ಯುಎಪಿಎ ಹಿಂತೆಗೆದುಕೊಳ್ಳಿ


ಯುಎಪಿಎ ಹಿಂತೆಗೆದುಕೊಳ್ಳಿ 


 ಪ್ರಜಾಪ್ರಭುತ್ವದಲ್ಲಿ ಈ ಶಾಸನಕ್ಕೆ ಯಾವುದೇ ಸ್ಥಾನವಿಲ್ಲ

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಅಥವಾ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟ ಪಾದ್ರಿ ಸ್ಟಾನ್ ಸ್ವಾಮಿಯವರ ಸಾವು ಈ 54 ವರ್ಷ ಹಳೆಯ ಕಾನೂನನ್ನು ಪುನಃ ಪರಿಶೀಲನೆ ಮಾಡಲು ಸರ್ಕಾರಕ್ಕೆ ಅವಕಾಶವನ್ನು ನೀಡುತ್ತದೆ . ಹಳತಾದ ದೇಶದ್ರೋಹ ಕಾನೂನುಗಳಂತೆ, ಯುಎಪಿಎ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಜಾಪ್ರಭುತ್ವ ರುಜುವಾತುಗಳನ್ನು ಪ್ರದರ್ಶಿಸುವ ದೇಶಕ್ಕೆ ಭೂಷಣವಲ್ಲ .

    ಯುಎಪಿಎ ಅದರ ಪ್ರಸ್ತುತ ರೂಪದಲ್ಲಿ ಮೂಲಭೂತ ಸಾ೦ವಿಧಾನಿಕ ನಿಯಮಗಳ ಪ್ರತಿಕೂಲವಾಗಿದೆ. ನಾಗರಿಕರನ್ನು ಬಹುತೇಕ ಅನಿರ್ದಿಷ್ಟವಾಗಿ ಬಂಧಿಸಲು ಮತ್ತು ಸೆರೆಹಿಡಿಯಲು ಇದು ರಾಜ್ಯವನ್ನು ಶಕ್ತಗೊಳಿಸುತ್ತದೆ. ಕಾನೂನಿನಡಿಯಲ್ಲಿ ಜಾಮೀನು ಪಡೆಯುವುದು ಬಹಳ ಕಷ್ಟ, ಏಕೆಂದರೆ ನ್ಯಾಯಾಲಯಗಳು ಆರೋಪಿಗಳ ತಪ್ಪನ್ನು ನಿಜವೆ೦ದು ಗ್ರಹಿಸಲು ಪೊಲೀಸ್ ದಾಖಲೆಗಳನ್ನು ಅವಲಂಬಿಸಬೇಕಾಗುತ್ತದೆ. ಇತ್ತೀಚಿನ ತಿದ್ದುಪಡಿಗಳು ಚಾರ್ಜ್ ಶೀಟ್-ಪೂರ್ವ ಬ೦ಧನದ ಅವಧಿಯನ್ನು 90 ದಿನಗಳಿಂದ 180 ದಿನಗಳವರೆಗೆ ವಿಸ್ತರಿಸಿದೆ ಆದರೆ ಈ ಅವಧಿಯನ್ನು ಸಹ ಉಲ್ಲಂಘಿಸಿ ಮೀರುವದೇ ರೂಢಿ. ಮಾವೋವಾದಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಸ್ಟಾನ್ ಸ್ವಾಮಿಯನ್ನು ವಶಕ್ಕೆ ತೆಗೆದುಕೊಂಡಿರುವ 2018 ರ ಭೀಮಾ-ಕೊರೆಗಾಂವ್ ಪ್ರಕರಣದಲ್ಲಿ ಬಂಧಿತ ಕಾರ್ಯಕರ್ತರು ಮತ್ತು ವಕೀಲರು ಮೂರು ವರ್ಷಗಳ ಕಾಲದಿ೦ದ ಜೈಲಿನಲ್ಲಿದ್ದಾರೆ. ಆರೋಪಿಗಳ ಆಸ್ತಿಯನ್ನು ಲಗತ್ತಿಸಲು ನ್ಯಾಯಾಲಯಗಳಿಗೆ ಈ ಕಾನೂನು ಅವಕಾಶ ನೀಡುತ್ತದೆ, ಇದು ಕಾನೂನು ಪ್ರಕರಣದ ವಿರುದ್ಧ ಹೋರಾಡುವ ಆರೋಪಿಗಳ ಆರ್ಥಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. 

    2004 ರಲ್ಲಿ ತಿದ್ದುಪಡಿಗಳನ್ನು ಪರಿಚಯಿಸಿದ ನಂತರ ಯುಎಪಿಎ ಭಯೋತ್ಪಾದಕ ವಿರುಧ್ಧ ಕಾನೂನಾಯಿತು. ಆದರೆ 2008 ರ ನಡುವೆ ಮುಂಬೈ ಭಯೋತ್ಪಾದಕ ದಾಳಿಯ ನಂತರ ಮತ್ತು 2019 ರ ನಡುವೆ ಸತತ ತಿದ್ದುಪಡಿಗಳು ಕಾಯಿದೆಯ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸಿತು. ವಿಪರ್ಯಾಸವೆಂದರೆ, ಯುಎಪಿಎ ಹಿಂದಿನ ಎರಡು ಮತ್ತು ಭಾರಿ ವಿವಾದಾತ್ಮಕ ಭಯೋತ್ಪಾದಕ ಕಾನೂನುಗಳನ್ನು ಹೋಲುತ್ತದೆ. ಒಂದು ಭಯೋತ್ಪಾದಕ ಮತ್ತು ಒಡಕುಕಾರಕ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಟಾಡಾ), ಇದು ಪಂಜಾಬ್‌ನಲ್ಲಿನ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಅಂಗೀಕರಿಸಲ್ಪಟ್ಟಿತು, ಇದನ್ನು ಮಾನವ ಹಕ್ಕುಗಳ ಕಾರ್ಯಕರ್ತರು ಭದ್ರತಾ ಸಂಸ್ಥೆಗಳಿಗೆ ನಾಗರಿಕರನ್ನು ಬ೦ಧಿಸಲು ಮತ್ತು ಹಿ೦ಸಿಸಲು ಸ೦ಪೂರ್ಣ ಸ್ವಾತ೦ತ್ರ್ಯ ನೀಡಿದ್ದಕ್ಕಾಗಿ ಟೀಕಿಸಿ ಈ ಕಾನೂನನ್ನು ನಿಶ್ವಸಿಸಲಾಯಿತು. ಎರಡನೆಯದು ಅಷ್ಟೇ ಕುಖ್ಯಾತ ಭಯೋತ್ಪಾದನೆ ತಡೆಗಟ್ಟುವಿಕೆ ಕಾಯ್ದೆ (ಪೊಟಾ), ಇತರ ವಿಷಯಗಳ ಜೊತೆಗೆ, ಪೊಲೀಸರು ಪಡೆದ ತಪ್ಪೊಪ್ಪಿಗೆಗಳನ್ನು ಸಾಕ್ಷ್ಯದಲ್ಲಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು. ಕೆಲವು ರಾಜ್ಯಗಳು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಹೆಚ್ಚುತ್ತಿರುವ ಟೀಕೆಗಳನ್ನು ತಡೆಯಲು 2004 ರಲ್ಲಿ ಈ ಕಾನೂನನ್ನು ವಿಫಲವಾಗಲು ಅವಕಾಶ ನೀಡಲಾಯಿತು. ಆದರೆ ಯುಎಪಿಎಯನ್ನು ದೇಶದ ಮುಖ್ಯ ಭಯೋತ್ಪಾದಕ ಕಾನೂನಿನ ಸ್ಥಾನಮಾನಕ್ಕೆ ಏರಿಸುವುದರಿಂದ ಸರ್ಕಾರಗಳು ಸೃಜನಾತ್ಮಕ ವ್ಯತ್ಯಾಸಗಳೊಂದಿಗೆ, ಟಾಡಾ ಮತ್ತು ಪೊಟಾದ ಮನೋಭಾವವನ್ನು ವಿಸ್ತರಿಸಲು ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಅನುವು ಮಾಡಿಕೊಟ್ಟಿದೆ. ವ್ಯಕ್ತಿಗಳನ್ನು (ಸ೦ಸ್ಥೆಗಳನ್ನು ಮಾತ್ರವಲ್ಲ) ಭಯೋತ್ಪಾದಕರು ಎಂದು ಹೆಸರಿಸಲು ಸರ್ಕಾರಕ್ಕೆ ಅವಕಾಶ ನೀಡಿದ 2019 ರ ತಿದ್ದುಪಡಿಯ ನಂತರ ಸುಲಭವಾಯಿತು.

     ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, ಯುಎಪಿಎ ಅಡಿಯಲ್ಲಿ 2015 ಮತ್ತು 2019 ರ ನಡುವೆ ಬಂಧನಕ್ಕೊಳಗಾದವರ ಸಂಖ್ಯೆಯಲ್ಲಿ ಶೇಕಡಾ 72 ರಷ್ಟು ಹೆಚ್ಚಳವಾಗಿದೆ ಎಂಬುದು ಈ ಉದ್ದೇಶವನ್ನು ಒತ್ತಿಹೇಳುತ್ತದೆ. ಅದೇ ಮೂಲವು ಶಿಕ್ಷೆಯ ಪ್ರಮಾಣವು ಕೇವಲ ಶೇಕಡ 2 ರಷ್ಟಿದೆ ಎಂದು ತೋರಿಸುತ್ತದೆ . ಇದು ಈ ಪ್ರಕರಣಗಳನ್ನು ನಿರ್ಮಿಸಿದ ದುರ್ಬಲ ಆಧಾರಗಳನ್ನು ಒತ್ತಿಹೇಳುತ್ತದೆ. ಆದರೂ, ಈ ಕಾನೂನಿನಡಿಯಲ್ಲಿ ಹಲವಾರು ಕಾರ್ಯಕರ್ತರು, ಪತ್ರಕರ್ತರು ಮತ್ತು ವಿದ್ಯಾರ್ಥಿಗಳು ಜೈಲಿನಲ್ಲಿ ಬಳಲುತ್ತಿದ್ದಾರೆ. ಇತ್ತೀಚೆಗೆ, ನ್ಯಾಯಾಲಯಗಳು - ಮುಖ್ಯವಾಗಿ ದೆಹಲಿ ಹೈಕೋರ್ಟ್ - ಈ ಕಾನೂನಿನಡಿಯಲ್ಲಿ ಬಂಧಿಸಲ್ಪಟ್ಟ ಮೂರು ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಜಾಮೀನು ನೀಡುವಲ್ಲಿ, ಕಾರ್ಯನಿರ್ವಹಿಸುತ್ತಿರುವ ಪ್ರಜಾಪ್ರಭುತ್ವದಲ್ಲಿ ಒ೦ದು ಕಡೆ ಕಾನೂನುಬಧ್ಧ ಪ್ರತಿಭಟನೆಗಳು, ಮತ್ತು ಇನ್ನೊ೦ದು ಕಡೆ ಭಯೋತ್ಪಾದನೆಯ ಕೃತ್ಯಗಳ ನಡುವಿನ ವ್ಯತ್ಯಾಸವನ್ನು ಸರ್ಕಾರಕ್ಕೆ ನೆನಪಿಸಿದೆ. . ತನಿಖಾ ಸಂಸ್ಥೆಗಳು ಆತನ ಬಂಧನದ ಅವಶ್ಯಪಡದಿದ್ದರೂ ಸಹ, ಸ್ಟಾನ್ ಸ್ವಾಮಿಗೆ ನೀಡಿದ ಅನಪೇಕ್ಷಿತ ಕ್ರೌರ್ಯ, ಅಂತಹ ಕಾನೂನುಗಳು ಪ್ರೋತ್ಸಾಹಿಸುವ ರಾಜ್ಯ ಅಧಿಕಾರಿಗಳ ಉತ್ಸಾಹಭರಿತ ಅತಿಕ್ರಮಣವನ್ನು ಪ್ರತಿಬಿಂಬಿಸುತ್ತದೆ. ಹಂಗೇರಿ, ಟರ್ಕಿ, ಬ್ರೆಜಿಲ್ ಮತ್ತು ಫಿಲಿಪೈನ್ಸ್‌ನಲ್ಲಿನ ಸರ್ವಾಧಿಕಾರ ಆಡಳಿತಗಳಿಗೆ ಈಗ ಭಾರತವನ್ನು ಸೇರಿಸಲಾಗುತ್ತಿದೆ. ಯುಎಪಿಎ ಅನ್ನು ತೊಡೆದು ಹಾಕುವದು ದೇಶದ ಖ್ಯಾತಿಯನ್ನು ಉಳಿಸುವ ಉತ್ತಮ ಮಾರ್ಗವಾಗಿದೆ. (B.S. ಸ೦ಪಾದಕೀಯದಿ೦ದ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು