- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರತಿಯೊಬ್ಬ ಆರೋಪಿಯನ್ನು, ವಿಶೇಷವಾಗಿ ಆತ ತನಿಖೆಗೆ ಸಹಕರಿಸಿದಾಗ, ಒ೦ದು ಕಟ್ಟಾ ರೂಢಿಯ೦ತೆ , ವಾಡಿಕೆಯಂತೆ ಬಂಧಿಸುವ ಅಗತ್ಯವನ್ನು ಬಿಟ್ಟುಬಿಡುವ೦ತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಇದು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಮಹತ್ವದ ತೀರ್ಪು ...
https://www.deccanherald.com/opinion/first-edit/verdict-upholds-personal-liberty-1022589.html
ಬಂಧನವು ಯಾವಾಗಲೂ ಅನಿವಾರ್ಯವಲ್ಲ, ಸುಪ್ರೀಂ ಕೋರ್ಟ್ ಹೇಳುತ್ತದೆ ಕೇವಲ ಬಂಧನಕ್ಕೆ ಕಾನೂನಿನಲ್ಲಿ ಅವಕಾಶ ನೀಡಿದೆ ಎ೦ಬ ಒ೦ದೇ ಕಾರಣದಿ೦ದ ರಾಜ್ಯವು ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಅಧಿಕಾರವನ್ನು ನಿರ್ದಾಕ್ಷಿಣ್ಯವಾಗಿ ಬಳಸಬಹುದು ಎ೦ದು ತಿಳಿದುಕೊಳ್ಳಲಾಗದು. "ವೈಯಕ್ತಿಕ ಸ್ವಾತಂತ್ರ್ಯವು ನಮ್ಮ ಸಾಂವಿಧಾನಿಕ ಆದೇಶದ ಒಂದು ಪ್ರಮುಖ ಅಂಶವಾಗಿದೆ ಎಂಬುದನ್ನು ನಾವು ಗಮನಿಸಬಹುದು.” ತನಿಖೆಯ ಸಮಯದಲ್ಲಿ ಆರೋಪಿಯನ್ನು ಬಂಧಿಸುವ ಅವಶ್ಯಕತೆಯು ಯಾವ ಸ೦ದರ್ಭದಲ್ಲಿ ಉದ್ಭವಿಸಬಹುದು ಎ೦ಬುದನ್ನು ನ್ಯಾಯಾಲಯವು ಚರ್ಚಿಸಿದೆ. ಇವು ‘ಸುಪರ್ದಿನ ತನಿಖೆ ಅಗತ್ಯವಿದ್ದಾಗ, ಅಥವಾ ಘೋರ ಅಪರಾಧವಾಗಿದ್ದಲ್ಲಿ , ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವಲ್ಲಿ, ಅಥವಾ ಆರೋಪಿಗಳು ತಲೆಮರೆಸಿಕೊಳ್ಳಬಹುದಾದಲ್ಲಿ.’ ಬಂಧನವನ್ನು ಮಾಡುವದು ಕಾನೂನುಬದ್ಧವಾಗಿರುವುದರಿಂದ ಮಾತ್ರ ಬಂಧಿಸುವುದನ್ನು ಕಡ್ಡಾಯಗೊಳಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರ ಪೀಠ ಹೇಳಿದೆ. ಬಂಧಿಸುವ ಅಧಿಕಾರದ ಅಸ್ತಿತ್ವ ಮತ್ತು ಅದನ್ನು ಚಲಾಯಿಸುವ ಸಮರ್ಥನೆಯ ನಡುವೆ ಭೇದ ಮಾಡಬೇಕು ಎಂದು ಅದು ಗಮನಿಸಿದೆ. "ಬಂಧನವನ್ನು ವಾಡಿಕೆಯಂತೆ ಮಾಡಿದರೆ, ಅದು ವ್ಯಕ್ತಿಯ ಪ್ರತಿಷ್ಠೆಗೆ ಮತ್ತು ಸ್ವಾಭಿಮಾನಕ್ಕೆ ಎಣಿಸಲಾಗದ ಹಾನಿ ಉಂಟುಮಾಡಬಹುದು. ಒಂದು ವೇಳೆ ತನಿಖಾಧಿಕಾರಿಯು ಆರೋಪಿಗಳು ತಪ್ಪಿಸಿಕೊಳ್ಳುತ್ತಾನೆ ಅಥವಾ ಅಸಹಕಾರ ನೀಡುತ್ತಾನೆ ಎಂದು ನಂಬಲು ಯಾವುದೇ ಕಾರಣವಿಲ್ಲದಿದ್ದರೆ ಮತ್ತು ವಾಸ್ತವವಾಗಿ ತನಿಖೆಯೊಂದಿಗೆ ಸಹಕರಿಸಿದರೆ, ಆರೋಪಿಯನ್ನು ಬಂಧಿಸಲು ಅಧಿಕಾರಿಯ ಮೇಲೆ ಏಕೆ ಒತ್ತಾಯವಿರಬೇಕು ಎಂದು ನಾವು ತಿಳಿಯಲು ವಿಫಲರಾಗುತ್ತೇವೆ. " ಹಿರಿಯ ವಕೀಲ ಪ್ರಮೋದ್ ಕುಮಾರ್ ದುಬೆ ಮತ್ತು ವಕೀಲರಾದ ರವಿ ಶರ್ಮಾ ಮತ್ತು ರಾಹುಲ್ ಶ್ಯಾಮ್ ಭಂಡಾರಿ ಪ್ರತಿನಿಧಿಸಿದ ಉದ್ಯಮಿ ಸಿದ್ಧಾರ್ಥ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಈ ಆದೇಶ ನೀಡಲಾಗಿದೆ. ಅಲಹಾಬಾದ್ ಹೈಕೋರ್ಟ್ ಜುಲೈನಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. 2007 ರಲ್ಲಿ ಉತ್ತರ ಪ್ರದೇಶ ಸರ್ಕಾರವು ಅಂಬೇಡ್ಕರ್ ಸಮಾಜವನ್ನು ಒಳಗೊಂಡಂತೆ ಉದ್ಯಾನವನಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ನಿರ್ಮಿಸಲು ಆರಂಭಿಸಿದ ಯೋಜನೆಗೆ ಸಂಬಂಧಿಸಿದಂತೆ ಮಾಜಿ ಮಂತ್ರಿಗಳು ಮತ್ತು ಉನ್ನತ ಅಧಿಕಾರಿಗಳು ಒಳಗೊಂಡ ಪಿತೂರಿ ಮತ್ತು ಕ್ರಿಮಿನಲ್ ಉಲ್ಲಂಘನೆಯ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪರಿವರ್ತನ್ ಅಸ್ಥಾಲ್, ಕಾಶಿರಾಮ್ ಸ್ಮಾರಕ್ ಅಸ್ಥಲ್ ಗೌತಂಬುಧ್ ನಗರ ಉಪವಾನ್ ಎಕೋ ಪಾರ್ಕ್ ಮತ್ತು ನೋಯ್ಡಾ ಅಂಬೇಡ್ಕರ್ ಪಾರ್ಕ್ ಈ ಯೋಜನೆಗಳಲ್ಲಿ ಸಾರ್ವಜನಿಕ ಖಜಾನೆಗೆ ₹ 14,000 ಕೋಟಿ ನಷ್ಟವಾಗಿದೆ ಎಂದು ಎಫ್ಐಆರ್ ಆರೋಪಿಸಿದೆ. ತನ್ನ ಕಕ್ಷಿದಾರರು ಏಳು ವರ್ಷದ ತನಿಖೆಗೆ ಭಾಗವಹಿಸಿದ್ದಾರೆ ಎಂದು ದುಬೆ ವಾದಿಸಿದರು. ಆತನ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ. ಆತ ತಲೆಮರೆಸಿಕೊಳ್ಳುವ ಅಥವಾ ಸಾಕ್ಷ್ಯವನ್ನು ತಿರುಚುವ ಯಾವುದೇ ಭೀತಿಯಿಲ್ಲ. ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 170 ಅನ್ನು ಪೊಲೀಸರು ಮತ್ತು ವಿಚಾರಣಾ ನ್ಯಾಯಾಲಯಗಳು ಆರೋಪಣಾ ಪಟ್ಟಿಯನ್ನು ಸಲ್ಲಿಸುವ ಸಮಯದಲ್ಲಿ ಆರೋಪಿಯನ್ನು ಬಂಧಿಸುವುದು ಕಡ್ಡಾಯ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದ್ದಾಗಿ ದುಬೆ ಹೇಳಿದರು. ಸೆಕ್ಷನ್ 170 ರಲ್ಲಿ ‘ಕಸ್ಟಡಿ’ ಎಂಬ ಪದವನ್ನು 'ಬಂಧನ' ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ವಾದಿಸಿದರು. ಹಿರಿಯ ವಕೀಲರೊಂದಿಗೆ ಒಪ್ಪಿಕೊಂಡ ಸುಪ್ರೀಂ ಕೋರ್ಟ್, ಸೆಕ್ಷನ್ 170 ರಲ್ಲಿ ‘ಕಸ್ಟಡಿ’ ಎಂಬ ಪದವು ಪೋಲೀಸ್ ಅಥವಾ ನ್ಯಾಯಾಂಗ ಬಂಧನವನ್ನು ಉದ್ದೇಶಿಸುವದಿಲ್ಲ ಆದರೆ ಆರೋಪಪಟ್ಟಿ ಸಲ್ಲಿಸುವಾಗ ನ್ಯಾಯಾಲಯದ ಮುಂದೆ ತನಿಖಾಧಿಕಾರಿಯಿಂದ ಆರೋಪಿಗಳನ್ನು ಹಾಜರುಪಡಿಸುವುದನ್ನು ಸೂಚಿಸುತ್ತದೆ ". "ಸಿಆರ್‌ಪಿಸಿಯ ಸೆಕ್ಷನ್ 170 ರ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು ಚಾರ್ಜ್ ಶೀಟ್ ಅನ್ನು ದಾಖಲಿಸಲು ಪೂರ್ವಭಾವಿ ಔಪಚಾರಿಕವಾಗಿ ವಿಚಾರಣಾ ನ್ಯಾಯಾಲಯಗಳು ಆರೋಪಿಯನ್ನು ಬಂಧಿಸಲು ಒತ್ತಾಯಿಸುತ್ತಿದೆ ಎಂದು ಹೇಳಲಾಗಿದೆ. ಅಂತಹ ಕ್ರಮವನ್ನು ತಪ್ಪಾಗಿ ಮತ್ತು ಸಿಆರ್‌ಪಿಸಿಯ ಸೆಕ್ಷನ್ 170 ರ ಉದ್ದೇಶಕ್ಕೆ ವಿರುದ್ಧವಾಗಿ ಪರಿಗಣಿಸಲಾಗುತ್ತಿದೆ,” ಎಂದು ನ್ಯಾಯಾಲಯ ಹೇಳಿದೆ. |
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ