡಳಿತದ ದೃಷ್ಟಿಕೋನಗಳಿಂದ ಪರಿಶೀಲಿಸುತ್ತಾ, ಈ ಸುಧಾರಣೆಗಳು ಪ್ರಸ್ತುತ ಭಾರತೀಯ ಕೃಷಿಯನ್ನು ಮುಗ್ಗರಿಸುವ ಮತ್ತು ಭವಿಷ್ಯದಲ್ಲಿಯೂ ಹಾಗೆ ಮಾಡುವ ಮೂರು ಪ್ರಮುಖ ಸಮಸ್ಯೆಗಳು, ಅ೦ದರೆ ಅನಿಶ್ಚಿತತೆ,  ಸಾಮಾಜಿಕ ಮತ್ತು ಆರ್ಥಿಕ ನ್ಯಾಯ, ಮತ್ತು ಸೈರಿಸುವಿಕೆ, ಇವನ್ನು ಪರಿಹರಿಸುವುದಿಲ್ಲ ಎಂದು ನಾನು ವಾದಿಸುತ್ತೇನೆ.

ಸುಧಾರಣೆಗಳೊಂದಿಗೆ, ಈ ಮೂರು ಕೃಷಿ ಮಸೂದೆಗಳು ಭಾರತದ ಕೃಷಿಯನ್ನು ಪರಿವರ್ತಿಸುವ ಮುಖ್ಯ ಕಾರ್ಯಕರ್ತರುಗಳಾಗಿ ಪ್ರಬಲ ಮಾರುಕಟ್ಟೆ ಚಟುವಟಿಕೆಗಾರರನ್ನು ಸ್ಥಾಪಿಸುತ್ತವೆ. ಆದಾಗ್ಯೂ, ಬಹುಸಂಖ್ಯಾತರಾಗಿರುವ ಮತ್ತು ಉತ್ತಮ ಬೆಲೆಗಳು, ಕೃಷಿ ಪದ್ಧತಿಗಳು ಮತ್ತು ಅಂತರ್ಜಲ ಸುಸ್ಥಿರತೆಗಾಗಿ ತಮ್ಮ ಪ್ರಯತ್ನಗಳನ್ನು ಹೆಚ್ಚಾಗಿ ಕ್ರೋಢೀಕರಿಸುತ್ತಿರುವ ಸಣ್ಣ ಹಿಡುವಳಿದಾರರ ರಾಷ್ಟ್ರವಾಗಿ, ರೈತ ಸಂಸ್ಥೆಗಳು ಕೃಷಿ ಪರಿವರ್ತನೆಗೆ ಮುಂದಾಗುವ ಉತ್ತಮ ಸ್ಥಿತಿಯಲ್ಲಿದ್ದಾರೆ. ದೊಡ್ಡ ಕಾರ್ಪೊರೇಟ್‌ಗಳ ವಿರುದ್ಧ ಹೋರಾಡಿದಾಗ, ರೈತರು ಮತ್ತು ಅವರ ಸಂಸ್ಥೆಗಳು ಉತ್ತಮ ವ್ಯವಹಾರ ಒಪ್ಪ೦ದಗಳಿಗಾಗಿ  ಚೌಕಾಶಿ ಮಾಡಲು ಮತ್ತು ನೀತಿಯನ್ನು ರೂಪಿಸುವ ವಿಶಾಲ ರಾಜಕೀಯ ಆರ್ಥಿಕತೆಯನ್ನು ರೂಪಿಸಲು ಕಸುವು  ಹೊಂದಿರುವುದಿಲ್ಲ. ದೊಡ್ಡ ಕೃಷಿ ಸಮೂಹಗಳು ಮತ್ತು ಕಂಪನಿಗಳ ಪ್ರವೇಶದೊಂದಿಗೆ, ಬಂಡವಾಳದ ತೀಕ್ಷ್ಣ ಅಸಮತೋಲನದಿಂದಾಗಿ ರೈತ ಸಮೂಹಗಳು ಅವರು ಹೊಂದಿರುವ, ಕಾರ್ಯನಿರ್ವಹಿಸುವ ಅಥವಾ ಉತ್ಪಾದಿಸುವ ಸಂಪನ್ಮೂಲಗಳ ಮೇಲೆ ಇರುವ ಯಾವುದೇ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಆಳವಾಗಿ ಸಾಲದಲ್ಲಿ ಮುಳುಗಿರುವ,  ಅಂಚಿನಲ್ಲಿರುವ ರೈತರಿಗೆ ಅತ್ಯಾಧುನಿಕ, ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಖರೀದಿಸಬೇಕಾದ ಅವಶ್ಯಕತೆಯ ಸಾಧನಗಳನ್ನು ಪಡೆದುಕೊಳ್ಳಲು  ಸಾಕಷ್ಟು ಆರ್ಥಿಕ ಸಂಪನ್ಮೂಲಗಳು ಎಂದಿಗೂ ಇರುವುದಿಲ್ಲ. ಇಂತಹ ಸನ್ನಿವೇಶಗಳಲ್ಲಿ, ರಾಜ್ಯದ ನಿರ್ಗಮನವು ರೈತರಿಗೆ ಇರುವ ಮತ್ತು ಇದುವರೆಗೆ ಸಾಲ ಮನ್ನಾ ಮತ್ತು ಬ್ಯಾಂಕಿಂಗ್ ಸುಧಾರಣೆಗಳ ರೂಪದಲ್ಲಿ ರೈತರಿಗೆ ಸುರಕ್ಷತಾ ಜಾಲವನ್ನು ನೀಡಿದ ಒಂದು ಚೌಕಾಶಿ ಶಕ್ತಿಯ - ಅ೦ದರೆ ಮತದಾನದ ಹಕ್ಕುಗಳ -  ಸವೆತವನ್ನು ಮತ್ತಷ್ಟು ಹೆಚ್ಚಿಸುತ್ತದೆ. 

 

 ಮಾರುಕಟ್ಟೆ ಉಪಕರಣಗಳು ಸುಧಾರಣೆಗಳ ಪರಿಣಾಮಕಾರಿ ವಾಹನವಾಗಬಹುದು, ಆದರೆ ಅವು ಕ್ರೂರವಾಗಿಯೂ ಇರಬಹುದು. ಮಾರ್ಕೆಟಿಂಗ್ ವಲಯದಲ್ಲಿ ರಾಜ್ಯವು ನಿರ್ಗಮಿಸುವುದರೊಂದಿಗೆ ಮತ್ತು ಅಂತಿಮವಾಗಿ ಕೃಷಿಯಲ್ಲಿ ರಾಜ್ಯದ ಹೆಚ್ಚು ಟೊಳ್ಳಾದ ಸ್ಥಿತಿಯೊಂದಿಗೆ, ಮಾರುಕಟ್ಟೆ ಚಟುವಟಿಕೆದಾರರುಗಳ  ಪಾತ್ರಗಳು ಗ೦ಭೀರವಾಗಿ ಹೆಚ್ಚಾಗಬಹುದು. ಪರಿಸರ ನ್ಯಾಯ ಮತ್ತು ಹಣಕಾಸು ಸಂಶೋಧನೆಯು ರೈತರು ಮತ್ತು ಇತರ ಸಂಪನ್ಮೂಲ ಬಳಕೆದಾರರು ಹೊಸ ಮಾರುಕಟ್ಟೆಗಳಲ್ಲಿ ಭಾಗವಹಿಸುವುದನ್ನು ಮತ್ತು ಸಾಮೂಹಿಕ ಸಂಸ್ಥೆಗಳನ್ನು ರಚಿಸುವುದನ್ನು ಮುಕ್ತ ಮಾರುಕಟ್ಟೆಗಳು ತಡೆಯುತ್ತವೆ ಎಂದು ತೋರಿಸಿದೆ. ಪೂರೈಕೆ ಸರಪಳಿ ನಿರ್ವಹಣೆಯಲ್ಲಿನ ಪ್ರಸ್ತಾವಿತ ದಕ್ಷತೆಗಳು ಮತ್ತು ಸ್ಪರ್ಧಾತ್ಮಕ ಖರೀದಿದಾರರೊಂದಿಗಿನ ಸಂಪರ್ಕಗಳು, ಸಿದ್ಧಾಂತದಲ್ಲಿ, ರೈತರಿಗೆ ಸಹಾಯ ಮಾಡಬಹುದು. ಆದರೆ ಅಂಚಿನಲ್ಲಿರುವ ರೈತರು, ಭೂಮಿ ರಹಿತ ಮತ್ತು ವಲಸೆ ಕಾರ್ಮಿಕರು, ಸಣ್ಣ ಹಿಡುವಳಿದಾರರು, ಮಹಿಳೆಯರು, ದೇಶೀಯ ಸಮುದಾಯಗಳು ಮತ್ತು ಬಲವಾದ ಮಾರುಕಟ್ಟೆ ಅಸ್ತಿತ್ವವನ್ನು ಹೊಂದಿರದ ಬೆಳೆಗಳನ್ನು ಬೆಳೆಸುವವರು  ಮಾರುಕಟ್ಟೆ ಸುಧಾರಣೆಗಳೊಂದಿಗೆ ಅನಿವಾರ್ಯವಾಗಿ ಬರುವ ಅತ್ಯಾಧುನಿಕತೆ ಮತ್ತು ಕಾರ್ಯವಿಧಾನದ ಸಂಕೀರ್ಣತೆಯ ಸಂಪೂರ್ಣ ಪ್ರಕೋಪವನ್ನು ಸಹಿಸಬೇಕಾಗುತ್ತದೆ. 

ಈ ಹೇಳಿದ ರೈತರು  ಅಪೂರ್ಣ ಮಾಹಿತಿಯನ್ನು ಹೊಂದುವ ಸಾಧ್ಯತೆಗಳಿವೆ ಮತ್ತು ಸುಧಾರಣೆಗಳು ಇನ್ನೂ ಸಮರ್ಪಕವಾಗಿ ಪರಿಗಣಿಸದ ಮಾರುಕಟ್ಟೆ ವೈಫಲ್ಯಗಳಿಗೆ ಒಳಗಾಗುತ್ತಾರೆ. ಉದಾಹರಣೆಗೆ, ರೈತರು ಅನೌಪಚಾರಿಕ ಮಧ್ಯವರ್ತಿಗಳು ಅಥವಾ ಮಧ್ಯಸ್ಥರೊ೦ದಿಗೆ ಆರ್ಥಿಕ ಮತ್ತು ಸಾಮಾಜಿಕ ಸಂಬಂಧಗಳನ್ನು, ಅಂತಹ ಸಂಬಂಧಗಳು ಹೆಚ್ಚಾಗಿ ತ್ರಾಸದಾಯಕವಾಗಿದ್ದರೂ ಸಹ, ನಿರ್ವಹಿಸುತ್ತಾರೆ. ಏಕೆಂದರೆ ಮಧ್ಯವರ್ತಿಗಳು ಗಡಿ ಸಂಸ್ಥೆಗಳಾಗಿ ಸೇವೆ ಸಲ್ಲಿಸುತ್ತಾರೆ, ರಾಜ್ಯ ಮತ್ತು ಮಾರುಕಟ್ಟೆಗಳ ನಡುವೆ ಹೆಚ್ಚು ಸಂದರ್ಭೋಚಿತ ಮಧ್ಯಸ್ಥಿಕೆಗಳನ್ನು ಒದಗಿಸುತ್ತಾರೆ ಮತ್ತು ಗಡಿಯ ಎರಡೂ ಬದಿಯಲ್ಲಿ ಕಾರ್ಯ ಮಾಡುವವರ  ಹಿತಾಸಕ್ತಿಗಳನ್ನು ಎತ್ತಿಹಿಡಿಯಲು ಋಣಬದ್ಧರಾಗಿರುತ್ತಾರೆ,  ಹೀಗಾಗಿ ರೈತರಿಗೆ ಯಾವುದಾದರೂ ಅನಿಶ್ಚಿತ ಅಥವಾ ಅಸಂಭವ ಘಟನೆಗಳ ಕಾಲದಲ್ಲಿ ತಿರುಗಲು ಇರುತ್ತಾರೆ.  ಮಧ್ಯವರ್ತಿಗಳನ್ನು ತೊಡೆದುಹಾಕುವ ಗುರಿಯನ್ನು ಹೊಂದಿರುವ ಸುಧಾರಣೆಗಳೊಂದಿಗೆ, ಯಾವ ಸಂಸ್ಥೆಗಳು ಈ ಗಡಿಯುದ್ದದ ಶೂನ್ಯತೆಯನ್ನು ತುಂಬುತ್ತವೆ ಎಂಬುದು ಸ್ಪಷ್ಟವಾಗಿಲ್ಲ.

ಕೃಷಿಭೂಮಿಗಳು ಬಳಕೆಗಾಗಿ ಪ್ರತ್ಯೇಕವಾದ ಭೂಮಿಯಾಗಿಲ್ಲ. ಕಾಡುಗಳು, ತೋಟಗಳು ಮತ್ತು ಹುಲ್ಲುಗಾವಲುಗಳನ್ನು ಒಳಗೊಂಡಿರುವ ಭೂದೃಶ್ಯ ಘಟಕಗಳ ಮಿಶ್ರಿತ ಚಿತ್ರದಲ್ಲಿ ಅವುಗಳನ್ನು ವಿವಿಧ ಭೂರೂಪಗಳು ಮತ್ತು ಆವಾಸಸ್ಥಾನಗಳ ನಡುವೆ ಜೋಡಿಸಲಾಗಿದೆ. ಮಾರುಕಟ್ಟೆ ಸುಧಾರಣೆಗಳು ಬೆಳೆ ಇಳುವರಿ, ಆದಾಯ ಮತ್ತು ಲಾಭವನ್ನು ಹೆಚ್ಚಿಸಲು ಅಗತ್ಯ ಪದಾರ್ಥಗಳನ್ನು ತೀವ್ರವಾಗಿ ಉಪಯೋಗಿಸುವ  ಅಭ್ಯಾಸಗಳ ಪ್ಯಾಕೇಜಿನೊ೦ದಿಗೆ ಸೇರುತ್ತವೆಯಾದರೂ, ಒಟ್ಟಾಗಿ ಆಹಾರ ಭದ್ರತೆ ಮತ್ತು ಪೋಷಣೆಗೆ ಕೊಡುಗೆ ನೀಡುವ೦ತಹ ವೈವಿಧ್ಯತೆಯ ಮೂರು ಹಂತಗಳಾದ   ಪರಿಸರ ವ್ಯವಸ್ಥೆಗಳು, ಬೆಳೆಯ ಜಾತಿಗಳು, ಆನುವಂಶಿಕ ಗುಣಗಳು ಇವನ್ನು ಸೇರುವದಿಲ್ಲ. ಮಾರುಕಟ್ಟೆಗಳಿಂದ ಯಾವ ಬೆಳೆಗಳಿಗೆ ಬೆಂಬಲ ನೀಡಲಾಗುವುದು,  ವೈವಿಧ್ಯಮಯವಾದ  ಭಾರತೀಯ ಕೃಷಿಯ ಯಾವ ವಿಭಾಗಗಳು ದೊಡ್ಡ ಮಾರುಕಟ್ಟೆಯ ಮಾರ್ಗಗಳಲ್ಲಿ ಹೊ೦ದಿಕೊಳ್ಳಬಹುದು, ಮತ್ತು ಸಂಪನ್ಮೂಲ-ತೀವ್ರ ಕೃಷಿಗೆ ಒಲವು ಮುಂದುವರಿಯುತ್ತದೆಯೇ ಎಂಬ ವಿಷಯಗಳು  ಸ್ಪಷ್ಟವಾಗಿಲ್ಲ.

ಯಾವುದೇ ಸಮಯದಲ್ಲಿ  ಸುಧಾರಣೆಗಳು, ಮಾತುಕತೆಗಳು ಅಥವಾ ನೀತಿ ಪ್ರಕ್ರಿಯೆಗಳ ಮೂಲಕ ರೈತರ ದುರ್ಬಲತೆ ಉಲ್ಬಣಗೊಳ್ಳುವ ಪರಿಸ್ಥಿತಿಗಳಿಂದ ರಕ್ಷಿಸಲು ಸಾಧ್ಯವಿದ್ದರೆ, ರಾಜ್ಯವು ಅದನ್ನು ಮಾಡಬೇಕು. ಈ ಕೃಷಿ ಕಾಯಿದೆಗಳ ಸಮಸ್ಯೆಯೆಂದರೆ, ರಾಜ್ಯವು ರೈತರು ಮತ್ತು ಅವರ ಹಿತಾಸಕ್ತಿಗಳನ್ನು ಹೇಗೆ ರಕ್ಷಿಸುತ್ತದೆ ಮತ್ತು ಭಾರತೀಯ ಕೃಷಿಯನ್ನು ಎದುರಿಸುತ್ತಿರುವ ದೀರ್ಘಕಾಲೀನ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತದೆ ಎಂಬುದರ ಬಗ್ಗೆ ಅಸ್ಪಷ್ಟವಾಗಿದೆ. ದಕ್ಷತೆ ಮತ್ತು ಲಾಭಕ್ಕಾಗಿ ಚಲಿಸುವ ಮಾರುಕಟ್ಟೆಗಳು ಹೇಗೆ ತಮ್ಮ ಚಲನೆಯಲ್ಲಿ ಕೃಷಿಕರನ್ನು ದೃಢವಾದ ಸುರಕ್ಷಾ ಜಾಲಗಳನ್ನು ನೀಡುತ್ತ ಕೃಷಿ-ಪರಿಸರ ಸುಸ್ಥಿರತೆಯನ್ನು ರಕ್ಷಿಸುವ  ಹೊಸ ಸಾಂಸ್ಥಿಕ ಪಾಲುದಾರಿಕೆಗಳಿಗೆ ಸ್ವಾಗತಿಸಲು  ವ್ಯವಸ್ಥೆ ಮಾಡುತ್ತವೆ ಎಂಬುದೂ ಸ್ಪಷ್ಟವಾಗಿಲ್ಲ. ರೈತರ ಸ೦ಘಟನೆಯು  ಕೃಷಿ ಸುಸ್ಥಿರತೆ ಮತ್ತು ರೈತರ ದುರ್ಬಲತೆಯ ಮೂಲ ಕಾರಣಗಳನ್ನು ಪರಿಹರಿಸಲು ಒಂದು ತಪ್ಪಿಸಿಕೊಳ್ಳಲಾಗದ ಅವಕಾಶವನ್ನು ನೀಡುತ್ತದೆ.

ವಿಜಯ್ ರಾಮಪ್ರಸಾದ್

ಡೆಹ್ರಾಡೂನ್

ವಾಚಕರ ಪತ್ರ, ಎಕೊನೊಮಿಕ್ ಎ೦ಡ್ ಪೊಲಿಟಿಕಲ್ ವೀಕ್ಲಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು