ಮಾಧ್ಯಮ ವಾರ್ತೆ ೧
ಅಧಿಕಾರಕ್ಕೆ ಸತ್ಯವನ್ನು ಮಾತನಾಡುವ ಸಾಂಪ್ರದಾಯಿಕ ಪಾತ್ರವನ್ನು ಸುದ್ದಿ ಸಂಸ್ಥೆಗಳು ಏಕೆ ಸಂಪೂರ್ಣವಾಗಿ ಬಿಟ್ಟುಕೊಟ್ಟಿವೆ?
ಆನಿಂದ್ಯೊ ಚಕ್ರವರ್ತಿ ನ್ಯೂಸ್ ಕ್ಲಿಕ್ ಯೂಟ್ಯೂಬ್ ವರದಿಯ(೨೯ ಜೂನ್ ೨೦೨೧) ಸಾರಾಂಶ
ಸಾಂಪ್ರದಾಯಿಕವಾಗಿ ಪತ್ರಿಕೋದ್ಯಮವು ಎಲ್ಲ ಜನರ, ಸಾಮಾನ್ಯ ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುವ ವ್ಯವಸ್ಥೆಯಾಗಿರಬೇಕು. ಮತ್ತುನಿರಂತರವಾಗಿ ಪ್ರಶ್ನೆ ಕೇಳುವುದುಅದರ ಕೆಲಸವಾಗಿತ್ತು. ಅಧಿಕಾರಸ್ಥರ ಕಾರ್ಯಾಚರಣೆಯನ್ನು ಬಹಿರಂಗಪಡಿಸುವುದು, ಅಧಿಕಾರದ ಮತ್ತು ರಾಜಕೀಯ ವ್ಯವಸ್ಥೆಯಾಗಲಿ, ಅಥವಾ ವಾಣಿಜ್ಯ ಸಾಂಸ್ಥಿಕ ವ್ಯವಸ್ಥೆಯಾಗಲಿ, ಸ೦ಪೂರ್ಣ ಮಟ್ಟಿಗೆ , ಅ೦ದರೆ ಜನರ ಸಾಮಾನ್ಯ ಒಳಿತಿಗೆ ಹಾನಿಕರ ಆಗುವ ಮಟ್ಟಿಗೆ, ಶಕ್ತಿಯುತವಾಗದಂತೆ ನೋಡಿಕೊಳ್ಳುವುದು, ಇವೇ ಪತ್ರಿಕೋದ್ಯಮದ ಹೊಣೆ.
ಆದರೆ ನ್ಯೂಸ್ ರೂಂಗಳು ಇಂದು ಸಂಪೂರ್ಣವಾಗಿ ಸರ್ಕಾರ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತವೆ. ಸರ್ಕಾರ ತನ್ನದೇ ಆದ ಪ್ರಚಾರವನ್ನು ಮಾಡುತ್ತದೆ. 2019-20ರಲ್ಲಿ ಕೋವಿಡ್ ನಮ್ಮನ್ನು ಹೊಡೆಯುವ ಒಂದು ವರ್ಷದ ಮೊದಲು ಮೋದಿ ಸರ್ಕಾರ ರೂ 700 ಕೋಟಿ ಖರ್ಚು ಮಾಡಿದೆ ಜಾಹೀರಾತಿಗಾಗಿ. ಅದರಲ್ಲಿ ಹೆಚ್ಚಿನವು ಪ್ರಚಾರವಾಗಿದ್ದರೂ ಕೆಲವು ಉಪಯುಕ್ತ ಮಾಹಿತಿಯನ್ನು ಸಹ ನೀಡುತ್ತದೆ. ಆದರೆ ಸರ್ಕಾರವು ಎಲ್ಲೆಲ್ಲಿ ಸ್ವಪ್ರಶಂಸೆ ಮಾಡುತ್ತದೆಯೋ, ಅದರ ಸತ್ಯಾಸತ್ಯತೆಯ ಬಗ್ಗೆ ಪತ್ರಿಕೋದ್ಯಮವು ಪ್ರಶ್ನೆಗಳನ್ನು ಕೇಳಬೇಕು ಮತ್ತು ಯಾವುದೇ ಆಧಾರರಹಿತ ಹೆಗ್ಗಳಿಕೆಗಳನ್ನು ಬಹಿರಂಗಪಡಿಸಬೇಕು.
ಸುದ್ದಿ ಸಂಸ್ಥೆಗಳು ತಮ್ಮ ಸಾಂಪ್ರದಾಯಿಕ ಪಾತ್ರವನ್ನು ಕಳೆದುಕೊಂಡಿರುವ ದೊಡ್ಡ ಕಾರಣವೆಂದರೆ, ಇಂದು ಸುದ್ದಿ ಸಂಸ್ಥೆಗಳು ಸಂಪೂರ್ಣವಾಗಿ ಕಾರ್ಪೊರೇಟ್ ಸ೦ಸ್ಥೆಗಳ ಒಡೆತನದಲ್ಲಿ ಅಥವಾ ಇತರ ಜತೆಗೂಡಿದ ಕಂಪನಿಗಳ ಹಿತಾಸಕ್ತಿಗಳ - ಉತ್ಪಾದನೆ ಮತ್ತು / ಅಥವಾ ವಸ್ತುಗಳನ್ನು ಮಾರಾಟ ಮಾಡುವುದು, ಮನರಂಜನೆ, ಕಟ್ಟಡ ನಿರ್ಮಾಣ ಇತ್ಯಾದಿಗಳನ್ನು ಅಂದರೆ ಶುದ್ಧ ವಾಣಿಜ್ಯ, ಲಾಭ ಆಧಾರಿತ ಚಟುವಟಿಕೆಗಳಲ್ಲಿ ತೊಡಗಿರುವ ಕ೦ಪನಿಗಳು ಇವುಗಳ - ಕಪಿ ಮುಷ್ಟಿಯಲ್ಲಿ ಸಿಕ್ಕಿ ಹಾಕಿಕೊ೦ಡಿವೆ.
ಆದ್ದರಿಂದ ಮಾಧ್ಯಮ ಎನ್ನುವ ಅವರ ಪಾತ್ರ, ಸುದ್ದಿ ವಿಷಯದ ವೃತ್ತಿ ಅಥವಾ ಸಾರ್ವಜನಿಕ ವ್ಯವಹಾರಗಳು ಒ೦ದು ಕಡೆಯಾದರೆ, ಇನ್ನೊ೦ದುಕಡೆ ವಾಣಿಜ್ಯ, ಇವುಗಳ ನಡುವಿನ ಸಂಘರ್ಷದಲ್ಲಿ ಸೆಳೆದು ಬಿದ್ದಿದೆ. ಮಾಧ್ಯಮ ಲೋಕದಲ್ಲಿ ಸ್ವಲ್ಪ ಮಟ್ಟಿಗೆ ಸ್ವತಂತ್ರರಾಗಿರುವವರು ಸಹ ತಮ್ಮ ಆದಾಯಕ್ಕಾಗಿ ದೊಡ್ಡ ಕಂಪನಿಗಳಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ವೆಚ್ಚಗಳನ್ನು ಪೂರೈಸಲು ವೀಕ್ಷಕ ಅಥವಾ ಓದುಗರ ಚಂದಾದಾರಿಕೆ ಸಾಕಾಗುವುದಿಲ್ಲ. ಹೀಗಾಗಿ ಪತ್ರಿಕೆಗಳು ಸೇರಿದಂತೆ ಸುದ್ದಿ ಸ೦ಸ್ಥೆಗಳು ಸುದ್ದಿಗಳನ್ನು ಹೊರಹಾಕಲು ಕಾರ್ಪೊರೇಟ್ ಹಣದ ಮೇಲೆ ಹೆಚ್ಚಿನ ಅವಲಂಬನೆಗೆ ಕಾರಣವಾಗುತ್ತದೆ. ಕಾರ್ಪೊರೇಟ್ ನೀತಿಯನ್ನು ನೀವು ಪ್ರಶ್ನಿಸಲು ಬಯಸುತ್ತೀರಾ, ಆಗ ನಿರ್ದಿಷ್ಟ ಕಾರ್ಪೊರೇಟ್ ಸ೦ಸ್ಥೆ ಕೆಲವು ಜಾಹೀರಾತುಗಳನ್ನು ಹಿಂಪಡೆಯಬಹುದು. ಅಥವಾ ನಿಮ್ಮ ಮಾರಾಟ ತಂಡದಿಂದ ದೂರವಾಣಿ ಕರೆ ಬರಬಹುದು - ಈ ವ್ಯಕ್ತಿಗಳು ಜಾಹೀರಾತನ್ನು ಹಿಂತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಏಕೆಂದರೆ ನಿಮ್ಮ ಕಥೆಗಳು ಏನೆಂದು ಅವರಿಗೆ ತಿಳಿದಿದೆ. ಅದು ಸಂಭವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನೀವು ಮಾರಾಟ ತಂಡದೊಂದಿಗೆ ಹೋರಾಡಬೇಕು.
ಕಾರ್ಪೊರೇಟ್ ಸಾಂಸ್ಥಿಕ ಹಿತಾಸಕ್ತಿಗಳು ಎದಿರು ಬಂದಾಗ ಪ್ರತಿಯೊಂದು ಸುದ್ದಿ ಸಂಸ್ಥೆಯು ಆ ವಾಣಿಜ್ಯ ಸಂಸ್ಥೆಗಳ ಪರವಾಗಿರುವುದನ್ನು ನೋಡುತ್ತೇವೆ. ಸರ್ಕಾರಗಳು ತುಂಬಾ ಸುಲಭವಾಗಿ ಸುದ್ದಿ ಸ೦ಸ್ಥೆಗಳನ್ನು ನಿಯಂತ್ರಿಸುವುದು ಏಕೆಂದರೆ ಕಂಪನಿಗಳು ಒಂದಿಲ್ಲೊ೦ದು ನಿಯಮಗಳಿಗೆ ಅನುಗುಣವಾಗಿರದ ಕಾರಣ ದುರ್ಬಲವಾಗಬಹುದು. ಸರಕಾರಿ ಏಜೆನ್ಸಿಗಳು ತಿರುಪುಮೊಳೆಗಳನ್ನು ಬಿಗಿಗೊಳಿಸುವುದು ತುಂಬಾ ಸುಲಭ. ಆದ್ದರಿಂದ ಯಾವುದೇ ಕಂಪನಿಯು ಈ ಉಪದ್ರವವನ್ನು ಎದುರಿಸಲು ಬಯಸುವುದಿಲ್ಲ.
ಸುದ್ದಿ ಸಂಘಟನೆಗಳು ಸರ್ಕಾರದ ಪರವಾಗಲು ಇದು ಒಂದು ಕಾರಣವಾಗಿದೆ ಏಕೆಂದರೆ ಜಾಹೀರಾತುದಾರರು ಮತ್ತು ಅವರ ಕಾರ್ಪೊರೇಟ್ ಮಾಲೀಕರಿಂದ ಸರ್ಕಾರದ ಪರವಾಗಿ ಒತ್ತಡವಿದೆ.
ನಡೆಯುತ್ತಿರುವ ಇನ್ನೊಂದು ವಿಷಯವೆಂದರೆ, ಕಾರ್ಪೊರೇಟ್ ಒತ್ತಡದಿಂದಾಗಿ, ಸುದ್ದಿ ಸಂಸ್ಥೆಗಳ ಮಾಲೀಕರ ಮೇಲೆ ನೇರ ಒತ್ತಡದಿಂದಾಗಿ, ಟೀಕಿಸುವ ಅನೇಕ ಪತ್ರಕರ್ತರನ್ನು ಸ್ವತ೦ತ್ರ ಅಭಿಪ್ರಾಯದ ಅನೇಕ ಪತ್ರಕಾರರನ್ನು ವಜಾ ಮಾಡಲಾಗಿದೆ. ಅಥವಾ ಕೆಲಸ ಮಾಡುವುದನ್ನು ಅವರಿಗೆ ಕಠಿಣಗೊಳಿಸಲಾಗಿದೆ , ಆದ್ದರಿಂದ ಅವರು ಕೆಲಸನ್ನೇ ತೊರೆದಿದ್ದಾರೆ. ಅನೇಕ ಹಿರಿಯ , ಉತ್ತಮ ತನಿಖಾ ಪತ್ರಕರ್ತರಾಗಿ ಒಳ್ಳೆ ಹೆಸರು ಗಳಿಸಿದ ವೃತ್ತಿಪರರನ್ನು ಈ ಸ್ಥಳದಿಂದ ಕಣ್ಮರೆಯಾಗಿರುವುದನ್ನು ನೀವು ನೋಡುತ್ತೀರಿ. ಅವರೆಲ್ಲರೂ ಇಂದು ಒ೦ಟಿಗರಾಗಿದ್ದಾರೆ ಮತ್ತು ಅವರ ವ್ಯಾಪ್ತಿಯನ್ನು ತೀವ್ರವಾಗಿ ಮೊಟಕುಗೊಳಿಸಲಾಗಿದೆ. ಆ ಕಾರಣದಿಂದಾಗಿ ಎಲ್ಲದಕ್ಕೂ ‘ಹೌದು’ ಎಂದು ಹೇಳಲು, ‘ಸರ್ಕಾರ ಒಳ್ಳೆಯದು, ಈ ಕಂಪನಿ ಒಳ್ಳೆಯದು’ ಎ೦ದು ಹೇಳಲು ಸಿದ್ಧರಿರುವವರು, ಮತ್ತು ಯಾವಾಗಲೂ ಅಧಿಕಾರದಲ್ಲಿರುವವರೊಂದಿಗೆ ಹೊ೦ದಿಕೊಳುವವರು, ಇ೦ಥವರು ವೃತ್ತಿಯಲ್ಲಿ ಏರಿದ್ದಾರೆ ಮತ್ತು ಅವರನ್ನು ಸಂಪಾದಕರನ್ನಾಗಿ ಮಾಡಲಾಗಿದೆ. ಈ ನೀತಿಗಳು ಸುದ್ದಿ ಸಂಸ್ಥೆಗಳಲ್ಲಿ ಎಲ್ಲೆಡೆ ಹರಡಿವೆ
ಅದಕ್ಕಾಗಿಯೇ ನೀವು ನೋಡುವ ಅಥವಾ ಓದುವ ಯಾವುದೇ ಸುದ್ದಿ ಸರ್ಕಾರವನ್ನು ಉತ್ತೇಜಿಸುವ, ಕಾರ್ಪೊರೇಟ್ ಸಂಸ್ಥೆಗಳನ್ನು ಉತ್ತೇಜಿಸುವ, ಮತ್ತು ರಾಜಕೀಯದಲ್ಲಿ ಪ್ರತಿ ಪಕ್ಷದಲ್ಲಿರುವವರನ್ನು ವಿರೋಧಿಸುವ, ಸಂಗತಿಯಾಗಿದೆ.
ಪತ್ರಕರ್ತರು ಸಾರ್ವಜನಿಕ ರಂಗದಲ್ಲಿ ತೆಗೆದುಕೊಂಡು ಪ್ರಸ್ತುತಪಡಿಸಿದ ವಿಷಯಗಳಲ್ಲಿ ಒಂದಾಗಿದ್ಧ ವ್ಯತಿರಿಕ್ತ ಧ್ವನಿ ಈಗ ವಾಸ್ತವಿಕವಾಗಿ ಕಣ್ಮರೆಯಾಗಿದೆ. ಈಗ ನೋಡುವದು ಸ್ವತ೦ತ್ರ ಅಥವ ಪ್ರತಿಕೂಲ ದೃಷ್ಟಿಕೋನ ಗಳ ಸೆನ್ಸಾರ್ಶಿಪ್. ಆರ್ಥಿಕತೆಯ ವಿಷಯದಲ್ಲಿ ಮುಕ್ತ ಮಾರುಕಟ್ಟೆಗಳನ್ನು ಟೀಕಿಸುವ ಯಾವುದೇ ದೃಷ್ಟಿಕೋನವನ್ನು ಸುಮಾರು 20 ವರ್ಷಗಳ ಹಿಂದೆಯೇ ಮುಖ್ಯವಾಹಿನಿಯ ಮಾಧ್ಯಮದಿಂದ ತೆಗೆದುಹಾಕಲಾಗಿದೆ. ಮುಖ್ಯವಾಹಿನಿಯ ಸುದ್ದಿಗಳಲ್ಲಿ ನಿರ್ದಿಷ್ಟ ರೀತಿಯ ರಾಜಕೀಯ ಧ್ವನಿ ಮಾತ್ರ ಕೇಳಿಬರುವುದು ಹೊಸ ಘಟನೆಯಾಗಿದೆ. ಆದರೆ ಆರ್ಥಿಕತೆಯ ವಿಷಯಕ್ಕೆ ಬಂದಾಗ ಮುಕ್ತ ಮಾರುಕಟ್ಟೆ ನವ-ಉದಾರವಾದಿ (neo-liberalism) ನೀತಿಗಳಿಗೆ ಸರ್ವಾನುಮತದ ಬೆಂಬಲವಿದ್ದು ಮತ್ತು ಅವುಗಳನ್ನು ಟೀಕಿಸುವ ಯಾವುದನ್ನೂ, ಅಥವಾ ಸಮಾಜವಾದದ ಸೋ೦ಕನ್ನು ಹೊಂದಿರುವ ಯಾವುದನ್ನೂ ಸುದ್ದಿ ಪುಟಗಳಿಂದ ಮತ್ತು ಟಿ ವಿ ಸುದ್ದಿಗಳಿಂದ ತೆಗೆದುಹಾಕುವದು ಅನೇಕ ವರ್ಷಗಳಿ೦ದ ವಾಡಿಕೆಯಾಗಿದೆ.
ಇನ್ನೊ೦ದೆದ್ದರೆ ಪ್ರತಿ ನ್ಯೂಸ್ ರೂಂನಲ್ಲಿ ಅಧಿಕಾರದ ಒ೦ದು ಬಲೆ ಇದೆ. ಗರಿಷ್ಠ ಶಕ್ತಿ ಮತ್ತು ಅಧಿಕಾರವನ್ನು ಹೊಂದಿರುವ ಮೂರು ವಿಶಾಲ ಗು೦ಪುಗಳಿವೆ. ಮೊದಲನೆಯದು ರಾಜಕೀಯ ವರದಿಗಾರರು ಏಕೆಂದರೆ ರಾಜಕೀಯ ಸುದ್ದಿ ಯಾವಾಗಲೂ ಮುಖ್ಯ ಶೀರ್ಷಿಕೆಯಾಗುತ್ತದೆ. ಎರಡನೆಯದು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಯ ವಿಷಯಗಳು. ಇದು ರಾಜ್ಯದೊಂದಿಗೆ ನಿಕಟ ಸಂಬಂಧ ಹೊಂದಿದೆ ಮತ್ತು ಪ್ರಬಲರು ಅದರಲ್ಲಿ ಆಸಕ್ತಿ ಹೊಂದಿದ್ದಾರೆ. ಅಂತಿಮವಾಗಿ ವ್ಯವಹಾರ ವಾಣಿಜ್ಯಗಳನ್ನು ಒಳಗೊಂಡಿರುವ ಅಂದರೆ ಕಾರ್ಪೊರೇಟ್ ಸುದ್ದಿ ಮತ್ತು ಷೇರು ಮಾರುಕಟ್ಟೆ ಸುದ್ದಿ. ಅವರಿಗೆ ಒಂದು ನಿರ್ದಿಷ್ಟ ಮಟ್ಟದ ಅಧಿಕಾರವೂ ಇದೆ; ಅವರು ಹೆಚ್ಚಿನ ಸಂಬಳ ಪಡೆಯುತ್ತಾರೆ ಮತ್ತು ಅವರಿಗೆ ಬಡ್ತಿ ಸಿಗುತ್ತದೆ.
ಮುಖ್ಯವಾಹಿನಿಯ ಸಂಸ್ಥೆಗಳಲ್ಲಿ ಹೆಚ್ಚಿನ ಸಂಪಾದಕರು ಈ ಮೂರು ಹಿನ್ನೆಲೆಗಳಿಂದ - ರಾಜಕೀಯ ಸುದ್ದಿ, ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ, ಮತ್ತು ವ್ಯವಹಾರ ಮತ್ತು ಆರ್ಥಿಕತೆಯಿಂದ ಬರುವದನ್ನು ಕಾಣುತ್ತೇವೆ. ಸಾಮಾಜಿಕ ವಲಯದ ವರದಿ, ಬಡವರ ಮೇಲೆ ವರದಿ, ಆರೋಗ್ಯದ ಮೇಲೆ ವರದಿ, ಸಂಸ್ಕೃತಿ ಮೇಲೆ ವರದಿ, ಇವನ್ನು ಬರೆಯುವ ಪತ್ರಕರ್ತರು ಅಪರೂಪವಾಗಿ ವೃತ್ತಿಪರ ಪ್ರಗತಿ ಗಳಿಸುತ್ತ್ತಾರೆ. ಅವರು ಸಂಪಾದಕರಾಗಲು ಬಡ್ತಿ ಪಡೆಯುವದು ಅಪರೂಪ.
ಆದ್ದರಿಂದ ನೀವು ಸುದ್ದಿ ಚಾನೆಲ್ ಅನ್ನು, ಸ್ವತಂತ್ರ ಮತ್ತು ತಟಸ್ಥವಾಗಿರುವ೦ತೆ ಕಂಡುಬರುವ ಪತ್ರಿಕೆಯನ್ನು, ಓದಿದಾಗಲೂ ಸಹ ಈ ವಾಸ್ತವವನ್ನು ನೆನಪಿಡಬೇಕು. ಈ ವೈಶಿಷ್ಟ್ಯಗಳ ಪತ್ರಿಕೋದ್ಯಮವನ್ನು ಪ್ರಶ್ನಿಸುವುದು ಮತ್ತು ಅದನ್ನು ಹೇಗೆ ಬದಲಾಯಿಸಬಹುದು ಎಂಬುದರ ವಿಚಾರ ಮಾಡುವದು ಮುಖ್ಯವಾಗಿದೆ .
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ