ಹಿಂದುತ್ವ: ಹೆಸರಿನಲ್ಲಿ ಹೊರತುಪಡಿಸಿ ಎಲ್ಲದರಲ್ಲೂ ಭಾರತೀಯ ರಾಜ್ಯವು ಬಹುಸಂಖ್ಯಾತ ಧರ್ಮದ ನೆರಳಿನಲ್ಲಿದೆ. ಆದರೆ ಇದು ಇನ್ನೂ ಅಧಿಕೃತವಲ್ಲ.  


ಪಾರ್ಸಾ ವೆಂಕಟೇಶ್ವರ ರಾವ್ ಜೂ.




ಹಿಂದುತ್ವವು  ಕೋಣೆಯಲ್ಲಿರುವ ಆನೆ, ಆದರೆ ಎಲ್ಲರೂ ಅದನ್ನು ಗುರುತಿಸಲು ನಿರಾಕರಿಸುತ್ತಾರೆ. (ಟಿಪ್ಪಣಿ:ಇ೦ಗ್ಲಿಷ್ ಭಾಷೆಯಲ್ಲಿ ‘ಕೋಣೆಯಲ್ಲಿ ಆನೆ ಇದೆ’ (an elephant in the room) ಎ೦ದರೆ  ಜನರು ಮಾತನಾಡಲು ಇಷ್ಟಪಡದ ಸ್ಪಷ್ಟ ಸಮಸ್ಯೆ ಅಥವಾ ಕಷ್ಟಕರ ಪರಿಸ್ಥಿತಿ ಇದೆ ಎಂದು ಅರ್ಥ). ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ), ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಮತ್ತು ತಾವು ಎರಡೂ  ಸಂಘಟನೆಗಳಿಗೆ ಬೇಕಾಗಿರುವದು ರಾಷ್ಟ್ರೀಯತೆ, ರಾಷ್ಟ್ರೀಯ ಸಂಸ್ಕೃತಿ, ರಾಷ್ಟ್ರೀಯ ಭದ್ರತೆ ಇವು ಮಾತ್ರ, ಎ೦ದು ನಟಿಸುತ್ತವೆ. 


ಇನ್ನೊ೦ದೆಡೆ ಹಿಂದುತ್ವವು ಸರ್ಕಾರದ ಪ್ರಧಾನ ಸಿದ್ಧಾಂತವಾಗಿ ಈಗಾಗಲೇ ಹೊರಹೊಮ್ಮಿದೆ ಎಂದು ಒಪ್ಪಲು ಕಲ್ಲೆದೆಯ  ಜಾತ್ಯತೀತ ವಿಮರ್ಶಕರೂ  ನಿರಾಕರಿಸುತ್ತಾರೆ. ಹಿಂದುತ್ವವು ಅಧಿಕಾರದ ನಿಯ೦ತ್ರಣವನ್ನು ತೆಗೆದುಕೊಳ್ಳುವುದನ್ನು ತಡೆಯುವ ಹೋರಾಟದಲ್ಲಿ ತಾವು ನಿರತರಾಗಿದ್ದೇವೆ ಎಂದು ಅವರು ಹೇಳುತ್ತಲೇ ಇರುತ್ತಾರೆ. ಆದರೆ ಅದು ಈಗಲೇ ಆಡಳಿತದ ಸಿದ್ಧಾಂತವಾಗಿದೆ. ಹಿ೦ದುತ್ವವು ಕುದುರೆಯ ತಡಿಯಲ್ಲಿ ಈಗಾಗಲೇ ಆಸೀನವಾಗಿರುವಾಗ,   ಜಾತ್ಯತೀತವಾದಿಗಳಿಗೆ   ಅದನ್ನು ಹೋರಾಡಲು ವಿಭಿನ್ನ ತಂತ್ರ ಬೇಕಾಗುತ್ತದೆ - ಹಿ೦ದುತ್ವವು ಇನ್ನೂ ಆಸನವನ್ನು ಪ್ರವೇಶಿಸಲು ಪ್ರಯತ್ನಿಸುವ  ಹ೦ತದಲ್ಲಿ ಉಪಯೋಗಿಸುವ ತ೦ತ್ರ ಸಾಲದು.



ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಿಂದುತ್ವವನ್ನು, ಆ  ಪ್ರಕಾರದ ಗುರುತಿನ ಚೀಟಿಯನ್ನು ಅ೦ಟಿಸಿಕೊಳ್ಳದೆಯೇ,  ಅಧಿಕಾರೂಢವಾದ  ವಿಶ್ವಾಸ ಪ್ರಮಾಣವಾಗಿ  ಸ್ಥಾಪಿಸಿದ ಕೀರ್ತಿಯನ್ನು ಪಡೆಯುತ್ತಾರೆ. 


ವಿಪರ್ಯಾಸವೇನ೦ದರೆ, ಹಿಂದುತ್ವದ ಪಕ್ಷವಾದಿಗಳು  ಮತ್ತು  ಪಂಗಡದವರು  ತಮ್ಮ ನಿಜವಾದ  ಗುರಿಯ ಮೇರೆಗೆ ಜಾತ್ಯತೀತತೆಯನ್ನು ಬದಲಿಸಿ ಅದರ ಸ್ಥಳದಲ್ಲಿ   ಹಿಂದುತ್ವವನ್ನು ಸ್ಥಾಪಿಸುವದರಲ್ಲಿ  ಯಶಸ್ವಿಯಾಗಿದ್ದಾರೆಂದು ಒಪ್ಪಿಕೊಳ್ಳಲು ಸಾಕಷ್ಟು ಮುಜುಗರಕ್ಕೊಳಗಾಗಿದ್ದಾರೆ.  


ಬದಲಾಗಿ, ಪ್ರಧಾನಿ ಮೋದಿ ಇನ್ನೂ 'ಜಾತ್ಯತೀತತೆ' ಮತ್ತು 'ಪ್ರಜಾಪ್ರಭುತ್ವ' ಮತ್ತು 'ಮುಕ್ತ ಸಮಾಜ' ಎಂದು ಜಪಿಸುತ್ತಿದ್ದಾರೆ.  ‘ಹಿಂದುತ್ವ’ ಪದವನ್ನು ಉಚ್ಚರಿಸುವುದು ಮತ್ತು ಅದನ್ನು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಮತ್ತು  ಮುಕ್ತ ಸಮಾಜ ಇವುಗಳಿಗೆ ಸಮವೆಂದು ನಿರೂಪಿಸುವದು  ಇನ್ನೂ ಗೌರವಾನ್ವಿತ ಅಥವಾ ಸಭ್ಯವಲ್ಲ ಎಂಬ ಭಾವನೆ ಅವರ ಮನಸ್ಸಿನಲ್ಲಿದೆ. 


ಆರ್‌ಎಸ್‌ಎಸ್-ಬಿಜೆಪಿ ಜೋಡಿ ಹಿಂದುತ್ವವನ್ನು ಭಾರತದ ಸಿದ್ಧಾಂತವೆಂದು ಘೋಷಿಸುವುದಾದರೆ ಮೋದಿ ಮತ್ತು ಇತರರು ಅದರ ನಕಾರಾತ್ಮಕ  ಪರಿಣಾಮಗಳ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆಂದು ತೋರುತ್ತದೆ , ಏಕೆಂದರೆ ಅದು ಭಾರತವನ್ನು ಸಾಂವಿಧಾನಿಕ ಇಸ್ಲಾಮಿಕ್ ರಾಜ್ಯಗಳಾಗಿರುವ ಅನೇಕ ಮುಸ್ಲಿಂ ಬಹುಸಂಖ್ಯಾತ ದೇಶಗಳೊಂದಿಗೆ ಸಮನಾಗಿಸುತ್ತದೆ, ತದನ೦ತರ ಹಿಂದುತ್ವವು ಪಂಥೀಯ ಧರ್ಮವಲ್ಲ ಎಂಬ ವಾದವನ್ನು ಎತ್ತಿ ಹಿಡಿಯಲು ಕಷ್ಟಕರವಾಗುತ್ತದೆ 



ತನ್ನ ಎರಡನೆಯ  ಅವಧಿಯಲ್ಲಿ, ಮೋದಿ ಸರ್ಕಾರ ಅಘೋಷಿತ ಹಿಂದುತ್ವ ವಿಜಯಗಳನ್ನು ಗಳಿಸಿದೆ: ನೆಲಸಮವಾದ ಬಾಬರಿ ಮಸೀದಿಯ ಸ್ಥಳದಲ್ಲಿ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣ (ದೇವಾಲಯದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ೦ತೆ); ತ್ರಿವಳಿ ತಲಾಖಿನ  ಅಪರಾಧೀಕರಣ (ಇದನ್ನು ಅನೇಕ ಮುಸ್ಲಿಮರು ತಪ್ಪಾಗಿ ಸಮರ್ಥಿಸಿಕೊಂಡರು);  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ದುರ್ಬಲಗೊಳಿಸುವುದು ನಂತರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದು ಇವು ಬಹುಸಂಖ್ಯಾತ ಮುಸ್ಲಿ೦ ರಾಜ್ಯದ ಮೇಲೆ ಅಘೋಷಿತ ವಿಜಯವಾಗಿದೆ.


ಏಕರೂಪದ ನಾಗರಿಕ ಸಂಹಿತೆಗೆ ಒತ್ತಾಯಿಸಲಾಗುತ್ತಿದೆ;  ಇದೊ೦ದು  ಧಾರ್ಮಿಕ ಒಲವು ಇಲ್ಲದ ಆದರ್ಶವಾಗಿದ್ದರೂ,  ಆರ್‌ಎಸ್‌ಎಸ್ ಮತ್ತು ಬಿಜೆಪಿ ಜೋಡಿಯ ದೃಷ್ಠಿಯಲ್ಲಿ ಇದೊಂದು ಮುಸ್ಲಿಮರ ಸವಲತ್ತುಗಳನ್ನು ದುರ್ಬಲಗೊಳಿಸುವ ಮಾರ್ಗವಾಗಿ ತೋರುತ್ತವೆ. ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿನ ಜನಸಂಖ್ಯಾ ನೀತಿಗಳು ಸಹ ಪರೋಕ್ಷವಾಗಿ ಮುಸ್ಲಿಮರ ವಿರುದ್ಧ ಗುರಿ ಮಾಡುತ್ತವೆ. ಇದು ಸ್ವಾತಂತ್ರ್ಯದ ನಂತರದ ಹಿಂದುತ್ವ ಕಾರ್ಯಸೂಚಿಯ ದೀರ್ಘಕಾಲದ ಬೇಡಿಕೆಗಳ ಈಡೇರಿಕೆ.


ಭಾರತದಲ್ಲಿನ ಮುಸ್ಲಿಮರು ಹಿಂದೂಗಳೊಂದಿಗೆ ಒಂದೇ ‘ಡಿಎನ್‌ಎ’ ಹಂಚಿಕೊಳ್ಳುತ್ತಾರೆ - ಅ೦ದರೆ ಇಬ್ಬರೂ ಒ೦ದೇ ಜನಾ೦ಗೀಯ  ಮೂಲದವರು - ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸೈಧ್ಧಾ೦ತಿಕ ಒತ್ತಡವು  ಭಾರತದಲ್ಲಿನ ಮುಸ್ಲಿಮರು ಮೂಲತಃ ಹಿಂದೂಗಳೆಂದು ಹೇಳುವ ಒಂದು ವಿಧಾನವಾಗಿದೆ;  ಇದು ಹಿಂದೂಗಳನ್ನು ಹೊರತುಪಡಿಸಿ ಇತರ ಜನರ ಧಾರ್ಮಿಕ ನಂಬಿಕೆಗಳಿಗೆ ಅಗೌರವ ತೋರುವ ಒಂದು ಮಾರ್ಗವಾಗಿದೆ. ಹಿಂದೂಗಳು ಮತ್ತು ಸಿಖ್ಖರ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಮತ್ತು ಸಿಖ್ಖರು ಇನ್ನೊಂದು ಹೆಸರಿನಿಂದ ಹಿಂದೂಗಳಾಗಿದ್ದರು ಎ೦ಬ ಬಲಪಂಥೀಯ ಹಿಂದೂಗಳ ವಾದವು ಸಿಖ್ಖಧರ್ಮದವರಿಗೆ ಯಾವಾಗಲೂ ರೇಗಿಸುವ ತರ್ಕವಾಗಿದೆ. 


19 ನೇ ಶತಮಾನದ ಬ್ರಿಟಿಷ್-ಭಾರತೀಯ ಭಾರತ-ವಿಷಯ ತಜ್ಞರುಗಳು ಮತ್ತು ಇಂಗ್ಲಿಷ್-ವಿದ್ಯಾವಂತ ಭಾರತೀಯರು ವ್ಯಾಖ್ಯಾನಿಸಿದಂತೆ ಹಿಂದೂ ಧರ್ಮವು ಅತ್ಯಂತ ಸಹಿಷ್ಣು ಧರ್ಮವಾಗಿತ್ತು ಮತ್ತು ಇದು ಹಿಂದೂ ಧರ್ಮದೊಳಗಿನ ಇತರ ಪಂಥಗಳನ್ನು ಮತ್ತು ಪರ ಧರ್ಮಗಳನ್ನು ಮೈತ್ರಿಯ ಭಾವನೆಯಿ೦ದ  ಅಂಗೀಕರಿಸಿತು ಎಂಬ ಕಾರಣಗಳನ್ನು ಮು೦ದಿಡುತ್ತಾ ಅನೇಕ ಹಿಂದುತ್ವ ವಿಚಾರವಾದಿಗಳು ಹಿಂದುತ್ವವು  ಜಾತ್ಯತೀತತೆಯ ಇನ್ನೊ೦ದು ಹೆಸರು, ಎಂದು ವಾದಿಸುತ್ತಾರೆ. 


ವಾಸ್ತವವೆಂದರೆ, ‘ಅಬ್ರಹಾಮಿಕ್’ ಧರ್ಮ (ಯೆಹೂದಿ, ಕ್ರೈಸ್ತ, ಮುಸ್ಲಿ೦) ಗಳಿಗಿಂತ ಭಿನ್ನವಾಗಿ ಹಿಂದೂ ಧರ್ಮವು ಸಹಿಷ್ಣು ಎಂದು  ವಾದಿಸುತ್ತಿದ್ದ ಅದೇ ಸಂದರ್ಭದಲ್ಲಿ  ಬೌದ್ಧಿಕವಾಗಿ ಕೀಳರಿಮೆ ಹೊಂದಿದ್ದಾರೆ ಎನ್ನುವ ಕಾರಣ ಎತ್ತಿ, ಅವರು ಇತರ ಧರ್ಮಗಳ ಮೇಲೆ ತಿರಸ್ಕಾರವನ್ನು ಸುರಿಸಿದ್ದರು. ಇದು ಉದ್ದೇಶಪೂರ್ವಕ ಬೂಟಾಟಿಕೆ ಅಥವಾ ಖಳನಾಯಕನ ಕೃತ್ಯವಲ್ಲ. ವಸಾಹತುಶಾಹಿಗಳಿಂದ ‘ಒರಟು, ಅನಾಗರಿಕ’ ಜನರೆ೦ದು ಕರೆಯಲ್ಪಟ್ಟದ್ದ್ರರಿ೦ದ  ಇಂಗ್ಲಿಷ್-ವಿದ್ಯಾವಂತ ಹಿಂದೂ ತಿರುಗಿ ಹೊಡೆಯಲೇ ಬೇಕಾಯಿತು. ಈ ನಡತೆ ತನ್ನದೇ ಆದ ಬಲೆಗಳನ್ನು ಹೊಂದಿತ್ತು- ಆತ್ಮರಕ್ಷಣೆಯಲ್ಲಿ ಏನು ಹೇಳಲಾಯಿತೋ  ಅದು ಶೀಘ್ರದಲ್ಲೇ ಪಾಶ್ಚಿಮಾತ್ಯ ಮಾದರಿಯ ವಿಷಪೂರಿತ ರಾಷ್ಟ್ರೀಯತೆಯನ್ನು ಅನುಕರಿಸಿತು, ಕುಪಿತ ಬಲಪಂಥೀಯ ರಾಷ್ಟ್ರೀಯವಾದಿಗಳ ಯುದ್ಧದ ಕೂಗಾಯಿತು,.


ಹಿ೦ದುತ್ವದ ಮೂಲ ವಿಚಾರವೇನ೦ದರೆ, ಹಿಂದೂಗಳು ಜನಸಂಖ್ಯೆಯ 84% ರಷ್ಟಿದ್ದು, ಎಲ್ಲಾ ವಿಷಯಗಳಲ್ಲೂ ಅವರು ಅಂತಿಮವಾದ ನಿರ್ಧಾರ ಮಾಡಬೇಕು, ಇದು ಬಹುಸ೦ಖ್ಯಾಕರ ಆಡಳಿತ,   ನಿಜಕ್ಕೂ ಪ್ರಜಾಪ್ರಭುತ್ವದ ತರ್ಕ. . 


ಎಡ್ಮಂಡ್ ಬರ್ಕ್ ಮತ್ತು ಜಾನ್ ಸ್ಟುವರ್ಟ್ ಮಿಲ್‌ರಂತಹ ಇಂಗ್ಲಿಷ್ ರಾಜಕೀಯ ಚಿಂತಕರು ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವಗಳಲ್ಲಿ ಬಹುಸಂಖ್ಯಾತರ ಪ್ರಾಬಲ್ಯದ ಅಪಾಯಗಳನ್ನು  ಅ೦ದಿಗೇ  ಗುರುತಿಸಿದ್ದರು. ತಮ್ಮ ಸಂಸದೀಯ ಕ್ಷೇತ್ರವಾದ ಬ್ರಿಸ್ಟಲ್‌ನಲ್ಲಿ ಮತದಾರರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಬರ್ಕ್ ಅವರು (ಮತದಾರರು) ಏನು ಮಾಡಬೇಕೆಂದು  ಬಯಸುತ್ತಾರೋ ಅದನ್ನೇ ತಾನು ಮಾಡಲಾಗುವುದಿಲ್ಲ.  ಆದರೆ ಅವರು ಯಾವುದನ್ನು ಮಾಡುವದು ಸರಿಯಾದದ್ದೋ ಅದನ್ನು ಅವರಿಗೆ (ಮತದಾರರಿಗೆ) ತಿಳಿಸುತ್ತಾರೆ, ಯಾಕ೦ದರೆ ಹಾಗೆ ಮಾಡಲು ಅವರು ಸ್ಥಾನಾರ್ಥಿಯಾಗಿ  ನೈತಿಕವಾಗಿ ಬಧ್ಧರಾಗಿದ್ದರು, ಎ೦ದು ವಿವರಿಸಿದರು.


ಬಹುಸಂಖ್ಯಾತರ ದಬ್ಬಾಳಿಕೆಯ ಬಗ್ಗೆ ಮಾತನಾಡಿದಾಗ  ಮಿಲ್ ಇದರ ಅಪಾಯಗಳಬಗ್ಗೆ ಎಚ್ಚರಿಕೆ ನೀಡಿದರು. ವಿಶೇಷವೆಂದರೆ, ಆ ಸಮಯದಲ್ಲಿ ಇಂಗ್ಲೆಂಡ್‌ನಲ್ಲಿ ಸಾರ್ವತ್ರಿಕ ಮತದಾನದ ಹಕ್ಕು ಇರಲಿಲ್ಲ. 1832 ರ ಸುಧಾರಣೆಯು ಆಸ್ತಿಯನ್ನು ಹೊಂದಿದ್ದ ಮತ್ತು ತೆರಿಗೆ ಪಾವತಿಸಿದ ಮತದಾರರಿಗೆ ಬಾಗಿಲು ತೆರೆಯಿತು. ಮತದಾನದ ಹಕ್ಕುಗಳ 1867 ವಿಸ್ತರಣೆ ಇನ್ನೂ ಭವಿಷ್ಯದಲ್ಲಿದೆ, ಮತ್ತು ಮಹಿಳೆಯರು ಮುಂದಿನ ಶತಮಾನದಲ್ಲಿ ಮಾತ್ರ ಮತದಾನದ ಹಕ್ಕನ್ನು ಪಡೆಯುವವರಿದ್ದರು


ವೈಚಾರಿಕತೆಗೆ ವಿರೋಧಿ ಸಾಮಾಜಿಕ ನಂಬಿಕೆ ವ್ಯವಸ್ಥೆಗಳಿಗೆ ಸಾಕಷ್ಟು ಅವಕಾಶ ನೀಡುತ್ತಿದ್ದರೂ ಮೋದಿ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಂಬಲಿಸುವುದಾಗಿ ಹೇಳಿಕೊಂಡಿದೆ. ಪಶ್ಚಿಮ, ಚೀನಾ ಮತ್ತು ಜಪಾನ್‌ಗೆ ಹೋಲಿಸಿದರೆ ಸಾಧಾರಣ ಪ್ರಮಾಣದಲ್ಲಿದ್ದರೂ ಭಾರತಕ್ಕೆ ಅಂಚನ್ನು ಕೊಡುವುದು ಅದರ ವಿಜ್ಞಾನ ಮತ್ತು ತಾಂತ್ರಿಕ ನೆಲೆ ಎಂಬ ಒಪ್ಪಿಗೆಯೂ ಇದೆ. ಜಾತ್ಯತೀತ, ನೆಹರೂ ಯುಗದಲ್ಲಿ ಅಡಿಪಾಯ ಹಾಕಿದ ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿನ ಸಾಧನೆಗಳ ಮೂಲಕವೇ ಹಿಂದುತ್ವದ ರಾಷ್ಟ್ರೀಯತಾವಾದಿ ಹೆಮ್ಮೆಯನ್ನು ತೃಪ್ತಿಪಡಿಸಬಹುದು. ಭಾರತದ ಉಡುಗೊರೆಯಾಗಿ ಯೋಗವನ್ನು ಜಗತ್ತಿಗೆ ಹರಡಿದ ಬಗ್ಗೆ ಮೋದಿ ಗರ್ವಪಡುತ್ತಿದ್ದರೂ, ಯೋಗದ ಸಮರ್ಥನೆಯನ್ನು ಅದರ ತರ್ಕಬದ್ಧ ಪ್ರಯೋಜನಗಳಿಂದ ಪಡೆಯಲಾಗುತ್ತಿದೆ. 


ಆದರೆ 'ಹಿಂದೂಗಳು ಮೊದಲು' ಎಂಬ ಹಿಂದುತ್ವದ ಮೂಲ ಪ್ರಬಂಧವು ವಿಶೇಷವಾಗಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ವಿರುದ್ಧ ಅಸಹಿಷ್ಣುತೆಯ ಮನಸ್ಥಿತಿಯನ್ನು ಸೃಷ್ಟಿಸುತ್ತದೆ. ಭಾರತೀಯ ರಾಜ್ಯ ಇಂದು ಹಿಂದುತ್ವ ಪ್ರಾಬಲ್ಯದ ನೆರಳಿನಲ್ಲಿದೆ, ಆದರೆ ಇದು ಇನ್ನೂ ಅಧಿಕೃತವಾಗಿಲ್ಲ. 


(ಬರಹಗಾರ ನವದೆಹಲಿ ಮೂಲದ ರಾಜಕೀಯ ನಿರೂಪಕ)


22-7-2021


ಇಲ್ಲಿಇನ್ನಷ್ಟು: https://www.deccanherald.com/opinion/main-article/hindutva-in-all-but-name-1011339.html


ಕಾಮೆಂಟ್‌ಗಳು

  1. ಅಭಿನಂದನೆಗಳು, ಸುಂದರ್. ಇಷ್ಟು ಕಡಿಮೆ ಸಮಯದಲ್ಲಿ ನೀವು ಸಾಧಿಸಿದ ವ್ಯಾಪ್ತಿ ಮತ್ತು ಆಳದ ಬಗ್ಗೆ ನಾನು ಆಶ್ಚರ್ಯಚಕಿತನಾಗಿದ್ದೇನೆ. ದಯವಿಟ್ಟು ಒಳ್ಳೆಯ ಕೆಲಸವನ್ನು ಮುಂದುವರಿಸಿ.

    ಎಸ್.ಕೃಷ್ಣ ಕುಮಾರ್

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವ೦ದನೆಗಳು. ನಿಮ್ಮ ಮೆಚ್ಚಿಗೆ ನನ್ನ ಪ್ರಯಾಸವನ್ನು ಸಾರ್ಥಕಗೊಳಿಸುತ್ತದೆ.

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು