ನ್ಯೂಸ್ 18 ಕನ್ನಡ:  ಸಮಾಚಾರದಲ್ಲಿ ದ್ವೇಷದ ಮಾತನ್ನು  ಹೋರಾಡುವುದು ನಿರ್ಣಾಯಕ 


ನೆಟ್‌ವರ್ಕ್ 18 ಕನ್ನಡ, ಸುವರ್ಣ ನ್ಯೂಸ್, ಟೈಮ್ಸ್ ನೌ ಟೆಲಿವಿಶನ್  ಚಾನೆಲ್ ಗಳನ್ನು ತಬ್ಲಿಘಿ ಜಮಾತ್ ವಿರುದ್ಧ ದ್ವೇಷದ ಮಾತನ್ನು ಪ್ರಸಾರ ಮಾಡಿದ್ದಕ್ಕಾಗಿ ಸುದ್ದಿ ಪ್ರಸಾರ ಮಾನದಂಡಗಳ ಪ್ರಾಧಿಕಾರವು  (NBSA)  ಖ೦ಡಿಸಿದೆ. . 

 

CAMPAIGN AGAINST HATE SPEECH ದ್ವೇಷಪೂರಿತ ಮಾತಿನ ವಿರುಧ್ಧ ಕಾರ್ಯಾಚರಣೆ.  ೨೯ ಜೂನ್ ೨೦೨೧,

News 18 Kannada had to air an apology after it was found to have aired hate speech targeting Tablighi Jamaat. NBSA has rapped Times Now and Suvarna News too.

 

23 ಜೂನ್ ರಂದು, ನೆಟ್  ವರ್ಕ್ 18 ಮಾಧ್ಯಮ ವಾಣಿಜ್ಯ ಸಮೂಹದ ಒಂದು ಭಾಗವಾಗಿರುವ News18 ಕನ್ನಡ, ಏಪ್ರಿಲ್ 2020 ರಲ್ಲಿ ಪ್ರಸಾರ ಮಾಡಲಾಗಿದ್ದ  ನವದೆಹಲಿಯ ನಿಜಾಮುದ್ದೀನ್ ಮರ್ಕಝ್ ನಲ್ಲಿರುವ ತಬ್ಲಿಘಿ ಜಮಾತ್ ಕೋವಿಡ್  ಗು೦ಪಿನಬಗ್ಗೆ ದ್ವೇಷದ ಮಾತುಗಳನ್ನಾಡಿದ  ವರದಿಯ ಒ೦ದು ಭಾಗದ ಬಗ್ಗೆ  ಕ್ಷಮೆ ಕೇಳಿತು.  ಕೋವಿಡ್ -19 ಸಾಂಕ್ರಾಮಿಕ ರೋಗದ ಕೋಮುಭಾವಕಳ೦ಕಿತ  ಪ್ರಸಾರಕ್ಕಾಗಿ ದೇಶದ ಯಾವುದೇ ಮಾಧ್ಯಮದಿಂದ ಇದು ಮೊದಲ ಕ್ಷಮೆಯಾಚನೆಯಾಗಿದೆ.

 

ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (NBSA), ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ​​(NBA) ಸ್ಥಾಪಿಸಿದ ಸ್ವತಂತ್ರ, ತೀರ್ಪು ನೀಡುವ ಸಂಸ್ಥೆ, 16 ಜೂನ್ 2021 ರಂದು, ಈ ಚಾನಲ್‌ಗೆ ಕ್ಷಮೆಯಾಚಿಸಲು ಮತ್ತು NBA ಗೆ ಒಂದು ಲಕ್ಷ ರೂ. ದ೦ಡವನ್ನು ಕಟ್ಟಲು ಆದೇಶ ಮಾಡಿತ್ತು. ಅದೇ ದಿನಾಂಕದಂದು,   ಏಶಿಯಾನೆಟ್ ನೆಟ್ ವರ್ಕಿನ  ಒಂದು ಭಾಗವಾದ ಸುವರ್ಣ ನ್ಯೂಸ್ ಮತ್ತು ಟೈಮ್ಸ್ ಗು೦ಪಿನ ಒಂದು ಭಾಗವಾದ  ಟೈಮ್ಸ್ ನೌ, ಈ ಚಾನೆಲ್ ಗಳಿಗೆ ತಬ್ಲಿಘಿ ಜಮಾತ್ ಕ್ಲಸ್ಟರ್‌ಗೆ ಸಂಬಂಧಿಸಿದ ದ್ವೇಷಪೂರಿತ ವರದಿಗಾಗಿ ಇತರ ಎರಡು ಆದೇಶಗಳನ್ನು NBSA ಹೊರಡಿಸಿತು. ಇವರಲ್ಲಿ ಮೊದಲನೆಯದಕ್ಕೆ ರೂ ೫೦,೦೦೦ಯ ದ೦ಡ ಹಾಕಿದ್ದರೆ ಎರಡನೆಯದರ ಮೇಲೆ  ವಾಗ್ದ೦ಡನೆಯ ಜುಲ್ಮಾನೆಯನ್ನು ಹೊರಡಿಸಿತು. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು