ಆದಿವಾಸಿಯತ್
ಆದಿವಾಸಿ ಅಸ್ಮಿತೆಯ ಸದ್ದಿಲ್ಲದ ಅಳಿಸುವಿಕೆ
ಅಂಶುಲ್ ತ್ರಿವೇದಿ
ದಿ ಹಿಂದೂ, ಆಗಸ್ಟ್ 11, 2021
'ಆದಿವಾಸಿಯತ್’ ಅಥವಾ ವೈದಿಕೇತರ ಸಾಂಸ್ಕೃತಿಕ ಬದುಕುಳಿಯುವಿಕೆಯ ಪ್ರವಚನವು ಹಿಂದುತ್ವದ ನಿರೂಪಣೆಯನ್ನು ಅವ್ಯವಸ್ಥೆಗೊಳಿಸುತ್ತದೆ.
ಮಧ್ಯಪ್ರದೇಶದ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನ, ಪ್ರತಿಪಕ್ಷದ ನಾಯಕರು ವಿಶ್ವದ ಸ್ಥಳಜನ್ಯ ಜನರ ಅಂತಾರಾಷ್ಟ್ರೀಯ ದಿನ ಆಗಸ್ಟ್ 9 ನ್ನು ಪುನಃಸ್ಥಾಪಿಸಿ ರಾಜ್ಯ ರಜೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಮೊದಲ ನೋಟದಲ್ಲಿ, ಬೇಡಿಕೆ ಸಾಮಾನ್ಯವೆಂದು ತೋರುತ್ತದೆ. ಜಾರ್ಖಂಡ್ ಮುಕ್ತಿ ಮೋರ್ಚಾ ಆಡಳಿತವಿರುವ ಜಾರ್ಖಂಡ್ ಮತ್ತು ಕಾಂಗ್ರೆಸ್ ಆಡಳಿತವಿರುವ ಛತ್ತೀಸಗಡ, ಇವೆರಡೂ ಗಣನೀಯ ಆದಿವಾಸಿ ಜನಸಂಖ್ಯೆಯನ್ನು ಹೊಂದಿದ್ದು, ಆಗಸ್ಟ್ 9 ರOದು ಸಾರ್ವತ್ರಿಕ ರಜೆ ಘೋಷಿಸಿದ್ದವು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಇದನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿತ್ತು. ಭಾರತೀಯ ಜನತಾ ಪಕ್ಷ (ಬಿಜೆಪಿ) ಅಧಿಕಾರಕ್ಕೆ ಬಂದಾಗ, ರಜಾದಿನವನ್ನು ಐಚ್ಛಿಕವಾಗಿ ಮಾಡಿತು. ಜನಸಂಖ್ಯೆಯ ಐದನೇ ಒಂದು ಭಾಗವು ಆದಿವಾಸಿಗಳನ್ನು ಒಳಗೊಂಡಿದ್ದರೂ ಆಚರಣೆಗೆ ಯಾವುದೇ ಹಣವನ್ನು ಹಂಚಲಿಲ್ಲ. ಈ ಪಟ್ಟು ಹಿಡಿಯುವಿಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸೈದ್ಧಾಂತಿಕ ಅನಿವಾರ್ಯತೆಯಲ್ಲಿ , ಆದಿವಾಸಿ ಅಸ್ಮಿತೆಯ ಬಗೆಗಿನ ಅದರ ದೃಷ್ಟಿಕೋನ ಮತ್ತು ಆದಿವಾಸಿ (ಸ್ಥಳಜನ್ಯತೆಯ) ಪರಿಕಲ್ಪನೆಯ ನಿರೂಪಣೆಗೆ ಅದರ ಮೂಲಭೂತ ವಿರೋಧಗಳಲ್ಲಿ ಬೇರೂರಿದೆ .
ಹಿಂದೂಗಳ ಕಲ್ಪಿತ ಸಮುದಾಯವು
ಆರ್‌ಎಸ್‌ಎಸ್‌ನ ಘೋಷಿತ ಉದ್ದೇಶವು ಹಿಂದೂ ರಾಷ್ಟ್ರದ ಸ್ಥಾಪನೆಯಾಗಿದೆ. ಈ ಕಲ್ಪಿತ ಸಮುದಾಯದಲ್ಲಿ ಬಹುಸಂಖ್ಯಾತರು ಅದರ ಯಾಜಮಾನಿಕ ಜನಾ೦ಗ ಆಗಿರುತ್ತಾರೆ. ಆದರೆ ರಾಷ್ಟ್ರಗಳು ಆದಿಯಲ್ಲಿಆಗಲೇ ಸ್ಥಾಪಿತ ಘಟಕಗಳಲ್ಲ; ಅವುಗಳನ್ನು ನಿರ್ಮಿಸಬೇಕು, ಪೋಷಿಸಬೇಕು ಮತ್ತು ಉಳಿಸಿಕೊಳ್ಳಬೇಕು. ಪ್ರತಿಯೊಂದು ರಾಷ್ಟ್ರವು ಪಾಲುಗೊ೦ಡ ಐತಿಹಾಸಿಕ ಅನುಭವ, ಪುರಾಣಗಳು, ನೆನಪುಗಳು ಮತ್ತು ಜಾನಪದಗಳ ಮೇಲೆ ನಿರ್ಮಿಸಲಾದ ಸೈದ್ಧಾಂತಿಕ ಸೌಧದಮೇಲೆ ಆಧಾರಗೊ೦ಡಿದೆ. ಈ ಅಂಶಗಳು ಎಲ್ಲರು ಪಾಲುಗೊಳ್ಳುವ ಗತಕಾಲದ ಭಾವನೆ ಮತ್ತು ಅದರಿ೦ದ ಉದ್ಭವಿಸುವ ಏಕತ್ವದ ಮತ್ತು ಭವಿಷ್ಯದ ಬಗ್ಗೆ ಸಾಮಾನ್ಯ ವಿಧಿಯ ಪ್ರಜ್ಞೆಯನ್ನು ಸೃಷ್ಟಿಸುತ್ತವೆ. ಯಾವುದೇ ಸಾಮೂಹಿಕ ಗುರುತಿನ ಮೂಲದಲ್ಲಿ ಎಲ್ಲರೂ ಪಾಲುಗೊಳ್ಳುವ ಇತಿಹಾಸದ ಪ್ರಜ್ಞೆ ಇರುತ್ತದೆ.
ಇದನ್ನೂ ಓದಿ
ಮೆಗಾ ವಸತಿ ಶಾಲೆಗಳು ಭಾರತದ ಆದಿವಾಸಿ ಸಂಸ್ಕೃತಿಯನ್ನು ಅಳಿಸಿಹಾಕುತ್ತಿವೆಯೇ?
ಹಿಂದುತ್ವ ನಿರೂಪಣೆಯು ಹಿಂದೂ ರಾಷ್ಟ್ರವನ್ನು ಇತಿಹಾಸ ಮತ್ತು ಪುರಾಣಗಳ ಸಂಧಿಯಲ್ಲಿ ಇರಿಸುತ್ತದೆ, ಆ ಮೂಲಕ ಅದನ್ನು ದೈವಿಕ ಮತ್ತು ಕಾಲಾತೀತ ಗುಣಗಳಿ೦ದ ಉತ್ಕೃಷ್ಟಗೊಳಿಸುತ್ತದೆ. ಹಿಂದೂ ರಾಷ್ಟ್ರದ ಭೌಗೋಳಿಕ ಸಾರ್ವಭೌಮತ್ವ ಮತ್ತು ಸಾಂಸ್ಕೃತಿಕ ಗುರುತಿನ ಅಡಿಪಾಯವನ್ನು ನಿರ್ಮಿಸಲು ವಿ ಡಿ ಸಾವರ್ಕರ್ ರಾಮಾಯಣ ಮತ್ತು ವೇದಗಳಿಂದ ಪುರಾಣ ಮತ್ತು ಸಂಕೇತಗಳನ್ನು ಬಳಸಿದರು. ಈ ಅರೆ-ಐತಿಹಾಸಿಕ ನಿರೂಪಣೆಯು ಭಾರತೀಯ ರಾಷ್ಟ್ರದ ಗುರುತನ್ನು ವೈದಿಕ ಹಿಂದೂ ಧರ್ಮದ ಚೌಕಟ್ಟಿನಲ್ಲಿ ನೆಲೆ ಹಾಕುವ ಮತ್ತು ಸೂಚಕವಾಗಿ, ವೈದಿಕ ಹಿಂದೂ ಧರ್ಮದ ಅನುಯಾಯಿಗಳನ್ನು ಈ ನೆಲದ ಸ್ಥಳಜನ್ಯ ನಿವಾಸಿಗಳಾಗಿ ಸ್ಥಾಪಿಸುವ ಅವಳಿ ಕಾರ್ಯಗಳನ್ನು ನಿರ್ವಹಿಸಿತು; ಮತ್ತು ರಾಷ್ಟ್ರದೊಳಗಿನ ಮುಸ್ಲಿಮರು ಮತ್ತು ಕೈಸ್ತರನ್ನು 'ಇತರ’ರನ್ನಾಗಿಸಿತು.
ಆದಾಗ್ಯೂ, ಆದಿವಾಸಿಯತ್ ಅಥವಾ ವೈದಿಕೇತರ ಸಾಂಸ್ಕೃತಿಕ ಬದುಕುಳಿಯುವಿಕೆಯ ನಿರೂಪಣೆಯು ಈ ಆಖ್ಯಾನವನ್ನು ಕೆಡಿಸುತ್ತದೆ. ಮೇಲಾಗಿ, ಇದು ದೈವಿಕ ಗುಣವನ್ನು ಹಿಂದೂ ರಾಷ್ಟ್ರದಿ೦ದ ಕಿತ್ತುಹಾಕುತ್ತದೆ ಮತ್ತು ಲೌಕಿಕ ಐತಿಹಾಸಿಕ ಚೌಕಟ್ಟಿನೊಳಗೆ ಅದನ್ನು ಪುನಃ ಸ್ಥಾಪಿಸುತ್ತದೆ. ಅದಕ್ಕಾಗಿಯೇ ‘ಆದಿವಾಸಿ’ ಎನ್ನುವ ಒ೦ದು ವರ್ಗವನ್ನು ಆರ್‌ಎಸ್‌ಎಸ್ಸ್ ಸ೦ಸ್ಥೆಯು ವಿರೋಧಿಸುತ್ತದೆ. ಅದನ್ನು ಒಪ್ಪಿಕೊಂಡರೆ ಹಿ೦ದುತ್ವದ ಸ೦ಪೂರ್ಣತೆಯ ಹಕ್ಕನ್ನು ಬಿಡಬೇಕಾಗುತ್ತದೆ.
ಸ್ಥಳೀಯತೆಗಳ ವಿರುದ್ಧ ಸ್ಪರ್ಧಿಸುವುದು
ಹಿಂದುತ್ವವು ಆದಿವಾಸಿಗಳ ಬಗೆಗಿನ ಆಗಮವನ್ನು ಆದಿವಾಸಿಯತ್ ಪ್ರವಚನದ ಮೂಲಕ ಕಲ್ಪಿತ ಜನಾಂಗೀಯ ಹಿಂದೂ ರಾಷ್ಟ್ರಕ್ಕೆ ಒದಗುವ ಅಸ್ಥಿರತೆಯ ಮತ್ತು ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾ೦ತರಿಸುವ ಅವಳಿ ಆತಂಕಗಳನ್ನು ಪರಿಹರಿಸುವ ಅಗತ್ಯತೆಯ ಮೂಲಕ ತೀರ್ಮಾನಿಸಿದೆ. ಆದುದರಿಂದ, ಆರ್ ಎಸ್ ಎಸ್ ಆದಿವಾಸಿ ಅಸ್ಮಿತೆಯನ್ನು ವನವಾಸಿ ಅಥವಾ ಅರಣ್ಯವಾಸಿ, ಅ೦ದರೆ ಕೇವಲ ಅಪೂರ್ಣ ಸಂಯೋಜಿತ ಹಿಂದೂ ಎಂದು ಮರು ಅಭಿವ್ಯಕ್ತಿಸುತ್ತದೆ. ಆದಿವಾಸಿಗಳನ್ನು ಅವರ ಆಚಾರಗಳನ್ನು ಸಹ-ಆಯ್ಕೆ ಮಾಡುವ ಮೂಲಕ ಹಿಂದೂ ಧರ್ಮದೊಳಗೆ ಸಂಯೋಜಿಸುವ ಕಾರ್ಯವನ್ನು ತೆಗೆದುಕೊಳ್ಳುತ್ತದೆ. ಸ್ವಾಯತ್ತ ಆದಿವಾಸಿ ಹೋರಾಟಗಳ ಕಥೆಗಳನ್ನು ಕ್ರಿಶ್ಚಿಯನ್ ಮತ್ತು ಮುಸ್ಲಿಂ ದಬ್ಬಾಳಿಕೆಗಾರರ ವಿರುದ್ಧದ ಪ್ರತಿರೋಧದ ದೊಡ್ಡ ಹಿಂದೂ ರಾಷ್ಟ್ರದ ಕಥೆಯ ತುಣುಕುಗಳಾಗಿ ಪುನರುಚ್ಚರಿಸುವ ಮೂಲಕ ವ್ಯತ್ಯಾಸವಿಲ್ಲದ ಹಿಂದೂ ಭೂತಕಾಲವನ್ನು ನಿರ್ಮಿಸುತ್ತದೆ. ಇಂತಹ ಪರ್ಯಾಯ ಬುಡಕಟ್ಟು ಭೂತಕಾಲವನ್ನು ನಿರ್ಮಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್-ಬಿಜೆಪಿ ವಿಶ್ವ ಮೂಲನಿವಾಸಿ ದಿನವನ್ನು ಆಚರಿಸುವ ಬದಲು ಬಿರ್ಸಾ ಮುಂಡಾ ಅವರ ವಾರ್ಷಿಕೋತ್ಸವವನ್ನು 'ಬುಡಕಟ್ಟು ಹೆಮ್ಮೆಯ ದಿನ'ವನ್ನಾಗಿ ಆಚರಿಸಲು ಸಲಹೆ ನೀಡುತ್ತಿದೆ. ಹಿಂದುತ್ವದ ನಿರೂಪಣೆಯಲ್ಲಿ, ವನವಾಸಿಗಳು ಸರಳವಾದ, ಸಸ್ಯಗಳು, ನಿರ್ಜೀವ ವಸ್ತುಗಳು ಮತ್ತು ನೈಸರ್ಗಿಕ ವಿದ್ಯಮಾನಗಳಿಗೆ ಜೀವಂತ ಆತ್ಮದ ಗುಣಲಕ್ಷಣ ಕಲ್ಪಿಸುವ (‘animism’) ಹಿಂದುಗಳಾಗಿದ್ದು, ಕ್ರಿಶ್ಚಿಯನ್ ಮಿಷನರಿಗಳ ಮತಾಂತರದ ಆಕ್ರಮಣದ ವಿರುದ್ಧ ಪ್ರಾಥಮಿಕವಾಗಿ ರಕ್ಷಿಸಬೇಕಾಗಿದೆ. ಈ ನಿಟ್ಟಿನಲ್ಲಿ, ಬಿರ್ಸಾ ಮುಂಡಾ ಅವರ ಸ್ಮರಣೆಯನ್ನು ಕ್ರಿಶ್ಚಿಯನ್ 'ಇತರ'ರ ವಿರೋಧಿ ಎಂದು ಬಣ್ಣಿಸುವ ಸಲುವಾಗಿ ಮರುರೂಪಿಸಲಾಯಿತು, ಆದರೆ ಐತಿಹಾಸಿಕ ಸತ್ಯಗಳುಅವರ ಪ್ರತಿರೋಧ ಚಳುವಳಿಯ ಹೆಚ್ಚು ಸಂಕೀರ್ಣವಾದ ಚಿತ್ರವನ್ನು ಸೂಚಿಸುತ್ತವೆ.
ಇದನ್ನೂ ಓದಿ
ಆದಿವಾಸಿ ನೆಲಕ್ಕೆ ಕಿವಿ ಇಟ್ಟು ಕೇಳುವದು
‘ಜೈ ಆದಿವಾಸಿ’, ‘ ಯುವ ಶಕ್ತಿ’ಯಂತಹ ಪ್ರಗತಿಪರ ಶಕ್ತಿಗಳು ಆದಿವಾಸಿ ಗುರುತನ್ನು ಪ್ರಾಥಮಿಕವಾಗಿ ಉಚ್ಚಾಟನೆ ಮತ್ತು ಶೋಷಣೆಯ ದೃಷ್ಟಿಯಿಂದ ನಿರ್ಮಿಸುತ್ತವೆ. ಆದ್ದರಿಂದ, ಅವರು ಮಿಷನರಿಗಳ ಮತಾಂತರವನ್ನು ಅವಿಶ್ವಾಸದಿಂದ ನೋಡುತ್ತಿರುವಾಗಲೂ, ಅವರು ಧರ್ಮವನ್ನು ಲೆಕ್ಕಿಸದೆ, ಶೋಷಣೆ ಮಾಡುವ ಹೊರಗಿನವರನ್ನು ಪ್ರಾಥಮಿಕ ಸಮಸ್ಯೆ ಎಂದು ಪರಿಗಣಿಸುತ್ತಾರೆ. ಕ್ರೈಸ್ತೇತರ 'ಇತರ'ರ, ಹೊರಗಿನವರ, ರೂಪ ಹಿಂದುತ್ವದ ಚರ್ಚೆಯೊಳಗೆ ಇರುವುದಿಲ್ಲ.
ಆದಿವಾಸಿಯತ್ ನಿರೂಪಣೆಯು ರಾಜಕೀಯವನ್ನು ಸಂಪನ್ಮೂಲಗಳ ಮಾಲೀಕತ್ವ, ಹಕ್ಕುಗಳು ಮತ್ತು ಘನತೆಯ ದೃಷ್ಟಿಯಿಂದ ರೂಪಿಸಲು ಅನುವು ಮಾಡಿಕೊಡುತ್ತದೆ. ಈ ನಿರೂಪಣೆಯಲ್ಲಿ, ಆದಿವಾಸಿಗಳು ಅಪೂರ್ಣವಾಗಿ ಸಂಯೋಜಿತವಾದ ಸಾಂಸ್ಕೃತಿಕ ತುಣುಕಗಿಂತ ಭೂಮಿಯ ಮಾಲೀಕರಾಗಿರುತ್ತಾರೆ. ಆದ್ದರಿಂದ, ಇದು ಆದಿವಾಸಿಗಳ ಕಥೆಯನ್ನು ಹೊರಗಿನವರ ಕೈಯಲ್ಲಿ ಸ್ಥಳಜನ್ಯರ ಮೇಲೆ ದಬ್ಬಾಳಿಕೆ ಮತ್ತು ಉಚ್ಛಾಟನೆಯ ಕಥೆಯೊಂದಿಗೆ ಜೋಡಣೆ ಮಾಡುತ್ತದೆ. ಈ ಹಿನ್ನಲೆಯಲ್ಲಿ ಆದಿವಾಸಿಗಳಿಗೆ ವಿಶ್ವ ದಿನಾಚರಣೆಯಂದು ಇಂತಹ ಇತಿಹಾಸದ ಆಚರಣೆಯು ಹೆಚ್ಚಿನ ಸೈದ್ಧಾಂತಿಕ ಮಹತ್ವವನ್ನು ಪಡೆದುಕೊಳ್ಳುತ್ತದೆ. ಮಧ್ಯಪ್ರದೇಶದಲ್ಲಿ ನಡೆಯುತ್ತಿರುವುದು ಆದಿವಾಸಿಯತ್ತಿನ ಸದ್ದಿಲ್ಲದ ಅಳಿಸುವಿಕೆಯ ವಿರುದ್ಧದ ಹೋರಾಟ.
ಅಂಶುಲ್ ತ್ರಿವೇದಿ ಜೆಎನ್‌ಯುನ ರಾಜಕೀಯ ಅಧ್ಯಯನ ಕೇಂದ್ರದಲ್ಲಿ ಪಿಎಚ್‌ಡಿ ಅಭ್ಯರ್ಥಿಯಾಗಿದ್ದಾರೆ. @anshultrivedi47
ವಾಚಕರ ಆಯ್ದ ಪ್ರತಿಕ್ರಿಯೆಗಳು :👇
‘ಭಾರತೀಯರಿಗಾಗಿ ಭಾರತ’ ಬರೆದದ್ದು:
ಜೆಎನ್‌ಯುನಲ್ಲಿ ಪಿಎಚ್‌ಡಿ, ಅವರು ಏನು ಕಲಿಸುತ್ತಾರೆಂದು ಗೊತ್ತಿಲ್ಲ.
ಇದು ಒಂದು ನಿರ್ದಿಷ್ಟವಾದ ನಿರೂಪಣೆಯನ್ನು ರಚಿಸಲು ಕೇವಲ ಒಂದು ಪಕ್ಷಪಾತದ ಮತ್ತು ಏಕಪಕ್ಷೀಯ ಲೇಖನವಾಗಿದೆ.
ಹಿಂದೂ ಧರ್ಮವು ಒಬ್ಬ ನಿರ್ದಿಷ್ಟ ವ್ಯಕ್ತಿ ‘ಪುಸ್ತಕ’ಕ್ಕೆ ಬದ್ಧನಾಗಿರುತ್ತಾನೋ ಇಲ್ಲವೋ ಎಂಬುದನ್ನು ಗುರುತಿಸಿ ಹಿಂದು-ಅಲ್ಲದರು ಮತ್ತು ಹಿಂದು-ಆದವರು ಎಂದು ಬೇರ್ಪಡಿಸಬಹುದಾದ ‘ಪುಸ್ತಕದ’ ಧರ್ಮವಲ್ಲ.
ಹಿಂದೂ ಧರ್ಮವು ಅಂತಹ ಸಾವಿರಾರು ಸ್ಥಳೀಯ ನಂಬಿಕೆಗಳ ಸಂಯೋಜನೆಯಾಗಿದ್ದು ಅದು ಅನಿಮಿಸಂ, ಪ್ರಕೃತಿಯ ಆರಾಧನೆಯಿಂದ ಉನ್ನತ ಆರಾಧನೆ ಮತ್ತು ಅಂತಿಮವಾಗಿ ಅದ್ವೈತದವರೆಗೆ ಇರುತ್ತದೆ. ಇದು ಕಾಲಕ್ರಮೇಣ ಶ್ರಮಣ ಸಂಪ್ರದಾಯಗಳನ್ನು ತನ್ನ ಮಡಿಲಲ್ಲಿ ಸಂಯೋಜಿಸಿತು.
ಅಭಿನವ್ ಬರೆದದ್ದು:
ಆಯುರ್ವೇದದ ಎಲ್ಲಾ ಜ್ಞಾನವನ್ನು 'ಕೇಸರಿ ಹೊದಿಸಿದ ಋಷಿಗಳಿಗೆ' ಸಲ್ಲುತ್ತದೆ, ಆದಿವಾಸಿಗಳ ಗಿಡಗಳು, ಮರಗಳ ಜ್ಞಾನಕ್ಕೆ ಯಾವುದೇ ಬೆಲೆ ಕೊಡುತ್ತಿಲ್ಲ . ಅನೇಕ ಆದಿವಾಸಿ ಸಮುದಾಯಗಳು ಲೋಹಶಾಸ್ತ್ರ ಕೆಲಸ ಮಾಡುತ್ತವೆ, ಮತ್ತೆ ಈ ಜ್ಞಾನವನ್ನು ಹಿಂದೂ ವಿಜ್ಞಾನವೆಂದು ವಹಿಸಿಕೊಳ್ಳಲಾಗುತ್ತದೆ ಮತ್ತು ಆದಿವಾಸಿ ಜನರಿಗೆ ಯಾವುದೇ ಪ್ರತಿಷ್ಠೆ ನೀಡಲಾಗುವುದಿಲ್ಲ
ಹರಿಹರನ್ Pv ಬರೆದದ್ದು:
ಆದಿವಾಸಿಗಳು ಭಾರತದ ನಿಜವಾದ ಮಾಲೀಕರು
ದ್ರಾವಿಡ ಸಂಸ್ಕೃತಿಗಳು ಮೂಲ ಭಾರತೀಯರು- ಈಗ ಆದಿವಾಸಿಗಳು ಮತ್ತು ಬುಡಕಟ್ಟು ಜನರು ಎಂದು ದೂರವಿಡಲಾಗಿದೆ
ಆದಿವಾಸಿಗಳನ್ನು ೫೦೦೦ ವರ್ಷಗಳ ಹಿ೦ದೆಯೇ ಭಾರತೀಯ ಉಪಖಂಡದ ಮಾಲೀಕರು ಎಂದು ಪರಿಗಣಿಸಲಾಗುತ್ತದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ