ಎಬಿವಿಪಿ ಪ್ರತಿಭಟನೆಯ ನಂತರ ಪೋಲೀಸ್ ವರಿಷ್ಟಾಧಿಕಾರಿ  ಎಚ್ಚರಿಕೆ ಕಳುಹಿಸಿದ್ದಾರೆ.

ಇದರಿ೦ದಾಗಿ ಮಧ್ಯಪ್ರದೇಶ ದ ಕೇ೦ದ್ರೀಯ ವಿಶ್ವವಿದ್ಯಾನಿಲಯವು ವೆಬಿನಾರ್‌ನಿಂದ ಹೊರಬಂದಿತು 

ಇ೦ಡಿಯನ್ ಎಕ್ಸ್ಪ್ರೆಸ್ ಪತ್ರಿಕ ವರದಿ, ೩೧ ಜುಲ್ಯ್ ೨೦೨೧ಸಾಗರದಲ್ಲಿಗೌರ್ ವಿಶ್ವವಿದ್ಯಾಲಯ. (ಎಕ್ಸ್‌ಪ್ರೆಸ್ ಫೈಲ್ ಫೋಟೋ)

ಒ೦ದು ಕೇ೦ದ್ರೀಯ ವಿಶ್ವ ವಿದ್ಯಾನಿಲಯವು ಪೋಲೀಸರ ತಾಕೀತಿನ೦ತರ ಯೋಜಿಸಿದ್ದ ಅಂತಾರಾಷ್ಟ್ರೀಯ ವೆಬಿನಾರ್ (ಇ೦ಟರ್ನೆಟ್ ಮೂಲಕ ನಡೆಸುವ ವಿಚಾರ ಗೋಷ್ಠಿ- ವೆಬ್ ಸೆಮಿನರ್)ನಿ೦ದ ಹೊರ ಬ೦ದಿತು.

 ಮಧ್ಯಪ್ರದೇಶದ ಸಾಗರದಲ್ಲಿರುವ ಡಾ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯ ಒ೦ದು ಕೇ೦ದ್ರೀಯ ವಿಶ್ವವಿದ್ಯಾಲಯ. 

ಈ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗವು ಜುಲೈ 30 ಮತ್ತು 31 ರಂದು ’ವೈಜ್ಞಾನಿಕ ಮನೋಭಾವದ ಸಾಧನೆಯಲ್ಲಿನ ಭಾಷಾ ಮತ್ತು ಸ೦ಸ್ಕೃತಿ  ಮೂಲದ  ಅಡೆತಡೆಗಳು’ ಎ೦ಬ ವಿಷಯದ ಬಗ್ಗೆ ಅಮೆರಿಕದ ಮಾಂಟ್‌ಕ್ಲೇರ್ ಸ್ಟೇಟ್ ಯೂನಿವರ್ಸಿಟಿಯೊಂದಿಗೆ ಜ೦ಟಿ-ಆತಿಥ್ಯದ ವಿಚಾರ ಗೋಷ್ಟಿಯನ್ನು ಯೋಜಿಸಿತ್ತು. .  

ಇದರಲ್ಲಿ ಭಾಗವಹಿಸುವರಲ್ಲಿ ಮಾಜಿ ಸಿಎಸ್‌ಐಆರ್ ಮುಖ್ಯ ವಿಜ್ಞಾನಿ ಗೌಹರ್ ರಜಾ, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಪೂರ್ವಾನಂದ್, ಐಐಟಿ ಹೈದರಾಬಾದ್‌ನ ಪ್ರಾಧ್ಯಾಪಕ ಹರ್ಜಿಂದರ್ ಸಿಂಗ್ ಮತ್ತು ಅಮೆರಿಕದ ಮ್ಯಾಸಚೂಸೆಟ್ಸ್‌ನ ಬ್ರಿಡ್ಜ್‌ವಾಟರ್ ರಾಜ್ಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.  ಅಸೀಮ್ ಹಸ್ನೇನ್ ಇವರು ಸೇರಿದ್ದರು.  ಆದರೆ   ಡಾ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯವು ಕಾರ್ಯಕ್ರಮದಿಂದ ಇದು ಪ್ರಾರಂಭವಾಗುವ ಎರಡು ಗಂಟೆಗಳ ಮೊದಲು ಹೊರಬಂದಿತು.

ಗುರುವಾರ, ಜುಲೈ ೨೯ರ೦ದು  ಸಾಗರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಸಿಂಗ್ ಅವರು ವಿಶ್ವವಿದ್ಯಾನಿಲಯದ ಉಪಕುಲಪತಿಗೆ ಎಚ್ಚರಿಕೆ ಪತ್ರವೊಂದನ್ನು ಬರೆದಿದ್ದಾರೆ.  ಅವರು "ವೆಬಿನಾರ್‌ನಲ್ಲಿ ಭಾಗವಹಿಸುವ ಭಾಷಣಕಾರರ ಹಿಂದಿನ ಇತಿಹಾಸ, ರಾಷ್ಟ್ರ ವಿರೋಧಿ ಮನಸ್ಥಿತಿ ಮತ್ತು ಜಾತಿ ಸಂಬಂಧಿತ ಹೇಳಿಕೆಗಳ ಬಗ್ಗೆ  ಉಲ್ಲೇಖಗಳು ಪೋಲೀಸರಿಗೆ ತಲುಪಿವೆ, " ಮತ್ತು "ಚರ್ಚಿಸಬೇಕಾದ ವಿಷಯ ಮತ್ತು ಪ್ರದರ್ಶಿಸಬೇಕಾದ ವಿಚಾರಗಳ ಬಗ್ಗೆ ಮುಂಚಿತವಾಗಿ ಸಮ್ಮತಿ ಪಡೆದುಕೊಳ್ಳಬೇಕು" ಎ೦ದು ಬರೆದಿದ್ದರು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಸಂಭವನೀಯ ಕ್ರಮಗಳ ಬಗ್ಗೆ ಎಸ್ ಪಿ  ಎಚ್ಚರಿಕೆ ನೀಡಿದರು.

ವಿಶ್ವವಿದ್ಯಾನಿಲಯದ ಆಡಳಿತವು ಮಾನವಶಾಸ್ತ್ರ ವಿಭಾಗವನ್ನು ಕಾರ್ಯಕ್ರಮಕ್ಕೆ ಅನುಮತಿ ಕೋರಿ ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆಯುವಂತೆ ಕೇಳಿತು. "ಸಚಿವಾಲಯದಿಂದ ಅನುಮತಿ ಪಡೆಯದಿದ್ದರೆ ಆನ್‌ಲೈನ್ ವೆಬಿನಾರ್ಅನ್ನು ಮುಂದೂಡಲು ಬೇಕು" ಎಂದು ಬರೆದಿದ್ದಾರೆ. ವಿಶ್ವವಿದ್ಯಾಲಯದ ಲೋಗೋ, ಹೆಸರು ಅಥವಾ ಕಾರ್ಯಕ್ರಮಕ್ಕಾಗಿ ವಿಶ್ವವಿದ್ಯಾಲಯದ ಯಾವುದೇ ವೇದಿಕೆಯನ್ನು ಬಳಸದಂತೆ ತಡೆಹಾಕಿದರು.

ಮೂಲಗಳು ಹೇಳುವಂತೆ ಮಾನವಶಾಸ್ತ್ರ ವಿಭಾಗವು ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದರೂ, ಪ್ರತಿಕ್ರಿಯೆಯ ಅನುಪಸ್ಥಿತಿಯಲ್ಲಿ, ಪ್ರೊಫೆಸರ್ ಗೌತಮ್ ಮತ್ತು ಅವರ ತಂಡವು ವೆಬಿನಾರ್‌ಗೆ ಎರಡು ಗಂಟೆಗಳ ಮೊದಲು ಹೊರಹೋಗಬೇಕಾಯಿತು. ಶುಕ್ರವಾರ, ಕಾರ್ಯಕ್ರಮವು ನಿಗದಿಯಂತೆ ಮುಂದುವರಿಯಿತು, ವಿಶ್ವವಿದ್ಯಾನಿಲಯದ ಭಾಗವಹಿಸುವಿಕೆ ಇಲ್ಲದೆ.

ಇಂಡಿಯನ್ ಎಕ್ಸ್‌ಪ್ರೆಸ್ ಉಪಕುಲಪತಿ ಜೆಡಿ ಅಹಿಯನ್ನು ಸಂಪರ್ಕಿಸಲು ಹಲವು ಪ್ರಯತ್ನಗಳನ್ನು ಮಾಡಿದರೂ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ..

ಪೋಲೀಸರ ಕ್ರಮಕ್ಕೆ ಹಿನ್ನೆಲೆಯಾಗಿ, ಜುಲೈ 22 ರ೦ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ಈ ಕಾರ್ಯಕ್ರಮದ  ಭಾಷಣಕಾರರ ವಿರುದ್ಧ ಆಕ್ಷೇಪಿಸುತ್ತಾ, ಪೋಲಿಸರಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಿದರು. ಎಬಿವಿಪಿಯ ಸಾಗರ ಜಿಲ್ಲಾ ಸಂಯೋಜಕರು ಎಸ್‌ ಪಿ ಸಿಂಗ್‌ಗೆ ಬರೆದ ಪತ್ರದಲ್ಲಿ, "ವೆಬಿನಾರ್‌ನಲ್ಲಿ ಇಬ್ಬರು ಭಾಷಣಕಾರರಾದ ಗೌಹರ್ ರಜಾ ಮತ್ತು ಪ್ರಾಧ್ಯಾಪಕ ಅಪೂರ್ವಾನ೦ದ  ದೇಶ ವಿರೋಧಿ ಮನಸ್ಥಿತಿಯವರು ಮತ್ತು ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ದೆಹಲಿ ಗಲಭೆಯಲ್ಲಿ ಅಪೂರ್ವಾನಂದರು ಭಾಗಿಯಾಗಿರುವುದನ್ನು ಪತ್ತೆ ಮಾಡಲಾಗಿದೆ ಮತ್ತು ಅದಕ್ಕಾಗಿ ಅವರನ್ನು ಪ್ರಶ್ನಿಸಲಾಗಿದೆ. ಗೌಹರ್ ರಝಾ  ಭಯೋತ್ಪಾದಕ ಅಫ್ಜಲ್ ಗುರುವಿಗಾಗಿ 'ಅಜ್ಮಲ್ ಪ್ರೇಮ್' ಕವಿತೆಯನ್ನು ಬರೆದಿದ್ದಾರೆ.”

ಎಸ್‌ ಪಿ ಸಿಂಗ್ ಅವರನ್ನು ಸಂಪರ್ಕಿಸಿದಾಗ, ವೆಬಿನಾರ್ ರೆಕಾರ್ಡ್ ಮಾಡಲು ಮತ್ತು ಅದನ್ನು ಸಂಘಟಿಸುವ ಮೊದಲು ಕಾಲೇಜಿನೊಳಗೆ ಎಲ್ಲಾ ವಿಭಾಗಗಳ ನಡುವೆ ಪರಸ್ಪರ ಒಪ್ಪಿಗೆ ಇದೆ ಎಂದು ಖಚಿತಪಡಿಸಿಕೊಳ್ಳಲು ಮಾತ್ರ ವಿಶ್ವವಿದ್ಯಾಲಯವನ್ನು ಕೇಳಲಾಗಿದೆ ಎಂದು ಎಸ್‌ ಪಿ ಹೇಳಿದರು.

"ಸೆಮಿನಾರ್‌ಗೆ ಆಕ್ಷೇಪಿಸುವ ಪತ್ರವು ಒಂದು ನಿರ್ದಿಷ್ಟ ಸಂಘಟನೆಯದ್ದಾಗಿದ್ದರೂ, ನಾವು ನಮ್ಮದೇ ಆದ ಗುಪ್ತಚರ ವರದಿಗಳನ್ನು ಹೊಂದಿದ್ದೇವೆ.  ಅದು  ಈ ವೆಬಿನಾರ್‌ ಇತರ ಕೆಲವರಿಗೂ  ಹಿಡಿಸುತ್ತಿಲ್ಲವಾಗಿದೆ ಎಂದು ಹೇಳಿದೆ. ಇದು ಒಂದು ನಿರ್ದಿಷ್ಟ ಜಾತಿ ಅಥವಾ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು, ವೆಬಿನಾರ್ ಸಾರ್ವಜನಿಕ ವೇದಿಕೆಯಾಗಿರುವುದರಿಂದ ಸಂಘಟಕರನ್ನು ಜಾಗರೂಕರಾಗಿರಲು ಪತ್ರ ಬರೆಯಲಾಗಿದೆ “ ಎಂದು ಎಸ್ಪಿ ಸಿಂಗ್ ಹೇಳಿದರು.

ಶುಕ್ರವಾರ ವೆಬ್ನಾರ್ ಸಮಯದಲ್ಲಿ, "ಅಫ್ಜಲ್ ಗುರು ಪ್ರೇಮಿ" ಎಂದು ಗುರುತಿಸಲ್ಪಟ್ಟ ಜನರನ್ನು ಮಾತನಾಡಲು ಏಕೆ ಕರೆಸಿಕೊಳ್ಳಲಾಗಿದೆ ಮತ್ತು ವಿಶ್ವವಿದ್ಯಾನಿಲಯದಲ್ಲಿ ಬುದ್ಧಿಜೀವಿಗಳ ಕೊರತೆ ಇದೆಯೇ ಎಂದು ಎಬಿವಿಪಿಯ ವಿಭಾಗದ ಸಂಯೋಜಕ ಶಿವಂ ಸೋನಿ ಅಪೂರ್ವಾನಂದರನ್ನು ಕೇಳಿದರು.

ಇದಕ್ಕೆ ಅಪೂರ್ವಾನಂದರು ಪ್ರತಿಕ್ರಿಯಿಸಿದರು: "ಇದು ಚರ್ಚೆಯ ವಿಷಯವಲ್ಲ ಮತ್ತು ನಾನು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಅಲ್ಲದೆ, ಈ ಆರೋಪಗಳನ್ನು ವಿವಿಧ ಜನರ ಮೇಲೆ ವಿಧಿಸಲಾಗುತ್ತದೆ, ಆದರೆ ಅವರ ಬಗ್ಗೆ ನಾವು ಇಲ್ಲಿ ಕಾಮೆಂಟ್ ಮಾಡುವುದು ಸೂಕ್ತವಾಗದು. ವೆಬ್‌ನಾರ್‌ನ ವಿಷಯಕ್ಕೆ ಅಂಟಿಕೊಳ್ಳೋಣ. ”

ನಂತರ ಮಾತನಾಡುತ್ತ ಅಪೂರ್ವಾನಂದ್ ಹೇಳಿದರು : "ಪೊಲೀಸರು, ಎಬಿವಿಪಿಯನ್ನು ಬಾಯಿ ಮುಚ್ಚಲು ಕೇಳುವ ಬದಲು, ಸಂಘಟಕರ ವಿರುದ್ಧ ತಿರುಗಿಬಿದ್ದಿದ್ದಾರೆ, ಇದು ತುಂಬಾ ದುಃಖಕರವಾಗಿದೆ. ಎಬಿವಿಪಿ ಅಸಮಾನವಾದ ಪ್ರಭಾವವನ್ನು ಬೀರುತ್ತಿದೆ. ವಿಶ್ವವಿದ್ಯಾನಿಲಯವು ಒತ್ತಡವನ್ನು ವಿರೋಧಿಸಲು ಪ್ರಯತ್ನಿಸಿದರು. ಆದರೂ, ಉಪಕುಲಪತಿ ಇದು ನಮ್ಮ ವ್ಯವಹಾರ ಎಂದು ತಿಳಿಸಿ ಪೋಲಿಸರಿಗೆ ಪತ್ರ ಬರೆಯಬಹುದಿತ್ತು.”


                                                  ಎಲ್ಲಿದೆ, ಶೈಕ್ಷಣಿಕ ಸ್ವಾತ೦ತ್ರ್ಯ ?




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು