ಭಾರತದ ಆರ್ಥಿಕತೆ: ಏಳು ಪಟ್ಟಿಯಲ್ಲಿ ಮೋದಿಯ ಏಳು ವರ್ಷಗಳು (ಭಾಗ ೨)
೩. ಭಾರತವು ಸಾಕಷ್ಟುಕೈಗಾರಿಕಾ ಉತ್ಪಾದನೆ ತಯಾರಿಸುತ್ತಿಲ್ಲ ಅಥವಾ ರಫ್ತು ಮಾಡುತ್ತಿಲ್ಲ
'ಮೇಕ್ ಇನ್- ಇ೦ಡಿಯ’ - ’ಭಾರತದಲ್ಲಿಉತ್ಪಾದಿಸಿ’ ಮೋದಿಯವರ ಪ್ರಮುಖ ರಣ ಕಹಳೆ - ‘ಕೆಂಪು ಪಟ್ಟಿ’ (ಸರ್ಕಾರದ ವಿಳ೦ಬ ವಿಧಾನ)ಗಳನ್ನು ಕತ್ತರಿಸಿ ರಫ್ತು ಕೇ೦ದ್ರಗಳಿಗೆ ಹೂಡಿಕೆಯನ್ನು ಸೆಳೆಯುವ ಮೂಲಕ ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿಯನ್ನಾಗಿ ಪರಿವರ್ತಿಸಬೇಕಿತ್ತು.
ಗುರಿ: ಕೈಗಾರಿಕಾ ಉತ್ಪಾದನೆಯನ್ನು ಒಟ್ಟು ದೇಶೀಯ ಉತ್ಪನ್ನದ ೨೫% ಮಟ್ಟಕ್ಕೆ ಏರಿಸ ಬೇಕು.
ಸಾಧನೆ: ಏಳು ವರ್ಷಗಳಲ್ಲಿ, ಅದರ ಪಾಲು ೧೫% ನಲ್ಲಿ ಸ್ಥಿರವಾಗಿದೆ.
ಇನ್ನೂ ಕೆಟ್ಟದಾಗಿ, ಆರ್ಥಿಕ ದತ್ತಾಂಶ ಮತ್ತು ವಿಶ್ಲೇಷಣೆಯ ಕೇಂದ್ರದ (Centre for Economic Data and Analysis ) ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಉತ್ಪಾದನಾ ಉದ್ಯೋಗಗಳು ಅರ್ಧದಷ್ಟು ಕಡಿಮೆಯಾಗಿವೆ..
ಸುಮಾರು ಒಂದು ದಶಕದಿಂದ ಭಾರತದ ರಫ್ತು ಸುಮಾರು ಡಾಲರ್ 300 ಬಿಲಿಯನ್ ಮಟ್ಟಕ್ಕೇ ನಿ೦ತು ಬಿಟ್ಟಿದೆ.
ಮೋದಿಯವರ ನೇತೃತ್ವದಲ್ಲಿ, ಬಾಂಗ್ಲಾದೇಶದಂತಹ ಸಣ್ಣ ಪ್ರತಿಸ್ಪರ್ಧಿಗಳಿಗೆ ಭಾರತವು ಸ್ಥಿರವಾಗಿ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ. ಅವರ ಗಮನಾರ್ಹ ಬೆಳವಣಿಗೆಯು ರಫ್ತುಗಳ ಮೇಲೆ ಅವಲಂಬಿತವಾಗಿದೆ. ಇದು ಹೆಚ್ಚಾಗಿ ಕಾರ್ಮಿಕ-ಉದ್ಯೋಗಗಳನ್ನು ತೊಡಗಿಸುವ ಉಡುಪು ಉದ್ಯಮದಿಂದ ಉತ್ತೇಜಿಸಲ್ಪಟ್ಟಿದೆ.
ಈ ಮಧ್ಯೆ ಮೋದಿ ಅವರು ಸುಂಕಗಳನ್ನು ಹೆಚ್ಚಿಸಿದ್ದಾರೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ರಕ್ಷಣಾತ್ಮಕವಾದಿಗಳಾಗಿದ್ದಾರೆ - "ಸ್ವಾವಲಂಬನೆ" ಗಾಗಿ ಕರೆಯುತ್ತಿರುವ ಕೂಗಿನೊಂದಿಗೆ.
೪. ಮೂಲಸೌಕರ್ಯ ನಿರ್ಮಾಣವು ಅಪರೂಪದ ಪ್ರಕಾಶಮಾನವಾದ ತಾಣವಾಗಿದೆ
ಹಿಂದಿನ ದೈನಂದಿನ ಎಣಿಕೆ 8-11 ಕಿ.ಮೀ.ಗೆ ಹೋಲಿಸಿದರೆ ಮೋದಿ ಅವರ ಸರ್ಕಾರವು ದಿನಕ್ಕೆ ಸರಾಸರಿ ೩೬ ಕಿ.ಮೀ (೨೨ ಮೈಲಿ) ಹೆದ್ದಾರಿಗಳನ್ನು ನಿರ್ಮಿಸಲು ಯಶಸ್ವಿಯಾಗುತ್ತಿದೆ ಎಂದು ಮೂಲಸೌಕರ್ಯ ಸಂಸ್ಥೆ ಫೀಡ್‌ಬ್ಯಾಕ್ ಇನ್ಫ್ರಾ ಸಹ ಸಂಸ್ಥಾಪಕ ವಿನಾಯಕ್ ಚಟರ್ಜಿ ಹೇಳಿದ್ದಾರೆ.
ಸ್ಥಾಪಿಸಲಾದ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯ - ಸೌರ ಮತ್ತು ಗಾಳಿ - ಐದು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಪ್ರಸ್ತುತ ಸುಮಾರು ೧೦೦ ಗಿಗಾವಾಟ್‌ಗಳನ್ನು ತಲುಪಿದ್ದು ಭಾರತವು ತನ್ನ ೨೦೨೩ ಗುರಿ ೧೭೫ ಗಿಗಾವಾಟ್‌ಗಳನ್ನು ಸಾಧಿಸುವ ಹಾದಿಯಲ್ಲಿದೆ.
ಮೋದಿ ಅವರ ಜನಪ್ರಿಯ ವಿಶೇಷ ಯೋಜನೆಗಳನ್ನು ಅರ್ಥಶಾಸ್ತ್ರಜ್ಞರು ಹೆಚ್ಚಾಗಿ ಸ್ವಾಗತಿಸಿದರು - ಬಯಲು ಮಲವಿಸರ್ಜನೆ ಕಡಿಮೆ ಮಾಡಲು ಲಕ್ಷಾಂತರ ಹೊಸ ಶೌಚಾಲಯಗಳು, ವಸತಿ ಸಾಲಗಳು, ಸಬ್ಸಿಡಿ ಅಡುಗೆ ಅನಿಲ ಮತ್ತು ಬಡವರಿಗೆ ಕೊಳವೆ ನೀರು.
ಆದರೆ ಅನೇಕ ಶೌಚಾಲಯಗಳನ್ನು ಬಳಸಲಾಗುವುದಿಲ್ಲ ಅಥವಾ ಹರಿಯುವ ನೀರಿಲ್ಲ, ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳು ಸಬ್ಸಿಡಿಯ ಲಾಭವನ್ನು ರದ್ದುಗೊಳಿಸಿವೆ.
ತೆರಿಗೆಗಳು ಅಥವಾ ರಫ್ತುಗಳಿಂದ ಹೊಂದಾಣಿಕೆಯಾಗದ ಆದಾಯವಿಲ್ಲದೆ ಖರ್ಚು ಮಾತ್ರ ಹೆಚ್ಚುತ್ತಿರುವ್ದರಿ೦ದ, ಆರ್ಥಿಕ ತಜ್ಞರು ಭಾರತದ ಪ್ರವರ್ಧಮಾನಕ್ಕೆ ಬರುತ್ತಿರುವ ಹಣಕಾಸಿನ ಕೊರತೆಯ ಬಗ್ಗೆ ಚಿಂತಿಸುತ್ತಿದ್ದಾರೆ.
೫. ಔಪಚಾರಿಕ ಆರ್ಥಿಕತೆಗೆ ಹೆಚ್ಚಿನ ಜನರು ಸೇರಿದ್ದಾರೆ ಇದು
ಮೋದಿಯವರ ಇತರ ದೊಡ್ಡ ಸಾಧನೆ:
-ಸರ್ಕಾರದ ಬೆಂಬಲಿತ ಪಾವತಿ ವ್ಯವಸ್ಥೆಯ ಸಹಾಯದಿ೦ದ ಭಾರತವು ಡಿಜಿಟಲ್ ಪಾವತಿಗಳಲ್ಲಿ(ನಗದು ಹಣದ ಉಪಯೋಗವಿಲ್ಲದ ಪಾವತಿ) ಜಾಗತಿಕ ನಾಯಕರಾಗಲು ಮುಂದಾಗಿದೆ;
-ಮೋದಿಯ ಜನ ಧನ್ ಯೋಜನೆಯು ಬ್ಯಾಂಕಿಲ್ಲದ ಲಕ್ಷಾಂತರ ಬಡ ಕುಟುಂಬಗಳಿಗೆ ಸರಳ ರೀತಿಯ ಬ್ಯಾಂಕ್ ಖಾತೆಗಳೊಂದಿಗೆ ಔಪಚಾರಿಕ ಆರ್ಥಿಕತೆಗೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ.
-ಖಾತೆಗಳು ಮತ್ತು ಠೇವಣಿಗಳು ಏರಿದೆ - ಒಂದು ಉತ್ತಮ ಚಿಹ್ನೆ, ಆದರೂ ವರದಿಗಳು ಈ ಖಾತೆಗಳಲ್ಲಿ ಹಲವು ಬಳಕೆಯಾಗುವುದಿಲ್ಲ ಎಂದು ಸೂಚಿಸುತ್ತವೆ.
ಆದರೆ ಅರ್ಥಶಾಸ್ತ್ರಜ್ಞರು ಇದು ಸರಿಯಾದ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ, ಅದರಲ್ಲೂ ವಿಶೇಷವಾಗಿ ಇದು ನಗದು ಲಾಭಗಳ ನೇರ ವರ್ಗಾವಣೆಯನ್ನು ಅನುಮತಿಸುತ್ತದೆ, ಮಧ್ಯವರ್ತಿಗಳನ್ನು ಕತ್ತರಿಸುತ್ತದೆ.
೬. ಆರೋಗ್ಯ ರಕ್ಷಣೆಯ ಖರ್ಚು ನೀರಸವಾಗಿದೆ
"ಹಿಂದಿನ ಸರ್ಕಾರಗಳಂತೆ, ಈ ಸರ್ಕಾರವೂ ಆರೋಗ್ಯ ರಕ್ಷಣೆಯನ್ನು ನಿರ್ಲಕ್ಷಿಸುತ್ತಲೇ ಇದೆ. ವಿಶ್ವದಲ್ಲೇ ಆರೋಗ್ಯ ರಕ್ಷಣೆಗಾಗಿ ಸಾರ್ವಜನಿಕ ಖರ್ಚಿನ ಅತ್ಯಂತ ಕಡಿಮೆ ಮಟ್ಟದಲ್ಲಿ ಭಾರತವಿದೆ" ಎಂದು ಅರ್ಥಶಾಸ್ತ್ರಜ್ಞ ರೀತಿಕಾ ಖೇರಾ ಹೇಳಿದ್ದಾರೆ.
ಅನಾರೋಗ್ಯವನ್ನು ಮೂಲದಲ್ಲೇ ತಡೆಗಟ್ಟುವ ಅಥವಾ ಪ್ರಾಥಮಿಕ ಆರೈಕೆಯ ವೆಚ್ಚದಲ್ಲಿ ಹೆಚ್ಚಳವಿಲ್ಲದೆ, ತೃತೀಯ ಆರೈಕೆ (ವಿಶೇಷಜ್ಞ ಚಿಕಿತ್ಸೆಗೆ )ಒತ್ತು ನೀಡಲಾಗಿದೆ ಎಂದು ತಜ್ಞರು ಹೇಳುತ್ತಾರೆ.
"ಇದು ಯುಎಸ್ ಶೈಲಿಯ ಆರೋಗ್ಯ ವ್ಯವಸ್ಥೆಯ ಕಡೆಗೆ ನಮ್ಮನ್ನು ಒಯ್ಯುತ್ತ್ತಿದೆ. ಅದು ದುಬಾರಿಯಾಗಿದೆ, ಅಲ್ಲದೆ ಈ ತರದ ವ್ಯವಸ್ಥೆ ದುರ್ಬಲ ಆರೋಗ್ಯ ಫಲಿತಾಂಶಗಳನ್ನು ನೀಡುತ್ತದೆ" ಎಂದು ಶ್ರೀಮತಿ ಖೇರಾ ಹೇಳಿದರು.
೨೦೧೮ ರಲ್ಲಿ ಪ್ರಾರಂಭಿಸಲಾದ ಮಹತ್ವಾಕಾಂಕ್ಷೆಯ ಆರೋಗ್ಯ ವಿಮಾ ಯೋಜನೆ ಕೋವಿಡ್ ಸಮಯದಲ್ಲಿಯೂ ಸಹ ಕಡಿಮೆ ಬಳಕೆಯಲ್ಲಿದೆಎಂದು ತೋರುತ್ತದೆ.
“ಈ ಯೋಜನೆ ಬಹಳ ನಿರೀಕ್ಷಿತವಾಗಿತ್ತು ಆದರೆ ಹೆಚ್ಚಿನ ಸಂಪನ್ಮೂಲಗಳು ಅದರೊಳಗೆ ಹೋಗಬೇಕಾಗಿದೆ" ಎಂದು ಸಾರ್ವಜನಿಕ ಆರೋಗ್ಯ ತಜ್ಞ ಡಾ.ಶ್ರೀನಾಥ್ ರೆಡ್ಡಿ ಹೇಳಿದರು.
ಪ್ರಾಥಮಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ಭಾರೀ ಹೂಡಿಕೆ ಮಾಡಲು ಭಾರತವು ಕೋವಿಡ್ ಅನ್ನು ಎಚ್ಚರಗೊಳಿಸುವ ಕರೆಯಾಗಿ ಬಳಸಬೇಕಾಗಿದೆ ಎಂದು ಅವರು ಹೇಳಿದರು.
೭. ಕೃಷಿಯಲ್ಲಿ ಇನ್ನೂ ಹೆಚ್ಚಿನವರು ಕೆಲಸ ಮಾಡುತ್ತಿದ್ದಾರೆ
ಕೃಷಿ ವಲಯವು ಭಾರತದ ದುಡಿಯುವ ವಯಸ್ಸಿನ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿನದನ್ನು ಹೊಂದಿದೆ ಆದರೆ ಜಿಡಿಪಿ ಗೆ(ಒಟ್ಟು ದೇಶೀಯ ಉತ್ಪನ್ನಕ್ಕೆ)ತೀರಾ ಕಡಿಮೆ ಕೊಡುಗೆ ನೀಡುತ್ತದೆ.
ಭಾರತದ ಕೃಷಿ ಕ್ಷೇತ್ರಕ್ಕೆ ಸುಧಾರಣೆಯ ಅಗತ್ಯವಿದೆ ಎಂದು ಬಹುತೇಕ ಎಲ್ಲರೂ ಒಪ್ಪುತ್ತಾರೆ. ಆದರೆ ಕಳೆದ ವರ್ಷ ಅಂಗೀಕರಿಸಿದ ಮಾರುಕಟ್ಟೆ ಪರ ಕಾನೂನುಗಳು ಅನೇಕ ತಿಂಗಳುಗಳ ಕಾಲ, ತಮ್ಮ ಆದಾಯವನ್ನು ಮತ್ತಷ್ಟು ಕುಗ್ಗಿಸುತ್ತದೆ ಎಂದು ಹೇಳುವ ಕೋಪಗೊಂಡ ರೈತರು ನಡೆಸುತ್ತಿರುವ ಪ್ರತಿಭಟನೆಯ ಮೂಲಕ ಸಿಲುಕಿಕೊಂಡಿದ್ದಾರೆ
ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದ ಶ್ರೀ ಮೋದಿ, ರೈತರ ಹೆದರಿಕೆ ನಿಜವಲ್ಲ ಎಂದು ಒತ್ತಾಯಿಸುತ್ತಾರೆ.
ಆದರೆ ತಜ್ಞರು ಹೇಳುವಂತೆ ತುಂಡು ಸುಧಾರಣೆಗಳು ಅಲ್ಪ ಸಾಧನೆ ಮಾತ್ರ ಮಾಡುತ್ತವೆ, ಅವುಗಳ ಬದಲಿಗೆ ಕೃಷಿ ವೆಚ್ಚಗಳನ್ನು ಕಡಿಮೆ ಮಾಡಲು, ಹಾಗೂ ಹೆಚ್ಚು ಲಾಭದಾಯಕವಾಗಿಸಲು ಸರ್ಕಾರ ಖರ್ಚು ಮಾಡಬೇಕಾಗಿದೆ ಎಂದು ಅರ್ಥಶಾಸ್ತ್ರಜ್ಞ ಪ್ರೊಫೆಸರ್ ಆರ್ ರಾಮಕುಮಾರ್ ಹೇಳಿದರು.
"ನೋಟ್ ರದ್ದತಿ ಕಾರ್ಯಕ್ರಮ ಸರಬರಾಜು ಸರಪಳಿಗಳನ್ನು ನಾಶಪಡಿಸಿತು, ಕೆಲವು ಎ೦ದೂ ಸರಿಪಡಿಸಲಾಗದಂತೆ. ಮತ್ತು ಜಿಎಸ್ ಟಿ ((ಸರಕುಗಳ -ಸೇವೆಗಳ ಟಾಕ್ಸ್) 2017 ರಲ್ಲಿ ಕೃಷಿಗೆ ಅವಶ್ಯವಿರುವ ವಸ್ತುಗಳ ಬೆಲೆಗಳ ಏರಿಕೆಗೆ ಕಾರಣವಾಯಿತು. 2020 ರ [ಕೋವಿಡ್ ಲಾಕ್ಡೌನ್] ನೋವು ನಿವಾರಣೆಗೆ ಸರ್ಕಾರವು ತುಂಬಾ ಕಡಿಮೆ ಮಾಡಿದೆ" ಎಂದು ಅವರು ಹೇಳಿದರು.
ಪರಿಹಾರವು ಭಾಗಶಃ ಕೃಷಿಯ ಹೊರಗಿದೆ ಎಂದು ಶ್ರೀ ರಾನಡೆ ಹೇಳಿದರು: "ಇತರ ಕ್ಷೇತ್ರಗಳು ಹೆಚ್ಚುವರಿ ಕಾರ್ಮಿಕ ಸ೦ಖ್ಯೆಗಳನ್ನು ಹೀರಿಕೊಳ್ಳಲು ಸಾಧ್ಯವಾದಾಗ ಕೃಷಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ."
ಆದರೆ CMIE ಸ೦ಸ್ಥೆಯ ಪ್ರಕಾರ ಭಾರತವು ಖಾಸಗಿ ಹೂಡಿಕೆಯಲ್ಲಿ ಪುನರುಜ್ಜೀವನವನ್ನು ಕಂಡಾಗ ಮಾತ್ರ ಇದು ಸಂಭವ ಸಾಧ್ಯ. ಈಗ ಖಾಸಗಿ ಹೂಡಿಕೆ ೧೬ ವರ್ಷಗಳ ಕನಿಷ್ಠ ಮಟ್ಟದಲ್ಲಿದೆ.
ಇದು ಬಹುಶಃ ಮೋದಿ ಎದುರಿಸುತ್ತಿರುವ ಅತಿ ದೊಡ್ಡ ಆರ್ಥಿಕ ಸವಾಲು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ