ಜಾತಿ ತಾರತಮ್ಯವು ಭಾರತದಲ್ಲಿ ಮಕ್ಕಳ ಅಭಿವೃದ್ಧಿ ಮತ್ತು ಕುಂಠಿತದ ಮೇಲೆ ಹೇಗೆ ಪ್ರಭಾವ ಬೀರುತ್ತದೆ

ಅಶ್ವಿನಿ ದೇಶಪಾಂಡೆ ಮತ್ತು. ರಾಜೇಶ್ ರಾಮಚಂದ್ರನ್

 (ದಿ ವಯರ್ ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟಿತ ಪ್ರಬ೦ಧದ ಮೇಲೆ ಆಧಾರಿತ)

“ಜಾತಿ ಗುಂಪುಗಳ ನಡುವಿನ ಮಗುವಿನ ಎತ್ತರ ಅಂತರವು ತುಂಬಾ ಅಗಲವಾಗಿದ್ದು, ಅಸ್ಪೃಶ್ಯತೆಯ ಆಚರಣೆಯಲ್ಲಿನ ವ್ಯತ್ಯಾಸವು ಮೇಲ್ಜಾತಿಯ ಮಕ್ಕಳ ಎತ್ತರದ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಅಸ್ಪೃಶ್ಯತೆಯ ಹೆಚ್ಚಿನ ಹರಡುವಿಕೆಯು ದಲಿತ ಮಕ್ಕಳ ಕಡಿಮೆ ಎತ್ತರಕ್ಕೆ ಜೋಡಿಸುತ್ತದೆ.”

ಪ್ರಪಂಚದಲ್ಲಿ ಕುಂಠಿತಗೊಂಡ ಅಂದರೆ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ವಯಸ್ಸಿಗೆ ಹೋಲಿಸಿದರೆ ಎತ್ತರ ವ್ಯತ್ಯಾಸದ ಜಾಗತಿಕ ಸ್ವೀಕಾರಾರ್ಹ ವ್ಯಾಪ್ತಿಗಿಂತ  ಕಡಿಮೆ ಇರುವ ಮಕ್ಕಳ ಸ೦ಖ್ಯೆಯಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಭಾರತದಲ್ಲಿ  ಇದೆ.  ಕುಂಠಿತವನ್ನು "ದುರ್ಬಲ ಪೋಷಣೆ, ಪುನರಾವರ್ತಿತ ಸೋಂಕು ಮತ್ತು ಅಸಮರ್ಪಕ ಮಾನಸಿಕ ಸಾಮಾಜಿಕ ಪ್ರಚೋದನೆಯಿಂದ ಮಕ್ಕಳು ಅನುಭವಿಸುವ ಹಾನಿಕಾರಕ ಬೆಳವಣಿಗೆ  ಮತ್ತು ಅಭಿವೃದ್ಧಿ" ಎಂದು ವ್ಯಾಖ್ಯಾನಿಸಲಾಗಿದೆ.

ಇದು ಏಕೆ ಮುಖ್ಯ? ಏಕೆಂದರೆ ಬಾಲ್ಯದ ಕಳಪೆ ಆರೋಗ್ಯದ ಸೂಚಕಗಳು ಹದಿಹರೆಯದಲ್ಲಿ ಮತ್ತು ಹೆಚ್ಚಾಗಿ ಪ್ರೌಢಾವಸ್ಥೆಯಲ್ಲಿ ಮುಂದುವರೆಯುತ್ತವೆ. ಕುಂಠಿತವು ನಂತರದ ಜೀವನದಲ್ಲಿ ಅನಾರೋಗ್ಯ ಮತ್ತು ಸಾವು, ಸಾಂಕ್ರಾಮಿಕವಲ್ಲದ ರೋಗಗಳು, ಕಲಿಕಾ ಸಾಮರ್ಥ್ಯ ಮತ್ತು ಉತ್ಪಾದಕತೆಗೆ ಪ್ರತಿಕೂಲ ಪರಿಣಾಮಗಳಿಗೆ ಸಂಬಂಧಿಸಿದೆ.

ವಿಶ್ವದಾದ್ಯಂತ ನಾಲ್ಕು ಮಕ್ಕಳಲ್ಲಿ ಒಬ್ಬರನ್ನು ಕುಂಠಿತ ಎಂದು ವರ್ಗೀಕರಿಸಲಾಗಿದ್ದು, ಇದನ್ನು ಜಾಗತಿಕ ಆರೋಗ್ಯ ಸವಾಲಾಗಿ ಪರಿಗಣಿಸಲಾಗಿದೆ.

5 ನೇ ವಯಸ್ಸಿನಲ್ಲಿ ತೀವ್ರವಾಗಿ ಕುಂಠಿತಗೊಂಡ ಮಕ್ಕಳು ಭಾರತದಲ್ಲಿ 15 ನೇ ವಯಸ್ಸಿನಲ್ಲಿ 74% ಹೆಚ್ಚು ಕುಂಠಿತಗೊಳ್ಳುವ ಸಾಧ್ಯತೆಯಿದೆ, ಅಂದರೆ ಬಾಲ್ಯದಲ್ಲಿಯೇ ಕುಂಠಿತವು ಹೆಚ್ಚು ನಿರಂತರವಾಗಿರುತ್ತದೆ.

ಮುಂಚಿನ ಬಾಲ್ಯದ ಕುಂಠಿತವು ಗಣಿತ ಮತ್ತು ಶಬ್ದಕೋಶದಲ್ಲಿ  ಸಾಧನೆ ಮತ್ತು ಅರಿವಿನ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ, ಜೊತೆಗೆ 15 ಮತ್ತು 22 ನೇ ವಯಸ್ಸಿನಲ್ಲಿ ವ್ಯಕ್ತಿನಿಷ್ಠ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳ ಸಂಶೋಧನೆಯು ಬಾಲ್ಯದ ಕುಂಠಿತವು ಉದ್ಯೋಗಾರ್ಹತೆ  ಮತ್ತು ವೇತನಗಳ ಮೇಲೆ ಪರಿಣಾಮ ಬೀರಬಹುದು ಎಂದು ತೋರಿಸುತ್ತದೆ.

ಕುಂಠಿತಕ್ಕೆ ಸಂಬಂಧಿಸಿದ ಅಂಶಗಳು ಯಾವುದು? ಕುಂಠಿತಗೊಳ್ಳುವ ಸಾಧ್ಯತೆಯು ಕೇವಲ ಸಂಪತ್ತು ಮತ್ತು ಆದಾಯದ ಫಲಿತಾಂಶವೇ ಅಥವಾ ನೀತಿ ಮಧ್ಯಸ್ಥಿಕೆಗಳಿಗೆ ಹೆಚ್ಚು ಅನುಕೂಲಕರವಾಗಿರುವ ಇತರ ಅಂಶಗಳನ್ನು ಗುರುತಿಸಬಹುದೇ?

ಭಾರತೀಯ ಎನಿಗ್ಮಾ(ನಿಗೂಢ ರಹಸ್ಯ)

ಭಾರತವು ಹೆಚ್ಚಿನ ಕುಂಠಿತವನ್ನು ಹೊಂದಿದ್ದು ಮಾತ್ರವಲ್ಲದೆ,   ಉಪ-ಸಹಾರ (ಸಹಾರಾ-ದಕ್ಷಿಣಕ್ಕಿರುವ) ಆಫ್ರಿಕಾದ ಸರಾಸರಿ 30 ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸರಾಸರಿ ಕುಂಠಿತದ ಪ್ರಮಾಣವು ಹೆಚ್ಚಾಗಿದೆ. ಉಪ-ಸಹಾರನ್ ಆಫ್ರಿಕಾ ಜಾಗತಿಕ ತೀವ್ರ ಬಡ ಜನಸಂಖ್ಯೆಯ ಮೂರನೇ ಎರಡರಷ್ಟು ಪಾಲನ್ನು ಹೊಂದಿದೆ.

ಮಗುವಿನ ಎತ್ತರವು ಸಾಮಾನ್ಯವಾಗಿ ಬಡತನದೊಂದಿಗೆ ನಕಾರಾತ್ಮಕವಾಗಿ ಸಂಬಂಧ ಹೊಂದಿದೆ, ಏಕೆಂದರೆ ಕುಂಠಿತವು ದೀರ್ಘಕಾಲದ ಅಪೌಷ್ಟಿಕತೆಯ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಆದುದರಿಂದ, ಭಾರತವು ತುಲನಾತ್ಮಕವಾಗಿ ಶ್ರೀಮಂತ ರಾಷ್ಟ್ರವಾಗಿರುವುದರಿಂದ, ಭಾರತೀಯ ಮಕ್ಕಳು ಉಪ-ಸಹಾರ ಆಫ್ರಿಕಾದ ತಮ್ಮ ಸಹವರ್ತಿಗಳಿಗಿಂತ ಚಿಕ್ಕವರಾಗಿದ್ದಾರೆ ಎಂಬ ಅಂಶವು ವಿರೋಧಾಭಾಸದ ವಿಷಯವಾಗಿದೆ. ಈ ಒಗಟನ್ನು "ಭಾರತೀಯ ಎನಿಗ್ಮಾ" ಎಂದು ಕರೆಯಲಾಗುತ್ತದೆ.

ಈ ವಿದ್ಯಮಾನಕ್ಕೆ ಪ್ರಧಾನವಾದ ವಿವರಣೆಗಳೆಂದರೆ ಜನ್ಮ ಸಂಖ್ಯಾತ್ಮಕ ಕ್ರಮ ಮತ್ತು ಗ೦ಡುಕೂಸಿನ  ಆದ್ಯತೆ: ಮೊದಲನೆಯದಾಗಿ ಹುಟ್ಟಿದ ಮಕ್ಕಳು ಚಿಕ್ಕವರಾಗಿರುವುದಿಲ್ಲ ಆದರೆ ಎರಡನೇ ಮಗುವಿನಿಂದ ಎತ್ತರ ಕಡಿಮೆಯಾಗಲು  ಪ್ರಾರಂಭವಾಗುತ್ತದೆ, ವಿಶೇಷವಾಗಿ ಮಗು ಹುಡುಗಿಯಾಗಿದ್ದರೆ; ಬಯಲು ಮಲವಿಸರ್ಜನೆಯ ಅಧಿಕ ಅಭ್ಯಾಸ, ಅಂದರೆ ರೋಗ ಪರಿಸರ; ಮತ್ತು ಆನುವಂಶಿಕ ವ್ಯತ್ಯಾಸಗಳು. (ಆನುವಂಶಿಕ ವಿವರಣೆಯ ವಿರುದ್ಧ ಗಂಭೀರ ಪ್ರಶ್ನೆಯಿದೆ.)

ಕಾಣೆಯಾದ ಸ೦ಬ೦ಧ: ಸಾಮಾಜಿಕ ಸಾರೂಪ್ಯದ  ಪಾತ್ರ

ಮೇಲ್ಜಾತಿ ಹಿಂದುಗಳನ್ನು ಹೊರತುಪಡಿಸಿ ಎಲ್ಲಾ ಗುಂಪುಗಳಿಗೆ ಎತ್ತರದ ಪ್ರತಿಕೂಲತೆ, ಉಪ-ಸಹಾರನ್ ಆಫ್ರಿಕಾದ ಮಕ್ಕಳಿಗೆ ಹೋಲಿಸಿದರೆ ಹೆಚ್ಚಾಗಿದೆ.  ಮೇಲ್ಜಾತಿ ಮಕ್ಕಳಲ್ಲಿ ಕುಂಠಿತದ ಸ೦ಖ್ಯೆ ತುಂಬಾ ಕಡಿಮೆ. ಉಪ-ಸಹಾರನ್ ಆಫ್ರಿಕಾದ ಶೇಕಡಾ 31 ರಷ್ಟು ಮಕ್ಕಳು ಕುಂಠಿತಕ್ಕೊಳಗಾಗುತ್ತಿದ್ದರೆ, 26%ರಷ್ಟು ಕುಂಠಿತಗೊಳ್ಳುವಿಕೆಯೊಂದಿಗೆ, ಮೇಲ್ಜಾತಿ-ಹಿಂದು ಮಕ್ಕಳು ಉಪ-ಸಹಾರನ್ ಆಫ್ರಿಕಾದ ಮಕ್ಕಳಿಗಿಂತ 5%ರಷ್ಟು ಕಡಿಮೆ ಕುಂಠಿತಗೊಳ್ಳುವ ಸಾಧ್ಯತೆಯಿದೆ.

ಸುಮಾರು 40%, 36% ಮತ್ತು 35% SC-ST, OBC ಗಳು ಮತ್ತುಮೇಲ್ಜಾತಿ- ಮುಸ್ಲಿಂ ಮಕ್ಕಳು ಕ್ರಮವಾಗಿ ಕುಂಠಿತಗೊಂಡಿದ್ದಾರೆ. ಹೀಗಾಗಿ, ಎಸ್ಸಿ-ಎಸ್ಟಿ, ಒಬಿಸಿಗಳು ಮತ್ತುಮೇಲ್ಜಾತಿ-ಮುಸ್ಲಿಂ ಮಕ್ಕಳು 14, 10 ಮತ್ತು 9 ಶೇಕಡಾವಾರು ಅಂಕಗಳು, ಅಥವಾ 35-50%, ಮೇಲ್ಜಾತಿ-ಹಿಂದು ಮಕ್ಕಳಿಗೆ ಹೋಲಿಸಿದರೆ ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚು.

ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದ ಸಾಮಾಜಿಕ ಗುಂಪುಗಳ ನಡುವಿನ ಮಕ್ಕಳ ಎತ್ತರದಲ್ಲಿನ ಅಂತರವು ಭಾರತ-ಉಪ-ಸಹಾರನ್ ಆಫ್ರಿಕಾ ಮಕ್ಕಳ ಎತ್ತರ ಅಂತರಕ್ಕಿಂತ ಎರಡು ಮೂರು ಪಟ್ಟು ಹೆಚ್ಚಾಗಿದೆ. ಇಡೀ ಭಾರತ-ಉಪ-ಸಹಾರನ್ ಆಫ್ರಿಕಾ ಮಕ್ಕಳ ಎತ್ತರ ಅಂತರವನ್ನು ಅನನುಕೂಲಕರ ಗುಂಪುಗಳ ಕಡಿಮೆ ಮಕ್ಕಳ ಎತ್ತರದಿಂದ ಪರಿಗಣಿಸಲಾಗುತ್ತದೆ.

"ಭಾರತೀಯ ಮಕ್ಕಳು ಆಫ್ರಿಕನ್ ಮಕ್ಕಳಿಗಿಂತ ಏಕೆ ಚಿಕ್ಕವರು" ಎಂಬ ಪ್ರಶ್ನೆಯನ್ನು ಬೇರೆ ರೀತಿಯಲ್ಲಿ ಬದಲಾಯಿಸಿ "ಭಾರತದೊಳಗಿನ ಸಾಮಾಜಿಕ ಗುಂಪುಗಳ ನಡುವಿನ ಮಗುವಿನ ಎತ್ತರದಲ್ಲಿನ ಅಂತರವು ಏಕೆ ಹೆಚ್ಚಾಗಿದೆ?" ಎ೦ದು ಕೇಳಬೇಕಾಗುತ್ತದೆ.

ಜಿಲ್ಲೆಗಳು ಮತ್ತು ಸಾಮಾಜಿಕ ಗುಂಪುಗಳಾದ್ಯಂತ ಕುಂಠಿತದಲ್ಲಿ ವ್ಯತ್ಯಾಸ

ಸಂಕ್ಷಿಪ್ತವಾಗಿ ಹೇಳುವುದಾದರೆ, ಕುಂಠಿತಗೊಳಿಸುವಿಕೆಯ ದರಗಳು 40% ಕ್ಕಿಂತ ಹೆಚ್ಚಿರುವ ಜಿಲ್ಲೆಗಳ ಅನುಪಾತ (ಅಂದರೆ ಅತ್ಯಂತ ಹೆಚ್ಚಿನದು) ಮೇಲ್ಜಾತಿ ಹಿಂದುಗಳಿಗೆ 15%; ಒಬಿಸಿಗಳಿಗೆ 37%; SC-ST ಗೆ 51% ಮತ್ತು ಮೇಲ್ಜಾತಿ ಮುಸ್ಲಿಮರಿಗೆ 57%.

ಪ್ರಾದೇಶಿಕ ವಿನ್ಯಾಸ ಹುಡುಕ ಬೇಕಿದ್ದರೆ,  ಎಸ್‌ಸಿ-ಎಸ್‌ಟಿ ಸಮುದಾಯದಲ್ಲಿ  ಅತಿ ಹೆಚ್ಚು ಹರಡುವಿಕೆಯು ಬಿಹಾರ, ಛತ್ತೀಸ್‌ಗಡ್, ಜಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ. ಹೆಚ್ಚು ನಿರ್ದಿಷ್ಟವಾಗಿ, BIMARU ‘ಬಿಮಾರು’ ಎ೦ದು ಕರೆಯುವ ಪ್ರದೇಶದ ಎಸ್‌ಸಿ-ಎಸ್‌ಟಿ ಮಕ್ಕಳಿಗೆ, 195 ಅಥವಾ 84% ಜಿಲ್ಲೆಗಳಲ್ಲಿ, ಕುಂಠಿತದ ಪ್ರಮಾಣವು 40% ಕ್ಕಿಂತ ಹೆಚ್ಚಾಗಿದೆ; ಮತ್ತು 105 ಅಥವಾ 44.49% ಜಿಲ್ಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ಕುಂಠಿತಗೊಂಡಿದ್ದಾರೆ.

 ‘ಬಿಮಾರು’ ಪ್ರದೇಶವು ದಕ್ಷಿಣ ಮತ್ತು ಉತ್ತರ ಭಾಗಗಳಿಗೆ ತದ್ವಿರುದ್ಧವಾಗಿದೆ; ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಇಂತಹ ಕುಂಠಿತದ ತೀವ್ರತೆಯ ಮಟ್ಟವು ಎಲ್ಲಾ ಜಾತಿಯ ಗುಂಪುಗಳಲ್ಲಿ ಕಡಿಮೆಯಾಗಿದೆ; ಜಾತಿ ಗುಂಪುಗಳಮಧ್ಯೆ ವ್ಯತ್ಯಾಸಗಳ ಪ್ರಮಾಣವು ತುಂಬಾ ಚಿಕ್ಕದಾಗಿದೆ. ಮೇಲ್ಜಾತಿಗಳಿಗೆ,  ‘ಬಿಮಾರು’ ಪ್ರದೇಶದಲ್ಲಿ, ಕೇವಲ 38 (16) ಶೇಕಡಾ ಜಿಲ್ಲೆಗಳಲ್ಲಿ, ಕುಂಠಿತದ ಪ್ರಮಾಣವು 40 (50) ಶೇಕಡಾಕ್ಕಿಂತ ಹೆಚ್ಚಾಗಿದೆ. ಒಬಿಸಿ ಮತ್ತು ಮೇಲ್ಜಾತಿ ಮುಸ್ಲಿಮರಿಗೆ, ‘ಬಿಮಾರು’ ಪ್ರದೇಶದಲ್ಲಿ, ಕ್ರಮವಾಗಿ 61% ಮತ್ತು 71% ಜಿಲ್ಲೆಗಳಲ್ಲಿ ಕುಂಠಿತದ ಪ್ರಮಾಣವು 40% ಕ್ಕಿಂತ ಹೆಚ್ಚಾಗಿದೆ.

ಸಾಮಾಜಿಕ ಗುಂಪುಗಳು ಮತ್ತು ಪ್ರದೇಶಗಳ ನಡುವಿನ ಅಂತರಕ್ಕೆ ಕಾರಣವೇನು?

ಜಾತಿ-ಅಂತರಗಳು ಕೇವಲ ಸಾಮಾಜಿಕ-ಆರ್ಥಿಕ ಗುಣಲಕ್ಷಣಗಳಲ್ಲಿನ ವ್ಯತ್ಯಾಸಗಳೇ? ಇದು ನಿಜವಾಗಿದ್ದಲ್ಲಿ, ಜೀವನ ಪರಿಸ್ಥಿತಿಗಳಲ್ಲಿನ ವ್ಯತ್ಯಾಸಗಳು ಜಾತಿ ಗುಂಪುಗಳ ನಡುವಿನ ಮಕ್ಕಳ ಮಧ್ಯದ ಎತ್ತರ ಅಂತರವನ್ನು ಸ್ಪಷ್ಟೀಕರಿಸಬೇಕು.

ನಮ್ಮ ಸಂಶೋಧನೆಯಲ್ಲಿ, ನಾವು ಮೊದಲು ಈ ಅಂಶಗಳನ್ನು ಪರೀಕ್ಷಿಸುವ ಮೂಲಕ ಪ್ರಾರಂಭಿಸುತ್ತೇವೆ.

ಮಗುವಿನ ಎತ್ತರದ ಮೇಲೆ ಪರಿಣಾಮ ಬೀರುವ ಐದು ಪ್ರಮುಖ ಅಂಶಗಳನ್ನು ನಾವು ಗುರುತಿಸುತ್ತೇವೆ, ಅವುಗಳೆಂದರೆ: (i) ನೈರ್ಮಲ್ಯದ  ಕೊರತೆ, ಶೌಚಾಲಯ ಸೌಕರ್ಯವಿಲ್ಲದೆ ಮತ್ತು ಪೊದೆ/ಮೈದಾನದಲ್ಲಿ ಮಲವಿಸರ್ಜನೆ ಮಾಡುವ ಕುಟು೦ಬಗಳು ಮತ್ತು ಅಕ್ಕ-ಪಕ್ಕ (ii) ತಾಯಿಯ ಶಾಲಾ ಶಿಕ್ಷಣ ಮತ್ತು ಓದುವ ಸಾಮರ್ಥ್ಯ (iii) ತಾಯಿಯ ತೂಕ-ಎತ್ತರ  ಮತ್ತು ವಯಸ್ಸು; (iv) ಸಂಪತ್ತಿನ ಸೂಚ್ಯಂಕ  ಆಸ್ತಿ ವ್ಯತ್ಯಾಸಗಳು; ಮತ್ತು (v)  ಜನ್ಮ ಸಂಖ್ಯಾತ್ಮಕ ಕ್ರಮ, ಒಡಹುಟ್ಟಿದವರ ಸ೦ಖ್ಯೆ.

ಮಕ್ಕಳ ಎತ್ತರದ ಮೇಲೆ ಪರಿಣಾಮ ಬೀರುವ ಅ೦ಶಗಳ ವಿಷಯದಲ್ಲಿ ದೊಡ್ಡ  ವ್ಯತ್ಯಾಸಗಳನ್ನು, ವಿಶೇಷವಾಗಿ ಮೇಲ್ಜಾತಿ-ಹಿಂದುಗಳು ಮತ್ತು ಎಸ್‌ಸಿ-ಎಸ್‌ಟಿಗಳ ಮಧ್ಯೆ,   ನಾವು ಕಾಣುತ್ತೇವೆ. ಕೆಲವನ್ನು ಸೂಚಿಸಲು, 58% SC-ST ಕುಟುಂಬಗಳಿಗೆ ಶೌಚಾಲಯದ ಸೌಲಭ್ಯವಿಲ್ಲ ಮತ್ತು ಪೊದೆ/ಮೈದಾನದಲ್ಲಿ ಮಲವಿಸರ್ಜನೆ ಮಾಡುತ್ತಿದ್ದರೆ,   ಮೇಲ್ಜಾತಿ-ಹಿಂದುಗಳಲ್ಲಿ ಇದು  23% ; ತಾಯಿಯ ಸಾಕ್ಷರತೆಯು ಎಸ್ಸಿ-ಎಸ್ಟಿಗಳೆಡೆಯಲ್ಲಿ  51% ಆದರೆ,  ಮೇಲ್ಜಾತಿ-ಹಿಂದುಗಳಲ್ಲಿ ಇದು  83% ಆಗಿದೆ; ಎಸ್‌ಸಿ-ಎಸ್‌ಟಿ ತಾಯಂದಿರು 5.26 ವರ್ಷಗಳ ಶಾಲಾ ಶಿಕ್ಷಣವನ್ನು ಹೊಂದಿದ್ದು, ಮೇಲ್ಜಾತಿ-ಹಿಂದೂ ತಾಯಂದಿರಿಗೆ 9.47; ಮತ್ತು ಮೇಲ್ಜಾತಿ-ಹಿಂದು ತಾಯಂದಿರ ದೈಹಿಕ ಅಳತೆಗಳೂ (ಎತ್ತರಕ್ಕೆ ತೂಕ)ಎಸ್ ಸಿ ಎಸ್ ಟಿ ತಾಯ೦ದರಿಗಿ೦ತ ಮೇಲಿನದಾಗಿದೆ.  

ಪರಿಸರದಲ್ಲಿ ಮೇಲ್ಜಾತಿ ಮತ್ತು ದಲಿತ ಮಕ್ಕಳು ಬೆಳೆಯುವ ದೊಡ್ಡ ಮತ್ತು ಮಹತ್ವದ ವ್ಯತ್ಯಾಸಗಳಿವೆ, ದಲಿತ ಮತ್ತು ಆದಿವಾಸಿ (ಎಸ್‌ಸಿ-ಎಸ್‌ಟಿ) ಮಕ್ಕಳಿಗೆ ಪರಿಸ್ಥಿತಿಗಳು ಹೆಚ್ಚು ಪ್ರತಿಕೂಲವಾಗಿವೆ. ಸಾಮಾಜಿಕ-ಆರ್ಥಿಕ ಗುಣಲಕ್ಷಣಗಳಲ್ಲಿನ ಈ ವ್ಯತ್ಯಾಸಗಳು ಸಾಮಾಜಿಕ ಗುಂಪುಗಳ ನಡುವಿನ ಮಗುವಿನ ಎತ್ತರದ ಅಂತರವನ್ನು ವಿವರಿಸುತ್ತವೆಯೇ?

ಮೇಲ್ಜಾತಿ ಮತ್ತು ದಲಿತ ಮಕ್ಕಳ "ಹೊಂದಾಣಿಕೆಯ" ನಿದರ್ಶನಗಳಲ್ಲಿಯ ಕುಂಠಿತದಲ್ಲಿನ ವ್ಯತ್ಯಾಸಗಳನ್ನು ನಾವು ಪರಿಶೀಲಿಸುತ್ತೇವೆ, ಅಂದರೆ ಸಾಮಾಜಿಕ-ಆರ್ಥಿಕ ಗುಣಲಕ್ಷಣಗಳನ್ನು ಪ್ರಮುಖ ಆಯಾಮಗಳಲ್ಲಿ ಹೊಂದಿಕೆಯಾಗುವ ಮಕ್ಕಳು.  ‘ಬಿಮಾರು’ ರಾಜ್ಯಗಳಲ್ಲಿ ನಮ್ಮ ಹೊಂದಾಣಿಕೆಯ ಮಾದರಿಯಲ್ಲಿ, SC-ST ಮತ್ತು OBC ಮಕ್ಕಳು ಮೇಲ್ಜಾತಿಯ ಮಕ್ಕಳಿಗಿಂತ ಕಡಿಮೆ ಎತ್ತರ ಇರುವ ಸಾಧ್ಯತೆ ಇದೆ. ಕಡಿಮೆ-ಶ್ರೇಣಿಯ ಜಾತಿಗಳ ಮಕ್ಕಳಲ್ಲಿ ಹೆಚ್ಚಿನ ಕುಂಠಿತವು ಅವರ ತುಲನಾತ್ಮಕವಾಗಿ ಹೆಚ್ಚು ಅನನುಕೂಲಕರ ಸನ್ನಿವೇಶಗಳಿಂದಾಗಿ ಮಾತ್ರವಲ್ಲ ಎಂದು ಇದು ಸೂಚಿಸುತ್ತದೆ

ಹಿಂದೂ ಮೇಲ್ಜಾತಿ ಮತ್ತು ದಲಿತ (ಎಸ್‌ಸಿ) ಮಕ್ಕಳ ನಡುವಿನ ಅಂತರವು ಸಾಮಾಜಿಕ ತಾರತಮ್ಯದಿಂದ ಪ್ರಭಾವಿತವಾಗಿದೆ ಎಂದು ನಾವು ಸೂಚಿಸುತ್ತೇವೆ, ಇದು ಅಸ್ಪೃಶ್ಯತೆಯ ಕಾನೂನುಬಾಹಿರ ಆದರೆ ವ್ಯಾಪಕ ಅಭ್ಯಾಸದಲ್ಲಿ ವ್ಯಕ್ತವಾಗುತ್ತದೆ. ಸ್ವಯಂ ವರದಿಯ೦ತೆ ಅಸ್ಪೃಶ್ಯತೆಯ ಪದ್ಧತಿ ಹೆಚ್ಚಿರುವ ಜಿಲ್ಲೆಗಳಲ್ಲಿ ದಲಿತ ಮಕ್ಕಳ ಎತ್ತರದ ಪ್ರತಿಕೂಲತೆ ಹೆಚ್ಚಾಗುತ್ತದೆ. ಅಸ್ಪೃಶ್ಯತೆ ಮತ್ತು ಮಗುವಿನ ಎತ್ತರ ನಡುವಿನ ಸಂಬಂಧವನ್ನು ಅಂದಾಜು ಮಾಡಲು ನಾವು ಭಾರತ ಮಾನವ ಅಭಿವೃದ್ಧಿ ಸಮೀಕ್ಷೆಯ (IHDS 2012) ಡೇಟಾವನ್ನು ಬಳಸುತ್ತೇವೆ.

ಅಸ್ಪೃಶ್ಯತೆಯ ಆಚರಣೆ ಹೆಚ್ಚು ಇರುವ ಪ್ರದೇಶಗಳಲ್ಲಿ ದಲಿತ ಮಕ್ಕಳ ‘ವಯಸ್ಸಿಗೆ ಎತ್ತರ’ ಸೂಚ್ಯ೦ಕ   ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ಕ೦ಡುಬರುತ್ತದೆ. ಇದಕ್ಕೆ ತದ್ವಿರುದ್ಧವಾಗಿದೆ, ಈ ಪ್ರದೇಶಗಳಲ್ಲಿ ಮೇಲ್ಜಾತಿಯ ಮಕ್ಕಳಿಗೆ ಸೇರಿದ ಸೂಚ್ಯ೦ಕ.  

ಮಗುವಿನ ಬೆಳವಣಿಗೆಯ ಸಂಪೂರ್ಣ ಚಲನೆಯಲ್ಲಿ ಅಸ್ಪೃಶ್ಯತೆಯ ಆಚರಣೆಯ ಪರಿಣಾಮವನ್ನು ನಾವು ಅನ್ವೇಷಿಸುತ್ತೇವೆ. ನಮ್ಮ ಫಲಿತಾಂಶಗಳು ಅಸ್ಪೃಶ್ಯತೆಯ ಆಚರಣೆಯಲ್ಲಿ  ಹೆಚ್ಚಾಗಿ ತೊಡಗಿರುವ ಪ್ರದೇಶಗಳಲ್ಲಿ  ಎಸ್‌ಸಿ ತಾಯಂದಿರು ಮತ್ತು ಮಕ್ಕಳು ಪ್ರಸವಪೂರ್ವ ಮತ್ತು ಪ್ರಸವಾನಂತರದ ಆರೋಗ್ಯದ ಸಂಪೂರ್ಣ ಸಹಾಯವನ್ನು ಪಡೆದುಕೊಳ್ಳುವ ಅಥವಾ ಬಳಸುವ ಸಾಧ್ಯತೆ ಕಡಿಮೆ ಇರುವ ಪ್ರದೇಶಗಳುಎಂದು ತೋರಿಸುತ್ತವೆ

‘ಜಾತಿ-ಒಂದು-ಕಾಣೆಯಾದ-ಸ೦ಬ೦ಧ’ ಕುರಿತ ನಮ್ಮ ಫಲಿತಾಂಶಗಳು ಮಗುವಿನ ಎತ್ತರದಲ್ಲಿನ ಜಾತಿ ಭೇದವು ಸಂಪೂರ್ಣವಾಗಿ ವರ್ಗ ಅಥವಾ ಸಾಮಾಜಿಕ ಆರ್ಥಿಕ ಸ್ಥಿತಿ ವ್ಯತ್ಯಾಸಗಳ ಪ್ರತಿಬಿಂಬವಲ್ಲ ಎಂದು ತೋರಿಸುತ್ತವೆ. ಮಗುವಿನ ಎತ್ತರವನ್ನು ನಿರ್ಧರಿಸುವ ವ್ಯಾಪಕವಾದ ಅ೦ಶಗಳಲ್ಲಿ  ಜಾತಿ ಗುಂಪುಗಳು ಭಿನ್ನವಾಗಿದ್ದರೂ, ಈ ಅ೦ಶಗಳು  ಸಮತೋಲಿತವಾಗಿರುವ ನಿದರ್ಶನಗಳನ್ನು ಹೋಲಿಸಿದಾಗಲೂ  ಅಂತರಗಳು ಗಣನೀಯ ಗಾತ್ರದಲ್ಲಿಉಳಿಯುತ್ತವೆ ಎಂದು ನಾವು ತೋರಿಸುತ್ತೇವೆ.

ಕಾನೂನುಬಾಹಿರ, ಆದರೆ ವ್ಯಾಪಕವಾದ, ಅಸ್ಪೃಶ್ಯತೆಯ ಆಚರಣೆಯು ಮೇಲ್ ಮತ್ತು ಕೆಳಜಾತಿ (ದಲಿತ) ಮಕ್ಕಳ ನಡುವಿನ ಎತ್ತರದ ಅಂತರದೊಂದಿಗೆ ಸಕಾರಾತ್ಮಕವಾಗಿ ಸಂಬಂಧಿಸಿದೆ ಎಂದು ಪುರಾವೆಗಳು ತೋರಿಸುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅಸ್ಪೃಶ್ಯತೆಯ ಆಚರಣೆಯಲ್ಲಿನ ವ್ಯತ್ಯಾಸವು ಮೇಲ್ಜಾತಿಯ ಮಕ್ಕಳ ಎತ್ತರದ ಮೇಲೆ ಪರಿಣಾಮ ಬೀರುವುದಿಲ್ಲ, ಆದರೆ ಅಸ್ಪೃಶ್ಯತೆ-ಸಂಬಂಧಿತ ಅಭ್ಯಾಸಗಳ ಹೆಚ್ಚಿನ ಹರಡುವಿಕೆಯು ದಲಿತ ಮಕ್ಕಳ ಕಡಿಮೆ ಎತ್ತರಕ್ಕೆ ಸಂಬಂಧಿಸಿದೆ. ಫಲಿತಾಂಶಗಳು, ಕಳಂಕಿತ ಗುಂಪುಗಳಿಗೆ ಸೇರಿದ ಗರ್ಭಿಣಿ ಮತ್ತು ಸಾಕಿ ಸಲಹುವಿಕೆ ಮಾಡುತ್ತಿರುವ ತಾಯಂದಿರಿಗೆ ಸೇವೆಯ  ಲಭ್ಯತೆಯ ಮೇಲೆ  ಮತ್ತು ಇದರ ಪರಿಣಾಮವಾಗಿ ಕೆಳಜಾತಿಯ ಮಕ್ಕಳ ಆರೋಗ್ಯ ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ತಾರತಮ್ಯದ ಅಭ್ಯಾಸಗಳ ಪಾತ್ರವನ್ನು ಸೂಚಿಸುತ್ತವೆ.

ಅಶ್ವಿನಿ ದೇಶಪಾಂಡೆ ಅಶೋಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕಿ. ರಾಜೇಶ್ ರಾಮಚಂದ್ರನ್ ಹೈಡೆಲ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಂಶೋಧಕರಾಗಿದ್ದಾರೆ.

 

 

 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು