ಭೀಮಾ ಕೋರೆಗಾಂವ್ ಆರೋಪಿಗಳ ವಿರುದ್ಧ ಎನ್ಐಎ ತನಿಖಾ ಸ೦ಸ್ಥೆ ಕರಡು ಆರೋಪಗಳನ್ನು ಸಲ್ಲಿಸಿದೆ.
ದಿ ಹಿ೦ದು, ಆಗಸ್ಟ್ 23, 2021
ಹಾಕರ್ಸ್ ಸಂಗ್ರಾಮ ಸಮಿತಿ ಸದಸ್ಯರು, ಭಾಸ ಒ ಚೇತನ ಸಮಿತಿ, ಸಂಗ್ರಾಮಿ ಶ್ರಮಿಕ್ ಸಂಘಟನೆ, ಶ್ರಮಿಕ್ ಕೃಷಕ್ ಸಂಗ್ರಾಮೀ ಮಂಚ್ ಮತ್ತು ಬಂಡಿಮುಕ್ತಿ ಸಮಿತಿಯ ಸದಸ್ಯರು ಆಗಸ್ಟ್ನಲ್ಲಿ ಕೋಲ್ಕತ್ತಾದಲ್ಲಿ ತಂದೆ ಸ್ಟಾನ್ ಸ್ವಾಮಿ ಸಾವಿನ ವಿರುದ್ಧ ಪ್ರತಿಭಟನೆ ನಡೆಸಿದರು. | ಫೋಟೋ ಕ್ರೆಡಿಟ್: ಪಿಟಿಐ ಈ ಪ್ರಕರಣದ 15 ಆರೋಪಿಗಳು ಮತ್ತು ಆರು ತಲೆಮರೆಸಿಕೊಂಡಿರುವ ಆರೋಪಿಗಳು 'ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದಾರೆ, ಅವರ ಮುಖ್ಯ ಉದ್ದೇಶ 'ಜನತಾ ಸರ್ಕಾರ್ ' ಅಂದರೆ ಕ್ರಾಂತಿಯ ಮೂಲಕ ಜನರ ಸರ್ಕಾರ ...'ಎನ್ನುತ್ತದೆ ತನಿಖಾ ಸಂಸ್ಥೆ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 2018 ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ತನಿಖೆ ಎನ್ಐಎ ನ್ಯಾಯಾಲಯಕ್ಕೆ ಬ೦ಧನದಲ್ಲಿರುವ 15 ಆರೋಪಿಗಳು ಮತ್ತು ಆರು ತಲೆಮರೆಸಿಕೊಂಡ ಆರೋಪಿಗಳ ವಿರುದ್ಧ ಕರಡು ಆರೋಪಗಳನ್ನು ಸಲ್ಲಿಸಿದೆ.
ಎನ್ಐಎ ಪ್ರಕಾರ, "ಎಲ್ಲಾ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದು, ಅವರ ಮುಖ್ಯ ಉದ್ದೇಶ 'ಜನತಾ ಸರ್ಕಾರ' ಅಂದರೆ ಜನರ ಸರ್ಕಾರವನ್ನು ಕ್ರಾಂತಿಯ ಮೂಲಕ ಸ್ಥಾಪಿಸುವುದು ಮತ್ತು ಇದು ಒಳಗೊಳಗೆ ಹಾಳುಮಾಡಿ ರಾಜ್ಯಾಧಿಕಾರದಿ೦ದ ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವ ದೀರ್ಘಕಾಲ ಸಶಸ್ತ್ರ ಹೋರಾಟದ ಬದ್ಧತೆಯಿಂದ ಬೆಂಬಲಿತವಾಗಿದೆ."
"ಅವರು ಭಾರತದಲ್ಲಿ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಜನರಲ್ಲಿ ಭಯೋತ್ಪಾದನೆಯನ್ನು ಹೊಡೆದೇರಿಸುವ ಉದ್ದೇಶದಿಂದ, ಭಾರತದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತೆಯನ್ನು ಬೆದರಿಸುವ ಉದ್ದೇಶದಿಂದ ಕಾನೂನುಬಾಹಿರ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಬದ್ಧರಾಗಿದ್ದಾರೆ, ಕುಮ್ಮಕ್ಕು ನೀಡಿದ್ದಾರೆ ಮತ್ತು ಸಹಾಯ ಮಾಡಿದ್ದಾರೆ. ಸೈನ್ಯ ವ್ಯವಸ್ಥಾಪನ ತಂತ್ರ, , ತಂತಿಗಳು, ಮೊಳೆಗಳು, ನೈಟ್ರೇಟ್ ಪುಡಿ, ಮತ್ತು ಚೈನೀಸ್ ಕ್ಯೂಎಲ್Zಡ್ 87 ಸ್ವಯಂಚಾಲಿತ ಗ್ರೆನೇಡ್ ಹೊಡೆಯುವ ಫಿರ೦ಗಿ, ಮತ್ತು ರಷ್ಯಾದ ಜಿಎಂ -94 ಗ್ರೆನೇಡ್ ಹೊಡೆಯುವ ಫಿರ೦ಗಿ ಮತ್ತು ಎಂ -4 ನಂತಹ 4,00,000 ಸುತ್ತುಗಳ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮತ್ತು ಸಾಗಿಸುವ ಮೂಲಕ ಸ್ಫೋಟಕ ವಸ್ತುವನ್ನು ಬಳಸಿ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಸಾವು ಅಥವಾ ಗಾಯಗಳು ಅಥವಾ ನಷ್ಟ ಅಥವಾ ಹಾನಿ ಅಥವಾ ಆಸ್ತಿಗಳ ನಾಶಕ್ಕೆ ಕಾರಣ ಅಥವಾ ಸಾಧ್ಯತೆ ಮತ್ತು ಸಾರ್ವಜನಿಕ ಕಾರ್ಯಗಾರರ ಸಾವನ್ನು ಮಾಡುವ ಅಥವಾ ಮಾಡುವ ಪ್ರಯತ್ನವಾಗಿದೆ ,” ಎಂದು ಎನ್ಐಎ ಪ್ರತಿಪಾದಿಸುತ್ತದೆ.
ಕರಡು ಅಪರಾಧ ಪಟ್ಟಿಯನ್ನು ಸುಧೀರ್ ಧವಲೆ, ರೊನಾವಿಲ್ಸನ್, ಸುರೇಂದ್ರ ಗಾಡ್ಲಿ೦ಗ್ , ಶೋಮಾ ಸೇನ್, ಮಹೇಶ್ ರಾವುತ್, ವರವರ ರಾವ್, ಅರುಣ್ ಫೆರೀರಾ, ಸುಧಾ ಭಾರದ್ವಾಜ್, ಆನಂದ್ ತೆಲ್ತು೦ಬ್ಡೆ, ಗೌತಮ್ ನವ್ಲಕಾ, ಹಾನಿ ಬಾಬು, ದಿವ೦ಗತ ಸ್ಟಾನ್ ಸ್ವಾಮಿ , ಸಾಗರ್ ಗೂರ್ಖೆ, ರಮೇಶ್ ಗೈಚೋರ್ ಮತ್ತು ಜ್ಯೋತಿ ಜಗ್ತಾಪ್ ಇವರ ವಿರುಧ್ಧ ವಿಶೇಷ ನ್ಯಾಯಾಧೀಶರ ಡಿ.ಇ .ಕೊಥಾಲಿಕರ್ ಇವರ ಮು೦ದೆ ಸಲ್ಲಿಸಲಾಯಿತು. ಆರು ಮಂದಿ ಆರೋಪಿಗಳು - ಮಿಲಿಂದ್ ತೇಲ್ತುಂಬ್ಡೆ, ಕಾಮ್ರೇಡ್ ಪ್ರಕಾಶ್, ಕಾಮ್ರೇಡ್ ಮಂಗ್ಲು, ಕಾಮ್ರೇಡ್ ದೀಪು, ಕಿಶನ್ ಅಲಿಯಾಸ್ ಪ್ರಶಾಂತ್ ಬೋಸ್ ಮತ್ತು ಮುಪಲ್ಲ ರಾವ್ ತಲೆಮರೆಸಿಕೊಂಡಿದ್ದಾರೆ, ಪೋಲೀಸರಿಗೆ ಬೇಕಾಗಿದ್ದಾರೆ
ಆರೋಪಗಳ ಪ್ರಕಾರ , "ಇವರೆಲ್ಲ ಯುದ್ಧ ಮಾಡುವದರಲ್ಲಿ ತೊಡಗಿದ್ದಾರೆ, ಯುದ್ಧ ಮಾಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಭಾರತ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಯುದ್ಧ ನಡೆಸಲು ಕುಮ್ಮಕ್ಕು ನೀಡುತ್ತಿದ್ದಾರೆ. ಮತ್ತು ಆ ಮೂಲಕ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಮಾಡಿದ್ದಾರೆ." ಈ ಕರಡು ಆರೋಪಗಳನ್ನು ಈ ತಿಂಗಳ ಆರಂಭದಲ್ಲಿ ಸಲ್ಲಿಸಲಾಗಿದೆ ಮತ್ತು ವಿಶೇಷ ಎನ್ಐಎ ನ್ಯಾಯಾಲಯವು ಶೀಘ್ರದಲ್ಲೇ ಎಲ್ಲಾ ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಲಿದೆ.
ಮು೦ದುವರಿದು , ಕೇಂದ್ರೀಯ ತನಿಖಾ ಸಂಸ್ಥೆ ಗಮನ ಸೆಳೆಯುತ್ತದೆ: , "ಅವರೆಲ್ಲರೂಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿಯಲ್ಲಿ ಮತ್ತು ಅದರಡಿಯ ಪಟ್ಟಿಯ ಪ್ರಕಾರ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯರು ಅಂದರೆ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ) ಮತ್ತು ಅದರ ಘಟಕಗಳು ಮತ್ತು ಅಭಿಮುಖ ಸಂಘಟನೆಗಳು ಅಂದರೆ ಅನುರಾಧಾ ಘಾ೦ದಿ ಸ್ಮಾರಕ ಸಮಿತಿ, ಕಬೀರ್ ಕಲಾ ಮಂಚ್, ಕಿರುಕುಳಕ್ಕೊಳಗಾದ ಖೈದಿಗಳ ಒಗ್ಗಟ್ಟಿನ ಸಮಿತಿ, ರಾಜಕೀಯ ಕೈದಿಗಳ ಬಿಡುಗಡೆ ಸಮಿತಿ, ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆ ಸಮಿತಿ, ಪ್ರಜಾಪ್ರಭುತ್ವ ಹಕ್ಕುಗಳಿಗಾಗಿ ಜನರ ಒಕ್ಕೂಟ, ಪ್ರಜಾಪ್ರಭುತ್ವ ಹಕ್ಕುಗಳ ಸಂಘಟನೆ, ಪ್ರಜಾಪ್ರಭುತ್ವ ವಿದ್ಯಾರ್ಥಿ ಸಂಘ, ವಿಸ್ತರಣ ವಿರೋದಿ ಜನ ವಿಕಾಸ ಆಂದೋಲನ, ಕ್ರಾಂತಿಕಾರಿ ಬರಹಗಾರರ ಸಂಘ. "
ಆರೋಪಿಗಳು "ಜನರನ್ನು ಪ್ರಚೋದಿಸಲು ಮತ್ತು ಹಿಂಸೆಯನ್ನು ಸೃಷ್ಟಿಸಲು ಮತ್ತು ಕಾನೂನಿನಿಂದ ಸ್ಥಾಪಿತವಾದ ಸರ್ಕಾರದ ಕಡೆಗೆ ಅಸಮಾಧಾನವನ್ನು ಹರಡಲು ಮತ್ತು ಮುಂದಿನ ಚಟುವಟಿಕೆಗಳನ್ನು ಮಾಡುವ ಉದ್ದೇಶದಿಂದ ಕಾನೂನುಬಾಹಿರ ಕೃತ್ಯವನ್ನು ಮಾಡಲು, ಪಿತೂರಿ ಮಾಡಲು ಅಥವಾ ಬದ್ಧತೆ ಅಥವಾ ವಕಾಲತ್ತು ಮಾಡಲು, ಉತ್ತೇಜಿಸಲು ಅಥವಾ ಪ್ರಚೋದಿಸಲು ಭಾರತದ ಏಕತೆ, ಸಮಗ್ರತೆ, ಭದ್ರತೆ ಅಥವಾ ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶದಿಂದ ಜನರೆಡೆಯಲ್ಲಿ ಸಾರ್ವಜನಿಕ ತಳಮಳವನ್ನು ಸೃಷ್ಟಿಸುತ್ತಾರೆ. ಪ್ರಜಾಪ್ರಭುತ್ವದ ಚುನಾಯಿತ ಸರ್ಕಾರದಲ್ಲಿ ಸಾಮಾನ್ಯ ನಾಗರಿಕರ ನಂಬಿಕೆಯನ್ನು ಅಲ್ಲಾಡಿಸಲು ಮತ್ತು ಕು೦ಠಿತಗೊಳಿಸಲು, ಜೀವ ಮತ್ತು ಆಸ್ತಿಗಳ ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಆ ಮೂಲಕ ಕಾನೂನಿನಿಂದ ಸ್ಥಾಪಿತವಾದ ಸರ್ಕಾರದ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು, ಪ್ರತ್ಯೇಕತಾವಾದಿ ಮತ್ತು ಬಂಡಾಯದ ಚಿಂತನೆಯನ್ನು ಹರಡಲು ಮತ್ತು ಬಂಡಾಯ ಚಟುವಟಿಕೆಗಳಿಂದ ಭಾರತದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು, ಇವರೆಲ್ಲ ಮು೦ದುವರೆದಿದ್ದಾರೆ” ಎ೦ದು ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ