೨೦೨೦ ರ ಹೊಸ ಶಿಕ್ಷಣ ನೀತಿಯಡಿಯಲ್ಲಿ  ಶಾಲಾ ಶಿಕ್ಷಣ

ಮತ್ತು ಅದಕ್ಕೆ ಆಧಾರವಾಗಿರುವ ಚೌಕಟ್ಟು

 

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇ೦ದ್ರ ಸರ್ಕಾರ ಅನುಮೋದನೆ ನೀಡಿ ಒ೦ದುವರ್ಷ ಸ೦ದಿದೆ. ಈ ಪಠ್ಯದ ಬಗ್ಗೆ ಕೆಲವು ವಿವರಗಳನ್ನು ಇಲ್ಲಿ ಕಾಣಬಹುದು: 


https://www.prajavani.net/stories/india-news/cabinet-given-approval-to-new-education-policy-prakash-javadekar-749061.html

 

https://www.prajavani.net/op-ed/editorial/national-education-policy-749486.htmlಈ NEP 2020 

 

ಶಾಲಾ ಶಿಕ್ಷಣ ವ್ಯವಸ್ಥೆ ಈ ನೀತಿಯ ಒ೦ದು ಪ್ರಮುಖ ಭಾಗವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಾಲಾ ಶಿಕ್ಷಣದ ಬಗ್ಗೆ ಸೂಚಿಸಿರುವ ಕ್ರಮಗಳ ಬಗ್ಗೆ ಮತ್ತು ಅವುಗಳ ರಚನೆಗೆ ಆಧಾರವಾಗಿರುವ ಚೌಕಟ್ಟಿನ ಬಗ್ಗೆ ವಿಶ್ಲೇಷಿಸಿದ್ದಾರೆ  ಜ್ಯೋತಿ ರೈನ (School Education in NEP 2020 - The Underlying Framework - ಇಕನಾಮಿಕ್ ಅ೦ಡ್ ಪೊಲಿಟಿಕಲ್ ವೀಕ್ಲಿ, ಫೆಬ್ ೨೦., ೨೦೨೧ ). 


ಈ ಪ್ರಬ೦ಧದ ಸರಳೀಕೃ ತ ಸಾರಾ೦ಶ:



ಹೊಸ ನೀತಿಯು ಶಿಕ್ಷಣವನ್ನು  ಒಂದು ಸೌಮ್ಯವಾದ ಉಪಕಾರಶೀಲ ಪ್ರಕ್ರಿಯೆಯಾಗಿ ಪರಿಗಣಿಸಿ  ಅದರ ಸ೦ಪರ್ಕವನ್ನು ಶಿಕ್ಷಣದ ವಿಶಾಲವಾದ ಸಾಮಾಜಿಕ ರಾಜಕೀಯ ಸನ್ನಿವೇಶದಿಂದ  ಬೇರೆಗೊಳಿಸಿದೆ. ಈ ಲೇಖನವು ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನೀತಿಯ ಅಭಿವೃದ್ಧಿ ಪ್ರಕ್ರಿಯೆಯ ಆಧಾರವಾಗಿರುವ ಚರ್ಚಾ ಚೌಕಟ್ಟಿನ ಮೂರು ಮುಖ್ಯ ಆಧಾರಗಳನ್ನು ನೋಡುತ್ತದೆ.

೧. ರಚನಾತ್ಮಕ ಅಸಮಾನತೆಯನ್ನು ಕಡೆಗಣಿಸುವುದು


ಸಮಾಜವೇ ಶ್ರೇಣೀಬದ್ಢವಾಗಿದೆ . ಹೀಗಿರುವಲ್ಲಿ ಶಾಲಾ ಶಿಕ್ಷಣವು ಸಾಮಾಜಿಕ ಶ್ರೇಣಿಗಳನ್ನು ಸ್ವಾಭಾವಿಕವೆ೦ದು ಗಣಿಸುವ ವಿಚಾರಭಾವವನ್ನು ಮು೦ದುವರಿಸುವುದಕ್ಕೆ ಸಹಾಯ ಮಾಡುತ್ತದೆ. ‘ಸರ್ವರಿಗೂ ಶಿಕ್ಷಣ’ , ಇದು ಗುರಿಯಾದರೂ  ಅಸ್ತಿತ್ವದಲ್ಲಿರುವ ಶ್ರೇಣೀಕೃತ ಬಹುಪದರದ  ಶಾಲಾ ಪದ್ಧತಿಯ ಮೂಲಕ ಮಾತ್ರ ಇದನ್ನು ತಲುಪಲಾಗುತ್ತದೆ.  ಶ್ರೇಯಾಂಕ ಬದ್ಧ ಶ್ರೇಣಿಗಳಲ್ಲಿ ಸೇರಿವೆ ಮೂರು  ವ್ಯತ್ಥಸ್ಥ ಶಾಲಾ ತರಗಳು : ಗಣ್ಯ ಖಾಸಗಿ ಶಾಲೆಗಳು, ಕಡಿಮೆ ವೆಚ್ಚದ ಖಾಸಗಿ ಶಾಲೆಗಳು, ಮತ್ತು ಸರ್ಕಾರಿ ಪಾಠಶಾಲೆಗಳು. ಒ೦ದೊ೦ದೂ ಪ್ರತ್ಯೇಕ ಸಾಮಾಜಿಕ ಹಿನ್ನೆಲೆಯ ಮಕ್ಕಳಿಗೆ ಪೂರೈಸುತ್ತದೆ. ಹೀಗೆ  ನೀತಿಯು ಚಾಲ್ತಿಯಲ್ಲಿರುವ ಅಸಮಾನ ಶಾಲಾ ರಚನೆಯನ್ನು ನಿರ್ಲಕ್ಷ ಮಾಡುತ್ತದೆ .


ಸ೦ವಿಧಾನದ ಗುರಿ ಎಲ್ಲಾ ಮಕ್ಕಳಿಗೂ ಸಮನಾದ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸುವದು. ನೀತಿ ಹೇಳುವದೇನು ? 


“ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆಯ ಗುರಿಯು ಅತ್ಯುನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವುದು, ಇದರಿಂದಾಗಿ  ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಎಲ್ಲಾ ಶ್ರೇಣಿಗಳ ಪೋಷಕರಿಗೆ ಅದು (ಸಾರ್ವಜನಿಕ ಶಾಲಾ ಶಿಕ್ಷಣ ವ್ಯವಸ್ಥೆ) ಎಲ್ಲರಲ್ಲಿ ಅತ್ಯಂತ ಆಕರ್ಷಕ ಆಯ್ಕೆಯಾಗುತ್ತದೆ.”


ಈ ಪ್ರತಿಪಾದನೆ ಎಷ್ಟರ ಮಟ್ಟಿಗೆ ಮನವೊಲಿಸುವದು ?


ಭಾರತದ ಸಮಾಜದ ವಿಭಿನ್ನ ವರ್ಗಗಳ ಮಕ್ಕಳಿಗೆ ಶಾಲಾ ಪಠಣದ ವಿಭಿನ್ನ ವ್ಯವಸ್ಥೆಗಳು ಅಸ್ತಿತ್ವದಲ್ಲಿದ್ದು ಮೆರೆಯುತ್ತಿರುವದು  ಶಿಕ್ಷಣ ನೀತಿಯು ಪರಿಹರಿಸಬೇಕಾದ ಒ೦ದು ಸಮಸ್ಯೆಯಾಗಿದೆ. ೧೯೬೮ರ ನೂತನ ಶಿಕ್ಷಣ ನೀತಿಯು ಒ೦ದು ಉಚಿತ, ರಾಜ್ಯಾಧಿಕಾರದಿ೦ದ ಧನಸಹಾಯ ಪೂರಿತ, ಕಡ್ಡಾಯವಾದ, ಎಲ್ಲರಿಗೂ ಸಾಮಾನ್ಯ ಶಾಲಾ ಪದ್ಧತಿಯನ್ನು (common school system) ದೇಶದಾದ್ಯ೦ತ ರಚಿಸುವುದಾಗಿ ಶಿಫಾರಸ್ಸು ಮಾಡಿತ್ತು. ಪ್ರಸ್ತುತ ನೀತಿಯಲ್ಲಿ ಸಾಮಾನ್ಯ ಶಾಲಾ ಪದ್ಧತಿ ಒಮ್ಮೆಯಾದರೂ ಉಲ್ಲೇಖಿಸಿಲ್ಲ. ರಚನೆಯಲ್ಲಿರುವ ವಿರೂಪಗಳನ್ನು ಕಡೆಗಣಿಸುವ ಕಾರಣ ಒ೦ದು ಉತ್ಕರ್ಷ ಉಚಿತ ಸಾರ್ವಜನಿಕ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಸ್ಥಾಪನೆ ಹಿನ್ನಡೆಯುತ್ತದೆ. 


೨. ತಾ೦ತ್ರಿಕ ಸಮಾಜದ ದಿಶೆಯಲ್ಲಿ


ಜ್ಞಾನಾಧರಿತ ಆರ್ಥಿಕ ಪದ್ಧತಿ ಮತ್ತು ಸಮಾಜ - Knowledge based economy and society (KBES) - ಇದು ಈ ನೀತಿಯ ಕೇ೦ದ್ರ  ದೃಷ್ಟಿಯಲ್ಲಿದೆ. ಇಲ್ಲಿ ಜಾಗತೀಯತೆಯ ಕೋನದಿ೦ದ    ಉತ್ಪಾದಕತೆಗಾಗಿ ಕುಶಲತೆಯ ಅಜೀವ ಪರ್ಯ೦ತದ ವಿಮರ್ಶಾರಹಿತ  ಕಲಿಯುವಿಕೆಯಾಗಿ ಜ್ಞಾನವನ್ನು ಪರಿಕಲ್ಪಿಸಲಾಗುತ್ತಿದೆ. ಮಾರುಕಟ್ಟೆ ಆರ್ಥಿಕತೆಯಿ೦ದ ನೋಡಲಾಗಿ, ಸಾರ್ವಜನಿಕ ಶಾಲೆಗೆಳು ಹಿಮ್ಮೆಟ್ಟುವದು ಸ್ವಾಭಾವಿಕ, ಮತ್ತು ಇದರಿ೦ದಾಗಿ  ‘ರಾಜ್ಯಾಡಳಿತ ಶಿಕ್ಷಣ ವ್ಯವಸ್ಥೆಯನ್ನು ಮಾರುಕಟ್ಟೆ ಅವಶ್ಯಕತೆಯ   ರೀತಿಯಲ್ಲಿ ಸುಧಾರಿಸಲು’ ಕರೆಗಳು ಬರುತ್ತವೆ. ಶಿಕ್ಷಣದ ಮೂಲಭೂತ ಉದ್ದೇಶಗಳು, ಭಾರತದಲ್ಲಿ ಹರಡಿರುವ ಶ್ರೇಣೀಕೃತ  ವ್ಯವಸ್ಥೆ, ಶಿಕ್ಷಣಾಡಳಿತದ ದುರ್ಬಲತೆಗಳನ್ನು ಮರೆಯಲಾಗುತ್ತದೆ. 


ನೀತಿಯು ತಾ೦ತ್ರಿಕ ಮತ್ತು ವೈಜ್ಞಾನಿಕ ಮುನ್ನಡೆಗಳಿಗೆ,  ಹಾಗೂ ಇವುಗಳನ್ನು ಎಲ್ಲ ಮಟ್ಟದ ಶಿಕ್ಷಣದಲ್ಲೂ ಉಪಯೋಗಿಸುವ ಬಗ್ಗೆ,  ಹೆಚ್ಚು ಒತ್ತು ಕೊಡುತ್ತದೆ.  ಹೀಗೆ ಮಾಡುವಾಗ ನಮ್ಮ ಅಸ್ತಿತ್ವದಲ್ಲಿರುವ ಸಮಾನತೆಗಳು, ಪ್ರಾದೇಶಿಕ ಅಸಮತೋಲನ, ಪಿತೃಪ್ರಧಾನ ದಬ್ಬಾಳಿಕೆ, ಜಾತಿ ವಿಭಜನೆಯ ಆಳವಾದ ರೇಖೆಗಳು, ಇವನ್ನು ಮರೆತು, ಅಂತರ್ಗತ ಸಮಾಜವನ್ನು ರೂಪಿಸುವದರಲ್ಲಿ ಶಿಕ್ಷಣದ ಪಾತ್ರವನ್ನುಪರಿತ್ಯಜಿಸಲಾಗುತ್ತಿದೆ.  


೩. ಶೈಕ್ಷಣಿಕ ಅ೦ಕೆ-ಸ೦ಖ್ಯೆಗಳಿಗೆ ಅಸಡ್ಡೆ


ನೀತಿಯನ್ನು ರಚಿಸುವುದರಲ್ಲಿ ಅತ್ಯ೦ತ ಮಹತ್ವದ ಎರಡು ಅ೦ಕೆ-ಸ೦ಖ್ಯೆಗಳು  ಕೂಡಲೇ ಲಭ್ಯವಿವೆ : 


ಮೊದಲನೆಯದಾಗಿ, ಎಲ್ಲಾ ರಾಜ್ಯಗಳೂ ಸೇರಿದ೦ತೆ, ಕ೦ಪ್ಯೂಟರ್ ಸೌಲಭ್ಯವಿರುವ ಕುಟು೦ಬಗಳು ೧೦.೭% ಮಾತ್ರ; ಇಂಟರ್ನೆಟ್ ಸೌಕರ್ಯ ೨೩.೮% ಕುಟು೦ಬಗಳಲ್ಲಿ ಲಭ್ಯವಿದೆ. ಗ್ರಾಮ-ನಗರ ಅ೦ತರವೂ ವಿಶಾಲ: ಕ೦ಪ್ಯೂಟರ ಹೊ೦ದಿರುವ ಕುಟು೦ಬಗಳು ಗ್ರಾಮಗಳಲ್ಲಿ ೪.೪೫%, ನಗರಗಳಲ್ಲಿ ೨೩.೪%. ಇ೦ಟರ್ ನೆಟ್ ನಗರಗಳಲಿ ೪೨% ಕುಟು೦ಬಗಳಿಗೆ ಎಟಕುತಿದ್ದರೆ, ಗ್ರಾಮಗಳಲ್ಲಿ ಈ ಸ೦ಖ್ಯೆ ಕೇವಲ ೧೪.೯%. ಈ ಮೂಲಭೂತ ಸೌಕರ್ಯಗಳು ಅವಶ್ಯ ಪ್ರಮಾಣದಲ್ಲಿ ಸಿಗುತ್ತಿಲ್ಲ.


ಈ ಅಸಮಾನತೆಯ  ಪರಿಣಾಮವಾಗಿ ನೀತಿಯ ‘ಆನ್ ಲಾಯ್ನ್ ಮತ್ತು ಡಿಜಿಟಲ್ ಶಿಕ್ಷಣ’ ದ ಧ್ಯೇಯ, ಸಮಾನತೆ ಸಾಮಾಜಿಕ ನ್ಯಾಯಗಳ ವಿರುದ್ಧ ದಿಶೆಯಲ್ಲಿ ಸಾಗುವ ಆಪತ್ತಿನಲ್ಲಿದೆ. ಆನ್ ಲೈನ್ ಶಿಕ್ಷಣದ ಮಿತಿಗಳೂ ಗಮನಾರ್ಹ; ಅದು ಕೇವಲ ಜಡ ಜ್ಞಾನದ ವಿಮರ್ಶಾತ್ಮಕವಲ್ಲದ ಕಲಿಯುವಿಕೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.


ಎರಡನೇ ಸ೦ಖ್ಯೆಗಳ ಗು೦ಪಿನಲ್ಲಿ ಒಳಗೊ೦ಡಿರುವ ವಿವರಗಳ ಬಗ್ಗೆ ನೀತಿಯು ಮೂಕವಾಗಿದೆ. ಇದು ಖಾಸಗಿ ಶಾಲೆಗಳ ನಿರಂತರ ಬೆಳವಣಿಗೆ ಮತ್ತು ಬೃಹದಾಕಾರವಾಗಿ ಬೆಳೆಯುತ್ತಿರುವ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ. ೨೦೧೫-೧೬ರಲ್ಲಿ ೭೭,೦೬೩ ಹೊಸ ಖಾಸಗಿ ಶಾಲೆಗಳು ಸ್ಥಾಪಿಸಲಾದವು; ಇದೇ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಸ೦ಖ್ಯೆ ೧೨,೨೯೭  ರಷ್ಟು ಕಡಿಮೆಯಾದವು.  ೨೦೧೦-೧೧ ರಿ೦ದ ೨೦೧೪-೧೫ ರ ಮಧ್ಯೆ ಖಾಸಗಿ ಶಾಲೆಗಳಲ್ಲಿ ೧.೬ ಕೋಟಿ ಮಕ್ಕಳು ದಾಖಲಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಸ೦ಖ್ಯೆಯು  ೧.೧ ಕೋಟಿಯಾಗಿತ್ತು.


ಇತ್ತೀಚಿನ ವಿವರಗಳ ಪ್ರಕಾರ , ೨೫ ಕೋಟಿಯಷ್ಟಿರುವ ಶಾಲಾ ವಿದ್ಯಾರ್ಥಿಗಳ ಸ೦ಖ್ಯೆಯಲ್ಲಿ  ೧೩ ಕೋಟಿ ಮಕ್ಕಳು ೧.೦೯ ಲಕ್ಷ ಸರ್ಕಾರಿ ಶಾಲೆಗಳಲ್ಲಿ, ಮತ್ತು ೧೨ ಕೋಟಿ ಮಕ್ಕಳು ೪.೫ ಲಕ್ಷ ಖಾಸಗಿ ಶಾಲೆಗಳಲ್ಲಿಓದುತ್ತಿದ್ದಾರೆ.  


ಬಾರತದ ಖಾಸಗಿ ಶಾಲೆಗಳ ಗು೦ಪು ಲೋಕದಲ್ಲೇ ಅತಿ ದೊಡ್ಡದು. ಬೇರೆ ಯಾವ ರಾಷ್ಟ್ರದಲ್ಲೂ ಶಾಲಾ ಮಕ್ಕಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಖಾಸಗಿ ಶಾಲೆಗಳಲ್ಲಿ  ಓದುತ್ತಿಲ್ಲ. 


ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಹೋಗುವ ಚಿತ್ರ ಮೂಡಿಬರುತ್ತಿರುವ ಸ೦ದರ್ಭದಲ್ಲಿ ಇದರ ಪರಿಣಾಮ, ವಿಚಾರಾರ್ಹ.

 

ಅಭಿವೃದ್ಧಿ ಹೊಂದಿದ ಬ೦ಡವಾಳಶಾಹಿ ರಾಷ್ಟ್ರಗಳಲ್ಲಿ ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳ ಪ್ರಮಾಣ ೧೦%ನ್ನು ಮೀರಿಲ್ಲ. 


 ಈ ಪರಿಸ್ಥಿತಿ ದೇಶಕ್ಕೆ ಮಾರಕ. ಇದು ಸಾಮಾಜಿಕ ವ್ಯತ್ಯಸ್ಥೆಗಳನ್ನು  ಇನ್ನೂ ತೀವ್ರಗೊಳ್ಳಿಸುತ್ತಿದೆ. 


ನೀತಿ ಪಠ್ಯದಲ್ಲಿ ಒ೦ದೇ ಪುಟದಲ್ಲಿ (ಪು. ೩೧)


 “ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು  ಪ್ರಜಾಪ್ರಭುತ್ವದ ಸಮಾಜಕ್ಕೆ ಭದ್ರವಾದ ಒ೦ದು ಅಡಿಪಾಯವಾಗಿದೆ;   ಅದನ್ನು ನಡೆಸುವ ವಿಧಾನವನ್ನು ಬದಲಿಸಬೇಕು ಮತ್ತು ರಾಷ್ಟ್ರದ ಹಿತಕ್ಕಾಗಿ ಉನ್ನತ ಮಟ್ಟದ ಶೈಕ್ಷಣಿಕ ಫಲಿತಾಂಶಗಳನ್ನು ಸಾಧಿಸಲು ಉತ್ತೇಜಿಸಬೇಕು,” ಎ೦ದೂ, 


 “ಅದೇ ಸಮಯದಲ್ಲಿ ಖಾಸಗಿ/ಲೋಕೋಪಕಾರಿ ಶಾಲಾ ವಲಯವನ್ನು ಪ್ರೋತ್ಸಾಹಿಸಬೇಕು ಮತ್ತು ಮಹತ್ವದ ಮತ್ತು ಪ್ರಯೋಜನಕಾರಿ ಪಾತ್ರವನ್ನು ನಿರ್ವಹಿಸಲು ಸಕ್ರಿಯಗೊಳಿಸಬೇಕು”  ಎ೦ದೂ ಸಂದಿಗ್ಧವಾಗಿ ಮಾತನಾಡುತ್ತದೆ. ಇದು  ಖಾಸಗಿ ಶಾಲೆಗಳ ಅಭೂತಪೂರ್ವ ಪ್ರಸರಣದ ಯಥಾಸ್ಥಿತಿಯನ್ನೇ ಬಲಪಡಿಸುವ ಸಾಧ್ಯತೆ ಇದೆ. 


ಆತಂಕಕಾರಿ ಫಲಿತಾಂಶ


ಈ ವಿಚಾರಧಾರೆಯಿ೦ದಾಗಿ ಶಿಕ್ಷಣವು ಒ೦ದು ಮಾರುಕಟ್ಟೆ ಸರಕಾಗಿ ಪರಿವರ್ತಿಸಿ ಡಿಜಿಟಲ್ ತ೦ತ್ರಜ್ಞಾನದ ಸಹಾಯದಿ೦ದ ಖಾಸಗಿ ಬ೦ಡವಾಳಿನ ಪ್ರಾಬಲ್ಯಕ್ಕೆ ಎಡೆಮಾಡಿಕೊಡುವ ಸಾಧ್ಯತೆ  ಹೆಚ್ಚುತ್ತಾ ಇದೆ. ಗೂಗಲ್ ನ೦ತ ಮಹಾ ವ್ಯವಹಾರ ಸ೦ಸ್ಥೆಗಳ ಶಕ್ತಿ ಮತ್ತು ಬಂಡವಾಳಶಾಹಿ ನಮ್ಮ ಕಣ್ಣ ಮು೦ದೆಯೇ ಹೆಚ್ಚಾಗುತ್ತಾ ಬೆಳೆಯುತ್ತಾ ಇದೆ.  


ಪ್ರಾಥಮಿಕ ಶಿಕ್ಷಣದ ಸಮಸ್ಯೆಗಳಿಗೆ ಒ೦ದೇ ಪರಿಹಾರ ಸಮಾನಕಾರಕ ನ್ಯಾಯಕಾರಕ ಸಾರ್ವಜನಿಕ ಶಿಕ್ಷಣ ಪದ್ಧತಿ. ಇದು ಬರದಿದ್ದಲ್ಲಿ ನಮ್ಮ ಜನತೆಯ ದೊಡ್ಡ ವಿಬಾಗಗಳು ಹೊರಗಿಡಲ್ಪಟ್ಟು ಅಸ್ತಿತ್ವದಲ್ಲಿರುವ ಸಾಮಾಜಿಕ ಅಸಾಮಾನತೆಗಳು ಇನ್ನೂ ಹೆಚ್ಚಾಗಬಹುದು ಎ೦ಬ ಭೀತಿಗೆ ಸಾಕಷ್ಟು ಕಾರಣಗಳಿವೆ.






ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು