ಭಾರತದ ಅರ್ಥವ್ಯವಸ್ಥೆ ಮತ್ತು ಮೋದಿ ಸರ್ಕಾರದ ಆರ್ಥಿಕ ನೀತಿಗಳು - ೧


ಭಾರತ ಆರ್ಥಿಕ ಪರಿಸ್ಥಿತಿಯ ಅವಲೋಕನ - ಬಿ ಬಿ ಸಿ ಮತ್ತು ಇತರ ಮೂಲಗಳಿ೦ದ


ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿರುವ   ಭಾರತದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಆಗಾಗ್ಗೆ ವಿವರವಾದ ವರದಿಗಳು ಬರುತ್ತಿರುವುದು ಆಶ್ಚರ್ಯವೇನಿಲ್ಲ. ಕೋವಿಡ್ ಸೋಂಕು, ಇದಕ್ಕೆ ಸೇರಿದ ಮರಣಗಳು, ಮತ್ತು ವಿಶೇಷವಾಗಿ ಗಂಗಾ ನದಿಯಲ್ಲಿನ ಮೃತ ದೇಹಗಳ ವೀಕ್ಷಣೆಗೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳು ಜಗತ್ತಿನಾದ್ಯಂತ ಮಾಧ್ಯಮಗಳಲ್ಲಿ ಹೆಚ್ಚಿನ ಗಮನವನ್ನು ಸೆಳೆಯುತ್ತವೆ ಎಂದು ನಿರೀಕ್ಷಿಸಬಹುದು. ದೇಶದ ರಾಜಕೀಯ ಬೆಳವಣಿಗೆಗಳು, ಅದರ ಆರ್ಥಿಕತೆ ಮತ್ತು ಕೇಂದ್ರದಲ್ಲಿನ ಆಡಳಿತ ಸರ್ಕಾರದ ನೀತಿಗಳು ಮತ್ತು ಒಲವುಗಳು ಸಹ ಹೆಚ್ಚಿನ ಗಮನ ಮತ್ತು ವಿವರವಾದ ವಿಶ್ಲೇಷಣೆ ಮತ್ತು ವ್ಯಾಖ್ಯೆಗಳನ್ನು ಪಡೆಯುತ್ತವೆ.


ಇತ್ತೀಚಿನ ವರದಿ ಒ೦ದರಲ್ಲಿ ಬ್ರಿಟನ್ನಿನ  ಹೆಸರಾ೦ತ ಮಾಧ್ಯಮ ಬಿಬಿಸಿ ಪ್ರಕಟಿಸಿದ ವರದಿಯು ಮೋದಿ ಪ್ರಧಾನ ಮ೦ತ್ರಿಗಳಾಗಿ ೭ ವರ್ಷಗಳಲ್ಲಿ ಭಾರತದ ಆರ್ಥಿಕ ಸ್ಥಿತಿಯನ್ನು ೭ ಪಟ್ಟಿಗಳಲ್ಲಿ ವರ್ಣಿಸಿತು. ವರದಿಯಲ್ಲಿ ತೋರಿಸಿರುವ ವಿವರಗಳನ್ನು ಐ ಎ೦ ಎಫ಼್ (ಅ೦ತಾರಾಷ್ತ್ರೀಯ ಆರ್ಥಿಕ ಸ೦ಸ್ಥೆ) ಮತ್ತು  ಸ೦ಬ೦ಧಪಟ್ಟ  ಭಾರತೀಯ ಮೂಲಗಳಿ೦ದ ಪಡೆದುಕೊ೦ಡಿದೆ. 


ಭಾರತದ ಆರ್ಥಿಕತೆ: ಏಳು ಪಟ್ಟಿಯಲ್ಲಿ ಮೋದಿಯ ಏಳು ವರ್ಷಗಳು

ನಿಖಿಲ್ ಇನಾಮ್ದಾರ್ ಮತ್ತು ಅಪರ್ಣ ಅಲ್ಲೂರಿ ಇವರ ಬಿ ಬಿ ಸಿಯಲ್ಲಿ ಪ್ರಕಟಿತ ವರದಿ ಮತ್ತು ಇತರ ಮೂಲಗಳಿ೦ದ

 

ನರೇಂದ್ರ ಮೋದಿ ಅವರು ಭಾರತದ ರಾಜಕೀಯ ರ೦ಗಮ೦ಚವನ್ನು ಹೆಚ್ಚಿನ ಉದ್ಯೋಗಗಳು, ಸಮೃದ್ಧಿ ಮತ್ತು ಕಡಿಮೆ ಸರ್ಕಾರಿ ವಿಧಾನ ವಿಳ೦ಬಗಳು ಇತ್ಯಾದಿ ಭರ್ಜರಿ ಭರವಸೆಗಳೊಂದಿಗೆ  ಗೆದ್ದುಕೊ೦ಡರು. ಅವರ ಭರ್ಜರಿ ವಿಜಯಗಳು ೨೦೧೪ ರಲ್ಲಿ ಮತ್ತೆ ೨೦೧೯ ರಲ್ಲಿ - ಅತಿ ಹೆಚ್ಚಿನ ಸುಧಾರಣೆಗಳ ಭರವಸೆಯನ್ನು ಹುಟ್ಟಿಸಿತು.

 

ಆದರೆ ಅವರ ಆರ್ಥಿಕ ದಾಖಲೆ, ಅವರು ಪ್ರಧಾನಿಯಾಗಿರುವ ಈ ಏಳು ವರ್ಷಗಳಲ್ಲಿ ಸಾಕಷ್ಟು ನೀರಸವಾಗಿದೆ. ಕೋವಿಡ್  ಸಾಂಕ್ರಾಮಿಕವು ಇದನ್ನು ಇನ್ನಷ್ಟು ಬಾಧಿಸಿದೆ. 

 

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ಶ್ರೀ ಮೋದಿಯವರ ಅಡಿಯಲ್ಲಿ  ಹೇಗೆ ಪ್ರಭಾವ ಬೀರಿದೆ ಎಂಬುದು ಇಲ್ಲಿದೆ.

 

೧. ಬೆಳವಣಿಗೆಯು ನಿಧಾನವಾಗಿದೆ


೨೦೨೫ನೆ  ವಷದ  ವೇಳೆಗೆ  ಡಾಲರ್ ೫ ಟ್ರಿಲಿಯನ್ ಅ೦ದರೆ ೫ ಲಕ್ಷ ಕೋಟಿ ಡಾಲರುಗಳು ಗಾತ್ರದ (ಒ೦ದು ಟ್ರಿಲ್ಲಿಯನ್ ಅ೦ದರೆ ಒ೦ದು ಲಕ್ಷ ಕೋಟಿ) ಒಟ್ಟು ಭಾರತ ದೇಶದ ದೇಶೀಯ ಉತ್ಪನ್ನ (ಜಿ ಡಿ ಪಿ) ಅರ್ಥವ್ಯವಸ್ಥೆ,  (ಹಣದುಬ್ಬರಕ್ಕೆ ಸರಿಪಡಿಸಿದನ೦ತರ ಡಾಲರ್ ೩ ಟ್ರಿಲಿಯನ್) ಇದು ಮೋದಿಯವರ ಆರ್ಥಿಕ  ಗುರಿ.

 

ಆದರೆ ಕೋವಿಡ್-ಪೂರ್ವ  ಸ್ವತ೦ತ್ರ ಅಂದಾಜಿನ ಪ್ರಕಾರ ೨೦೨೫ರಲ್ಲಿ ಭಾರತದ ಆರ್ಥಿಕ ಗಾತ್ರ ಡಾಲರ್ ೨.೬ ಟ್ರಿಲಿಯನ್ ಮೊತ್ತವನ್ನು ಮುಟ್ಟಬಹುದಾಗಿತ್ತು . ಸಾಂಕ್ರಾಮಿಕವು ಇದರಿ೦ದ ಮತ್ತೊಂದು ಡಾಲರ್  ೨೦೦-೩೦೦ ಬಿಲಿಯನ್ ಕತ್ತರಿಸಿದೆ. ಅ೦ದರೆ ಮೋದಿ ಕಲ್ಪನೆ ಮಾಡಿದ್ದು ಪ್ರಾರ೦ಭದಿ೦ದಲೂ ಒ೦ದು ಕನಸಿನ  ಗ೦ಟು ಮಾತ್ರ.

 

ಜಾಗತಿಕ ತೈಲ ಬೆಲೆಗಳಿಂದ ಹೆಚ್ಚುತ್ತಿರುವ ಹಣದುಬ್ಬರವು ಕೂಡ ಒಂದು ದೊಡ್ಡ ಕಾಳಜಿಯಾಗಿದೆ ಎಂಬದು ಅರ್ಥಶಾಸ್ತ್ರಜ್ಞ ಅಜಿತ್ ರಾನಡೆಯವರ ಅಭಿಪ್ರಾಯ.

 

ಆದರೆ ಕೋವಿಡ್ ಕೇವಲ ಕಾರಣವಲ್ಲ

 

ಭಾರತದ ಜಿಡಿಪಿ - ಮೋದಿ ಅಧಿಕಾರ ವಹಿಸಿಕೊಂಡಾಗ ವಾರ್ಷಿಕ ಬೆಳವಣಿಗೆ ೭-೮% ರಷ್ಟಿತ್ತು - ೨೦೧೯-೨೦ಯ ನಾಲ್ಕನೇ ತ್ರೈಮಾಸಿಕದ ವೇಳೆಗೆ ಇದು  ದಶಕದಲ್ಲಿ ತೀರ ಕಡಿಮೆಯಾದ ೩.೧% ರಷ್ಟಕ್ಕೆ ಇಳಿದಿತ್ತು. ಕಾರಣಗಳನ್ನು ಕ೦ಡುಹಿಡಿಯಲು ಬಹಳ ದೂರ ಹೋಗಬೇಕಾಗಿಲ್ಲ. 

 

ಒಂದು ಕಾರಣ  ೨೦೧೬ ರಲ್ಲಿ  ನಡೆದ ಘೋರ ವಿಪತ್ಕಾರ ನೋಟ್ ರದ್ದತಿ. ಚಲಾವಣೆಯಲ್ಲಿರುವ ನಗದಿನ 86% ಭಾಗವನ್ನು ನಶಿಸಿತು ಈ ನಿಷೇಧ. 

ಇದಾದನ೦ತರ ಅವಸರದಿ೦ದ ಜಾರಿಗೆತ೦ದ  ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಎಂಬ ವಿನೂತನ ವಿಸ್ತಾರವಾದ ತೆರಿಗೆ ಪಧ್ಧತಿ ವ್ಯವಹಾರಗಳಿಗೆ ಜೋರಾದ ಪೆಟ್ಟು ಕೊಟ್ಟಿತು. 

ಸ್ಥಿರ (೨೦೧೧-೧೨) ಬೆಲೆಯಲ್ಲಿ ನಿಜವಾದ ಜಿಡಿಪಿ ಈಗ ೨೦೨೦-೨೧ರಲ್ಲಿ ೧೩೫.೧೩ ಲಕ್ಷ ಕೋಟಿ ರೂ. (೨ ಟ್ರಿಲ್ಲಿಯನ್ ಡಾಲರಿಗಿ೦ತ ಕಡಿಮೆ), ಸರ್ಕಾರದ ಲೆಕ್ಕದ ಪ್ರಕಾರ. ಇನ್ನೂ ೩ ವರ್ಷಗಳಲ್ಲಿ ಇದನ್ನು ೩ ಟ್ರಿಲ್ಲಿಯನ್ ಡಾಲರ್ ಮಟ್ಟಕ್ಕೆ ಏರಿಸುವದು ಸಾಧ್ಯವೇ ?

 

ಮ೦ದಗತಿಯ ಆರ್ಥಿಕ ಬೆಳವಣಿಗೆ   ಉದ್ಯೋಗದ  ಸಮಸ್ಯೆಯನ್ನು ಹುಟ್ಟುಹಾಕಿತು.

 

೨. ನಿರುದ್ಯೋಗ ಹೆಚ್ಚುತ್ತಿದೆ


"೨೦೧೨-೧೩ ರಿಂದ ಭಾರತದ ಅತಿದೊಡ್ಡ ಸವಾಲು, ಹೂಡಿಕೆಯ ಮಂದಗತಿಯಾಗಿದೆ" ಎಂದು ಸೆಂಟರ್ ಫಾರ್ ಮಾನಿಟರಿಂಗ್ ದಿ ಇಂಡಿಯನ್ ಎಕಾನಮಿ (ಸಿಎಂಐಇ- CMIE)ಯ ಪ್ರಧಾನ ಕಾರ್ಯ ನಿರ್ವಾಹಕ  ಮಹೇಶ್ ವ್ಯಾಸ್ ಹೇಳಿದ್ದಾರೆ. "ನಂತರ, ೨೦೧೬ ರಿಂದ, ನಾವು ಶೀಘ್ರವಾಗಿ ಹಲವಾರು ಆರ್ಥಿಕ ಆಘಾತಗಳನ್ನು ಅನುಭವಿಸಿದ್ದೇವೆ."

ಅವರ ಪ್ರಕಾರ ನೋಟ್ ನಿಷೇಧ, ಜಿಎಸ್‌ಟಿ ಮತ್ತು ಮರುಕಳಿಸುವ ಲಾಕ್‌ಡೌನ್‌ಗಳೆಲ್ಲವೂ ಉದ್ಯೋಗವನ್ನು ಕಡಿಮೆಗೊಳಿಸುವ ಕ್ರಮಗಳು.

 

ಕೊನೆಯ ಅಧಿಕೃತ ಎಣಿಕೆ ಪ್ರಕಾರ, ನಿರುದ್ಯೋಗವು ೨೦೧೭-೧೮ರಲ್ಲಿ ೪೫ ವರ್ಷಗಳ ಗರಿಷ್ಠ - ೬.೧% ಕ್ಕೆ ಏರಿತು. ಅಂದಿನಿಂದ ನಿರುದ್ಯೋಗ  ಸುಮಾರು ದ್ವಿಗುಣಗೊಂಡಿದೆ ಎ೦ಬದು ಕಾರ್ಮಿಕ ಮಾರುಕಟ್ಟೆಯ ಅ೦ಕೆ-ಸ೦ಖ್ಯೆಗಳಿಗಾಗಿ ವ್ಯಾಪಕವಾಗಿ ಬಳಸಲಾಗುವ CMIE ಸ೦ಸ್ಥೆಯ ಪರ್ಯಾಯ ಮನೆಯ ಸಮೀಕ್ಷೆಗಳಿ೦ದ ಕ೦ಡುಬರುತ್ತದೆ.

 

ಪ್ಯೂ ರಿಸರ್ಚ್ ಸೆಂಟರ್ ಅಮೆರಿಕ ಮೂಲದ ಪಕ್ಷೇತರ ‘ಥಿಂಕ್ ಟ್ಯಾಂಕ್’ - ವೈಚಾರಿಕ ಸ೦ಸ್ಥೆ ಆಗಿದೆ.  ಸಾಮಾಜಿಕ ಸಮಸ್ಯೆಗಳು, ಸಾರ್ವಜನಿಕ ಅಭಿಪ್ರಾಯ ಮತ್ತು ಜನಸಂಖ್ಯಾ ಪ್ರವೃತ್ತಿಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. 

 

ಪ್ಯೂ ರಿಸರ್ಚ್ ಸ೦ಸ್ಥೆಯ ಅ೦ದಾಜಿನ ಪ್ರಕಾರ ೨೦೨೧ ರ ಆರಂಭದಿಂದ ೨.೫ಕೋಟಿಗೂ   ಹೆಚ್ಚು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಮತ್ತು ೭.೫  ಕೋಟಿಗೂ  ಹೆಚ್ಚು ಭಾರತೀಯರು, ಭಾರತದ ೧೦ ಕೋಟಿಯಷ್ಟು ಗಾತ್ರದ  ಪ್ರಬಲ ಮಧ್ಯಮ ವರ್ಗದ ಮೂರನೇ ಒಂದು ಭಾಗವನ್ನು ಒಳಗೊಂಡಂತೆ,  ಬಡತನಕ್ಕೆ ಮರಳಿದ್ದಾರೆ, ಅರ್ಧ ದಶಕದ ಲಾಭವನ್ನು ಹಿಮ್ಮೆಟ್ಟಿಸಿದ್ದಾರೆ. 

ಪ್ರತಿವರ್ಷ ಆರ್ಥಿಕತೆಗೆ ಅಗತ್ಯವಿರುವದು ೨ ಕೋಟಿ ಹೊಸ ಉದ್ಯೋಗಗಳು . ಆದರೆ ಇದಕ್ಕಿ೦ತ  ಕಡಿಮೆ ಪ್ರಮಾಣದಲ್ಲಿ ಮೋದಿಯವರ ಸರ್ಕಾರ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಶ್ರೀ ರಾನಡೆ ಹೇಳಿದರು. ಭಾರತವು ಕಳೆದ ಒಂದು ದಶಕದಿಂದ ವರ್ಷಕ್ಕೆ ೪೩  ಲಕ್ಷ ಉದ್ಯೋಗಗಳನ್ನುಮಾತ್ರ ಸೃಷ್ಟಿಸುತ್ತಿದೆ.

 

ಭಾರತದಲ್ಲಿ ನಿರುದ್ಯೋಗದ ಶೇಕಡಾವಾರು

(ಮು೦ದುವರೆಯಲಿದೆ)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು