ಜಾಲಿಯನ್ ವಾಲಾಬಾಗ್ ಸಂತ್ರಸ್ತರ ಸ್ಮರಣೆ ಹುತಾತ್ಮರ ತ್ಯಾಗಕ್ಕೆ ಯೋಗ್ಯವಾಗಿಲ್ಲ.
‘ಟೂರಿಸ್ಟ್’ ಪ್ರವಾಸಿಗರ ಆಕರ್ಷಣೆಗೆ ದಾರಿ ಮಾಡಿಕೊಡುವ ಉದ್ದೇಶದ ಜಾಲಿಯನ್ ವಾಲಾಬಾಗ್ ಸ್ಮಾರಕದ ಇತ್ತೀಚಿನ ಕೀಳು ದರ್ಜೆಯ ನವೀಕರಣದೊಂದಿಗೆ ಉಳಿದಿದ್ದ ಅಂತಿಮ ಕುರುಹುಗಳನ್ನು ಅಳಿಸಿಹಾಕುವುದನ್ನು ನಾವು ನೋಡುತ್ತಿದ್ದೇವೆ.
ಕಿಮ್ ಎ. ವ್ಯಾಗ್ನರ್ 31 ಆಗಸ್ಟ್, 2021 ದಿ ಪ್ರಿಂಟ್
ಜಾಲಿಯನ್ ವಾಲಾ ಬಾಗ್ ಸ್ಮಾರಕದಲ್ಲಿ | @Narendramodi | ಟ್ವೀಟ್ ಮಾಡಿದ ತುಣುಕಿನಿಂದ
ಜಾಲಿಯಾನ್ ವಾಲಾ ಬಾಗ್ ಭಾರತದ ಸ್ವಾತಂತ್ರ್ಯ ಹೋರಾಟದ ಅತ್ಯಂತ ಹಳೆಯ ಸ್ಮಾರಕವಾಗಿದೆ. 13 ಏಪ್ರಿಲ್ 1919 ರಂದು ಜನರಲ್ ಡೈಯರ್ ನೇತೃತ್ವದಲ್ಲಿ ವಸಾಹತುಶಾಹಿ ಪಡೆಗಳು 500-600 ನಿರಾಯುಧ ನಾಗರಿಕರನ್ನು ಗು೦ಡಿಕ್ಕಿ ಕೊಂದರು. ಇದಕ್ಕೆ ಮೂರು ಪಟ್ಟು ಜನ ಗಾಯಗೊಂಡವು. ಹತ್ಯಾಕಾಂಡದ ಒಂದು ವರ್ಷದೊಳಗೆ, ಎಂ.ಕೆ. ಗಾಂಧಿ ಮತ್ತು ಇತರ ಭಾರತೀಯ ರಾಷ್ಟ್ರೀಯ ನಾಯಕರು ಸಾರ್ವಜನಿಕ ಚಂದಾದಾರಿಕೆಯನ್ನು ಆಯೋಜಿಸಿದರು ಮತ್ತು ಬಾಗ್ ಅನ್ನು ಸ್ಮಾರಕ ಉದ್ಯಾನವನವನ್ನಾಗಿ ಪರಿವರ್ತಿಸಲಾಯಿತು. ಸಂತ್ರಸ್ತರನ್ನು ಸ್ಮರಿಸುವ ಅಗತ್ಯಕ್ಕಾಗಿ ವಾದಿಸಿದ ಗಾಂಧಿಜಿ ಬರೆದಿದ್ದಾರೆ ಯಂಗ್ ಇಂಡಿಯಾ , ಫೆಬ್ರವರಿ 1920 ಪತ್ರಿಕೆಯಲ್ಲಿ:
'ನಮ್ಮ ಅಸಹಾಯಕ ದೇಶವಾಸಿಗಳನ್ನು ನಿರ್ದಯವಾಗಿ ಹತ್ಯೆ ಮಾಡಿದಾಗ ಅವರನ್ನು ರಕ್ಷಿಸಲು ನಮಗೆ ಸಾಧ್ಯವಾಗಲಿಲ್ಲ. ಸೇಡು ತೀರಿಸಿಕೊಳ್ಳಲು ನಾವು ನಿರಾಕರಿಸಬಹುದು. ಅದರಿ೦ದಾಗಿ ರಾಷ್ಟ್ರಕ್ಕೆ ನಷ್ಟವಿಲ್ಲ. ಆದರೆ ರಾಷ್ಟ್ರೀಯ ಸಮಾಧಿಯನ್ನು ಸ್ಥಾಪಿಸಲು, ಮತ್ತು ಆ ಮೂಲಕ ಸತ್ತವರ ಕುಟುಂಬಗಳ ಉಳಿದ ಸದಸ್ಯರಿಗೆ ಅವರ ಸಂಕಟಗಳಲ್ಲಿ ನಾವು ಪಾಲುದಾರರಾಗಿದ್ದೇವೆ ಎಂದು ತೋರಿಸಲು, ಸ್ಮರಣೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳಲು, ಜಗತ್ತಿಗೆ ಸಾವಿನ ಕಾರಣದಿ೦ದ ಈ ಪುರುಷರಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ಆತ್ಮೀಯ ಸಂಬಂಧಗಳನ್ನು ಕಳೆದುಕೊಂಡಿದ್ದೇವೆ ಎ೦ದು ತೋರಿಸಲು ನಾವು ನಿರಾಕರಿಸಬಹುದೇ? '
ಹತ್ತಿರದ ದರ್ಬಾರ್ ಸಾಹಿಬ್ (ಸುವರ್ಣ ದೇವಸ್ಥಾನ) ದ ವೈಭವಕ್ಕೆ ತದ್ವಿರುದ್ಧವಾದ ಜಾಲಿಯನ್ ವಾಲಾಬಾಗ್‌ನ ಬಂಜರು ಮೈದಾನವು ಶೀಘ್ರದಲ್ಲೇ ಪ್ರವಾಸಿಗರಿಗೆ ಭೇಟಿಕೊಡುವ ಒಂದು ವಸ್ತುವಾಗಿ ಮಾರ್ಪಟ್ಟಿತು. 1921 ರಲ್ಲಿ ಅಮೆರಿಕದ ಸಂದರ್ಶಕರನ್ನು ತೋರಿಸುತ್ತಾ, ಸ್ಥಳೀಯ ನಿವಾಸಿಯೊಬ್ಬರು ಬಾಗಿನ ವಿಷಯವಾಗಿ ಭಾರತೀಯರ ಅರ್ಥವನ್ನು ವಿವರಿಸಿದರು:
'ಇಲ್ಲಿರುವ ಬ್ರಿಟಿಷ್ ಅಧಿಕಾರಶಾಹಿ ಅಥವಾ ಇಂಗ್ಲೆಂಡಿನ ಬ್ರಿಟಿಷ್ ಜನರು ಈ ಕೃತ್ಯಗಳಿಗಾಗಿ ಮಾಡಿದ ಏಕೈಕ ನಷ್ಟಭರ್ತಿಯು ನಮ್ಮನ್ನು 'ಕ್ಷಮಿಸಲು ಮತ್ತು ಮರೆಯಲು' ಕೇಳುವುದು. ಕೆಲವೊಮ್ಮೆ, ನಮ್ಮ ಇತಿಹಾಸದ ಅವಮಾನದ ಈ ಅಧ್ಯಾಯವನ್ನು ಮುಚ್ಚಲು ನಾವು ಒಲವು ತೋರಿದಾಗ, ಈ ರಕ್ತ-ಬಣ್ಣದ ಗೋಡೆಯಿಂದ ಹೊರಬರುವ ಕೂಗು ನಮ್ಮ ಕಿವಿಯಲ್ಲಿ ಜೋರಾಗಿ ಮತ್ತು ಸ್ಪಷ್ಟವಾಗಿ ಕೇಳುತ್ತದೆ. ' (ತಾರಿಣಿ ಪ್ರಸಾದ್ ಸಿನ್ಹಾ, "ಪುಸಿಫೂಟ್" ಜಾನ್ಸನ್ ಮತ್ತು ಹಿಂದುಸ್ಥಾನದಲ್ಲಿ ಅವರ ಪ್ರಚಾರ: ಮದ್ರಾಸ್: ಗಣೇಶ್ & ಕಂ, 1922, ಪುಟ 243)
ಅಧಿಕೃತ ಸ್ಮಾರಕವನ್ನು, ಅದರ ಪ್ರತಿಮಾತ್ಮಕ ಕೇಂದ್ರ ಸ್ತಂಭದೊಂದಿಗೆ, ಭಾರತ ಸ್ವಾತಂತ್ರ್ಯವನ್ನು ಗಳಿಸಿದ ದೀರ್ಘಕಾಲಾನ೦ತರ 1961 ರಲ್ಲಿ ಮಾತ್ರ ನಿರ್ಮಿಸಲಾಯಿತು. ಅಂದಿನಿಂದ, ಈ ತಾಣವು ಪ್ರಪಂಚದಾದ್ಯಂತದ ಹತ್ತಾರು ಸಾವಿರ ಪ್ರವಾಸಿಗರನ್ನು, ಆಸಕ್ತಿ ಇಲ್ಲದ ಬ್ರಿಟಿಷ್ ಗಣ್ಯರು ಸೇರಿದ೦ತೆ, ಆಕರ್ಷಿಸಿದೆ. ಇವರ೦ತೂ ಹತ್ಯಾಕಾಂಡಕ್ಕೆ ಔಪಚಾರಿಕ ಕ್ಷಮೆಯಾಚಿಸಲು ನಿರಾಕರಿಸುವ ಸಂಪ್ರದಾಯವನ್ನೇ ಮಾಡಿದ್ದಾರೆ. ಕ್ಯಾಂಟರ್ಬರಿಯ ಆರ್ಚ್ ಬಿಷಪ್, ಜಸ್ಟಿನ್ ವೆಲ್ಬಿ, 2019 ರಲ್ಲಿ ಸ್ಮಾರಕದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದಾಗ, ಅದು ಸಂಪೂರ್ಣವಾಗಿ ಅನಿರೀಕ್ಷಿತ ಮತ್ತು ಹಲವು ವಿಧಗಳಲ್ಲಿ ಹೃದಯಸ್ಪರ್ಶಿಯಾದ, ಸೂಚನೆಯಾಗಿತ್ತು.
ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡ: 'ನೂರಾರು ಶವಗಳ ನಡುವೆ, ನಾನು ನನ್ನ ರಾತ್ರಿ ಕಳೆದೆ, ಅಳುತ್ತಾ ಮತ್ತು ನೋಡುತ್ತಿದ್ದೆ'
ವರ್ಷಗಳಲ್ಲಿ ದುರಂತ ಬದಲಾವಣೆ
ಜಾಲಿಯನ್ ವಾಲಾಬಾಗ್ ಹತ್ಯಾಕಾಂಡದ ಬಗ್ಗೆ ನನ್ನ ಪುಸ್ತಕವನ್ನು ಸಂಶೋಧಿಸಲು ಸುಮಾರು ಒಂದು ದಶಕದ ಹಿಂದೆ ನಾನು ಮೊದಲ ಬಾರಿಗೆ ಅಮೃತಸರಕ್ಕೆ ಭೇಟಿ ನೀಡಿದೆ, ಮತ್ತು ಹೆಚ್ಚು-ಕಡಿಮೆ ಪ್ರತಿ ವರ್ಷ ಹಿಂತಿರುಗಿ ಬ೦ದಿದ್ದೇನೆ. ಈ ಸಮಯದಲ್ಲಿ, ನಾನು ನಗರವು ಮತ್ತು ಸ್ಮಾರಕವು ತ್ವರಿತ ಮತ್ತು ಸ್ಪಷ್ಟವಾಗಿ ದುರಂತಕರ ಬದಲಾವಣೆಗೆ ಒಳಗಾದದ್ದನ್ನು ನೋಡಿದ್ದೇನೆ. ಜಾಲಿಯನ್ ವಾಲಾ ಬಾಗ್ ಮತ್ತು ದರ್ಬಾರ್ ಸಾಹಿಬ್ (ಗೋಲ್ಡನ್ ಟೆಂಪಲ್) ಗೆ ಹೋಗುವ ರಸ್ತೆಯು ಕೆಲವು ಅಸ್ಪಷ್ಟ 'ಸಾಂಪ್ರದಾಯಿಕ' ಶೈಲಿಯಲ್ಲಿ ನಕಲಿ ಮುಂಭಾಗಗಳನ್ನು ಹೊಂದಿರುವ ಬಾಲಿವುಡ್ ಚಲನಚಿತ್ರದ ಸೆಟ್ ಅನ್ನು ಹೋಲುತ್ತದೆ. ಪಂಜಾಬಿ ನರ್ತಕಿಯರ ಆಡ೦ಬರದ ಪ್ರತಿಮೆಗಳು ಭಾರತದ ಐತಿಹಾಸಿಕವಾಗಿ ಪ್ರಮುಖ ನಗರಗಳಲ್ಲಿ ಒಂದು ಮತ್ತು ಸಿಖ್ಖರ ಪವಿತ್ರ ತಾಣದ ಬದಲಾಗಿ ಇಡೀ ಪ್ರದೇಶಕ್ಕೆ ಒಂದು ಮನೋರಂಜನಾ ಪಾರ್ಕ್‌ನ ನೋಟ ಮತ್ತು ಭಾವನೆಯನ್ನು ನೀಡಿತು .
2018 ರಲ್ಲಿ, ಅಗ್ಗವಾಗಿ ಕಾಣುವ ಉಧಮ್ ಸಿಂಗ್ ಪ್ರತಿಮೆಯನ್ನು ಜಾಲಿಯನ್ ವಾಲಾ ಬಾಗ್‌ನ ಹೊರಗೆ ಸ್ಥಾಪಿಸಲಾಯಿತು, ಮತ್ತು ಆಧುನಿಕ ಬಿಳಿ ಅಮೃತಶಿಲೆಯ ಶಿಲ್ಪವು ಪ್ರವೇಶದ್ವಾರದ ಬಳಿ ಕಾಣಿಸಿಕೊಂಡಿತು. ಈ ಶಿಲ್ಪದ ಒಂದೇ ವಿಮೋಚಕ ಅಂಶವೆಂದರೆ, ಹತ್ಯಾಕಾಂಡದಲ್ಲಿ ಗುರುತಿಸಲ್ಪಟ್ಟ 379 ಸಂತ್ರಸ್ತರ ಹೆಸರನ್ನು ವಾಸ್ತವವಾಗಿ ಪಟ್ಟಿ ಮಾಡಲಾಗಿದೆ - ಮೊದಲ ಬಾರಿಗೆ. ಇಲ್ಲಿಯ ಸ್ಮಾರಕ ಮತ್ತು ವಸ್ತುಸಂಗ್ರಹಾಲಯದ ಒಂದು ಗಮನಾರ್ಹ ಲಕ್ಷಣವೆಂದರೆ ಅವು 13 ನೇ ಏಪ್ರಿಲ್ 1919 ರಂದು ಸ್ಥಳದಲ್ಲಿ ಇದ್ದಿಲ್ಲದ ರಾಷ್ಟ್ರೀಯತಾವಾದಿ ವೀರರನ್ನು ಕೊಂಡಾಡುತ್ತವೆ, ಆದರೆ ಹಾಜರಿದ್ದ ಸಾಮಾನ್ಯ ಭಾರತೀಯರನ್ನು ಪ್ರಾಯೋಗಿಕವಾಗಿ ಕಡೆಗಣಿಸುತ್ತವೆ.
ಓದಿ: ಬ್ರಿಟಿಷ್ ಮಾಧ್ಯಮ ಸಂಭವಿಸಿದ ಎಂಟು ತಿಂಗಳ ನಂತರ ಜಾಲಿಯನ್ವಾಲಾ ಬಾಗ್ ಹತ್ಯಾಕಾಂಡ ಗೆ ಎಚ್ಚರವಾಯಿತು
ವಾಣಿಜ್ಯ ದೃಷ್ಟಿಯ ಅಲ೦ಕಾರಶಾಸ್ತ್ರದ ಅಗ್ಗದ ರಾಷ್ಟ್ರೀಯತೆ ನಿಯಂತ್ರಣವನ್ನು ತೆಗೆದುಕೊಳ್ಳುತ್ತದೆ.
ಜಾಲಿಯನ್ ವಾಲಾ ಬಾಗ್ ಸ್ಮಾರಕದ ಇತ್ತೀಚಿನ ಪುನರುಜ್ಜೀವನದಲ್ಲಿ ನಾವು ಇತಿಹಾಸದ ಅಂತಿಮ ಕುರುಹುಗಳು ಅಳಿಸಿ ಕೀಳುಮಟ್ಟದ ‘ಟೂರಿಸ್ಟ್’ ಆಕರ್ಷಣೆಯನ್ನು ಸ್ಥಾಪಿಸಿರುವದನ್ನು ಕಾಣುತ್ತೇವೆ. ಸುದ್ದಿ ವರದಿಗಳು ರೂಪಾಂತರಗೊಂಡ ಸ್ಥಳದ ಹೊಸ 'ಆಕರ್ಷಣೆ'ಗಳನ್ನು ವಿವರಿಸುತ್ತದೆ, ಇದರಲ್ಲಿ ಅನೇಕ ಶಿಲ್ಪಗಳು ಮತ್ತು 3 ಡಿ ಪ್ರಕ್ಷೇಪಗಳು ಸೇರಿವೆ. 13 ಏಪ್ರಿಲ್ 1919 ರ ಮಧ್ಯಾಹ್ನ ಡಯರ್ ಮತ್ತು ಅವನ ಸೈನ್ಯವು ಪ್ರವೇಶಿಸಿದ ಮೂಲ ಪ್ರವೇಶದ್ವಾರವನ್ನು 'ಸ್ಥಳಾಂತರಿಸಲಾಗಿದೆ', ಸಾಲುಗಟ್ಟಿ ಮೂರ್ತಿಗಳನ್ನು ಕೂಡಿಸಲಾಗಿದೆ, ಸಂದರ್ಶಕರು ಸಂಜೆ, ನೇರವಾಗಿ ಸ್ಮಾರಕದ ಮೇಲೆ ಕೇ೦ದ್ರೀಕೃತ ಬೆಳಕಿನ ಪ್ರದರ್ಶನವನ್ನು ಆನಂದಿಸಬಹುದು. ಸತ್ತವರಿಗೆ ಗಾಂಧಿ ಶೋಕಾಚರಣೆಗೆ ಸೂಚಿಸಿದ ಸ್ಥಳದಲ್ಲಿ, ನೂರು ವರ್ಷಗಳ ನಂತರ, ಈಗ, ಟಿಕೆಟ್ ಕೌಂಟರ್‌ಗಳಿವೆ.
ಜಾಲಿಯನ್ ವಾಲಾ ಬಾಗ್ ಈ ಹಿ೦ದೆ ಒ೦ದು ಆತ್ಮವನ್ನು ಹೊಂದಿತ್ತು ಎ೦ದರೆ ವ್ಯ೦ಗ್ಯವಾಗಿ ತೋರಬಹುದು. ಇದು ಅಮೃತಸರದ ನಗರ ದೃಶ್ಯದ ಒಂದು ಜೀವಂತ ಭಾಗವಾಗಿತ್ತು. ಸ್ನೇಹಿತರು ಮತ್ತು ಕುಟುಂಬದವರ ಭೇಟಿಯ ಸ್ಥಳವಾಗಿ, ಅಲ್ಲಿ ಸ್ಥಳೀಯರು, ಪ್ರವಾಸಿಗರ (ನಾನು ಸೇರಿದಂತೆ) ಗುಂಪಿನ ಆಗಮನದ ಮುಂಚೆ ತಮ್ಮ ಬೆಳಗಿನ ವ್ಯಾಯಾಮವನ್ನು ಶಾಂತವಾದ ಸಮಯದಲ್ಲಿ ಮಾಡುತ್ತಿದ್ದರು. ನಿಜ, ನಾನು 1961 ರ ಸ್ಮಾರಕದ ಬಗ್ಗೆ ಅದರ ಹೆಗ್ಗಳಿಕೆ ಕೇಂದ್ರ ಸ್ತಂಭ ಸೇರಿದ೦ತೆ, ಮಿಶ್ರ ಭಾವನೆಗಳನ್ನು ಹೊಂದಿದ್ದೆ. ಸಸ್ಯಾಲಂಕರಣದ ಸೈನಿಕರೂ ಸೇರಿದ೦ತೆ, ಇದು 13 ಏಪ್ರಿಲ್ 1919 ರ ಘಟನೆಗಳನ್ನು ಅಣಕಿಸುವಂತೆ ಕಾಣುತ್ತದೆ. ಗು೦ಡುಗಳಿ೦ದಾದ ಮೂಲ ತೂತುಗಳನ್ನು ಸಂರಕ್ಷಿಸಲು ಪ್ರಯತ್ನ ಮಾಡಲಾಗಿಲ್ಲ - ಇವನ್ನು ನೂರು ವರ್ಷಗಳ ಅವಧಿಯಲ್ಲಿ ಸಾವಿರಾರು ಸಂದರ್ಶಕರು ತಿವಿಯಲು ಮತ್ತು ಶೋಧಿಸಲು ಅನುಮತಿಸಲಾಗಿದೆ. ಈ ರಂಧ್ರಗಳ ಚೌಕಟ್ಟನ್ನು ಚಿತ್ರಿಸಿದ ಬಿಳಿ ಚೌಕಗಳನ್ನು ಬಿಟ್ಟರೆ ಈ ರ೦ಧ್ರಗಳನ್ನು ಇಟ್ಟಿಗೆಯ ಸ್ವಾಬಾವಿಕ ಸವಕಳಿಯಿ೦ದಾಗಿ ಗುರುತಿಸಲಾಗುವುದಿಲ್ಲ. ಆದರೆ ಒಂದು ಶತಮಾನದ ಹಿಂದೆ ಹತ್ಯಾಕಾಂಡಕ್ಕೆ ಸಾಕ್ಷಿಯಾದ ಹಳೆಯ ಮರದ ಪಕ್ಕದಲ್ಲಿ ನಾವು ಇನ್ನೂ ಶಾಂತಿಯುತ ಮೂಲೆಯನ್ನು ಕಾಣಬಹುದಾಗಿತ್ತು, ಮತ್ತು ಈ ಸ್ಥಳವನ್ನು ಒಮ್ಮೆ ಇದ್ದಂತೆ ಕಲ್ಪಿಸಿಕೊಳ್ಳಬಹುದಾಗಿತ್ತು. ಈಗ ಅದೂ ಉಳಿದಿಲ್ಲ, ಅಗ್ಗದ ರಾಷ್ಟ್ರೀಯತೆಯ ವಾಣಿಜ್ಯ ಸೌಂದರ್ಯದಿಂದ ಬದಲಾಗಿದೆ.
ಐತಿಹಾಸಿಕ ಸ್ಮಾರಕಗಳು ಸಹಜವಾಗಿ, ಹಿಂದಿನವುಗಳಂತೆ ಮಾತ್ರವಲ್ಲ ವರ್ತಮಾನಕಾಲದ ಬಗ್ಗೆಯೂ ಇರುತ್ತವೆ. ವಸ್ತುಗಳು ಹಿ೦ದಿದ್ದ ಹಾಗೆಯೇ ಉಳಿಯುತ್ತವೆ ಎಂದು ನಿರೀಕ್ಷಿಸುವುದು ನಿಜಕ್ಕೂ ಅವಾಸ್ತವಿಕ. ಆದಾಗ್ಯೂ, ಸಂರಕ್ಷಣೆ ಮತ್ತು ‘ಡಿಸ್ನಿಫಿಕೇಶನ್’ (ಅಮೆರಿಕದಲ್ಲಿರುವ ಡಿಸ್ನಿ-ಲಾ೦ಡ ವಿಹಾರ ಉದ್ಯಾನವನ ಶೈಲಿಯ ಆವರಣ) ಗಳ ನಡುವೆ ನಿಜವಾದ ವ್ಯತ್ಯಾಸವಿದೆ. ಜಾಲಿಯನ್ ವಾಲಾಬಾಗ್ ಹತ್ಯಾಕಾಂಡದ ಸಂತ್ರಸ್ತರ ಸ್ಮಾರಕ ಖಂಡಿತವಾಗಿಯೂ ಇದಕ್ಕೂ ಉತ್ತಮವಾಗಿರಬೇಕಾಗಿತ್ತು.
ಲೇಖಕ ಕಿಮ್ ಎ. ವ್ಯಾಗ್ನರ್ ಜಾಗತಿಕ ಮತ್ತು ಸಾಮ್ರಾಜ್ಯಶಾಹಿ ಇತಿಹಾಸದ ಪ್ರಾಧ್ಯಾಪಕರು, ಕ್ವೀನ್ ಮೇರಿ ಕಾಲೇಜು, ಲಂಡನ್ ವಿಶ್ವವಿದ್ಯಾಲಯ. ಇವರು ಜಾಲಿಯನ್ ವಾಲಾಬಾಗ್ ಹತ್ಯಾಕಾ೦ಡದ ಬಗ್ಗೆ “ಜಾಲಿಯನ್ ವಾಲಾ ಬಾಗ್: ಎನ್ ಎಂಪೈರ್ ಆಫ್ ಫಿಯರ್ ಎ೦ಡ್ ಮೇಕಿಂಗ್ ಆಫ್ ಅಮೃತಸರ ಮಸ್ಸಾಕರ್”' (ಪೆಂಗ್ವಿನ್: 2019) ಎನ್ನುವ ಪುಸ್ತಕ ಬರೆದಿದ್ದಾರೆ.
ಇದನ್ನೂ ಓದಿ:
'What’s wrong with the Jallianwala Bagh restorations' by Kishwar Desai
“Those who died there should be remembered within a space which is historically correct in how it honours them”
https://indianexpress.com/article/opinion/columns/whats-wrong-with-the-jallianwala-bagh-restorations-7483250/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ