ಬಂಧನದಲ್ಲಿರುವ ಭೀಮಾ ಕೊರೆಗಾಂವ್ ಕಾರ್ಯಕರ್ತರು (B K - 16) ಯಾರು (ಭಾಗ- ೧)

ಸುಳ್ಳು ಆರೋಪದ ಮೇಲೆ ಸ್ಟಾನ್ ಸ್ವಾಮಿಯನ್ನು ಜೈಲಿಗೆ ಹಾಕಲಾಗಿತ್ತು ಎಂದು ಯು.ಎನ್. ನ ಉನ್ನತ ಅಧಿಕಾರಿ



ಉಳಿದಿರುವ ಎಲ್ಲಾ 15 ಸಹ-ಆರೋಪಿಗಳನ್ನೂ ಬಿಡುಗಡೆ ಮಾಡಬೇಕು-

ವಿಶ್ವ ಸ೦ಸ್ಥೆಯ ಮಾನವ ಅಧಿಕಾರಗಳ ಘಟಕದ ಮುಖ್ಯಸ್ಥೆ. 

ಇತ್ತೀಚೆಗೆ  ನಿಧನರಾದ ಫಾ.ಸ್ಟಾನ್ ಸ್ವಾಮಿ ಅವರನ್ನು "ಭಯೋತ್ಪಾದನೆಯ ಸುಳ್ಳು ಆರೋಪದ ಮೇಲೆ" ಬಂಧಿಸಲಾಯಿತು. ಎಂದು ವಿಶ್ವಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಾನವ ಹಕ್ಕುಗಳ ರಕ್ಷಕರ ಕುರಿತ ಯುಎನ್  (ಯುನೈಟೆಡ್ ನೇಶನ್ಸ್- ವಿಶ್ವಸಂಸ್ಥೆ) ವಿಶೇಷ ಅಧಿಕಾರಿ ಮೇರಿ ಲಾಲರ್ ಅವರ ಕಳವಳಗಳಲ್ಲಿ ಯುರೊಪಿಯನ್ ಒಕ್ಕೂಟದ - ಯುರೊಪಿಯನ್ ಯೂನಿಯನ್ (ಇ ಯು) -  ಮಾನವ ಹಕ್ಕುಗಳ ವಿಶೇಷ ಪ್ರತಿನಿಧಿ ಇಮಾನ್ ಗಿಲ್ಮೋರ್ ಭಾಗವಹಿಸಿಕೊಂಡಿದ್ದಾರೆ. ಅವರು ಯುರೋಪಿಯನ್ ಒಕ್ಕೂಟವು ಫಾ ಸ್ಟಾನ್ ಸ್ವಾಮಿ ವಿಷಯವನ್ನು ಭಾರತೀಯ ಅಧಿಕಾರಿಗಳೊಂದಿಗೆ "ಪದೇ ಪದೇ" ಎತ್ತಿ ಕೊ೦ಡಿತ್ತು,  ಎನ್ನುತ್ತಾರೆ.

ಭೀಮಾ ಕೋರೆಗಾ೦ವ್ ಪ್ರಕರಣದ ವಿಚಾರಣೆ ಬಾಕಿ 

 ಫಾದರ್ ಸ್ಟಾನ್ ಮತ್ತು ಇತರ 15 ಮಾನವ ಹಕ್ಕುಗಳ ರಕ್ಷಕರ ಪ್ರಕರಣಗಳನ್ನು ಕಳೆದ ಮೂರು ವರ್ಷಗಳಲ್ಲಿ ಭಾರತ ಸರ್ಕಾರದೊಂದಿಗೆ  ವಿಚಾರಣೆಯ ಪೂರ್ವ ಬಂಧನದಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ

ಕಳೆದ ನವೆಂಬರ್‌ನಲ್ಲಿ "ಭಾರತದಲ್ಲಿ ನಾಗರಿಕ ಸ್ಥಳ ಕುಗ್ಗುವಿಕೆ" ಕುರಿತ ಹೇಳಿಕೆ ಸೇರಿದಂತೆ "ಹಲವಾರು ಸಂದರ್ಭಗಳಲ್ಲಿ"  ಈ ಪ್ರಕರಣಗಳನ್ನು ಖಾಸಗಿಯಾಗಿ ಮತ್ತು ಸಾರ್ವಜನಿಕವಾಗಿ ಎತ್ತಿದ್ದಾರೆ ಎಂದು ಹೇಳಿದರು. 

"ಮಾನವ ಹಕ್ಕುಗಳ ರಕ್ಷಕರಿಗೆ ಸಂಬಂಧಿಸಿದಂತೆ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ)ಯ ಬಳಕೆಯ ಬಗ್ಗೆ  ಕಳವಳ ವ್ಯಕ್ತಪಡಿಸಿದ್ದಾರೆ.

ಭೀಮಾ ಕೋರೆಗಾಂವ್ ಪ್ರಕರಣದ ಎಲ್ಲಾ 15 ಸಹ-ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ಮಿಚೆಲ್ ಬ್ಯಾಚೆಲೆಟ್ ಮಂಗಳವಾರ ಹೇಳಿದ್ದಾರೆ. 


 

 ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ೦ತೆ  ತೋರಿಕೆಯ  ಆರೋಪದ ಮೇಲೆ ‘ಬಿಕೆ -16’ ಎಂದು ಕರೆಯಲ್ಪಡುವ 16 ಕಾರ್ಯಕರ್ತರನ್ನು ಬಂಧಿಸುವುದು ಮತ್ತು ಸೆರೆಹಿಡಿಯುವುದು,  ಭಿನ್ನಾಭಿಪ್ರಾಯ ಮತ್ತು ದಬ್ಬಾಳಿಕೆಯ ವಿರುದ್ಧ ಹಾಗೂ ಬಹುಸಂಖ್ಯಾತ ಸರ್ಕಾರದ  ವ್ಯವಸ್ಥೆಯಲ್ಲಿ ಗಮನ ನೀಡಲಾಗಿಲ್ಲ ಸಮಾಜದ ವಿಭಾಳ ಪರವಾಗಿ  ಹೋರಾಡುವ ಜನರನ್ನು ಕಿರುಕುಳಕ್ಕೆ ಗುರಿಮಾಡುವ  ಕೇಂದ್ರ ಸರ್ಕಾರದ ವ್ಯವಸ್ಥಿತ ಮತ್ತು ಕ್ರಮಬದ್ಧ ಕಾರ್ಯಕ್ರಮದ ಭಾಗವಾಗಿದೆ.

ಜೂನ್ 6, 2018 ರಂದು  ಭಾರತದ ಹಲವೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪುಣೆ ಪೊಲೀಸರು ಸುರೇಂದ್ರ ಗ್ಯಾಡ್ಲಿಂಗ್, ಸುಧೀರ್ ಧವಾಲೆ, ರೋನಾ ವಿಲ್ಸನ್, ಶೋಮಾ ಸೇನ್ ಮತ್ತು ಮಹೇಶ್ ರೌತ್ ಅವರನ್ನು ಬಂಧಿಸಿದ್ದಾರೆ. ಜಾತಿ ಹಿಂಸಾಚಾರದ ಜನವರಿ 2018 ರ ಭೀಮಾ ಕೋರೆಗಾಂವ್ ಘಟನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಮತ್ತು ಜೈಲಿನಲ್ಲಿರುವ 16 ಕಾರ್ಯಕರ್ತರಲ್ಲಿ ಅವರು ಮೊದಲಿಗರು. ಆಗಸ್ಟ್ 28, 2018 ರಂದು ವರವರ ರಾವ್, ಸುಧಾ ಭಾರದ್ವಾಜ್, ಅರುಣ್ ಫೆರೀರಾ, ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಗೌತಮ್ ನವಲಖ ಅವರನ್ನು ಗೃಹಬಂಧನದಲ್ಲಿರಿಸಲಾಯಿತು. ಆರು ತಿಂಗಳಲ್ಲಿ ಅವರನ್ನು ಬಂಧಿಸಿ ಮುಂಬೈನ ತಾಲೋಜ ಜೈಲಿಗೆ ಕರೆತರಲಾಯಿತು. ನಂತರದ ತಿಂಗಳುಗಳಲ್ಲಿ, ಆನಂದ್ ತೆಲ್ತು೦ಬ್ಡೆ, ಫಾದರ್ ಸ್ಟಾನ್ ಸ್ವಾಮಿ, ಹನಿ ಬಾಬು, ಸಾಗರ್ ಗೋರ್ಖೆ, ರಮೇಶ್ ಗೈಚೋರ್ ಮತ್ತು ಜ್ಯೋತಿ ಜಗ್ತಾಪ್ ಅವರನ್ನು ಬಂಧಿಸಲಾಯಿತು.

 

ನಿಷೇಧಿತ ಮಾವೋವಾದಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದಕ್ಕಾಗಿ ದಬ್ಬಾಳಿಕೆಯ ರೂಪದ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಇವರೆಲ್ಲರ ಮೇಲೆ ಆರೋಪ ಹೊರಿಸಲಾಗಿದೆ. ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ; ಅವರು  ಜೈಲಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿಲ್ಲದೆ ನರಳುತ್ತಿದ್ದಾರೆ . ಅಕ್ಟೋಬರ್ 2020 ರಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌.ಐ.ಎ) 10,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿ ಅವರು ಆನಂದ್ ತೆಲ್ತು೦ಬ್ಡೆ, ನವಲಖಾ, ಸ್ಟಾನ್ ಸ್ವಾಮಿ, ಬಾಬು, ಗೋರ್ಖೆ, ಗೈಚೋರ್, ಜ್ಯೋತಿ ಜಗ್ತಾಪ್ ಮತ್ತು ಮಿಲಿಂದ್ ತೆಲ್ತು೦ಬ್ಡೆ  ಇವರನ್ನು "ನಗರ ಕ್ರಾಂತಿ" ಎದ್ದೇಳಿಸಲು ಉದ್ದೇಶಿಸಿರುವ ಮಾವೊವಾದಿ ಗು೦ಪುಗಳಿಗೆ ಯೋಜಿಸಿದ್ದ ಸಂಚುಕೋರರು ಎ೦ದು  ಹೆಸರಿಸಿದ್ದಾರೆ. ಆನಂದ್ ತೆಲ್ತು೦ಬ್ಡೆ ಅವರ ಸಹೋದರ ಮಿಲಿಂದ್ ತೆಲ್ತು೦ಬ್ಡೆಯನ್ನು  ತಲೆಮರೆಸಿಕೊಂಡಿರುವ “ನಕ್ಸಲ್ ಕಾರ್ಯಕರ್ತ” ಎ೦ದು ಹೇಳಲಾಗಿದೆ. ಪ್ರತಿಯೊಬ್ಬ ಆರೋಪಿಯೂ ತಮ್ಮ ವಿರುದ್ಢದ ಆರೋಪಗಳನ್ನು ನಿರಾಕರಿಸಿ ಸಂಪೂರ್ಣವಾಗಿ ಕಟ್ಟುಕಥೆಗಳಾಗಿವೆ  ಎಂದು ಹೇಳಿದ್ದಾರೆ.  ಕಳೆದ ಕೆಲವು ತಿಂಗಳುಗಳಲ್ಲಿ, ಅಮೆರಿಕ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್, ಇಬ್ಬರು ಕಾರ್ಯಕರ್ತರ ಕಂಪ್ಯೂಟರ್‌ಗಳಿಗೆ ಯಾರೋ ‘ ಹ್ಯಾಕ್’  ಮಾಡಿ  ಡಿಸೆಂಬರ್ 2017 ರಲ್ಲಿ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಕಾರ್ಯಕ್ರಮಕ್ಕೆ ಸಂಪರ್ಕವನ್ನು ರಚಿಸಿ ಮಾಡುವ ದೋಷಾರೋಪಣೆ ದಾಖಲೆಗಳನ್ನು ನೆಟ್ಟಿದ್ದಾರೆ ಎಂದು ಸಾಬೀತುಪಡಿಸುವ ದೃಢವಾದ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿದರು. . ಇಷ್ಟಾದರೂ  ಅವರ ಬಿಡುಗಡೆಯ ಬಗ್ಗೆಯೂ ಚರ್ಚೆಯಾಗುತ್ತಿಲ್ಲ. ಸಾಂಕ್ರಾಮಿಕ ಮತ್ತು ಲಾಕ್‌ಡೌನ್  ಪರಿಸ್ಠಿತಿ ನ್ಯಾಯಾಲಯದ ಪ್ರಕರಣಗಳಿಗೆ ದೊಡ್ಡ ಹಿನ್ನಡೆಯಾಗಿದೆ, ಮತ್ತು ವಿಷಾದಕರವಾಗಿ,  ವಯಸ್ಸಾದ ಆರೋಪಿಗಳ  ಆರೋಗ್ಯದ ಮೇಲೆ ಹಾನಿಯಾಗಿದೆ.

        ಪ್ರತಿ ಆರೋಪಿಯ  ಸಂಕ್ಷಿಪ್ತ ವ್ಯಕ್ತಿಚಿತ್ರವನ್ನು ನೋಡಿದರೆ ಪ್ರಸ್ತುತ ಆಡಳಿತವು ಅವರ ಕೆಲಸದಿಂದ ಏಕೆ ಬೆದರಿಕೊಳ್ಳುತ್ತ್ಗದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು. ಕೆಲವು ಕಾರ್ಯಕರ್ತರು ಪರಸ್ಪರ ಸಂಪರ್ಕ ಹೊಂದಿದ್ದಾರೆ,. ಕೆಲವು ಬಂಧನಗಳ ಹಿನ್ನೆಲೆ ಸ್ಪಷ್ಟವಲ್ಲ.  ಈ ಕಾರ್ಯಕರ್ತರ ನಡುವಿನ ಸಾಮಾನ್ಯತೆಯೆಂದರೆ, ಅವರೆಲ್ಲರೂ ದಲಿತರು, ಬುಡಕಟ್ಟು ಜನರು ಮತ್ತು ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳು, ಇ೦ತಹ ಬಹುಸಂಖ್ಯಾತ ಸರ್ಕಾರ ವ್ಯವಸ್ಥೆಯಲ್ಲಿ ಸ್ಥಳಾವಕಾಶವಿಲ್ಲದ  ವಿಭಾಗಗಳ ಉದ್ದೇಶಗಳಿಗಾಗಿ ಹೋರಾಡುತ್ತಾರೆ. ಈ ಬಂಧನಗಳು ನಿರ್ಭಯವಾಗಿ ಭಿನ್ನಾಭಿಪ್ರಾಯ ಹೊಂದಿರುವ, ದಬ್ಬಾಳಿಕೆಯ ವಿರುದ್ಧ ಹೋರಾಡುವ ಮತ್ತು ಪ್ರಬಲರಿಗೆ ಅನಾನುಕೂಲವಾಗಿರುವ ಜನರನ್ನು ವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿ ಕಿರುಕುಳಕ್ಕೆ ಗುರಿಯಾಗಿಸುವ ಕ್ರಮಗಳ  ಭಾಗವಾಗಿದೆ.



ಸುರೇಂದ್ರ ಗ್ಯಾಡ್ಲಿಂಗ್



    ಹಿರಿಯ ಕಾರ್ಮಿಕ ಮತ್ತು ಮಾನವ ಹಕ್ಕುಗಳ ವಕೀಲ ಮತ್ತು ಭಾರತೀಯ ಜನರ ವಕೀಲರ ಸಂಘ (Indian Association of People’s Lawyers) ದ ಪ್ರಧಾನ ಕಾರ್ಯದರ್ಶಿ, ದಲಿತರು ಮತ್ತು ಆದಿವಾಸಿಗಳನ್ನು ಪ್ರತಿನಿಧಿಸುತ್ತಾರೆ ಮತ್ತು ಪೂರ್ವ ಮಹಾರಾಷ್ಟ್ರದ ನಕ್ಸಲ್ ಬೆಲ್ಟ್ನಲ್ಲಿ ಅಕ್ರಮ ಹತ್ಯೆಗಳು, ದೌರ್ಜನ್ಯಗಳು ಮತ್ತು ಪೊಲೀಸ್ ಮಿತಿಮೀರಿದ ಪ್ರಕರಣಗಳಿಗೆ ಹೋರಾಡುವ ಕಾರಣ  ಹೆಸರುವಾಸಿಯಾಗಿದ್ದಾರೆ. ನಾಗಪುರ  ಮೂಲದ ಗ್ಯಾಡ್ಲಿಂಗ್ ಪ್ರಜಾಪ್ರಭುತ್ವ ಹಕ್ಕುಗಳ ಸಂರಕ್ಷಣಾ ಸಮಿತಿ (Committee for Protection of Democratic Rights) ಯ ಸದಸ್ಯರಾಗಿದ್ದಾರೆ. ನಿಷೇಧಿತ ಮಾವೋವಾದಿ ಸಂಘಟನೆಗಳ ಸಂಪರ್ಕದ ಆರೋಪದ ಮೇಲೆ 2017 ರಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಜಿ.ಎನ್. ಸಾಯಿಬಾಬ ಅವರನ್ನು ಪ್ರತಿನಿಧಿಸಿದಾಗ ಅವರು ಸರ್ಕಾರದ ಗಮನಕ್ಕೆ ಕಾಣಿಸಿಕೊಂಡಿದ್ದಾರೆ. ನಕ್ಸಲ್ ಎಂಬ ಕಾರಣಕ್ಕಾಗಿ ಫೆರೀರಾರನ್ನು ಬಂಧಿಸಿದಾಗ ಗ್ಯಾಡ್ಲಿಂಗ್ ಫೆರೀರಾ ಅವರ ವಕೀಲರಾಗಿದ್ದರು. ಒಂದು ಪ್ರಮುಖ ಬೆಳವಣಿಗೆಯಲ್ಲಿ, ಜುಲೈ 6, 2021 ರಂದು, ಗ್ಯಾಡ್ಲಿಂಗ್‌ನ ಕಂಪ್ಯೂಟರ್‌ನಲ್ಲಿ ಕಂಡುಬರುವ ಮಾವೋವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಂದು ಪೊಲೀಸರನ್ನು ಶಂಕಿಸಲು ಕಾರಣವಾಯಿತು ಎ೦ದು ಹೇಳುವ ಎಲ್ಲಾ 14 “ಪತ್ರಗಳು” ಕ೦ಪ್ಯೂಟರಿನಲ್ಲಿ  ಬೇರೆ ಯಾರಿ೦ದಲೋ  ಕಾನೂನುಬಾಹಿರವಾಗಿ ಒಳಸೇರಿಸಲಾಗಿದೆ ('hacking') ಎಂದು ಆರ್ಸೆನಲ್ ಕನ್ಸಲ್ಟಿಂಗ್ ಬಹಿರಂಗಪಡಿಸಿತು.  ಕಳೆದ ವರ್ಷ ನಿಧನರಾದ ತಾಯಿಯ ಕೊನೆಯ ವಿಧಿಗಳನ್ನು ನಡೆಸುವ ಉದ್ದೇಶಕ್ಕಾಗಿ  ಗ್ಯಾಡ್ಲಿಂಗ್ ಹಲವಾರು ತಾತ್ಕಾಲಿಕ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದಾರೆ, ಅವುಗಳನ್ನು ನಿರಾಕರಿಸಲಾಗಿದೆ.

ಸುಧೀರ್ ಧವಾಲೆ


    ಪ್ರಸಿದ್ಧ ದಲಿತ ಹಕ್ಕುಗಳ ಕಾರ್ಯಕರ್ತ, ವರು ಅಂಬೇಡ್ಕರೈಟ್ ಮತ್ತು ರಿಪಬ್ಲಿಕನ್ ಪ್ಯಾಂಥರ್ ಜಲಿಯಂತಾಚಿ ಚಳ್ ವಳಿ (Republican Panther Jaliantachi Chalwal - ಜಾತಿ ನಿರ್ಮೂಲನೆಗಾಗಿ ಚಳುವಳಿ) ಸ್ಥಾಪಕರಾಗಿದ್ದಾರೆ. ನಕ್ಸಲ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ 2011 ರಲ್ಲಿ ಬಂಧಿಸಲ್ಪಟ್ಟಿದ್ದ ವರನ್ನು 2014 ರಲ್ಲಿ ಬಿಡುಗಡೆ ಮಾಡಲಾಯಿತು. ಅವರ  ಮನೆಯ ಮೇಲೆ ದಾಳಿ ನಡೆಸಿದಾಗ  ವಶಪಡಿಸಿಕೊಂಡ ದಾಖಲೆಗಳಲ್ಲಿ ತಪ್ಪಿತತೋರಿಸುವ  “ಹತ್ಯೆ ಪತ್ರ” ಯೂ ದೊರಕಿತು  ಎಂದು ಪೊಲೀಸರು ಹೇಳುತ್ತಾರೆ. ಎಲ್ಗಾರ್ ಪರಿಷತ್‌ಗೆ ನೇರ ಸಂಪರ್ಕ ಹೊಂದಿರುವ ಏಕೈಕ ಆರೋಪಿ ಧವಾಲೆ. ಭೀಮಾ ಕೋರೆಗಾಂವ್ ದ್ವಿಶತಮಾನೋತ್ಸವದ ಆಚರಣೆಯನ್ನು ಯೋಜಿಸಲು ಅವರು ಸಹಾಯ ಮಾಡಿದರು, ಏಕೆಂದರೆ ದಲಿತ ನಾಯಕರು ಮತ್ತು ಸಂಘಟನೆಗಳು ಸಾರ್ವಜನಿಕವಾಗಿ ಮಾತನಾಡಲು, ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಒಂದಾಗಲು ಇದು ಒಂದು ವೇದಿಕೆಯಾಗಬೇಕೆಂದು ಅವರು ಬಯಸಿದ್ದರು.

ಮಹೇಶ್ ರೌತ್



    ಇವರು 16 ಭೀಮ-ಕೋರೆಗಾ೦ವ್ ಕಾರ್ಯಕರ್ತರಲ್ಲಿ ಕಿರಿಯರಲ್ಲಿ ಒಬ್ಬರು . ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ ಪದವೀಧರರಾದ ಅವರು ಪ್ರಧಾನ ಮಂತ್ರಿ ಗ್ರಾಮೀಣಾಭಿವೃದ್ಧಿ ಫೆಲೋಶಿಪ್ ಪಡೆದವರು. ವಿಸ್ತಾಪನ್ ವಿರೋಧಿ ಜನ್ ವಿಲಾಸ್ ಆ೦ದೋಲನದ ಸಹ-ಸ೦ಚಾಲಕನಾಗಿ, ಮಹಾರಾಷ್ಟ್ರದ ಗಡ್ಚಿರೋಲಿ-ಚಂದ್ರಪುರ ಪ್ರದೇಶದಲ್ಲಿ ಅಂಚಿನಲ್ಲಿರುವ ಸಮುದಾಯಗಳ ಬಲವ೦ತ ಸ್ಥಳಾಂತರದ ವಿರುದ್ಧ ಅಭಿಯಾನಗಳನ್ನು ನಡೆಸಿದ್ದಾರೆ. ಭೂಮಿಗಾಗಿ ಮತ್ತು ಸ್ಥಳೀಯ ಗಣಿಗಾರಿಕೆ ಯೋಜನೆಗಳ ವಿರುದ್ಧ ಹೋರಾಡಲು ಸಮುದಾಯಗಳನ್ನು ಸಜ್ಜುಗೊಳಿಸಲು ಅವರು ಹೆಸರುವಾಸಿಯಾಗಿದ್ದಾರೆ ಮತ್ತು ಈ ಪ್ರದೇಶದಲ್ಲಿನ ಸೂರಜ್‌ಗಡ್ ಗಣಿಗಾರಿಕೆ ಯೋಜನೆಯ ವಿರುದ್ಧದ ಅಭಿಯಾನದಲ್ಲಿ ಅವಿಭಾಜ್ಯ ಪಾತ್ರ ವಹಿಸಿದ್ದಾರೆ. ರೌತ್‌ಗೆ ಜಾಮೀನು ನೀಡುವಂತೆ ಕುಟುಂಬ ಸದಸ್ಯರ ಮನವಿಯನ್ನು ಪದೇ ಪದೇ ನಿರಾಕರಿಸಲಾಗಿದೆ. ರೌತ್ ಅವರ ಸಹೋದರಿ ತಿಳಿಸಿದ೦ತೆ , ಪುಸ್ತಕಗಳು ಅಥವಾ ಕಂಬಳಿ ಪೂರೈಸಲು ಕೂಡ  ನ್ಯಾಯಾಲಯದ ಹಲವಾರು ವಿಚಾರಣೆಗಳು ಬೇಕಾದವು.


ರೋನಾ ವಿಲ್ಸನ್


    ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಅವರು ಹಲವಾರು ರಾಜಕೀಯ ಕೈದಿಗಳ ಬಿಡುಗಡೆಗಾಗಿ ಹೋರಾಡಿದರು. 2001 ರ ಸಂಸತ್ತಿನ ದಾಳಿ ಪ್ರಕರಣದ ಆರೋಪಿ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್‌ಎಆರ್ ಗೀಲಾನಿಯನ್ನು ಬಿಡುಗಡೆ ಮಾಡುವ ಹೋರಾಟದ ನಂತರ, ವಿಲ್ಸನ್ ಮತ್ತು ಗೀಲಾನಿ ರಾಜಕೀಯ ಕೈದಿಗಳ ಬಿಡುಗಡೆಗಾಗಿ ಸಮಿತಿಯನ್ನು ಸ್ಥಾಪಿಸಿದರು. ಭಯೋತ್ಪಾದನೆ ಪ್ರಕರಣಗಳಲ್ಲಿ ಮತ್ತು ಯುಎಪಿಎ ಅಡಿಯಲ್ಲಿ ಆರೋಪಿತರಾದ  ವ್ಯಕ್ತಿಗಳಿಗೆ ಕಾನೂನು ನೆರವು ನೀಡುವಲ್ಲಿ ಈ ಸಂಸ್ಥೆ ಹೆಸರುವಾಸಿಯಾಗಿದೆ. ವಿಲ್ಸನ್ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (Armed Forces Special Powers Act) ಮತ್ತು ಯುಎಪಿಎ ರದ್ದುಗೊಳಿಸುವಂತೆ ಪ್ರಚಾರ ಮಾಡಿದ್ದಾರೆ. ಭೀಮಾ ಕೋರೆಗಾಂವ್ ಘಟನೆ ಮತ್ತು ಇತರ ಆರೋಪಿಗಳಿಗೆ ಸಂಪರ್ಕವನ್ನು ಸಾಬೀತುಪಡಿಸುವ ದಾಖಲೆಗಳನ್ನು ಅವರ ಕಂಪ್ಯೂಟರ್ನಲ್ಲಿ ಕಂಡುಕೊಂಡಿದ್ದಾಗಿ  ಪೊಲೀಸರು ಹೇಳುತ್ತಾರೆ.

    ಫೆಬ್ರವರಿ 2021 ರಲ್ಲಿ, ಆರ್ಸೆನಲ್ ಕನ್ಸಲ್ಟಿಂಗ್ ವರದಿಯನ್ನು ಬಿಡುಗಡೆ ಮಾಡಿತು.  ಹ್ಯಾಕ್ ಮಾಡಿದವರು  (ಕಂಪ್ಯೂಟರ್ ನೆಟ್‌ವರ್ಕ್, ಸಿಸ್ಟಮ್, ಇತ್ಯಾದಿಗೆ ಅಕ್ರಮ ಪ್ರವೇಶವನ್ನು ಪಡೆಯುವವರು) ವಿಲ್ಸನ್‌ನ ಕಂಪ್ಯೂಟರನ್ನು ಮಾಲ್‌ವೇರ್ (ದುರುದ್ದೇಶಪೂರಿತ ಸಾಫ್ಟ್‌ವೇರ್)  ಮೂಲಕ 22 ತಿಂಗಳುಗಳ ಕಾಲ ನಿಯಂತ್ರಿಸಿ  10 ದಾಖಲೆಗಳನ್ನು ಕಾನೂನುಬಾಹಿರವಾಗಿ ಒಳಸೇರಿಸಲಾಗಿದೆ ಮತ್ತು  ಅದನ್ನು ಪ್ರಧಾನ ಮಂತ್ರಿಯನ್ನು ತೊಡೆದುಹಾಕುವ ಭಾವಿಸಲಾದ ಪಿತೂರಿಯನ್ನು ಬಹಿರಂಗಪಡಿಸಲು ಉಪಯೋಗಿಸಲಾಯಿತು. ಮೇ 2021 ರಲ್ಲಿ, ಆರ್ಸೆನಲ್ ಕನ್ಸಲ್ಟಿಂಗ್ ವರದಿಯ ಆಧಾರದ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಲು ವಿಲ್ಸನ್ ಸಲ್ಲಿಸಿದ್ದ ಮನವಿಯನ್ನು ಎನ್.ಐ.ಎ. ವಿರೋಧಿಸಿತು.  ವರದಿಯನ್ನು ಅವಲಂಬಿಸಲಾಗುವುದಿಲ್ಲ ಎಂದು ಹೇಳಿದರು. ಆರ್ಸೆನಲ್ ಕನ್ಸಲ್ಟೆನ್ಸಿಯ ಮುಖ್ಯಸ್ಥ ಮಾರ್ಕ್ ಸ್ಪೆನ್ಸರ್, ಆಕ್ರಮಣಕಾರಿ ಮಟ್ಟದ ಟ್ಯಾಂಪರಿಂಗ್ ಮತ್ತು ಈ ವಿಷಯವನ್ನುಅಮೇರಿಕನ್ ಬಾರ್ ಅಸೋಸಿಯೇಷನ್ ​​ಪರಿಶೀಲಿಸಿದೆ ಎಂದು ಹೇಳಿದ್ದರೂ ಸಹ, ವಿಲ್ಸನ್ ಪ್ರಕರಣವು ಮುಂದೆ ಸಾಗಲಿಲ್ಲ. ವಿಲ್ಸನ್ ಸಾಧಾರಣ ಹಿನ್ನೆಲೆಯಿಂದ ಬ೦ದಿದ್ದು ಈ ಪ್ರಕರಣದ ವಿರುದ್ಧ ಹೋರಾಡಲು ಅವರಿಗೆ ಯಾವುದೇ ಮಾರ್ಗವಿಲ್ಲ ಎಂದು ಮಾಹಿತಿ ಮೂಲಗಳು ತಿಳಿಸಿವೆ.


ಶೋಮಾ ಸೇನ್




    ನಾಗಪುರ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ ಮತ್ತು ನಾಗಪುರ ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದರು. ಅವರು ಮಹಿಳಾ ಹಕ್ಕುಗಳ ಚಳುವಳಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ವರದಕ್ಷಿಣೆಗಾಗಿ ಕಿರುಕುಳಕ್ಕೊಳಗಾದ ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯಗಳ ಬಗ್ಗೆ ಕೆಲಸ ಮಾಡುವ ಸ್ತ್ರೀ ಚೇತ್ನಾ ಸ೦ಸ್ಥೆಯ ಸಕ್ರಿಯ ಸದಸ್ಯರಾಗಿದ್ದಾರೆ. ಅವರು ಎಲ್ಗಾರ್ ಪರಿಷತ್ತಿಗೆ  ಹಾಜರಿದ್ದರು. ಇವರ ಪತಿ ಒಮ್ಮೆ ಭೂಗತ ಎಡ ಚಳವಳಿಯಲ್ಲಿದ್ದರು, ಇದು ದಂಪತಿಗಳ ಹೆಸರುಗಳು ಪೊಲೀಸ್ ದಾಖಲೆಗಳಲ್ಲಿ ಏಕೆ ಕಂಡುಬರುತ್ತವೆ ಎಂಬುದನ್ನು ವಿವರಿಸುತ್ತದೆ. ಶೋಮಾ ಸೇನ್ ಪ್ರಜಾಪ್ರಭುತ್ವ ಹಕ್ಕುಗಳ ಸಂರಕ್ಷಣಾ ಸಮಿತಿ (Committee for the Protection of Democratic Rights) ಯೊಂದಿಗೆ ಕೆಲಸ ಮಾಡಿದ್ದಾರೆ. ಹಿರಿಯ ನಾಗರಿಕ , ಶೋಮಾ ಸೇನ್ ಹಲವಾರು ಬಾರಿ ವೈದ್ಯಕೀಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ, ಆದರೆ ವಿಶೇಷ ಎನ್‌.ಐ.ಎ ನ್ಯಾಯಾಲಯವು ಪ್ರತಿ ವಿಚಾರಣೆಯಲ್ಲೂ ಅದನ್ನು ತಿರಸ್ಕರಿಸಿದೆ.


ಪಿ. ವರವಾರ ರಾವ್





    ನ್ಯಾಯಾಂಗ ಪ್ರಕ್ರಿಯೆಯು ಯಾವತ್ತೂ ಆರೋಪಗಳನ್ನು ಸ್ಥಾಪಿಸಲು ಸಾಧ್ಯವಾಗದಿದ್ದರೂ ಸಹ, ತೆಲುಗು ಭಾಷಾ  ಕವಿ, ಮಾರ್ಕ್ಸ ವಾದಿ ಸಿದ್ಧಾಂತ ಮತ್ತು ಹಕ್ಕುಗಳ ಕಾರ್ಯಕರ್ತ, 81 ವಯಸ್ಸಿನ ಅವರ ಮೇಲೆ  ಸರ್ಕಾರವನ್ನು ಅಸ್ಥಿರಗೊಳಿಸುವ ಮತ್ತು ಉರುಳಿಸುವ ಪ್ರಯತ್ನಗಳ ಬಗ್ಗೆ ಪದೇ ಪದೇ ಆರೋಪಿಸಲಾಗಿದೆ. ಅವರು 1969 ರಲ್ಲಿ ತಿರುಗುಬಾತು  ಕವುಲು (ಬಂಡಾಯ ಕವಿಗಳ ಸಂಘ) ರಚಿಸಿದಾಗಿನಿಂದ, ವರವರ ರಾವ್ ಅವರನ್ನು ಸ್ಥಾಪನಾ ವಿರೋಧಿ ಎಂದು ಪರಿಗಣಿಸಲಾಗಿದೆ. ಅವರು ವಿಭಿನ್ನ ರಾಜಕೀಯ ದೃಷ್ಟಿಕೋನಗಳನ್ನು ಪ್ರಕಟಿಸುವ ವಿಪ್ಲವ ರಾಚೈತಾಲ ಸಂಘಂ (ಕ್ರಾಂತಿಕಾರಿ ಬರಹಗಾರರ ಸಂಘ) ಅಥವಾ ‘ ವಿರಾಸಮ್’’ ಸಂಘಸ್ಥಾಪಕರಾಗಿದ್ದಾರೆ.

    ಅವರು ಕನಿಷ್ಠ ಮೂರು ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ, ಅವುಗಳಲ್ಲಿ ಎರಡು ತುರ್ತು ಸಮಯದಲ್ಲಿ. ಬಿಕೆ -16 ರಲ್ಲಿ, ವರವರ ರಾವ್ ಅವರು ನಕ್ಸಲ್‌ಗಳಿಗೆ ಹತ್ತಿರದ ಸಂಪರ್ಕವನ್ನು ಹೊಂದಿರಬಹುದು; ಆದಾಗ್ಯೂ, ಆ ಸಂಪರ್ಕಗಳು ಚಳವಳಿಯ ಸಿದ್ಧಾಂತವು ಬುದ್ಧಿಜೀವಿಗಳು ಮತ್ತು ಕಾರ್ಯಕರ್ತರನ್ನು ಆಕರ್ಷಿಸಿದ ಸಮಯದಲ್ಲಿ ನಡೆದಿತ್ತು, ಮತ್ತು ಅದನ್ನು ಅವರ ವಿರುದ್ಧ ಪರಿಗಣಿಸಲಿಲ್ಲ. ವಾಸ್ತವವಾಗಿ, 2004 ರಲ್ಲಿ, ವರವರ ರಾವ್ ಅವರ ಪರಿಣತಿಯಿ೦ದಾಗಿ ಅವರನ್ನು ನಿಷೇಧಿತ ಉಗ್ರಗಾಮಿ ಎಡ ಸಂಘಟನೆಗಳು ಮತ್ತು ರಾಜ್ಯಗಳ ನಡುವೆ ಶಾಂತಿ ದೂತರನ್ನಾಗಿ ಮಾಡಲಾಯಿತು. ಅವರ ವಯಸ್ಸು ಮತ್ತು ವಿರಳವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದನ್ನು ಗಮನಿಸಿದರೆ, ಭೀಮಾ ಕೋರೆಗಾಂವ್‌ಗೆ ಸಂಬಂಧಿಸಿದಂತೆ ವರವರ ರಾವ್ ಅವರ ಬಂಧನವು ಆಘಾತಕಾರಿ. ಅವರ ಆವೇಶ ತು೦ಬಿಸುವ  ಬರವಣಿಗೆ ಎಲ್ಗಾರ್ ಪರಿಷತ್ ಭಾಷಣಗಳ ಮೇಲೆ ಪ್ರಭಾವ ಬೀರಿದೆ ಎಂದು ಪೊಲೀಸರು ಹೇಳುತ್ತಾರೆ. ವಿವಿಧ ಕಂಪ್ಯೂಟರ್‌ಗಳಲ್ಲಿ “ಆರ್” ಅನ್ನು ಉಲ್ಲೇಖಿಸುವ ದಾಖಲೆಗಳು ಕಂಡುಬಂದಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ, ಮತ್ತು ಇವೆಲ್ಲ ವರವರ ರಾವ್ ಬಗ್ಗೆ, ಎಂದು ವ್ಯಾಖ್ಯಾನಿಸಲಾಗಿದೆ. ಬಂಧನಕ್ಕೊಳಗಾದ ಕೆಲವೇ ತಿಂಗಳುಗಳಲ್ಲಿ ಅವರ ಆರೋಗ್ಯವು ಹದಗೆಡಲು ಪ್ರಾರಂಭಿಸಿತು. ಅಂತಿಮವಾಗಿ, ಫೆಬ್ರವರಿ 22, 2021 ರಂದು, ನ್ಯಾಯಾಲಯವು ಕವಿಗೆ ಗಂಭೀರ ಸ್ಥಿತಿಗೆ ಜಾರಿದ್ದಾನೆಂದು ಆರು ತಿಂಗಳ ವೈದ್ಯಕೀಯ ಜಾಮೀನು ನೀಡಿತು.


ಸುಧಾ ಭಾರದ್ವಾಜ್



    60 ವರ್ಷದ ಇವರು ಛತ್ತೀಸ್ ಗಡ್ ಹೈಕೋರ್ಟ್‌ನಲ್ಲಿ ವಕೀಲಿ  ಮಾಡುತ್ತಿರುವ ವಕೀಲರು ಮತ್ತು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ಅವರು ಛತ್ತೀಸ್ ಡದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‌ (PUCL) ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮತ್ತು ಕಿರುಕುಳಕ್ಕೊಳಗಾದ ಕೈದಿಗಳ ಒಗ್ಗಟ್ಟಿನ ಸಮಿತಿ (Persecuted Prisoners Solidarity Committee) ಯಲ್ಲಿ ಫಾದರ್ ಸ್ಟಾನ್ ಸ್ವಾಮಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಮೂರು ದಶಕಗಳಲ್ಲಿ, ಸುಧಾ ಭಾರದ್ವಾಜ್ ಛತ್ತೀಸ್ ಗಡ್ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಗಣಿ ಕಾರ್ಮಿಕರು, ದಲಿತರು ಮತ್ತು ಬುಡಕಟ್ಟು ಜನರ ಹಕ್ಕುಗಳಿಗಾಗಿ ಪ್ರಚಾರ ಮಾಡಿದ್ದಾರೆ ಮತ್ತು ಇವರನ್ನು ಭೂಮಿ ಮತ್ತು ಅರಣ್ಯ ಹಕ್ಕುಗಳ ವಿಷಯದಲ್ಲಿ ವಿದ್ವಾ೦ಸರೆ೦ದು ಪರಿಗಣಿಸಲಾಗಿದೆ. ವೈದ್ಯಕೀಯ ಜಾಮೀನುಗಾಗಿ ಸುಧಾ ಭಾರದ್ವಾಜ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಎನ್‌.ಐ.ಎ ವಿರೋಧಿಸಿದೆ.  ಜೈಲಿಗೆ ಹೋಗುವ ಮೊದಲೇ ಇವರು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಹಲವಾರು ಅನಾರೋಗ್ಯಗಳಿ೦ದ  ಬಳಲುತ್ತಿದ್ದರು, ಸುಧಾ ಭಾರದ್ವಾಜ್ ಅವರು ಶ್ವಾಸಕೋಶದ ಕ್ಷಯರೋಗ, ಹೃದ್ರೋಗಗಳಿ೦ದಲೂ ಪೀಡಿತರು ಎಂದು ತಿಳಿದಿದೆ. ಜೈಲಿನಲ್ಲಿನ ಕಳಪೆ ಜೀವನ ಪರಿಸ್ಥಿತಿಗಳು ಆಕೆಯ ಆರೋಗ್ಯವನ್ನು ಇನ್ನಷ್ಟು ಹದಗೆಡಿಸಿವೆ ಮತ್ತು ಆಕೆಯ ಸ್ಥಿತಿ ಅನಿಶ್ಚಿತವಾಗಿದೆ ಎಂದು ಸ್ನೇಹಿತರೊಬ್ಬರು ಹೇಳುತ್ತಾರೆ.. ಜುಲೈ 6, 2021 ರಂದು ನೀಡಿದ ತೀರ್ಪಿನಲ್ಲಿ, ಸುಧಾ ಭಾರದ್ವಾಜ್ ಪ್ರಕರಣದ ಬಗ್ಗೆ ದಾಖಲೆಗಳನ್ನು ತಯಾರಿಸಲು ಹೆಚ್ಚಿನ ಸಮಯವನ್ನು ನೀಡಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ರಾಜ್ಯಕ್ಕೆ ತಿಳಿಸಿದೆ. 

(based on article by Anupama Katakam in FRONTLINE magazine and other material)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು